ಬುಧವಾರ, ಫೆಬ್ರವರಿ 9, 2022

ಅವರಿಗಾ ಯಾರಿಗಾ!!ಟೆಸ್ಟ್






ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಸೆಂಬರ್ 1ನೇ ತಾರೀಖು ಬೆಳಿಗಿನ ಜಾವ 4.45 ಬಂದಿಳಿದ ಕೂಡಲೇ "ಅವರಿಗಾ"ಲ್ಯಾಬ್ಸ್ ನ ಥೋ Auriga Lab ಸಿಬ್ಬಂದಿ ಬಂದು ಒಂದು QR ಕೋಡ್ ಇರುವ ಸಣ್ಣ ಚೀಟಿ ಕೈಗೆ ನೀಡಿ..
ಇದನ್ನ ನಿಮ್ಮ ಮೊಬೈಲ್ನಲ್ಲಿ ಸ್ಕಾನ್ ಮಾಡಿ ನಿಮ್ಮ ವಿವರ ನೀಡಿ ನಂತರ ಆನ್ ಲೈನ್ ಹಣ ಪಾವತಿ ಮಾಡಿ ಇಲ್ಲವಾದರೆ,ಇಲ್ಲೇ ನಿಮ್ಮ ಕಾರ್ಡ್ ಅಥವಾ ನಗದು ಕೂಡ ಕೊಡುವ ವ್ಯವಸ್ಥೆ ಇದೆ ಎಂದು ವಿನಮ್ರವಾಗಿ ವರದಿ ಒಪ್ಪಿಸಿದರು..!

ಕೇಳಿದ ಪ್ರಶ್ನೆಗೆ ಮಿನಿಮಮ್ 10 ಸರಿ ತಲೆ ಕೆರೆದುಕೊಂಡು..
"ಬಂದೆ ಸಾ..."
ಅಂತ ಆ ಕಡೆ ಈ ಕಡೆ ಓಡಾಡಿ..
"ಸಾರ್... ಇವತ್ತು ಮೊದಲ ದಿನ ಆದ್ದರಿಂದ ನಮಗೂ ಹೆಚ್ಚಿನ ಮಾಹಿತಿಯಿಲ್ಲ,
ದಯಮಾಡಿ ಸಹಕರಿಸಿ ಅಂದರು.."
ಅಂದಿನಿಂದ ವಿದೇಶದಿಂದ ನಮ್ಮ ದೇಶಕ್ಕೆ ಬೆಳಿಗ್ಗಿನ ಜಾವ 4 ಗಂಟೆಯ ನಂತರ ಬಂದ ಎಲ್ಲಾ ವಿಮಾನಗಳ ಪ್ರಯಾಣಿಕರನ್ನ ಕಡ್ಡಾಯವಾಗಿ RT-PCR ಪರೀಕ್ಷೆ(Real time-polymerase chain reaction)ಮಾಡಿಸಿ ಋಣಾತ್ಮಕ ಅಂತ ವರದಿ ಬಂದ ಮೇಲೆ ವಿಮಾನ ನಿಲ್ದಾಣದಿಂದ ಹೊರ ಕಳಿಸುವಂತೆ ಸಾಮಾನ್ಯ ಪ್ರಜೆಗಳಿಗೆ ಮಾತ್ರ ಆದೇಶ ನೀಡಲಾಗಿತ್ತು(ಬೇರೆಯವರ ಬಗ್ಗೆ ನಂಗೊತ್ತಿಲ್ಲ!)
ಹೆಂಗೆ ಲಕ್ ನಮ್ಮದು..😉

ನಂತರದ್ದು ಎಲ್ಲಾ ಅಯೋಮಾಯ..

ಒಬ್ಬರು...
ಎರಡೂ ಮುಕ್ಕಾಲು ಅಡಿಯ ಅಂತರಲ್ಲಿ ಕಾಟಾಚಾರಕ್ಕೆ ಇಟ್ಟ ಚೇರ್ ನಲ್ಲಿ ಕೂರೋಕೆ ಹೇಳಿದ್ರೆ..

ಇನ್ನೊಬ್ಬ ಸಿಬ್ಬಂದಿ ಬಂದು..
ಸರತಿ ಸಾಲಲ್ಲಿ ನಿಲ್ಲಿ ಅಂತಿದ್ರು,ಯಾರ ಮಾತು ಕೇಳೋದು ಅಂತ ಮೀನ,ಮೇಷ ಎಣಿಸುತ್ತಾ ಅಲ್ಲಿ ಇಲ್ಲಿ ನೋಡುತ್ತಾ ನಿಂತಿದ್ದಾಗ ನನಗಿಂತ ಹಿಂದೆ ಇದ್ದವರು ಹಲವು ಜನ,ನಿದ್ರೆಗಣ್ಣಲ್ಲಿ ಕಣ್ಣು ಉಜ್ಜುತ್ತಾ ಮುಂದೆ ಹೋಗೆ ಬಿಟ್ರು..!

ನಾನು ಆಗಲೇ ಮೊಸಳೆ ಬಾಯಿ ಕಳೆದಷ್ಟು ಅಗಲ 25 ಸರಿ ಆಕಳಿಸಿ ಆಗಿತ್ತು,ನಂಗೆ ಅದು ನಿದ್ರೆಯ ಸಮಯ..!

ನಾವೇನು ಮಾಡೋದು ಅಂತ ಕೇಳಿದ್ರೆ ಮತ್ತೆ ಆ ಸಿಬ್ಬಂದಿ
ಅದೇ ತಲೆ ಕೆರೆಯುವ ಪ್ರೊಸೆಸ್ ಮುಂದು ವರಿಸಿದ್ರು..

ಕೊನೆಗೆ ಸರತಿ ಸಾಲಲ್ಲಿ ನಿಂತು ಹಣ ಪಾವತಿ ಮಾಡುವ ಸ್ಥಳ ಹೇಗೋ ತಲುಪಿಯಾಯ್ತು ..

ಹಣ ಪಾವತಿ ಮಾಡುವ ಜಾಗದಲ್ಲಿ,
ಹೋಟೆಲ್ ನಲ್ಲಿ ಏನಿದೆ ಕೇಳಿದಾಗ
ಮಸಾಲೆ ದೋಸೆ..
ಸೆಟ್ದೋಸೆ..
ಇಡ್ಲಿ ಸ್ವಲ್ಪ ಲೇಟ್ ಆಗುತ್ತೇ ನೋಡಿ..
ವಡೆ ಮಾತ್ರ ಈಗಲೇ ಕೊಡ್ತೇವೆ ಕೊನೆಗೆ ವಡೆ ಕಾಲಿ ಆದ್ರೆ ನಿಮಗೆ ಕಷ್ಟ ಅಂತ ಭಯ ಪಡಿಸಲ್ವಾ!
ಹಾಗೆ..
ನೋಡಿ
500 ರೂಪಾಯಿ
ಮತ್ತೆ
3000 ರೂಪಾಯಿ
ಇದೆ ಆರ್ "ಡಿ ಬಿ" ಸಿ ಆರ್,(RT-PCR)
ಅಂದರು ಆ ಮಹಾತ್ಮ ತಮಿಳು ಮಿಶ್ರಿತ ಕನ್ನಡದಲ್ಲಿ..

ಎರಡರ ಮಧ್ಯ ಏನು ವ್ಯತ್ಯಾಸ ಕೇಳಿದ್ರೆ..!?
500 ರೂಪಾಯಿದು 4 ಗಂಡೆಯಿಂದ 14 ಗಂಡೇ ಆದ್ರೂ ಆಗಬಹುದು..
3000 ರೂಪಾಯಿದು ಕೇವಲ 30 ನಿಮಿಷದಲ್ಲಿ ನಿಮಗೆ ಕೊರೊನಾ ಪರೀಕ್ಷೆ ಪಲಿತಾಂಶ..
ಅಂದ್ರು,

ಈ ಆಪರ್ ನಿಮಗೆ ಮಾತ್ರ,ಫಲಿತಾಂಶ ಖಚಿತ ತ್ವರೆ ಮಾಡಿ ಅಂತ
ಉಜಾಲಾ ಜಾಹೀರಾತಿನ ತರ ಹೇಳಿದ್ರೂ..😂

ನನ್ನ ಜೊತೆಗೇ ಬಂದಿದ್ದ ನನ್ನ ಆಪ್ತ ಸ್ನೇಹಿತರು ಸರತಿ ಸಾಲಲ್ಲೇ ನನಗೆ ಹೇಳಿದ್ರೂ,
ನಾನು 500 ದ್ದೇ ತಗೋತಿನಿ ನಿಧಾನ ಆದ್ರೂ ಪರವಾಗಿಲ್ಲ ಸುಮ್ಮನೆ ಹಣ ಯಾಕೆ ಪೋಲು ಮಾಡೋದು ಅಂದ್ರು..

ನಾನು 3000 ರೂಪಾಯದ್ದು ತಗೋತೆನೆ..
ಇಲ್ಲಿದ್ದು ಮತ್ತೆ ಸೋಂಕು ಬಂದ್ರೆ ರಗಳೆ ಆದಷ್ಟು ಬೇಗ ಹೊರಗೆ ಹೋಗಬೇಕಪ್ಪ,
ವಿಷಯ ಏನು ಅಂದ್ರೆ..
ಹಸಿವಾಗ್ತಾ ಇದೆ ಒಂದು ಮಸಾಲೆ,ದೋಸೆ ಕಾಯಿ ಚಟ್ನಿ ಹಾಗೇ ಇಡ್ಲಿ ವಡೆ,ಒಂದು ಲೋಟ ಬೋರಮ್ಮನವಿಟಾ ಸಿಕ್ಕಿದ್ರೆ ಸಾಕಾಗಿದೆ ಅಂತ ಸುಮ್ನೆ ನೇರವಾಗಿ ಹೇಳೋ ಹಾಗಿಲ್ಲ ಅಲ್ವಾ..
ಅದಕ್ಕೆ ಈ ರೀತಿ ಡೈಲಾಗ್ ದೋಸೆ ಮಗುಚಿ ಹಾಕಿದ ಹಾಗೆ ಅವರಿಗೆ ಹೇಳಿದ್ದು ಅನ್ನೋದನ್ನ ಹೇಳೋಕೆ ಬಯಸುತ್ತೇನೆ..😁

ನನ್ನ ಹಿಂದೆ ಇದ್ದೆ ನನ್ನ ಸ್ನೇಹಿತರು 500 ರೂಪಾಯಿಯ ಪರೀಕ್ಷೆಗೆ ಕೊಡಿ ಅಂದರು..!

ಆ ವ್ಯಕ್ತಿ ಅವರನ್ನ ಹೇಗೆ ಮೇಲಿಂದ ಕೆಳಗೆ ನೋಡಿದ ಅಂದ್ರೆ ಏನೋ ಅಪರಾಧ ಮಾಡಿ ಬಿಟ್ರು 500ರೂಪಾಯಿ ಪರೀಕ್ಷೆಗೆ ಕೇಳಿ ಅನ್ನುವ ಹಾಗೆ..!!!

ಆದರೂ ಆ ಹಣ ತೆಗೆದು ಕೊಳ್ಳುವ ವ್ಯಕ್ತಿ ಮತ್ತೆ ತನ್ನ ಪ್ರಯತ್ನ ಬಿಡಲಿಲ್ಲ...

ಸಾರ್..
ನನಕೆ ಬೈಯಬೇಡ ನೀನು,4  ರಿಂದ 14 ಗಂಟೆ ಆಗುತ್ತೆ..
ಅಂತ ಮತ್ತೆ ಅದೇ ವಿಚಿತ್ರವಾದ ತಮಿಳು ಮಿಶ್ರಿತ ಹೇಳಿಕೆ ಕೊಟ್ರು..
ಆದ್ರೆ ನನ್ನ ಸ್ನೇಹಿತರು ಪರವಾಗಿಲ್ಲ ಅಂತ ಛಲ ಬಿಡದ ತ್ರಿವಿಕ್ರಮನಾಗಿ ಹಣ ಪಾವತಿ ಮಾಡಿ,ನನ್ನ ನೋಡಿ ಗೆಲುವಿನ ಮುಗುಳು ನಗೆ ಬೀರಿದರು,ನೀವು 3000 ಕೊಟ್ಟು ಪೆದ್ದರಾದ್ರಿ ಅನ್ನೋ ಹಾಗೆ ಇತ್ತು ಅವರ ನಗು...ನಾನು ನೋವಿನಿಂದ, ಭಾರದ ಹೆಜ್ಜೆ ಮುಂದೆ ಇಟ್ಟೆ..

ಸ್ವಲ್ಪ ಮುಂದೆ ಆಧಾರ್ ನಂಬರ್ ತೆಗೆದು ಕೊಂಡು,
ಮೂಗಿನ ಮೂಲಕ ಮೆದುಳಿಗೆ ಹೆಟ್ಟುವ ಒಂದು ಪ್ಯಾಕ್ ನಲ್ಲಿರುವ ಕಡ್ಡಿ ಯನ್ನ ನಮ್ಮ ಬಳಿ ಕೊಟ್ಟರು ಇನ್ನೊಬ್ಬರು "ಅವರಿಗಾ" ಸಿಬ್ಬಂದಿ..

ಸಾರ್ವಜನಿಕ ಕಾರ್ಯಕ್ರಮದಲ್ಲಿ ಒಂದೊಂದು ರೀತಿಯ ಪಾವತಿ ಮಾಡಿದವರಿಗೆ  ಇಂತಿಂತ ಸರತಿ ಸಾಲು ಅಂತಿರುತ್ತಲ್ಲ ಹಾಗೆ 3000 ಲೈನ್ ಇದು ಇಲ್ಲಿ ಹೋಗಿ ಅಂತ ಹೇಳಿ ಕಳುಹಿಸಿದ್ರು,

ಅಡ್ಡ ಗೋಡೆ ಹಳೇ ಸೀರೆ ಮಾಡಿ ಕಟ್ಟಿದ ಜಾಗದಲ್ಲಿ, ಅಲ್ಯಾರೋ ಇದ್ದ ಮಲೆಯಾಳಿ ನರಸಮ್ಮ,
"ನೀವು ಇಲ್ಲಿ ಗೂರಿ",ಅಂತ ಒಂದು ಕೃಶವಾದ ಚೇರ್ ತೋರಿಸಿ,
ಅದು
"ಇಲ್ಲಿ ಗೊಡಿ" ಅಂತ ಕೈಯಲ್ಲಿದ್ದ ಮೂಗುಗೆ ಚುಚ್ಚುವ ಕಡ್ಡಿಯನ್ನ ಕಿತ್ತು ಕೊಂಡು,ಅದರ ಕವರ್ ತೆಗೆದು ಕಡ್ಡಿಯನ್ನ ಮೆದುಳು ವರೆಗೆ ಹಾಕೋಕೆ ಪ್ರಯತ್ನ ಪಟ್ಟು ನನ್ನ ಹತ್ರ ಬೈಸಿ ಕೊಂಡು,ಕೊನೆಗೆ ಕಡ್ಡಿ ಮೆದುಳು ಅಲ್ಲಲ್ಲ ಮೂಗಿನಿಂದ ತೆಗೆದು ಅಲ್ಲೇ ಪಕ್ಕದಲ್ಲಿದ್ದ ಟ್ರೇ ಗೆ ಜಾ0ಟಿ ರೋಡ್ಸ್ ತರ ಗುರಿ ಇಟ್ಟು ಎಸೆದರು..ಅಲ್ಲೇ ಪಕ್ಕದಲ್ಲಿದ್ದ ಟ್ರೇ ಗೆ ಹೋಗಿ ಬಿತ್ತು ಆ ಮೆದುಳು ಕೆರೆಯುವ ಕಡ್ಡಿ..!

ಜೇರ್ ಅಲ್ಲಲ್ಲ ಚೇರ್ ನಿಂದ ಎದ್ದು ಹಿಂದೆ ನೋಡಿದ್ರೆ ನನ್ನ ಸ್ನೇಹಿತರು..!

"ಹೋ..ನಿಮಗೂ ಬಿಟ್ರ ಇಲ್ಲೇ"ಅಂದೆ..!?

"ಹೇ...ಇಲ್ಲ ಮಾರಾಯ್ರೆ..
ನನಗೇ ಭಯ ಆಯ್ತು ಕೊನೆಗೆ ಇವರು 500ರೂಪಾಯಿ ಅಂತ 4 ಗಂಟೆ ಆದ್ರೂ ಫಲಿತಾಂಶ ಕೊಡಲ್ಲ ಅಂತ ಹೇಳಿದ್ರೆ ಕಷ್ಟ ಅಂತ ಅದಕ್ಕೆ ಉಳಿದ 2500 ಹಣ ಪಾವತಿ ಮಾಡಿ 3000 ದ್ದೇ ತಗೊಂಡು ಬಂದೆ" ಅಂತ ಹ್ಯಾಪ್ ಮೋರೆ ಹಾಕೊಂಡು ಹೇಳಿದ್ರೂ..😉

ನಾನೇ 3ಸಾವಿರ ಕೊಟ್ಟು ಪೆದ್ದ ಆದನೇನೋ,500 ನವರಿಗೇ ನಮಗೆ ಒಟ್ಟಿಗೆ ಪಲಿತಾಂಶ ಕೊಡ್ತಾರಾ ಅಂತ,
"ಕೆಲವು" ಹೆಣ್ಣು ಮಕ್ಕಳು 99 ಬಂದಿದ್ರೆ ಪಕ್ಕದವಳಿಗೆ 98 ಅಂಕ ಬಂದಿದೆ ಅಂತ ಹೊಟ್ಟೆ ಕಿಚ್ಚು,ಬೇಜಾರು ಮಾಡಿಕೊಳ್ತಾರಲ್ಲ ಹಾಗೆ ಬೇಜಾರಲ್ಲಿ ಇದ್ದವನಿಗೆ..
ಅವರ ಹ್ಯಾಪ್ ಮೋರೆ ನೋಡಿ ಸಮಾಧಾನಾ ಆಯ್ತು ಅಂತ ಸತ್ಯ ಹೇಳ್ತಿನಪ್ಪ..!
😂

ಕೊನೆಗೆ ಫಲಿತಾಂಶಕ್ಕಾಗಿ (ಎಸ್ ಎಸ್ ಎಲ್ ಸಿ ದೂ ಕೂಡ ಹೀಗೆಲ್ಲಾ ಕಾಯುತ್ತಾ ಕುಳಿತಿರಲಿಲ್ಲ ಬಿಡಿ😂)
ಕಾಯುತ್ತಾ ಕೂರುವ ಸರದಿ ನಮ್ಮದು..!

ಅಲ್ಲೇ ಇದ್ದ ಸಹಾಯಕ ಸಿಬ್ಬಂದಿ ಗವಾಕ್ಷಿ  ಮುಂದೆ ಜನರು ಕೊರೊನಾ ಅಂದ್ರೆ ಏನು ಅಂತಲೇ ತಲೆ ಕೆಡಿಸಿ ಕೊಳ್ಳದೇ ಈ ಭಯಂಕರ "ಟಾಪ್" ಬರೋರು ಶಾಲೆಲಿ ಫಲಿತಾಂಶ ನೋಡೋಕೆ ಫಲಿತಾಂಶ ಹಲಗೆ ಹತ್ರ, ನುಗ್ಗಿ ನುಗ್ಗಿ,ಬಗ್ಗಿ ಬಗ್ಗಿ ಅತಿ ನಟನೆ ಮಾಡ್ತಾ ನೋಡ್ತಾರಲ್ಲ ಹಾಗೆ ಮುತ್ತಿಗೆ ಹಾಕಿ ಕೇಳ್ತಾ ಇದ್ರು..!

ಅರ್ಧ ಗಂಟೆ ಆಯ್ತು 45 ನಿಮಿಷ ಆಯ್ತು ಒಂದು ಗಂಟೆ ಆದ್ರೂ ಫಲಿತಾಂಶ ಬರಲೇ ಇಲ್ಲ..

ಅಲ್ಲಲ್ಲಿ ಹೋರಾಟಗಾರರು ಎದೆ ಸೆಟೆದು ನಿಂತು ಎಲ್ಲಿ ನನ್ನ 3000ಸಾವಿರ,ವಾಟ್ ದ ಡಕ್ ಈಸ್ ದಿಸ್,ನಾವು 500 ಕೊಡ್ತಾ ಇದ್ವಿ ಇಷ್ಟು ನಿಧಾನ ಅಂತಾಗಿದ್ರೆ,2500 ಹೆಚ್ಚು ಕೊಟ್ಟ ಹಾಗಾಯ್ತು ಅಂತ ತರ ತರದ ಬೆಂಕಿ ಉಗಳೋಕೆ  ಶುರುವಾಯ್ತು..!

ಇದೆಲ್ಲ ಗಲಾಟೆ ಮಧ್ಯ,
ಇಷ್ಟೆಲ್ಲಾ ಹಣ RT-PCR ಗೆ ತಗೊಂಡು ಅರ್ಧ ಗಂಟೆ ಗೆ ಫಲಿತಾಂಶ ಅನ್ನೋದು,
"ಅವರಿಗಾ"!?
"ಇವರಿಗಾ"!?
ಯಾರಿಗ!? ಅಂತ
"Auriga Lab"ಬಗ್ಗೆ ಗೂಗಲ್ ಮಾಡಿ ನೋಡಿದ್ರೆ ಬಹಳ ಬಿರುದು ಬಾವಲಿಗಳು,ಕೇಸ್ಗಳು ಇದ್ದಿದ್ದು ಕಂಡು ಬಂತು..!

(ನೀವು ಅದರ ಬಗ್ಗೆ ಹುಡುಕಿ ನೋಡಿ ಆಸಕ್ತಿ ಇದ್ದರೆ!)

ಕೊನೆಗೆ ಫಲಿತಾಂಶ ನೋಡೋಕೆ ಅಂತ ಇಟ್ಟಿದ್ದ ಒಂದು ಸಣ್ಣ ಪರದೆ ಕೂಡ ಕೊನೆ ಉಸಿರು ಎಳೆಯಿತು ಅಂತ ಹಲವರು ಉಘ್ರ ರೂಪ ತಾಳಿದ್ರು..

ಅದರ ಮಧ್ಯ ಯಾರೋ ಕನ್ನಡಿಗರು ಒಂದು ವೆಬ್ ಸೈಟ್ ಕೊಂಡಿ ಕೊಟ್ಟು ಅದರಲ್ಲಿ ಫಲಿತಾಂಶ ಸಿಗುತ್ತಾ ನೋಡಿ ಅಂದ್ರು..
25 ಸರಿ ನಮ್ಮ ಫೋನ್ ನಂಬರ್ ಹೊಡೆದು ಬುಕಿಂಗ್ ನಂಬರ್ ಹೊಡೆದಮೇಲೆ ನನ್ನ ಫಲಿತಾಂಶ ಬಂದೇ ಬಿಡ್ತು..
ಕೊನೆಗೂ ಪಾಸಾಗಿದ್ದೆ ಅದೇ ಋಣಾತ್ಮಕ ಫಲಿತಾಂಶ!...😂

ಆದರೆ ನನ್ನ ಸ್ನೇಹಿತರು 500 ಕೊಡೋಕೆ ಹೋಗಿ ಕೊನೆಗೆ 3ಕ್ಕೆ ತಿರುಗಿದ್ದವರು ಆಗ ರುದ್ರ ತಾಂಡವ ಆಡೋಕೆ ಶುರು ಮಾಡಿದ್ರು..!

ಅವರ ಬಾಯಲ್ಲಿ @$#%ನ್,@#%$^ನ್,ಇನ್ನೇನೋ ಬರೋಕೆ ಶುರು ಆಗಿದ್ರಲ್ಲಿತ್ತು..
ಅದನ್ನ ಗಮನಿಸಿದ ಒಬ್ಬಳು ಹುಡುಗಿ ಸಿಬ್ಬಂದಿ ಬಂದು ಅವರ ಬುಕಿಂಗ್ ನಂಬರ್ ತೆಗೆದು ಕೊಂಡು,
ನೋಡ್ತೇನೆ ಸಾರ್ ಅಂತ ಹೋದಳು..
ಅವಳು ಫಲಿತಾಂಶ ಕೇಳೋಕೆ,ಕೊರೊನಾ ಜನ್ಮ ಸ್ಥಳ ಚೀನಾದ ವುವಾನ್ ಗೆ ಹೋಗಿದ್ದಾ ಏನೋ..ನಂತರ ಅವಳ ವಿಳಾಸ,ಮುಖದರ್ಶನವೇ ಇಲ್ಲ..!.

ಕೊನೆಗೆ ಅಲ್ಲೇ ಇದ್ದ ಸಹಾಯ ಗವಾಕ್ಷಿ ಸಿಬ್ಬಂದಿ ಹರಸಾಹಸ ಪಟ್ಟು,
ಕೆಲವೇ ಕ್ಷಣದಲ್ಲಿ ಅಪ್ ಡೇಟ್ ಮಾಡಿ ಕೊಟ್ರು,ಇವರ ಫಲಿತಾಂಶ ಬಂದೇ ಬಿಡ್ತಪ್ಪ..!🤪

ಫಲಿತಾಂಶ ಬಂದಿದ್ದು ಸುಮಾರು 1.45 ಗಂಟೆ ನಂತರ...

3000 ರೂಪಾಯಿ ಪ್ರತಿಯೊಬ್ಬರ ಬಳಿ ನುಣ್ಣಗೆ ಬೋಳಿಸಿದ್ದು ಯಾಕೆ ಅಂತ,
ದಟ್ಟ ಕೂದಲು ಇರುವ ಆರೋಗ್ಯ ಸಚಿವರ ಹತ್ರ
ಅವರಿಗಾ,ಇವರಿಗಾ ಕೇಳೋಕೇ ಹೋಗಿಲ್ಲಪ್ಪ..!

ಮುಖ ಗವಸು ಹಾಕದ,
ಕೊರೊನಾ ನಿಯಮ ಪಾಲಿಸದ,ಸಾಮಾನ್ಯ ನಾಗರೀಕನದ್ದು ಘೋರ ಅಪರಾಧ ಅಂತ ಸರ್ಕಾರ ಯಾವುದೇ ಮುಲಾಜು ನೋಡದೇ ಕ್ರಮ ಕೈಗೊಂಡು ಹಣವನ್ನ ಕಿತ್ತು ಕೊಂಡು,ಆ ಹಣವನ್ನ
ಕರ್ನಾಟಕ ರಾಜ್ಯದ ಜನತೆಯ ಸರ್ವತೋಮುಖ ಶ್ರೇಯೋಭಿವೃದ್ಧಿಗೆ ಮಾತ್ರ ಅಂತ ನಮಗೆ ನಿಮಗೆಲ್ಲಾ ಅರಿವಿದೆಯಲ್ಲವೇ...!!
😂
ಜೈ ಅವರಿಗಾ,ಇವರಿಗಾ,ಯಾರುಯಾರಿಗಾ?!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ