ಬುಧವಾರ, ಜೂನ್ 29, 2022

HF kathe

ಒಮ್ಮೆ ಯಾವುದೋ ವೀಡಿಯೊ ದಲ್ಲಿ ನೋಡಿದ್ದ ನೆನಪು..

ವಿದೇಶಿ ಯುವತಿ ಭಾರತಕ್ಕೆ ಪ್ರವಾಸ ಬಂದವರಿಗೆ ಯಾರೋ ಪ್ರಶ್ನಿಸಿದ್ದರು..

ನೀವು ಭಾರತದಿಂದ ಏನು ತೆಗೆದು ಕೊಂಡು ಹೋಗೋಕೆ ಇಷ್ಟ ಪಡ್ತೀರಿ ಅನ್ನುವ ಹಾಗೆ ಏನೋ ಪ್ರಶ್ನೆ ಇತ್ತು..!?

ಅದಕ್ಕೆ ಯುವತಿ H.F(Health faucet)/Jet spray,ಶೌಚಾಲಯದಲ್ಲಿ I.W.C(ಇಂಡಿಯನ್ ವಾಟರ್ ಕ್ಲಾ ಸೆಟ್ ಕೆಲವು ಕಡೆ ಮಾತ್ರ!!)
E.W.C(European Water Closet/ ಕಾಮೋಡ್ ಪಕ್ಕ ಇಟ್ಟಿರುವ ನೀರು ಸಿಂಪಡಣೆ ಮಾಡುವ ಪೈಪಿಗೆ ಅಳವಡಿಸಿರುವ ನಳ)ಎಂದಿದ್ದರಂತೆ!....

ಯುರೋಪ್ ಹಾಗೂ ಅಮೇರಿಕಾ ಇನ್ನಿತರೆ "ಅಭಿವೃದ್ಧಿ ಶೀಲ"ರಾಷ್ಟ್ರಗಳಲ್ಲಿ..
ಶೌಚಾಲಯಗಳಲ್ಲಿ Health Faucet (ಅದೇ ಜೆಟ್ ಸ್ಪ್ರೇ) ವ್ಯವಸ್ಥೆ ಹೆಚ್ಚಿನ ಕಡೆ ಇರುವುದಿಲ್ಲ..!

ಹೆಸರೇ ಹೇಳುವಂತೆ IWC(Indian Water closet)ಲಭ್ಯವೇ ಇರುವುದಿಲ್ಲ,(ಅದು ನಮ್ಮ ದೇಶದಲ್ಲೇ ಹೆಚ್ಚು ಬಳಕೆ ಆಗೋದು,ಹೈಜನಿಕ್ ಕೂಡ,ಬಳಸುವವರಿಗೂ ಮಾನಸಿಕ ನೆಮ್ಮದಿ,ಸಣ್ಣ ಸಣ್ಣ ಇನ್ಪೇಕ್ಷನ್ ಆಗೋದು ಕಡಿಮೆ,ಆರೋಗ್ಯಕ್ಕೂ ಅಷ್ಟು ಸಮಸ್ಯೆ ಆಗಲ್ಲ..ಬಿಡಿ..)
ಅಥವಾ ಪಕ್ಕದಲ್ಲಿ ಒಂದು Tap(ನಳ/ನಲ್ಲಿ)ಅದರ ಕೆಳಗೆ ಹಳೆಯ ಪೈಂಟ್ ಬಕೆಟ್,ತಗಡಿನ ಡಬ್ಬ ಅಥವಾ ಓಬಿ ರಾಯನ ಕಾಲದ ತಂಬಿಗೆ ಬಕೆಟ್,ಜಗ್,ಹೊಸಾ ಮಗ್ ಇರಲ್ಲ..!

ಅಸಲಿಗೆ ಹೆಚ್ಚಿನ ಮನೆಗಳಲ್ಲಿ ಹೆಚ್ಚಿನ ಶೌಚಾಲಯ,ಸ್ನಾನ ಗೃಹ ಒಟ್ಟಿಗೆ ಇರುತ್ತೆ..
ಶೌಚಾಲಯದ ಪ್ರದೇಶ ಒಣ ಪ್ರದೇಶ(wet area)ಇರುತ್ತೆ..ಹೊರಗೆ ನೀರು ಚೆಲ್ಲುವ ಹಾಗಿರಲ್ಲ..ಹಾಗಾಗಿ ನೀರು ಬಳಕೆ ಮಾಡೋದು ಸ್ವಲ್ಪ ಕಷ್ಟವೇ...

ವಿದೇಶದಲ್ಲಿರುವ ಹೆಚ್ಚಿನ ಭಾರತೀಯರ ಮನೆಯ ಶೌಚ ಗ್ರಹದಲ್ಲಿನ,
ಪ್ಲಷಿಂಗ್ ಟ್ಯಾ0ಕ್ ಮೇಲೆ ಅಥವಾ ಹ್ಯಾನ್ಡ್ ವಾಶ್ ಬಳಿ ಒಂದು ಸಣ್ಣ ಮೊಸರಿನ ಸಣ್ಣ ಡಬ್ಬ ಖಾಯಂ ಆಸೀನವಾಗಿರುತ್ತೆ..

ನಮ್ಮವರು ಮನೆಗೆ ಬಂದರೆ ಅವರಿಗೆ ಅರ್ಥವಾಗಿಬಿಡುತ್ತೆ..
ಓಹ್ ಕೆಲಸ ಮುಗಿದ ಮೇಲೆ ಅಂ* ಸ್ವಚ್ಛ ಮಾಡೋಕೆ ಇಟ್ಟಿದ್ದಾರೆ ಅಂತ..

ಅದೇ ಇಲ್ಲಿಯವರೆ ಬಂದರೆ..
ಯೋಗರ್ಟ್(ಮೊಸರು) ಡಬ್ಬ ಬಿನ್ ಗೆ ಹಾಕೋದು ಬಿಟ್ಟು ಇಲ್ಯಾಕ್ ಇಟ್ಟಿದ್ದಾರೆ ಅಂತ ತಲೆ ಕೆರೆದುಕೊಳ್ಳೋದು ಹಾಗೂ ಪ್ರಶ್ನೆ ಮಾಡೋದು ಬಹಳ ಸಾಮಾನ್ಯ..!
ಕಾರಣ
ಅವರಿಗೆ ಹೆಚ್ಚಿನವರಿಗೆ ಶೌಚದ ನಂತರ ನೀರು ಬಳಸುವ ಅಭ್ಯಾಸ ಇರಲ್ಲ..!

ಟಿಶ್ಯು ಪೇಪರ್/ಟಾಯ್ಲೆಟ್ ಪೇಪರ್/ಶೌಚ ಕಾಗದ
ಬಳಸೋದು ಬಹಳ ಸಾಮಾನ್ಯ ಅಭ್ಯಾಸ..

ಸಾರ್ವಜನಿಕ ಶೌಚಾಲಯಕ್ಕೆ ಹೋದರಂತೂ ಬಿಡಿ,
ಭಾರತೀಯರಿಗೆ ಬಹಳ ಕಷ್ಟ ಹಾಗೂ ಹಿಂಸೆ..
ಹ್ಯಾ0ಡ್ ವಾಶ್ ಬೇರೆ ಹಾಗೂ ಮೂತ್ರ ಮಾಡುವ ಸ್ಥಳ ಹಾಗೂ ಶೌಚಾಲಯ ಬೇರೆ ಬೇರೆ ಇರೋದು ಸಾಮಾನ್ಯ,

ಶೌಚಾಲಯದಲ್ಲಿ ಪ್ಲಶ್ ಟ್ಯಾ0ಕ್ ಹೊರಗೆ ಇದ್ದರೆ ಪ್ಲಶ್ ಟ್ಯಾ0ಕ್ ಕ್ಯಾಪ್ ತೆಗೆದು ನೀರಾದ್ರು ಬಳಸ ಬಹುದು,
ಕನ್ಸೀಲ್ಡ್ ಪ್ಲಶ್ ವ್ಯವಸ್ಥೆ ಇದ್ದರಂತೂ(ಗೋಡೆಯ ಒಳಗೆ ಪೈಪ್ ಅಳವಡಿಸಿ ಕಾಮೋಡ್ ಗೆ ಪ್ಲಶ್ ಆಗುವ ವ್ಯವಸ್ಥೆ) ಮುಗಿಯಿತು ಕತೆ,ನೀರು ನಿಮ್ಮ ಕೈಗೆ ಸಿಗಲ್ಲ,ಟ್ಯಾಪ್/ನಲ್ಲಿ/ನಳ ಇರುವುದಿಲ್ಲ,
ಶೌಚಕಾಗದವೇ ಗತಿ,ಮುಂಜಾಗ್ರತೆಯಿದ್ದು ನೀರಿನ ಬಾಟಲ್ ಬ್ಯಾಗ್ ನಲ್ಲಿದ್ದರೆ ನಮ್ಮ ಪುಣ್ಯ ಬಚಾವ್ ಅಷ್ಟೇ..
😂

ಇತ್ತೀಚೆಗೆ
ಸಾಂಕ್ರಾಮಿಕ ರೋಗದ  ಸಮಯದಲ್ಲಿ ಸೂಪರ್ ಸ್ಟೋರ್ ಗಳಲ್ಲಿ ಶೌಚ ಕಾಗದಕ್ಕಾಗಿ ಗಲಾಟೆಗಳು ನಡೆದದ್ದನ್ನ ಸ್ಮರಿಸಬಹುದು..!ಆಹಾರ ಪದಾರ್ಥಕ್ಕೆ ಯಾವ ಗಲಾಟೆ ನಡೆದ ಉದಾಹರಣೆ ಇಲ್ಲ ಅನಿಸುತ್ತೆ..😂

ಬಹಳ ಹಿಂದೆ ಅಂದರೆ 1800 ರಲ್ಲಿ ಸಮಯದಲ್ಲಿ ಶೌಚದ ನಂತರ ಹುಲ್ಲು,ಒಣಹುಲ್ಲು,ಕಲ್ಲು,ಮರದ ತುಂಡು,ಕೇಬಲ್ ಗಳನ್ನ ಬಳಸಿ ಸ್ವಚ್ಛ ಗೊಳಿಸೋದು ಬಹಳ ಸಾಮಾನ್ಯವಿತ್ತಂತೆ..
ಇದರಿಂದ ಹತ್ತು ಹಲವು ಸಮಸ್ಯೆ ಆಗಿದ್ದೂ ಇದೆಯಂತೆ..
ರಾಯಲ್ ಪ್ಯಾಮಿಲಿಗೆ ಸ್ವಚ್ಛ ಮಾಡೋಕೆ ಸೇವಕರು ಇರುತ್ತಿದ್ದರಂತೆ...ಅದು ಬೇರೆ ಬಿಡಿ😂

ನಂತರ 1875ರಲ್ಲಿ ಮೊಟ್ಟ ಮೊದಲು ಜೋಸೆಫ್ ಗಯ್ಯಟ್ಟಿ ಎಂಬ ಅಮೆರಿಕಾದ ನ್ಯೂಯಾರ್ಕ್ ಮೂಲದ ವ್ಯಕ್ತಿ ಕಮರ್ಷಿಯಲ್ ಶೌಚಕಾಗದ ಪೊಟ್ಟಣ 500 ನಂಬರ್ ನಲ್ಲಿ 50 ಸೆಂಟ್ ಗೆ ಮಾರಾಟ ಮಾಡಲು ಪ್ರಾರಂಭಿಸಿದರಂತೆ,
ಇದರ ಮೊದಲು ಶೌಚಕಾಗದ ಬಳಕೆಯಲ್ಲಿ ಇತ್ತು ಎಂದೂ ಹೇಳಲಾಗಿದೆ ಹಾಗೂ ಕೆಲವು ಶೌಚ ಕಾಗದವಲ್ಲದ,ಹಳೆಯ ವೃತ್ತ ಪತ್ರಿಕೆಯ ಬಳಕೆ ಮಾಡುತ್ತಾ ಇದ್ದವರು ಇದ್ದರಂತೆ ಅದರಿಂದ ಸಮಸ್ಯೆಗಳು ಆಗಿತ್ತು ಎನ್ನಲಾಗಿದೆ..

ನಂತರದ ದಿನಗಳಲ್ಲಿ ಶೌಚ ಕಾಗದ,ಟಿಶ್ಯು ಪೇಪರ್ ಬಳಕೆ ಸಾಮಾನ್ಯವಾಯಿತು,ಹತ್ತು ಹಲವು ಉತ್ಪಾದನಾ ಕೈಗಾರಿಕೆ ಉದ್ಯಮಿಗಳು ಇದರ ತಯಾರಿಕೆಯಲ್ಲಿ ತೊಡಗಿದವು,
ಈಗ ಶೌಚ ಕಾಗದದಲ್ಲೂ ನಾನಾ ದರದ, ವಿಧಗಳಲ್ಲೂ ಲಭ್ಯವಿದೇ..
ಆದರೆ ಹೆಚ್ಚಿನ ಭಾರತೀಯರಿಗೆ
ಮೊಸರು ಡಬ್ಬದ ಮುಂದೆ ಅದೆಲ್ಲಾ ನತಿಂಗ್ ಯಾ....!😂


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ