ಮೊನ್ನೆ ಚಾಮರಾಜ ಪೇಟೆಯ ಈದ್ಗಾ ಮೈದಾನದ ಹತ್ತಿರ ರಸ್ತೆ ದಾಟಲು ನಾನು ಕಾಯುತ್ತಾ ನಿಂತಿದ್ದೆ,
ಆಚೆಯಿಂದ ಒಬ್ಬ ವಿದೇಶಿ ವ್ಯಕ್ತಿಯೂ,ಬಟ್ಟೆಯ ಕೈ ಚೀಲ ಹೆಗಲಿಗೆ ಹಾಕಿಕೊಂಡು,ರಸ್ತೆ ದಾಟಲು ಪ್ರಯತ್ನಿಸುತ್ತಾ ಇರೋದು ಗಮನಿಸಿದ್ದೆ,
ಅವರ ಪಕ್ಕ,ಒಂದು ಬೀದಿ ನಾಯಿಯೂ ರಸ್ತೆ ದಾಟಲು ಹವಣಿಸುತ್ತಾ ಇತ್ತು,ಇನ್ನೇನು ವಾಹನ ಕಡಿಮೆ ಆಗಿ ರಸ್ತೆ ದಾಟಬೇಕು ನಾನು,
ಆಗ
ನನಗೊಂದು ಆಶ್ಚರ್ಯ ಕಾದಿತ್ತು!!!
ಆ ವಿದೇಶಿ ಪ್ರಜೆ,ಅದೇ ನಾಯಿಯನ್ನು ಎತ್ತಿಕೊಂಡು ರಸ್ತೆ ದಾಟಿ,
ರಸ್ತೆಯ ಈ ಕಡೆ ಪುಟ್ ಪಾತಿನಲ್ಲಿ ಅದನ್ನ ಬಿಟ್ಟು,
ಅದು ನನ್ನ ಜವಾಬ್ದಾರಿ ಅನ್ನುವಂತೆ,ಏನೂ ಅರಿಯದವರಂತೆ,ಪುಟ್ ಪಾತ್ ನಲ್ಲಿ ನಡೆಯುತ್ತಾ ಹೊರಟೆ ಹೋದರು,
ನಾಯಿಯೂ ಅವರಿಗೆ ಧನ್ಯವಾದ ಹೇಳಿದಂತೆ,ಅವರ ಹಿಂದೆ ಬಾಲ ಗುಂಡಾಡಿಸುತ್ತಾ ಸ್ವಲ್ಪ ದೂರ ಖುಷಿ ಇಂದ ಹೋಗಿ ಬಂತು..😍
ನಾವು ಮಾನವರು,ಮಾನವೀಯತೆಯ ಪರ,ಆ ಪರ ಈ ಪರ ನಮ್ಮದು ಅಹಿಂಸಾ ದೇಶ,ಸಂಸ್ಕೃತಿ,ಸಂಪ್ರದಾಯ,ಅತಿಥಿ ಸತ್ಕಾರ,ಭಾವನೆ,ನೋವು,ಸ್ಪಂಧನೆ ಇನ್ನು ಏನೇನೋ ಬರೀ ಬಾಯಿ ಮಾತಲ್ಲೇ ಅನ್ನುವ ಹಲವು ಜನರು,!!
ಬೀದಿ ನಾಯಿಗಳು ಹಾಗೂ ಇನ್ನಿತರ ಪ್ರಾಣಿಗಳನ್ನ ಅತ್ಯಂತ ನಿಕೃಷ್ಟವಾಗಿ ಕಾಣುತ್ತಾ,ಅವು ಇರುವುದೇ ಹಿಂಸಿಸೋಕೆ,ಸಾಯಿಸೋಕೆ ಅನ್ನುವ ಹಾಗೆ ಮಾತನಾಡುವ ಕೆಲವು ಜನರು..!!
ಯಾವುದೋ ದೇಶದ ಪ್ರಜೆಯಿಂದ ಮಾನವೀಯತೆಯ ಪಾಠ ಕಲಿಯುವಂತಾ ಪರಿಸ್ಥಿತಿ ಇದೆ ಅನ್ನಿಸುತ್ತೆ ಅಲ್ವಾ..!!??😢
ದಯೆ ಬೇಕು ಸಕಲ ಪ್ರಾಣಿಗಳ ಮೇಲೆ ಅಲ್ವಾ!!??