ಬುಧವಾರ, ಫೆಬ್ರವರಿ 9, 2022

ಮಿಲಿಟರಿ ಮ್ಯೂಸಿಯಂ ಚೆಸ್ಟರ್

ಉತ್ತರ ಇಂಗ್ಲೆಂಡ್ ನ ಚೆಸ್ಟರ್ ಎಂಬ ನಗರದಲ್ಲಿ ಒಂದು ಆರ್ಮಿ ಮ್ಯೂಸಿಯಂ ಗೆ ಹೋಗಿದ್ದೆ...ಮಿಲಿಟರಿ ಸಂಬಂಧಿತ ಹಲವು ವಿಷಯ ವಸ್ತುಗಳ ಸಹಿತ,ಬೇರೆ ಬೇರೆ ವಿಭಾಗವಾಗಿ ವಿಂಗಡಿಸಿ ವಿವಿಧ ಕೊಠಡಿ ಯಲ್ಲಿ ಇಡಲಾಗಿತ್ತು,ಒಂದೊಂದೇ ವಿಭಾಗಗಳನ್ನ ಸಂಕ್ಷಿಪ್ತವಾಗಿ ಮುಗಿಸುತ್ತಾ ಇರುವಾಗ,ನಮ್ಮ ಜೊತೆಗೇ
ಸುಮಾರು 6 ಅಡಿಗಿಂತ ಎತ್ತರದ ಒಬ್ಬರು ಬ್ರಿಟೀಷ್ ಸಂಜಾತ, ಒಂದು ಯುವತಿಯೊಂದಿಗೆ ಮ್ಯೂಸಿಯಂ ವೀಕ್ಷಣೆ ಮಾಡುತ್ತಾ,ಯುವತಿ ಕೇಳಿದ್ದಕ್ಕೆ ಉತ್ತರ ಕೊಡುತ್ತಾ ಬರುತ್ತಾ ಇದ್ದರು,ಅವರ ವರ್ತನೆ ಮತ್ತು ಮಾತುಗಳಲ್ಲಿ ತಿಳಿಯುತ್ತಾ ಇತ್ತು ಅವರು ಆರ್ಮಿ ಅಥವಾ ಏರ್ಪೋರ್ಸ್,ನೇವಿ ಯಂತಹಾ ಯಾವುದೋ ಸಂಸ್ಥೆಯಲ್ಲಿ ಕೆಲಸ ಮಾಡುವವರು ಎಂದು!

ಹೀಗೆ ಒಂದೊಂದೇ ವಿಭಾಗ ಮುಗಿಸಿ,ಯಾವ ಯಾವ ಬೆಟಾಲಿಯನ್ ಎಲ್ಲೆಲ್ಲಿ ಆಪರೇಷನ್ ನಲ್ಲಿ ಪಾಲ್ಗೊಂಡಿದ್ದರು,ಅದರ ವಿವರಣೆ,ಮೇಡಲ್ಗಳು ಹಾಗೂ ಅದರ ಗ್ರೂಪ್ ಫೋಟೋ ಇರುವ ಒಂದು ಜಾಗಕ್ಕೆ ಬಂದು ನೋಡುತ್ತಾ ಇದ್ದಾಗ,ಅವರ
ಜೊತೆಯಿದ್ದ ಯುವತಿ ನೀನೆಲ್ಲಾದ್ರೂ ಇದಿಯಾ ಈ ಫೋಟೋಗಳಲ್ಲಿ ಎನ್ನುವಂತೆ ಕೇಳಿದ್ರು,
ಅವರು ವಿನಮ್ರನಾಗಿ ಗೋಡೆಯಲ್ಲಿ ನೇತು ಹಾಕಿದ್ದ ಉದ್ದನೆ ಫೋಟೋ ಪ್ರೇಮ್ ಬಳಿ ಕರೆದು ಕೊಂಡು ಹೋಗಿ ಈ ಬೆಟಾಲಿಯನ್ ಗ್ರೂಪ್ ಫೋಟೋ ನಲ್ಲಿ ಎಲ್ಲೋ ನನ್ನ ಫೋಟೋ ಇರ್ಬೇಕು ಎಂದು,ಅವರಿದ್ದ ನಾಲ್ಕನೇ ಸಾಲನ್ನ ಹುಡುಕಿ ತೋರಿಸಿ,ನೋಡು ಇದೇ ನಾನು ಗುರುತು ಸಿಗುತ್ತಾ ಅಂತ ಮುಗುಳ್ನಕ್ಕರು..!

ನಾನು ಅಲ್ಲೇ ಪಕ್ಕದಲ್ಲೇ ಇದ್ದವನು..
ಅದನ್ನ ಗಮನಿಸಿ,
ಓಹ್..ನೀವು ಈ ಬೆಟಾಲಿಯನ್ ನಲ್ಲಿ ಇದ್ರಾ ಅಂದೆ..!

ಅವರು
ಹೌದು ಎಂದರು..
ಈಗಲೂ ಸರ್ವಿಸ್ ನಲ್ಲಿ ಇದೀರಾ,ಇದ್ಯಾವುದರ ಫೋಟೋ ಅಂತ ಕೇಳಿದೆ..
ಇರಾಕ್ ನ Operation Telic ನಲ್ಲಿ ಚೆಸ್ಟರ್ ನ ಬೆಟಾಲಿಯನ್ ನಲ್ಲಿ ಪಾಲ್ಗೊಂಡು ವಾಪಾಸ್ ಬಂದ ನಂತರ ಪ್ರಶಸ್ತಿ ವಿತರಣಾ ಸಮಾರಂಭದ ಫೋಟೋ ಇದು, ಈಗ ಸರ್ವಿಸ್ ನಲ್ಲಿ ಇಲ್ಲ,ಇಲ್ಲೇ ಹತ್ತಿರದಲ್ಲಿ ನಾನು ನನ್ನ ಹೆಂಡತಿ ವಾಸವಿದ್ದೇನೆ,ನೀವು ಹೇಗಿದ್ದೀರಿ..!
ಅಂತ ಮುಗುಳ್ನಗುತ್ತಾ ನಮ್ಮ ಉಭಯ ಕುಶಲೋಪರಿ ಕೇಳಿ ಸ್ವಲ್ಪ ಹೊತ್ತು ಮಾತಾಡಿ,ಒಳ್ಳೆಯದಾಗಲಿ,ನಿಮ್ಮ ಭೇಟಿ ಖುಷಿ ತಂದಿತು,ಬಾಯ್ ಎಂದು ಹೇಳಿ ಹೊರಟರು..
ಅವರ ಹೆಂಡತಿಯೂ ಆತ್ಮೀಯತೆಯಿಂದ ಮಾತಾಡಿದರು..

ಅಂದ ಹಾಗೆ ಆಪರೇಷನ್ ಟೆಲಿಕ್ ಇರಾಕ್ ನ ಸದ್ದಾಂ ಹುಸೇನ್ ವಿರುದ್ಧ ನಡೆದ ಅತಿ ದೊಡ್ಡ ಕಾರ್ಯಾಚರಣೆ!!
ಮಾರ್ಚ್ 2003 ರಿಂದ 22ನೆ ಮೇ 2011 ರವರೆಗೆ ನಡೆದಿದ್ದ ಈ ಮಿಲಿಟರಿ ಕಾರ್ಯಾ ಚರಣೆಯಲ್ಲಿ 179 ಬ್ರಿಟೀಷ್ ಸೈನಿಕರು ಹುತಾತ್ಮರು ಆಗಿದ್ದರಂತೆ..!
ಅಂತಹಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸೈನಿಕರು ಅವರು..!

ಅವರ
ವಿವರಣೆ ಹಾಗೂ ಮಾತು ಬಹಳ ವಿನಮ್ರ ಹಾಗೂ ವಿನಯ, ಗೌರವಯುತವಾಗಿತ್ತು,ನನಗೆ ಸ್ಪೆಷಲ್ ಆಗಿ ಗೌರವ ಕೊಡ ಬೇಕು,ನಾನು ಯಾರ ಹತ್ರಾನೋ ಯಾಕೆ ಮಾತಾಡಬೇಕು,ನನ್ನ ಜನರು ವಿಶೇಷವಾಗಿ ಮಾತಾಡಿಸಬೇಕು ಎನ್ನುವ ರೀತಿ ಯಾವ ವರ್ತನೆ  ತೋರಿಸಲಿಲ್ಲ,ನಾನು ನಿಮ್ಮ ಹಾಗೆ ಸಾಮಾನ್ಯ ಪ್ರಜೆ ಎನ್ನುವ ಹಾಗೆ ಅವರ ವರ್ತನೆ ಇತ್ತು..

ಎಷ್ಟೋ ಜನ ಸಣ್ಣ ಕೆಲಸ ಮಾಡಿದ್ರೂ,ಇಡೀ ದೇಶ ಉದ್ದಾರ ಮಾಡಿದ್ವಿ,ನಮ್ಮಿಂದಲೇ ಇಡೀ ದೇಶ ನಡೆಯೋದು,ನಾವೇ ದೊಡ್ಡ ಜನ,ನಾವು ದೊಡ್ಡ ಸೆಲೆಬ್ರಿಟಿ ಅಂತ ಭ್ರಮೆಯಲ್ಲಿ ಇದ್ದು,ಅಹಂ,ದಪ್ಪ ಮಾತು,ವರ್ತನೆ ಮಾಡೋರು ಮದ್ಯೆ ಇಂತವರು ನಿಜಕ್ಕೂ ತುಂಬಿದ ಕೊಡ..

ಅವರ ಜೊತೆ ಫೋಟೋ ಅಥವಾ ಸೆಲ್ಫಿ ಏನೂ ತಗೆದು ಕೊಳ್ಳಲಿಲ್ಲ..
ಇವರು ಅಂತಲ್ಲ,
ಅಪರಿಚಿತರ ಬಳಿ ಹೇಳದೆ ಕೇಳದೇ ಅಥವಾ ಸುಮ್ಮ ಸುಮ್ಮನೆ ಕೇಳಿ ಫೋಟೋ ತೆಗೆಯೋದು ಮ್ಯಾನರ್ಸ್ ಅನಿಸಲ್ಲ(ಅವರಾಗೇ ಕೇಳಿದರೆ,ಹೇಳಿದರೆ ಓಕೆ),ಅವರ ಪ್ರೈವೆಸಿ,ಸ್ವಾತಂತ್ರಕ್ಕೆ ದಕ್ಕೆ ಉಂಟಾಗಬಹುದೇನೋ,ಅವರು ಬಾಯಿಬಿಟ್ಟು ಹೇಳಲು ಆಗದೇ ಇರಬಹುದು ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ..!
😊

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ