ಶನಿವಾರ, ಜನವರಿ 1, 2022

ಮಾರಾಣಾ0ತಿಕ ಖಾಯಿಲೆಗಳು

ಜಗತ್ತಿನಲ್ಲಿ ಹಲವು ವರ್ಷಗಳಿಂದ ನಾನಾ ತರದ ಸಾಂಕ್ರಾಮಿಕ ರೋಗಗಳು,ಮಾರಾಣಾ0ತಿಕ ಖಾಯಿಲೆಗಳು ಜನರನ್ನ ಭಾದಿಸಿವೆ,ಈಗಲೂ ಭಾದಿಸುತ್ತಾ ಇವೆ ಹಾಗೂ ಅದಕ್ಕೆ ಲಸಿಕೆ ಕಂಡು ಹಿಡಿದು ಅದು ಪರಿಣಾಮಕಾರಿಯಾಗುವುದರ ಒಳಗೆ ಪ್ರಾಣ ಹಾನಿ ಕೂಡ ಕೋಟಿ ಲೆಕ್ಕದಲ್ಲಿ ಆಗಿದ್ದ ಉದಾಹರಣೆಗಳು ಈ ಹಿಂದೆ ಇವೆ. 
ಹೀಗೆ ಜಗತ್ತಿನ ವಿವಿಧ ಕಡೆಯಿಂದ ಪ್ರಾರಂಭವಾದ
ಖಾಯಿಲೆಗಳು ಹಾಗೂ ಅದರಿಂದ ವಿವಿದ ದೇಶದಲ್ಲಿ ಉಂಟಾದ ಮರಣದ ಸಂಖ್ಯೆಗಳ ಕೆಲವು ವಿವರ,ಉತ್ತರ ಇಂಗ್ಲೆಂಡ್ ನ ಚೆಸ್ಟರ್ ನಗರದಲ್ಲಿ ಇರುವ ಸಿಖ್ ಟು ಡೆತ್ ಎಂಬ ಒಂದು ಆರೋಗ್ಯಕ್ಕೆ ಸಂಬಂಧಿಸಿದ ಮ್ಯೂಸಿಯಂ ನಲ್ಲಿ ನನಗೆ ಸಿಕ್ಕ ಮಾಹಿತಿ ಇಲ್ಲಿದೆ..

■𝐏𝐥𝐚𝐠𝐮𝐞 𝐨𝐟 𝐣𝐮𝐬𝐭𝐢𝐧𝐢𝐚𝐧.
(541-542)541ನೇ ಇಸವಿಯಲ್ಲಿ
ಯುರೋಪ್ನಲ್ಲಿ ಪ್ರಾರಂಭವಾದ ಈ ಖಾಯಿಲೆಗೆ
ಮರಣ ಹೊಂದಿದವರ ಸಂಖ್ಯೆ
ಅಂದಾಜು 50,000,000

■𝑩𝒍𝒂𝒄𝒌 𝑫𝒆𝒂𝒕𝒉
(1347-1351)1347 ನೇ ಇಸವಿಯಲ್ಲಿ
ಅಪ್ರೋ ಯುರೇಷಿಯಾದಲ್ಲಿ ಪ್ರಾರಂಭವಾದ ಈ ಖಾಯಿಲೆಯಿಂದ
ಮರಣ ಹೊಂದಿದವರ ಸಂಖ್ಯೆ ಅಂದಾಜು
200,000,000..
ಸುಮಾರು 30 ರಿಂದ 60% ಯುರೋಪ್ ಜನಸಂಖ್ಯೆ ಇದರಿಂದ ಮರಣ ಹೊಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ..

■𝑺𝒎𝒂𝒍𝒍𝒑𝒐𝒙,(ವೇರಿಯೋಲಾ,ವೇರಿಯೊಲವೆರಾ,ಪಾಕ್ಸ್,ರೆಡ್ ಪ್ಲೇಗ್) (1520-1979) 1520 ನೇ ಇಸವಿಯಲ್ಲಿ
ಪ್ರಾರಂಭವಾದ ಸಾಂಕ್ರಾಮಿಕ ಖಾಯಿಲೆಯಿಂದ
ಮರಣ ಹೊಂದಿದವರ ಸಂಖ್ಯೆ 
ಅಂದಾಜು56,000,000.

■𝑰𝒕𝒂𝒍𝒊𝒂𝒏 𝒑𝒍𝒂𝒈𝒖𝒆
(1629-1631) 1629 ನೆ ಇಸವಿಯಲ್ಲಿ
ಇಟಲಿಯಲ್ಲಿ ಗುರುತಿಸಿ ಕೊಂಡ ಈ ಸಾಂಕ್ರಾಮಿಕ ಖಾಯಿಲೆಯಿಂದ
ಮರಣ ಹೊಂದಿದವರ ಸಂಖ್ಯ
1,000,000.
35% ರಷ್ಟು ಇಟಲಿಯ ಜನಸಂಖ್ಯೆ ಇದರಿಂದ ಮರಣ ಹೊಂದಿರ ಬಹುದು ಎನ್ನಲಾಗಿದೆ..!

■𝑮𝒓𝒆𝒂𝒕 𝒑𝒍𝒂𝒈𝒖𝒆.
(1665-1666)1665 ಇಸವಿಯಲ್ಲಿ ಲಂಡನ್ನಲ್ಲಿ ಕಾಣಿಸಿ ಕೊಂಡಿತ್ತು,ಈ ಸಾಂಕ್ರಾಮಿಕ ರೋಗದಿಂದ
ಮರಣ ಹೊಂದಿದವರ ಸಂಖ್ಯೆ ಅಂದಾಜು
100,000
ಎನ್ನಲಾಗಿದೆ..

■𝑪𝒉𝒐𝒍𝒆𝒓𝒂.
(1817-1923)1817ರಲ್ಲಿ ಭಾರತದ ಜೆಸೋರಿಯಲ್ಲಿ ಕಾಣಿಸಿ ಕೊಂಡಿದ್ದ,ಈ ರೋಗದಿಂದ
ಮರಣ ಹೊಂದಿದವರ ಸಂಖ್ಯೆ ಅಂದಾಜು 1,000,000ವಂತೆ..!

■𝒀𝒆𝒍𝒍𝒐𝒘 𝒇𝒆𝒘𝒆𝒓.
1850 ರಲ್ಲಿ ಮೊಟ್ಟ ಮೊದಲು ಆಫ್ರಿಕಾದಲ್ಲಿ ಕಂಡು ಬಂದಿದ್ದು
ಈ ಖಾಯಿಲೆಯಿಂದ
ಮರಣ ಹೊಂದಿದವರ ಸಂಖ್ಯೆ 
ಅಂದಾಜು150,000!

■𝑪𝒉𝒊𝒏𝒆𝒔𝒆/𝑰𝒏𝒅𝒊𝒂𝒏 𝒑𝒍𝒂𝒈𝒖𝒆.
(1855-1960) 1855 ಇಸವಿಯಲ್ಲಿ ಮೊದಲು ಮಧ್ಯ ಏಷ್ಯಾದಲ್ಲಿ ಕಂಡು ಬಂದಿತ್ತು ಈ ಖಾಯಿಲೆ,ಭಾರತವೂ ಸೇರಿದಂತೆ ಹಲವು ರಾಷ್ಟ್ರಕ್ಕೆ ದೊಡ್ಡ ಹೊಡೆತವೇ ಕೊಟ್ಟಿತ್ತು ಇದರಿಂದ
ಮರಣ ಹೊಂದಿದವರ ಸಂಖ್ಯೆ ಅಂದಾಜು ಬರೋಬ್ಬರಿ
12,000,000..!

■𝑹𝒖𝒔𝒔𝒊𝒂𝒏 𝒇𝒍𝒖
1889 ಇಸವಿಯಲ್ಲಿ  ರಷ್ಯಾ ದೇಶದ ಭುಕಾರ ಎಂಬಲ್ಲಿ ಕಂಡು ಬಂದಿತ್ತು,ಇದರಿಂದ
ಮರಣ ಹೊಂದಿದವರ ಸಂಖ್ಯೆಅಂದಾಜು1,000,000.
1890ರವರೆಗೆ ಇದರ ತೀವ್ರತೆ ಇತ್ತು..

◆𝑴𝒂𝒍𝒂𝒓𝒊𝒂 
1897 ಮೊದಲ ಕೇಸ್ ಸಿಕಂದರಾ ಬಾದ್ ನಲ್ಲಿ ಕಾಣಿಸಿ ಕೊಂಡಿತ್ತು
ಸುಮಾರು 627000 ಜನ ಮಲೇರಿಯಾದಿಂದ ಇಲ್ಲಿಯವರೆಗೆ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ..

■𝑺𝒑𝒂𝒏𝒊𝒔𝒉 𝒇𝒍𝒖(The great influenza epidemic).(1918-1919)1918 ರಲ್ಲಿ ಮೊದಲು ಅಮೆರಿಕಾದಲ್ಲಿ ಕಾಣಿಸಿ ಕೊಂಡ ಈ ಪ್ಲು..
ಸುಮಾರು 50,000,000 ಜನರನ್ನ ಬಲಿ ತೆಗೆದು ಕೊಂಡಿದೆಯಂತೆ..

■𝑨𝒔𝒊𝒂𝒏 𝑭𝒍𝒖(H2N2),
(1957-1958)1957ರಲ್ಲಿ ಪ್ರಥಮವಾಗಿ ದಕ್ಷಿಣ ಚೀನಾದಲ್ಲಿ ಕಾಣಿಸಿ ಕೊಂಡಿತ್ತು ಈ ಖಾಯಿಲೆ,
ಸುಮಾರು 1,100,000 ಜನರು ಇದರಿಂದ ಸಾವನ್ನಪ್ಪಿದ್ದಾರೆ..

■𝑯𝒐𝒏𝒈𝒌𝒐𝒏𝒈 𝑭𝒍𝒖
(1968-1970)1968ರಲ್ಲಿ ಮೊದಲ ಬಾರಿಗೆ ಹಾಂಗ್ ಕಾಂಗ್ ನಲ್ಲಿ ಕಾಣಿಸಿ ಕೊಂಡಿತ್ತು ಈ ರೋಗ...
ಈ ಖಾಯಿಲೆಯಿಂದ ಸಾವನ್ನಪ್ಪಿದರು ಸುಮಾರು ಅಂದಾಜು 1,000,000..

■𝑯𝑰𝑽/𝑨𝑰𝑫𝑺 
1981-? ಇಸವಿಯಲ್ಲಿ ಅಮೆರಿಕಾದಲ್ಲಿ ಮೊಟ್ಟ ಮೊದಲು ಕಾಣಿಸಿ ಕೊಂಡ ಈ ಭಯಾನಕ ಖಾಯಿಲೆಗೆ ಇಲ್ಲಿಯವರೆಗೆ
ಮರಣ ಹೊಂದಿದವರ ಸಂಖ್ಯೆ ಅಂದಾಜು 35,000,000,ಇಂದಿಗೂ ಇದಕ್ಕೆ ಲಸಿಕೆ ಕಂಡು ಹಿಡಿಯಲು ಸಾಧ್ಯವಾಗಿಲ್ಲ..

■𝑺𝒂𝒓𝒔
(2002-2003)2002 ರಲ್ಲಿ ಮೊದಲಿಗೆ ಚೀನಾದ ಶು0ದೇ ಎಂಬಲ್ಲಿ ಕಂಡು ಬಂದಿತ್ತು,ಇದರಿಂದ
ಮರಣ ಹೊಂದಿದವರು 770 ಜನ

■𝑺𝒑𝒂𝒊𝒏 flu(H1N1).
(2009-2010) 2009 ರಲ್ಲಿ ಮೊದಲು ಉತ್ತರ ಅಮೇರಿಕಾದಲ್ಲಿ ಕಂಡು ಬಂದಿತ್ತು
ಮರಣ ಹೊಂದಿದವರು 200,000..

■ 𝑬𝒃𝒐𝒍𝒂.
(2014-2016) 2014 ಇಸವಿಯಲ್ಲಿ ಮೊದಲಿಗೆ ಆಫ್ರಿಕಾದಲ್ಲಿ ಕಾಣಿಸಿ ಕೊಂಡ ಈ ಮಾರಣಾ0ತಿಕ ಖಾಯಿಲೆಗೆ
ಮರಣ ಹೊಂದಿದವರ ಸಂಖ್ಯೆ-11,000..

■ 𝑴𝒆𝒓𝒔.
 2015 ರಲ್ಲಿ ಮೊದಲ ಬಾರಿಗೆ ಸೌದಿ ಅರೇಬಿಯಾದಲ್ಲಿ ಕಾಣಿಸಿ ಕೊಂಡ ರೋಗ, 
ಈ ರೋಗದಿಂದ
ಮರಣ ಹೊಂದಿದವರು 850..

■𝑪𝒐𝒗𝒊𝒅 19.
2019-?
ಎಂಬ ಸಾಂಕ್ರಾಮಿಕ ಖಾಯಿಲೆ ಮೊದಲ ಭಾರಿಗೆ ಚೀನಾ ದೇಶದ ವುಹಾನ್ ಎಂಬ ನಗರದಲ್ಲಿ ಕಾಣಿಸಿ ಕೊಂಡು ಇಡೀ ಜಗತ್ತನ್ನೇ ತಲ್ಲಣ ಗೊಳಿಸಿತ್ತು ಈಗಲೂ ಆ ವೈರಾಣು ವಿವಿಧ ರೂಪಾಂತರಗೊಂಡು ತೊಂದರೆ ಕೊಡುತ್ತಲೇ ಇದೆ..!
ಹಾಗೆ ನೋಡಿದರೆ ನಮ್ಮ ಜನರೇಷನ್ ನಲ್ಲಿ ಮಾರಣಾ0ತಿಕ ಖಾಯಿಲೆಗಳು ಹಿಂದೆ ಬಂದಂತೆ ಭೀಕರ ಖಾಯಿಲೆಗಳನ್ನ ಇತ್ತೀಚಿನ ಕೋವಿಡ್ ಬಿಟ್ಟರೆ ಬೇರೆಯದು ನಾವೆಂದೂ ಕಂಡಿಲ್ಲ, ಅನಿಸುತ್ತೆ.
ಸುಮ್ಮ ಸುಮ್ಮನೆ ಮಾತು ಮಾತಿಗೆ ಮುಖ ಮುಚ್ಚ ಅಂತ ಬೈಯುತ್ತಾ ಇದ್ದವರ ಶಾಪ ಎಲ್ಲರಿಗೂ ತಟ್ಟಿದ ಹಾಗೇ ಆಗಿದೆ,
ಈಗ ನಿಜಕ್ಕೂ ಎಲ್ಲರೂ ಮುಖ ಮುಚ್ಚಿ ಕೊಂಡು ಓಡಾಡುವ ಹಾಗೆ ಆಗಿದೆ..!😂

ಈ ಹೊಸಾ ಸಾಂಕ್ರಾಮಿಕ ಖಾಯಿಲೆಯಿಂದ
ಇಲ್ಲಿಯವರೆಗೆ ಪ್ರಪಂಚದಾದ್ಯಂತ ಮರಣ ಹೊಂದಿದವರ ಸಂಖ್ಯೆ ಅಂದಾಜು 5,425,817..
ಆದರೆ ಕೇವಲ ಕೆಲವೇ ತಿಂಗಳುಗಳಲ್ಲಿ ಇದಕ್ಕೆ ಮೊತ್ತ ಮೊದಲು ಬ್ರಿಟನ್ ನಲ್ಲಿ ಲಸಿಕೆ ಕಂಡು ಹಿಡಿಯಲಾಗಿತ್ತು,ನಂತರ ಭಾರತವೂ ಸೇರಿದಂತೆ ಹಲವು ದೇಶಗಳು ಲಸಿಕೆ ಆವಿಷ್ಕಾರ ಮಾಡಿದ್ದು ಇತಿಹಾಸ..

ಇನ್ನು ಕೆಲವೇ ದಿನಗಳಲ್ಲಿ ಈ ಸಾಂಕ್ರಾಮಿಕ ಖಾಯಿಲೆ ಕೊನೆಗಾಣಲಿ ಎಂದು ದೇವರಲ್ಲಿ ಹುಲುಮಾನವರಾದ ನಾವು ಪ್ರಾರ್ಥನೆ ಮಾಡುವುದು ಒಂದೇ ನಮಗಿರುವ ದಾರಿ..
🙏

(ವಿ.ಸೂ:-ಸಿಕ್ ಟು ಡೆತ್ ಎಂಬ ಮ್ಯೂಸಿಯಂ ನಲ್ಲಿ ಸಿಕ್ಕ ಕೆಲವು ಮಾಹಿತಿಯನ್ನ ಇಲ್ಲಿ ಹಂಚಲು ಪ್ರಯತ್ನಿಸಿದ್ದೇನೆ..ಮಾಹಿತಿ ಹಾಗೂ ಅಂಕಿ ಅಂಶಗಳು ಅವರದ್ದೇ ಮೂಲ,ಇದು ಕೇವಲ ವಿಷಯ ಸಂಗ್ರಹ ಹಾಗೂ ಮಾಹಿತಿಗಾಗಿ ಮಾತ್ರ, ಯಾರಿಗೋ ಆತಂಕ,ಭಯ ಅಥವಾ ಬೇಸರಗೊಳಿಸಲು ಅಲ್ಲ..!)

ಸುರಕ್ಷಿತರಾಗಿರಿ..
🙏

Face😷 Space🤘 Hand🖐️

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ