ಪ್ರಾಥಮಿಕ ಶಾಲೆಯಲ್ಲಿ ಒಳ್ಳೆಯ ಕೆಲಸ ಬರೆಯಬೇಕು ದಿನಾ ಅಂತ ಇರುತ್ತ ಇತ್ತು..!
ರಸ್ತೆಯ ಮಧ್ಯ ಇದ್ದ ಕಲ್ಲನ್ನು ಎತ್ತಿ ಪಕ್ಕಕ್ಕೆ ಎಸೆದೆನು..
ಅಜ್ಜಿಯನ್ನ ರಸ್ತೆ ದಾಟಿಸಿದೆನು..
ಅಮ್ಮನಿಗೆ,ಬಾವಿಯಿಂದ ನೀರು ಸೇದಿ ಮನೆಗೆ ತರಲು ಸಹಾಯ ಮಾಡಿದೆನು..
ಅಮ್ಮನಿಗೆ ಅಡಿಗೆಗೆ ಸಹಾಯ ಮಾಡಿದೆನು..
ದಾರಿಯ ಮಧ್ಯದಲ್ಲಿ ಬಿದ್ದಿದ್ದ ಮುಳ್ಳನ್ನ ಪಕ್ಕಕ್ಕೆ ಹಾಕಿದೆನು..
.....................Etc.....
ಹೀಗೆ ಹಲವು (ಸುಳ್ಳೆ ಕೆಲಸ)ಒಳ್ಳೆಯ ಕೆಲಸ ದಿನಾ ಬರೆದಿದ್ದೇ ಬರೆದು...😂😉
ದಿನಾ ರಸ್ತೆಯಲ್ಲಿ ಬಿದ್ದ ಅಷ್ಟು ಕಲ್ಲು ಎತ್ತಿ ಹಾಕಿ ಹಾಕಿ ಇಷ್ಟು ಹೊತ್ತಿಗೆ ಒಂದು G+2 building ಕಟ್ಟುವಷ್ಟು ಜಲ್ಲಿ ರಾಶಿ ಆಗಿರ್ತಾ ಇತ್ತು..!
ದಿನಾ ಅಜ್ಜಿಯನ್ನ ಅಷ್ಟು ಸರಿ ರಸ್ತೆ ದಾಟಿಸಿದ್ರೆ ಅಷ್ಟು ವರ್ಷಕ್ಕೆ ಅಜ್ಜಿ ಚೀನಾ ಬಾರ್ಡರ್ ದಾಟಿರ್ತಾ ಇದ್ರು..
ಅಮ್ಮನಿಗೆ ನೀರು ತಂದು ಕೊಟ್ಟು ಕೊಟ್ಟು ,ಅಷ್ಟು ವರ್ಷದಲ್ಲಿ,ಡ್ಯಾಮ್ ಕಟ್ಟಬಹುದಿತ್ತು,ಅಷ್ಟು ನೀರು ಕಲೆಕ್ಟ್ ಆಗಿರ್ತಾ ಇತ್ತು..
ಅಮ್ಮನಿಗೆ ಅಡುಗೆ ಸಹಾಯ ಮಾಡಿ ಮಾಡಿ..
ಅವರಿಗೆ ಅಡುಗೆನೇ ಮರೆತು ಹೋಗ್ತಾ ಇತ್ತು..
ಮುಳ್ಳನ್ನ ಪಕ್ಕಕ್ಕೆ ಹಾಕಿ ಹಾಕಿ,ಆ ಊರು ಮುಳ್ಳೇರಿಯಾ ಆಗಿರ್ತಾ ಇತ್ತು...
ಅಲ್ವಾ..!
ಬೆಳೆಯುವ ಸಿರಿ ಮೊಳಕೆಯಲ್ಲಿ..😂
ಹಾಗೆ
ಸುಳ್ಳು ಒಂದನೇ ಕ್ಲಾಸಿನಲ್ಲೇ..😛
ನೀವೆಲ್ಲಾ ಏನೇನು ಸುಳ್ಳೇ ಕೆಲಸ,ಥೋ ಒಳ್ಳೆ ಕೆಲಸ ಬರೆದಿದ್ರೋ ಏನೋ!?
😂
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ