ಮಂಗಳವಾರ, ಮೇ 3, 2016

ಕ್ವಾಸ ನ ಗೋಳು ಭಾಗ 1

ಒಮ್ಮೆ ಕ್ವಾಸ ಸ್ವಂತ ಉದ್ಯಮ ಮಾಡಬೇಕೆಂದು ನಿರ್ಧರಿಸಿ,
ತಾನು ಬ್ಯಾಂಕಿನಿಂದ ಸಾಲ ತೆಗೆದು,
ಕೋಳಿ ಪಾರಂ ಮಾಡಲು ನಿರ್ಧರಿಸಿದ..🐓🐔🐓🐔🐓
ಕೋಳಿ ಪಾರಂ ಮಾಡಿ ವ್ಯಾಪಾರವನ್ನು ಶುರುಮಾಡಿಕೊಂಡ. 
ಒಂದು ದಿನ,ಕ್ವಾಸ ನ ಫಾರಂಗೆ  ಬಾರಿ ಶ್ರೀಮಂತರಂತೆ ಕಾಣುವ  ಸೂಟ್ ಬೂಟ್ ಹಾಕಿರುವ ಇಬ್ಬರು ವ್ಯಕ್ತಿಗಳು ಬಂದರು..

ಕ್ವಾಸ ಸಂತಸದಿಂದ ಅವರನ್ನು ಬರ ಹೇಳಿ..😃

ಇವರನ್ನು ಕುರಿ ಮಾಡಿ,ವ್ಯಾಪಾರ ಚನ್ನಾಗಿ ಮಾಡಿ ದುಡ್ಡು ಮಾಡಬೇಕು ಇವತ್ತೇ ಎಂದು ಮನಸ್ಸಿನಲ್ಲೆ ಲೆಕ್ಕ ಹಾಕಿದ..😍

ಬಂದವರು

"ಏನ್ರಿ ಕೋಳಿಗೆ 🐓🐓🐓🐓ಏನು ಹಾಕ್ತಿರ ಚನಾಗಿದಾವೆ ನೋಡೋಕೆ ಅಂದ..???😃

ಕ್ವಾಸ:-(ಖುಷಿಯಿಂದ ಉಬ್ಬಿ ಹೋದ ಬುಲ್ಡ್ ಅಪ್ ಕೊಡೊ ಭರದಲ್ಲಿ)"ಸಾರ್ ನಾವು ಕೋಳಿಗೆ🐔🐓🐔🐓🐔🐓
ಭಾರಿ ಕಾಸ್ಟ್ಲಿ ಫುಡ್ ಹಾಕ್ತಿವಿ
ದ್ರಾಕ್ಷಿ,ಗೋಡಂಬಿ,ಉತ್ತುತ್ತೆ, ಹಾಲು,ಮೊಸರು ಪೌಷ್ಟಿಕಾಂಶ ಸಿಗೋ ಎಲ್ಲಾ ಆಹಾರ ಹಾಕ್ತಿವಿ ಆದ್ರೆ ರೇಟ್ ಮಾತ್ರ ಎಲ್ಲರೂ ಕೊಡುವ ರೇಟಿಗೆ ಕೊಡ್ತೀವಿ,
ಅಂತ ಹಳಿ ಇಂಜಿನ್ ಏನೂ ಇರದ ರೈಲು ಬಿಟ್ಟು,ಸಿಕ್ಕಾಬಟ್ಟೆ ಬುಲ್ಡ್ ಅಪ್ ಕೊಟ್ಟ..😛😛😛😛

ಬಂದವರು:-
"ನಾವು ಇನ್ಕಮ್ ಟ್ಯಾಕ್ಸ್ ನವರು,ನಿಮಗೆ ಎಲ್ಲಿಂದ ಇಷ್ಟೆಲ್ಲಾ ಹಣ ಬರುತ್ತೆ,ಅದು ಹೇಗೆ ನಿಮಗೆ ಲಾಭ ಆಗುತ್ತೆ.. ಲೆಕ್ಕ ಕೊಡಿ"
ಅಂದ್ರು..

ಕ್ವಾಸ:-(ಫುಲ್ ತಬ್ಬಬ್ಬು)"ಸಾರ್,ತಪ್ಪಾಯ್ತು ಸಾರ್,ನಾನು ವ್ಯಾಪಾರ ಆಗ್ಲಿ ಅಂತ ಹೀಗೆ ಸುಳ್ಳು ಹೇಳಿದೇ ಸಾರ್, ಹಾಗೆಲ್ಲಾ ಏನೂ ಹಾಕಲ್ಲ ಸಾರ್..ಎಲ್ಲರ ಹಾಗೆ ನಾನೂ ಸಾಕುತ್ತೀನಿ ಅಂತ ಏನೇನೋ ಹೇಳಿ,ಅತ್ತು ಕರೆದು,ಕೊನೆಗೆ ಕೈಕಾಲು ಹಿಡಿದು,ಸ್ವಲ್ಪ ದುಡ್ಡು💵💶💷💸 ಎರಡು ಕೋಳಿ 🐓🐔ಕೊಟ್ಟು ಕಳುಹಿಸಿ ನಿಟ್ಟುಸಿರು ಬಿಟ್ಟ..😢😔
.
.
ಮೋರಲ್:-
.
.
.
.
.
.
.
.
ಮೋರಲ್ ಇಲ್ಲ ಎಣ್ಣೆ ಬ್ಯಾರಲ್ ಇಲ್ಲಾ.😷
ಕ್ವಾಸ ಸುಮ್ನೆ ಸುಳ್ಳು ಹೇಳಿ,ಲಾಸ್ ಮಾಡಿಕೊಂಡೆ ಅಂತಾ ಸಿಡಿಲು ಹೊಡೆಸಿಕೊಂಡು ಒಂದೇ ಕಣ್ಣಲ್ಲಿ ಅಳ್ತಾ ಕೂತಿದ್ದಾನೆ,ಸಮಾಧಾನ ಮಾಡಿ...
ಇದರಲ್ಲೂ ಮೋರಲ್ ಬೇಕಾ ನಿಮಗೆ..😂😂😂

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ