ಹೆಚ್ಚು ಕಡಿಮೆ ಈ ತರದ ಅನುಭವ ನನಗೂ ಆಗಿದೆ..
ನನ್ನ ಬಹಳ ಹತ್ತಿರದ ಸಂಬಂಧಿಕರ ಮಗ ನನ್ನ ಜೊತೆ ಸ್ವಲ್ಪ ಆತ್ಮಿಯ ವಾಗಿದ್ದಾನೆ ಆತ ಇನ್ನೂ ಹೈಸ್ಕೂಲ್ ಹೋಗುವ ಹುಡುಗ..
ಅವನು ನನ್ನಲ್ಲಿ ಮಾತಿಗಿಳಿದ ಎಂದರೆ ನೀವು ಆಪಲ್ ಐ ಪೋನ್ ತಗೊಳ್ಳಿ,ವೋಕ್ಸ್ವಾಗನ್ ಜಿಟಿ ತಗೊಳ್ಳಿ ಬೇರೆ ಪ್ರೊಡಕ್ಟ್ ಬೇಡ,ಜಿ ಶಾಕ್ ವಾಚ್ ಯಾಕೆ ನೀವು ಕಟ್ಟದೇ ಸುಮ್ಮನೆ ಇಟ್ಟಿದ್ದೀರಿ...??
ಅದಕ್ಕೆ ನಾನು ಹಲವು ಬಾರಿ ಹೇಳಿದ್ದೇನೆ,ನನಗೆ ಐ ಪೋನ್ ಅವಶ್ಯಕತೆ ಇಲ್ಲ ಬೇಡ,ವೋಕ್ಸ್ವ್ಯಾಗನ್ ಜಿ ಟಿ ಈ ಬೆಂಗಳೂರು ಟ್ರಾಪಿಕ್ನಲ್ಲಿ ಅವಶ್ಯವಿಲ್ಲ,ಹಾಗೂ ನನ್ನ ಕಾರಿಂದ ಸಂಚಾರ ದಟ್ಟಣೆ ಇನ್ನೊಂದು ವಾಹನ ಸೇರ್ಪಡೆ ಆಗೋದು ಬೇಡ ಅಷ್ಟಕ್ಕೂ ನನಗೆ ಈಗ ಕಾರಿನ ಅವಶ್ಯಕತೆ ಇಲ್ಲ,ಜಿ ಶಾಕ್ ಕಟ್ಟ್ಕೊಂಡೇ ಇರಬೇಕು ಅಂತ ರೂಲ್ ಇಲ್ಲ ಕಣೋ ಅಂದಿದ್ದೆ..
ಹೀಗೆ ಅವನದ್ದು ಎಕ್ಪೆನ್ಸೀವ್ ಮಾತುಗಳೇ ಬಿಟ್ಟರೆ ಯಾವುದೂ ಬಿಲೋ ಪಾವರ್ಟಿ ಲೈನ್ ಮಾತುಗಳೇ ಇಲ್ಲ..
ಇಲ್ಲಿ ತಪ್ಪು ಅವನದಲ್ಲ,ತಂದೆ ತಾಯಿ ಅವರ ಹತ್ತಿರದ ಸಂಬಂದಿಗಳದ್ದು,ಬರ್ತ್ ಡೇ,ಆ ಡೇ,ಈ ಡೇ ಅಂತ ಸಣ್ಣವನು ಸಣ್ಣವನು ಅಂತ,ಆತ ಕೇಳಿದ್ದೆಲ್ಲಾ ತಂದು ಕೊಡೋದು,ಮತ್ತೆ ಗೂಗಲ್ಲಲ್ಲಿ ಏನೋ 24/7 ನೋಡ್ತಾ ಅದರಲ್ಲಿ ಹಾಕಿದ್ದೆಲ್ಲಾ ನಿಜ ಅಂದು ಕೊಂಡು ಅದನ್ನೇ ಮಾತಾಡೋ ಹುಡುಗರನ್ನ..
ಪೋಷಕರು ಹುಡುಗರ ಎದುರಿಗೆ ನನ್ನ ಮಗನಿಗೆ ಎಲ್ಲಾ ಗೊತ್ತು,ಕಾರ್ ಬಗ್ಗೆ ಕೇಳಿ,ಬೈಕ್,ಪಿ ಸಿ,ಲ್ಯಾಪ್ಟಾಪ್ ಬಗ್ಗೆ ಹಾಗೂ ಸ್ಮಾರ್ಟ್ ಪೋನ್ ಅರೆದು ಕುಡಿದು ಬಿಟ್ಟಿದ್ದಾನೆ,ಎಲ್ಲಾ ವಿಷಯದ ಬಗ್ಗೆ ನಾಲೆಡ್ಜ್ ಇದೆ ಅಂತ ಬುಲ್ಡ್ ಅಪ್ ಕೊಡೋದು..
ಇದರಿಂದ ಅವರು ನಾನೇನೋ ಬಹಳ ಬುದ್ದಿವಂತ ಸ್ಪೆಶಲ್ ಮನುಷ್ಯ ಅಂತ ಮೇಲೆ ಹತ್ತಿ ಕೂರುತ್ತಾರೆ..
ಇದೇ ಹಲವು ಪೋಷಕರು ಮಾಡ್ತಾ ದೊಡ್ಡ ತಪ್ಪು..
ಹಣದ ಬೆಲೆಯೇ ಗೊತ್ತಿಲ್ಲದೇ ಬೆಳೆಸಿರ್ತಾರೆ ಕೆಲವರು,ಇಂತಹಾ ಮಕ್ಕಳಿಗೆ ತೃಪ್ತಿಯೂ ಇರಲ್ಲ..
ಒಂದು ಕೊಡಿಸಿದ ಮೇಲೆ ಇನ್ನೊಂದು ಬೇಡಿಕೆ ಶುರು..
ನನ್ನ ಪ್ರಾಥಮಿಕ ಶಾಲಾ ಸಹಪಾಠಿ ಗೋಪಾಲ ಅಂತ ಇದ್ದ ನಾನು ಅವನು ಚಡ್ಡಿ ದೋಸ್ತ್,ಅವರ ಅಪ್ಪ ಕೂಲಿ ಕೆಲಸ ಮಾಡ್ತಾ ಇದ್ರು,ಆತನಿಗೆ ಬಟ್ಟೆಗೇ ಕಷ್ಟ ಇತ್ತು ಎರಡು ಹೊತ್ತು ಊಟಕ್ಕೆ ಕೂಡ,ನನ್ನ ಅಮ್ಮ ನನ್ನ ಹಾಗೂ ನನ್ನ ತಮ್ಮನ ಬಟ್ಟೆಗಳನ್ನು ಅವರಿಗೇ ಕೊಡುತ್ತಿದ್ದಳು,ತೀರ್ಥಹಳ್ಲಿ ಎಳ್ಳಮವಾಸ್ಯೆ ಜಾತ್ರೆಯಲ್ಲಿ ಗೋಪಾಲ ಒಂದು ಸಣ್ಣ ಆಟಿಕೆ ತಗೊಂಡ್ರೂ,
"ಭಟ್ಟ ,ಗೌಡ್ರು ಮನೆ ಅಡಿಕೆ ಸುಲ್ತದಲ್ಲಿ ಸುಮಾರು ಕೊಳಗ ಅಡಿಕೆ ಸುಲ್ದಿದೆ ಕಣ, ಅದ್ರಲ್ಲಿ ತಗುಂಡಿದು ಇದು ಗೊತ್ತಾ"
ಅಂತ ಹೆಮ್ಮೆಯಿಂದ ನನ್ನ ಹತ್ತಿರ ಹೇಳಿಕೊಳ್ಳುತ್ತಾ ಇದ್ದ..
ಆದರೆ
ನಾನು,ಅಪ್ಪ ಕೊಡಿಸಿದ ಆಟದ ಸಾಮಾನು ತಗೊಂಡಿದ್ರೂ,
ಅವನಷ್ಟು ಹೆಮ್ಮೆ ಹಾಗೂ ಸಂಭ್ರಮ ಪಡೋಕೆ ಆಗ್ತಾ ಇರಲಿಲ್ಲ,ಯಾಕೆ ಅಂದ್ರೆ ನಮಗೆ ತ್ರುಪ್ತಿ ಅಷ್ಟು ಇರಲಿಲ್ಲ,ಆದರೆ ಹಣದ ಬೆಲೆ ಸ್ವಲ್ಪವಾದರೂ ಗೊತ್ತಿತ್ತು,ಆದರೆ ಅಪ್ಪ ಅಮ್ಮನ ಮಾತು ಮೀರುತ್ತಿರಲಿಲ್ಲ..ಅವರಿಗೆ ಕಷ್ಟ ಕೊಡಬಾರದು ಅನ್ನೋ ಮನೋಭಾವನೆಯಾದರೂ ಇತ್ತು..
ಈಗಲೂ ಊರಿಗೆ ಹೋದಾಗ ಸಿಕ್ಕಿದ್ರೆ,ಖುಷಿ ಖುಷಿ ಯಿಂದ ಯಾವುದೇ ಅಹಂ ಇಲ್ಲದೇ ಮಾತಾಡಿಸೋದು,ಗೋಪಾಲ ಹಾಗೂ ಇನ್ನಿತರೆ ನನ್ನ ಹಳೆಯ ಸ್ನೇಹಿತರು..
ಅವರು ಅತಿ ಹೆಚ್ಚು ಹಣ ಮಾಡಿಲ್ಲದೇ ಇರಬಹುದು
ಆದರೆ
ಗುಣ ಒಬ್ಬ ಪರಿಶುದ್ದ ಆತ್ಮ ವಿರುವ ಮನುಷ್ಯನದ್ದೇ ಇದೆ..