ಸೋಮವಾರ, ಜುಲೈ 1, 2019

ಹಲಸಿನ ಹಣ್ಣು

ಮೊನ್ನೆ ಊರಿಗೆ ಹೋದಾಗ,
ಅಪ್ಪ,ನಾನು,ಅಮ್ಮ ಮಾತಾಡ್ತಾ,ಮನೆ ಎದುರು ಕೂತಿದ್ವಿ,
ಯಾರೋ ನಾಲ್ಕು ಜನ ಹುಡುಗರು ರಸ್ತೆಯಲ್ಲಿ ಪಿಕ್ ಅಪ್ ನಿಲ್ಲಿಸಿ,ಮನೆಗೆ ಬಂದ್ರು..

"ಮರ ನೋಡಿ,ಹಲಸಿನ ಕಾಯಿ ಇದೆಯಲ್ಲ ತಗೊಂಡು ಹೋಗೋದಾ ಸ್ವಾಮಿ"ಅಂದ್ರು..

ಅಪ್ಪ..
"ಮೊದಲು ತಗೊಂಡು ಹೋಗಿ,ಮಂಗನ ಕಾಟ ತಡೆಯೋಕೆ ಆಗಲ್ಲ,ನುಶಿ(ಸಣ್ಣ ಹುಳ) ಬೇರೆ ಮಳೆಗಾಲ ಶುರುವಾದ್ರೆ ಸುಮ್ಮನೆ ರಗಳೆ ಜಾನುವಾರು ಬೇರೆ"ಅಂದ್ರು,

"ಒಂದು ಕಾಯಿಗೆ 10 ರೂಪಾಯಿ ಕೊಡ್ತೇವೆ,ಕೆಲವಕ್ಕೆ 8 ಮತ್ತೆ ಕೆಲವಕ್ಕೆ 6 ಅಂದ, ಅದೂ ಕಾಯಿ ನೋಡಿ ಆಮೇಲೆ ರೇಟ್ ಹೇಳ್ತೀವಿ ಸ್ವಾಮಿ"
ಅಂದ ಅದರಲ್ಲಿ ಒಬ್ಬ..!

ಅಪ್ಪ,
"ನೋಡಿ,ಮರ ಹತ್ತೋಕೆ ಬರುತ್ತಾ?
ಮರ ಹತ್ತುವಾಗ ಜಾಗ್ರತೆ"ಅಂದ್ರು..

ಸರಿ ಅಂದ ಹುಡುಗರು

ಕೊನೆಗೆ ನಾವು ಅಲ್ಲೇ ಕೂತಾಗಲೇ,
ಸುಮಾರು 30 ರಿಂದ 40 ಕಾಯಿ ಮರದಿಂದ ಕಷ್ಟ ಪಟ್ಟು ಇಳಿಸಿ,
ಎಲ್ಲಾ ಸಣ್ಣ,ಸೈಜ್ ಇಲ್ಲ,ಹೆಚ್ಚು ಬಲಿತಿಲ್ಲ ಅಂತ ಸಣ್ಣಕ್ಕೆ ರಾಗ ಎಳೆದು,
ಲೆಕ್ಕ ಮಾಡಿಕೊಳ್ಳಿ ಅಂದ ಒಬ್ಬ,
ಕೊನೆಗೆ ಸಣ್ಣ ಪುಟ್ಟದ್ದೆಲ್ಲಾ ಬಿಟ್ಟು ಒಂದು 30 ಲೆಕ್ಕ ಹೇಳಿದ್ರು,
ಜೇಬಿನಿಂದ 150+10 ರೂಪಾಯಿ extra ಅಪ್ಪನ ಕೈಗೆ ಕೊಟ್ಟು ಹೊರಟರು..

"ಇದೆಂತಾ 10 ರೂಪಾಯಿ ಅಂತ ಹೇಳಿ ಇಷ್ಟೇ ಅಗೋದಾ 30 ಕಾಯಿಗೆ"
ಅಂದೆ ನಾನು.

"ಅಯ್ಯೋ..ಗೀಟಲ್ಲಾ ಸ್ವಾಮೀ ನಮಗೆ ಎಲ್ಲಾ ಮೀಡಿಯಂ
ಇದೆ"
ಅಂತ ಬಾಯಲ್ಲಿ ಇರುವ ಗುಟುಕಾ,ನುಂಗಿ ಮುಖ ಕಿವುಚಿ ಬೇಜಾರು ಹಾಗೂ ಸಂಕಟದಲ್ಲಿ ಹೇಳಿದ..ಹುಡುಗ..

"ಎಲ್ಲಿಂದ ಬಂದಿದ್ದು ನೀವು "
ಅಂತ ಕೇಳಿದ್ರು ಅಪ್ಪ,ಬಾಗಲ ಕೋಟೆ ಅಂದ

"ಎಲ್ಲಿ ಕಳುಹಿಸುತ್ತೀರಾ ಈ ಕಾಯಿ"ಅಂತ ಕೇಳಿದ್ರು..

"ಇದು ಕೆಲವು ಮಹಾರಾಷ್ಟ್ರ ಕೆಲವು ಚಿಪ್ಸ್ ಹಪ್ಪಳಕ್ಕೆ ಹೋಗುತ್ತೆ" ಅಂದು ಹೊರಟ..

ಅಪ್ಪ ನಾನು ಮುಖ ಮುಖ ನೋಡಿ ಕೊಂಡು ಸಣ್ಣಗೆ ನಕ್ಕೆವು..

"ಹೇ....ಹೋಗಲಿ ಬಿಡ ಹುಡುಗರು ಕಷ್ಟ ಪಡ್ತಾವಲ್ಲ,
ಸುಮ್ಮನೆ ಇಲ್ಲಿದ್ರೆ ಹಣ್ಣು ಯಾರೂ ತಿನ್ನಲ್ಲ,ಹಪ್ಪಳ ಮಾಡೋಕೆ ಪುರುಸೊತ್ತಿಲ್ಲ ಯಾರಿಗೂ" ಅಂದ್ರು..

ಅದೇ..ಬೆಂಗಳೂರಲ್ಲಿ 10 ರೂಪಾಯಿಗೆ ಎರಡು ಅಥವಾ ನಾಲ್ಕು ತೊಳೆ ಹಲಸಿನ ಹಣ್ಣು ಬರುತ್ತೆ ಅನಿಸುತ್ತೆ.ಅಲ್ವಾ?...

ನಮ್ಮನೆ ಮರದ ಹಣ್ಣೆ ನೋಡಿದ ಹಾಗೆ ಆಗುತ್ತಪ್ಪ,ಈ ಅಮೆಜಾನ್ online store ನಲ್ಲಿ ಇರೋ ಹಣ್ಣು ನೋಡಿದ್ರೆ..😂
Rate ನೋಡಿ ಒಮ್ಮೆ ಅಬ್ಬಬ್ಬಾ...!

ವರ್ಷಕ್ಕೆ ಒಂದು ಸಾರಿ ಪಿಕ್ ಅಪ್ ತಗೊಂಡು ಹೋಗೋದೇ ಒಳ್ಳೆಯದಾ ಅಂತ ಯೋಚನೆ ಮಾಡ್ತಾ ಇದೀನಿ..!
🤔🤔😂

ಶ್ರೀನಿಧಿ ಡಿ ಎಸ್ ಅವರು ಹಾಕಿದ ಪೋಸ್ಟ್ ನೋಡಿ ಇದು ನೆನಪಾಯ್ತು:-

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ