ಮೊದಲೆಲ್ಲಾ..
ಯಾರೋ ಓಡಿ ಹೋಗಿ ಅಲ್ಲಿ ಮದುವೆಯಾದರಂತೆ,
ಅವಳು ಇನ್ನು ಮೈನರ್ ಅಂತ ಅವಳನ್ನ18 ವರ್ಷವಾಗುವವರೆಗೆ ಮುಚ್ಚಿಟ್ಟಿದ್ದರಂತೆ,
ನಂತರ ರಿಜಿಸ್ಟರ್ ಆದರಂತೆ,
ರಿಜಿಸ್ಟರ್ ಆಫೀಸ್ ಎದುರು ಹೆಸರು ಹಾಕ್ತಾರಂತೆ,ಯಾರಾದರೂ ಅಬ್ಜಕ್ಸನ್ ಹಾಕೋರು ಹಾಕಬಹುದಂತೆ,ಎಲ್ಲೋ ದೇವಸ್ಥಾನದಲ್ಲಿ ಮದುವೆಯಾದರಂತೆ,
ಅಲ್ಲಿ ಪುರೋಹಿತರು ಮದುವೆಯ ಬಗ್ಗೆ ಲೆಟರ್ ಹೆಡ್ ನಲ್ಲಿ ಬರೆದು ಕೊಟ್ಟರಂತೆ,ಅಂತೆಲ್ಲಾ,ಬೇರೆ ಬೇರೆ ತರದ ಕತೆ ಗಳನ್ನ,
ಹಿಂಗೆಲ್ಲಾ ಇರುತ್ತಾ ಆಶ್ಚರ್ಯದಿಂದ ಕೇಳಿಸಿ ಕೊಳ್ಳುತ್ತಾ ಇದ್ದೆವು..!
ಇಂಗ್ಲೆಂಡ್(𝗘𝗻𝗴𝗹𝗮𝗻𝗱)ಗಡಿ(Border) ಭಾಗದಲ್ಲಿ ಸ್ಕಾಟ್ಲೆಂಡ್(𝗦𝗰𝗼𝘁𝗹𝗮𝗻𝗱) ದೇಶಕ್ಕೆ ಸೇರಿರುವ ಒಂದು ಬಹಳ ಜನಪ್ರಿಯ ಜಾಗವಿದೆ..!
ಅದರ ಹೆಸರು
"ಗ್ರೆಟ್ನಾ ಗ್ರೀನ್"
𝗚𝗿𝗲𝘁𝗻𝗮 𝗚𝗿𝗲𝗲𝗻...
ಈ ಜಾಗ ಸಾರ್ಕ್ ನದಿಯ ಹತ್ತಿರವೇ ಇದೆ..
ಲಂಡನ್(𝗟𝗼𝗻𝗱𝗼𝗻) ನಿಂದ ಸುಮಾರು 5.30ಗಂಟೆ 326 ಮೈಲಿ ರಸ್ತೆಯಲ್ಲಿ ಕ್ರಮಿಸಿದರೆ,ಎಡಿನ್ ಬರೋ(𝗘𝗱𝗶𝗻𝗯𝘂𝗿𝗴𝗵,𝗦𝗰𝗼𝘁𝗹𝗮𝗻𝗱) ಹೋಗುವ ದಾರಿಯ ಮಧ್ಯದಲ್ಲಿ,ಈ ಜಾಗವಿದೆ...
ಇಂಗ್ಲೆಂಡ್ ನಲ್ಲಿ 𝟭𝟳𝟱𝟰 ನೇ ಇಸವಿಯಲ್ಲಿ, ಲಾರ್ಡ್ ಹಾರ್ಡ್ರ್ವಿಕ್ ಮ್ಯಾರೇಜ್(𝗟𝗼𝗿𝗱 𝗵𝗮𝗿𝗱𝘃𝗶𝗰𝗸𝘀 𝗺𝗮𝗿𝗿𝗶𝗮𝗴𝗲 𝗮𝗰𝘁) ಆಕ್ಟ್ ಜಾರಿಗೆ ಬಂದಿತ್ತು..
ಈ ಕಾಯ್ದೆಯ ಪ್ರಕಾರ..
ಇಂಗ್ಲೆಂಡ್(𝗘𝗻𝗴𝗹𝗮𝗻𝗱)ಮತ್ತು ವೇಲ್ಸ್(𝗪𝗮𝗹𝗲𝘀) ನ ಪ್ರಜೆಗಳು,
21 ವರ್ಷದ ಒಳಗಿನವರು ಪ್ರೀತಿಸಿ,
ಪೋಷಕರ ಸಮ್ಮತಿ ಇಲ್ಲದೇ ಮದುವೆ ಆಗುವ ಹಾಗಿರಲಿಲ್ಲ..!
ಅದು ಕಾನೂನು ವಿರೋಧಿ,
ಇದನ್ನ ಧಿಕ್ಕರಿಸಿ ಪ್ರೇಮಿಗಳು ಮದುವೆ ಆದರೂ ಕಾನೂನು ಕ್ರಮಕ್ಕೆ ಒಳಗಾಗುವ ಭೀತಿ ಎದುರಿಸ ಬೇಕಾಗಿತ್ತು..!
ಆದರೆ ಸ್ಕಾಟ್ಲೆಂಡ್ ನಲ್ಲಿ 14 ಮತ್ತೆ 12 ವರ್ಷದವ್ರು ಕೂಡ ಮದುವೆಯಾಗ ಬಹುದಿತ್ತು,ಇದರ ವಿರುದ್ಧವಾಗಿ ಇಂಗ್ಲೆಂಡ(𝗘𝗻𝗴𝗹𝗮𝗻𝗱) ಹಾಗೂ ವೇಲ್ಸ್(𝗪𝗮𝗹𝗲𝘀)ನಲ್ಲಿ ಕಾನೂನು ರೂಪಿಸಲಾಗಿತ್ತು..!
😊
ಹಾಗಾಗಿ 21 ವರ್ಷ ವಯಸ್ಸಿನ ಒಳಗಿನ ಪ್ರೇಮಿಗಳ ಮದುವೆಯನ್ನ,ಪೋಷಕರ ವಿರೋಧ ಮಾಡಿದ ಸಂಧರ್ಭ ದಲ್ಲಿ ಕೂಡಲೇ ಓಡಿ ಇಂಗ್ಲೆಂಡ್ ಹಾಗೂ ಸ್ಕಾಟ್ಲೆಂಡ್ ಗಡಿಯಲ್ಲಿ ಇರುವ ಹಾಗೂ ಸ್ಕಾಟ್ಲೆಂಡ್ ದೇಶಕ್ಕೆ ಸೇರಿರುವ ಗ್ರೆಟ್ನಾ ಗ್ರೀನ್(𝗚𝗿𝗲𝘁𝗻𝗮 𝗚𝗿𝗲𝗲𝗻) ಎಂಬ ಸಣ್ಣ ಹಳ್ಳಿಗೆ ಹೋಗುತ್ತಿದ್ದರು!
ಅಲ್ಲಿ ಮೊದಲು ಸಿಗುತ್ತಾ ಇದ್ದದ್ದೇ ಆಗ ಬಹಳ ಜನಪ್ರಿಯವಾಗಿದ್ದ ಬ್ಲಾಕ್ ಸ್ಮಿತ್ ಅಂಗಡಿ..(𝗕𝗹𝗮𝗰𝗸𝘀𝗺𝗶𝘁𝗵 𝘀𝗵𝗼𝗽)
ಇಂಗ್ಲೆಂಡ್,ವೇಲ್ಸ್ ಹಾಗೂ ಸ್ಕಾಟ್ಲೆಂಡ್(𝗦𝗰𝗼𝘁𝗹𝗮𝗻𝗱) ಬೇರೆ ಬೇರೆ ದೇಶ ಆದರೂ ಅಲ್ಲಿನ ಪ್ರಜೆಗಳಿಗೆ ಹಾಗೂ ಇಂಗ್ಲೆಂಡ್ ವೀಸಾ ಹೊಂದಿದವರಿಗೆ ನೇರ ಪ್ರವೇಶ ವಿದೆ..
ಬಾರ್ಡರ್ ನಲ್ಲಿ,ಯಾವುದೇ ದಾಖಲೆ,ಪರಿಶೀಲನೆ ಇರುವುದಿಲ್ಲ...
ಈ ಬ್ಲಾಕ್ ಸ್ಮಿತ್ ಶಾಪ್ ಹಲವು ವರ್ಷಗಳಿಂದ 𝗥𝘂𝗻 𝗮𝘄𝗮𝘆 𝗺𝗮𝗿𝗿𝗶𝗮𝗴𝗲 ಗೆ ಬಹಳ ಜನಪ್ರಿಯ ಹಾಗೂ ಪ್ರಶಸ್ತವಾಗಿತ್ತು,ಲಂಡನ್ ಹಾಗೂ ಇನ್ನಿತರೆ ಪ್ರದೇಶಕ್ಕೆ ಹತ್ತಿರವೇ ಇತ್ತು..
ಹಾಗಾಗಿ ಈ ಗ್ರೆಟ್ನಾ ಗ್ರೀನ್ ಓಡಿ ಬಂದು ಮದುವೆ ಆಗುವವರಿಗೆ ಒಂತರಾ ಹಾಟ್ ಸ್ಪಾಟ್ ಆಗಿತ್ತು..😊
ಸ್ಕಾಟಿಷ್ ಲಾ(𝗦𝗰𝗼𝘁𝗶𝘀𝗵 𝗹𝗮𝘄)ಪ್ರಕಾರ,ಓಡಿ ಬಂದು ಮದುವೆ ಆಗುವವರಿಗೆ(𝗜𝗿𝗿𝗲𝗴𝘂𝗹𝗮𝗿 𝗺𝗮𝗿𝗿𝗶𝗮𝗴𝗲),ಇಬ್ಬರು ಸಾಕ್ಷಿಗೆ ಇದ್ದರೆ ಯಾರಾದರೂ ಮದುವೆಯನ್ನು ನೆರವೇರಿಸಬಹುದಿತ್ತು..!
ಅಲ್ಲಿನ ಬ್ಲಾಕ್ ಸ್ಮಿತ್ ಶಾಪ್ ನ ರಿಚರ್ಡ್ ರೇನಿಸನ್(𝗥𝗶𝗰𝗵𝗼𝗿𝗱 𝗥𝗲𝗻𝗻𝗶𝘀𝗼𝗻) ಎನ್ನುವವರು ಒಂತರಾ ಖಾಯಂ ಪುರೋಹಿತರಾಗಿದ್ದರು,
ಆ ಶಾಪ್ನಲ್ಲಿ ಸುಮಾರು
𝟱𝟭𝟰𝟳 ಕ್ಕೂ ಹೆಚ್ಚು ಮದುವೆಯನ್ನ ಅವರು ನೆರವೇರಿಸಿದ್ದರು..ಎಂದರೆ ನೀವು ನಂಬಲೇ ಬೇಕು..!
ಎಂದರೆ
ಮದುವೆ ಆದವರು ಹಲವು ವರ್ಷವಾದ ನಂತರ, ಓಹ್...ಹಳ್ಳಕ್ಕೆ ಬಿದ್ದೆ,
ಓಡಿ ಬಂದಾಗ ಬುದ್ದಿ ಹೇಳಿ ಕಳುಹಿಸೋದು ಬಿಟ್ಟು, ಮದುವೆ ಮಾಡಿಸಿ ಕುರಿ ಮಾಡಿದ ಅಂತ ಅವನನ್ನ ಹುಲಿ ಹಿಡಿಯಾ ಅಂತ ಕೆಲವು ಜೋಡಿ ಎಷ್ಟು ರಿಚರ್ಡ್ಗೆ ಶಾಪ ಹೊಡೆದಿದ್ದಾರೋ ಏನೋ ನೀವೇ ಊಹಿಸಿ..!😂
𝟭𝟳𝟭𝟯 ರಲ್ಲಿ ಈ ಕಟ್ಟಡ ಕಟ್ಟಲಾಗಿದೆಯಂತೆ
ಈಗಲೂ ಇದು ಪ್ರವಾಸಿಗರ ಅಚ್ಚುಮೆಚ್ಚಿನ 5ಸ್ಟಾರ್ ರೇಟಿಂಗ್ ತಾಣ..𝗚𝗿𝗲𝘁𝗻𝗮 𝗚𝗿𝗲𝗲𝗻
ಯುಕೆಯ
ಬಹಳ ಜನಪ್ರಿಯ ಮದುವೆಯ ಹಾಲ್ ಕೂಡಾ ಹೌದು ಎನ್ನಲಾಗಿದೆ..
ಈಗಲೂ ಹಲವರು ಬಂದು ಇಲ್ಲಿ ಮದುವೆಯಾಗುವುದು ಇದೆಯಂತೆ..
ಆದರೆ ಒಂದು ಕಹಿ ಘಟನೆಯೂ ಇದೆ..
ಇದೇ ಗ್ರೆಟ್ನಾ ಗ್ರೀನ್ 𝗚𝗿𝗲𝘁𝗻𝗮 𝗚𝗿𝗲𝗲𝗻ಬಳಿ ಲಂಡನ್ ನಿಂದ ಎಡಿನ್ ಬರೋ ಹೋಗುವ ರೈಲ್ವೆ ಮಾರ್ಗದಲ್ಲಿ 𝟭𝟵𝟭𝟱 ರಲ್ಲಿ ಅತ್ಯಂತ ಭೀಕರ ಹಾಗೂ ಬ್ರಿಟಿಷ್ ಇತಿಹಾಸದಲ್ಲಿ ಕೇಳರಿಯದ ದೊಡ್ಡ ರೈಲ್ವೇ ಅಪಘಾತ ನಡೆದು ಸುಮಾರು 𝟮𝟬𝟲 ಕ್ಕೂ ಹೆಚ್ಚು ಜನ ಮೃತ ಪಟ್ಟಿದ್ದರಂತೆ,
ಇದಕ್ಕೆ 𝗤𝘂𝗶𝗻𝘁𝗶𝘀𝗵𝗵𝗶𝗹𝗹 𝗿𝗮𝗶𝗹𝘄𝗮𝘆 𝗱𝗶𝘀𝗮𝘀𝘁𝗲𝗿 ಎನ್ನಲಾಗಿದೆ..
ಇದೊಳ್ಳೆ ಐಡಿಯಾ ಅಂತ,
ನಾವೂ ಓಡಿ ಹೋಗಿ ಅಲ್ಲಿ ಮದುವೆ ಅಗಬಹುದಾ ಅಂತ ಯಾರಾದ್ರೂ ಲೆಕ್ಕಾ ಹಾಕ್ತಾ ಇದ್ರೆ..
ನೀವು ಅಷ್ಟು ದೂರ,ಅಲ್ಲಿವರೆಗೆ ಓಡಿ ಹೋಗುವ ಮಧ್ಯದಲ್ಲೇ ಸುಸ್ತಾಗಿ,ಜಗಳ ಶುರುವಾಗಿ ಮದುವೆನು ಬೇಡ,ಗ್ರೆಟ್ನಾ ಗ್ರೀನ್ ಗೋಲ್ಡ್ ಸ್ಮಿತ್ ಶಾಪ್ ಬೇಡ ಅಂತ ಅಲ್ಲೇ ಜ್ಞಾನೋದಯ ಆಗಿ ವಾಪಾಸ ಬರೋ ಚಾನ್ಸ್ ಜಾಸ್ತಿ ಇರುತ್ತ ಅಂತ ಅಲ್ವಾ.!!!.😂
ನಾನು ಈ ಸ್ಥಳದ ಬಳಿ
ಹೋಗುವಾಗ ಕತ್ತಲಾಗಿತ್ತು..
ಬರುವಾಗ ಬಾಗಿಲು ಮುಚ್ಚಲಾಗಿತ್ತು..!
ಹಾಗಾಗಿ ಒಳ ಪ್ರವೇಶ ಮಾಡಲಾಗಲಿಲ್ಲ,
ಫೋಟೋ ಕೂಡ ಕ್ಲಿಕ್ಕಿಸಲು ಸಾಧ್ಯವಾಗಿಲ್ಲ..
ಅನ್ನೋದು ಬೇಸರದ ಸಂಗತಿ...
ಆದರೆ ಗೂಗಲ್ ನಲ್ಲಿ ಸಿಕ್ಕ,ಈ ಸಂಗತಿಗೆ ಪೂರಕವಾದ ಕೆಲವು ಫೋಟೋ ಇಲ್ಲಿ ಲಗತ್ತಿಸಿದ್ದೇನೆ..
🙏
#ukdairy
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ