ಬುಧವಾರ, ಜೂನ್ 29, 2022

ಕೆಲವರ ಮನಸ್ಥಿತಿ

ನಮ್ಮೂರಲ್ಲಿ,ಒಬ್ಬರು,ದೂರದ ಊರಿನವರು,ಒಂದು ಖಾಸಗಿ ಗಣಿಗಾರಿಕಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ,ಅಲ್ಲೇ ವಾಸವಿದ್ದರು,

ಅವರ ಸ್ವಭಾವ ಹೇಗೆ ಅಂದ್ರೆ,
ಯಾರು ಏನೇ ವಿಷಯವನ್ನ ಪ್ರಸ್ತಾಪ ಮಾಡಿದ್ರು,ಏನೇ ಒಳ್ಳೆಯ ಸುದ್ದಿಯನ್ನ,ಸಾಧನೆಯನ್ನ,ಸಕ್ಸಸ್,ಸಂತಸ,ಖುಷಿ ಹೇಳಿ ಕೊಂಡರೂ,

ಏಯ್..ಅದೆಲ್ಲಾ ಎಂತಾ ದೊಡ್ಡ ವಿಷಯವಾ..ನಂದು ಏನು ಆಗಿತ್ತು ಗೊತ್ತಾ,ಅದರ ಮುಂದೆ ಇದೆಲ್ಲಾ ಯಾವ ಲೆಕ್ಕ,ಯಾವ ಸಾಧನೆ,ಯಾವ ಸಕ್ಸಸ್,ಇದೆಲ್ಲಾ ಕಾಮನ್ ಅಂತ ಕತೆ ಶುರು ಮಾಡ್ತಾ ಇದ್ರು...

ಹಾಗೆ
ಕೆಲವರು
ಯಾವುದೇ ವಿಷಯ ಹೇಳಿ..
ಅದಕ್ಕೆ
ಇದನ್ನ ನಾವು ಯಾವಾಗಲೋ ನೋಡಿ ಬಿಟ್ಟಾಗಿದೆ,ಈಗ ಗೆದ್ದಿರೋದು,ಸಾಧಿಸೋರು ಇದೇನು ಸಾಧನೆ..
ನೀವ್ಯಾವ ಲೆಕ್ಕ,ನಾವೇ ಗ್ರೇಟ್,ನಮ್ಮದೇ ಗ್ರೇಟ್ ಎನ್ನುತ್ತಾ ಇನ್ನೊಬ್ಬರನ್ನ ತೀರಾ ನಿಕೃಷ್ಟವಾಗಿ ಕಾಣೋದು,ಬೇರೆಯವರ ಸಾಧನೆ,ಖುಷಿ,ಸಕ್ಸಸ್,ಕೆಲಸ ಅಪ್ರಯೋಜಕವಾದದ್ದು ಅನ್ನುವ ಹಾಗೆ ರಾಗ ಎಳೆಯೋದು,ಕೊಕ್ಕೆ ಹಾಕೋದು,ಕೊಂಕು ತೆಗೆಯೋದು ಒಂತರ ಕೆಟ್ಟ ಖಯಾಲಿ ಬೆಳೆಸಿ ಕೊಂಡಿರ್ತಾರೆ...
ಅದು ಕೆಲವರಲ್ಲಿ ಬಹಳ ಸಾಮಾನ್ಯ ಅನಿಸುತ್ತೆ ಅಲ್ವಾ!!?
ಅದೇನು ಸಮಸ್ಯೆ ಇರುತ್ತೋ ಏನೋ..

ಒಬ್ಬರಿಗೆ
ತೋಟದಲ್ಲಿರುವ
ಪೇರಲೇ(ಸೀಬೆ ಕಾಯಿ) ಮರ ಹತ್ತಿ,ಇರುವೆ ಹತ್ರ ಕಚ್ಚಿಸಿ ಕೊಂಡು
ಪೇರಲೇ ಹಣ್ಣು ಉದುರಿಸಿ,ಕಳೆ ಮಧ್ಯೆ ಪೇರಲೇ ಕಾಯಿ ಎಲ್ಲಿ ಬಿದ್ದಿದೆ ಅಂತ ಹುಡುಕಿ ಅಂಡಿಗೆ ಒರೆಸಿ ಕೊಂಡು ಕ್ಲಿನ್ ಆಯ್ತು ಅಂತ ಅಂದು ಕೊಂಡು ತಿಂದರೆ ಅದೇ ಖುಷಿ,ಅದೇ ಸಾಧನೆ,ಗ್ರೇಟ್ನೆಸ್



ಮತ್ತೊಬ್ಬರಿಗೆ
ಕಾಶ್ಮೀರಿ ಸೇಬು ಹಣ ಕೊಟ್ಟು ಸೂಪರ್ ಸ್ಟೋರ್ ನಿಂದ ತಂದು 25 ಸರಿ ಬಟ್ಟೆ ತೊಳೆದಂತೆ ತೊಳೆದು,ಸಿಪ್ಪೆ ತೆಗೆದು,ಕತ್ತರಿಸಿ ಬೀಜ ಎಲ್ಲಾ ಬೇರ್ಪಡಿಸಿ,ಒಂದು ಗಾಜಿನ ತಟ್ಟೆಯಲ್ಲಿ ಸುಂದರವಾಗಿ ಜೋಡಿಸಿ,ಚುಚ್ಚಿ ತಿನ್ನಲು ಒಂದು ಚಮಚ ಹಾಕಿಕೊಂಡು ಸೋಪಾದ ಮೇಲೆ ಕೂತು ತಿನ್ನೋದು ಸಾಧನೆ,ಖುಷಿ...ಗ್ರೇಟ್ನೆಸ್...
ಅಷ್ಟೇ..
ಅವರವರ ಖುಷಿ,ಅವರವರ ಸಾಧನೆ,ಅವರವರ ಭಾವಕ್ಕೆ..
ಅಲ್ವಾ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ