ಭಾನುವಾರ, ಏಪ್ರಿಲ್ 23, 2023

ವೃದ್ದಾಪ್ಯ

ಸಾಮಾನ್ಯವಾಗಿ ಯು.ಕೆಯಲ್ಲಿ ವಯಸ್ಸಾದವರು ಯಾರ ಸಹಾಯ ಇಲ್ಲದೇ ತಮಗೆ ಬೇಕಾದ ಶಾಪಿಂಗ್ ಮಾಲ್,ಅಂಗಡಿ,ರೆಸ್ಟೋರೆಂಟ್,ಮ್ಯೂಸಿಯಂ,ಪ್ರವಾಸಿತಾಣ ಗಳಲ್ಲಿ ಓಡಾಡಿ ಕೊಂಡು ಇರ್ತಾರೆ,ಹಾಗೆ ಸೌಲಭ್ಯವೂ ಸ್ಥಳೀಯ ಸಂಸ್ಥೆ ಹಾಗೂ ಸರ್ಕಾರದ ವತಿಯಿಂದ ಇರುತ್ತೆ ಹಾಗೂ ನೋಡಿಕೊಳ್ಳೋರು ಇರ್ತಾರೆ,ಹಿರಿಯರಿಗೆ ಹಾಗೂ ಅಶಕ್ತರು,ಚಿಕ್ಕ ಮಕ್ಕಳು ಇರುವವರಿಗೆ ವಿಶೇಷ ಸ್ಥಾನ ಮಾನವೂ ಇತರರು ಕೊಡೋದು ಸಾಮಾನ್ಯ..!
ಹೀಗೆ ಹಿರಿಯರು
ಯಾರಾದರೂ ಸಿಕ್ಕಾಗ ಚನ್ನಾಗಿ ಮಾತಾಡಿಸ್ತಾರೆ..

ಇಂತಹಾ ತುಂಬು ಜೀವನ ಕಂಡ ಹಿರಿಯ ಜೀವಗಳ ಜೊತೆ ಮಾತಿಗಿಳಿದು ಅವರ ಬಳಿ ನಿಂತು,ಅವರ ಜೀವನ ಅನುಭವ, ಒಳ್ಳೆಯ ಮಾತು ಹೇಳಿಸಿ ಕೊಳ್ಳೋದೇ ನೆಮ್ಮದಿ,ಸಂತೋಷ..

ಹೇಗಿದ್ದೀರಿ,ನಿಮ್ಮ ಲೈಫ್ ಹೇಗಿದೆ,ಕಾಫಿ,ತಿಂಡಿ,ಊಟ ಆಯ್ತಾ,ನಿಮ್ಮದೇನು ಪ್ಲಾನ್ ಇವತ್ತು,ವೀಕ್ ಎಂಡ್ ಎಲ್ಲಿ ಹೋಗೋದು,ಇವತ್ತು ದಿನ ಚನ್ನಾಗಿದೆ ಕೋಲ್ಡ್ ಕಡಿಮೆ ಇದೆ ಅಲ್ವಾ!??
ಹೀಗೆಲ್ಲಾ..
ಶಾರ್ಟ್ ಟಾಕ್ ಸಾಮಾನ್ಯ ವಾಗಿ ಯಾವುದೇ ಹಮ್ಮು,ಬಿಮ್ಮು ಇಲ್ಲದೇ,ಸೀನಿಯಾರಿಟಿ ತೋರಿಸದೆ ಮಾತಿಗೆ ಇಳಿಯುತ್ತಾರೆ,
ಬಹಳ ಆತ್ಮೀಯತೆಯಿಂದ ಮಾತಾಡ್ತಾರೆ ಹಲವು ಹಿರಿಯರು..❤️

ಹೆಚ್ಚಾಗಿ ತುಂಬಾ ವಯಸ್ಸಾದ ಗಂಡ,ಹೆಂಡತಿ,ಪ್ರೇಮಿಗಳಂತೆ ಒಟ್ಟಿಗೆ ಓಡಾಡೋದು ಬಹಳ ಸಾಮಾನ್ಯವಾಗಿ ನೋಡಿದ್ದೇನೆ..ಒಮ್ಮೆಯೂ ವಿಚ್ಛೇದನ ವಾಗದೆ ಸುಮಾರು 60 ವರ್ಷ ಜೊತೆಗೆ ಜೀವನ ಸಾಗಿಸಿದವರನ್ನ ಭೇಟಿಯಾಗಿದ್ದೇನೆ, ಮಾತಾಡಿಸಿದ್ದೇನೆ..!

ಹೀಗೆ ಒಬ್ಬ ದಂಪತಿಯನ್ನ ಒಮ್ಮೆ ಪ್ರವಾಸಕ್ಕೆ ಹೋದಾಗ ಭೇಟಿ ಆಗಿದ್ದೆ,ಹೀಗೆ ಮಾತಿಗೆ ಇಳಿದಾಗ,ಅವರು ಎಷ್ಟು ಚೆನ್ನಾಗಿ ಜೀವನದ ಸಾರ ಹೇಳಿದ್ರೂ ಗೊತ್ತಾ..
ಇಬ್ಬರೂ ಅನ್ಯೋನ್ಯವಾಗಿ ಒಬ್ಬರಿಗೆ ಒಬ್ಬರು ಸಹಾಯ ಮಾಡಿಕೊಂಡು ಇರೋ ಹಾಗೆ ಕಂಡರು,ಅವರ ಜೀವನ ಉತ್ಸಾಹ ನೋಡಿ ಸಕತ್ ಖುಷಿ ಅನಿಸ್ತು..

"ನಿಮಗೆ ಎಷ್ಟು ಏಜ್" ಕೇಳಿದೆ..

"ನನಗೆ ಸುಮಾರು 86 ವರ್ಷ,RAF(Royal Air force)ನಲ್ಲಿ ಸೇವೆ ಸಲ್ಲಿಸಿದ್ದೆ,ಪಕ್ಕದಲ್ಲೇ ಇದ್ದ
ಹೆಂಡತಿಯನ್ನ ನೋಡಿ ನಗುತ್ತಾ ಹನಿ ನಿನಗೆ 81 ಅಲ್ವಾ!!?" ಅಂದ್ರು,
"ಹೂ 81 ಅಂತ"ಯಾವುದೇ ಅನುಮಾನ ಹಾಗೂ ಕೆಂಗಣ್ಣು ಬಿಡದೇ ಒಪ್ಪಿ ಕೊಂಡರು ಹೆಂಡತಿ..!
ಅವರ ಹಾಸ್ಯ ಪ್ರಜ್ಞೆ ಇಷ್ಟ ಆಯ್ತು..

ಆ ಹಿರಿಯರು ಹೇಳಿದ್ದು
"60 ವರ್ಷ ಆದ ಮೇಲೆ ಮನುಷ್ಯನಿಗೆ ಜೀವನ ಶುರುವಾಗೋದು,ಜೀವನ ಅನುಭವಿಸೋಕೆ ಸಮಯ ಸಿಗೋದು,ಹುಟ್ಟಿದಾಗಿಂದ ಓದೋದು,ಕೆಲಸ ಹಿಡಿಯೋದು,ಮದುವೆ,ಮಕ್ಕಳು,ಕಾರು,ಮನೆ ಎಲ್ಲಾ ಜವಾಬ್ದಾರಿ ಸಾಮಾನ್ಯವಾಗಿ ಹೆಚ್ಚಿನವರಿಗೆ ಅದೆಲ್ಲಾ ಮುಗಿಸುವಾಗ 60 ಆಗಿರುತ್ತೆ,ನಂತರವೇ ನಾವು ಪ್ರಪಂಚವನ್ನ ಸುಂದರವಾದ ಕಣ್ಣಿನಿಂದ ನೋಡಬೇಕಾಗುತ್ತೆ..

ನಮಗೆ ಮದುವೆ ಆಗಿ 61 ವರ್ಷ ಆಗಿದೆ,
ನಾವು
ಬೇಕಾಗಿದ್ದನ್ನ ತಿಂತೇವೆ,ಎಲ್ಲಾದ್ರೂ ಹೋಗಬೇಕು ಅನಿಸಿದ್ರೆ ಹೊರಡುತ್ತೇವೆ,ವಾರಕ್ಕೆ ಒಮ್ಮೆ ಮಕ್ಕಳು,ಮೊಮ್ಮಕ್ಕಳು ಬಂದು ನಮ್ಮ ಜೊತೆ ಸಮಯ ಕಳೆದು ಊಟ,ತಿಂಡಿ ಮಾಡಿ ಹೋಗ್ತಾರೆ..
ಒಂದು ನಾಯಿ ಸಾಕಿ ಕೊಂಡಿದ್ದೇವೆ..
ಬದುಕು ಚನ್ನಾಗಿದೆ.."

ಅಂದ್ರು ಎಷ್ಟು ನಿಜ ಅನಿಸ್ತು ಅಂದ್ರೆ..!

ಹೌದಲ್ವಾ 60 ನಂತರವೇ ಮನುಷ್ಯನಿಗೆ ಸ್ವಲ್ಪ ಬಿಡುವು ಸಿಗುವ ಹಾಗೆ ಆಗೋದು..!!

ನಮ್ಮವರಲ್ಲಿ ಹಲವರನ್ನ ನೋಡಿದ್ದೇನೆ..
60 ವರ್ಷ ಆಯ್ತಾ..!!

ನೌಕರಿ ಇದ್ದರೆ ನಿವೃತ್ತಿ ಆದ ಕೂಡಲೇ ಅವರು ಅಪ್ರಯೋಜಕರು ಅನ್ನುವ ಹಾಗೆ ಮನೆಯವರು,ನೆಂಟರು ಇಷ್ಟರು ಇಂಡೈರೆಕ್ಟ್ ಮಾತು ಶುರುವಿಟ್ಟು ಕೊಳ್ತಾರೆ..!

"ಇನ್ನೇನು ವಯಸ್ಸಾಯ್ತು ನಿಮಗೆ,ಮಕ್ಕಳ ಮದುವೆ ಎಲ್ಲಾ ಮಾಡಿಯಾಯ್ತು,ಜವಾಬ್ದಾರಿ ಮುಗೀತು,ಇನ್ನೇನು,ಮನೇಲಿ ಇರಿ ಎಲ್ಲೂ ಹೋಗಬೇಡಿ,ಅಲ್ಲಿ ಟ್ರಾಫಿಕ್,ಇಲ್ಲಿ ಜನ ಜಾಸ್ತಿ,ನಿಮಗೆ ಕಾಲು ನೋವು,ಕೈ ನೋವು,ಶುಗರ್,ಬಿಪಿ ಇದೆ ಏನೋ ಅಲ್ವಾ!?,ತಲೆ ತಿರುಗುತ್ತೆನಾ!?,ಗ್ಯಾಸ್ಟ್ರಿಕ್ ಇದೆಯಾ!? ಅಂತ ಹೇಳಿ ಹೇಳಿ ಅವರನ್ನ ಕೈಲಾಗದವರು ಎನ್ನುವ ಹಾಗೆ ಮನಸ್ಸಿಗೆ ಬರುವಂತೆ ಮಾತಾಡಿ ಮೂಲೆಗೆ ಕೂರಿಸುವ ಜನರೇ ಹೆಚ್ಚು..!

ಸ್ವತಃ ಇದನ್ನ ಕೇಳಿದವರೂ,ಅನಿವಾರ್ಯವಾಗಿ ನಮಗೆ ವಯಸ್ಸಾಯ್ತು,ಕರೆಕ್ಟ್,ಖಾಯಿಲೆ ಇದೆಯೋ ಏನೋ,ಆಗಾಗ ಹೊಟ್ಟೆ, ಕೈ,ಕಾಲು,ಎದೆ ಬೇರೆ ನೋವುತ್ತೆ,ಇನ್ನೇನು ಹೊರಗೆ ಹೋಗೋದು ಎನ್ನುವ ಹಾಗೆ ಮಾನಸಿಕವಾಗಿ ತಾನು ಅಪ್ರಯೋಜಕ,ವೃದ್ದಾಶ್ರಮಕ್ಕೆ ಹೋಗೋಕೆ ಪೆಟ್ಟಿಗೆ ಕಟ್ಟ ಬೇಕು ಎನ್ನುವ ರೀತಿಯಲ್ಲೇ ತಮ್ಮನ್ನ ತಯಾರಿ ಮಾಡಿ ಕೊಂಡು ಬಿಡ್ತಾರೆ..!?

ದುಡಿಯುತ್ತಾ ಇದ್ದಾಗ ಶಕ್ತಿವಂತ,
ದುಡಿಯುದು ನಿಲ್ಲಿಸಿದಾಗ ಅವರು ಕೈಲಾಗದವರು,ವಯಸ್ಸಾಯ್ತು,ಮನೇಲಿ ಇರಬೇಕು..!?

60 ವರ್ಷದ ನಂತರವೇ ಸಮಯ ಹಾಗೂ ಹಣ ಎಲ್ಲಾ ಇದ್ದೂ ಜೀವನದಲ್ಲಿ ಎಲ್ಲಾ ಇದೆ ಅನಿಸುತ್ತಾ ಇರುವಾಗ,ಅವರಿಗೆ ಸಿಗದ ಸಮಯ,ಅವರಿಗೆ ಅವರು ಕೊಡೋಕೆ ಆಗದ ಸಮಯ,ಸ್ವಾತಂತ್ರ,ಕೊಡೋಕೆ ಬಿಡದಷ್ಟು ಮಾನಸಿಕವಾಗಿ ದಾಳಿ ಶುರು,ನಿಮಗೆ ಆರೋಗ್ಯ ಸರಿ ಇಲ್ಲ,ನೀವು ವೀಕ್ ಆಗಿದಿರಿ,ಮನೇಲಿ ಇರಿ ಅಂತ ಅವರ ಮಕ್ಕಳೋ,ಮೊಮ್ಮಕ್ಕಳೋ,ಸೊಸೆಯಂದಿರೋ ಮನೇಲಿ ಇರಿ ಅಂತ ಪರ್ಮಾನು ಹೊರಡಿಸಿದರೆ,ಅಷ್ಟು ವರ್ಷ ಮನೆ,ಸಂಸಾರ ಸಾಕಿ ಸಲುಹಿದ್ದ ಹಿರಿಯ ಜೀವಗಳ ಮನಸ್ಥಿತಿ ಏನಾಗಬೇಡ..!
ಅಲ್ವಾ!?

ಇದ್ಯಾಕೆ ಹೇಳಿದೆ ಅಂದರೆ
ಮೊನ್ನೆ ಎಲ್ಲೋ ನೋಡಿದ್ದೆ 70 ವರ್ಷದ ವೃದ್ಧರು ಉನ್ನತ ಪದವಿ ಪಡೆದು ಲೆಚ್ಚರ್ ಕೆಲಸ ಮುಂಬೈ ನಲ್ಲಿ ಎಲ್ಲೋ ಮಾಡಿ ನಂತರ ನಿವೃತ್ತಿ ಪಡೆದು,ಆಟೋ ಓಡಿಸಿ ಜೀವನ ಮಾಡುತ್ತಾ ಇದಾರೆ..
ತನ್ನ ಪತ್ನಿಗೆ ತಾನು ಗಲ್ ಫ್ರೆಂಡ್ ಅಂತಾರೆ ಅನ್ನೋ ವಿಷಯ..
ಆಗ ಇದು ನೆನಪಾಯ್ತು..
😍
ಹೀಗೆ 60 ನಂತರ ಜೀವನವನ್ನ ಎಂಜಾಯ್ ಮಾಡಬೇಕು,ನಮಗೇನು ವಯಸ್ಸಾಯ್ತು ಮನೇಲಿ ಕೂರಬೇಕು ಎನ್ನುವ ಮನಸ್ಥಿತಿ ಬಿಟ್ಟು,ನಾವು ದಂಪತಿಗಳು ಯಾವತ್ತಿದ್ರೂ ಯಂಗ್,ನನ್ನ ಹೆಂಡತಿ ನನಗೆ ಯಾವತ್ತಿದ್ರೂ ಮದುವೆ ಹೊಸತರಲ್ಲಿ ಇದ್ದ ಗಲ್ ಫ್ರೆಂಡ್ ಎನ್ನುವ ಹಾಗೆ ಮನಸ್ಥಿತಿ ಇರುವ ಎಲ್ಲಾ ಸ್ವಾವಲಂಭಿ 😍,ಜೀವನೋತ್ಸಾಹ ಇರುವ ಹಿರಿಯ ಜೀವಗಳಿಗೆ ನಮಸ್ಕಾರಗಳು..
❤️❤️❤️❤️❤️🙏


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ