ನಾನು ಕೆಲವು ತಿಂಗಳ ಹಿಂದೆ ವೈಯಕ್ತಿಕ ಕೆಲಸದ ನಿಮಿತ್ತ ಉಡುಪಿಗೆ ಹೋಗಿದ್ದೆ,ಹಾಗೆ ಶ್ರೀಕೃಷ್ಣ ಪರಮಾತ್ಮನ ದರುಶನ ಮಾಡೋಣವೆಂದು ದೇವಸ್ಥಾನದ ಬಳಿ ಹೋಗಿ,ಕನಕನ ಕಿಂಡಿಯ ಮೂಲಕ ದರುಶನ ಮಾಡಿ ಹೊರಡಲು ಅಣಿಯಾದೆ,
ಆದರೆ ಜೊತೆಗಿದ್ದ ಸ್ನೇಹಿತರು,ಒಳಗಡೆ ಹೋಗಿ ದರ್ಶನ ಮಾಡೋಣ ಅಂದ್ರು ನಾನು ಹೋಗೋಣ ಅಂತ ಒಳ ನಡೆದು ಯಾವುದೋ ಸೇವೆಗೆ ಚೀಟಿಯನ್ನು ಸಹ ಪಡೆದು,ಇನ್ನೇನು ಒಳ ಹೋಗ ಬೇಕು ಅನ್ನುವಾಗ,
ಬಲಗಡೆ ಇರುವ ಕಲ್ಯಾಣಿಗೆ ಎಲ್ಲರೂ ಹೋಗುತ್ತಿದ್ದರು,ಹಾಗೆ ನಾವು ಹೋಗೋಣಾ ಅಂತ,ಗೇಟ್ ದಾಟಿ ಒಳ ನಡೆದು ನೀರು ನೋಡುತ್ತಾ ಮೆಟ್ಟಿಲ ಮೇಲೆ ಕೂತಿದ್ದೆವು,ಅಲ್ಲಿ ಹಲವು ವಟುಗಳು ಸಂಧ್ಯಾವಂಧನೆ ಮಾಡುತ್ತಿದ್ದರು,ಕೆಲವು ಮಹಿಳೆಯರು ಇನ್ನೇನೋ ಪಠಿಸುತ್ತಾ ಕೂತಿದ್ದರು,ಕಲ್ಯಾಣಿಯಲ್ಲಿ ಯಾವುದೇ ಮುಲಾಜಿಲ್ಲದೆ ಪಂಚೆ ಇನ್ನಿತರೇ ಬಟ್ಟೆಯನ್ನು (ಮಠದವರು ಅನ್ನಿಸುತ್ತೆ)ನೀರಿನಲ್ಲಿ ಅದ್ದಿ ತೊಳೆಯುತ್ತಿದ್ದರು,ಪಾಪ ಕಲ್ಯಾಣಿಗೆ ಬಂದ ನಮ್ಮಂತವರು ಅದರ ಅರಿವಿಲ್ಲದೇ ಅದೇ ನೀರನ್ನು ತಲೆಗೆ ಚಿಮುಕಿಸಿ ಕೊಂಡು ಹೋಗ್ತಾ ಇದ್ರೂ..😂😂😉😉
ಹಾಗೆ ಈ ಪ್ರಹಸನವೆಲ್ಲಾ ನೋಡುತ್ತಿದ್ದವರಿಗೆ,
ಕೂಡಲೇ ಒಂದು ಆವಾಜ್ ಕೇಳಿತು..
"ಏನ್ರಿ ಯಾರೀ ಇಲ್ಲಿ ನಿಮಗೆ ಬರೋಕೆ ಹೇಳಿದ್ದು,ಅಷ್ಟು ಗೊತ್ತಾಗಲ್ವಾ,ಏನು ತಿಳ್ಕಂಡಿದ್ದೀರ,ಯಾರು ಬಿಟ್ರು ನಿಮಗೆ"
ಅಂತ ಒಬ್ಬ ಗಾರ್ಡ್ ಕೂಗುತ್ತಾ,ನಮಗೆ ಬಯ್ಯಲು ಶುರುವಿಟ್ಟು ಕೊಂಡ...
ನಾನು ತುಂಬಾ ಕೂಲ್ ಆಗಿ,
"ಎಲ್ಲರೂ ಬರುತ್ತಿದ್ದರು ನಾವು ಬಂದ್ವಿ"ಅಂದೆ,
ನನ್ನ ಸ್ನೇಹಿತರೂ ಅದನ್ನೇ ಹೇಳಿದರು,
"ನಮಗೇನು ಗೊತ್ತು ಇಲ್ಲಿ ಬರಬಾರದು ಅಂತ ಹಾಗಂತ ಬೋರ್ಡ್ ಇಲ್ವಲ್ಲಾ,ಎಲ್ಲರೂ ಇದ್ದಾರಲ್ಲ ಅಂದ್ರು..."
ಆದರೂ ಏನೇನೋ ಬಡಬಡಿಸುತ್ತಲೇ ಆತ ಯಾರಿಗೋ ಕಾಲ್ ಮಾಡಿ ತುಳುವಿನಲ್ಲಿ ಮಾತನಾಡ ತೊಡಗಿದ,
ನಾನು ಏನೂ ಲೆಕ್ಕಿಸದೆ ಬಾಯಿ ಮುಚ್ಚಿಕೊಂಡು ಹೊರ ಹೊರಟೆ,
ನನ್ನ ಸ್ನೇಹಿತರು,ಬೇಡಿ ಹಾಗೆಮಾಡಬೇಡಿ ಇಲ್ಲಿ ವರೆಗೆ ಬಂದಿದ್ದೀರ ಒಳಗಡೆ ದರ್ಶನ ಮಾಡೇ ಹೋಗೋಣ ಅಂತ ಒತ್ತಾಯ ಮಾಡಿದರು,
ಕ್ಯೂ ನಲ್ಲಿ ನಿಂತು ದರ್ಶನ ಮಾಡುತ್ತಿದ್ದಾಗ ನನಗೆ ಅನ್ನಿಸಿದ್ದು,
ಇದು ಗೊತ್ತಿದ್ದೆ ಕೃಷ್ಣ ಪರಮಾತ್ಮ ಸಾಮಾನ್ಯರಿಗೆ ಯಾವುದೇ ತೊಂದರೆ ಇಲ್ಲದೆ ದರ್ಶನ ಕೊಡಲು ತಿರುಗಿ ನಿಂತಿದ್ದ ಅಂತಾ..!!!!
ನನಗೆ ತುಂಬಾ ಬೇಸರವಾಯಿತು,ಪಂಕ್ತಿ ಭೇದ ಇನ್ನೊಂದು ಮತ್ತೊಂದು ಅವರ ವೈಯಕ್ತಿಕ ನನ್ನ ವಿರೋಧವಿಲ್ಲ,
ಆದರೆ ಹೀಗೆ ಅಲ್ಲಿ ಬಂದವರನ್ನು ಭಾಯಿಗೆ ಬಂದಂತೆ ಬೈಯುವುದು,ಯಾವ ಮಠದ ಹಾಗೂ ದೇವಸ್ಥಾನದ ಸಭ್ಯತೆ,ಸಂಪ್ರದಾಯ,ಸಂಸ್ಕಾರ !????
ನನ್ನ ಸ್ನೇಹಿತರು ಕೇಳಿದರು ಅಲ್ಲಾ,ನೀವು ಅಷ್ಟು ಶಾರ್ಟ್ ಟೆಂಪರ್ ಮನುಷ್ಯ,ಯಾಕೆ ಸುಮ್ಮನೆ ಇದ್ರಿ ಹೆಚ್ಚು ಮಾತನಾಡಲ್ಲಿಲ್ಲ ಅಂದ್ರು,
ನಾನಂದೆ "ಅದು ಅವರ ಮಠ,ಅದು ವೈಯಕ್ತಿಕ ಆಸ್ತಿ,ಹೋಗಿದ್ದು ಮೊದಲು ನಮ್ಮ ತಪ್ಪು,
ನಿಂಗ್ಯಾರು ಇಲ್ಲಿ ಬರೋಕೆ ಹೇಳಿದ್ರು ಅಂತ ಮಠಕ್ಕೆ ಸಂಬಂಧ ಪಟ್ಟವರು ಕೇಳಿದ್ರೆ,ಏನು ಹೇಳೋಕಾಗುತ್ತೆ ಉತ್ತರ,(ಇಲ್ಲಾ ಅಂದಿದ್ರೆ ಅವನಿಗೆ ಸಹಸ್ರನಾಮ ಅರ್ಚನೆ ಮಾಡಿ ಬರ್ತಿದ್ದೆ ಅದು ಬೇರೆ ಪ್ರಶ್ನೆ ಬಿಡಿ)😉
ಹೊರಗಿಂದಲೆ ದರ್ಶನ ಮಾಡಿಕೊಂಡು ಹೋಗಿದ್ದರೆ, ಇದೆಲ್ಲಾ ಆಗ್ತಿತ್ತಾ ಅಂದೆ..!!!!
ಇಂತಹಾ ಕೆಲವು ಜನ ಮಾಡುವ ಘನ ಕಾರ್ಯಕ್ಕೆ,ಆ ಹಿರಿಯ ಸ್ವಾಮಿಗಳು ಅನ್ನಿಸಿಕೊಳ್ಳುತ್ತಾರೆ,ಮೊದಲು ಸ್ವಾಮೀಜಿ ಮತ್ತು ಮಠದ ಆಡಳಿತ ಮಂಡಳಿ ಇಂತಹಾ ವಿಷಯಗಳನ್ನು ನಿಯಂತ್ರಣಕ್ಕೆ ತರೋದು ಒಳ್ಳೆಯದು...
ಎಲ್ರನ್ನು ಮನುಷ್ಯರಂತೆ ಟ್ರೀಟ್ ಮಾಡೋಕೆ, ಅವರ ಮಠದ ಎಂಪ್ಲಾಯ್ಸ್ಗೆ ಮೊದಲು ಸೂಚಿಸೋದು ಉತ್ತಮ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ