ಸಾಮಾನ್ಯವಾಗಿ ಯು.ಕೆ ಯಲ್ಲಿ
ಶಾಪಿಂಗ್ ಮಾಲ್,ರೆಸ್ಟೋರೆಂಟ್,ಬಸ್,ಟ್ರೈನ್ ಹೀಗೆ ಸಾರ್ವಜನಿಕ ಪ್ರದೇಶದಲ್ಲಿ ಎಲ್ಲಾ ಕಡೆ ಯಾರೇ ಅಪರಿಚಿತರು
ಎದುರು ಸಿಕ್ಕರೂ ಹೆಚ್ಚಿನವರು,
ಒಂದು ಕಿರುನಗೆ ಚೆಲ್ಲಿ
Are you all rite?
Are you okay? (ಅವರ ಆಂಗ್ಲ ಮಾತು ಏನು ಕೇಳಿದ್ರು ಅಂತಲೇ ಅರ್ಥ ಆಗಲ್ಲ,ಮಾತಿನ ಶೈಲಿ ಹಾಗಿರುತ್ತೆ,ಅರ್ಧ ವಾಕ್ಯ ನುಂಗಿ ಬಿಟ್ಟಿರುತ್ತಾರೆ ಅದು ಬೇರೆ ಬಿಡಿ!😂)
ಅಂತ ಬಹಳ ಸಭ್ಯ ಹಾಗೂ ಕಾಳಜಿಯಿಂದ
ಕೇಳೋದು ಸಾಮಾನ್ಯ..!
ಮೊದ ಮೊದಲು ಏನಪ್ಪಾ ಹೀಗೆ,ನಾನು ಹುಷಾರಿಲ್ಲದವನ ತರ ಕಾಣಿಸ್ತಿನಾ ಜನಕ್ಕೆಲ್ಲಾ ಅನಿಸ್ತಾ ಇತ್ತು..!?
ಆಮೇಲೆ ದಿನ ಕಳೆದಂತೆ ತಿಳಿಯಿತು
ಅದು ಹೇಗೆ ಅಂದರೆ
ನಮ್ಮ ಊರುಗಳ ಕಡೆ ಯಾರಾದರೂ ಎದುರು ಸಿಕ್ಕಾಗ
"ಮತ್ತೆ ಆರಾಮ..?"
"ಮತ್ತೆ ಹೇಗಿದ್ದೀರಾ?"
"ಮತ್ತೆ ಸಮಾಚಾರ?"
ಅಂತ ಕೇಳ್ತಾರಲ್ಲ ಹಾಗೆ ಅಂತ..
ಆದ್ರೆ
ಹೀಗೆ ಕೇಳೋ ಪರಿಪಾಠ ನಮ್ಮಿಂದಲೇ ಕಲಿತಿದ್ದಾ ಇವರು
ಅಂತ ನನಗೆ ಬಹಳಅನುಮಾನ ಇದೆ..!
😛😉
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ