ಶುಕ್ರವಾರ, ನವೆಂಬರ್ 15, 2019

Plastic free

ಗದಗದ ಅಬ್ಬಿಗೆರೆ ಎಂಬ ಊರಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 16000 ಜನಸಂಖ್ಯೆ ಇದೆಯಂತೆ, ಕೆಲವು ತಿಂಗಳ ಹಿಂದೆ ಗ್ರಾಮ ಪಂಚಾಯತಿಯವರು ಮೀಟಿಂಗ್ ಕರೆದು ಊರಿನ ಮಹಿಳೆಯರಿಗೆ ಪ್ಲಾಸ್ಟಿಕ್ ಮುಕ್ತ ಹಳ್ಳಿ ಮಾಡುವ ಬಗ್ಗೆ ವಿಷಯ ಪ್ರಸ್ತಾಪ ಮಾಡಿ,ನಮ್ಮ ಹಳ್ಳಿಯನ್ನ ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಮಾಡೋಣ ಅಂತ ಕೇಳಿ ಕೊಂಡಿದ್ದರಂತೆ..

ಅದಕ್ಕೆ ಬೆಂಬಲವಾಗಿ ನಿಂತ ಸಂಜೀವಿನಿ ಮಹಿಳಾ ಸಂಘಟನೆ,ಹಳ್ಳಿಯ ಮನೆ ಮನೆಗೆ ಹೋಗಿ ಹಳೆಯ ಬಟ್ಟೆಗಳನ್ನ ಸಂಗ್ರಹಿಸಿ ಅದಕ್ಕೆ ಬಣ್ಣ ಹಾಕಿ,ಅದನ್ನ ಹೊಲಿದು,ಅದರಲ್ಲಿ ಪ್ಲಾಸ್ಟಿಕ್ ಬೇಡ ಎನ್ನುವ ರೀತಿಯಲ್ಲಿ ತರತರದ ಸಂದೇಶ ಬರೆಯಿಸಿ,ಕೇವಲ 2 ರೂಪಾಯಿಗೆ ಒಂದು ಚೀಲವನ್ನ ಮನೆ ಮನೆಗೆ ಹಾಗೂ ಅಂಗಡಿಗಳಿಗೆ ವಿತರಿಸಲು ನಿರ್ಧರಿಸಿದ್ದಾರಂತೆ,15000 ಚೀಲವನ್ನ ಈಗಾಗಲೇ ಹೊಲೆಸಿದ್ದಾರಂತೆ...!

ಅಂಗಡಿ ಹಾಗೂ ಬೇರೆ ಬೇರೆ ಜಾಗಗಳಲ್ಲಿ ಪ್ಲಾಸ್ಟಿಕ್ ಬಳಸಿದವರಿಗೆ ದಂಡ ಹಾಕಲು ಗ್ರಾಮ ಪಂಚಾಯಿತಿಯಿಂದ ನಿರ್ಧರಿಸಲಾಗಿದೆಯಂತೆ..!

ಪ್ಲಾಸ್ಟಿಕ್ ನಿಂದ ಆರೋಗ್ಯಕ್ಕೆ ಬಹಳ ತೊಂದರೆ ಆಗುವ ಸಾಧ್ಯತೆ ಹೆಚ್ಚು ಅಂತ ಊರಿನ ಜನಕ್ಕೆ ತಿಳುವಳಿಕೆ ಮೂಡಿಸುವತ್ತ ಮಹಿಳಾ ಸಂಘ ಪ್ರಯತ್ನ ಮಾಡುತ್ತಾ ಇದೆ..
ಎಲ್ಲಾ ವಿಷಯಕ್ಕೂ ಸರ್ಕಾರವನ್ನ ಅವಲಂಭಿಸಲು ಆಗಲ್ಲ ಹಾಗಾಗಿ ನಾವೇ ಇಂತಹಾ ಕೆಲಸವನ್ನ ಮಾಡೋದು ಉತ್ತಮ ಅಂತ ಸಂಜೀವಿನಿ ಮಹಿಳಾ ಸಂಘದವರು ಹೇಳಿದ್ದಾರಂತೆ..



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ