Mother's Day....
ಅಮೇರಿಕಾ ತಾಯಂದಿರ ದಿನ,
ಇತ್ತೀಚಿನ ವರ್ಷದಲ್ಲಿ ವಿಶ್ವ ತಾಯಂದಿರ ದಿನವಾಗಿರುವ
ಈ ದಿನವನ್ನ
1864ರಲ್ಲಿ ಅಮೆರಿಕಾದ ವೆಬ್ಸ್ಟರ್,ವೆಸ್ಟ್ ವರ್ಜಿನಿಯಾ ಎಂಬಲ್ಲಿ ಜನಿಸಿದ,
ಅನಾ ಮರಿಯಾ ಜಾರ್ವಿಸ್
(Anna maria Jarvis)ಎಂಬುವವರು ಮೊಟ್ಟಮೊದಲು,ತಾಯಂದಿರ ದಿನ ಆಚರಣೆಗೆ ತಂದರು..!
ಇವರ ತಾಯಿ ಆನ್ ಜಾರ್ವಿಸ್(Ann Jarvis),ಸಾಮಾಜಿಕ ಕಾರ್ಯಕರ್ತೆಯಾಗಿ,ಅಂಡ್ರ್ಯುಸ್ ಮೆತಾಡಿಸ್ಟ್ ಚರ್ಚ್ ನಲ್ಲಿ ತಾಯಂದಿರ ಕ್ಲಬ್ ಮಾಡಿ ಕೊಂಡು ಅಲ್ಲೇ ಸೇವೆ ಸಲ್ಲಿಸುತ್ತಾ ಇದ್ದರಂತೆ,ಇವರಿಂದ ಪ್ರೇರೇಪಿತರಾದ,ಅನಾ ಮರಿಯಾ ತನ್ನ ವಿದ್ಯಾಭ್ಯಾಸ ಮುಗಿಸಿ ಪಬ್ಲಿಕ್ ಸ್ಕೂಲ್ ನಲ್ಲಿ ಕೆಲಸ ಮಾಡುತ್ತಾ ತನ್ನ ತಾಯಿಗೆ ಚರ್ಚ್ ಕೆಲಸದಲ್ಲಿ ಸಹಾಯ ಮಾಡಿಕೊಂಡು ಜೀವನ ನಡೆಸುತ್ತಾ ಇದ್ದರಂತೆ..
9 ಮೇ 1905 ರಲ್ಲಿ ಪಿಲಡೆಲ್ಪಿಯಾ ದಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಅನಾ ರ ತಾಯಿ ಕೊನೆ ಉಸಿರು ಎಳೆಯುತ್ತಾರೆ...
ಇದಾದ
ಮೂರುವರ್ಷದ ನಂತರ 10 ಮೇ 1908 ರಲ್ಲಿ ತನ್ನ ತಾಯಿಯ ಆಸೆಯಂತೆ ಅವರ ಸ್ಮರಣೆ ಹಾಗೂ ಎಲ್ಲಾ ಅಂಡ್ರ್ಯುಸ್ ಮೆತಾಡಿಸ್ಟ್ ಚರ್ಚ್ ನ ತಾಯಂದಿರ ಗೌರವ ಸಮರ್ಪಣೆ ಕಾರ್ಯಕ್ರಮ ಮಾಡಿದ್ದರಂತೆ..
ಇಂದಿಗೂ ಅಂತಾರಾಷ್ಟ್ರೀಯ ತಾಯಂದಿರ ದಿನದ ದೇಗುಲ,ಗ್ರಾಪ್ಟನ್,ವೆಸ್ಟ್ ವರ್ಜಿನಿಯಾದಲ್ಲಿದೆ ಹಾಗೂ ಮೊಟ್ಟ ಮೊದಲು ಇದೇ ಜಾಗದಲ್ಲಿ ಅಧಿಕೃತ ವಾಗಿ ತಾಯಂದಿರ ದಿನ ಆಚರಿಸಿದ್ದು ಎನ್ನಲಾಗಿದೆ..!
ಆದರೆ ಈ ಕಾರ್ಯಕ್ರಮ ಕ್ಕೆ ಅವರೇ ಗೈರಾಗಿದ್ದರು ಎನ್ನೋದು ವಿಶೇಷ..!
ಈ ಸ್ಥಳವನ್ನ ಅಕ್ಟೊಬರ್ 1995 ರಂದು National Historic landmark ಎಂದು ಗುರುತಿಸಲಾಗಿದೆ..!
ನಂತರದ ದಿನಗಳಲ್ಲಿ ಈ ಆಚರಣೆ ಸಂಪೂರ್ಣ ವ್ಯವಹಾರಿಕ ವಾಗಿ ಬದಲಾಯ್ತು ಎಂದು
ಬೇಸರಗೊಂಡು ವಿರೋಧಿಸಿದ್ದರಂತೆ ಅನಾ..
ಹೂವಿನ ವ್ಯಾಪಾರಿಗಳು ಹಾಗೂ ಗ್ರೀಟಿಂಗ್ ಕಾರ್ಡ್ ವ್ಯಾಪಾರಿಗಳು ಈ ತಾಯಂದಿರ ದಿನವನ್ನ ಲಾಭಕ್ಕಾಗಿ ಬಳಸುವುದರ ಬಗ್ಗೆ ವಿರೋಧ ಮಾಡುತ್ತಲೇ ಬಂದಿದ್ದರಂತೆ ಅನಾ..
1920 ರ ಹೊತ್ತಿಗೆ ಸಂಪೂರ್ಣ ಕಮರ್ಷಿಯಲ್ ಆಗಿ, ಹೂವಿನ ದರ ಅತಿ ಹೆಚ್ಚು ಮಾಡಿ ಮಾರಾಟ ಮಾಡಲು ಶುರುವಿಟ್ಟು ಕೊಂಡಿದ್ದರಂತೆ
ಕೆಂಪು ಹೂವಿನ ಗುಚ್ಛ ಬದುಕಿರುವ ತಾಯಂದಿರಿಗೆ..
ಬಿಳಿ ಹೂವಿನ ಗುಚ್ಛ ಮರಣ ಹೊಂದಿರುವ ತಾಯಂದಿರಿಗೆ ಎಂದು ಹೇಳಿ ಕೊಡಲಾರಂಭಿಸಿದ್ದರಂತೆ,ಈ ಭಾವನಾತ್ಮಕ ವಿಷಯವನ್ನ ಈ ರೀತಿ ವ್ಯಾವಹಾರಿಕವಾಗಿ ಬಳಸಿ ಕೊಳ್ಳಲು ಪ್ರಾರಂಭಿಸಿದ್ದ ಈ ವ್ಯಾಪಾರಸ್ಥರ ವಿರುದ್ಧ ಆಕ್ರೋಶ ಗೊಂಡು,ಅನಾ ತಾಯಂದಿರ ದಿನದ ಎಂಬ್ಲಮ್ ಬಳಸಲು ಪ್ರಾರಂಬಿಸಿದ್ದರಂತೆ..!
ಸ್ವತಃ ಅನಾ..
ಈ ದಿನವನ್ನ ಆಡಂಭರದ ದಿನವಾಗಿ ಆಚರಿಸುವ ಉದ್ದೇಶವಿರಲಿಲ್ಲವಂತೆ..
ಯಾವುದೋ ಪ್ರಿಂಟ್ ಇರುವ ಕಾರ್ಡ್,ಇನ್ನೇನೋ ಲೆಟರ್ ಕೊಡುವ ಬದಲು ಸೋಮಾರಿತನ ಬಿಟ್ಟು,ಸ್ವಲ್ಪ ಸಮಯ ವ್ಯಯಿಸಿ ನಿಮ್ಮ ಕೈಯಲ್ಲೇ ಬರೆದು ಪ್ರೀತಿಯಿಂದ ಕೊಡಿ..
ಚಾಕಲೇಟ್ ತೆಗೆದು ಕೊಂಡು ಹೋಗಿ ಅಮ್ಮ ತಿನ್ನದೆ ಇಟ್ಟಾಗಿ ನೀವೇ ತಿನ್ನುವುದು,ಅವರಿಗೆ ಸಲ್ಲಿಸುವ ಕೃತಜ್ಞತೆ,ಪ್ರೀತಿ,ಗೌರವ ಅಲ್ಲ..
ಯಾವುದೋ ಆಡಂಭರದ ದುಬಾರಿ ಗಿಫ್ಟ್ ಕೂಡ ಈ ದಿನದ ಆಚರಣೆ ಅಲ್ಲ..
ಪ್ರೀತಿ,ಗೌರವದಿಂದ ಮಾತಾಡಿಸಿ,ದೂರವಿದ್ದರೆ ಹೋಗಿ ಭೇಟಿಯಾಗಿ, ಫೋನ್ ಮಾಡಿ,ಅಥವಾ ಸ್ವಂತ ನೀವೇ ಪತ್ರ ಬರೆಯಿರಿ,ಅವರಿಗೆ ಕೈಲಾದ ಸಹಾಯ ಮಾಡಿ ಎನ್ನುತ್ತಾ ಇದ್ದರಂತೆ..
ಅನಾ..
ಸ್ವತಃ ತಾಯಿಯೇ ಆಗಿರದ ಅನಾ,ಈ ವಿಷಯದಿಂದ ಯಾವ ಲಾಭವನ್ನು ಪಡೆಯಲು ತಯಾರಿರಲಿಲ್ಲವಂತೆ,ತನ್ನ ತಾಯಿಯ ತ್ಯಾಗ ಹಾಗೂ ಮಮತೆ,ಪ್ರೀತಿಗಾಗಿ,
ತಾಯಿಯ ದಿನ ಯಾವುದೇ,ಸ್ವಾರ್ಥ,ಲಾಭದ ನಿರೀಕ್ಷೆ ಇಲ್ಲದೆ,ತಾಯಿಗೆ ಗೌರವಿಸುವ ಸಲುವಾಗಿ ಆಚರಿಸಲು ಪ್ರಾರಂಭಿಸಿದ್ದ ಅನಾ..
24 ನವೆಂಬರ್
1948ರಲ್ಲಿ,ವೆಸ್ಟ್ ಚೆಸ್ಟರ್,ಪೆನ್ಸಿಲ್ವೇನಿಯಾದಲ್ಲಿ ಮರಣ ಹೊಂದುತ್ತಾರೆ....
ಈಗ ಇಡೀ ವಿಶ್ವದಲ್ಲಿ ಹಲವರು
ಮೇ8(ಮೇ8 ಯಾಕೆ ಮಾಹಿತಿ ಇಲ್ಲ) ರಂದು ತಾಯಂದಿರ ದಿನ ಎಂದು ತಮ್ಮ ಪ್ರೀತಿ,ವಿಶ್ವಾಸ,ಗೌರವ,ಕೃತಜ್ಞತೆ,ಅವರದೇ ರೀತಿಯಲ್ಲಿ ಬೇರೆ ಬೇರೆ ವಾಹಿನಿಗಳ ಮೂಲಕ ವ್ಯಕ್ತ ಪಡಿಸುತ್ತಾರೆ..
❤️
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ