ಮಂಗಳವಾರ, ಮೇ 3, 2016

ಕ್ವಾಸನ ಪಾನ ಗೋಷ್ಠಿ

ಕ್ವಾಸ ತನ್ನ ಸ್ನೇಹಿತ ಕಲ್ಯನೊಡನೆ ದಿನವೂ ಬಾರ್ ಗೆ ಹೋಗಿ ಪಾನ ಗೋಷ್ಟಿ ಮಾಡಿ
ಎಲ್ಲರಿಗೂ ಮೊಳೆ ಹೊಡೆದು,ತಾನೂ ಮೊಳೆ ಹೊಡೆಸಿಕೊಂಡು ಮನೆಗೆ ಬರೋದು ಅವನ ಬಹಳ ವರ್ಷದ ಅಭ್ಯಾಸ..
ಇಬ್ಬರೂ ಒಂದೇ ಟೇಬಲ್ಲಿನಲ್ಲಿ ಕೂತು ಎರಡು ಗ್ಲಾಸ್ ಇಟ್ಕೊಂಡು ಕುದ್ರೆ ಕುಡಿಯೋ ಬ್ರಾಂಡ್ ತರಿಸಿ ಅದನ್ನ ಗಂಟಲಿನವರೆಗೆ ಕುಡಿದೇಹೊರಡುವವರು Daily,

ಇವರಿಗೆ ಒಬ್ಬ ಕಾಯಂ ಸಪ್ಲೈಯರ್ ಗುಂಡ ಅಂತ ಇದ್ದ,

ಒಂದು ದಿನ ಕ್ವಾಸ ಒಬ್ಬನೇ ಬಂದು
ಟೇಬಲ್ನಲ್ಲಿ ಕೂತು,ಎರಡು ಗ್ಲಾಸ್ ಹಾಗೂ ಕುದ್ರೆ ಕುಡಿಯೋ ಬ್ರಾಂಡ್ ದಿನಲೂ  ತರಲು    ಹೇಳುವಂತೆ,ಕಾಯಂ ಸಪ್ಲೈಯರ್ ಗುಂಡನಿಗೆ ಆರ್ಡರ್ ಮಾಡಿದ,
ಆತ
ಕ್ವಾಸನ ಕಾಯಂ ಕುದ್ರೆ ಕುಡಿಯುವ ಬ್ರಾಂಡ್ ತಂದಿಟ್ಟ,
ಎರಡು ಗ್ಲಾಸಿಗೂ ಎಣ್ಣೆ ಸುರಿದು ಕುಡಿಯ ತೊಡಗಿದ ಕ್ವಾಸ..🍻🍺

ಸಪ್ಲೈಯರ್ ಕುತೂಹಲ ತಾಳಲಾರದೆ
ಭಯದಿಂದ
"ಸಾ...ನಿಮ್ಮ ಪ್ರೆಂಡ್ ಎಲ್ಲಿ ಸಾರ್ ಬರ್ಲಿಲ್ಲ" ಅಂದ..
ಅದಕ್ಕೆ
ಕ್ವಾಸ :-ನನ್ನ ಪ್ರೆಂಡ್ ಅನಾರೋಗ್ಯದಿಂದ ತೀರ್ಕೊಂಡ ಕಣೋ"
ಅಂತ ಗೋಳೋ ಆಂತ ಅಳಲು ಶುರುವಿಟ್ಟುಕೊಂಡ..

ಆದ್ರೆ ಸಪ್ಲೈಯರ್ಗೆ ಇನ್ನೂ ಕುತೂಹಲ ತಣಿದಿರಲಿಲ್ಲ...

"ಸಾ..ಹೀಗಾಗ ಬಾರದಿತ್ತು.."😞
ಅಂದು
ಮತ್ತೆ ತನ್ನ ಅನುಮಾನ ಪರಿಹರಿಸಿಕೊಳ್ಳಲು ಮುಂದಾದ..
"ಸಾ....ಮತ್ಯಾಕೆ ಎರಡು ಗ್ಲಾಸಿನಲ್ಲಿ ಕುಡೀತಾ ಇದ್ದೀರಾ ಸಾ..."
ಅಂದ
ಅದಕ್ಕೆ ಕ್ವಾಸ..
"ನೋಡೋ...
ನನ್ನ ಸ್ನೇಹಿತ ನಾನು ಒಟ್ಟಿಗೆ ಕುಡೀತಾ ಇದ್ವಿ..
ಈಗ ಅವನು ಇಲ್ಲ,ಅವನನ್ನ ಬಿಟ್ಟು ಹೇಗೋ ಕುಡೀಲಿ,ಅದಕ್ಕೆ ಅವನ ಪಾಲಿಂದು ನನ್ನ ಪಾಲಿಂದು ಎರಡೂ ಕುಡೀತಾ ಇದ್ದೀನಿ" ಅಂದ
ಮತ್ತೆ ಬಿಕ್ಕಿ ಬಿಕ್ಕಿ ಅಳಲು ಶುರುಮಾಡಿದ..😭😭😭😭😭

ಸಪ್ಲೈಯರ್:-"ಅಬ್ಬಾ ಎಂತಾ ಸ್ನೇಹ ಸಾ..ನಿಮ್ದು".👏👏 ಅಂತಾ ಕ್ವಾಸನನ್ನು ಸಮಾಧಾನ ಮಾಡಿ ಹೋದ..

ಹೀಗೇ ಹಲವು ದಿನ ನಡೆಯಿತು,

ಆದರೆ ಒಂದು ದಿನ ಸಪ್ಲೈಯರ್ಗೆ ಮತ್ತೆ ಆಶ್ಚರ್ಯ ಕಾದಿತ್ತು

ಕ್ವಾಸ ಒಂದೇ ಗ್ಲಾಸ್ ತರಲು ಹೇಳಿದ ಹಾಗೂ ಅದಕ್ಕೆ ತನ್ನ ರೆಗ್ಯುಲರ್ ಎಣ್ಣೆ ಹಾಕಿ ಕುಡಿಯಲಾರಂಭಿಸಿದ,

ಸಪ್ಲೈಯರ್ಗೆ ಮತ್ತೆ ಕುತೂಹಲ, ಕೇಳಲೋ ಬೇಡ್ವೋ ಅಂತ ದೈರ್ಯ ಮಾಡಿ..

"ಸಾ...ಇವತ್ಯಾಕೆ ಸಾ ಒಂದೇ ಗ್ಲಾಸಲ್ಲಿ ಕುಡೀತಾ ಇದ್ದೀರ"ಅಂದ

ಕ್ವಾಸ:-
"ನಾನು ಕುಡಿಯೋದು ಬಿಟ್ಟೆ ಕಣೋ" ಅಂದ..

ಸಪ್ಲೈಯರ್:- "ಮತ್ಯಾಕೆ ಈ ಗ್ಲಾಸಲ್ಲಿ ಕುಡೀತಾ ಇದ್ದೀರ" ಅಂದ..

ಕ್ವಾಸ:-"ಇದು ನನ್ನ ಆತ್ಮ ಸ್ನೇಹತನ ಪಾಲು ಕಣೋ,ಅವನಿಗೆ ನಾನು ಯಾವತ್ತೂ ದ್ರೋಹ ಮಾಡಲ್ಲ" ಅಂದ...

ಸಪ್ಲೈಯರ್ ಕಣ್ಣು ಬಿಟ್ಟು ನೋಡಿದ್ರೆ ಆಸ್ಪತ್ರೆಯಲ್ಲಿ ಇದ್ನಂತೆ..😂😂😂😂😂

ಈ ಕಥೆಯ ನೀತು ಥೋ ನೀತಿ..
.
.
.
.
.
.
.
.
.
ಸ್ನೇಹ ಅಮರ ಅನ್ಕೊಂಡ್ರಾ..
ಎಂತ ಕರ್ಮನೂ ಇಲ್ಲ..
ಕ್ವಾಸಂಗೆ ಎಣ್ಣೆ ಹಾಕೋಕೆ ಒಂದು ರೀಸನ್ ಬೇಕಿತ್ತು ಅಷ್ಟೆ..🍻🍻🍻🍻🍻
(ಸೂಚನೆ:-ಈ ಕಥೆ ಎಲ್ಲೋ ಓದಿದ್ದೋ.ಕೇಳಿದ್ದೋ ನೆನಪು,
ಸ್ವಲ್ಪ ಮಾಡಿಪೈ ಮಾಡಲಾಗಿದೆ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ