ಆಗಾಗ ಕೆಲವರು ಇಂತಾ ಜಾಗಕ್ಕೆ ಹೋಗಿ ಇರಬೇಕಪ್ಪ..ಪ್ರಕೃತಿ,ಹಸಿರು,
ನೆಮ್ಮದಿಯಾಗಿರುತ್ತೆ ಜೀವನ,ಯಾರ ತಂಟೆ ತಾಪತ್ರಯ ಇರಲ್ಲ,ಸ್ವರ್ಗ,
ಅಂತ ಕೆಲವು ಫೋಟೋ ಹಂಚಿ ಕೊಂಡು,ಕವನ,ಕವಿತೆ,ಕತೆ, ಮೂಲಕ
ತಮ್ಮ ಅಭಿಪ್ರಾಯ,ಆಸೆ ವ್ಯಕ್ತ ಪಡಿಸೋದು ಆಗಾಗ ಗಮನಿಸಿರುತ್ತೇವೆ..
ಇತ್ತೀಚೆಗೆ
ಸಾಮಾಜಿಕ ಜಾಲತಾಣಗಳಲ್ಲಿ,ದೂರದಲ್ಲಿರುವ
ಒಂದು ದ್ವೀಪ ಪ್ರದೇಶ ಅದರ ಮಧ್ಯ ಒಂದು ಬಿಳಿ ಬಣ್ಣದ ಕಟ್ಟಡದ ಫೋಟೋ ಎಲ್ಲಾ ಕಡೆ ಹರಿದಾಡುತ್ತಾ ಇತ್ತು..
ಕೆಲವರು ಅದನ್ನ ಫೋಟೋ ಶಾಪ್,ಅಸ್ತಿತ್ವದಲ್ಲೇ ಇಲ್ಲ,ಫೇಕ್ ಅಂದಿದ್ರು,ಕೆಲವರು ಅದು ಅಲ್ಲಿದೆ,ಇಲ್ಲಿದೆ ಸ್ವರ್ಗ ಅಲ್ಲೇ ಹೋಗಿ ಜೀವನ ಮಾಡಬೇಕು ತಲೆಬಿಸಿ ಇರಲ್ಲ ಅಂತಲೂ ಹೇಳಿದ್ದೂ ಗಮನಿಸಿರಬಹುದು..!
ಆದರೆ ಈ ಕಟ್ಟಡ ಇರೋದು ನಿಜ.
ಹೌದು..
ಈ ಬಿಳಿಯ ಮನೆ ಅಸ್ತಿತ್ವದಲ್ಲಿ ಇದೆ..
ಯುರೋಪ್ ನ ಒಂದು ದೇಶವಾದ ಐಸ್ ಲ್ಯಾನ್ಡ್ ದಕ್ಷಿಣ ಭಾಗದ Elidaey ಎಂಬಲ್ಲಿ,Vestmannaeyjar, Archipelago ಎಂಬ 15 ರಿಂದ 18 ಹಲವು ದ್ವೀಪ ಸಮೂಹದ,ಒಂದು ದ್ವೀಪದ ಭಾಗದಲ್ಲಿ ಈ ಬಿಳಿ ಬಣ್ಣದ ಕಟ್ಟಡ ನಿರ್ಜನ ಪ್ರದೇಶದಲ್ಲಿ ಅಸ್ತಿತ್ವದಲ್ಲಿ ಇದೆ..
ಕೆಲವು ವರದಿಯ ಪ್ರಕಾರ ಹಲವು ವರ್ಷಗಳ ಹಿಂದೆ ಸುಮಾರು 5 ಕುಟುಂಬ ಗಳು ಇಲ್ಲಿ ವಾಸವಿದ್ದವು,ಆಗಲೇ ಈ ಮನೆ ಕಟ್ಟಲಾಗಿತ್ತು,1930ರ ನಂತರ ಈ ದ್ವೀಪವನ್ನ ತೊರೆದು ಜನ ಇರುವ ಪ್ರದೇಶಕ್ಕೆ ಜೀವನ ಅರಸಿ ಹೊರಟರು,ಅದರ ನಂತರ ಇದು ನಿರ್ಜನ ಪ್ರದೇಶದ ಹಾಗೆ ಆಗಿದೆ ಅಂತಲೂ ಹೇಳಲಾಗಿದೆ..
ಇದರ ಬಗ್ಗೆ ನಿಖರ ಮಾಹಿತಿ ಅಥವಾ ದಾಖಲೆಗಳು ಗೊತ್ತಿಲ್ಲ!!
ಕೆಲವು ರೂಮರ್ ಗಳು ಯಾರೋ ಕೋಟಿಪತಿ ಈ ಜಾಗದಲ್ಲಿ ಜೋಂಬಿ ಅಪಕಲಿಪ್ಸ್ ಎಂಬ ಯಾವುದೋ ಈವೆಂಟ್ ಕೆಲಸಕ್ಕೆ ಈ ಕಟ್ಟಡ ಕಟ್ಟಿಸಿದ್ದರು ಅಂತ ಸುದ್ದಿಯೂ ಓಡಾಡಿತ್ತು.!
ಬಲ್ಲ ಮೂಲದ ಪ್ರಕಾರ ಒಂದು ಸಣ್ಣ ಕಟ್ಟಡ,ಈ ಕಟ್ಟಡದ ಪಕ್ಕ ಇದೆ..ಕೆಲವು ರಿಸರ್ಚರ್ ಪಕ್ಷಿಗಳ ಮೇಲೆ ರಿಸರ್ಚ್ ಮಾಡುವ ಸಲುವಾಗಿ ಈ ಜಾಗಕ್ಕೆ ಬಂದು ಕೆಲವು ಸಮಯ ತಂಗುತ್ತಾ ಇದ್ದರು..
ಅದೇ ಮೊದಲು ಕಟ್ಟಿದ್ದು ನಂತರ ಈ ಮನೆಯನ್ನ ಕಟ್ಟಲಾಯ್ತು
ಎನ್ನುವ ಮಾತು ಇದೆ..!
1950ರಲ್ಲಿ ಹಂಟಿಂಗ್ ಅಸೋಸಿಯೇಷನ್ ಈ ಕಟ್ಟಡವನ್ನು ಕಟ್ಟಿಸಿದ್ದಾರೆ ಎನ್ನುವ ಸುದ್ದಿಯೂ ಇದೆ..!
Bjork ಎಂಬ ಹಾಡುಗಾರರು ದೇಶಕ್ಕೆ ಸಲ್ಲಿಸಿದ ಸೇವೆ ಪರಿಗಣನೆ ಮಾಡಿ,ಐಸ್ ಲ್ಯಾನ್ಡ್ ಸರ್ಕಾರ ಈ ದ್ವೀಪ ಕೊಡುಗೆಯಾಗಿ ನೀಡಿದ್ದಾರೆ ಎಂಬ ಸುದ್ದಿಯೂ ಓಡಾಡಿತ್ತು..!
ಈಗ Ellideay Hunter's association ಎಂಬ ಸಂಸ್ಥೆ ಈ ಮನೆ ಹಾಗೂ ಜಾಗವನ್ನ ನೋಡಿಕೊಳ್ಳುತ್ತಾ ಇದೆ ಹಾಗೂ ಪ್ರವಾಸಿಗರಿಗೆ ಕೆಲವು ಟೂರಿಸ್ಟ್ ಸಂಸ್ಥೆಗಳು ಒಂದು ದಿನದ ಪ್ರವಾಸ ವನ್ನ ಕೂಡ ಏರ್ಪಾಡು ಮಾಡುತ್ತಾರೆ ಎನ್ನಲಾಗಿದೆ..!
ಹೀಗೆ ಹತ್ತು ಹಲವು ಅಂತೆ ಕಂತೆಗಳು,ಕನ್ ಪ್ಯೂಜ್ ನಲ್ಲಿ ಇರುವ ಈ ಜಾಗದ ಇತಿಹಾಸದ ಬಗ್ಗೆ ಸ್ಪಷ್ಟವಾದ ಮಾಹಿತಿ ಯಾರ ಬಳಿ ಇದೆಯೋ ಗೊತ್ತಿಲ್ಲ..!!?
ಯುಟ್ಯೂಬರ್ ಒಬ್ಬರು ತೀರಾ ಇತ್ತೀಚೆಗೆ ಈ ದ್ವೀಪಕ್ಕೆ ಹೋಗಿ ಇದರ ಬಗ್ಗೆ ಮಾಹಿತಿ ಅವರಿಗೆ ಸಿಕ್ಕಿದ್ದನ್ನು ಒದಗಿಸಿದ್ದಾರೆ,ಆಸಕ್ತರು ಕೆಳಗೆ ಹಾಕಿರುವ ಲಿಂಕ್ ಬಳಸಿ ವೀಡಿಯೊ ನೋಡ ಬಹುದು..!
ನಂತರ ಜಗತ್ತಿನ ನಿರ್ಜನ ಪ್ರದೇಶದಲ್ಲಿರುವ ಮನೆಯಲ್ಲಿ ಬಂದು ಜೀವನ ಮಾಡುವುದರ ಬಗ್ಗೆ ತಯಾರಿ ಮಾಡಿ ಕೊಳ್ಳಬಹುದು..
😉
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ