ಮಂಗಳವಾರ, ಮೇ 3, 2016

ಕ್ವಾಸ ನ ಗೋಳು ಭಾಗ 3

ಕ್ವಾಸ ಈ ಬಾರಿ ಅಂತೂ ಬಹಳ ಬೇಜಾರಾಗಿಬಿಟ್ಟಿದ್ದ,ಬೇಕಿತ್ತಾ ನನಗೆ ಸಾಲ ಮಾಡಿ ಈ ಕೋಳಿ ಪಾರಂ ಮಾಡುವ ಕೆಲ,ಸ ಅಂತ ತನ್ನನ್ನು ತಾನು ಶಪಿಸುತ್ತಾ,ಕೂತಿದ್ದ..😅😅😅
ದೂರದಲ್ಲಿ ಯಾರೋ ಗಿರಾಕಿ ಬರ್ತಾ ಇರೋದು ಕಾಣಿಸ್ತು..😊

ಕ್ವಾಸ ಈ ಭಾರಿ ಅತ್ಯಂತ ಜಾಗರೂಕತೆಯಿಂದ ಹಾಗೂ ಬುದ್ದಿವಂತಿಕೆಯಿಂದ ಇವರನ್ನು ಸಂಬಾಳಿಸಿ ವ್ಯಾಪಾರ ಮಾಡಬೇಕು ಮತ್ತೊಂದು ಸಮಸ್ಯೆಯಲ್ಲಿ ಸಿಕ್ಕಿಕೊಳ್ಳಬಾರದು ಅಂತ ದೃಡ ನಿರ್ಧಾರ ತೆಗೆದುಕೊಂಡ..

ಗಿರಾಕಿ ಬಂದರು..

"ಬನ್ನಿ ಸಾರ್..ಎಷ್ಟು ಕೋಳಿ 🐔🐓🐔🐓🐔ಬೇಕಿತ್ತು"ಅಂತ ಬಹಳ ವಿನಮ್ರತೆ ಹಾಗೂ ಜಾಗರೂಕತೆಯಿಂದ ಮಾತನಾಡಲು ಶುರುವಿಟ್ಟು ಕೊಂಡ ಕ್ವಾಸ..

ಗಿರಾಕಿ:-"ಹೌದು,ನಮಗೆ ಕೋಳಿ 🐔🐓🐔🐓🐔ಬೇಕಿತ್ತು,ಆದರೆ ಕೋಳಿ ನೋಡೋಕೆ ಸೂಪರ್ ಆಗಿ ಇದ್ದಾವೆ ಅಂದ ಹಾಗೆ ಏನು ಪುಡ್ ಎಲ್ಲಿಂದ ತಂದು ಹಾಕ್ತೀರ" ಅಂದ್ರು..

ಕ್ವಾಸ:- (ಈ ಭಾರಿ ತನ್ನೆಲ್ಲಾ ಬುದ್ದಿವಂತಿಕೆಯನ್ನು ಉಪಯೋಗಿಸಿ ಬಹಳ ಯೋಚಿಸಿ,ಒಳ್ಳೆಯ ಉತ್ತರ ಮೊದಲೇ ರೆಡಿ ಮಾಡಿಕೊಂಡಿದ್ದ).
ಕೂಡಲೇ ಕ್ವಾಸ..
"ಸಾರ್..ನಾವು ಪುಡ್ ಎಲ್ಲಾ ಏನೂ ತರಿಸಿ ಹಾಕಲ್ಲ,
ದಿನಾ ಬೆಳಿಗ್ಗೆ ಪ್ರತಿಯೊಂದು ಕೋಳಿಗೂ🐓🐔🐓🐔🐓💷💶💴 10 ರೂಪಾಯಿ ಕೊಟ್ಟು,ಅವಕ್ಕೆ ಏನೇನು ಬೇಕೋ ಅದನ್ನ ಖರೀಧಿಸಿ ತಿಂದು ಕೊಳ್ಳೋಕೆ ಹೇಳ್ತೀವಿ,ಅವು ತಿಂದು ಚನ್ನಾಗಿ ಬೆಳೆಯುತ್ತವೆ,ನಾವು ಹಾಗಂತ ರೇಟ್ ಜಾಸ್ತಿ ಹೇಳಲ್ಲ, ಎಲ್ಲರೂ ಮಾರುವ ರೇಟ್ಗೆ ಕೊಡ್ತೀವಿ" ಅಂದ..😂😂😂😂😂
.
.
.
.
.
ಗಿರಾಕಿ ಎಚ್ಚರ ತಪ್ಪಿ ಅಲ್ಲೇ ಕುಸಿದು ಬಿದ್ದನಂತೆ..😞😞😞
.
ಮೋರಲ್ 😜
.
.
.
.
..
.
ಮೋರಲ್ ಏನೂ ಇಲ್ಲ,ಕ್ವಾಸ ಟೆನ್ಶನಲ್ಲಿ ಇದ್ದಾನೆ ನಿಮಗೆ ಮೋರಲ್ ಬೇಕಾ,ಎಂತಾ ಜನ ಮರ್ರೆ ನೀವು..😉
ಕ್ವಾಸ ಕುಸಿದು ಬಿದ್ದಿದ್ದ ಗಿರಾಕಿನ ಆಸ್ಪತ್ರೆಗೆ ಸೇರಿಸಿ ಅವನ ಆಸ್ಪತ್ರೆ ಖರ್ಚು ಎಲ್ಲಾ ಕೊಟ್ಟು,ಕೈ ಕಾಲಿ ಮಾಡಿಕೊಂಡು,ಹೈರಾಣ ಆಗಿ ಬಂದು..
ಕೂಡಲೇ ಕೋಳಿ ಪಾರಂ ಮುಚ್ಚಿದನಂತೆ..😞😞😞

ಅಂದ ಹಾಗೆ
ಈ ಜೋಕ್ ಮೂಲ ಕರ್ತೃ ನಮ್ಮ ಖುಷಿ ಖುಷಿಯಲ್ಲಿ,
ದಿನವೂ 90 ಹಾಕುತ್ತಾ 99 ವರ್ಷ ನೆಮ್ಮದಿಯಾಗಿ ಬದುಕಿದ್ದ ಖುಷ್ವಂತಜ್ಜ..
..

ನಾನು ಕೋಳಿ ಸ್ಟೋರಿಗೆ ಮಸಾಲೆ ಹಾಕಿ,ಮದುವೆ ಮಾಡಿ ಹಾಕಿದ್ದೇನೆ ಅಷ್ಟೇ.. 😂😂😂😂
ಕ್ಷಮೆ ಇರಲಿ.ಖುಷ್ವಂತಜ್ಜ..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ