ಗುರುವಾರ, ಏಪ್ರಿಲ್ 12, 2018

ಗಡಿಬಿಡಿ ಗಂಡ,ಸಿಡಿಮಿಡಿ ಹೆಂಡತಿ

ಮೊನ್ನೆ ನನ್ನ ಚಡ್ಡಿ ದೋಸ್ತು,ಬಾಲ್ಯದ ಗೆಳೆಯನೊಬ್ಬ ಕರೆ ಮಾಡಿದಾಗ ತನ್ನ ಒಂದು ಪ್ರಯಾಣದ ಅನುಭವ ಹಂಚಿಕೊಂಡ..

ಅವನು ಊರಿಂದ KSRTC ಕುಪ್ಪಳ್ಳಿ-ಬೆಂಗಳೂರು sleeper ಬಸ್ ಹತ್ತಿ ಬೆಂಗಳೂರಿಗೆ ಹೊರಟಿದ್ದನಂತೆ..

ತನ್ನ ticket,conductor ಹತ್ರ confirm ಮಾಡಿಕೊಂಡು ತನ್ನ birth ನೋಡಿ,ಅಲ್ಲಿ ವಾಲಿಕೊಂಡು ಕುಳಿತಿದ್ದನಂತೆ..

ಆಗ ಒಬ್ಬಳು ಯುವತಿ ಬಂದು double birth ನಲ್ಲಿ ಕುಳಿತು ನಿರ್ವಾಹಕರಿಗೆ ticket ತೋರಿಸಿದರಂತೆ..

ಅದನ್ನ ಪರೀಕ್ಷಿಸಿ address proof ನೋಡಿದ ಮೇಲೆ ನಿರ್ವಾಹಕರು
"ಮೇಡಂ ಪಕ್ಕದಲ್ಲಿ ಯಾರೋ gents ಇದ್ದಾರೆ,
ಶಿವಮೊಗ್ಗ ದಲ್ಲಿ ಹತ್ತುತ್ತಾರೆ"
ಅಂದರಂತೆ..
ಕೂಡಲೇ ಯುವತಿ..
"ನಿಮಗೆ ಏನ್ರಿ ಕಷ್ಟ..
ನೀವ್ಯಾಕೆ ಅದೆಲ್ಲಾ ಹೇಳ್ತೀರಾ..
ನನಗೆ ಗೊತ್ತು ಪಕ್ಕದಲ್ಲಿ ಇದ್ದಾರೆ ಅಂತ
Ticket ತೋರಿಸಿದೆ ಅಲ್ವಾ ಇನ್ನೇನು ಬೇಕು ನಿಮಗೆ,ನಿಮ್ಮ ಕೆಲಸ ನೀವು ನೋಡಿ"

ಅಂತ ಒಂದೇ ಸಾರಿ ಫುಲ್ ಸಿಟ್ಟಾಗಿ,ಜೋರಾಗಿ ಹೇಳಿದರಂತೆ..

ನಿರ್ವಾಹಕರು
"ಸರಿ ಮೇಡಂ
ನಿಮ್ಮಿಷ್ಟ"
ಅಂತ ಅವರ ticket check ಕೆಲಸ ಮುಂದುವರೆಸಲು ಹೊರಟರಂತೆ..

1.5 ಘಂಟೆ ಪ್ರಯಾಣದ ನಂತರ,ಶಿವಮೊಗ್ಗಕ್ಕೆ ಬಸ್ ತಲುಪಿ KSRTC stand ನಲ್ಲಿ ಪ್ರಯಾಣಿಕರು ಹತ್ತಿ,ನಿರ್ವಾಹಕರು ಮತ್ತೆ ಅಲ್ಲಿ ಹತ್ತಿದ ಪ್ರಯಾಣಿಕರ ticket ಚೆಕ್ ಮಾಡುತ್ತಾ ಬಂದರಂತೆ..

ಆಗ ಈ ಯುವತಿಯ birth ಹತ್ತಿರ ಬಂದು ಶಿವಮೊಗ್ಗದಲ್ಲಿ ಹತ್ತಿದ ಪಕ್ಕದ ವ್ಯಕ್ತಿಯ ticket check ಮಾಡುತ್ತಾ ಇರುವಾಗ..

ಯುವತಿ ಬಹಳ ವಿನಮ್ರವಾಗಿ..

"ಸಾರ್..
ಬೇರೆ ಯಾವುದಾದರೂ ladies seat ಅಥವಾ single birth ಇದಿಯಾ ನೋಡಿ ಪ್ಲೀಸ್.."

ಅಂದರಂತೆ..

ಈಗ ನಿರ್ವಾಹಕರ ಸರದಿ..

"ಅಲ್ಲಾ ಮೇಡಂ ತೀರ್ಥಹಳ್ಳಿಯಲ್ಲಿ ಹೇಳಿದ್ದಕ್ಕೆ ನನಗೆ ಏನೇನೋ ಜೋರು ಜೋರು ಮಾತಾಡಿದ್ರಿ..
ಈಗ ಏನಾಯ್ತು,ಯಾವ ಬೇರೆ birth ಖಾಲಿ ಇಲ್ಲ ಬಸ್ ಫುಲ್ ಬುಕ್ ಆಗಿದೆ"

ಅಂದು ಅಲ್ಲಿಂದ ಹೊರಟರಂತೆ..

ಆಮೇಲೆ ಪದೇ ಪದೇ ಪರಿ ಪರಿಯಾಗಿ ಕೇಳಿ ಕೊಂಡಳಂತೆ..
ಆದರೆ ಬೇರೆ seat ಇರಲಿಲ್ಲವಂತೆ..
ನೀವೇ ಯಾರಲ್ಲಾದರೂ request ಮಾಡಿ ಮೇಡಂ ನಿರ್ವಾಹಕರು ಅಂದರಂತೆ..😯

ಆದರೆ
ಈ ಯುವತಿಯ ಆ ರೀತಿಯ ಉದ್ಧಟತನಕ್ಕೆ,ದುರಹಂಕಾರದ ವರ್ತನೆಗೆ
ಮುಖ್ಯ ಕಾರಣ ಏನಂತೆ ಗೊತ್ತಾ..!?🙊

ಇಲ್ಲಿದೆ ನೋಡಿ
ಕಹಾನಿ ಮೇ ಟ್ವಿಸ್ಟ್..😜

ಈಕೆಯ ಪತಿರಾಯರು
ಹೆಂಡತಿಗೆ, ತೀರ್ಥಹಳ್ಳಿಯಿಂದ ಬೆಂಗಳೂರಿಗೆ ಬಸ್ ಬುಕ್ ಮಾಡಿದ್ದರಂತೆ...
ಗಂಡ ಶಿವಮೊಗ್ಗದಿಂದ ಬೆಂಗಳೂರಿಗೆ ಬಸ್ ಬುಕ್ ಮಾಡಿದ್ದರಂತೆ...
ಇದರಲ್ಲೇನು ವಿಶೇಷ ಅಂತೀರಾ..!?🤔
ವಿಶೇಷ ಇದೆ..

ಗಂಡ ticket Book ಮಾಡಿದ್ದು Same birth,same side,ಆದರೆ ಬಸ್ ಮಾತ್ರ ಬೇರೆ..😂

ಹೆಂಡತಿಯದ್ದು ಕುಪ್ಪಳ್ಳಿ-ಬೆಂಗಳೂರು sleeperಬಸ್..🤣
ಗಂಡನದ್ದು ಆಗುಂಬೆ- ಬೆಂಗಳೂರು sleeper ಬಸ್..🤣

ಗಂಡನಿಗೆ ಲಾಟರಿ ಏನಾದ್ರೂ ಹೊಡೆದಿತ್ತಾ ,Double birth ನಲ್ಲಿ ಅವರಿಗೇ ಗೊತ್ತು..😉

(ನನ್ನ ಸ್ನೇಹಿತನಿಗೆ ಇದನ್ನೆಲ್ಲಾ ಕೇಳಿಸಿಕೊಳ್ಳುತ್ತಾ ಇರುವಾಗ ನಗು ತಡೆಯಲಾಗಲಿಲ್ಲವಂತೆ..)

ಈ ಕತೆಯ ನೀತಿ:-
ಗಂಡನನ್ನ ನಂಬಿ ಮೂರ್ಖರಾಗಬೇಡಿ ಅಂತೇನು ಇಲ್ಲ ಆಯ್ತಾ...😂
Ticket,ಬಸ್,seat/birth ಸರಿಯಾಗಿ ಪರೀಕ್ಷಿಸಿ ಬುಕ್ ಮಾಡಿ ಅಂತ ಅಷ್ಟೇ..
ಇಲ್ಲ ಅಂದ್ರೆ ಪೆಚ್ಚಾಗೋದು ಪಕ್ಕಾ..😂

ಗುರುವಾರ, ಮಾರ್ಚ್ 15, 2018

ಚಾಲಕರ ನಾಲೆಡ್ಜ್

ಮೊನ್ನೆ ಓಲಾ ಕ್ಯಾಬ್ ಬುಕ್ ಮಾಡಿ ಹೊರಟಿದ್ದೆ, ಚಾಲಕ ಇಂದಿರಾ ಕ್ಯಾ0ಟೀನ್ ಮುಂದೆ ಪಾಸ್ ಆಗುವಾಗ

"ನೋಡಿ ಸಾರ್ ಇಂದಿರಾ canteen ನಲ್ಲಿ ಎಷ್ಟು ಜನ ಇದ್ದಾರೆ ಅಂತ..ಇಬ್ಬರು ಮೂರು ಜನ ಇದ್ದಾರೆ ಅಂದರು..

"ನಾನು ಅಲ್ಲಾ ಮತ್ತೆ ಬಾರೀ ಸಹಾಯವಾಗಿದೆ ಬಡವರಿಗೆ ಬೆಂಗಳೂರಿನಲ್ಲಿ ಅಂತಾರಲ್ಲ ಕಾಂಗ್ರೆಸ್ ನವರು" ಅಂದೆ..

ಅದಕ್ಕೆ ಅವರು

"ಸಾರ್..
ಇಂದಿರಾ canteen ನಾನು ಒಂದು ದಿನ ಕೂಡ ಹೋಗಿಲ್ಲ ಯಾಕೆ ಗೊತ್ತಾ,
ನಾಳೆ ಇವರು ಇನ್ಯಾವುದೋ ಭಾಷಣದಲ್ಲಿ ,ಇವರನ್ನೆಲ್ಲ ಅನ್ನ ಹಾಕಿ ಸಾಕಿದ್ದೇ ನಾನು,ನಮಗೆ ವೋಟ್ ಹಾಕಿ ಅಂತ ಹೇಳೋದು,ಇವರ ಮನೆಯಿಂದಲೇ ಹಣ ತಂದು ಹಾಕಿದ್ದು ಅನ್ನುವ ಹಾಗೆ ಮಾತಾಡೋದು,
ಆಮೇಲೆ ನಮಗೆ ಆ ಪಾಪ ಪ್ರಜ್ಞೆ ಕಾಡೋದು ಇದೆಲ್ಲಾ ಬೇಕಾ ಸಾರ್..!?

ನಾನು ಕಷ್ಟಪಟ್ಟು ದುಡಿಯುತ್ತೇನೆ,ಗಾಡಿ ಅಂಗಡಿಯಲ್ಲಿ 25 ಅಥವಾ 30 ಕೊಟ್ಟು ಚಿತ್ರನ್ನಾ ಅಥವಾ ಅನ್ನ ಸಾಂಬಾರ್ ತಿಂತೀನಿ, ನನ್ನ ಹಾಗೆ ಅವನೂ ದುಡಿಮೆ ಮಾಡೋನು ಅಲ್ವಾ ಸಾರ್..ಅವನಿಗೇ ಹೋಗಲಿ ನನ್ನ ಹಣ...

ನಾನು ಈ ಹಿಂದೆ ಕಟ್ಟಾ ಕಾಂಗ್ರೆಸ್ ಆಗಿದ್ದೆ,ಸಿದ್ದರಾಮಯ್ಯ ಒಳ್ಳೆ ವ್ಯಕ್ತಿ ಅಂದು ಕೊಂಡು ಹಿಂದಿನ ಚುನಾವಣೆಯಲ್ಲಿ ಫುಲ್ ಸಪೋರ್ಟ್ ಮಾಡಿದ್ದೆ..

ಆದರೆ ಇವರು ಜಾತಿ,ಹಿಂದೂಗಳನ್ನ ಕೇವಲವಾಗಿ ನೋಡಿದ್ದು,ಚುನಾವಣೆ ಸಮಯದಲ್ಲಿ ಇಂದಿರಾ canteen,ಇವರು ಮಾಡಿದ ಕೆಲಸ ಹೇಳಿಕೊಳ್ಳೋದು ಬಿಟ್ಟು,ಮೋದಿ ಬೈಯೋದು, ಇನ್ಯಾರನ್ನೋ ಸಣ್ಣ ವಿಷಯಕ್ಕೆ ತೆಗಳೋದು,ರೌಡಿ ಗಳನ್ನ ಸಪೋರ್ಟ್ ಮಾಡೋದು,ಅಧಿಕಾರಗಳನ್ನ ಕೇವಲವಾಗಿ ನೋಡೋದು,ಅಹಿಂದಾ ಅಂತ ಅವರನ್ನ ಎಲ್ಲದಕ್ಕೂ ಎಳೆದು ತರೋದು,ಈ ತರ ಎಲ್ಲಾ ಅನ್ಯಾಯ,ಗಿಮಿಕ್ ಇದೆಲ್ಲಾ ಬೇಕಾ ಸಾರ್..!?

ನಾನು ಈ ಸರಿ ಇವರಿಗೆ ವೋಟ್ ಹಾಕಲ್ಲ ಸಾರ್..
ಇವರೇ ಮುಂದೆ ಮತ್ತೆ ಬಂದರೆ ನಮ್ಮನ್ನ ಬದುಕೋಕೆ ಬಿಡ್ತಾರಾ ಸಾರ್..

Tax ಕಟ್ಟೋರು ಯಾರೋ..ಸ್ಕೋಪ್ ತಗಳ್ಳೋದು ಮಾತ್ರ ಇವರು..

ಅದೇನೋ cab ತಗೊಳ್ಳೋಕೆ subsidy ಅಂತ ಬೇರೆ ಕೊಡ್ತಾರಂತೆ ಅಂತ ಸುದ್ದಿ ಇದೆಯಂತೆ,ಹಾಗಾದ್ರೆ ನಮ್ಮಂತ cab ನವರು ಹೇಗೆ ಬದುಕೋದು ಹೇಳಿ ಸಾರ್..!?

ಇವೆಲ್ಲಾ ತಿಳಿಯದಷ್ಟು ನಾವ್ಯಾರೂ ದಡ್ಡರಿಲ್ಲ,ಮುಂದೆ ನನ್ನ ಧರ್ಮದವರು ಚೆನ್ನಾಗಿರಬೇಕು,ಇವರ ಓಲೈಕೆ ರಾಜಕಾರಣಕ್ಕೆ ಇಷ್ಟು ದಿನ ನಮ್ಮವರು ಅನುಭವಿಸ್ತಾ ಇರೋದೇ ಸಾಕು...
ಸ್ವಲ್ಪ ಜಾಸ್ತಿ ಮಾತಾಡಿದೆ ಅನಿಸುತ್ತೆ ಸಾರ್,ಬೇಜಾರಾಗಬೇಡಿ,ಹೇಳಬೇಕು ಅನಿಸ್ತು ಹೇಳಿದೆ",
ಅಂತ ಒಂದೇ ಉಸಿರಲ್ಲಿ ಎಲ್ಲಾ ಹೇಳಿಬಿಟ್ಟರು.."

"ಪರವಾಗಿಲ್ಲ ಬಿಡಿ,
ಏನು ಓದಿದಿರಾ ನೀವು"ಅಂದೆ..

"PUC complete ಮಾಡಿಲ್ಲ ಸಾರ್"ಅಂದರು..

ಇನ್ನು traffic,ಬೆಂಗಳೂರಿನ ಜನಸಂಖ್ಯೆ ಹೀಗೆ ಹಲವು ವಿಷ್ಯದ ಬಗ್ಗೆ ಮಾತಾಡಿದರು..
ನನಗೆ ಅವರ ಹಲವು ವಿಚಾರಗಳ ಬಗ್ಗೆ ಇರುವ knowledge ಹಾಗೂ ಕಾಳಜಿಯ ಬಗ್ಗೆ ಸಂತೋಷ ಅನ್ನಿಸ್ತು..

ಹೆಚ್ಚಿನವರಿಗೆ ಎಲ್ಲಾ ಮಾಹಿತಿ ಇರುತ್ತೆ..
ಜನರನ್ನ ಯಾವ ಪಕ್ಷವೇ ಆಗಲಿ ಅಷ್ಟು ಸುಲಭಕ್ಕೆ ಮರಳು ಮಾಡೋಕಾಗಲ್ಲ ಅನಿಸ್ತು..☺️

ಬೈಯೋಕು ಅವರ jio sim ಬೇಕು .

ನಿನ್ನೆ ಒಬ್ಬರು ಸ್ನೇಹಿತರು ಬಹಳ ಸಮಯದ ನಂತರ ಯಾವುದೋ ವಿಷಯ ಕೇಳೋಕೆ ಕರೆ ಮಾಡಿದ್ದರು..

ಈ ಹಿಂದೆ ಕರೆ ಮಾಡಿದಾಗೆಲ್ಲ ಕೆಲವೇ ನಿಮಿಷ ಕರೆಯಲ್ಲಿ ಮಾತಾಡ್ತಾ ಇದ್ದವರು..
ನಿನ್ನೆ ಬಹಳ ಹೊತ್ತು ಹಲವು ವಿಷಯ ಮಾತಾಡಿದರು..

ಮೋದಿ ಅಂಬಾನಿ,ಅದಾನಿ ಅಂತ ಮೊಸಗಾರರ, ಶ್ರೀಮಂತರ ಏಜೆ0ಟ್,ಬಡವರ ಪರ ಇಲ್ಲ,ಭ್ರಷ್ಟರ ಪರ ಅಂತೆಲ್ಲಾ ಹೇಳಿ
ಕೊನೆಗೆ ಮೋದಿಯನ್ನ ಬೈಯೋದರ ಮೂಲಕ ವಂದನಾರ್ಪಣೆ ಮಾಡಿದರು....😉🤣

ನಾನು ಕರೆಯ ಕೊನೆಗೆ ಕೇಳಿದೆ
Jio sim ತಗೊಂಡ್ರಾ?

ಹೂಂ..
Unlimited call,Data ಕೂಡ ಇದೆ ಇದೊಂದು ಅನುಕೂಲ ಆಗಿದೆ ಮಾರಾಯ್ರೆ ಈಗ ಅಂದ್ರು..
😂😂😂😂😂

Cigarette,helmette story ಕತೆ

ಸಿಗರೇಟ್ ಪ್ಯಾಕ್ ಮೇಲೆ
Smoking kills,
ಸಿಗರೇಟ್ ಸೇವನೆ ಆರೋಗ್ಯಕ್ಕೆ ಹಾನಿಕರ ಅಂತ ಬರೆದು ಮಾರಾಟ ಮಾಡುತ್ತಾರೆ..

ಇಷ್ಟವಿದ್ದವರು ಖರೀದಿಸುತ್ತಾರೆ ಸೇದುತ್ತಾರೆ,
ಇಲ್ಲವಾದವರು ಇಲ್ಲ..
ಸೇದುವವರೆಲ್ಲಾ ಕ್ಯಾನ್ಸರ್ ಬಂದು ಸಾಯೋದು ಇಲ್ಲ..

ಹಾಗೆ Helmet ಹಾಕದೇ ಇದ್ದರೆ ಪ್ರಾಣಕ್ಕೆ ಅಪಾಯ ಇದೆ ಅಂತ ಅದರ ಬಾಕ್ಸ್ ಮೇಲೆ ಹಾಕಿ ಮಾರಾಟ ಮಾಡಲ್ಲ ಯಾಕೆ..?

ಇಷ್ಟವಿದ್ದವರು ಖರೀದಿಸುತ್ತಾರೆ..
ಧರಿಸುತ್ತಾರೆ ಬೈಕ್ ಚಲಾಯಿಸುತ್ತಾರೆ, ಇಲ್ಲವಾದವರು ಇಲ್ಲ..
ಹೆಲ್ಮೆಟ್ ಹಾಕದೇ ಇದ್ದವರೆಲ್ಲಾ ವಾಹನದಿಂದ ಕೆಳಗೆ ಬಿದ್ದು ತಲೆ ಒಡೆದು ಕೊಳ್ಳೋದು ಇಲ್ಲ..!

ಅವರವರ ಜೀವದ ಕಾಳಜಿ ಕುಟುಂಬದ ಜವಾಬ್ದಾರಿ ಅವರವರಿಗೆ ಗೊತ್ತಿರುತ್ತೆ..!
ಅದನ್ನ ಹೇರಿಕೆ ಮಾಡೋ ಅಗತ್ಯ ಇದಿಯಾ?

ಹೆಲ್ಮೆಟ್ ಮಾತ್ರ ಯಾಕೆ ಕಡ್ಡಾಯ..?
ಸಿಗರೇಟ್ ಅಥವಾ ಮಧ್ಯಪಾನ ನಿಷೇಧ ಕಡ್ಡಾಯ ಯಾಕೆ ಮಾಡಲ್ಲ?

ಪ್ರಜೆಗಳ ಸುರಕ್ಷತೆಯೇ ಸರ್ಕಾರದ ಹೊಣೆ ಅನ್ನುವ ಹಾಗೆ ಮಾತುಗಳು ಬೇಕಾ?
ಈ ದ್ವಂದ್ವ ಬೇಕಾ?

ಪ್ರಜೆಗಳ ಮೇಲೆ ಅಷ್ಟು ಕಾಳಜಿ ಇರುವ ಸರ್ಕಾರ

ಸಿಗರೇಟ್ ಅಪಾಯಕಾರಿ ಅಂತ ಗೊತ್ತಿದ್ದೂ ಉತ್ಪಾದನೆ ಮಾಡಲು ಯಾಕೆ ಬಿಡಬೇಕು,ಮಾರಾಟ ಮಾಡಬೇಕು?

Wise story

ಒಮ್ಮೆ ಸ್ವರ್ಗದಲ್ಲಿ ನಾರದರು ಮತ್ತು ತುಂಬುರರ ನಡುವೆ 'ನಮ್ಮಿಬ್ಬರಲ್ಲಿ ಶ್ರೇಷ್ಠ ಕಲಾವಿದರು ಯಾರು?' ಎಂಬ ಕುರಿತು ವಿವಾದ ಉಂಟಾಯಿತು. ಅವರಿಬ್ಬರ ನಡುವೆ ಅದು ಬಗೆಹರಿಯದಿದ್ದಾಗ ತಮ್ಮ ವಿವಾದವನ್ನು ಬಗೆಹರಿಸುವಂತೆ ಭಗವಾನ್‌ ವಿಷ್ಣುವಿನ ಬಳಿ ಹೋಗಿ ವಿನಂತಿಸಿದರು.

ಆಗ ಮುಗುಳು ನಗುತ್ತಾ ವಿಷ್ಣು ದೇವರು ಹೇಳಿದರು: 'ಸಂಗೀತದ ಮಟ್ಟಿಗೆ ನಾನು ಅಷ್ಟೇನೂ ಪಳಗಿದವನಲ್ಲ. ಮಹಾನ್‌ ಕಲಾವಿದರಾದ ಹನುಮಂತರ ಬಳಿಗೆ ಹೋಗಿ. ಅವರು ಸೂಕ್ತ ತೀರ್ಮಾನವನ್ನು ನೀಡಬಲ್ಲರು'.

ವಿಷ್ಣುವಿನ ಮಾತನ್ನು ಒಪ್ಪಿದ ತುಂಬುರ ಮತ್ತು ನಾರದ ಇಬ್ಬರೂ ಅಂತಿಮ ನಿರ್ಣಯವನ್ನು ಪಡೆಯಲೆಂದು ನೇರವಾಗಿ ಹಿಮಾಲಯದ ಕಡೆಗೆ ಹೊರಟರು. ಅಲ್ಲಿ ಹಿಮಾಲಯದ ತಪ್ಪಲು ಪ್ರದೇಶದಲ್ಲಿ ಮಂಜುಗುಡ್ಡೆಗಳ ನಡುವೆ ಕುಳಿತು ಮಧುರ ಕಂಠದಲ್ಲಿ ಹಾಡುವ ಹನುಮಂತನನ್ನು ಕಂಡರು.

ಹನುಮಂತರು ತಮ್ಮ ಗಾಯನದಲ್ಲಿ ಎಷ್ಟೊಂದು ಮಗ್ನರಾಗಿದ್ದರೆಂದರೆ ಚಪ್ಪಾಳೆ ತಟ್ಟಿ ಹನುಮಂತನ ಗಮನವನ್ನು ಸೆಳೆಯಬೇಕಾಯಿತು. ಕಣ್ತೆರೆದ ಹನುಮಂತನಿಗೆ ಅವರಿಬ್ಬರೂ ತಿಳಿಸಿದರು: 'ಭಗವಾನ್‌ ವಿಷ್ಣುವು ನಮ್ಮಿಬ್ಬರನ್ನೂ ತಮ್ಮ ಬಳಿಗೆ ಕಳುಹಿಸಿ ನಮ್ಮಿಬ್ಬರ ಪೈಕಿ ಶ್ರೇಷ್ಠ ಸಂಗೀತ ವಿದ್ವಾಂಸರು ಯಾರು? ಎಂಬ ನಿರ್ಣಯ ಪಡೆಯುವಂತೆ ತಿಳಿಸಿದ್ದಾರೆ'.

ಹನುಮಂತ ಈ ಪ್ರಶ್ನೆಗೆ ಯಾವ ಉತ್ತರವನ್ನೂ ಕೊಡಲಿಲ್ಲ. ಬದಲಾಗಿ ಪಕ್ಕದಲ್ಲಿದ್ದ ವೀಣೆಯನ್ನು ಎತ್ತಿಕೊಂಡರು. ನಿಧಾನವಾಗಿ ಅದರ ತಂತಿಗಳನ್ನು ಹದಗೊಳಿಸುತ್ತಾ ಒಂದು ವಿಶಿಷ್ಟ ಪ್ರಕಾರವಾದ ಧ್ವನಿ ಬರುವಂತೆ ತಂತಿಯನ್ನು ಮೀಟತೊಡಗಿದರು. ವೀಣೆಯಿಂದ ಹೊರಟ ಧ್ವನಿ ಎಷ್ಟೊಂದು ಅತ್ಯದ್ಭುತವಾಗಿತ್ತು ಎಂದರೆ, ಅದರ ಪರಿಣಾಮವಾಗಿ ಹಿಮಾಲಯದ ಮಂಜುಗಡ್ಡೆ ಕರಗಿ ನೀರಾಗತೊಡಗಿತು. ಇದನ್ನು ನೋಡಿದ ತುಂಬುರ-ನಾರದರಿಬ್ಬರೂ ಚಕಿತರಾಗಿ ಬಿಟ್ಟರು. ನೀರಿನ ಪ್ರವಾಹವೇ ಉಕ್ಕಿ ಹರಿದು ನಾರದ ತುಂಬುರರು ಈ ನೀರಲ್ಲಿ ಮುಳುಗತೊಡಗಿದರು. ಆಗ 'ನಮ್ಮನ್ನು ಪಾರು ಮಾಡಿರಿ' ಎಂದು ವಿನಂತಿಸಿದರು.

ಆಗ ಹನುಮಂತನು 'ಕರಗಿದ ನೀರನ್ನು ಹಿಮದಗಡ್ಡೆಯನ್ನಾಗಿ ಮಾಡಬಲ್ಲವರೇ ಶ್ರೇಷ್ಠ ಕಲಾವಿದರೆಂಬುದೇ ನನ್ನ ನಿರ್ಣಯ' ಎಂದು ನುಡಿದನು. ನಾರದ-ತುಂಬುರರಿಬ್ಬರೂ ತಮ್ಮ ಸಂಗೀತದ ಹಿರಿಮೆ ತೋರಲೆಂದು ವೀಣೆಯ ತಂತಿಗಳನ್ನು ಜೋರಾಗಿ ಮೀಟತೊಡಗಿದರು. ಆದರೆ ಅವರ ಪ್ರಯತ್ನ ವ್ಯರ್ಥವಾಗಿ 'ನೀವೇ ಮಹಾನ್‌ ಕಲಾವಿದರು' ಎಂದು ಸೋಲೊಪ್ಪಿಕೊಂಡು, ತಲೆ ಬಾಗಿದರು.

ಈ ಪ್ರಪಂಚದಲ್ಲಿ ಯಾವುದೇ ಒಂದು ಕಲೆ ಅಥವಾ ವಿಶೇಷ ಪ್ರಕಾರವಾದ ಜ್ಞಾನದ ಬಗ್ಗೆ ಗರ್ವ, ಅಹಂಕಾರವಿರಬಾರದು. ಎಲ್ಲ ಕಲೆ, ವಿಜ್ಞಾನಗಳು ಭಗವಂತನ ಆರಾಧನೆಗಾಗಿ ಇರಬೇಕೇ ಹೊರತು, ಅಹಂಕಾರ ಪ್ರದರ್ಶನಕ್ಕಾಗಿ ಅಲ್ಲ. ಜಗತ್ತಿನಲ್ಲಿ ತಾನೇ ದೊಡ್ಡವನು ಎನ್ನುವ ಅಹಂಕಾರ ಯಾರಿಗೂ ಬರಬಾರದು, ಎಲ್ಲರೂ ಶಕ್ತಿವಂತರು ಎಂಬ ಮುಕ್ತ ನಿಲುವು ಹೊಂದಿರಬೇಕು. 'ತಾಳಿದವ ಬಾಳಿಯಾನು' ಎಂಬ ಮಾತಿನಂತೆ ನಿರಹಂಕಾರಿಗಳೇ ಈ ಜಗತ್ತಿನಲ್ಲಿ ಸಫಲರಾಗಬಲ್ಲರು ಎಂಬುದನ್ನು ಎಂದೂ ಮರೆಯಬಾರದು.

ಈ ಬರಹ ಯಾರದ್ದೋ ಗೊತ್ತಿಲ್ಲ ಆದರೆ ಒಳ್ಳೆಯ ಬರಹ..ಸರಿ ಅನ್ನಿಸಿತು..
ಕೃಪೆ :-whats app

ಮಲೆಯಾಳಿಗಳ ದ್ವ0ದ್ವ

ನನ್ನ ಪರಿಚಯಸ್ತರು ಒಬ್ಬರು ಮಲೆಯಾಳಿ ಬೆಂಗಳೂರಿನಲ್ಲಿ ವಾಸವಾಗಿದ್ದರು,ಅವರು ಸಿಕ್ಕಿದಾಗೆಲ್ಲಾ..
ಕೇರಳ ದ unlimited ಗುಣಗಾನ ಮಾಡುತ್ತಾ ಇದ್ದರು,ಅಷ್ಟಕ್ಕೇ ಸುಮ್ಮನಾಗುತ್ತಾ ಇರಲಿಲ್ಲ ನಮ್ಮ ರಾಜ್ಯ ಹಾಗೂ ಬೆಂಗಳೂರು ಮತ್ತೆ ನಮ್ಮ ರಾಜಕಾರಣಿಗಳು ನೂರಕ್ಕೆ ನೂರು ಸರಿ ಇಲ್ಲ,ಬೆಂಗಳೂರು ಗಾರ್ಬೇಜ್ city,ಜನ ಸರಿ ಇಲ್ಲ,traffic,ಇನ್ನೂ ಏನೇನೋ complents ಹಾಗೂ ವ್ಯ0ಗ್ಯ ಮಾತು,ಕುಹಕ...

ಒಂದು ದಿನ ನಾನು ಅವರಿಗೆ ಕೇಳಿದೆ..

"ಸರಿ
ನೀವು ಎಷ್ಟು ವರ್ಷದಿಂದ ಬೆ0ಗಳೂರಲ್ಲಿ ಇದ್ದೀರಾ..?"

"15 ವರ್ಷ ಆಯ್ತು.."

"ನೀವ್ಯಾಕೆ ನಿಮ್ಮೂರು ಕೇರಳ ಬಿಟ್ಟು ಆಸ್ತಿ,ಮನೆ ಸೈಟ್ ಬಿಟ್ಟು ಇಲ್ಲಿರೋದು..?"

"ಅಲ್ಲ,ಇಲ್ಲಿ ಕೆಲಸ ಮಾಡೋಕೆ ಬಂದು settle ಆದೆ..

"ಮತ್ತೆ ಅಲ್ಲಿನ ಆಡಳಿತ,ಸರ್ಕಾರ, ಬಹಳ ಒಳ್ಳೆಯದಿದೆ ಅಂತೀರಾ,ಆರೋಗ್ಯ,ರಸ್ತೆ,ನೀರು ಎಲ್ಲಾ ಸೌಲಭ್ಯ ಇದೆ ಅಂತೀರಾ ಮತ್ಯಾಕೆ,ಏನೂ ಸರಿ ಇಲ್ಲದ ನಮ್ಮ ರಾಜ್ಯದಲ್ಲಿ ಇಷ್ಟು ವರ್ಷದಿಂದ ಕಷ್ಟ ಪಟ್ಟುಕೊಂಡು ಇದ್ದೀರಾ?"
ಅಂತ ವ್ಯ0ಗ್ಯವಾಗಿ ಕೇಳಿದೆ..😡

ಅದಕ್ಕೆ ಅವರು ತಡಬಡಾಯಿಸುತ್ತಾ..

"ಇಲ್ಲಿ ಕೆಲಸ ಹಾಗೂ ಹೆಚ್ಚು ಸಂಭಳ ಇದೆ,ಎಲ್ಲಾ ಅನುಕೂಲ ಸುಲಭವಾಗಿ ಸಿಗುತ್ತೆ,ಎಲ್ಲದಕ್ಕೂ ಕೇರಳದಲ್ಲಿ ಇದ್ದಂತೆ ಸ್ಟ್ರೈಕ್ ಮಾಡಲ್ಲ,ಸುರಕ್ಷತೆ ಚನ್ನಾಗಿದೆ,ವಾತಾವರಣ ಚನ್ನಾಗಿದೆ,ಬದುಕಲು ಹಲವು ದಾರಿ ಇದೆ,ಯಾರೂ ನಮ್ಮ ಸುದ್ದಿಗೆ ಬರಲ್ಲ,transfortation,ಚನ್ನಾಗಿದೆ,ನಮ್ಮ ಜೀವನ ನಮಗೆ ಎನ್ನುವಂತೆ ಬದುಕಬಹುದು"
ಅಂತೆಲ್ಲಾ ಹೇಳೋಕೆ ಶುರು ಮಾಡಿದರು..!!!

ಅದಕ್ಕೆ ನಾನು ಹೇಳಿದೆ..
"ಸಾರ್ ನಮ್ಮ ಕನ್ನಡಿಗರ ವಿಶಾಲಹೃದಯವೇ ನಮಗೆ ಮುಳುವಾಗಿದ್ದು ನೋಡಿ..
ಕೇರಳ ಅಥವಾ ತಮಿಳುನಾಡಿನಲ್ಲಿ ಹೆಚ್ಚಿನವರು ಬೇರೆ ಭಾಷೆ ಮಾತೇ ಆಡಲ್ಲ..
ಗನ್ನಡವಾ?ಈ ಆಳು ಎಂದ ಪರ್ನ್ಯು,ಅಂತ ಓರೆ ಗಣ್ಣಿನಿಂದ ನೋಡ್ತಾರೆ ಅಲ್ಲಿ ವಿಳಾಸ ಕೇಳಿದರೆ..
ಆದರೆ ಅದೇ ಬೆಂಗಳೂರಿನಲ್ಲಿ ನಿಮಗೆ ಏನಾದರೂ ಆ ರೀತಿ ಸಮಸ್ಯೆ ಆಗಿದೆಯಾ?
Address ಕೇಳೋದರಿಂದ ಹಿಡಿದು ಯಾವುದೇ ಅಂಗಡಿಗೆ ಹೋದಾಗ?
ಮತ್ಯಾಕೆ ನಮ್ಮ ರಾಜ್ಯವನ್ನ ಹಿಗಳೆಯೋದು?
ನಿಮ್ಮ ರಾಜ್ಯ,ನಿಮ್ಮ ಊರು ನಿಮಗೆ ದೊಡ್ಡದು,ಆದರೆ ಅನ್ನ ಹಾಕುತ್ತಾ ಇರುವ ಜಾಗಕ್ಕೂ ಗೌರವ ಕೊಡಬೇಕಲ್ಲ ಅಂದೆ..."

ಅದಕ್ಕೆ ಏನೂ ಹೇಳದೆ,ಮಾತು ಬದಲಾಯಿಸಿದರು..

ನನಗೆ ಸಿಕ್ಕ ಹೆಚ್ಚಿನ ಮಳೆಯಾಳಿಗಳು ಹೀಗೆ ಮಾತಾಡಿದ್ದಾರೆ..ಮತ್ತೆ ಅಷ್ಟೆಲ್ಲಾ ಒಳ್ಳೆಯ ಆಡಳಿತ ಇರೋ ರಾಜ್ಯ ಬಿಟ್ಟು ನಿಮ್ಮವರು ಕೆಲಸ ಅರಸುತ್ತಾ ಬೇರೆ ಬೇರೆ ಕಡೆ,ಬೇರೆ ಬೇರೆ ಯ ಕೆಲಸ ಯಾಕೆ ಮಾಡುತ್ತಾ ಇದ್ದಾರೆ ಅಂತ,ಅವರಿಗೆ ಪ್ರಶ್ನೆ ಕೇಳಿದ್ದಕ್ಕೆ ಉತ್ತರ ಕೊಡಲು ತಡಕಾಡಿದ್ದಾರೆ..
ಇನ್ನು ಕೆಲವರು ನಮಗೆ ಜಾಸ್ತಿ ಹಣ ಬೇಕು ಅದಕ್ಕೆ ಬೇರೆ ದೇಶದಲ್ಲಿ ಇದ್ದೇವೆ ಅನ್ನುತ್ತಾರೆ..
ಇನ್ನು ಕೆಲವರು health and wealth is great ಸಾರ್ ಅಲ್ಲಿ ಅನ್ನುವರಿಗೆ,ಪಿನರಾಯಿ ಯಾಕೆ ಚೆನೈ ಆಸ್ಪತ್ರೆಯಲ್ಲಿ ಇದ್ದಾರೆ ಅಂದರೆ..
ಓಹ್ ಅವರು ಅಲ್ಲೇ ಇದ್ರು ಅದಕ್ಕೆ ಅಲ್ಲೇ ಸೇರಿದ್ರು ಅಂತಾರೆ..
ಇಷ್ಟು ಅಭಿವೃದ್ಧಿ ಹೊಂದಿದ ರಾಜ್ಯ ಮತ್ತೆ ಜನತೆ ಜೊತೆ ನೀವು ಇರೋದು ಬಿಟ್ಟು ಯಾವುದೋ ಅರಬ್ ದೇಶದಲ್ಲಿ ಯಾಕೆ ಇದ್ದೀರಾ ಕೇಳಿದರೆ..
ಕೆಲ್ಸ ಬೇಕಲ್ಲ ಅಂತಾರೆ..

ಇದು ಕಮ್ಯುನಿಷ್ಟು ಮನಸ್ಥಿತಿ..

ನಾವು ಚೆನ್ನಾಗಿರಬೇಕು..
ಬೇರೆಯವರು ಚನ್ನಾಗಿರಬಾರದು ಅಷ್ಟೇ..

ಉಂಡ ಮನೆಗೆ ದ್ರೋಹ ಬಗೆಯೋದು ಅಂದರೆ ಇದೇನಾ?

ದುರಹಂಕಾರ ಶಾಶ್ವತವಲ್ಲ

ಹೋದ ಶನಿವಾರ ರಾಜರಾಜೇಶ್ವರಿ ನಗರದಿಂದ ಬರುತ್ತಾ ಇದ್ದೆ..

ನನ್ನ ಹಿಂದೆಯೇ ಒಬ್ಬಳು ಯುವತಿ access(ಹೊಸಾ ಮಾಡೆಲ್)ನಲ್ಲಿ ಕಿವಿಗೆ head phone ಸಿಕ್ಕಿಸಿಕೊಂಡು ಹೆಲ್ಮೆಟ್ ಹಾಕದೇ,ಎಡ,ಬಲ ಹೇಗೆಗೋ ಇಷ್ಟ ಬಂದ ಹಾಗೆ ಸ್ಪಿಡಾಗಿ ಓಡಿಸುತ್ತಾ ಇದ್ದಳು,ಪೂರ್ಣಪ್ರಜ್ಞಾ ಲೇ ಔಟ್ ಹತ್ತಿರ ವಿಷ್ಣುವರ್ಧನ್ ರಸ್ತೆಗೆ ಹೋಗುವ ದಾರಿಯ ಬಳಿ ದೊಡ್ಡ ಹೊಂಡಾ ಬಿದ್ದಿತ್ತು..
ಆ ಹುಡುಗಿ ನನ್ನ ಪಕ್ಕ chase ಮಾಡಿ ಎಡಕ್ಕೆ ಹೋದವಳು ಕೂಡಲೇ ಸಂಪೂರ್ಣ ಬಲಕ್ಕೆ ಬಂದು ಬ್ರೇಕ್ ಹಾಕಿಬಿಟ್ಟಳು..

ಹಿಂದೆಯಿಂದ ಸುಮಾರು 60,65 ವರ್ಷ ಆಸುಪಾಸಿನ ವ್ಯಕ್ತಿಯೊಬ್ಬರು jupiter ದ್ವಿಚಕ್ರವಾಹನದಲ್ಲಿ normal speed ನಲ್ಲಿ ಬರುತ್ತಾ ಇದ್ದರು,
ಈ ಹುಡುಗಿ ಹೀಗೆ ಸಡನ್ ಬ್ರೇಕ್ ಹೊಡೆದು ಮದ್ಯ ರಸ್ತೆಯಲ್ಲಿ ನಿಲ್ಲಿಸಿದ್ದನ್ನ ನೋಡಿ ಅವಳ ಗಾಡಿಗೆ ಹಿಂದಿನಿಂದ ಹೊಡೆಯೋದು ತಪ್ಪಿಸಲು ಹೋಗಿ ಬ್ರೇಕ್ ಹೊಡೆದಿದ್ದಾರೆ ಗಾಡಿ ಸ್ಕಿಡ್ ಆಗಿದೆ,balance ಮಾಡೋಕೆ ಆಗದೆ ಕೆಳಗೆ ಬಿದ್ದರು.

ಹೆಲ್ಮೆಟ್ ಇದ್ದಿದ್ದರಿಂದ ತಲೆಗೆ ರಸ್ತೆಯ edge ಹೊಡೆದರು ಏನೂ ಆಗಿಲ್ಲ ಅವರಿಗೆ..
ನಾನು ಕೂಡಲೇ ಅಲ್ಲೇ ನನ್ನ ವಾಹನ ಸೈಡಿಗೆ ಹಾಕಿ,ಓಡಿ ಹೋಗಿ..ಅವರನ್ನ ಎಬ್ಬಿಸಿ ಅಲ್ಲೇ ಪಕ್ಕಕ್ಕೆ ಕೂರಿಸಿ ಅವರ ಮಧ್ಯ ರಸ್ತೆಯಲ್ಲಿ ಬಿದ್ದಿದ್ದ jupiter ದ್ವಿಚಕ್ರವಾಹನವನ್ನ ಎತ್ತಿ,ಬದಿಯಲ್ಲಿ ನಿಲ್ಲಿಸಿ ತಿರುಗಿ ನೋಡುತ್ತೇನೆ..
ಆ ಹುಡುಗಿ ಒಂದು ನಿಮಿಷ ನಿಲ್ಲಿಸದೇ ಅಲ್ಲಿಂದ ಮಂಗ ಮಾಯ,
ಏನಾಯ್ತು ಅಂತ ಕೇಳುವ ಸಂಯಮ ಹಾಗೂ ಮಾನವೀಯತೆಯೂ ತೋರಲಿಲ್ಲ ಆ ಯುವತಿ,ದುರಹಂಕಾರದಿಂದ ಹೋಗೆ ಬಿಟ್ಟಳು,

ನಾನು ಆ ಗಡಿಬಿಡಿಯಲ್ಲಿ ಅವಳ ವಾಹನದ ನಂಬರ್ ನೋಡಲೂ ಇಲ್ಲ..

ಸಾರ್..ಹೇಗಿದ್ದೀರಾ,ಸರಿ ಪೆಟ್ಟಾಯ್ತಾ? ನೀರು ಬೇಕಾ ಅಂತ ಕೇಳ್ತಾ ಇದ್ದೆ..
ಆಗ ಅಲ್ಲೇ ಪಕ್ಕದಲ್ಲಿ construction ಕೆಲ್ಸ ಮಾಡುತ್ತಾ ಇದ್ದವರು ಸಹಾಯಕ್ಕೆ ಓಡಿ ಬಂದರು..

ಪರ್ವಾಗಿಲ್ಲ ಬಿಡಿ..ಏನೂ ಆಗಿಲ್ಲ,
ಅಂದರು ಮೊಣಕೈ ಮತ್ತೆ,ಹಸ್ತದಿಂದ ರಕ್ತ ಸುರಿಯುತ್ತಾ ಇತ್ತು..
ನಾನೇ ಮನೆಗೆ ಬಿಡ್ತಿನಿ ಬನ್ನಿ ಅಂದೆ..

ಇಲ್ಲ ಇಲ್ಲೇ ಹತ್ತಿರ ಮನೆ,ಮಗನ್ನ ಕರಿತೇನೆ ಸಾರ್..It's OK..No problem I'm all right ಅಂತ ನಡುಗುತ್ತಾ ಹೇಳಿದರು..

ಪದೇ ಪದೇ,ಏನಾದ್ರು ಜಾಸ್ತಿ ನೋವು ಆಗಿದ್ರೆ ಹೇಳಿ ಸಾರ್ ಆಸ್ಪತ್ರೆಗೆ ಹೋಗೋಣ,ಅಂತ ಕೇಳಿದರೂ,
ಅವರು ನಿಮಗ್ಯಾಕೆ ತೊಂದರೆ,ಅಂತದ್ದು ಏನೂ ಆಗಿಲ್ಲ ಅಂದರು..
Thank you very much ನಿಮ್ಮ ಸಹಾಯಕ್ಕೆ ಅಂದರು..

ಕೊನೆಗೆ ನಿಮ್ಮ0ತವರೂ ಬೆಂಗಳೂರಲ್ಲಿ ಇದೀರಲ್ಲಾ ಖುಷಿ ಆಯ್ತು ಅಂದರು..😣
ನಾನೇನೂ ದೊಡ್ಡ ಕೆಲಸ ಮಾಡಿರಲೂ ಇಲ್ಲ..
ಬಿಡಿ.

ನನಗೆ ಒಮ್ಮೆ,ಆ ಮಾತು ಮನಸ್ಸಿಗೆ ಸಕತ್ ಬೇಸರ ತಂದಿತು..😓

ಹಾಗಾದ್ರೆ
ಮನುಷ್ಯತ್ವ ಇಲ್ಲವೇ ಇಲ್ವಾ ಇಲ್ಲಿ..
ನನ್ನಿಂದ ಒಬ್ಬರಿಗೆ ಏನೋ ಆಯ್ತಲ್ಲ ಅಂತ ಪಾಪ ಪ್ರಜ್ಞೆ ಆ ಯುವತಿಗೆ ಕಾಡಲ್ವಾ ಮನೆಗೆ ಹೋದ ಮೇಲೆ?
ಅವಳಿಗೆ ಇನ್ನೊಂದು ದಿನ ಈ ರೀತಿ ಆದರೆ ಏನಾಗುತ್ತೆ?
ಇದೆಲ್ಲಾ ಒಬ್ಬ ಮನುಷ್ಯನಿಗೆ ಇನ್ನೊಬ್ಬ ಮಾಡೋದು,ಆಶ್ಚರ್ಯಪಡುವ ಅಥವಾ ಹೊಗಳುವ ವಿಷಯವಾ?
ಇದು ಮಾನವೀಯತೆ ಅಥವಾ ಒಂದು ನಾಗರೀಕ ಸಮಾಜದ ವ್ಯಕ್ತಿ ಯಾರೇ ಆದರೂ ಅವರ ಕರ್ತವ್ಯ ಅಲ್ವಾ..?

ಸೆಲ್ಫಿ ವಿಡಿಯೋ ತೆಗೆದು ವಾಟ್ಸ್ ಅಪ್,ಫೇಸ್ಬುಕ್ ನಲ್ಲಿ ಹಾಕೋದೆ ಮಾನವೀಯತೆ ಹಾಗೂ ಸಾಧನೆಯಾ?

ಇವತ್ತಿನ ನಾಯಂಡಲ್ಲಿಯ ವಿಷಯ ಕೇಳಿ ಇದೆಂತಾ ಪ್ರಪಂಚ ಅನಿಸಿತು ಮತ್ತೊಮ್ಮೆ..
ಒಂದು ಜೀವಕ್ಕೆ ಬೆಲೆಯೇ ಇಲ್ಲವಾ?
ಹಣಕ್ಕೆ ಮಾತ್ರ ಬೆಲೆಯಾ?

ಮೊದಲು ಮಾನವರಾಗಬೇಕು ಅಲ್ವಾ..😓

ಮೊಬೈಲ್ ಮುಖ್ಯ ಅಲ್ಲ,ಮಾನವೀಯತೆ

ಕೆಲದಿನದ ಹಿಂದೆ ಮೆಜೆಸ್ಟಿಕ್ ಕ.ರಾ.ರ.ಸಾ.ಸಂ ಬಸ್ ನಿಲ್ದಾಣದಿಂದ ಧರ್ಮಸ್ಥಳ ಹೊರಟಿದ್ದೆ..

ಮೈಸೂರಿನಿಂದ ಬರುವ ಬಸ್ ಬುಕ್ ಮಾಡಿದ್ದರಿಂದ ಅಲ್ಲಿ ಟ್ರಾಫಿಕ್ ಇದ್ದರಿಂದ ಸ್ವಲ್ಪ ಲೇಟ್ ಕೂಡ ಆಗಿತ್ತು ಬಸ್ಸ್ majestic bus ಸ್ಟಾ0ಡ್ ತಲುಪಲು..

ಕೊನೆಗೆ ಅರ್ಧ ಘಂಟೆಯ ನಂತರ ಒಂದು ಕರೆ ಬಂತು ಅದು ಬಸ್ಸು ನಿರ್ವಾಹಕರದ್ದು..

"ನಮ್ಮ ಬಸ್ ಈಗಷ್ಟೇ ಬಂತು ಸಾರ್,ನೀವು ಎಲ್ಲಿದ್ದೀರ ಸ್ವಲ್ಪ ಮುಂದೆ ಬನ್ನಿ ಆಯ್ತಾ!?"
ಅಂತ

ಕೊನೆಗೆ ಅವರು ಹೇಳಿದ ಕಡೆ ಹೋಗಿ ಬಸ್ ಹತ್ತಿ ನಾನು ಬುಕ್ ಮಾಡಿದ ಸೀಟ್ ನೋಡಿ confirm ಮಾಡಿಕೊಂಡು ಕುಳಿತೆ..

ನನ್ನ ಮುಂದಿನ ಸೀಟ್ ನಲ್ಲಿ ಇಬ್ಬರು ಯುವಕರು ಕೂತಿದ್ದರು..

ನಿರ್ವಾಹಕರು ticket ಪರಿಶೀಲಿಸುತ್ತಾ ಬಂದರು..

ನನ್ನ ಎದುರು ಒಬ್ಬ ಹುಡುಗ,
ಕಿವಿಗೆ head phone ಸಿಕ್ಕಿಸಿಕೊಂಡು ಕುಳಿತಿದ್ದ,

"ticket ತೋರಿಸಿ"ಅಂದರು ನಿರ್ವಾಹಕರು..

ಉಡಾಫೆಯಿಂದ ಮೆಸೇಜ್ ತೋರಿಸಿದ,

"ಹೆಸರು ಮತ್ತೆ PNR(passenger name record) ಲಾಸ್ಟ್ ನಂಬರ್ ನೋಡುವ ಹೇಳಿ"
ಅಂದರು ನಿರ್ವಾಹಕರು,

ಆತ ಹೇಳಿದ,

ನಿರ್ವಾಹಕರು ಹುಡುಕಾಡಿ ಕೊನೆಗೆ ...

"ನೀವು ಹೇಳುವ ಹೆಸರು ಲಿಸ್ಟಲ್ಲಿ ಇಲ್ಲವಲ್ಲ ಸಾರ್"
ಅಂದರು..

ಆತ ಫುಲ್ arrogant ಆಗಿ
"ಸರಿಯಾಗಿ ನೋಡ್ರಿ"
ಅಂತ ರೋಪ್ ಹೊಡೆದ..

ನಿರ್ವಾಹಕರು ದಕ್ಷಿಣ ಕನ್ನಡದವರು ಅನ್ನಿಸುತ್ತೆ ಅದೇ ತರದ ಭಾಷೆಯಲ್ಲಿ
ಅವರು ನಿಧಾನವಾಗಿ..

"ಇಲ್ಲ,ನೀವು ಹೇಳುವ ಹೆಸರು ಇಲ್ಲಿ ಇಲ್ಲ ಮಾರಾಯ್ರೆ..
ಸರಿ ನೋಡಿದೇ ಆಯ್ತಾ..
ಬೇರೆಯ ಹೆಸರು ಇದೆ."

ಅಂತ ಆ ಹೆಸರು ಅಲ್ಲಿದ್ದ ಹೆಸರು ಹೇಳಿದರು..

ಆತ ಅದಕ್ಕೆ

"ಹುಂ ಅದೇ ನಂದು ಇರಬೇಕು"
ಅಂದ..

ಉಡಾಫೆಯಿಂದ ದೊಡ್ಡ ದ್ವನಿಯಲ್ಲಿ.

"ಹೋ ಹೌದಾ ಐಡಿ ಕೊಡಿ ನೋಡುವಾ"

ಅಂದರು..ನಿರ್ವಾಹಕರು..

ಇಷ್ಟೆಲ್ಲಾ ಆಗುತ್ತಾ ಇದ್ದರೂ Head phone ತೆಗೆದು,ಅವರ ವಯಸ್ಸಿಗೆ  ಮತ್ತು ವ್ಯಕ್ತಿಗೆ,ಮಾತಿಗೆ ಗೌರವ ಕೊಡುವ ಮನಸ್ಸು ಮಾಡಲಿಲ್ಲ ಆ ಭವ್ಯ ಭಾರತದ ಪ್ರಜೆ..

ನಿಧಾನಕ್ಕೆ ಪರ್ಸು ತೆಗೆದು
"ನೋಡಿ"
ಅಂತ ಯಾವುದೋ ID ತೋರಿಸಿದ.

ನೋಡಿದರೆ ಲಿಸ್ಟಲ್ಲಿ ಇರುವ ಹೆಸರು ಇಲ್ಲ..

"ಈ ಐಡಿ ಆಗುದಿಲ್ಲ,ಐಡಿಯಲ್ಲಿ ಇರುವ ಹೆಸರು,ಇಲ್ಲಿ ನಿಮ್ಮ ಹೆಸರು match ಆಗ್ತಾ ಇಲ್ಲ ಮಾರಾಯ್ರೆ.."
ಅಂದರು..

"ಅದು ಹೇಗ್ರಿ ಹಾಗೆ ಹೇಳ್ತೀರಾ ನನ್ನ ಹತ್ರ ಇರೋದೇ ಈ ಐಡಿ ನೋಡಿ ಸರಿಯಾಗಿ"
ಅಂತ ಮತ್ತೆ ಹಾರ್ಶ್ ಆಗಿ ಮಾತಾಡಿದ..

ನಿರ್ವಾಹಕರು..
"ಇನ್ನೊಮ್ಮೆ ನಿಮ್ಮ ಮೆಸೇಜ್ ತೋರಿಸಿ ನೋಡುವ" ಅಂದರು..

"ನೋಡಿ"
ಅಂತ ಸಿಟ್ಟಲ್ಲೇ ಮೊಬೈಲ್ ಮುಖಕ್ಕೆ ಹಿಡಿದ..

ನಿರ್ವಾಹಕರು ಶಾಂತವಾಗಿ..

"ಸಾರ್..
ನೀವು ಬುಕ್ ಮಾಡಿದ್ದು ಇದೇ ಬಸ್ಸನ್ನ ಆಯ್ತಾ,ಇದೆ ಸೀಟನ್ನ ಸಹಾ..ಆದರೆ ಇವತ್ತಿಗೆ ಅಲ್ಲ ನಾಳೆಗೆ ಆಯ್ತಾ.."

ಅಂದರು..

ಆ ಮನುಷ್ಯ,ಇಂಗು ತಿಂದ ಮಂಗನಂತೆ ತನ್ನ ಕಿವಿಯಲ್ಲಿ ಇದ್ದ head phone ತೆಗೆದು,ಒಂದೂ ಮಾತನಾಡದೇ,ನಿಧಾನಕ್ಕೆ ತನ್ನ back pack ಬೆನ್ನಿಗೆ ಹಾಕಿ ಕೊಂಡು ಆಚೆ ಈಚೆ ನೋಡದೆ ಗಾಡಿ ಬಿಟ್ಟ..!!

ನಿರ್ವಾಹಕರು ಅದೇ ಶಾಂತ ಚಿತ್ತದಿಂದ ಮುಗುಳು ನಕ್ಕರು,ಅಷ್ಟೇ,
ಆತನಿಗೆ ಏನೂ ಹೇಳಲಿಲ್ಲ....♥️

ನಿರ್ವಾಹಕರು ತಮ್ಮ ಕರ್ತವ್ಯ ನಿರ್ವಹಿಸಲು ಬಂದಾಗ ಅವರಿಗೆ ಪೂರಕ ದಾಖಲೆ ತೋರಿಸಿ ಆಮೇಲೆ ಏನಾದರೂ ಮಾಡಬಹುದು..
ಅದು ನಮ್ಮ ಜವಾಬ್ದಾರಿ,ಅವರ ಕೆಲಸ..

ಎದುರಿಗಿರುವ ಒಬ್ಬ ವ್ಯಕ್ತಿಯ ಮಾತಿಗೆ ಬೆಲೆ ಕೊಡದಷ್ಟು ಮೊಬೈಲ್,ವಿಡಿಯೋ,ಹಾಡು,ಚಾಟ್,ಸಾಮಾಜಿಕಜಾಲತಾಣ ಮುಖ್ಯವಾಗಿ ಹೋಗುತ್ತಾ?

ಜೀವ ಇಲ್ಲದ ವಸ್ತುಗಿಂತ,ಜೀವ ಇರುವ ವ್ಯಕ್ತಿಗೆ ಬೆಲೆ ಕಡಿಮೆಯೇ?

ಮನುಷ್ಯ,ಮನುಷ್ಯನಿಗೆ ಗೌರವಿಸೋದು,ಪ್ರೀತಿಸೋದು,ಮಾತನಾಡಿಸೋದು ಮುಖ್ಯವೇ ಹೊರತು..
ಮನುಷ್ಯ ತಯಾರಿಸಿದ ವಸ್ತುಗಳಿಗೆ ಅಲ್ಲ ಅಲ್ವಾ..