ಬುಧವಾರ, ಜೂನ್ 29, 2022

ಮಾನ್ಯಥ್ ರಾಯರ ಕಥೆ

ಮನ್ನ್ಯಾಥ ರಾಯ್ರ ತೋಟ ಹಾಗೂ ಗದ್ದೆ,ತರಕಾರಿಗೆ ಮಂಗನ  ಕಾಟ ತಡೆಯೋಕಾಗದೆ..
ಬಹಳ ತಲೆ ಬಿಸಿಲಿ ಇದ್ರು..

ಬಹಳ ವರ್ಷಗಳ ಹಿಂದೆ ಹೊಸದಾಗಿ ಸಾಫ್ಟ್ವೇರ್ ಕಂಪನಿ ಪ್ರಾರಂಭವಾದಾಗ ಆಗಲೇ ಡಿಗ್ರಿ ಮಾಡಿ,ಸಾಪ್ಟವೇರ್ ಬಗ್ಗೆ ಅಲ್ಪ ಸ್ವಲ್ಪ ಕಲಿತಿದ್ದ ಮನ್ ನ್ಯಾಥ ರಾಯ್ರ ಮಗ ವಿಸ್ನಾಥ್ ಬೆಂಗಳೂರು ಹೋಗಿ ಹಲವು ವರ್ಷ ಉದ್ಯೋಗ ಮಾಡಿ,ಸಾಕಪ್ಪ ಈ ಕೆಲಸ ಅಂತ ಊರು ಕಡೆ ಹೋಗಿ ತ್ವಾಟ ನೋಡ್ ಕಂಡು ಅಪ್ಪಗೆ ಸಹಾಯ ಮಾಡಿಕೊಂಡು ಇರೋಣ ಅಂತ ಊರಿಗೆ ಬಂದಿದ್ದರು ಅಷ್ಟೇ..

ಅಪ್ಪನ ತಲೆ ಬಿಸಿ,ಚಡಪಡಿಕೆ,ಟೆನ್ಷನ್ ದಿನಾ ನೋಡುತ್ತಾ ಇದ್ದವರು..

"ಎಂತಾಯ್ತು ಮಾರಾಯ್ರೆ"ಅಂದ್ರು..

"ಈ ಮಲೆನಾಡು ರೈತನಿಗೆ ಮಂಗನ ಕಾಟ ತಪ್ಪಲ್ಲ ಮರಾಯಾ,
ಎಂತಾ ಸಾಯದು ತ್ವಾಟದಲ್ಲಿ ಹಿಂಗಾರ,ಏಲಕ್ಕಿ,ಕಾಪಿ ಬೀಜ,ಬಾಳೆ ಕೊನೆ ಎಂತೂ ಬಿಡಲ್ಲ ನೋಡು,ಹೆಂಗೆ ಬದುಕುಕು ನಾವು" ಅಂದ್ರು..

ಅಪ್ಪನ ಒದ್ದಾಟ ನೋಡಿ ಬೇಸರವಾಗಿ,
ಕೂಡಲೇ ತನ್ನೊಳಿಗಿನ ಹಳೆಯ ಹೋರಾಟಗಾರನನ್ನ ಜಾಗೃತ ಗೊಳಿಸಿದ ವಿಸ್ನಾಥ್...

ಈ ಮಂಗನ ಕಾಟಕ್ಕೆ ಒಂದು ಶಾಶ್ವತ ಪರಿಹಾರ ಕಂಡು ಹಿಡಿಯಲೇ ಬೇಕು ಎಂದು ಶಪಥ ಗೈದು ಬಿಟ್ರು..

ಹಲವು ತಾಂತ್ರಿಕ ಪುಸ್ತಕಗಳನ್ನೆಲ್ಲಾ ಹುಡುಕಾಡಿ,ಗೂಗಲ್ ನೋಡಿ,ತನ್ನ ಕಂಪನಿಯ ಪ್ರಚಂಡ ಬುದ್ಧಿವಂತರನ್ನ ಸಂಪರ್ಕ ಮಾಡಿ,ತನ್ನ ಬುದ್ಧಿಯನ್ನೆಲ್ಲಾ ಉಪಯೋಗಿಸಿ, ದಿನವೂ ಪ್ರೋಗ್ರಾಮ್ ಬರೆಯಲು ಪ್ರಯತ್ನಿಸಿ ಒಂದೊಂದು ಪ್ರಯೋಗ ಮಾಡ ತೊಡಗಿದ್ರು..

ಒಂದು ದಿನ
ತನ್ನ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಕ್ತು..!

ಅದೇನೆಂದರೆ ಮಂಗನ ಅಂಡು ಮೇಲೆ ಹೊಡೆಯೋ ರೋಬೋಟ್..
ಮಂಗಗಳು ಬೇಲಿ ದಾಟಿ ಗದ್ದೆ ತೋಟಕ್ಕೆ ಬಂದ ಕೂಡಲೇ ಅದರ ಶಬ್ದಕ್ಕೆ,ಈ ರೋಬೋಟ್ ಎಷ್ಟೇ ದರುಗು,ಹೊಂಡ, ತ್ವಾಟದ ಕಪ್ ಇದ್ರೂ,ಸದ್ದಿಲ್ಲದೇ ಹತ್ತಿರ ಶರವೇಗದಲ್ಲಿ  ಹೋಗಿ ಮಂಗನ ಅಂಡಿಗೆ ಗುರಿ ಇಟ್ಟು ಬಾರು ಕೋಲಿನಲ್ಲಿ ಬಡಿಯೋದು..

ಆ ಬಾರು ಕೋಲಿನ ಹೊಡೆತದಿಂದ ಆದ ಬಾಸುಂಡೆ,ತುರಿಕೆ ಹಾಗೂ ಉರಿಯ ವ್ಯಾಲಿಡಿಟಿ ಮಿನಿಮಮ್ 72 ಗಂಟೆ...!

ಮಂಗಗಳಿಗೆ ಅಂಡು ತುರಿಸೋಕೆ ಎರಡು ಕೈ ಸಾಲದು ಆಗಬೇಕು ಅಷ್ಟು ತುರಿಕೆ ಬರುವ ಹಾಗೆ ಪೆಟ್ಟು..!

ಕೆಲವು ದಿನದ ಈ ಯಂತ್ರದ ಪೆಟ್ಟಿನ ಕಾರ್ಯಾಚರಣೆಗೆ ಹೆದರಿ ಮಂಗಗಳು ಅವರ ತೋಟಕ್ಕೆ ಬರೋದು ಇರಲಿ,ತಿರುಗಿ ನೋಡೋಕೆ ಭಯ ಪಡು ವ ಹಾಗೆ ಆಗಿ ಬಿಟ್ಟವು,ಸಂಪೂರ್ಣ ಮಂಗಗಳಿಂದ ಬಿಡುಗಡೆ ಸಿಕ್ತು ಮನ್ನ್ಯಾಥ್ ರಾಯರಿಗೆ..
ಮಗನ ಸಾಧನೆಗೆ ಶಬ್ಬಾಶ್ ಅಂದ್ರು ರಾಯರು..
ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ...!

ಕೆಲಸ ಆಯ್ತಾ..
ವಿಸ್ನಾಥ ಮಂಗಗಳ ಕುಂಡೆ ಮೇಲೆ ಹೊಡೆಯೋ ರೋಬೋಟ್ ನ ಹಿತ್ತಲಕಡೆ ಕೊಟ್ಟಿಗೆ ಮೂಲೆಗೆ ಇಟ್ಟರು..

ಅದು ಬ್ಯಾಟರಿ ಡವ್ನ್ ಆಗಿ ಸುಮ್ಮನೆ ಪಕ್ಕಕ್ಕೆ ಕೂತಿತ್ತು..
ಕೆಲವು ದಿನದ ನಂತರ ಅದರ ಮೇಲೆ ಹಲವು ಕೃಷಿ ಉಪಕರಣಗಳು ಬಂದು ಕೂತವು..
ಒಂದು ಹಳೆಯ ಟೇಬಲ್ ಆಗಿ ಪರಿವರ್ತನೆ ಆಯ್ತು ರೋಬೋಟ್..!

ಕೆಲವು ಸಮಯದ ನಂತರ  ಪ್ಯಾಟೆಲಿ ಕೃಷಿ ಮೇಳ ಇದೆಯಂತೆ ಅಂತ ಯಾರೋ ಮೆಸೇಜ್ ಮಾಡಿದ್ದು ನೋಡಿ..
ತನ್ನ ಬಜಾಜ್ ಎಂ.ಎಂಬತ್ತು ಬೈಕ್ ತಗೊಂಡು ವಿಸ್ ನಾತ ರ ಸವಾರಿ ಪೇಟೆಗೆ ಹೊರಡ್ತು..
ಬಜಾಜ್.ಎಂ.
ಎಂಬತ್ತು ಒಂದು ಕಡೆ ನಿಲುಗಡೆ ಮಾಡಿ..

ಕೃಷಿ ಮೇಳ ಪ್ರವೇಶ ದ್ವಾರದ ಮೂಲಕ ಒಳಗೆ ಹೋಗಿ ಒಂದೊಂದೇ ಮಳಿಗೆಯಲ್ಲಿ ಹೊಸ ತಂತ್ರಜ್ಞಾನ ಹಾಗೂ ಆವಿಷ್ಕಾರಗಳನ್ನ ನೋಡುತ್ತಾ ಯಾಕೋ ಒಂದು ಕಡೆ ಕಣ್ಣು ಆಡಿಸ್ತಾರೆ..
ವಿಸ್ನಾಥ್ ತಯಾರಿಸಿದ್ದೆ ತರದ ಮಂಗನ ಕುಂಡೆ ಮೇಲೆ ಬಾರುಕೋಲಿನಲ್ಲಿ ಬಾರಿಸೋ ರೋಬೋಟ್ ಪರೀಕ್ಷಾ ಪ್ರದರ್ಶನ ನಡೆಯುತ್ತಾ ಇದೆ..
ಅದರ ಹೆಸರು "ಮಂಕುಮೇ" ರೋಬೋಟ್ ಅಂತ ಬೇರೆ ಇಟ್ಟು ಬೆಲೆ ಬೇರೆ ಹಾಕಿದ್ರೂ..
ಯಂತ್ರ ಬಹಳ ಸುಂದರವಾಗಿ ವಿನ್ಯಾಸ ಗೊಳಿಸಿದ್ದರು,ನೋಡೋಕೆ ಚನ್ನಾಗಿ ಕಾಣಿಸುತ್ತಾ ಇತ್ತು,
ಆದರೆ ಮಾಡುವ ಕೆಲಸ,ಸೇಮ್ ವಿಸ್ ನಾಥ್ ಮಾಡಿದ್ದ ರೋಬೋಟ್ ಕೆಲಸವನ್ನೇ...!!

ಜನ ಮುಗಿಬಿದ್ದು ಯಂತ್ರ ಖರೀದಿಗೆ ಮುಂಗಡ ಪಾವತಿ ಮಾಡ್ತಾ ಇದ್ರು..

ಇದನ್ನೆಲ್ಲಾ ನೋಡಿದ
ಮನ್ನ್ಯಾಥ್ ರಾಯರ ಮಗ ವಿಸ್ನಾಥ..
ಹೌ ಹಾರಿದ್ರು..

"ಅಯ್ಯೋ..ನಾನು ಹೇಗೆಗೋ ತಿಂಗಳು ಗಟ್ಟಲೆ ಕಷ್ಟ ಪಟ್ಟು ಓದಿ,ಯೋಚಿಸಿ,ಗೂಗಲ್ ನಲ್ಲಿ ಎಲ್ಲಾ ಹುಡುಕಿ ಪ್ರೋಗ್ಗ್ರಾಮ್ ಬರೆದು,ಟೆಸ್ಟಿಂಗ್ ಮಾಡಿ,ಕಚ್ಚಾ ವಸ್ತುಗಳನ್ನ ಒಟ್ಟು ಹಾಕಿ ರೋಬೋಟ್ ತಯಾರಿಸಿ ಯಶಸ್ವಿ ಯಾಗಿ ಅದು ಓಡಾಡುವಂತೆ ಮಾಡಿ...ಮಂಗಗಳ ಕುಂಡೆಗೆ ಯಶಸ್ವಿಯಾಗಿ ಪೆಟ್ಟು ಕೊಟ್ಟು ಶಾಶ್ವತ ವಾಗಿ ಓಡಿಸಿದ್ದು..ಈಗ ಯಾರೋ ಅದೇ ತರಹದ್ದು ರೋಬೋಟ್ ಮಾಡಿ,
ಸಾವಿರಗಟ್ಟಲೆ ದುಡ್ಡಿಗೆ ಮಾರುತ್ತಾ ಇದ್ದಾರೆ..
ಇದು ಅನ್ಯಾಯ ಅಂತ ಕೆಂಡಾ ಮಂಡಲವಾಗ್ತಾರೆ..."

ಇದರ ವಿರುದ್ಧ ಹೋರಾಡ್ತೇನೆ ಅಂತ ಫೇಸ್ಬುಕ್,ಟ್ವಿಟ್ಟರ್ ಎಲ್ಲಾ ಕಡೆ #ವಿಸ್ನಾಥಗೆವಿಷ  ಅಂತ ಹ್ಯಾಶ್ ಟ್ಯಾಗ್ ಹಾಕಿ,ಪ್ಲೀಸ್ ಸ್ಟಾ0ಡ್,ಸಿಟ್,ಏನಾದ್ರು ಮಾಡಿ,ವಿತ್ ಮಿ ಅಂತ ಹಾಕಬೇಕು ಅಂತ ತೀರ್ಮಾನ ಮಾಡಿ,ಅಲ್ಲಿಂದ ಬಾಜಾಜ್ ಎಂ.ಎಂಬತ್ತು ಹತ್ತಿ 80 ಕಿಮೀ ವೇಗದಲ್ಲಿ ಬರೋಕೆ ಆಕ್ಸಲರೇಟರ್ ತಿರುಪುತ್ತಾ ಪ್ರಯತ್ನಿಸುತ್ತಾ..ಮನೆ ಕಡೆ ನಿಧಾನಕ್ಕೆ ಬಂದರು..!

ಇದನ್ನ ಊರಲ್ಲೇ ಇರೋ ತನ್ನ ಆಪ್ತ ಸ್ನೇಹಿತರಿಗೂ ಹೇಳಿ ಕೊಂಡಿದ್ದರಿಂದ,ಒಮ್ಮೆ ಅವರಿಗೂ ತಮ್ಮ ನೋವನ್ನ ತೋಡಿ ಕೊಳ್ಳೋಣ ಅಂತ ಎಲ್ಲರನ್ನೂ ತಾವು ದಿನಾ ಸೇರೋ ಜಾಗಕ್ಕೆ ಬನ್ನಿ ಅಂತ ವಾಟೆ ಸೊಪ್ಪಲ್ಲಿ ಇರೋ ಗ್ರೂಪಲ್ಲಿ ಮೆಸೇಜ್ ಹಾಕಿದ್ರು..!

ಮನ್ನ್ಯಾಥ್ ರಾಯರು,ಗೊಬ್ಬರ ಗುಂಡಿಲಿ ಗೊಬ್ಬರದ ಹೆಡಗೆ ತಲೆ ಮೇಲೆ ಇಟ್ಟುಕೊಂಡವರು ಮಗ ಗಡಿಬಿಡಿಲಿ ಬಂದಿದ್ದು ನೋಡಿ.
"ಎಂತಾಯ್ತು ಮರಯಾ..ಹಂಗೇ ಬಂದ್ಯಲ್ಲ ಅಂದ್ರು.."

"ಎಂತಿಲ್ಲಾ,ಅಂದ ವಿಸ್ನಾಥ ಒಂದು ಲೋಟ ಕರಿ ಕಾಪಿ ಅಮ್ಮನ ಹತ್ರ ಕೇಳಿ ಕುಡಿದು,
ಪಂಚೆ ಉಟ್ಟು
ಸ್ನೇಹಿತರನ್ನ ಭೇಟಿಯಾಗೋಕೆ ಮತ್ತೆ ಗಡಿಬಿಡಿಲಿ ಎಂ ಎಂಬತ್ತು ತಗೊಂಡು "ಶರವೇಗದಲ್ಲಿ" ನಿಧಾನಕ್ಕೆ ಹೋದ್ರು..!

ಖಾಯಂ ಮೀಟಿಂಗ್ ಸೇರೋ ಜಾಗಕ್ಕೆ ಬಂದ್ರೂ ಎಲ್ಲಾ ಸ್ನೇಹಿತರು..

ಶುರು ಮಾಡಿದ್ರು ತನ್ನ ಸಿಟ್ಟು ಮಿಶ್ರಿತ ನೋವಿನ ಸಂಗತಿ ವಿಸ್ ನಾಥ...!

ಎಲ್ಲಾ ಕತೆ ಮುಗಿದ ಮೇಲೆ ಅವನ ಸ್ನೇಹಿತ ರಮೇಸ ಹೇಳಿದ..

"ಅಲಾ ಮರಾಯಾ..
ನೀನು ಮಂಗನ ಕುಂಡೆ ಮೇಲೆ ಹೊಡೆಯೋ ಮಷಿನ್ ಕಂಡು ಹಿಡಿದು,ಅದರ ಉಪಯೋಗ ಆದ ಮೇಲೆ,ಊರು ಮನೆ ಬಿಟ್ಟು,ಬೇರೆ ಕಡೆ
ಇನ್ನೊಬ್ಬರಿಗೆ ಉಪಯೋಗ ಆಗಲಿ ಅಂತ ಕೊಟ್ಟಿಯಾ..!?
ಅಥವಾ ಪ್ರಚಾರ ಮಾಡಿದ್ಯಾ..!?ಇದರ ಬಗ್ಗೆ ಹೇಳಿ ಕೊಂಡಿಯಾ!?
ಅಥವಾ ಅದನ್ನ ಅನುಷ್ಠಾನ ಮಾಡೋಕೆ ಪ್ರಯತ್ನ ಪಟ್ಟಿಯಾ!?
ಎಂತಾ ಇಲ್ಲ..

ಈಗ ಯಾರೋ ಯಶಸ್ವಿಯಾಗಿ ಮಾಡಿದ ಕೂಡಲೇ..
ಇದನ್ನ ನಾನು ಮಾಡಿದ್ದು..
ಇದನ್ನ ಕಾಪಿ ಮಾಡಿದ್ದಾರೆ..
ಇದು ಅನ್ಯಾಯ,ಅಕ್ರಮ..
ಇದು ಬಹಳ ಹಿಂದೆ ನಾನು ಮಾಡಿ ಬಿಟ್ಟಿದ್ದು,ಈಗ ಮಾಡಿದವರು ಸರಿ ಇಲ್ಲ ಅಂತ ಅವರನ್ನ ದೂರೋದು,ಸರಿ ಇಲ್ಲ ಅನ್ನೋದು,ಸಿಟ್ಟು ಮಾಡೋದು,ಆಕ್ರೋಶ ವ್ಯಕ್ತ ಪಡಿಸೋದು ಸರಿಯಾ!?
ಅವರು ಮಾಡಿದ್ದೆ ಸರಿ ಇಲ್ಲ ಎನ್ನುವ ಹಾಗೆ,ಪ್ರತಿಭೆಗೆ,ಬುದ್ಧಿವಂತಿಕೆಗೆ,ಜ್ಞಾನಕ್ಕೆ,ಎಪರ್ಟ್ ಗೆ ಬೆಲೆ ಇಲ್ಲದ ಹಾಗೆ ಹೇಳೋದು ಇಷ್ಟು ಸರಿ..!?
ಅಂದ್ರು ರಮೇಸ...!


"ಅದೆಲ್ಲಾ ಸರಿ,ಬೆಲೆ ಇಲ್ವಾ ಮರಾಯಾ ನಮ್ಮ ಎಪರ್ಟ್ ಗೆ ಹಂಗಾದ್ರೆ"ಅಂದ್ರು..
ವಿಸ್ನಾಥ ರಾಯ್ರು..

ರಮೇಸ:-ನಿನ್ನ ಪ್ರತಿಭೆಗೆ,ಶ್ರಮಕ್ಕೆ ಬೆಲೆ ಇದೆ ಮರಾಯ..
ಆದ್ರೆ,ಮಾಡಿದ್ದ ಕೆಲಸ ಯಶಸ್ವಿ ಆಗಿ,ಅದನ್ನ ಸರಿಯಾಗಿ ಅನುಷ್ಠಾನ ಮಾಡಿ,ಎಲ್ಲರಿಗೂ ತಲುಪುವಂತೆ ಮಾಡೋದು ನಿನ್ನದೆ ಕೆಲಸ..
ಅದು ಬಿಟ್ಟು ನೀನು ಮನೇಲಿ ಮೂಲೆಗೆ ಇಟ್ಟು,
ಬೇರೆಯವರು,ಸಂಶೋಧನೆ ಮಾಡಿದ್ದು,ಕಂಡು ಹಿಡಿದಿದ್ದು,ಅವರ ಶ್ರಮ,ಅವರ ಪ್ರತಿಭೆ ಅಥವಾ ಸಾಧನೆ ಎಲ್ಲವನ್ನ..ನಾವು ಇದನ್ನ ಬಹಳ ಹಿಂದೆ ಕಂಡು ಹಿಡಿದ್ದಿದ್ದು,ಇದೇನು ದೊಡ್ಡ ವಿಶೇಷ,ನಮ್ಮ ಹತ್ರಾನೆ ತಗೊಂಡರು,ಈಗ ಕಂಡು ಹಿಡಿದದ್ದು ಅಪ್ರಯೋಜಕ ಅಂದರೆ ಅರ್ಥವಿರುತ್ತಾ!?,ಇನ್ನೊಬ್ಬರ ಎಪರ್ಟ್,ಅಥವಾ ಸಾಧನೆಯನ್ನ ಕೀಳಾಗಿ ಕಾಣೋದು,ಅದು ಅಪ್ರಯೋಜಕ,ನಂದೆ ಕಾಪಿ ಎನ್ನುವ ಹಾಗೆ ಹೇಳೋದು ಸರಿಯಲ್ಲ..!

ನಮಗೆ ಅದನ್ನ ಎನ್ ಕ್ಯಾಶ್ ಮಾಡುವ ಶಕ್ತಿ ಇರಲಿಲ್ಲ,ಹಾಗಾಗಿ ಅದು ಜನರಿಗೆ ತಲುಪಿಲ್ಲ,ಅವರಿಗೆ ಆ ಶಕ್ತಿ,ಯುಕ್ತಿ ಇತ್ತು ಅದಕ್ಕೆ ಅವರು ಜನರಿಗೆ ತಲುಪಿಸಿ,ಎನ್ ಕ್ಯಾಶ್ ಮಾಡಿಕೊಂಡು ಹಣ ಮಾಡಿದ್ದಾರೆ ಅಷ್ಟೇ ಅನ್ನೋ ಸತ್ಯ ಒಪ್ಪಿಕೊಳ್ಳಬೇಕು.. ಅದ್ಕಯಾಕೆ ನೀನು ಅಸಮಾಧಾನ ವ್ಯಕ್ತ ಮಾಡ್ತಿಯಾ ಅಂದ್ರು..!

ನಿಮಗೆ ಏನು ಅನಿಸ್ತು..
ನಿಜ ಅಲ್ವಾ..
ಯಾರೋ ಸಾಧಿಸಿದ್ದಕ್ಕೆ ವ್ಯ0ಗ್ಯವಾಡಿ, ಇದನ್ನ ಹಲವು ವರ್ಷದ ಹಿಂದೆ ಮಾಡಿದ್ದುಅನ್ನೋದಕ್ಕಿಂತ ಒಳ್ಳೆಯದು ಅಂತ ಬೆನ್ನು ತಟ್ಟೋದು ದೊಡ್ಡ ತನ ಅಲ್ವಾ!?

ಯಾವುದೋ ಕೆಲಸ ಮಾಡಿ,ನಮಗೆ ಧಕ್ಕಿಸಿ ಕೊಳ್ಳಲಾಗದೇ,ಅದರಲ್ಲಿ ಯಶಸ್ಸು ಪಡೆಯಲಾಗದೇ
ಅದು ಪೈಲ್ಯೂರ್ ಆದರೆ ಅದರಲ್ಲಿ,ನಮ್ಮ ಸೋಮಾರಿತನ,ನಮ್ಮ ಉಡಾಫೆ,ಪ್ರಚಾರ,ನಮ್ಮ ಲೋಪ ಇನ್ನೂ ಏನೇನೋ ಇದ್ದದ್ದರಿಂದ ಆದ ಸೋಲೇ ಹೊರತು..!

ಅದೇ ಕೆಲಸವನ್ನ ಇನ್ನೊಬ್ಬರು ಮಾಡಿ ಧಕ್ಕಿಸಿ ಕೊಂಡವರು ನಮಗೆ
ಮಾಡಿದ ಮೋಸ,ವಂಚನೆ ಆಗೋಕೆ ಸಾಧ್ಯವಿಲ್ಲ..
ಅವನಿಗೆ ಆ ಟ್ಯಾಲೆಂಟ್ ಇತ್ತು ಮಾಡಿ ಧಕ್ಕಿಸಿ ಕೊಂಡ..

ನಮಗೆ ಇರಲಿಲ್ಲ ಸೋತೆವು ಮತ್ತೆ ಪ್ರಯತ್ನಿಸಿ ನೋಡೋಣ ಅಂತ ಅಷ್ಟೇ ಅಲ್ವಾ..!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ