ಸೋಮವಾರ, ಜುಲೈ 1, 2019

ಹಲಸಿನ ಹಣ್ಣು

ಮೊನ್ನೆ ಊರಿಗೆ ಹೋದಾಗ,
ಅಪ್ಪ,ನಾನು,ಅಮ್ಮ ಮಾತಾಡ್ತಾ,ಮನೆ ಎದುರು ಕೂತಿದ್ವಿ,
ಯಾರೋ ನಾಲ್ಕು ಜನ ಹುಡುಗರು ರಸ್ತೆಯಲ್ಲಿ ಪಿಕ್ ಅಪ್ ನಿಲ್ಲಿಸಿ,ಮನೆಗೆ ಬಂದ್ರು..

"ಮರ ನೋಡಿ,ಹಲಸಿನ ಕಾಯಿ ಇದೆಯಲ್ಲ ತಗೊಂಡು ಹೋಗೋದಾ ಸ್ವಾಮಿ"ಅಂದ್ರು..

ಅಪ್ಪ..
"ಮೊದಲು ತಗೊಂಡು ಹೋಗಿ,ಮಂಗನ ಕಾಟ ತಡೆಯೋಕೆ ಆಗಲ್ಲ,ನುಶಿ(ಸಣ್ಣ ಹುಳ) ಬೇರೆ ಮಳೆಗಾಲ ಶುರುವಾದ್ರೆ ಸುಮ್ಮನೆ ರಗಳೆ ಜಾನುವಾರು ಬೇರೆ"ಅಂದ್ರು,

"ಒಂದು ಕಾಯಿಗೆ 10 ರೂಪಾಯಿ ಕೊಡ್ತೇವೆ,ಕೆಲವಕ್ಕೆ 8 ಮತ್ತೆ ಕೆಲವಕ್ಕೆ 6 ಅಂದ, ಅದೂ ಕಾಯಿ ನೋಡಿ ಆಮೇಲೆ ರೇಟ್ ಹೇಳ್ತೀವಿ ಸ್ವಾಮಿ"
ಅಂದ ಅದರಲ್ಲಿ ಒಬ್ಬ..!

ಅಪ್ಪ,
"ನೋಡಿ,ಮರ ಹತ್ತೋಕೆ ಬರುತ್ತಾ?
ಮರ ಹತ್ತುವಾಗ ಜಾಗ್ರತೆ"ಅಂದ್ರು..

ಸರಿ ಅಂದ ಹುಡುಗರು

ಕೊನೆಗೆ ನಾವು ಅಲ್ಲೇ ಕೂತಾಗಲೇ,
ಸುಮಾರು 30 ರಿಂದ 40 ಕಾಯಿ ಮರದಿಂದ ಕಷ್ಟ ಪಟ್ಟು ಇಳಿಸಿ,
ಎಲ್ಲಾ ಸಣ್ಣ,ಸೈಜ್ ಇಲ್ಲ,ಹೆಚ್ಚು ಬಲಿತಿಲ್ಲ ಅಂತ ಸಣ್ಣಕ್ಕೆ ರಾಗ ಎಳೆದು,
ಲೆಕ್ಕ ಮಾಡಿಕೊಳ್ಳಿ ಅಂದ ಒಬ್ಬ,
ಕೊನೆಗೆ ಸಣ್ಣ ಪುಟ್ಟದ್ದೆಲ್ಲಾ ಬಿಟ್ಟು ಒಂದು 30 ಲೆಕ್ಕ ಹೇಳಿದ್ರು,
ಜೇಬಿನಿಂದ 150+10 ರೂಪಾಯಿ extra ಅಪ್ಪನ ಕೈಗೆ ಕೊಟ್ಟು ಹೊರಟರು..

"ಇದೆಂತಾ 10 ರೂಪಾಯಿ ಅಂತ ಹೇಳಿ ಇಷ್ಟೇ ಅಗೋದಾ 30 ಕಾಯಿಗೆ"
ಅಂದೆ ನಾನು.

"ಅಯ್ಯೋ..ಗೀಟಲ್ಲಾ ಸ್ವಾಮೀ ನಮಗೆ ಎಲ್ಲಾ ಮೀಡಿಯಂ
ಇದೆ"
ಅಂತ ಬಾಯಲ್ಲಿ ಇರುವ ಗುಟುಕಾ,ನುಂಗಿ ಮುಖ ಕಿವುಚಿ ಬೇಜಾರು ಹಾಗೂ ಸಂಕಟದಲ್ಲಿ ಹೇಳಿದ..ಹುಡುಗ..

"ಎಲ್ಲಿಂದ ಬಂದಿದ್ದು ನೀವು "
ಅಂತ ಕೇಳಿದ್ರು ಅಪ್ಪ,ಬಾಗಲ ಕೋಟೆ ಅಂದ

"ಎಲ್ಲಿ ಕಳುಹಿಸುತ್ತೀರಾ ಈ ಕಾಯಿ"ಅಂತ ಕೇಳಿದ್ರು..

"ಇದು ಕೆಲವು ಮಹಾರಾಷ್ಟ್ರ ಕೆಲವು ಚಿಪ್ಸ್ ಹಪ್ಪಳಕ್ಕೆ ಹೋಗುತ್ತೆ" ಅಂದು ಹೊರಟ..

ಅಪ್ಪ ನಾನು ಮುಖ ಮುಖ ನೋಡಿ ಕೊಂಡು ಸಣ್ಣಗೆ ನಕ್ಕೆವು..

"ಹೇ....ಹೋಗಲಿ ಬಿಡ ಹುಡುಗರು ಕಷ್ಟ ಪಡ್ತಾವಲ್ಲ,
ಸುಮ್ಮನೆ ಇಲ್ಲಿದ್ರೆ ಹಣ್ಣು ಯಾರೂ ತಿನ್ನಲ್ಲ,ಹಪ್ಪಳ ಮಾಡೋಕೆ ಪುರುಸೊತ್ತಿಲ್ಲ ಯಾರಿಗೂ" ಅಂದ್ರು..

ಅದೇ..ಬೆಂಗಳೂರಲ್ಲಿ 10 ರೂಪಾಯಿಗೆ ಎರಡು ಅಥವಾ ನಾಲ್ಕು ತೊಳೆ ಹಲಸಿನ ಹಣ್ಣು ಬರುತ್ತೆ ಅನಿಸುತ್ತೆ.ಅಲ್ವಾ?...

ನಮ್ಮನೆ ಮರದ ಹಣ್ಣೆ ನೋಡಿದ ಹಾಗೆ ಆಗುತ್ತಪ್ಪ,ಈ ಅಮೆಜಾನ್ online store ನಲ್ಲಿ ಇರೋ ಹಣ್ಣು ನೋಡಿದ್ರೆ..😂
Rate ನೋಡಿ ಒಮ್ಮೆ ಅಬ್ಬಬ್ಬಾ...!

ವರ್ಷಕ್ಕೆ ಒಂದು ಸಾರಿ ಪಿಕ್ ಅಪ್ ತಗೊಂಡು ಹೋಗೋದೇ ಒಳ್ಳೆಯದಾ ಅಂತ ಯೋಚನೆ ಮಾಡ್ತಾ ಇದೀನಿ..!
🤔🤔😂

ಶ್ರೀನಿಧಿ ಡಿ ಎಸ್ ಅವರು ಹಾಕಿದ ಪೋಸ್ಟ್ ನೋಡಿ ಇದು ನೆನಪಾಯ್ತು:-

Durdle door ಕಪ್ಪೆ ಹಾರಿಸಿದ ಕ್ಷಣ

ಬಾಲ್ಯದಲ್ಲಿ
"ನೋಡ,
ನಾನು ಜಾಸ್ತಿ  ಕಪ್ಪೆ ಹಾರಿಸಿದ್ದು,ನೀನು ಎರಡೇ ಸರಿ ಹಾರಿಸಿದ್ದು,ನನ್ನ ಕಲ್ಲೇ ಪಿಚ್ಚ್ ಜಾಸ್ತಿ ಹಾರಿದ್ದು"ಅಂತ ಹಳ್ಳ,ನದಿಗಳಲ್ಲಿ ಆಟವಾಡುತ್ತಾ,ಸ್ನೇಹಿತರ ನಡುವೆ ಜಗಳ ಮಾಡುತ್ತಾ ಇದ್ದದ್ದು,
ಇನ್ಯಾರೋ ಹಿರಿಯರು
"ಏಯ್ ಹಾಗೆ,ಕಲ್ಲು ಹೊಡೆಯಬಾರದು ಕಂಡ್ರೋ,ತಾಯಿ ಹೊಟ್ಟೆಗೆ ಹೊಡೆದಷ್ಟು ಪಾಪ"
ಅಂತ ಬುದ್ದಿ ಹೇಳೋರು,
ಎಲ್ಲಾ ನೆನಪಾಯ್ತು...😊

ಅಟ್ಲಾಂಟಿಕ್ ಸಾಗರದ,Lulu worth ನ Durdle door ಎಂಬ ಸ್ಥಳದಲ್ಲಿನ ಬೀಚ್ ನಲ್ಲಿ,
ಬಹಳ ಕಷ್ಟ ಪಟ್ಟು,ರೌಂಡ್ ಕಲ್ಲಿನ(pebble beach)ಮಧ್ಯ,ಚಪ್ಪಟೆ ಕಲ್ಲನ್ನು ಹುಡುಕಿ,ಹುಡುಕಿ,ಕಪ್ಪೆ ಹಾರಿಸಿದ ಅತ್ಯಂತ ಖುಷಿಯ ಕ್ಷಣ..
😍

#ಬಾಲ್ಯದನೆನಪು
#ಮಲೆನಾಡಬಾಲ್ಯ

P C:- Shubha Murali

Tower Bridge london

ಥೇಮ್ಸ್ ನದಿಗೆ ಅಡ್ಡಲಾಗಿ 1886 ರಿಂದ 1894 ರವರೆಗೆ 8 ವರ್ಷಗಳ ಕಾಲ ಕಟ್ಟಲಾದ ಈ ಸೇತುವೆ ಟವರ್ ಬ್ರಿಡ್ಜ್(suspension bridge)ಅಂತ ಜನಪ್ರಿಯ,
ಎರಡು ಬ್ಯಾಸ್ಕೂಲ್ಗಳು ಎರಡು ಟವರ್ ಗಳಿಗೆ ಅಳವಡಿಸಿ 86 ಡಿಗ್ರಿ ವರೆಗೆ ಲಂಬವಾಗಿ (verticle)ತೆರೆಯುವ ರೀತಿ ವಿನ್ಯಾಸ ಮಾಡಲಾಗಿದೆ..
ಕಾರಣ,ನದಿಯಲ್ಲಿ ಓಡಾಡುವ ಎತ್ತರದ ದೋಣಿಗಳಿಗೆ ಹೋಗಲು ಅಸಾಧ್ಯವಾಗಬಾರದು ಎಂದು..

ಸೇತುವೆ ಸುಮಾರು ಒಟ್ಟು  244 ಮೀಟರ್ ಉದ್ದ(801 ಅಡಿ),
ಎತ್ತರ 65 ಮೀಟರ್(213 ಅಡಿ)
ಅತ್ಯಂತ ಉದ್ದವಾದ ಸ್ಪಾನ್ 82.3 ಮೀಟರ್ ಇದೆ, (270ಅಡಿ)
ಸೇತುವೆ ಎತ್ತರ ಬ್ಯಾಸ್ಕೂಲ್(ಸನ್ನೆ ಕೋಲು ಎನ್ನಬಹುದಾ!?) ಮುಚ್ಚಿದಾಗ ನೀರಿನ ಗರಿಷ್ಠ ಮಟ್ಟದ ಮೇಲೆ 8.6 ಮೀಟರ್ (28 ಅಡಿ)ಇರುತ್ತದೆ..

ಸೇತುವೆ 86 ಡಿಗ್ರಿ ಕೋನದಲ್ಲಿ ಅಷ್ಟು ಎತ್ತರ ತೆರೆಯುವಷ್ಟು ಸಾಮರ್ಥ್ಯ ವಿದೆ,ಆಗ ನೀರಿನ ಗರಿಷ್ಠ ಮಟ್ಟದಿಂದ ಸುಮಾರು 42 ಮೀಟರ್(139 ಅಡಿ)ಅಷ್ಟು ಎತ್ತರದವರೆಗೆ ಮಧ್ಯದಲ್ಲಿ ಕ್ಲಿಯರೆನ್ಸ್ ಸಿಗುತ್ತದೆ,

ಅತಿ ಎತ್ತರದ ದೋಣಿಗಳು ಬಂದಾಗ ಇದನ್ನ ಹೈಡ್ರಾಲಿಕ್ ತಂತ್ರಜ್ಞಾನ ಬಳಸಿ ತೆರೆಯಲಾಗುತ್ತದೆ..
ನದಿಯ ಎರಡು ಬದಿ ಇರುವ ಟವರ್ ನಲ್ಲಿ ಇದರ ಯಂತ್ರಗಳನ್ನ ಅಳವಡಿಸಲಾಗಿದೆ...

ಇಷ್ಟೆಲ್ಲಾ ಹೇಳಿ ಕೆಲಸ ಮಾಡಿಸಿದ ಇಂಜಿನಿಯರ್,ಕೆಲಸ ಮಾಡಿದ ಮೇಸ್ತ್ರಿಗಳ,ಗಾರೆ ಕೆಲಸದವರ ಬಗ್ಗೆ ಹೇಳದೆ ಇದ್ದರೆ ಹೇಗೆ ಅಲ್ವಾ..
ಫೌಂಡೇಶನ್:-ಸರ್ ಜಾನ್ ಜಾಕ್ಸನ್,
ಹೈದ್ರಾಲಿಕ್ಸ್:-ಬಾರೊನ್ ಆರ್ಮ್ ಸ್ಟಾಆಂಗ್.
ವಿಲಿಯಂ ವೆಬ್ಸ್ಟರ್,ಸರ್ ಹೆಚ್ ಹೆಚ್ ವಿಲೀಯಂ ಅರುಲ್ ಮತ್ತೆ ಕಂಪನಿ ಮತ್ತೆ ಸುಮಾರು 432 ಜನ ಕೆಲಸಗಾರರು,ಈ ಡಬ್ಲ್ಯೂ ಕ್ರುತ್ವೇಲ್ ಕನ್ಸ್ಟ್ರಶನ್ ಇಂಜಿನಿಯರ್ ಆಗಿದ್ದರಂತೆ..
ಕಟ್ಟಿದ ವೆಚ್ಚ 1184000 ಪೌಂಡ್.
2018 ಕ್ಕೆ 132 ಮಿಲಿಯನ್ ಗೆ ಸಮವಂತೆ..!!!!

ನಿನ್ನೆ ಆ ತಂತ್ರಜ್ಞಾನ ಬಳಸಿ ಸೇತುವೆ ತೆರೆದು,ಒಂದು ದೋಣಿಯನ್ನ ಸೇತುವೆಯ ಇನ್ನೊಂದು ಕಡೆ ಹೋಗಲು ಅನುವು ಮಾಡಿ ಕೊಡುವಾಗ ಕಂಡ ದೃಶ್ಯ ಈ ಕೆಳಗೆ ಇದೆ..
#towerbridge
#londondiarie

Fire of london monument

ಇದನ್ನ Great fire of London,Monument ಅಂತ ಕರೆಯಲಾಗುತ್ತೆ ಈ ಸ್ಮಾರಕವನ್ನ monument ಸ್ಟ್ರೀಟ್ ಮತ್ತು ಫಿಶ್ ಸ್ಟ್ರೀಟ್ ಅಪ್ ಲ೦ಡನ್ ನಲ್ಲಿ ಸ್ಥಾಪನೆ ಮಾಡಲಾಗಿದೆ,

೧೬೬೬ಇಸವಿಯಲ್ಲಿ(1666) ರಲ್ಲಿ london ನಲ್ಲಿ ಬಹು ದೊಡ್ಡ ಬೆಂಕಿ ಅನಾಹುತವಾಗಿತ್ತಂತೆ,ಈ  ಅನಾಹುತದಲ್ಲಿ ತೀರಿ ಕೊಂಡವರ ಸ್ಮರಣಾರ್ಥ ಹಾಗು ಪಟ್ಟಣ ಮತ್ತೆ ಮರುಸ್ಥಾಪನೆ ಆಗಿದ್ದರ ನೆನಪಿಗಾಗಿ ಈ ಸ್ಮಾರಕ  ಕಟ್ಟಲಾಗಿದೆಯಂತೆ ...

೧೬೬೬(1666) ರಲ್ಲಿ
ಬೇಕರ್ ಹೌಸ್ ಪಡ್ಡಿಂಗ್ ಲೈನ್ ನಲ್ಲಿ ಅಕಸ್ಮಾತ್  ಆಗಿ  ಬೆಂಕಿ ಭಾನುವಾರ ೨(2) ಸೆಪ್ಟೆಂಬರ್ ರಲ್ಲಿ  ಆರಂಭವಾಗಿ  ೫(5) ನೇ ತಾರೀಖು ಬುಧವಾರ ಬೆಂಕಿ ನಂದಿ  ತಣ್ಣಗಾಯಿತಂತೆ..
ಲಂಡನ್ ಪಟ್ಟಣದ ಮುಖ್ಯ ಭಾಗ  ಸುಮಾರು ಮೂರನೇ ಎರಡು ರಷ್ಟು ಸುಟ್ಟು ಹೋಯಿತಂತೆ,
ಕೆಲವು ಜೀವ ಹಾನಿ,ಗಾಯಗಳ ಜೊತೆಗೆ ಸುಮಾರು ೧೩೨೦೦(13200)ಮನೆಗಳು,೮೭(87) ಚರ್ಚ್ ಗಳು,೫೨(52) ಶಾಪ್,ಕಂಪನಿಗಳು,ಸ್ಟ್ರೀಟ್ ಗಳು  ಸುಟ್ಟು ಹೋದವಂತೆ,ಆದರೆ ಕಲ್ಲಿನ ಕಟ್ಟಡಗಳು ಕೆಲವು ಸುಟ್ಟು ಹೋಗಿಲ್ಲ..!

ಅದಕ್ಕಾಗಿ ಈ ಸ್ಥ0ಭವನ್ನ  ೬೧(61)ಮೀಟರ್ (೨೦೨ ಅಡಿ)(202)ಎತ್ತರ ಕ್ಕೆ ಕಟ್ಟಲಾಗಿದೆ,
೨೦೨ ಅಡಿಯೇ ಎತ್ತರ ಯಾಕೆ ಅಂದರೆ,
ಬೆಂಕಿ ಆರಂಭವಾದ ಪಡ್ಡಿಂಗ್ ಲೈನ್ ನ ದೂರ ಅಷ್ಟು ಆ ಕಾರಣಕ್ಕೆ ಅಷ್ಟು ಎತ್ತರವೇ ಸ್ಥಾಪಿಸಲಾಗಿದೆ ಎನ್ನಲಾಗಿದೆ..

ಇದರ ಒಳಗಡೆ ಸ್ಪೈರಲ್ ಸ್ಟೇರ್ ಕೇಸ್ ಮೇಲಿನ ಛಾವಣಿ ಹೋಗಲು ಮಾಡಿದ್ದಾರೆ,ಮೇಲುಗಡ0ಬದ ಸುತ್ತ ಛಾವಣಿ ಇದೆ..
೩೧೧(311)ಮೆಟ್ಟಿಲು ಗಳು ಉಳ್ಳ ಈ ಸ್ಟೇರ್ ಕೇಸ್ cantiliver(one end free and one end fixed) ಆಗಿ ಫಿಕ್ಸ್ ಮಾಡಿ ಕಟ್ಟಲಾಗಿದೆ,ಈ ಮೆಟ್ಟಿಲಿನ ಮೂಲಕ ಹೋಗಿ ಮೇಲಿನ ಛಾವಣಿಯಲ್ಲಿ ನಿಂತು ಕೊಳ್ಳಲು ಅವಕಾಶ ಇದೆ,
ಈ ಛಾವಣಿಯಿಂದ ಮೇಲೆ ನೋಡಿದರೆ,ಈ ಸ್ಥ0ಬದ ತುದಿಗೆ ಬೆಂಕಿ ಉಗುಳುವಂತೆ ಕಾಣುವ ಡಿಸೈನ್ ಕಾಪರ್ ಹಾಗು ಬಂಗಾರದ ಲೇಪನದ ಎಳೆಯಂತೆ ಮಾಡಿ ದೇವಳದ  ಶಿಖರದಂತೆ ಮಾಡಲಾಗಿದೆ,

ಸಾರ್ವಜನಿಕರಿಗೆ  ಪ್ರವೇಶ ಇದೆ ಆದರೆ ಉಚಿತವಲ್ಲ ೫ ಪೌ೦ಡ್  ಕೊಡಬೇಕು..

ಈ ಹಿಂದೆ ಈ ಸ್ಟೇರ್ ಕೇಸ್ ಗೆ ಹಾಗೂ ಛಾವಣಿಗೆ ಯಾವುದೇ ಜಾಲರಿ ಇರಲಿಲ್ಲವಂತೆ ಆಗ ಹಲವು ಜನ ಅಕಸ್ಮಾತ್  ಬಿದ್ದು,ಕೆಲವರು ಆತ್ಮಹತ್ಯೆ ಕೂಡ ಮಾಡಿಕೊ೦ಡಿದ್ದು ಇದೆಯಂತೆ  ಆಮೇಲೆ ಅಲ್ಲಿನ ಆಡಳಿತ ಮಂಡಳಿ  ಹೆಚ್ಚಿನ ಜಾಲರಿ ಹಾಕಿ ಸೆಕ್ಯೂರ್ ಮಾಡಿದ್ದಾರೆ,

ಇಲ್ಲಿನ ಅತ್ಯಂತ ಎತ್ತರದ ಮೇಲ್ಛಾವಣೆಗೆ ಹೋದರೆ ಲಂಡನ್ ನಗರದ ಸುಂದರ  ದೃಶ್ಯ ಕಣ್ಣು ತುಂಬಿಸಿ  ಕೊಳ್ಳಬಹುದು ಹಾಗು ಕ್ಯಾಮೆರಾ  ಎಸ್ ಡಿ ಕಾರ್ಡ್ ಕೂಡ ತುಂಬಿಸಿ ಕೊಳ್ಳಬಹುದು...

ಇದರ ಡಿಸೈನ್,ಸರ್ ಕ್ರಿಸ್ಟಫರ್ ರೇನ್ ಸರ್ವೇಯರ್ ಜನರಲ್ ಕಿಂಗ್ ಚಾರ್ಲ್ಸ್ ಎರಡು, ಮತ್ತು ಆರ್ಕಿಟೆಕ್ಟ್ ಸೇಂಟ್ ಕೆಥಡ್ರಲ್ ಮತ್ತು ಅವರ ಸ್ನೇಹಿತರು ಸಹ ಉದ್ಯೋಗಿಗಳು ಮತ್ತು ರಾಬರ್ಟ್ ಹುಕೇ..
ಇದನ್ನ
೧೬೭೧(1671) ರಿಂದ ೧೬೭೭(1677) ವರಗೆ ಸುಮಾರು 6 ವರ್ಷ ಕಟ್ಟಲಾಯಿತಂತೆ.
೨೦೦೭(2007) ರಲ್ಲಿ ಇದರ ಮೈ0ಟೆನನ್ಸ್ ಮಾಡಲಾಯಿತಂತೆ...

#thefireoflondon
#themonument
#londondiarie

Londom traffic and manners

ನಿನ್ನೆ ಒಂದು ತಮಾಷೆ ನಡೆಯಿತು,

ಸಂಜೆ-7.30(ಅಂದರೆ ಇಲ್ಲಿ ಮಧ್ಯಾನ್ಹ ದಂತೆ ಬೆಳಕು ಇರುತ್ತೆ)ಗೆ sainsburrys ಅಂತ ಒಂದು ಶಾಪಿಂಗ್ ಮಾಲಿಗೆ ಹೋಗಿ ಬೇಕಿದ್ದಿದ್ದನ್ನ ಕೊಂಡು ಹೊರಟೆ,

ಪುಟ್ ಪಾತ್ ನಲ್ಲಿ ನಡೆದು ಬರುತ್ತಾ ಇರುವಾಗ,ಯಾರೋ BMW bike ಸವಾರ ವೇಗವಾಗಿ ಬಂದ ನಾನು ರಸ್ತೆ ದಾಟುವ ಸ್ಥಳದಲ್ಲಿ ಸಡನ್ ಆಗಿ ನಿಲ್ಲಿಸಿ ನಗುತ್ತಾ..
"ಕ್ರಾಸ್ ದ ರೋಡ್"ಅಂದರು..

ನಾನು ನೀವೇ ಹೋಗಿ ಅಂತ ಕೈ ತೋರಿಸಿದೆ,
ಮತ್ತೆ ಅವರು ಪ್ಲೀಸ್ ಅಂದರು,
ಇದೇ ರೀತಿ ಸುಮಾರು ಹೊತ್ತು ಇಬ್ಬರೂ ನಗುತ್ತಲೇ ಸಿಗ್ನಲ್ ಮಾಡುತ್ತಾ ಇದ್ದೆವು..😊

ಆದರೆ ಹಿಂದೆ ಸುಮಾರು ನಾಲ್ಕು ಕಾರ್ ಗಳು ನನ್ನ ಹಾಗೂ ಬೈಕ್ ಸವಾರರ ಪ್ರಹಸನ ನೋಡುತ್ತಾ, ಒಬ್ಬನೇ ರಸ್ತೆ ದಾಟೋದನ್ನ ಕಾಯುತ್ತಾ ಇದ್ದರು,
ಆದರೆ ಒಮ್ಮೆಯೂ ಹಾರ್ನ್ ಮಾಡಲಿಲ್ಲ,ಸಿಟ್ಟಾಗಿ ಏನೂ ಹೇಳಲಿಲ್ಲ,ಓವರ್ ಟೇಕ್ ಮಾಡೋಕೆ ಪ್ರಯತ್ನ ಕೂಡ ಮಾಡಲಿಲ್ಲ,ಬೈಕ್ ಸವಾರ ಕೂಡ..!

ಕೊನೆಗೆ ನಾನೇ ಸೋತು ರಸ್ತೆ ದಾಟಿ thumbs up ಮಾಡಿ,ಸ್ಮೈಲ್ ಮಾಡಿದೆ ಬೈಕ್ ಸವಾರರಿಗೆ..

ಬೈಕ್ ಸವಾರ ನನಗೆ thank you mate ಅಂದು,ಬಂದಷ್ಟೇ ವೇಗದಲ್ಲಿ ಹೊರಟೇ ಬಿಟ್ಟರು,
ಹಿಂದಿದ್ದ ಕಾರಿನವರು ಒಂದು ಸ್ಮೈಲ್ ಮಾಡಿ ವಿಶ್ ಮಾಡಿ ಹೊರಟರು..

ಇದೇ
ಸನ್ನಿವೇಶವನ್ನ ಬೆಂಗಳೂರಿನಲ್ಲಿ ಊಹಿಸಿ ಕೊಂಡೆ..
ಹಾಗೆ
ನೀವು ಊಹಿಸಿ ಕೊಳ್ಳಿ..
ಯಾವ ಯಾವ ಪದ ಪುಂಜ ಬೈಕ್ ಹಾಗೂ ಕಾರ್ ಸವಾರರಿಂದ ಹೊರ ಬರುತ್ತಾ ಇತ್ತು ಅಂತ..!?

ತು....ಸಾಯೋಕೆ ನನ್ನ ಗಾಡಿನೆ ಬೇಕಾ,
**#***@*,*@!?****,**#%****,#$%*,@#%$*,&#$@%*,
#@$%%**
😢

Isle of wight

ಈ ಮುತ್ತಿನ ಉಡುಗೆಯನ್ನ (pearl ಮಾರಾಯ್ರೆ) "ಪ್ರಿನ್ಸೆಸ್ ಡಯಾನ" ಆಕ್ಟೊಬರ್ 1989 ರಲ್ಲಿ ನಡೆದ ಬ್ರಿಟಿಷ್ ಪ್ಯಾಷನ್ ಅವಾರ್ಡ್ ನಲ್ಲಿ,ಮೊದಲ ಬಾರಿ ಧರಿಸಿದ್ದರಂತೆ ಹಾಗೂ ಇನ್ನಿತರೆ ಸಮಾರಂಭದಲ್ಲಿ ಧರಿಸಿದ್ದರಂತೆ, ಈ ಉಡುಗೆಗೆ ಡಯಾನ The Elvis dress ಅಂತ ಕರೆಯುತ್ತಾ ಇದ್ದರಂತೆ..!

ಈ ಉಡುಗೆಯನ್ನ ಸಮುದ್ರದ ಮುತ್ತುಗಳನ್ನ ಜೋಡಿಸಿ, ಜಾಕೆಟ್ ಮತ್ತು ಡ್ರೆಸ್ ಡಿಸೈನ್ ಮಾಡಲಾಗಿದೆ,ಇದಕ್ಕೆ ಸುಮಾರು 6 ತಿಂಗಳು ಕಾಲ ಸಮಯ ತೆಗೆದು ಕೊಳ್ಳಲಾಗಿತ್ತಂತೆ..
ಇದರ ಕೆಲಸ S Lock Ltd ಯವರು ಮಾಡಿದ್ದರಂತೆ,
ಡಿಸೈನರ್ ಕ್ಯಾಥರೀನ್ ವಾಕರ್....

ಇದನ್ನ 1996ರಲ್ಲಿ ಯಾವುದೋ ಫೇಮಸ್ Charity Auction Christies ನಲ್ಲಿ ಸುಮಾರು 151000 US Dollar ಗೆ ಮಾರಾಟವಾಗಿತ್ತಂತೆ..
ಅಂದರೆ ಇವತ್ತಿನ ಭಾರತೀಯ ಹಣದ ಮೌಲ್ಯದ ಪ್ರಕಾರ ಸುಮಾರು 10419000/-ರೂಪಾಯಿ ಮಾತ್ರ😂

ಇದನ್ನ ಕೊಂಡುಕೊಂಡ ಪುಣ್ಯಾತ್ಮ,ಪ್ರಾ0ಕ್ಲಿನ್ ಮಿಂಟ್ ಎಂಬಾತ,
ಅದನ್ನ 2006 ರಲ್ಲಿ ಮ್ಯೂಸಿಯಂ ಗೆ ಕೊಡುಗೆಯಾಗಿ ಕೊಟ್ಟರಂತೆ..

ಈ ಉಡುಪು ನನಗೆ ಕಂಡದ್ದು Isle of wight ಎಂಬ ದ್ವೀಪಕ್ಕೆ ferry ಮೂಲಕ ಹೋದಾಗ,ಅಲ್ಲಿ ಒಂದು Pearl factory ಗೆ ಭೇಟಿ ಕೊಡಲೇ ಬೇಕಾಯಿತು🙄😂😜
ಅಲ್ಲಿ ಈ ಉಡುಗೆಯನ್ನ ಪ್ರದರ್ಶನಕ್ಕೆ ಇಡಲಾಗಿತ್ತು..
ಆದರೆ ಇದು original ಉಡುಗೆ ಅಲ್ಲ!!!
ಅದರ Replica ಇಲ್ಲಿ ಇಡಲಾಗಿದೆ ಅಷ್ಟೇ..😬😂

Factory ಯಲ್ಲಿ
Fresh water pearl(Average price)
ಹಾಗೂ
Sea water pearl(very expensive)
ತರ ತರಹದ್ದು ಮಾರಾಟಕ್ಕೂ ಇಡಲಾಗಿತ್ತು..
ಮಹಿಳೆಯರ ನೆಚ್ಚಿನ ತಾಣ ಇದು..
ಸುಮ್ಮನೆ ನಾನು "ಮುತ್ತು" ನೋಡಿಕೊಂಡು ಬಂದೆ ಅಷ್ಟೇ..😜
ತಗೊಳ್ಳೋರು ತಗೊಂಡರು..
😍

#pearlwardrobe
#londondiarie