ಬುಧವಾರ, ಫೆಬ್ರವರಿ 12, 2020

Scott monument

ನೀವು,
ರಾಜಕಾರಣಿಗಳಿಗೆ,ನಟರಿಗೆ,ಇನ್ನಿತರೆ ಕ್ಷೇತ್ರದ ಸಾಧಕರಿಗೆ ದೊಡ್ಡ ದೊಡ್ಡ ಸ್ಮಾರಕ ಕಟ್ಟಿರೋದು ನೋಡಿರುತ್ತೀರಿ..
ಅದರೆ,ಲೇಖಕರಿಗೆ,ಸಾಹಿತಿಗಳಿಗೆ ದೊಡ್ಡ ಸ್ಮಾರಕ ಕಟ್ಟೋದು ಬಹಳ ಕಡಿಮೆ..!

ಆದರೆ 

ಈ ಸ್ಮಾರಕ ಬಹಳ ಹಿಂದೆಯೇ ಜಗತ್ತಿನಲ್ಲಿ ಒಬ್ಬ
ಲೇಖಕನ ನೆನೆಪಿಗೆ ಎಂದು ಕಟ್ಟಿದ ಎರಡನೇ ಅತಿದೊಡ್ಡ ಸ್ಮಾರಕ ಎನ್ನಲಾಗಿದೆ..!

ಇದನ್ನ "ಸ್ಕಾಟ್ ಮಾನ್ಯುಮೆ0ಟ್" (Scott Monument) ಎನ್ನುತ್ತಾರೆ..

ಸ್ಕಾಟ್ಲ್ಯಾ0ಡ್ ನ,ಎಡಿನ್ ಬರೋ ಪಟ್ಟಣದ ಈಸ್ಟ್ ಪ್ರಿನ್ಸಸ್ ಸ್ಟ್ರೀಟ್ ಗಾರ್ಡನ್ ನಲ್ಲಿ ಈ ಸ್ಮಾರಕ ಕಟ್ಟಲಾಗಿದೆ,ಇದು Edinburgh waiberly railway station ಹತ್ತಿರ ಇದೆ,

ಆ ಲೇಖಕನ ಹೆಸರು "ಸರ್ ವಾಲ್ಟರ್ ಸ್ಕಾಟ್"

ಮೊದಲನೆಯ ಸ್ಮಾರಕ,ಕ್ಯೂಬಾ ದೇಶದ ಹವಾನದಲ್ಲಿ ಜೋಸ್ ಮಾರ್ಟಿ ಎಂಬ ಲೇಖಕರಿಗಾಗಿ ಕಟ್ಟಲಾಗಿದೆಯಂತೆ..!

1841 ವರ್ಷದಲ್ಲಿ ಪ್ರಾರಂಭವಾದ ಕಾಮಗಾರಿ 1845ರಲ್ಲಿ ಮುಗಿದು ಉದ್ಘಾಟನೆ ಆಗಿದ್ದು 1846 ಆಗಸ್ಟ್ ನಲ್ಲಿ,ಇದಕ್ಕೆ ತಗುಲಿದ ವೆಚ್ಚ ಸುಮಾರು 16154 Pound ಅಂದರೆ ಇಂದಿನ ರೂಪಾಯಿ ಪ್ರಕಾರ 1,50,232 ರೂ ಗಳು..

ಈ ಸ್ಮಾರಕದ ಎತ್ತರ ಸುಮಾರು 200 ಅಡಿ 6 ಇಂಚು..
ಇದರ ಮೇಲ್ಛಾವಣಿಯ ಭಾಗಕ್ಕೆ ತಲುಪಿ ಎಡಿನ್ ಬರೋ ಪಟ್ಟಣದ ಕೆಲವು ಪ್ರದೇಶವನ್ನ ನೋಡಲು  ಸ್ಪೈರಲ್ ಸ್ಟೇರ್ ಕೇಸ್ ನ ಸರಿ ಸುಮಾರು 288 ಮೆಟ್ಟಿಲು ಹತ್ತಬೇಕು,..

68 ಲೇಖಕರು,ಸಾಹಿತಿಗಳು,ಕವಿಗಳ ಇನ್ನಿತರರ ಮೂರ್ತಿ ಇದರಲ್ಲಿ ಕಾಣಸಿಗುತ್ತೆ,(ಇದರಲ್ಲಿ ಸ್ಕಾಟ್ ಹಾಗೂ ಆತನ ನಾಯಿ ಸೇರಿಲ್ಲ),ಅದರಲ್ಲಿ 64ಮೂರ್ತಿಗಳು ನೆಲಮಟ್ಟದಿಂದಲೇ ಕಾಣುತ್ತದೆ,ಇನ್ನುಳಿದ ನಾಲ್ಕು ಸ್ವಲ್ಪ ಮೇಲೆ ಇಡಲಾಗಿದೆ..
ಅದು ಬರಿಗಣ್ಣಿಗೆ ಕಾಣದ ಕಾರಣ ಟೆಲಿ ಫೋಟೋ ಅಥವಾ ಗ್ಯಾಲರಿಗೆ ಹೋಗಿ ನೋಡಬೇಕಾಗುತ್ತೆ..
😊

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ