ಸೋಮವಾರ, ಏಪ್ರಿಲ್ 18, 2016

ಮೇಧಾವಿಗಳು ಹೆಚ್ಚಾದ್ರಪ್ಪ

ಒಮ್ಮೆ ಒಬ್ಬ ಬಹಳ ಮೇಧಾವಿ,ಬುದ್ದಿವಂತ ಹಾಗೂ ತರ್ಕ ಪಂಡಿತ ಅಪಘಾತದಲ್ಲಿ ತನ್ನೆರಡೂ ಕಾಲು ಕಳೆದು ಕೊಳ್ಳುತ್ತಾನೆ..😔😔😔😔

ಹೀಗೆ ಹಲವು ವರ್ಷಗಳು ಚಿಕಿತ್ಸೆ ಪಡೆದ ನಂತರ,ತನ್ನ ಜೀವನ ತಾನು ನಡೆಸುವ ಮಟ್ಟಿಗೆ ಸುಧಾರಿಸಿಕೊಂಡು,ವಾಕಿಂಗ್ ಸ್ಟಿಕ್ ಸಹಾಯದ ಮೂಲಕ ನಡೆದಾಡುತ್ತಿರುತ್ತಾನೆ..😃

ಒಮ್ಮೆ ತಾನು ವಾಕಿಂಗ್ ಸ್ಟಿಕ್ ಸಹಾಯದಿಂದ ಕಾಡಿನ ದಾರಿಯಲ್ಲಿ ನಡೆದು ಹೋಗುತ್ತಿರುವಾಗ,ದಾರಿಯ ಪಕ್ಕ,ಒಂದು ದೊಡ್ಡ ಮಾವಿನ ಮರ ದಲ್ಲಿ ಹಣ್ಣುಗಳು ಇವನ ಕಣ್ಣಿಗೆ ಕಂಡಿದೆ..

ಆತನಿಗೆ ಅದನ್ನು ನೋಡಿ ತಿನ್ನುವ ಆಸೆಯಾಗಿದೆ,
ಆದರೆ ಮರ ಹತ್ತಲು ಅವನಿಂದ ಸಾಧ್ಯವಿಲ್ಲ..!!😔😔😔
ಆದರೂ ಬುದ್ಧಿವಂತನಲ್ಲವೆ..!!!!

ತನ್ನ ಒಂದು ವಾಕಿಂಗ್ ಸ್ಟಿಕ್ ಅನ್ನು ಮರದತ್ತ ಹಣ್ಣು ಬೀಳಿಸಲು ಎಸೆದ..
ಹಣ್ಣು ಬೀಳಲಿಲ್ಲ,😔
ವಾಕಿಂಗ್ ಸ್ಟಿಕ್ ಮರದ ಕೊಂಬೆಯಲ್ಲಿ ಸಿಕ್ಕಿ ಹಾಕಿಕೊಂಡಿತು..😢

ಗಾಬರಿ ಗೊಂಡು ನೆಲದ ಮೇಲೆ ಕೂತು,

ಕೂಡಲೇ,ಇನ್ನೊಂದು ವಾಕಿಂಗ್ ಸ್ಟಿಕ್ಕನ್ನು,ಮೊದಲು ಸಿಕ್ಕಿ ಕೊಂಡಿದ್ದ ವಾಕಿಂಗ್ ಸ್ಟಿಕ್ ಬೀಳಿಸಲು,ಜೋರಾಗಿ ಮರದ ಕಡೆ ಎಸೆಯುತ್ತಾನೆ,
ಆದರೆ ಅದೂ ಕೂಡ ಅಲ್ಲೇ ಸಿಕ್ಕಿ ಹಾಕಿ ಕೊಳ್ಳುತ್ತದೆ,😔

ನೆಲದ ಮೇಲೆ ಕೂತವನಿಗೆ ಒಮ್ಮೆ ಆಕಾಶವೇ ಕಳಚಿ ಬಿದ್ದಂತಾಗುತ್ತೆ..😭😭
ಸ್ವಲ್ಪ ಸುಧಾರಿಸಿಕೊಂಡು..😔

ಸುಮ್ಮನೆ ಆ ನಿರ್ಜನ ಪ್ರದೇಶದಲ್ಲಿ ಯಾರಾದರೂ ಸಹಾಯಮಾಡಲು ಸಿಗಬಹುದೆಂಬ ನಿರೀಕ್ಷೆಯಲ್ಲಿ  ದುಃಖ ದಿಂದ ಕುಳಿತಿದ್ದ..😢😨😨😨

ಆಗ ಒಬ್ಬ ದಾರಿ ಹೋಕ,ಈತ ಹೀಗೆ ದಾರಿಯ ಪಕ್ಕ ಕುಳಿತಿದ್ದು ನೋಡಿ ಹತ್ತಿರಬಂದು,

"ಏನಾಯ್ತು ಯಾಕೆ ಹೀಗೆ ಕೂತಿದ್ದೀರ"??? ಅಂತ ವಿಚಾರಿಸಿದ,

ಆಗ ಈ ಮೇಧಾವಿ

"ಕಲ್ತಿದ್ದು ಹೆಚ್ಚ್ ಆಯಿತು...
ಕಾಲ್ ಮೇಲಾಯಿತು...
ಗಾಳಿ ಬರ್ಕು ....
ಮನಿಗೆ ಹ್ವಾಯ್ಕು ....
ಕಥಿ ಗಂಡಾಂತರ ಆಯಿತು....
ಎಂತಾ ಸಾವುದು ಮರ್ರೆ..."

(ಕಲಿತದ್ದು ಹೆಚ್ಚ್ಆಗಿದೆ,ಕಾಲು {ಆತನಿಗೆ ಕಾಲುವಾಕಿಂಗ್ ಸ್ಟಿಕ್} ಮೇಲಾಗಿದೆ,ಗಾಳಿ ಬರಬೇಕು,ವಾಕಿಂಗ್ ಸ್ಟಿಕ್ ಬೀಳಬೇಕು,ಮನೆಗೆ ಹೋಗಬೇಕು)😨

ಅಂತ ತನ್ನ ಅಳಲನ್ನು ಆ ದಾರಿ ಹೋಕನ ಮುಂದೆ ದುಃಖ ದಿಂದ  ತೋಡಿಕೊಂಡನಂತೆ..
ದಾರಿ ಹೋಕನಿಗೆ,ಈತನ ಸಮಸ್ಯೆಯ ಅರಿವಾಗಿ,
ಮರ ಹತ್ತಿ ಆತನ ಎರಡೂ ವಾಕಿಂಗ್ ಸ್ಟಿಕ್ ತಂದು ಕೊಟ್ಟನಂತೆ..

ಇತ್ತೀಚೆಗೆ ಹೀಗೆ ತಮ್ಮ ಸಾಮರ್ಥ್ಯದ ಹಾಗೂ ತಮ್ಮ ವ್ಯಾಪ್ತಿಯ ಕೆಲಸಕ್ಕಿಂತ,ಇಲ್ಲದನ್ನು ನಾನು ಮಾಡುತ್ತೇನೆ,ನಾನು ಬಾರೀ ಬುದ್ದಿವಂತ ಅಂತ ಅವರಿಗೆ ಅವರೆ ಅಂದು ಕೊಂಡು,ಬೇಡದ ಕೆಲಸ ಹಾಗು ಬೇಡದ ವಿಷಯಕ್ಕೆ,ಕಲಿತದ್ದು ಹೆಚ್ಚಾದವರು,ಅತಿ ಬುದ್ದಿವಂತರು,ತಲೆ ಹಾಕಿ,ಸುಮ್ಮನೆ ಕಾಂಟ್ರವರ್ಸಿ ಮಾಡೋದು ಜಾಸ್ತಿ ಆಗಿದೆ ಅನ್ನಿಸ್ತಾ ಇದೆ..
ಅವರವರ ಸಾಮರ್ಥ್ಯ ಹಾಗೂ ವ್ಯಾಪ್ತಿಯ ಕೆಲಸ,(ಕೆಲ ಕೆಲಸದಲ್ಲಿ ಸಾಮರ್ಥ್ಯವನ್ನು ಗಳಿಸುವವರೆಗೆ)ಮಾತ್ರ ಅವರು ಮಾಡೋದು ಉತ್ತಮ..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ