ಬುಧವಾರ, ಫೆಬ್ರವರಿ 12, 2020

The Halifax Gibbet

ಇದನ್ನ The Halifax Gibbet ಎಂದು ಕರೆಯಲಾಗುತ್ತೆ,
16ನೇ ಶತಮಾನದಲ್ಲಿ,ಬ್ರಿಟನ್ನಲ್ಲಿ ವೆಸ್ಟ್ ಯಾರ್ಕ್ಶೈರ್(West Yorkshire)ನ Halifax ಎಂಬ ಸಣ್ಣ ಪೇಟೆಯಲ್ಲಿ ಸ್ಥಾಪಿಸಲಾಗಿತ್ತು..

Gibbet ಉಪಕರಣದ ವ್ಯವಸ್ಥೆಯನ್ನ ಮರಣದಂಡನೆ ಶಿಕ್ಷೆ ವಿಧಿಸಲು ಬಳಸಲಾಗುತ್ತಾ ಇತ್ತು..
(Lord of  manner)ಅಂದರೆ ಈ ಪ್ರದೇಶದ ಮುಖ್ಯಸ್ಥರು ಈ ರೀತಿಯ ಕಾನೂನು ಹಾಗೂ ಉಪಕರಣದ ವ್ಯವಸ್ಥೆಯನ್ನ ಜಾರಿಗೆ ತಂದಿದ್ದರು..!

Gibbet:-
4 ಅಡಿ ಎತ್ತರದ ಕಲ್ಲಿನ ಕಟ್ಟೆಯ ಮೇಲೆ,ಸುಮಾರು 15 ಅಡಿ ಎತ್ತರದ ಎರಡು ಮರದ ಕಂಬವನ್ನ ನೆಟ್ಟು,ಅದರ ಮೇಲೆ ಅಡ್ಡಲಾಗಿ ಮರದ ತುಂಡನ್ನ ಇಟ್ಟು,ಈ ಮರದ ತುಂಡಿನ ಮಧ್ಯ ಒಂದು ರಾಟೆಯನ್ನ ಅಳವಡಿಸಿ,ಆ ರಾಟೆಯ ಮೂಲಕ ಹಗ್ಗವನ್ನ ಹಾಕಿ ಅದಕ್ಕೆ ಕೊಡಲಿಯನ್ನ ಕಟ್ಟಿ ನೇತು ಹಾಕಿ,ಹಗ್ಗವನ್ನ ನೆಲದವರಗೆ ತಂದು ಆ ಹಗ್ಗಕ್ಕೆ ಒಂದು ಪಿನ್ ಅಳವಡಿಸಿ ಇಡಲಾಗುತ್ತಾ ಇತ್ತು,ಆ ಪಿನ್ ತೆಗೆದರೆ ಅಥವಾ ಹಗ್ಗವನ್ನ ಕತ್ತರಿಸಿದರೆ,ರಾಟೆಯ ಮೂಲಕ ಕೆಳಮುಖವಾಗಿರುವ ಕೊಡಲಿ ಅಥವಾ ಖಡ್ಗ,ವೇಗವಾಗಿ ಬಂದು ನೆಲದ ಮೇಲೆ ಇರುವ ವ್ಯಕ್ತಿಯ ತಲೆಯನ್ನ ಕತ್ತರಿಸಿ,ವ್ಯಕ್ತಿ ಮರಣ ಹೊಂದುವಂತ ವ್ಯವಸ್ಥೆ ಅದು...!

Gibbet ನ ಉದ್ದೇಶ:-
ಕಳ್ಳತನ ಮಾಡಿದವರು,ಕಳ್ಳತನ ಮಾಡಿದ ವಸ್ತುವಿನ 13 1/2d ಭಾಗದ ವಸ್ತುವಿನೊಂದಿಗೆ ಸಿಕ್ಕಿಹಾಕಿಕೊಂಡಾಗ ಅಥವಾ ಕಳ್ಳತನ ಮಾಡಿದ್ದ ವಸ್ತುವಿನ ಬಗ್ಗೆ ಖಚಿತ ಮಾಹಿತಿ ನೀಡಿ ಒಪ್ಪಿಕೊಂಡಾಗ, 

ಆ ಅಪರಾಧಿಗೆ ಈ Gibbet ನ ಕೆಳಗಡೆ ಇರಿಸಿ,ಕೊಡಲಿ ಅಥವಾ ಖಡ್ಗ ಮೇಲಿಂದ ಬಿಡುವ ಮೂಲಕ ಮರಣದಂಡನೆ ವಿಧಿಸಲಾಗುತ್ತಾ ಇತ್ತು..!

Gibbet ನ ಸುತ್ತ ಒಂದು ಸಣ್ಣ ಬೌಂಡರಿ ಕೂಡ ಹಾಕಲಾಗಿತ್ತು,ಎಲ್ಲಿಯಾದರೂ ಮರಣ ದಂಡನೆ ಸಮಯದಲ್ಲಿ ಅಪರಾಧಿ ಯಾವುದೋ ಲಕ್ ನಲ್ಲಿ ತಪ್ಪಿಸಿಕೊಂಡು,ಆ ಬೌಂಡರಿ ದಾಟಿ ಓಡಿ ಹೋದರೆ! 
ಅವನನ್ನ ಮತ್ತೆ ಆ ಕೂಡಲೇ ಹಿಡಿದು ಕರೆತಂದು ಮರಣದಂಡನೆ ವಿಧಿಸುವಂತೆ ಕಾನೂನು ಇರಲಿಲ್ಲ!

ಸುಮಾರು
1617 ರಲ್ಲಿ John lacy ಎಂಬ ಕಳ್ಳ ಈ ಶಿಕ್ಷೆಯ ಸಮಯದಲ್ಲಿ ಹೇಗೋ ಮಾಡಿ ತಪ್ಪಿಸಿಕೊಂಡು ಬೌಂಡರಿ ದಾಟಿ ಓಡಿ ಹೋಗಿ ಜೀವ ಉಳಿಸಿಕೊಂಡಿದ್ದನಂತೆ,
ಅವನನ್ನ "Running Man" ಅಂತಲೂ ಕರೆಯಲಾಗಿತ್ತಂತೆ..

ಆದರೆ ಸುಮಾರು 7 ವರ್ಷದ ನಂತರ ಮತ್ತೆ Halifax ಬಂದು ಸಿಕ್ಕಿಹಾಕಿಕೊಂಡು ಮತ್ತೆ ಅದೇ ಕೊಡಲಿಯ ಬಾಯಿಗೆ ಬಲಿ ಆಗಿದ್ದು ಅವನ ಪೆದ್ದು ತನ ಅಲ್ಲದೆ ಇನ್ನೇನು!?..
ಇದಕ್ಕೆ ಅಲ್ಲವೇ ಗ್ರಹಚಾರ 

ಮೊದಲನೇ ಮರಣದಂಡನೆಯ ಶಿಕ್ಷೆ Gibbetನಲ್ಲಿ 1286 ಹಾಗೂ ಕೊನೆಯ ಮರಣದಂಡನೆ 1650 ಇಸವಿಯಲ್ಲಿ ನಡೆದಿತ್ತು..ಎನ್ನಲಾಗಿದೆ..!

ಸುಮಾರು 100 ಕ್ಕೂ ಹೆಚ್ಚು ಜನ ಈ ವದಾ ಜಾಗದಲ್ಲಿ ಕೊಲ್ಲಲ್ಪಟ್ಟಿದ್ದಾರೆ ಎಂಬ ಮಾಹಿತಿ ಇದೆ..!ಆದರೆ ನಿಖರವಾಗಿ ಯಾರಿಗೂ ಗೊತ್ತಿಲ್ಲ..

1650 ರ ಸಮಯದಲ್ಲಿ,ಸ್ಥಳೀಯ ಆಡಳಿತ ಈ ವಿಷಯದ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಮಾಡಿದಾಗ,ಹೆಚ್ಚಿನ ಜನ ಕಳ್ಳತನಕ್ಕೆ ಮರಣದಂಡನೆಯಂತ ಘೋರ ಶಿಕ್ಷೆ ಕೊಡೋದು ಉಚಿತವಲ್ಲ ಎಂಬ ಅಭಿಪ್ರಾಯ ಕೇಳಿಬಂದಿತ್ತು..ಅದಕ್ಕೆ ಲಾರ್ಡ್ ಕ್ರೋಮ್ವೆಲ್ ಎಂಬ ಅಧಿಕಾರಿ ಆ Gibbet ನ್ನ ತೆಗೆಸಿ ಹಾಕಿ ಈ ಶಿಕ್ಷೆಯನ್ನ ರದ್ದು ಮಾಡಿದರಂತೆ..!

ನಂತರ ಅದೇ ರೀತಿಯ ಮರದ ಪ್ರತಿಕೃತಿ(Replica) ಇನ್ನೊಂದು Halifax Gibbet ನ್ನ ಪ್ರವಾಸಿಗರಿಗೆ ಎಂದು 2008 ರಲ್ಲಿ,West yorkshire,Halifax ನ ಅದೇ ಜಾಗದಲ್ಲಿ ಸ್ಥಾಪನೆಮಾಡಲಾಗಿದೆ..

57 ಜನರ ಹೆಸರು ಹಾಗೂ ಮರಣದಂಡನೆ ಕೊಟ್ಟ ಇಸವಿಯನ್ನ ಕೂಡ ಆ ಮರದ ಪ್ರತಿಕೃತಿಯ ಮುಂದೆ ಇರುವ ಬೋರ್ಡ್ನಲ್ಲಿ ನಮೂದಿಸಲಾಗಿದೆ..
😊

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ