ಬುಧವಾರ, ಸೆಪ್ಟೆಂಬರ್ 2, 2015

ಮೊಬೈಲ್ ಕಥೆ...

ಸುಮಾರು ಒಂದು ವರ್ಷದ ಹಿಂದೆ ನೆಡೆದ ವಿಷಯ:-
ಬೆಳಿಗ್ಗೆ ನಾನು ಯಾವುದೋ ಕೆಲಸದ ನಿಮಿತ್ತ ಅರಸೀಕೆರೆ ಹೊರಡುವವನಿದ್ದೆ,ಮೆಜೆಸ್ಟಿಕ್ ಹೋಗಲು ಬಸ್ ಲೇಟ್ ಆಗುತ್ತದೆ ಎಂದು ನನ್ನ ಏರಿಯಾದಲ್ಲಿ ಆಟೋಗಾಗಿ ಕಾಯುತ್ತಾ ನಿಂತಿದ್ದೆ,
ಆಗ ಒಬ್ಬಳು ಕಾಲೇಜ್ ಹುಡುಗಿಯಂತೆ ಕಾಣುವ ಸುಮಾರು ೨೦ ರಿಂದ ೨೨ ವಯಸ್ಸಿನ ಹುಡುಗಿ,ಆಟೋದಲ್ಲಿ ಬಂದು ಇಳಿದಳು,ನಾನು ಅದೇ ಆಟೋದವನಿಗೆ(ಯುವತಿ ಆಟೋ ಮೀಟರ್ ಚಾರ್ಜ್ ಕೊಡುತ್ತಿರುವಾಗಲೆ),
"ಮೆಜೆಸ್ಟಿಕ್ ಬರ್ತೀರಾ???" ಅಂದೆ
"ಆತ ಬನ್ನಿ ಸಾರ್ ಎಂದ,"ಅವಳು ತನ್ನ ಚಿಲ್ಲರೆ ತಗೊಂಡು ಹೊರಟಳು.
ನಾನು ಆಟೋ ಹತ್ತಿ ಸ್ವಲ್ಪ ದೂರಹೋದ ನಂತರ, ಪಕ್ಕಕ್ಕೆ ನೋಡಿದರೆ ಸೀಟಿನಲ್ಲಿ ಒಂದು ಸ್ಯಾಂಮ್ಸಂಗ್ ಗ್ರಾಂಡ್ ೨ ಸ್ಮಾರ್ಟ್ ಪೋನ್,ಅದನ್ನು ಎತ್ತಿ ಕೊಂಡು ಆಟೋದವನನ್ನ ಕೇಳಿದೆ,
"ಯಾರದ್ದೋ ಪೋನ್ ಬಿದ್ದಿದೆ ನೋಡಿ!!!" ಅಂತ,ಆತ
"ಯಾರೋ ಗೊತ್ತಿಲ್ಲಾ ಸಾರ್,ಮೋಸ್ಟ್ಲಿ ಹಿಂದೆ ಇಳಿದ್ರಲ್ಲ ಆ ವಮ್ಮಂದೆ ಇರಬೇಕು ಸಾ..ನಮ್ಗ್ಯಾಕೆ ಊರ ಉಸಾಬರಿ,ಅದೆಲ್ಲ ಡೇಂಜರ್ ಅಲ್ವಾ ಸಾ.."ಅಂತ ಉಡಾಪೆಯ ಉತ್ತರ ಕೊಟ್ಟ..
ನಾನು ಆ ಮೊಬೈಲ್ ತೆಗೆದು ಬ್ಯಾಗಲ್ಲಿ ಹಾಕಿ ಕೊಂಡೆ,ಪದೇ ಪದೇ ವಾಟ್ಸ್ ಆಪ್ ಮೆಸೇಜ್ ಬರುತ್ತಲೇ ಇತ್ತು ಪೋನ್ ಬೇರೆ ಲಾಕ್ ಆಗಿರಲಿಲ್ಲ,ಕೊನೆಗೆ ನಾನು ಪೋನ್ ಬ್ಯಾಗಿಂದ ತೆಗೆದು ಪೋನ್ ಬುಕ್ಕಲ್ಲಿ ಹುಡುಕಿದಾಗ ಮಾಮ್ ಅಂತ ಒಂದು ನಂಬರ್ ಸಿಕ್ತು,ಅದಕ್ಕೆ ಕರೆ ಮಾಡಿದೆ ಯಾರೋ ಒಬ್ಬರು ವಯಸ್ಸಾದವರು ಕರೆ ಸ್ವೀಕರಿಸಿ ಮಾತನಾಡಿದರು,ಅವರಿಗೆ ನಾನು ಕನ್ನಡದಲ್ಲಿ ಹೇಳುತ್ತಿರುವುದು ಅರ್ಥವಾಗುತ್ತಿರಲಿಲ್ಲ,ಕೊನೆಗೆ ನಾನು ಇಂಗ್ಳೀಶ್ ನಲ್ಲಿ ಹೇಳಿದಾಗ ಅವರು ಸ್ವಲ್ಪ ಸ್ವಲ್ಪ ಮಂಗ್ಳೀಶ್ ನಲ್ಲಿ(ಮಾತನಾಡುವ ದಾಟಿಯಲ್ಲಿ ಗೊತ್ತಾಯಿತು ಮಲೆಯಾಳಿ ಮಹಿಳೆ ಅಂತ)ಉತ್ತರಿಸಿದರು,ಕೊನೆಗೆ ಅವರಿಗೆ ಅರ್ಥವಾಗಿ ಅದು "ನಮ್ಮ ಹುಡುಗಿಯದ್ದೇ ಪೋನ್ ಅವಳಿಗೆ ಕರೆ ಮಾಡಲು ಹೇಳುತ್ತೇನೆ!!!",
ಅಂತ ಕರೆ ಕಟ್ ಮಾಡಿದರು,
ಸ್ವಲ್ಪ ಸಮಯದ ನಂತರ ಆ ಯುವತಿ ಕರೆ ಮಾಡಿದಾಗ ವಿಷಯ ಹೇಳಿದೆ,ಆಕೆ ನನಗೆ ಯಾವಾಗ ಪೋನ್ ಸಿಗುತ್ತೆ ಅಂದರು??.
"ನಾನು ಇಂದು ನಿಮಗೆ ಪೋನ್ ತಲುಪಿಸಲು ಸಾದ್ಯವಿಲ್ಲ,ನಾಳೆ ಬೆಳಿಗ್ಗೆ ತಲುಪಿಸುತ್ತೇನೆ"ಎಂದೆ,
ಅದಕ್ಕೆ ಆ ಯುವತಿ ಒಪ್ಪಿಕೊಂಡರು,
ಮರು ದಿನ ಬೆಳಿಗ್ಗೆ ನಾನು ಬಸ್ ಸ್ಟಾಪ್ ಹತ್ತಿರ ಹೋಗಿ ಮೊಬೈಲ್ ಕೊಡಲು ಕಾಯುತ್ತಾ ಇದ್ದೆ,
ಆ ಯುವತಿಯ ತಂದೆ,ತಾಯಿ ಒಂದು ಆಕ್ಟೀವಾ ಗಾಡಿಯಲ್ಲಿ ಬಂದು ನನಗೆ ಕರೆ ಮಾಡಿದರು,ನಾನು ಅವರನ್ನು ಗುರುತಿಸಿ ಹತ್ತಿರ ಹೋಗಿ, ಮೊಬೈಲ್ ಕೊಟ್ಟೆ ಹೊರಡಲು ಸಿದ್ದವಾದೆ,ಅವರು ತನ್ನ ಕೈಯಲ್ಲಿದ್ದ ಒಂದು ದೊಡ್ಡ ಬಾಕ್ಸ್ ನನ್ನ ಕೈಗೆ ಕೊಡುತ್ತಾ......
"ಸಾರ್ ನಿಮ್ಮಂತವರು ಇಂತಹ ನಗರದಲ್ಲಿ ಇನ್ನೂ ಇದ್ದಾರಲ್ಲಾ ಸಾರ್ ಬಹಳ..!!!
ನನಗೆ ನಿಜವಾಗಿಯೂ ತುಂಬಾ ಸಂತೋಷವಾಯಿತು" ಅಂದ್ರು ,
"ನಾನು ಇದೇನು ಬಾಕ್ಸ್ ಅಂದೆ!!!????"
"ನನಗೆ ಈ ಪೋನ್ ಸಿಗದಿದ್ದರೂ ಏನು ಸಮಸ್ಯೆ ಆಗುತ್ತಿರಲಿಲ್ಲ ಇನ್ನೊಂದು ನನ್ನ ಮಗಳಿಗೆ ಕೊಡಿಸ್ತಾ ಇದ್ದೆ,ಆದರೆ ನಿಮ್ಮ ಒಳ್ಳೆಯತನಕ್ಕೆ ಖುಷಿಯಾಗಿ ಏನು ಕೊಡಬೇಕೆಂದು ತೋಚದೆ ಸ್ವೀಟ್ ಬಾಕ್ಸ್ ತಂದಿದ್ದೇನೆ ದಯಮಾಡಿ ತಗೊಳ್ಳಿ"ಅಂದ್ರು..
ನಾನು ಸುಮ್ಮನೆ ನಕ್ಕು,"ಅಯ್ಯೋ ಇದೆಲ್ಲ ಬೇಡ ಸಾರ್ ಅಂದೆ" ಅವರು ಒತ್ತಾಯ ಮಾಡಿ ತಗೊಳ್ಳಲೇ ಬೇಕು ಅಂದ್ರು,..
ನನಗೆ ಅವರ ಮುಖದಲ್ಲಿ ಇದ್ದ ಧನ್ಯತೆ ನೋಡಿ ಖುಷಿ ಹಾಗೂ ಆಶ್ಚರ್ಯ &,ಬೇಜಾರೂ ಆಯ್ತು,
ಖುಷಿ ಯಾಕೆಂದರೆ ಅವರ ನುಡಿ ಕೇಳಿ..
ಆಶ್ಚರ್ಯ ಯಾಕೆಂದರೆ,
ಸಹಾಯ ಮಾಡಿದವರನ್ನು ,ಆತ್ಮೀಯರಾದರೂ ತಿರುಗಿ ನೋಡದೆ,ಒಂದು ಕ್ಶಣಕ್ಕೂ ಸ್ಮರಿಸದೇ,
ಅವನ್ಯಾವನು ಅವನಿಗ್ಯಾಕೆ ನಾನು ಥ್ಯಾಂಕ್ಸ್ ಹೇಳಬೇಕು,
ನನಗೆ ಇನ್ನೇನು ಮಾಡಿದ್ದಾನೆ,
ಅವನಿಗ್ಯಾಕೆ ಕಾಲ್ ಮಾಡಿ ಹೇಳಬೇಕು,
ಅಂತ,
ಅಂದು ಕೊಳ್ಳುವ #ದುರಂಹಕಾರಿ ಹಾಗೂ #ಸ್ವಾರ್ಥಿ ಜನರ ಮದ್ಯೆ,
ಇವರು,ನಾನು ಯಾರು ಎಂದು ಗೊತ್ತಿಲ್ಲದೆ ಇದ್ದರೂ,
ಕೇವಲ ಕಳೆದು ಕೊಂಡ ಮೊಬೈಲ್ ವಾಪಾಸ್ ಕೊಟ್ಟಿದ್ದಕ್ಕೆ,ಇಸ್ಟು ಕೃತಜ್ನತಾ ಭಾವ ನೋಡಿ ಆಸ್ಚರ್ಯ ವಾಯಿತು"!!!!
#ಬೇಜಾರು ಯಾಕೆ ಆಯಿತು ಎಂದರೆ..!!!
ಅಂದರೆ ಬೆಂಗಳೂರೆಂಬ ಮಹಾನಗರದಲ್ಲಿ ಒಳ್ಳೆಯತನ ಎಂಬುದು ಅಸ್ಟೊಂದು ಕಡಿಮೆ ಆಗಿದೆಯೇ???
ಹಾಗಾದರೆ ಒಳ್ಳೆಯತನವನ್ನು ಕಂಡರೆ ಮರುಭೂಮಿಯಲ್ಲಿ #ಓಯಸಿಸ್ ಕಂಡಹಾಗೆ ಆಗುತ್ತದೆಯೇ???😨
ಹಾಗಾದರೆ ಬೇರೆಯವರಿಗೆ ಮೋಸ ವಂಚನೆ ಮಾಡಿ ಬದುಕುವುದೇ ಜೀವನವೇ???😨
ಜನ ಅಸ್ಟೊಂದು #ಪ್ರಾಕ್ಟಿಕಲ್ ಆಗಿ ಹೋಗಿದ್ದಾರಾ???
ನಾನು ನನ್ನ ಮಕ್ಕಳು,ನನ್ನ ಜೀವನ ಬೇರೆಯವರು ಏನಾದ್ರು ಹಾಳಾಗಿ ಹೋಗ್ಲಿ,ನನಗೆ ಸಹಾಯ ಬೇಕಾದಾಗ ತಗೊಳ್ಳೋದು,ಬೇಡವಾದಾಗ ತಿರುಗಿ ನೋಡದೆ ಹೋಗೋದು,ಇಸ್ಟೊಂದು ಸ್ವಾರ್ಥ ಜೀವನನಾ ಅಬ್ಬಾ...😟
ನನ್ನಪ್ಪ ಈಗ್ಲೂ ಹೇಳ್ತಾರೆ,#ಪರರ_ಸ್ವತ್ತು_ಅಂದ್ರೆ,#ಪಾಶಾಣ_ಇದ್ದಂಗೆ ಅಂತ..ಅದಕ್ಕೆ ನನಗೆ ಪರರ ಸ್ವತ್ತು ಬೇಡ..ವಾಪಾಸ್ ಕೊಟ್ಟೆ..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ