ಒಮ್ಮೆ ನಾನು ರಾತ್ರಿ ಕೆ ಎಸ್ ಆರ್ ಟಿ ಸಿ ಬಸ್ಗೆ ಊರಿಗೆ ಹೊರಟಿದ್ದೆ..
ಮೆಜೆಸ್ಟಿಕ್ ನಿಂದ ಕೆ ಎಸ್ ಆರ್ ಟಿ ಸಿ,ಬಸ್ ಇರೋದ್ರಿಂದ ಅಲ್ಲಿಗೆ ಹೋಗೋಕೆ
ವೋಲ್ವೋ ಬಸ್ ಹತ್ತಿ ಬಾಗಿಲು ಎದುರು ಇರುವ ಅಡ್ಡ ಸೀಟ್ ನಲ್ಲಿ ಕುಳಿತಿದ್ದೇ..
ಇನ್ನೊಂದು ಸ್ಟಾಪ್ ನಲ್ಲಿ ಒಬ್ಬರು 50ವಯಸ್ಸಿನ ಆಸು ಪಾಸಿನ ಪ್ರಯಾಣಿಕರು ಬಸ್ ಹತ್ತಿ,ನನ್ನ ಬಲ ಬಾಗದ ಕೊನೆಯ ಅಡ್ಡ ಸೀಟು ನಲ್ಲಿ ಕುಳಿತರು,
ಸ್ವಲ್ಪ ಹೊತ್ತಿಗೆ ಏನೋ ತಡೆಯಲಾಗದ ವಾಸನೆ ಮೂಗಿಗೆ ರಾಚ ತೊಡಗಿತು..
ಒಳಗಿದ್ದವರೆಲ್ಲಾ ಏನೋ ಕಿರಿ ಕಿರಿ ಅನುಭವಿಸುತ್ತಾ ಕೆಲವರು ಮೂಗು ಮುಚ್ಚಿಕೊಂಡು ಕುಳಿತರು..
ಒಂದೆರೆಡು ಸ್ಟಾಪ್ ನ ನಂತರ ವಾಸನೆ ಜಾಸ್ತಿಯಾಗುತ್ತಾ ಹೋಯಿತು..
ತಡೆಯಲಾಗದಷ್ಟು..ವೋಲ್ವೋ ಬಸ್ ಅಂದರೆ ಕೇಳಬೇಕಾ..ಗಾಳಿ ಹೊರಗೆ ಹೋಗುವ ಸಾಧ್ಯತೆ ಕೂಡ ಇಲ್ಲ..!
ಯಾಕೋ ಅನುಮಾನ ಬಂದು ಪಕ್ಕದಲ್ಲಿದ್ದವರು ಕಾಲು ನೋಡಿದರೆ..ನನ್ನ ಬಲ ಬದಿಯ ತುದಿಗೆ ಕುಳಿತಿದ್ದ ವ್ಯಕ್ತಿಯ ಚಪ್ಪಲಿಯಲ್ಲಿ ಏನೋ ಗಲೀಜು ಅಂಟಿ ಕೊಂಡಿದೆ,
ನನ್ನ ಪಕ್ಕದಲ್ಲಿದ್ದ ಇನ್ನೊಬ್ಬ ವ್ಯಕ್ತಿ ಗಮನಿಸಿ,ಅವರಿಗೆ ವಿಷಯ ತಿಳಿಸಿದರು,
ಅವರು ಬಹಳ ಗಾಬರಿ ಹಾಗೂ ಬೇಸರದಿಂದ ಬೈಯಲು ತೊಡಗಿದರು..
"ನೋಡಿ ಸಾರ್..ನಾಯಿ ಸಾಕ್ತಾರೆ.ಪುಟ್ ಪಾಟ್ ನಲ್ಲಿ ಮಧ್ಯ,ರಸ್ತೆಯಲ್ಲೇ ಎಲ್ಲಾ ಮಾಡಿಸಿ ಹೋಗ್ತಾರೆ,ನಾನು ಬಸ್ ಗೆ ಬರುವ ಗಡಿಬಿಡಿಯಲ್ಲಿ ನೋಡದೆ ಪುಟ್ ಪಾತ್ ನಲ್ಲಿ ಎಲ್ಲೋ ತುಳಿದೆ ಅನಿಸುತ್ತೆ ಏನು ಕರ್ಮನೋ" ಅಂತ ವಿವರಣೆ ನೀಡಿದ್ರು..
ಇನ್ನೇನು ಮೂರು ನಾಲ್ಕು ಸ್ಟಾಪ್ ಇತ್ತು..ಮೆಜೆಸ್ಟಿಕ್ ಬರೋಕೆ..ಒಳಗಿದ್ದವರು ಯಾರೂ ಏನೂ ಹೇಳಲಿಲ್ಲ..
ನಿರ್ವಾಹಕರು ಪಾಪದವರು..ಒಂದು ಮಾತು ಬೈಯಲಿಲ್ಲ..
ಪಕ್ಕದಲ್ಲಿ ಇದ್ದವರು,ಹೋಗಲಿ ಬಿಡಿ..ಸ್ಟಾಪ್ ನಲ್ಲಿ ಇಳಿದು,ತೊಳೆದು ಕೊಂಡು ಹೋಗಿ..ಎಂದರು...
ಆಮೇಲೆ ನಿರ್ವಾಹಕರು ಯಾವ ಸೋಪ್,ಶಾಂಪೂ ಹಾಕಿ ಬಸ್ ತೊಳೆದರೋ ಅವರಿಗೆ ಗೊತ್ತು..!ಪಾಪ...
ಈ ಘಟನೆ ಯಾಕೆ ಹೇಳಿದೆ ಎಂದರೆ..
ಬೆಂಗಳೂರು ನಲ್ಲಿ ಒಂದಷ್ಟು ಸ್ಯಾಡಿಸ್ಟ್ ಮನಸ್ಥಿತಿಯ ಜನರಿದ್ದಾರೆ,ತಮ್ಮ ಮನೆಯ ನಾಯಿಯನ್ನ ವಾಕಿಂಗ್ ಕರೆದು ತಂದು ಇನ್ನೊಬ್ಬರ ಮನೆಯ ಗೇಟ್ ಮುಂದೆ, ಮಧ್ಯ ಪುಟ್ ಪಾತ್ ನಲ್ಲಿ,ಮಧ್ಯ ರಸ್ತೆಯಲ್ಲಿ ಮೂತ್ರ,ಮಲ ವಿಸರ್ಜನೆ ಮಾಡಿಸಿ..ಅದು ನನ್ನ ಹಕ್ಕು ಅಂತ ಸ್ಟೈಲ್ ಆಗಿ ಹೋಗೋರು..
ಅಷ್ಟು ಕಾಮನ್ ಸೆನ್ಸ್ ಇಲ್ಲದವರಿಗೆ ಆ ಪಾಪದ ಪ್ರಾಣಿಗಳನ್ನ ಸಾಕುವ ಯೋಗ್ಯತೆ ಏನಿರುತ್ತೆ?ಹಾಗೆ ಕೆಲವು ಮಹಾನ್ ಮಾನವತಾವಾದಿ ಜನಗಳು,ಹಲವು ವಯಸ್ಸಾದ ನಾಯಿಗಳು,ಹೆಣ್ಣು ನಾಯಿಗಳನ್ನ,ಮರಿಗಳನ್ನ,ಎಲ್ಲೋ ಉದ್ಯಾನವನ,ಕಾಲಿ ಸೈಟ್ ಅಥವಾ ಯಾರ ಮನೆಯದೋ ಕಾಂಪೌಂಡ್ ವಾಲ್ ಹತ್ತಿರ ಬಿಟ್ಟು ಹೋಗಿರೋದು ನೋಡಿರ್ತೀರಿ..
ಇಂತಹಾ ಅಸಹ್ಯತನಕ್ಕೆ ಆ ಪ್ರಾಣಿ ಸಾಕೋ ಶೋಕಿ ಯಾಕೆ ಬೇಕು??
ಪ್ರಾಣಿಗಳು ಅಂದರೆ ಎಲ್ಲಾ ಒಂದೇ ಅಲ್ವಾ..ಅವನ್ನ ಶೋಷಣೆ ಮಾಡೋಕೆ,ಹಿಂಸೆ ಮಾಡೋಕೆ ನಮಗೇನು ಹಕ್ಕಿರುತ್ತೆ?
ಯು.ಕೆ ಯಲ್ಲಿ
ನಾಯಿ ಮಾಡಿದ ಮಲವಿಸರ್ಜನೆ ಅದರ ಮಾಲೀಕ ತೆಗೆದು ನಿರ್ದಿಷ್ಟ ಡಬ್ಬಿಗಳಿಗೆ ಕಡ್ಡಾಯವಾಗಿ ಹಾಕತಕ್ಕದ್ದು..
ತಪ್ಪಿದರೆ..
£1000 ದವರಿಗೆ(ಸುಮಾರು ಹತ್ತಿರ ಹತ್ತಿರ 1ಲಕ್ಷ ರೂಪಾಯಿ)ದಂಡ..
ಹಾಗೂ ನಾಯಿಗಳನ್ನ ಸಾಕಲು ಆಯಾ ಸ್ಥಳೀಯ ಆಡಳಿತದವತಿಯಿಂದ ಪರ್ಮಿಶನ್ ತೆಗೆದು ಕೊಳ್ಳೋದು ಕಡ್ಡಾಯ..
ಹಾಗಾಗಿ ಇಲ್ಲಿ ಬೀದಿ ನಾಯಿಗಳ ಕಾಟ ಅಥವಾ ಅವುಗಳು ಜೀವನಕ್ಕಾಗಿ ಅಲೆದಾಡುವ ಪರಿಸ್ಥಿತಿ ಉದ್ಭವ ಆಗುವುದಿಲ್ಲ..
ಹಾಗೆ ನಾಯಿಗಳ ಸಂರಕ್ಷಣೆ ಹಾಗೂ ಸಾಕಾಣಿಕ ಕೇಂದ್ರಗಳು ಕೂಡ ಇಲ್ಲಿವೆ..
ನಾಯಿಗಳನ್ನ ಸಾಕಿ..ಬೇಸರವಾದಾಗ ರಸ್ತೆಗೆ ಬಿಡುವ ದರಿದ್ರ ಮನಸ್ಥಿತಿಯವರು ಇಲ್ಲಿ ಬಹಳ ಕಡಿಮೆ..
ಹಾಗಿದ್ದವರು ಇದ್ದರೂ,ಸರ್ಕಾರ ಕಠಿಣ ಕಾನೂನು ಕೈಗೊಳ್ಳುವ ಭಯವಿದೆ ಅವರಲ್ಲಿ..
ಈ ರೀತಿಯ ಡಬ್ಬಿಗಳನ್ನ ಪ್ರತಿ ಸಾರ್ವಜನಿಕ ಸ್ಥಳದಲ್ಲಿ ಉದ್ಯಾನವನಗಳಲ್ಲಿ ಇಟ್ಟಿರುತ್ತಾರೆ..👇
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ