ಇಟಾಲಿಯನ್ ಚಿತ್ರ ರಚನಕಾರ,ಲಿಯನಾರ್ಡೊ ಡಾ ವಿನ್ಸಿ ರಚಿಸಿರುವ,ಪ್ರಾನ್ಸ್ ನ ಪ್ಯಾರಿಸ್,ಲವರೆ ಮ್ಯೂಸಿಯಂ ನಲ್ಲಿರುವ ಮೋನಾಲಿಸಾ(Lisa Gherardini /Lisa del Giocondo) ಆಯಿಲ್ ಪೇಯಿಂಟಿಂಗ್ ಗೆ,ವೀಲ್ ಚೇರ್ ನಲ್ಲಿ ಅಜ್ಜಿಯ ರೀತಿ ವೇಷ ಮಾಡಿಕೊಂಡು ಬಂದ ವ್ಯಕ್ತಿ ದಾಳಿಗೆ ಮುಂದಾಗಿದ್ದಾರೆ,ದಾಳಿ ಮಾಡಿದ್ದು ಕೇಕ್ನಿಂದ..
ಕೂಡಲೇ ಅಲ್ಲಿದ್ದ ಭದ್ರತಾ ಸಿಬ್ಬಂದಿ ಆ ವ್ಯಕ್ತಿ ಯನ್ನ ವಶಕ್ಕೆ ಪಡೆದು ಸ್ಥಳೀಯ ಪೊಲೀಸ್ ವಶಕ್ಕೆ ಕೊಟ್ಟಿದ್ದಾರೆ,
ಅವರು ಫ್ರೆಂಚ್ನಲ್ಲಿ ಏನೇನೋ ಬಡಬಡಿಸುತ್ತಾ ಇದ್ದರು ಎನ್ನಲಾಗಿದೆ..!
ಮಾನಸಿಕ ಚಿಕಿತ್ಸೆ ಗಾಗಿ ಅವರನ್ನ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಹೇಳಲಾಗುತ್ತಾ ಇದೆ..
1503 ರಲ್ಲಿ ಡಾ ವಿನ್ಸಿ ರಚಿಸಿದ್ದ ಕೆಲವು ವರ್ಷಗಳ ನಂತರ ಈ ಆಯಿಲ್ ಪೇಯಿಂಟಿಂಗ್, ಕೆಲವು ಸಮಯದ ನಂತರ
ಪ್ರಾನ್ಸ್ ನ ರಾಜ ಪ್ರಾನ್ಸಿಸ್ 1 ವಶಕ್ಕೆ ತೆಗೆದು ಕೊಂಡಿದ್ದರಂತೆ,
1797 ರಿಂದ "ಲವರೆ ವಸ್ತು ಸಂಗ್ರಹಾಲಯದಲ್ಲಿ" ಈ ಆಯಿಲ್ ಪೇಯಿಂಟಿಂಗ್ ಇರಿಸಲಾಗಿದೆ.!
1911ರಲ್ಲಿ ಸಂಗ್ರಹಾಲಯದಲ್ಲಿ ಕೆಲಸಕ್ಕೆ ಇದ್ದ ಕೆಲಸಗಾರ ಮೋನಾಲಿಸಾ ಪೇಯಿಂಟಿಂಗ್ ಕದ್ದು ಯಾರಿಗೋ ಹಣಕ್ಕಾಗಿ ಕೊಡುವಾಗ ಸಿಕ್ಕಿ ಹಾಕಿಕೊಂಡು ನಂತರ ತರಲಾಗಿತ್ತಂತೆ...
1956 ರಲ್ಲಿ ಪ್ರವಾಸದಲ್ಲಿದ್ದಾಗ ಮೊ0ಟಬಾನ್,ಪ್ರಾನ್ಸ್ ಎಂಬಲ್ಲಿ ಈ ಕಲಾಕೃತಿಯ ಮೇಲೆ ಆಸಿಡ್ ನ ಎರಚಿದ್ದರಂತೆ ಆದರೆ ಗಾಜಿನ ಪರದೆ ಇದ್ದದ್ದರಿಂದ ಪೇಯಿಂಟಿಂಗ್ ಗೆ ತೊಂದರೆ ಆಗಿರಲಿಲ್ಲವಂತೆ ಸ್ವಲ್ಪ ದಿನದ ನಂತರ ಇನ್ನೊಬ್ಬರು ಡಿಸ್ಎಂಬರ್ ತಿಂಗಳಿನಲ್ಲಿ ಅಮೇರಿಕಾದ ಪ್ರಜೆ ಒಬ್ಬರು ಕಲ್ಲನ್ನ ಎಸೆದು ಸ್ವಲ್ಪ ಮಟ್ಟಿಗೆ ಗಾಜಿಗೆ ಹಾನಿ ಮಾಡಿದ್ದರಂತೆ..
1974ರಲ್ಲಿ ಮೋನಾಲಿಸಾ ಪೇಯಿಂಟಿಂಗ್ ಟೋಕಿಯೋ ಪ್ರವಾಸದಲ್ಲಿದ್ದಾಗ ಟೋಕಿಯೋ ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿ ಒಬ್ಬರು ಮಹಿಳೆ ಅಂಗವಿಕಲರಿಗೆ ವಸ್ತು ಸಂಗ್ರಹಾಲಯದಲ್ಲಿ ಸೌಲಭ್ಯ ಇಲ್ಲ ಎನ್ನುವ ಕಾರಣಕ್ಕೆ ಸ್ಪ್ರೇ ಪೇಯಿಂಟ್ ಹೊಡೆದಿದ್ದರಂತೆ..
2009 ರಲ್ಲಿ ರಷ್ಯಾ ಮಹಿಳೆಯೊಬ್ಬರು ಸಿಟಿಜನ್ ಶಿಪ್ ಸಿಗಲಿಲ್ಲ ಎಂಬ ಸಿಟ್ಟಿಗೆ ಕಾಪಿ ಕಪ್ ನ್ನ ಪೇಯಿಂಟಿಂಗ್ ಕಡೆ ಎಸೆದಿದ್ದರಂತೆ ಆದರೆ ಗಾಜಿನ ಪ್ರೊಟೆಕ್ಷನ್ ಇದ್ದದ್ದರಿಂದ ಯಾವುದೇ ತೊಂದರೆ ಆಗಿರಲಿಲ್ಲವಂತೆ..
ಹೀಗೆ ಹಲವು ಬಾರಿ ಬುಲೆಟ್ ಪ್ರುಪ್ ರಕ್ಷಣೆ ಇರುವ ಮೋನಾಲಿಸಾ ಪೇಯಿಂಟಿಂಗ್ ಮೇಲೆ ವಿವಿಧ ಕಾರಣಕ್ಕೆ ಧಾಳಿಯಾಗಿದೆ..
ತೀರಾ ಇತ್ತೀಚೆಗೆ ಅಂದರೆ ನಿನ್ನೆ ಮತ್ತೊಮ್ಮೆ ಕೇಕ್ ಮೂಲಕ ದಾಳಿ ಮಾಡಲಾಗಿದೆ..
ಕಾರಣ ಆ ವ್ಯಕ್ತಿ ಹೇಳಿದ್ದು..
ಎಲ್ಲಾ ಆರ್ಟಿಸ್ಟ್ ಗಳು ಭೂಮಿಯ ಬಗ್ಗೆ ಯೋಚಿಸ್ತಾರೆ,ಪ್ಲಾನೆಟ್ ಬಗ್ಗೆ ಯೋಚಸಿ ಅದಕ್ಕೆ ಈ ರೀತಿ ಮಾಡಿದ್ದು ಅಂತ ಏನೋ..😁
🙏
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ