ನಾಯಿ ನಿಯತ್ತಿಗೆ ಹೆಸರಾದ ಪ್ರಾಣಿ,ಒಮ್ಮೆ ಒಬ್ಬರನ್ನ ಹಚ್ಚಿಕೊಂಡರೆ ಅವರನ್ನ ಬಿಟ್ಟು ಹೋಗುವ ಮಾತೇ ಇಲ್ಲ..😍
ಇದು Scotland ನ Edinbarugh ಎಂಬ ಪಟ್ಟಣದಲ್ಲಿ 19ನೆ ಶತಮಾನದಲ್ಲಿ ನಡೆದ ಒಂದು ನೈಜ ಕತೆ...
ಸುಮಾರು 1855 ರ ಸಮಯದಲ್ಲಿ,ಎಡಿನ್ ಬರೋ ಎಂಬ ಪಟ್ಟಣದಲ್ಲಿ,ಎಡಿನ್ ಬರೋ ಪೊಲೀಸ್ ಇಲಾಖೆಯಲ್ಲಿ ಜಾನ್ ಗ್ರೇ ಎಂಬವ್ಯಕ್ತಿ ನೈಟ್ ವಾಚ್ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತ ಇದ್ದರಂತೆ..
ತುಂಬಾ ಚಳಿಗಾಲದಲ್ಲಿ ಒಬ್ಬರೇ ಕಾವಲು ಕಾಯುವಾಗ ಒಬ್ಬರು ಜೊತೆಗಾರ ಇರಲಿ ಅಂತ
Skye Terrier ಎಂಬ ಬ್ರೀಡ್ ನ ಬಾಬಿ ಎಂಬ ಹೆಸರಿನ 2ವರ್ಷ ವಯಸ್ಸಿನ ನಾಯಿ ಸಾಕಿದ್ದರಂತೆ,ಸ್ವಲ್ಪ ದಿನಕ್ಕೆ ಬಹಳ ಆಪ್ತ ಸ್ನೇಹಿತರಾಗಿ ಬಿಡ್ತಾರೆ ಇಬ್ಬರೂ,
ಇದರ ಮಧ್ಯೆ
ಜಾನ್ ಗ್ರೇ ಗೆ Tubercolosis ಸಮಸ್ಯೆ ಪ್ರಾರಂಭವಾಗತ್ತೇ,ಅದು ದಿನೇ ದಿನೇ ಬಹಳ ಉಲ್ಬಣವಾಗಿ,15 ಫೆಬ್ರವರಿ,
1858ರಲ್ಲಿ ಜಾನ್ ಗ್ರೇ ಮರಣ ಹೊಂದಿ ಬಿಡ್ತಾರೆ,
ಅವರನ್ನ ಅಲ್ಲೇ ಹತ್ತಿರದ Old town Edinbarugh,Greyfriers kirik yard ಎಂಬ ಸ್ಮಶಾನದಲ್ಲಿ ಅಂತಿಮ ಸಂಸ್ಕಾರ ಮಾಡುತ್ತಾರೆ..
ಆದರೆ ತನ್ನ ಒಡೆಯನ ಅಂತಿಮ ಸಂಸ್ಕಾರ ಆದ ದಿನದಿಂದ ಎಷ್ಟೇ ಕೆಟ್ಟ ವಾತಾವರಣ,ಚಳಿ ಇದ್ದರೂ ಒಡೆಯನ ಸಮಾಧಿ ಬಳಿ ಕುಳಿತು,ಓಡಾಡುತ್ತಾ ಜೀವನ ಮಾಡುತ್ತಾ ಇರುತ್ತೆ ಬಾಬಿ,ಇದನ್ನ ಗಮನಿಸಿದ ಅಲ್ಲಿನ ಸ್ಥಳೀಯರು ಬಾಬಿಯನ್ನ ಬೇರೆಡೆ ಸ್ಥಳಾಂತರ ಮಾಡಲು ಹಲವು ಸರಿ ಪ್ರಯತ್ನ ಮಾಡಿದರೂ,ಮತ್ತೆ ಅಲ್ಲೇ ಬಂದು ವಾಸ ಮಾಡುತ್ತಾ ಇತ್ತಂತೆ..!
ಕೊನೆಗೆ ಬಾಬಿ ಸ್ಥಲಾಂತರ ಮಾಡೋದು ಪ್ರಯತ್ನ ಕೈಬಿಟ್ಟ ಜನ..
ಗ್ರೇಪ್ರೈಯರ್ ಕಿರಿಕ್ ಯಾರ್ಡ್ನ, ಜಾನ್ ಗ್ರೇ ಸಮಾಧಿಯ ಪಕ್ಕದಲ್ಲೇ ಬಾಬಿಗೆ ಒಂದು ಸಣ್ಣ ಗೂಡನ್ನು ಕಟ್ಟಿ ಕೊಟ್ಟರಂತೆ..
ಬಾಬಿಯ ಈ ಸುದ್ದಿ ಕೆಲವೇ ದಿನಗಳನ್ನ ಇಡೀ ಎಡಿನ್ ಬರೋ ಪಟ್ಟಣಕ್ಕೆ ಮುಟ್ಟುತ್ತೆ..!
ಸುಮಾರು ಒಂದು ಗಂಟೆಯ ಮಧ್ಯಾನ್ಹ ಜನರೆಲ್ಲಾ ಕಿರಿಕ್ ಯಾರ್ಡ್ ಬಳಿ ಬಂದು ಬಾಬಿಯನ್ನ ನೋಡುತ್ತಾ ಇದ್ದರಂತೆ,ಕಾರಣ ದಿನಾ ಒಂದು ಗಂಟೆಗೆ ಬಂದೂಕು ಶಬ್ದ ಮಾಡೋದು ಅಲ್ಲಿನ ವಾಡಿಕೆ,ಆ ಬಂದೂಕು ಶಬ್ದ ಕೇಳಿದ ಕೂಡಲೇ,ಬಾಬಿ ಓಡಿ ಹೋಗಿ ಅಲ್ಲೇ ಹತ್ತಿರದಲ್ಲಿ ಇದ್ದ ಟ್ರೈಲ್ಸ್ ಕಾಪಿ ಹೌಸ್ ನಲ್ಲಿ ಮಧ್ಯಾನ್ಹದ ಊಟ ಮುಗಿಸಿ ಬರುತ್ತಾ ಇತ್ತಂತೆ,ಸ್ಕ್ಯಾಟ್ ಎಂಬುವ ಒಬ್ಬರು ಸೈನಿಕ ಈ ರೀತಿ ಬಾಬಿಗೆ ತರಭೇತಿ ಮಾಡಿದ್ದರು ಎನ್ನಲಾಗಿದೆ,ಸಂಜೆಯೂ 6 ಗಂಟೆಗೆ ಊಟ ಮುಗಿಸಿ ವಾಪಾಸಾಗುತ್ತಿತ್ತಂತೆ ಬಾಬಿ..!
ಕೆಲವು ಸಮಯದ ನಂತರ ಅಲ್ಲಿನ ಆಡಳಿತ ಮಂಡಳಿವತಿಯಿಂದ
1867 ರಲ್ಲಿ ಒಂದು ಹೊಸ ಕಾನೂನು ಮಾಡಲಾಗುತ್ತದೆ,ಎಲ್ಲಾ ನಾಯಿಗಳಿಗೆ ಲೈಸೆನ್ಸ್ ಟ್ಯಾಗ್ ಇರಲೇ ಬೇಕು,ಲೈಸೆನ್ಸ್ ಇಲ್ಲವಾದರೆ ಅದನ್ನ ಸಾಯಿಸಲಾಗುವುದು ಅಂತ!?
ಇದನ್ನ ಗಮನಿಸಿದ Scotish society for prevention cruelty to animal ನ ನಿರ್ದೇಶಕರು William chamber ಎನ್ನುವವರು ನಾಯಿಯ ಲೈಸೆನ್ಸ್ ಗೆ,ಸಂಬಂದ ಪಟ್ಟ ಇಲಾಖೆಗೆ ಹಣ ಕೊಟ್ಟು,ಟ್ಯಾಗ್ ಮಾಡಿಸಿ ಕಾಲರ್ ತಂದು ಕೊರಳಿಗೆ ಹಾಕಿದ್ದರಂತೆ,
ಆ ಕೊರಳ ಲೈಸೆನ್ಸ್ ಪಟ್ಟಿ ಈಗಲೂ ಎಡಿನ್ ಬರೋ ಮ್ಯೂಸಿಯಂ ನಲ್ಲಿ ಇಡಲಾಗಿದೆ,
14ಜನವರಿ 1872 ರಂದು ಬಾಬಿ ಕೊನೆಉಸಿರು ಎಳೆದು ಬಿಡುತ್ತೆ ಆಗ ಅದಕ್ಕೆ 16 ವರ್ಷ ವಯಸ್ಸು...
ಬಾಬಿಯನ್ನ ಕೂಡ ಅದೇ ಸ್ಮಶಾನದ ಬಳಿ,ಅದರ ಒಡೆಯನ ಸಮಾಧಿ ಹತ್ತಿರವೇ ಹೂಳಲಾಗಿದೆ!
ಎಡಿನ್ ಬರೋದಾ ಜನತೆ ಈ ಬಾಬಿಯ ಮೇಲೆ ಬಹಳ ಪ್ರೀತಿ ತೋರಿಸಿ 14 ವರ್ಷ ನೋಡಿದರೂ,ಬಾಬಿ ತನ್ನ ಯಜಮಾನನ ಮೇಲಿನ ಪ್ರೀತಿ ತನ್ನ ಕೊನೆ ಉಸಿರು ಇರುವವರೆಗೆ ಸ್ವಲ್ಪವೂ ಕಡಿಮೆ ಮಾಡಲಿಲ್ಲ,ಆ ಜಾಗವನ್ನ ಬಿಡಲೇ ಇಲ್ಲ ಅನ್ನೋದು ಬಹಳ,ಆಶ್ಚರ್ಯ,ವಿಶೇಷ ಹಾಗೂ ಖುಷಿ ಪಡುವ ಸಂಗತಿ..
ಅದರ ನೆನಪಿಗಾಗಿ Philanthropist (ಪರೋಪಕಾರಿ,ಸಮಾಜ ಸೇವಕಿ ಅನ್ನಬಹುದು!)Lady burdett-coutt ಎನ್ನುವವರು ಇದರಿಂದ ಪ್ರೇರೇಪಿತರಾಗಿ ಕಾರಂಜಿಯೊಂದಿಗೆ ಇರುವ ಬಾಬಿ ಪ್ರತಿಮೆಯನ್ನ george 4 bridge ಮತ್ತು candle maker row junction ನಲ್ಲಿ ಅಲ್ಲಿನ ಸ್ಥಳೀಯ ಆಡಳಿತ ಮಂಡಳಿಯ ಪರ್ಮಿಶನ್ ತೆಗೆದು ಕೊಂಡು ಸ್ಥಾಪಿಸಿದರು..
ಇದರ ಹೆಸರಿನ ಒಂದು ಬಾರ್ ಮತ್ತು ರೆಸ್ಟೋರೆಂಟ್ ಕೂಡ ಅಲ್ಲೇ ಮಾಡಲಾಗಿದೆ..
ಬಾಬಿಯ ಮೇಲೆ ಹಲವು ಕತೆಗಳು,ಲೇಖನಗಳು,ಚಲನಚಿತ್ರಗಳು ಆಗಿವೆ,
Novel-greyfriars Bobby by Eleanor atkinson(1912)
Film-Greyfriar Bobby(1961),Adventure of Greyfriars Bobby(2006) ಆಗಿವೆ..
ಇದರ ಮೂಗನ್ನು ಉಜ್ಜಿದರೆ ಲಕ್ ಬರುತ್ತೆ ಎನ್ನುವ ಒಂದು ನಂಬಿಕೆಯೂ ಇಲ್ಲಿದೆ..!
ಪ್ರವಾಸಿಗರು,ಬಾಬಿಯ ಪ್ರತಿಮೆಯ ಮೂಗು ಉಜ್ಜಿ ಉಜ್ಜಿ ಬಂಗಾರದ ಬಣ್ಣ ಮಾಡಿಟ್ಟಿದ್ದಾರೆ..!
😊
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ