ಬೆಂಗಳೂರಿನ ಸಂಚಾರಿ ದಟ್ಟಣೆ ತಡೆಗಟ್ಟಲು ಏನಾದರೂ ಕಾರ್ಯಕ್ರಮವನ್ನು ಸರ್ಕಾರ ಆದಷ್ಟು ಬೇಗ ಕೈಗೊಳ್ಳಲೇ ಬೇಕಾಗಿದೆ.
ಅದು ದೆಹಲಿಯಲ್ಲಿ ಇರುವಂತೆ ಸರಿ,ಬೆಸವೋ(ಅದರಲ್ಲಿ ಬಹಳಷ್ಟು ಡ್ರಾ ಬ್ಯಾಕ್ ಗಳಿವೆ)
ಅಥವಾ ಸಂಚಾರಿ ತಜ್ನರೂ ಸೇರಿಕೊಂಡೂ ಏನಾದರೂ ಕ್ರಮ ಕೈಗೊಳ್ಳದೇ ಹೋದರೆ ಮುಂದಿನ ಕೆಲವೇ ವರ್ಷದಲ್ಲಿ ಬೆಂಗಳೂರು ಡೆಡ್ ಸಿಟಿ ಆಗುವುದರಲ್ಲೆ ಸಂದೇಹವಿಲ್ಲ..
ಒಂದು ಮನೆಯಲ್ಲಿ ನಾಲ್ಕು ಜನರಿದ್ದರೆ ಒಬ್ಬೊಬ್ಬರಿಗೆ ಒಂದು ದ್ವಿಚಕ್ರ ವಾಹನ ಹಾಗೂ ಮನೆಗೆ ಎರಡು ಚತುರ್ಚಕ್ರ ವಾಹನ ಇದರ ಅವಶ್ಯಕತೆ ಇದೆಯೇ..?
ಇದರ ಬಗ್ಗೆ ಸರ್ಕಾರ ಯಾಕೆ ಕ್ರಮ ಕೈಗೊಳ್ಳುವುದಿಲ್ಲ..??
ಹೀಗೆ ಈ ಕೆಳಕಂಡಂತೆ ಕೆಲವು ಕ್ರಮ ಕೈಗೊಳ್ಳಬಹುದೇ...??
*ಹೀಗೆ ಮನೆಗೆ ೬ ರಿಂದ ೮ ವಾಹನಗಳನ್ನು ಇಟ್ಟುಕೊಂಡವರಿಗೆ ಹಾಗೂ ಒಬ್ಬರೇ ಒಂದು ಕಾರಿನಲ್ಲಿ ಓಡಾಡುವರಿಗೆ ಸರ್ಕಾರ ಜಾಗೃತಿ ಕಾರ್ಯಕ್ರಮ ಕೈಗೊಂಡು ಅವರನ್ನು ಸಾರ್ವಜನಿಕ ಸಾರಿಗೆಯಲ್ಲಿ ಓಡಾಡುವಂತೆ ಮನವೊಲಿಸುವುದು ಮತ್ತು
*ಸಾರ್ವಜನಿಕ ಸಾರಿಗೆಯನ್ನು ಕಡಿಮೆ ದರದಲ್ಲಿ ಹೆಚ್ಚು ಅನುಕೂಲಕರ ವಾಗಿ ಹೆಚ್ಚು ಹೆಚ್ಚು ಗುಣಮಟ್ಟದ ವಾಹನವನ್ನು ಓಡಿಸುವುದು,ಹಾಗೂ
*ಹೆಚ್ಚು ಜನರು ಸಾರ್ವಜನಿಕ ಸಾರಿಗೆ ಬಳಸುವಂತೆ ಮನವಿ ಮಾಡುವುದು,
*ಒಂದಕ್ಕಿಂತ ಹೆಚ್ಚು ವಾಹನ ಇರುವವರಿಗೆ ಹಾಗೂ ಕಹ್ರೀದಿಸುವವರಿಗೆ ಹೆಚ್ಚು ತೆರಿಗೆ ಹಾಕುವುದು,ಅಥವಾ
*ಇಂಧನಕ್ಕೆ ಬಾರೀ ತೆರಿಗೆ ಹಾಕುವುದು,
*ನಿಲುಗಡೆ ಶುಲ್ಕ ದುಭಾರಿ ಮಾಡುವುದು,ಹಾಗೂ
*ವಾಹನವಿಲ್ಲದವರಿಗೆ ಸಾರ್ವಜನಿಕ ಸಾರಿಗೆಯಲ್ಲಿ ರಿಯಾಯಿತಿ ಕೊಡುವುದು,
*ಸೋಲಾರ್ ದ್ವಿಚಕ್ರವಾಹನಕ್ಕೆ ಪ್ರಾದಾನ್ಯತೆ ಕೊಡುವಂತೆ ಪ್ರೋತ್ಸಾಹಿಸುವುದು,
*ಸಣ್ಣ ಕುಟುಂಬವಿದ್ದರೆ ತುಂಬಾ ಕಾರಿನ ಅಗತ್ಯವಿದ್ದರೆ ಅಂತವರಿಗೆ ಸಣ್ಣ ಕಾರುಗಳನ್ನೇ ಖರೀದಿಸುವಂತೆ ಮನವೊಲಿಸುವುದು ಹಾಗೂ ಅದಕ್ಕೆ ತೆರಿಗೆ ಕಡಿಮೆ ಮಾಡುವುದು.
*ಐಶಾರಾಮಿ ದೊಡ್ಡ ಕಾರುಗಳಿಗೆ ಅತಿ ಹೆಚ್ಚು ತೆರಿಗೆ ಹಾಕುವುದು,
*ಪೀಕ್ ಹವರ್ ನಲ್ಲಿ ಒಬ್ಬರೇ ಕಾರುಗಳಲ್ಲಿ ಹೋಗುವುದನ್ನು ನಿಷೇಧಿಸುವುದು.
*ಒಂದೇ ಅಪೀಸ್ಗೆ ಹೋಗುವವರು ಎಲ್ಲಾ ಸೇರಿ ಒಂದೇ ಕಾರಿನಲ್ಲಿ ಹೋಗುವುದು.
*ಅತ್ಯಂತ ಹಳೆಯದಾದ ವಾಹನಗಳಿಗೆ ರಸ್ತೆಗೆ ದಿನವೂ ಇಳಿಯಲು ಪರವಾನಗಿ ಕೊಡದೇ ಇರುವುದು,
*ಲೇನ್ ನಿಯಮವನ್ನು ಕಡ್ಡಾಯ ಮಾಡುವುದು
*ಬೈಸಿಕಲ್ ಬಳಸುವವರಿಗೆ ಕಡ್ಡಾಯವಾಗಿ ರಸ್ಥೆ ಒಡಗಿಸಿ ಕೊಡುವುದು.
*ಬೈಸಿಕಲ್ ಸವಾರರಿಗೆ ಪ್ರೋತ್ಸಾಹವಾಗಿ ಏನಾದರೂ ಕಾರ್ಯಕ್ರಮ ಹಮ್ಮಿ ಕೊಳ್ಳುವುದು.
*ನಡೆದಾಡುವವರಿಗೆ ಪುಟ್ ಪಾತ್ ಹಾಗೂ ಸರಿಯಾದ ಸ್ಥಳದಲ್ಲಿ ಸ್ಕೈ ವಾಕರ್ ಹಾಗೂ ಅಂಡರ್ ಪಾಸ್ ಹಾಕುವುದು.
ಹೀಗೆ ಹಲವು ನಿಯಮಗಳನ್ನು ಹಾಗೂ ಯೋಜನೆಗಳನ್ನು ಸರ್ಕಾರ ರೂಪಿಸಿದರೆ ಟ್ರಾಪಿಕ್ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದೇ??
(ಇದರಲ್ಲಿ ಕೆಲವು ಸಾದಕ ಬಾದಕ ಇರಬಹುದು ನನಗನ್ನಿಸಿದ್ದು ಹಾಕಿದ್ದೇನೆ)
ನಿಮ್ಮ ತಲೆಯಲ್ಲಿ ಯೋಚನೆ ಬಂದಿದ್ದು ಹಾಕಿ ನೋಡುವ..
Nagabhushana Bhatta Avinash Mrugavadhe Kiran Bhat Mallesara