ಶುಕ್ರವಾರ, ಜೂನ್ 24, 2022

ಕಾಲ ಕೆಟ್ಟೋಯ್ತು,Anne Lister

ಕಾಲ ಕೆಟ್ಟೋಯ್ತು...
ಶೀ... ಇಶೀ...
ಹುಡ್ಗನ್ನ ಹುಡುಗನೆ ಮದುವೆ ಆಗದಂತೆ..
ಹುಡ್ಗಿನ ಹುಡ್ಗಿನೇ ಮದುವೆ ಆಗೋದಂತೆ
ಅದೇನು ಕಾಲ ಬಂತಪ್ಪಾ,ನಮ್ಮ ಮಗ/ಮಗಳು ಹುಡುಗಿ/ಹುಡುಗನ್ನೇ ಲವ್ ಮಾಡಿ ಮನೆಗೆ ಕರೆದು ಕೊಂಡು ಬರಲ್ಲಪ್ಪ ಅಂತ,
LGBT,(Lesbian,Gay,Bisexual,Transgender)ಸಂಬಂಧಗಳ ಸುದ್ದಿ,ಪೇಪರ್ ಹಾಗೂ ಸುದ್ದಿವಾಹಿನಿಗಳಲ್ಲಿ ಕೇಳಿ,ನೋಡಿ, ಹಲವರು ಗೊಣಗೋದು ನೋಡಿರ್ತೀರಿ..!

ಇದರ ಬಗ್ಗೆ ಹತ್ತು ಹಲವು ತಮಾಷೆಗಳನ್ನ ಚಲನ ಚಿತ್ರ ಹಾಗೂ ಇನ್ನಿತರೆ ಕಡೆ ಗಮನಿಸಿರ್ತಿರಿ...

ಇದು ಇತ್ತೀಚಿನ ದಿನದಲ್ಲಿಯೇ ಹಲವರಿಗೆ ಹೀಗನಿಸುವಾಗ..

ಇನ್ನು 1804 ನೇ ಇಸವಿಯಲ್ಲಿ ನಡೆದದ್ದು ಕೇಳಿದರೆ ಹೇಗನಿಸ ಬಹುದು!?

ಹೌದು..
ಸುಮಾರು 1791 ರಲ್ಲಿ Anne Lister,ವೆಸ್ಟ್ ಯಾರ್ಕ್ ಶೈರ್,ಹ್ಯಾಲಿಪ್ಯಾಕ್ಸ್ ಎಂಬ ಉತ್ತರ ಇಂಗ್ಲೆಂಡ್ ನ ಒಂದು ಸಣ್ಣ ನಗರದಲ್ಲಿ ಜೇರಿಮಿ ಲಿಸ್ಟರ್ ಎಂಬುವ ಬ್ರಿಟಿಷ್ ಸೈನ್ಯದಲ್ಲಿ ಕೆಲಸ ಮಾಡುತ್ತಾ ಇದ್ದ ವ್ಯಕ್ತಿಗೆ ಎರಡನೇ ಹೆಣ್ಣು ಮಗುವಾಗಿ ಜನ್ಮತಾಳುತ್ತಾರೆ..

ನಂತರದ ದಿನಗಳಲ್ಲಿ ಕಲಿಕೆಗಾಗಿ ಯಾರ್ಕ್ ಎಂಬ ನಗರಕ್ಕೆ ಹೋಗುತ್ತಾರೆ..
ಅಲ್ಲಿ ಮೊಟ್ಟ ಮೊದಲು 1804 ರಲ್ಲಿ ತಮ್ಮ ಪ್ರಿಯತಮೆ ಎಲಿಸಾ ರೇನ್ ಎಂಬುವವರನ್ನ ಸಂಧಿಸುತ್ತಾರೆ..
ಎಲಿಸಾ ಆಂಗ್ಲೋ ಇಂಡಿಯನ್...!
ಅವರ ತಂದೆ,ಈಸ್ಟ್ ಇಂಡಿಯಾ ಕಂಪನಿಯ ಸಮಯದಲ್ಲಿ, ಮದ್ರಾಸ್ ನಲ್ಲಿ ಸರ್ಜನ್ ಆಗಿ ಕಾರ್ಯ ನಿರ್ವಹಿಸಿರುತ್ತಾರೆ..
ಕೆಲವು ವರ್ಷದ ನಂತರ ದೊಡ್ಡವರ ಹಾಗೆ ಜೊತೆಗೆ ಇದ್ದು ಸಂಸಾರ ಮಾಡೋಣ ಎಂದು ಹೇಳಿದ್ದರಂತೆ,ಕಾರಣ Anne Lister,Isabella,Mariana ಇನ್ನಿತರ ಮಹಿಳೆಯರನ್ನ ಸಂಗಾತಿಯಾಗಿ ಮಾಡಿ ಕೊಂಡಿದ್ದರು..
ಆದರೆ anne ಇದಕ್ಕೆ ಒಪ್ಪದೆ ಬೇರೆಯಾದರು..
ಅದರ ಪರಿಣಾಮ ಎಲಿಸಾ ಮಾನಸಿಕ ಆರೋಗ್ಯ ಕೇಂದ್ರ ಕ್ಕೆ ಸೇರಬೇಕಾಯ್ತು..
ನಂತರದ ದಿನಗಳಲ್ಲಿ Anne lister ಚಿಕ್ಕಪ್ಪನಿಗೆ ಸೇರಿದ್ದ Shibden ಎಸ್ಟೇಟ್ ಅವರ ಮರಣಾನಂತರ,ತಂದೆಗೆ ಬಂದು ನಂತರದ ದಿನ ಸಂಪೂರ್ಣ ಆಸ್ತಿ,ಹಣ ಇವರಿಗೆ ಸಿಗುತ್ತದೆ..

Anne ತನಗೆ ಬಂದ ಹಣದಲ್ಲಿ ಎಸ್ಟೇಟ್ ಅಭಿವೃದ್ದಿ ಮಾಡಿ,ಹಣವನ್ನ ರೈಲ್ವೆ ಹಾಗೂ ಕೆನಾಲ್ ಇನ್ನಿತರೆ ಕಡೆ ಇನ್ವೆಸ್ಟ್ ಕೂಡ ಮಾಡಿ,ತಮ್ಮ ಅಂತಸ್ತು ಹೆಚ್ಚಿಸಿ ಕೊಳ್ತಾರೆ...ದೊಡ್ಡ ಜಮೀನು ದಾರಳು ಆಗುತ್ತಾರೆ..

Anne ಯಾವಾಗಲೂ ಪುರುಷರ ರೀತಿಯೇ ಇರಲು ಇಷ್ಟ ಪಡುತ್ತಾ ಇದ್ದರಂತೆ,ಕಪ್ಪು ಗೌನು(ಆಗ ಪುರುಷರ ಪೋಷಾಕು)ತೊಟ್ಟು ಕೊಂಡು ಸಭೆ ಸಮಾರಂಭಕ್ಕೆ ಆಗಮಿಸೋದು ಅವರ ಅಭ್ಯಾಸವಂತೆ..
ಸುಮಾರು 2 ದಶಕಗಳ ಕಾಲ ಮರ್ರಿಯಾನ ಲಾಟನ್ ಎಂಬ ಪ್ರಿಯತಮೆ ಜೊತೆ ಜೀವನ ಮಾಡಿದ್ದರಂತೆ ಇವರು..

Shibden Estate ನ್ನ ಸಂಪೂರ್ಣ ಅವರದ್ದೇ ಶೈಲಿಯಲ್ಲಿ ಅಭಿವೃದ್ಧಿ ಮಾಡಿದ ಮಹಿಳೆ ಈಕೆ..
ಅಂದ ಹಾಗೆ ಮೊಟ್ಟಮೊದಲು ಮದುವೆಯಾದ ಲೆಸ್ಬಿಯನ್ ಬ್ರಿಟನ್ ಮಹಿಳೆ ಈಕೆ ಎಂಬ ಮಾಹಿತಿಯೂ ಇದೆ..!

ಇಂತಿಪ್ಪ Anne,49 ವರ್ಷವಿದ್ದಾಗ (22 ಸೆಪ್ಟಂಬರ್ 1840)ಜಾರ್ಜಿಯಾ ದಲ್ಲಿ ಮರಣ ಹೊಂದುತ್ತಾರೆ..
ಇವರ ಮರಣದ ನಂತರ
ಸ್ಥಳೀಯ ಆಡಳಿತ ಈ ಸುಂದರವಾದ ಜಾಗವನ್ನು ಅಚ್ಚುಕಟ್ಟಾಗಿ ಇದನ್ನ ನಿರ್ವಹಣೆ ಮಾಡುತ್ತಾ ಇದೆ..

ಈಗ ಅವರ ಜಮೀನು Shibden Park ಆಗಿ ಬದಲಾಗಿದೆ..

ಸಣ್ಣ ಕೆರೆ ಅದರಲ್ಲಿ ಬೋಟಿಂಗ್ ವ್ಯವಸ್ಥೆ,ಮಿನಿಯೇಚರ್ ರೈಲ್,ಹಾಗೂ ಮಕ್ಕಳ ಆಟದ ಸ್ಥಳ,ರನಿಂಗ್ ಟ್ರಾಕ್,ಕೆರೆಯಲ್ಲಿ ಒಂದಷ್ಟು ಹಂಸ,ಬಾತು ಕೋಳಿ,ಕೆನಾಡಿಯನ್ ಗೂಸ್,Shibden Hall(ಅವರ ವಾಸ ಸ್ಥಾನ ವಾಗಿತ್ತು)ಎಲ್ಲವೂ ಇರುವ ಈ ಜಾಗ ಬರೋಬ್ಬರಿ 10 ಎಕರೆ ಇದೆ..
ಶಿಬ್ಡನ್ ಹಾಲ್ ವಸ್ತು ಪ್ರದರ್ಶನ ಕೇಂದ್ರವಾಗಿ ಬದಲಾಗಿದೆ..ಸಾರ್ವಜನಿಕರಿಗೆ ಪ್ರವೇಶಕ್ಕೆ ಅವಕಾಶವೂ ಇದೆ..
ಹಾಗೂ
ಆಗಾಗ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪಾರ್ಕ್ ನಲ್ಲಿ ನಡೆಯುವುದು ಇದೆ..

ಪಾರ್ಕ್ ಮಧ್ಯ ಭಾಗದಲ್ಲಿ LGBT ಯ ದೊಡ್ಡ ದ್ವಜವನ್ನ ಕೂಡ ನಡೆಲಾಗಿದೆ..ಅದು ಯಾವಾಗಲೂ ಹಾರಾಡುತ್ತಾ ಇರುತ್ತದೆ..!

ವಾರದ ಕೊನೆಯಲ್ಲಿ ಮಕ್ಕಳು ಹಾಗೂ ಹಿರಿಯರ ನೆಚ್ಚಿನ ಪಿಕ್ನಿಕ್ ತಾಣ ಈ ಶಿಬ್ಡನ್ ಪಾರ್ಕ್..

ಕೊಸರು:- ಈಗಲೂ ಯುಕೆಯಲ್ಲಿ, ಇಬ್ಬರು ಹುಡುಗಿಯರು ಕೈ ಕೈ ಹಿಡಿದು ನಡೆದು ಹೋದರೆ..
ಇಬ್ಬರು ಹುಡ್ಗರು ಒಟ್ಟಿಗೆ ಬೀಡಿ, ಸಿಗರೇಟ್ ಸೇಯ್ತಾ ನಿಂತಿದ್ದರೆ ಅದಕ್ಕೆ ಅವರು "ಆ" ತರ ಅಂತ ಹೇಳಲ್ಲ ಜನ..

ಯಾರೋ ನಂಬರ್69 ಬೀಡಿ ಗೋಡೆಗೆ ಕಾಲು ಕೊಟ್ಟು ಎಳಿಯುತ್ತಾರೆ ಅಂತಾದ್ರೆ..
ಊರಲ್ಲಿ ಇದ್ದವರು ಎಲ್ಲಾ ಅದೇ ಮಾಡ್ತಾರೆ ಅಂತ ಆ ವ್ಯಕ್ತಿ ಹೇಳೋಕಾಗಲ್ಲ ಅಲ್ವಾ..!ಕೆಲವರು ಹೇಳಿದಂತೆ..
🙏

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ