ಶುಕ್ರವಾರ, ಜೂನ್ 5, 2020

ಬ್ಲಾಕ್ಸ್ ಸ್ಟೋರಿ

South East London ನಲ್ಲಿರುವ,ಸಮುದ್ರ ತೀರದ ಪಕ್ಕದ Brighton and Hove ಎಂಬ ಒಂದು ಸಣ್ಣ ಪಟ್ಟಣಕ್ಕೆ ಒಮ್ಮೆ ಹೋಗಿದ್ದೆವು...

ಸಮುದ್ರ ತೀರ,ಜನಜಂಗುಳಿ ಜಾಸ್ತಿ,ಹಲವು ಪ್ರವಾಸಿಗರು ಬೇಸಿಗೆಯಲ್ಲಿ ವಾರದ ಕೊನೆಯಲ್ಲಿ,ಇಲ್ಲಿ ಭೇಟಿ ಮಾಡಿ ಸಮಯ ಕಳೆಯೋದು ಸಾಮಾನ್ಯ..
ಸಮುದ್ರ ತೀರವು ಅಷ್ಟೇ ಸ್ವಚ್ಛ ಹಾಗೂ ಸುಂದರವಾಗಿ ಅಲ್ಲಿನ ಆಡಳಿತ ಮಂಡಳಿ ಇಟ್ಟಿರುತ್ತಾರೆ,ಇದಕ್ಕೆ ಸಾರ್ವಜನಿಕರು ಸಹಾಯವೂ ಇರುತ್ತದೆ ಅನ್ನೋದು ಉಲ್ಲೇಖ ಮಾಡಬೇಕಿಲ್ಲ ಬಿಡಿ..!

ಎಷ್ಟೇ ಮೋಜು ಮಸ್ತಿ ಮಾಡಿದರೂ ,ನಮ್ಮದೇ ಮನೆ ಎಂಬಂತೆ ಗಲೀಜು ಮಾಡದೇ ಇರುತ್ತಾರೆ...

ಈಗ ವಿಷಯಕ್ಕೆ ಬರೋಣ...
ಇಲ್ಲಿ ಸ್ವಲ್ಪ ಸಮಯ ಕಳೆದು,ನನ್ನ ವಾಸಸ್ಥಳಕ್ಕೆ ಹೊರಡಲು ಅಣಿಯಾಗಿ TFL station ಗೆ  ಸ್ವಲ್ಪ ದೂರ ನಡೆಯ ಬೇಕಾಗಿದ್ದರಿಂದ ಕಾಲ್ ನಡಿಗೆಯಲ್ಲಿ ಹೊರಟೆ,ದಾರಿ ಮಧ್ಯದಲ್ಲಿ ಒಂದು ಶಾಪಿಂಗ್ ಮಾಲ್ ಕಾಣಿಸ್ತು..

ಸ್ವಲ್ಪ ಹೊತ್ತು Window shopping ಮಾಡೋಣ ಅಂತ ಒಳ ನುಗ್ಗಿದೆವು...

ಬಹಳ ದೊಡ್ಡ ಮಾಲ್,ನಡೆದು ನಡೆದು ಸಾಕಾಗುವಷ್ಟು ದೊಡ್ಡ ಜಾಗ ಹಾಗೂ ತರಹೇವಾರಿ ಪ್ರಾಡಕ್ಟ್ಗಳ ಸೆಕ್ಷನ್..!

ಆದರೆ ಯು.ಕೆ ಹಾಗೂ ಹಲವು ದೇಶಗಳಲ್ಲಿ ಮಾಲ್ ಗಳ ಒಳಗೆ ನಿಮ್ಮ ಬ್ಯಾಗ್ ಅಥವಾ ಲ್ಯಾಪ್ಟಾಪ್ ಇನ್ಯಾವುದೇ ವಸ್ತುಗಳನ್ನ ಯಾವುದೇ ತಪಾಸಣೆ ಇಲ್ಲದೇ ಒಳ ಬಿಡುತ್ತಾರೆ..

ಹಾಗೂ ಬಿಲ್ಲಿಂಗ್ ಆದ ನಂತರ ಮುಖ್ಯ ದ್ವಾರದಿಂದ ಹೊರ ಹೋಗುವಾಗ ಅಲ್ಲಿರುವ ಯಾರೂ,ಹೆಚ್ಚಿನವರ  ಬಿಲ್ ಚೆಕ್ ಅಥವಾ ಬ್ಯಾಗ್ ಚೆಕ್ ಮಾಡುವ ಪದ್ಧತಿ ಇಲ್ಲ,
ಬಹಳ ಕಡಿಮೆ!
ಆದರೆ ಸಿಬ್ಬಂದಿ ಅಲ್ಲಿ ಎಲ್ಲೋ ಒಂದು ಕಡೆ ನಿಂತು ಎಲ್ಲಾ ಆಗು ಹೋಗುಗಳನ್ನ ಗಮನಿಸುತ್ತಾ ಇರುತ್ತಾರೆ...!

ಹೀಗೆ ಸ್ವಲ್ಪ ಸಮಯ ಮಾಲ್ ಒಳಗಡೆ ಆದಷ್ಟು ನೋಡಿ ಕಾಲು ಸೋತ ತಕ್ಷಣ,ಕೊನೆಗೆ ಏನೋ ಒಂದಷ್ಟು ತಗೊಂಡು ಬಿಲ್ಲಿಂಗ್ ಸೆಕ್ಷನ್ ಗೆ ಹೋಗಿ,ಬಿಲ್ ಮಾಡಿಸಿ ಇನ್ನೇನು ಹೊರ ಹೊರಡಬೇಕು,

ಅಷ್ಟರಲ್ಲಿ ಹೊರಹೋಗುವ ದ್ವಾರದಲ್ಲಿ ಯಾರೋ ಒಬ್ಬರು ಹೆಂಗಸು ಬಹಳ ದೊಡ್ಡ ದ್ವನಿಯಲ್ಲಿ ಕಿರುಚಾಡುತ್ತಾ ಇದ್ದಾರೆ..!

ಅವರ ಜೊತೆ ನಾಲ್ಕು ಜನ ಮಧ್ಯ ವಯಸ್ಸು ಹಾಗೂ 2 ಟೀನ್ ಏಜ್ ಹುಡುಗಿಯರು ಇದ್ದಾರೆ..
ಅವರೆಲ್ಲರ ಕೈಯಲ್ಲಿ ಸುಮಾರು ಬ್ಯಾಗ್ ಗಳು ಇವೆ..!

ಅಲ್ಲಿರುವ ಸಿಬ್ಬಂದಿಗೆ ಬಾಯಿಗೆ ಬಂದ ಹಾಗೆ ಬಹಳ ಕೆಟ್ಟ ಶಬ್ದದಲ್ಲಿ ನಿಂದಿಸುತ್ತಾ ಇದಾರೆ ಒಬ್ಬರು ಮಹಿಳೆ..!

ಏನು ವಿಷಯ ಸ್ಪಷ್ಟವಾಗಿ ತಿಳಿಯುತ್ತಾ ಇರಲಿಲ್ಲ..

ನಮ್ಮೂರಲೆಲ್ಲಾ, ಏನಾದ್ರೂ ಗಲಾಟೆ ನಡೆದರೆ ಕುತೂಹಲದಿಂದ ನಿಂತು ನೋಡಿ ಏನು ಗಲಾಟೆ ಅಂತ ಕ್ಲಾರಿಫಿಕೇಶನ್ ಸಿಗದೇ ಹೋದಾಗ ಎಷ್ಟು ತಳಮಳ,ಬೇಸರ,ಮನೆಗೆ ಹೋದರೂ ಚೆ..ಚೆ..ಎಂತಾ ಗಲಾಟೆ ಮಿಸ್ ಮಾಡಿಕೊಂಡೆ,ಏನು ವಿಷಯವೋ ಏನೋ ಅಂತ ಮಮ್ಮಲ ಮರುಗುವ ಹಾಗೆ ಅಗಬಾರದಲ್ಲ ಅಂತ ಸ್ವಲ್ಪ ಹೊತ್ತು ಅಲ್ಲೇ ಕೇಳಿಸಿ ಕೊಳ್ಳುತ್ತಾ ನಿಂತೆ..!😂😛

ಆ ಮಹಿಳೆ ಹೇಳೋದು,

"ನಾನು ಬ್ಲಾಕ್ ಅಂತ ನಮ್ಮನ್ನ ಕಳ್ಳರ ತರ ನೋಡ್ತಾ ಇದಿಯಾ?
ನಾನೇನು ಕಳ್ಳಿನ,ನಾನು ಬಿಲ್,ಪ್ರಾಡಕ್ಟ್ ಏನು ತೋರಿಸಲ್ಲ,ಏನು ಮಾಡಿಕೊಳ್ತೀಯಾ ಮಾಡಿಕೋ @#$&%!^$* ಅಂತ ಸಭ್ಯ ಪದ ಬಳಸಿ Unlimited (Jio pack ಪ್ಯಾಕ್ ಇರಬೇಕು😂) ಕೂಗುತ್ತಲೇ ಇದ್ದರು..!

ಆದರೆ ಆ ತಪಾಸಣಾ ಸಿಬ್ಬಂದಿ,
"ನಾನೆಲ್ಲಿ ನಿಮ್ಮನ್ನ ಬ್ಲಾಕ್ನವರು ಕಳ್ಳರು ಅಂತ ಅಂದೆ,ನಿಮ್ಮ ಬಿಲ್ ಹಾಗೂ ಪ್ರಾಡಕ್ಟ್ ತೋರಿಸಿ ಅಂತ ಮಾತ್ರ ಕೇಳಿದ್ದು"
ಅಂತ ಬಹಳ ವಿನಮ್ರನಾಗಿ ಹೇಳುತ್ತಾ ಇದ್ದರು..

ಆಕೆ ಅಷ್ಟು ಕೂಗಿದರೂ,ಬೈದರೂ ಅವರು ಸಭ್ಯವಾಗಿ ಹೇಳುತ್ತಾ ಇದ್ದರು..!

ಕೊನೆಗೆ ಅವರು ಇವರ ರಂಪಾಟ,ಬೈಗುಳದ ಪದ ಪುಂಜ, ಕೇಳಿಸಿ ಕೊಳ್ಳೋಕೆ ಆಗದೇ,ಕಂಟ್ರೋಲ್ ಮಾಡಲು ಆಗದೆ ಮ್ಯಾನೇಜರ್ ನ್ನ ಕರೆಸಿದರು..!

ಆ ಮ್ಯಾನೇಜರ್ ಬಂದಾಗಲೂ ಮತ್ತದೇ ಕತೆ ಶುರು..

"ನಮ್ಮನ್ನ ಅವಮಾನ ಮಾಡ್ತಾ ಇದೀರಾ?ತುಳಿತಾ ಇದೀರಾ!?
ನಾವು ಬ್ಲಾಕ್ ಮಹಿಳೆ ಅಂತ ಹೀಗೆ ನಡೆಸಿ ಕೊಳ್ಳೋದಾ",oppress,Racism, Ethnicity,Blacks,African,white,Discrimination,women,ಹೀಗೆ ಏನೇನೋ ಶಬ್ದ ಬಳಸುತ್ತಾ,ನಮಗೆ ಬೆಲೆ ಇಲ್ಲವೇ ಅಂತ ಏನೇನೋ.. 
ಕೂಗಾಟ ಶುರು..

ಮ್ಯಾನೇಜರ್, 
"ಒಂದು ನಿಮಿಷ ನನ್ನ ಮಾತು ಕೇಳಿ

ಮ್ಯಾಮ್,ನೀವು ನಮ್ಮ ಶಾಪಿಂಗ್ ಮಾಲ್ ಒಳಗೆ ಬಂದಿದ್ದೀರಿ, ಏನಾದರೂ ಖರೀದಿಸಿದ್ದರೆ ದಯಮಾಡಿ,ಬಿಲ್ ತೋರಿಸಿ ಪ್ರಾಡಕ್ಟ್ ತೋರಿಸಿ ಹೋಗಿ..
ಅಷ್ಟೇ ನಮ್ಮ ಸಿಬ್ಬಂದಿ ಕೇಳುತ್ತಾ ಇರೋದು..
ಇಲ್ಲಿ ಬ್ಲಾಕ್,ವೈಟ್,ಮಹಿಳೆ,ರೇಸಿಸಂ,ಎತ್ನಿಸಿಟಿ,ಒಪ್ರೆಸ್,ಆಫ್ರಿಕಾ,ಇಂಗ್ಲೆಂಡ್ ಎಲ್ಲಾ ಏನಿಲ್ಲ...
ಸುಮ್ಮನೆ ಈ ರೀತಿಯ ಮಾತು ಆಡಬಾರದು ಸರಿ ಅಲ್ಲ..
ಜನಾಂಗದ ನಿಂದನೆ ನಾವು ಮಾಡಿಲ್ಲ..
ದಯ ಮಾಡಿ ಅರ್ಥ ಮಾಡಿಕೊಳ್ಳಿ"
ಅಂತ ವಿನಯದಿಂದಲೇ ವಿನಂತಿಸಿ ಕೊಂಡರು..

ಅದನ್ನೂ ಕೇಳದೆ ಬಹಳ ಜಾಸ್ತಿ ಕೂಗಾಟ ಹಾಗೂ ಅನುಮಾನ ಬರುವ ವರ್ತನೆ ತೋರಿಸೋಕೆ ಶುರು ಮಾಡಿದ್ರು ಆ ಮಹಿಳೆ..
ಆದ್ರೆ ಜೊತೆ ಇರುವ ಮಹಿಳೆಯರು ಮಾತ್ರ ಏನೂ ಮಾತನಾಡದೇ ಸುಮ್ಮನೆ ನಿಂತಿದ್ದರು..!

ಕೂಡಲೇ..
ಮ್ಯಾನೇಜರ್,
"ಸರಿ ಹಾಗಾದ್ರೆ ನಾವು,ನೀವು ಸುಮ್ಮನೆ ಗಲಾಟೆ ಎಬ್ಬಿಸಿ,ಬೇರೆಯವರಿಗೆ ತೊಂದರೆ ಕೊಡುತ್ತಾ ಇದೀರಿ ಅಂತ ಪೊಲೀಸ್ ಗೆ ಮಾಹಿತಿ ಕೊಡುತ್ತೇವೆ"
ಅಂದರು..

ಹಾಗೆ ಹೇಳಿದ್ದೇ ತಡ ಮಹಿಳೆಯ ವೀರಾವೇಶದ ಮಾತು ಹಾಗೂ ವರ್ತನೆ ಕೂಡಲೇ ಬದಲಾಯ್ತು..!

"ಅಲ್ಲ ಕೆಲವು ಬಿಲ್ ಮಾಡಿಸೋಕೆ ಅಂತ ತಗೊಂಡು ಹೋಗಿದ್ವಿ ಮರೆತು ಹೋಯ್ತು ಈಗ ಮಾಡಿಸ್ತೀವೆ"

ಅಂತ ಏನೇನೋ ಲಿಂಕ್ ಲೆಸ್ ಸಮಜಾಯಶಿ ಶುರು ವಾಯ್ತು..
ಆ ಸಿಬ್ಬಂದಿ
ಬ್ಯಾಗ್ ಓಪನ್ ಮಾಡಿ ನೋಡಿದರೆ..

ಒಂದೆರಡಲ್ಲ,ಹಲವು ಬ್ರಾಂಡೆಡ್ ಉಡುಪು ಹಾಗೂ ಒಳ ಉಡುಪು ಸೌಂದರ್ಯ ವರ್ಧಕಗಳು ಇದ್ದವು..!

ಕೊನೆಗೆ ಆಕೆ "Sorry" ಕೇಳಿದರು,ಆಮೇಲೆ ಮ್ಯಾನೇಜರ್ ಬುದ್ದಿ ಹೇಳಿ,ಅದಕ್ಕೆ ಬಿಲ್ ಕೊಟ್ಟು ತೆಗೆದು ಕೊಂಡು ಹೋಗಿ ಅಂದರು..

ಆಮೇಲೆ ಏನಾಯ್ತು ತಿಳಿಯಲಿಲ್ಲ,ನನ್ನ ಕುತೂಹಲದ ಹೊಟ್ಟೆ ತಕ್ಕ ಮಟ್ಟಿಗೆ ತಣಿದಿದ್ದ ಕಾರಣ ನಾನು ಅಲ್ಲಿಂದ ಜಾಗ ಖಾಲಿ ಮಾಡಿದ್ದೆ...😂😂😂😂😂

ಈ ವಿಷಯ ಯಾಕೆ ಪ್ರಸ್ತಾಪಿಸಿದೆ ಅಂದರೆ..

ಕೆಲವರು ತಾವು ಗೊತ್ತಿದ್ದೂ ಬೇಕಂತಲೇ ಮಾಡಿದ, ಸ್ವಹಿತಾಸಕ್ತಿ,ಅಪರಾಧ ಹಾಗೂ ತಪ್ಪಿಗೆ,ಜನಾಂಗ,
ಜಾತಿ,ಧರ್ಮ,ಬಣ್ಣ,ಊರು,ಲಿಂಗ,ಭಾಷೆ,ಇನ್ಯಾರೋ ಜನಪ್ರಿಯ ವ್ಯಕ್ತಿ, ಇದನ್ನೆಲ್ಲಾ ಗುರಾಣಿಯಾಗಿ ಉಪಯೋಗಿಸಿ ನಾವು ಮಾಡಿದ್ದು ಸರಿ ಅಂತ ಸಾಧಿಸಲು ನಿಂತು ಬಿಡ್ತಾರೆ..!

ಇದು ಎಷ್ಟರ ಮಟ್ಟಿಗೆ ಸರಿ..!?

ಹೀಗೆ ಕೆಲವರು ಮಾಡುವ ಅನಾಚಾರಕ್ಕೆ ಇಡೀ ಸಮುದಾಯವೇ ಸರಿ ಇಲ್ಲ ಎನ್ನುವ ಮನಸ್ಥಿತಿ ಜನರ ಮನಸಲ್ಲಿ ಕ್ರಿಯೇಟ್ ಆಗುತ್ತೆ ಅನ್ನುವ ಸಾಮಾನ್ಯ ಜ್ಞಾನ ಇಂತವರಿಗೆ ಬೇಕಲ್ಲವೇ..!?

ಯಾರೇ ಆದರೂ 
ಬಣ್ಣ,ಜಾತಿ,ಧರ್ಮ,ಊರು,ಜನಾಂಗ,ಆರ್ಥಿಕ ಸ್ಥಿತಿ,ಭಾಷೆ, ಹೀಗೇ ಇರಬೇಕು,ಇದೇ ನಮಗೆ ಬೇಕು ಅಂತ ಮೊದಲೇ ಅಪ್ಲಿಕೇಶನ್ ಹಾಕಿಕೊಂಡು ಅಲ್ಲಿ ಹುಟ್ಟಲು ಸಾಧ್ಯವೇ..!?

ನಮ್ಮ ಸಂಸ್ಕಾರ,ವರ್ತನೆ,ಸಭ್ಯತೆ,ಮುಖ್ಯವಾಗುತ್ತದೆಯೇ ಹೊರತು..
ಬಣ್ಣ ಮತ್ತೊಂದು ಅಲ್ಲ...ಅಲ್ವಾ!?

ಎಲ್ಲೇ ಇದ್ದರೂ ಇನ್ನೊಬ್ಬರಿಗೆ ಅನ್ಯಾಯ,ಮೋಸ,ತೊಂದರೆ,ನೋವು,ಮಾಡದೇ,ನಮ್ಮ ನಮ್ಮ ಕೆಲಸ ನಿಯತ್ತಾಗಿ,ಶ್ರದ್ಧೆಯಿಂದ ಮಾಡಿಕೊಂಡು,ಬದುಕಿದರೆ ಅದೇ ನೆಮ್ಮದಿ ಹಾಗೂ ಸಾರ್ಥಕದ ಜೀವನ..

ಅದೇ ನಾವು ಸಾಮಾಜಕ್ಕೆ ಮಾಡುವ ಉಪಕಾರ, ಅಷ್ಟೇ ಸಾಕು..!

ಕೆಲವರಂತೆ,ಸೇವೆ ಮಾಡ್ತೇನೆ,ಅದೇನೋ ಉಳಿಸೋದು,ಇದೇನೋ ಉಳಿಸೋದು ಅಂತ ನಾಟಕ ಮಾಡಿಕೊಂಡು ಮೋಸ ಮಾಡೋದು ಎಲ್ಲಾ ಬೇಕಿಲ್ಲ
ಅಲ್ವಾ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ