ಬುಧವಾರ, ಜೂನ್ 21, 2017

Hash tag ಜಮಾನ

ಕ್ವಾಸನ ಸ್ನೇಹಿತ ಡಿಂಗ್ರಿ ದು ಏನೋ ಗಲಾಟೆ ಆಗಿ ದೂರು ದಾಖಲಾಯ್ತು..
ಕ್ವಾಸ ಅವನಿಗೆ ಬೇಲ್ ಕೊಡಿಸಲು ಪ್ಯಾಟೆಯಲ್ಲಿರುವ ಕೋರ್ಟ್ಗೆ ಹೋಗಿ ರಾತ್ರಿ ಲೇಟ್ ಆಗಿ ಹೋಟೆಲ್ ನಲ್ಲಿ ಉಳಿದ..

ರಾತ್ರಿ ಫೇಸ್ಬುಕ್ ನೋಡುತ್ತಾ..
Iam_with_ಡಿಂಗ್ರಿ
ಅಂತ ಫೇಸ್ಬುಕ್ಕಲ್ಲಿ ಹ್ಯಾಶ್ ಟ್ಯಾಗ್ ಹಾಕಿ ಹೋಟೆಲ್ ಲೋಕೇಶನ್ ಶೇರ್ ಮಾಡಿದ ತನ್ನ ವಾಲ್ನಲ್ಲಿ...

ಮಂಜಪ್ಪ ಗೌಡರಿಗೆ ಫೇಸ್ಬುಕ್ಕಲ್ಲಿ ಹಾಕಿದ ವಿಷಯ ಹೇಗೋ ಗೊತ್ತಾಯ್ತು...
ಮರು ದಿನ ಕ್ವಾಸ ಊರಲ್ಲಿ ಸಿಕ್ಕಿದ..

ಗೌಡ್ರು:- ನೀನು ಇಷ್ಟು ಬಿಲಾಸ್ ಬಿಟ್ ಹೋಗಿಯಾ ಅಂತ ಅಂದ್ಕುಂಡಿರ್ಲ ಮರೇನೇ..ಥೋ...

ಕ್ವಾಸ;-ನಾನೆಂತ ಮಾಡಿನಿ ಗೌಡ್ರೆ..!!??

ಗೌಡ್ರು:-ಅಲ್ಲ ಅದು ಎಂತುದೋ ಬುಕ್ಕಲ್ಲಿ ರಾತ್ರೆ ಇಂಗ್ಲೀಷಲ್ಲಿ ನಾನು ಡಿಂಗ್ರಿ ಜೊತೇಲಿ ಅದೀನಿ ಅಂತ ಹಾಕಿಂಡಿಯಂತೆ,
ನಿಂಗ್ ಮಾನ ಮರ್ಯಾದೆ ಇಲ್ಲನ ಹಂಗ್ಯಾರೇ,ಅದೂ ಒಬ್ಬ ಹುಡಗುನ್ ಜೊತೆ ಅಲಂಕಾರ ಹೋಟಲಲ್ಲಿ ರೂಮ್ ಮಾಡ್ಕಿಂಡ್ ಅದಿನಿ ಅಂತ ಹಾಕಿಂಡ್ರೆ,ನಿಂಗ್ ಯಾರ್ ಹೆಣ್ ಕೊಡ್ತಾರಾ...!!
ನೀನು ಇಷ್ಟು ಬರ್ ಗೆಟ್ಟಿಯಾ ಅಂತ ಅಂದ್ಕುಂಡಿರ್ಲ ಮರೇನೇ..ಥೋ...

ಕ್ವಾಸ:-ಅಯ್ಯೋ ಗೌಡ್ರೆ ಹಂಗ್ ಎಂತಾ ಇಲ್ಲ ಹ್ವಾಯ್..
ನನ್ ಫ್ರೆಂಡ್ ಡಿಂಗ್ರಿ ದು ಎಂತುದೋ ಕೇಸ್ ಆಗಿ ಸ್ಟೇಶನ್ ನಲ್ಲಿ ಅದನೆ ಅವನಿಗೆ ಬೇಲ್ ತಗುಣಕೆ ಪ್ಯಾಟಿಗೆ ಹೋಗಿದ್ದೆ..

ಲೇಟ್ ಆಗಿ ಬಸ್ಸ್ ಸಿಗ್ಲ ಕಡಿಗೆ ಒಬ್ಬನೇ ಹೋಟಲ್ ನಲ್ಲಿ ರೂಮ್ ಮಾಡಿ,ರಾತ್ರಿ ಫೇಸ್ಬುಕಲ್ಲಿ ash tag ಹಾಕಿದ್ ಮಾರಾಯ್ರೆ,

iam with dingri ಅಂತ...
ಹಂಗಂದ್ರೆ ನಾನು ಅವನನ್ನ ಸಪೋರ್ಟ್ ಮಾಡ್ತಾ ಇದ್ದೇನೆ ಅಂತ ಇದು ಸಾಮಾಜಿಕ ಜಾಲ ತಾಣದ ಒಂದು trend ಗೌಡ್ರೆ...

ಗೌಡ್ರೆ:-ಎಂತಾ ಸುಡುಗಾಡು ಮರೇನೇ..
ಈ ವಾಟೆ ಸೊಪ್ಪು,ಎಂತದೋ ಹೇಸಿಗೆ ಬುಕ್,ಹಿಕ್ಕೂ,ಟಿಲ್ಲರ್,ಇಷ್ಟೇ ಗ್ರಾಮ್,ಅಂಡು ಐದು,ಸ್ಟಾರ್ಟ್ ಫೋನ್,ತತ್ ಕೀನು ಮೊಬೈಲ್ ಎಲ್ಲಾ ಬಂದ್ಕಿಂಡು,ಜನ ಎಲ್ಲಾ ಹುಚ್ಚುರಾಗ್ಯರೆ ಮರೇನೇ...

ನಮ್ಮನೆ ಅದು ಒಂದು ತತ್ ಕೀನು,ಸ್ಟಾರ್ಟ್ ಫೋನ್ ಅಂಡು ಐದೇ ಬೇಕು ಅಂತ ಸಿಟ್ ಮಾಡ್ಕಿ ಕೂತದೇ...
ಅಡಿಕೆ ಬೇರೆ ರೇಟ್ ಇಲ್ಲ..ಎಂತಾ ಸಾಯದೇನಾ ಮರೇನೇ...
ಥೋ..
ಎಲ್ಲಾ ಬಿಲಾಸ್ ಬಿಟ್ ಹೊಗ್ಯವೇ..
ಹಿಂಗೆ ಆದ್ರೆ ಮೊಬೈಲ್ ತಿನಕು0ಡು ಜೀವನ ಮಾಡ್ತಾರಾ ಎಂತದೋ ನೋಡಬಕು....

ಕ್ವಾಸ:-ಅಯ್ಯೋ ಗೌಡ್ರೆ ಅದು ವಾಟ್ಸಾಪ್,ಫೇಸ್ಬುಕ್,ಹೈಕ್,ಇನ್ಸ್ಟಾಗ್ರಾಮ್,ಟ್ವಿಟ್ಟರ್ ಅಂತ ಸಾಮಾಜಿಕ ಜಾಲ ತಾಣ ಹಾಗೂ ಚಾಟಿಂಗ್ ಆಪ್,
ಆಂಡ್ರಾಯ್ಡ್ ಅಂದ್ರೆ ಆಪರೇಟಿಂಗ್ ಸಿಸ್ಟಮ್,ಸ್ಮಾರ್ಟ್ ಫೋನ್,ಟಚ್ ಸ್ಕ್ರೀನ್ ಅಂತಾರೆ ಅದಕ್ಕೆ..
ನೀವೂ ಅದನ್ನ ಬಳಸಿ,advanced technolgy ಅದು..

ಗೌಡ್ರು:- ಸುಮ್ನೆ ಇರ ಮರೇನೇ,ಅದೆಲ್ಲಾ ನಿಂಗ್ ಊಟ ಹಾಕ್ತದನಾ..!!??.
ನಂಗೆ ಹೇಳಕ್ ಬಂದ ಇವ,ಎಲ್ಲಾ ಗೊತದೆ ನಂಗೆ..
ಇದರಲ್ಲಿ 1ಕೆಜಿ ಭತ್ತಬೆಳಿ ನೋಡನಾ,ಆತದಾ??
ಸುಮ್ನೆ ನಿಮನೆಲ್ಲಾ ಮಂಗನ್ ಮಾಡಿ ಅವರ್ಯಾರೋ ದುಡ್ಡು ಮಾಡಕಿತಾ ಆದರೆ ಅಷ್ಟೇ..
ನಿಮ್ ಸೊಡ್ಡಿಗೆ ವರ್ಲ್ ಹಿಡಿಯಾ...

ಕ್ವಾಸ:-ಬರ್ಲಾ ಗೌಡ್ರೆ,ನಿಮ್ಮತ್ರ ಬೈಸ್ಕುನಕಿಂತ ಇಲ್ಲಿಂದ ಹೋಗದೆ ಒಳ್ಳೇದು..
ಬತ್ತಿನಿ ಕೆಲ್ಸ ಅದೇ ನಂಗೆ..

ಗೌಡ್ರು:-ಒಳ್ಳೇದು ಹೇಳಿದ್ರೆ ಹಿಂಗೆ ಇವಕ್ಕೆ,ನಾನು ಆಗೇಡಿಗೆ ಬೀಜ ಹಾಕಿನಿ,ನೀರು ನೋಡಬಕ್ ಬತ್ತಿನಿ...ಅತಾ..