ಸೋಮವಾರ, ಮೇ 1, 2023

ಕ್ಯಾಟ್ ಓ ನೈನ್ ಟೈಲ್

ಮಿಲಿಟರಿ ಅಂದರೆ ಶಿಸ್ತು,ಅದನ್ನ ಉಲ್ಲಂಘನೆ ಮಾಡೋದು ಅಪರಾಧ ಎನ್ನುವುದು ಸಾಮಾನ್ಯ ವಿಷಯ...

ಸುಮಾರು 20ನೇ ಶತಮಾನ 1761 ರ ಕಾಲ ಘಟ್ಟದಲ್ಲಿ ಬ್ರಿಟನ್ ನಲ್ಲಿ
ಯುದ್ಧ ಅಥವಾ ಸಂಘರ್ಷದಲ್ಲಿ,ಯೋಧ ಹೋರಾಡುತ್ತಾ ವೈರಿಗೆ ಬೆನ್ನು ಹಾಕಿ ಓಡಿ ಬಂದಿದ್ದು ತಿಳಿದರೆ,ಅದನ್ನ ಘೋರ ಅಪರಾಧ ಎಂದು ಪರಿಗಣಿಸಿ ನೇಣು ಹಾಕಿದ್ದು ಇದೆಯಂತೆ..!

ಬ್ರಿಟಿಷ್ ಆರ್ಮಿ,ನೇವಿ,ಜೈಲಿನಲ್ಲಿರುವ ಅಪರಾಧಿಗಳು ಹಾಗೂ ಪೊಲೀಸ್ ಇಲಾಖೆಯಲ್ಲಿ ನೌಕರರು ಶಿಸ್ತು ಮರೆತು ವರ್ತನೆ ಮಾಡಿದ್ದು,ತಪ್ಪು ಮಾಡಿದ್ದು ಗಮನಕ್ಕೆ ಬಂದರೆ,ಅವರಿಗೆ ಕಾನೂನು ಪ್ರಕಾರ ಶಿಕ್ಷೆ ಕಡ್ಡಾಯವಿತ್ತಂತೆ..!

ಈಟಿಗಳನ್ನ ಕ್ರಾಸ್ ರೀತಿಯಲ್ಲಿ ಗಟ್ಟಿಯಾಗಿ ಕಟ್ಟಿ ನಿಲ್ಲಿಸಿ,ತಪ್ಪಿತಸ್ತನನ್ನ ಬೆನ್ನು ಮಾಡಿ ನಿಲ್ಲಿಸಿ,ಅಂಗಿಯನ್ನು ತೆಗೆದು,ಎರಡೂ ಕೈಗಳನ್ನ ಈಟಿಗೆ ಕಟ್ಟಿ,
ಬರೀ ಬೆನ್ನಿಗೆ
"Cat o Nine Tail" ಅಂದರೆ
ಒಂದು ಮರದ ಹಿಡಿಗೆ 9 ಹಗ್ಗ ಸುಮಾರು  ಹಾಗೂ ಪ್ರತಿ ಹಗ್ಗಕ್ಕೆ ಅಲ್ಲಲ್ಲಿ ಗಂಟು ಹಾಕಿರುವುದನ್ನ ಒಟ್ಟು ಮಾಡಿ ಕಟ್ಟಿ ಒಂದು ಚಾಟಿ ಮಾಡಿರುವ ಕೋಲಿಗೆ ಕ್ಯಾಟ್ ಓ ನೈನ್ ಟೈಲ್ ಎನ್ನಲಾಗುತ್ತಾ ಇತ್ತು..!

ಕೆಲವು ಕಡೆ ಚರ್ಮದ ಚಾಟಿಯ ಬಳಕೆ ಇರುತ್ತಾ ಇತ್ತು,ಅದು ಸುಮಾರು ಒಟ್ಟು ಉದ್ದ 30 ಇಂಚು ಇರುತ್ತಿತ್ತು ಎನ್ನಲಾಗಿದೆ...!
.
19 ನೇ ಶತಮಾನದ ಕ್ಯಾಟ್ ಓ ನೈನ್ ಟೈಲ್ ಸುಮಾರು 38.1/4 ಇಂಚು ಒಟ್ಟು ಉದ್ದ ಹಾಗೂ 18 ಇಂಚು ಹಗ್ಗದ ವಿರುತ್ತಿತ್ತು ಎನ್ನಲಾಗಿದೆ...
ಉಲನ್ ನಿಂದಲೂ ಈ ಚಾಟಿಯನ್ನ ಮಾಡಲಾಗುತ್ತಾ ಇತ್ತು..!
1681 ರಲ್ಲಿ ಮೊತ್ತ ಮೊದಲಿಗೆ ಲಂಡನ್ ನಲ್ಲಿ ಒಬ್ಬ ಕೊಲೆಗಾರನಿಗೆ ಶಿಕ್ಷೆ ಕೊಡಲು ಬಳಸಲಾಗಿತ್ತು ಎನ್ನಲಾಗಿದೆ..!
1695 ರಲ್ಲಿ ಇದು ಸಂಪೂರ್ಣವಾಗಿ ಶಿಕ್ಷೆಗೆ ಬಳಸುವುದು ಪ್ರಾರಂಭವಾಯಿತು..!


ಅಂದರೆ ಮಲೆನಾಡ ಕಡೆ,ಗಾಡಿ ಎತ್ತು(Bullock Cart)ಹೊಡೆಯಲು,ಬಾರು ಕೋಲು ಎನ್ನುವುದು ಬಳಕೆಯಲ್ಲಿದೆ,ಅದೇ ರೀತಿಯ 9 ಗಿಡ್ಡನಾದ ಸುಮಾರು 18 ಇಂಚು ಉದ್ದದ ಹಗ್ಗದ,ಮಧ್ಯ ಮಧ್ಯ ಗಂಟು ಹಾಕಿರುವ ಸಣ್ಣ ಗೊಂಚಲು ಅದಾಗಿತ್ತು..!

ಬ್ರಿಟನ್ ನಲ್ಲಿ,ಆರ್ಮಿ ಯಲ್ಲಿ,ತಪ್ಪಿತಸ್ತನಿಗೆ,ಅಧಿಕಾರಿಯೊಬ್ಬ ಕ್ಯಾಟ್ ಓ ನೈನ್ ಟೈಲ್ ಎಂಬ ಹಗ್ಗದ ಗೊಂಚಲಿನ ಚಾಟಿಯನ್ನ ಬಳಸಿ 500 ಕ್ಕೂ ಹೆಚ್ಚು ಚಾಟಿ ಏಟು ಬರಿಯ ಬೆನ್ನ ಮೇಲೆ ಹೊಡೆಯುತ್ತಾ ಇದ್ದರಂತೆ,500 ಏಟು ಹೊಡೆಯಲು 2 ಗಂಟೆಗಳಿಗೂ ಹೆಚ್ಚು ಸಮಯ ಒಬ್ಬ ವ್ಯಕ್ತಿಗೆ ಬೇಕಾಗುತ್ತಾ ಇತ್ತಂತೆ..!

ಈ ಶಿಕ್ಷೆಯ ಸಂಧರ್ಭದಲ್ಲಿ ಬ್ಯಾನ್ಡ್ ಸೆಟ್ ನವರ ಗ್ರೂಪ್ ಬ್ಯಾನ್ಡ್ ಬಾರಿಸುತ್ತಾ ಇರಬೇಕಿತ್ತಂತೆ,ಬ್ಯಾನ್ಡ್ ನ ರಿದಂಗೆ ತಕ್ಕ ಹಾಗೆ (ಕ್ಯಾಟ್ ಓ ನೈನ್ ಟೈಲ್)ಶಿಕ್ಷಿಸುವವನು ಚಾಟಿಯಿಂದ ಏಟು ಹೊಡೆಯ ಬೇಕಿತ್ತಂತೆ,
ಚಾಟಿ ಏಟು ಹೊಡೆಯುವುದನ್ನ ಒಬ್ಬ ಬ್ಯಾನ್ಡ್ ಸೆಟ್ ನ ಸದಸ್ಯ ಗಮನಿಸುತ್ತಾ ನಿಂತಿರ ಬೇಕಿತ್ತಂತೆ...!
ಈ ಕೃತ್ಯವನ್ನ ಇಡೀ ಬೆಟಾಲಿಯನ್ ವೀಕ್ಷಣೆ ಮಾಡುತ್ತಾ ಇರುತ್ತಿತ್ತು..ಒಬ್ಬ ಸರ್ಜನ್ ಕೂಡ ಅಲ್ಲಿ ಹಾಜರಿದ್ದು,ಅಪರಾಧಿಗೆ ಶಿಕ್ಷೆ ಕೊಟ್ಟಿದ್ದು ಸಾಕು ಅಥವಾ ಇನ್ನು ಮುಂದುವರಿಸಬೇಕು ಎಂದು ನಿರ್ಧಾರ ಅವರು ಮಾಡುತ್ತಾ ಇದ್ದರಂತೆ..!!
ಈ ರೀತಿಯ ಶಿಕ್ಷೆ ಕಾನೂನು ಮಾಡಲಾಗಿತ್ತಂತೆ..!

ಆರ್ಮಿಯಲ್ಲಿ ಬ್ಯಾನ್ಡ್ ಸೆಟ್ ನವರನ್ನ ಬಳಸಿ ಹಾಗೂ ಬ್ರಿಟಿಷ್ ನೇವಿ ಯಲ್ಲಿ ಶಿಕ್ಷೆ ಕೊಡಲು ನಾಲ್ಕು ಅಧಿಕಾರಿಗಳು ಕ್ಯಾಟ್ ಓ ನೈನ್ ಟೈಲ್ ಹಿಡಿದು ಅಪರಾಧಿಯನ್ನ ಹೊಡೆಯುವಾಗ ಪಕ್ಕದಲ್ಲೇ ತಮ್ಮ ಸರದಿಗಾಗಿ ಕಾಯುತ್ತಾ ನಿಲ್ಲುತ್ತಾ ಇದ್ದರಂತೆ, ಹಾಗೂ ಬ್ರಿಟಿಷ್ ರಾಯಲ್ ಏರ್ಪೋರ್ಸ್ ನಲ್ಲಿ ಬೇರೆ ಬೇರೆ ರೀತಿಯಲ್ಲಿ ಈ ಕ್ಯಾಟ್ ಓ ನೈನ್ ಟೈಲ್ ಬಳಸಿ ಶಿಕ್ಷೆ ವಿಧಿಸುತ್ತಾ ಇದ್ದರೂ ಎನ್ನಲಾಗಿದೆ..!

ಈ ಶಿಕ್ಷೆ ಆಸ್ಟ್ರೇಲಿಯಾ, ಕೆನಡಾ ದಲ್ಲೂ 1867,1881 ರಲ್ಲಿ ನಡೆಯುತ್ತಾ ಇತ್ತು ಎನ್ನಲಾಗಿದೆ!
1948ರಲ್ಲಿ ಬ್ರಿಟನ್ ನಲ್ಲಿ ಈ ಕಾನೂನನ್ನು ತೆಗೆದು ಹಾಕಲಾಯಿತು ಹಾಗೂ ಆಸ್ಟ್ರೇಲಿಯಾದಲ್ಲಿ 1957ರಲ್ಲಿ ಇದನ್ನ ತೆಗೆಯಲಾಯ್ತು..
ಆದರೆ ಕೆಲವು ಕಾಮನ್ ವೆಲ್ತ್ ರಾಷ್ಟ್ರಗಳಲ್ಲಿ ತೀರಾ ಇತ್ತೀಚಿನ ವರೆಗೆ ಇದು ಬಳಕೆಯಲ್ಲಿ ಇತ್ತು ಎನ್ನಲಾಗಿದೆ..!!!!

1997ರಲ್ಲಿ,ಸೌತ್ ಜಾ0ಬಿಯಾ,ಜಮೈಕಾ,ಸೌತ್ ಆಫ್ರಿಕಾ,ಉಗಾಂಡ 2001,ಪಿಜಿ2002,ಕೆಲವು ದೇಶದಲ್ಲಿ ಈ ರೀತಿಯ ಶಿಕ್ಷೇ ನಿಷೇಧ ಮಾಡಲಾಯ್ತು ಎನ್ನಲಾಗಿದೆ..!
ಇನ್ನೂ ಹಲವು ರಾಷ್ಟ್ರಗಳಲ್ಲಿ ಕ್ರಮೇಣ ಈ ಶಿಕ್ಷೆಯನ್ನ ಸಂಪೂರ್ಣ ನಿಷೇಧ ಮಾಡಲಾಗಿದೆ..

ತೀರಾ ಇತ್ತೀಚೆನವರೆಗೆ ಟ್ರಿನಿಡಾದ್ ಅಂಡ್ ಟ್ಯೂಬ್ಯಾಗೋ ಈ ಶಿಕ್ಷೆ ತೆಗೆದು ಹಾಕಿರಲಿಲ್ಲ,ಅಂದರೆ 2005 ರಲ್ಲಿ ಕ್ಯಾಟ್ ಓ ನೈನ್ ಟೈಲ್ ಬಳಸಿ ಶಿಕ್ಷೆ ಕೊಟ್ಟಿದ್ದು ತಿಳಿದು,ಅಮೇರಿಕಾದ ಮಾನವ ಹಕ್ಕು ಕೋರ್ಟ್,15 ಏಟು ತಿಂದು,
ದೈಹಿಕ ಹಾಗೂ ಮಾನಸಿಕ ಹಿಂಸೆ ಅನುಭವಿಸಿದ ಅಪರಾಧಿಗೆ,ಸುಮಾರು 50,000 ಡಾಲರ್ ಪಾವತಿಸುವಂತೆ ತಾಕೀತು ಮಾಡಿತ್ತು..!
ಆದರೆ
ಈ ತೀರ್ಪು ಎಷ್ಟರ ಮಟ್ಟಿಗೆ ಯಶಸ್ವಿಯಾಗಿ ಶಿಕ್ಷೆ ಪಡೆದ ವ್ಯಕ್ತಿಗೆ ಸಹಾಯವಾಯ್ತು ಸ್ಪಷ್ಟವಾಗಿ ಮಾಹಿತಿ ಇಲ್ಲ ಎನ್ನಲಾಗಿದೆ..!

ಥೋ..
ಕ್ಯಾಟ್ ಓ ನೈನ್ ಟೈಲ್...ಇದೆಲ್ಲಾ ಎಂತಾ..
ನಮ್ಮ ಸ್ಕೂಲ್ ನಲ್ಲಿ ಮಾಸ್ಟ್ರು ಹತ್ರ ಬೆತ್ತದಲ್ಲಿ,
ಲಕ್ಕಿ ಬರ್ಲಿನಲ್ಲಿ,
ಹೈಸ್ಕೂಲ್ ನಲ್ಲಿ,ಮಾಸ್ಟ್ರು ಡಸ್ಟರ್ ನಲ್ಲಿ, ಪಿಟಿ ಮಾಸ್ಟ್ರು ವಿಶಲ್ ಗಾರ್ಡ್ ನಲ್ಲಿ,
ಅಪ್ಪನ ಹತ್ರ,ಬೆಲ್ಟ್ನಲ್ಲಿ,
ಅಮ್ಮನ ಹತ್ರ ದೋಸೆ ಸೆಟಗಾ,ಬರಿ ಕೈಯಲ್ಲಿ ಹೊಡೆತ ತಿಂದು,ಹೊಡೆಯುವಾಗ ಜಾತ್ರೆಲಿ ತಗೊಂಡ ಗಾಜಿನ ಬಳೆ ಒಡೆದ ಸಿಟ್ಟಿಗೆ ಇನ್ನೊಂದು ರೌಂಡ್,ಲೆಕ್ಕ ಇಡದಷ್ಟು ಇನ್ಪನೈಟ್ ಹೊಡೆತ ತಿಂದಿದ್ದೇವೆ..
ಇದೆಲ್ಲಾ ನತಿಂಗ್ ಯಾ....
ಅನ್ನೋದು ಬೇಡ ನೀವು ಆಯ್ತಾ..
😂