ಕೆಲದಿನದ ಹಿಂದೆ ಮೆಜೆಸ್ಟಿಕ್ ಕ.ರಾ.ರ.ಸಾ.ಸಂ ಬಸ್ ನಿಲ್ದಾಣದಿಂದ ಧರ್ಮಸ್ಥಳ ಹೊರಟಿದ್ದೆ..
ಮೈಸೂರಿನಿಂದ ಬರುವ ಬಸ್ ಬುಕ್ ಮಾಡಿದ್ದರಿಂದ ಅಲ್ಲಿ ಟ್ರಾಫಿಕ್ ಇದ್ದರಿಂದ ಸ್ವಲ್ಪ ಲೇಟ್ ಕೂಡ ಆಗಿತ್ತು ಬಸ್ಸ್ majestic bus ಸ್ಟಾ0ಡ್ ತಲುಪಲು..
ಕೊನೆಗೆ ಅರ್ಧ ಘಂಟೆಯ ನಂತರ ಒಂದು ಕರೆ ಬಂತು ಅದು ಬಸ್ಸು ನಿರ್ವಾಹಕರದ್ದು..
"ನಮ್ಮ ಬಸ್ ಈಗಷ್ಟೇ ಬಂತು ಸಾರ್,ನೀವು ಎಲ್ಲಿದ್ದೀರ ಸ್ವಲ್ಪ ಮುಂದೆ ಬನ್ನಿ ಆಯ್ತಾ!?"
ಅಂತ
ಕೊನೆಗೆ ಅವರು ಹೇಳಿದ ಕಡೆ ಹೋಗಿ ಬಸ್ ಹತ್ತಿ ನಾನು ಬುಕ್ ಮಾಡಿದ ಸೀಟ್ ನೋಡಿ confirm ಮಾಡಿಕೊಂಡು ಕುಳಿತೆ..
ನನ್ನ ಮುಂದಿನ ಸೀಟ್ ನಲ್ಲಿ ಇಬ್ಬರು ಯುವಕರು ಕೂತಿದ್ದರು..
ನಿರ್ವಾಹಕರು ticket ಪರಿಶೀಲಿಸುತ್ತಾ ಬಂದರು..
ನನ್ನ ಎದುರು ಒಬ್ಬ ಹುಡುಗ,
ಕಿವಿಗೆ head phone ಸಿಕ್ಕಿಸಿಕೊಂಡು ಕುಳಿತಿದ್ದ,
"ticket ತೋರಿಸಿ"ಅಂದರು ನಿರ್ವಾಹಕರು..
ಉಡಾಫೆಯಿಂದ ಮೆಸೇಜ್ ತೋರಿಸಿದ,
"ಹೆಸರು ಮತ್ತೆ PNR(passenger name record) ಲಾಸ್ಟ್ ನಂಬರ್ ನೋಡುವ ಹೇಳಿ"
ಅಂದರು ನಿರ್ವಾಹಕರು,
ಆತ ಹೇಳಿದ,
ನಿರ್ವಾಹಕರು ಹುಡುಕಾಡಿ ಕೊನೆಗೆ ...
"ನೀವು ಹೇಳುವ ಹೆಸರು ಲಿಸ್ಟಲ್ಲಿ ಇಲ್ಲವಲ್ಲ ಸಾರ್"
ಅಂದರು..
ಆತ ಫುಲ್ arrogant ಆಗಿ
"ಸರಿಯಾಗಿ ನೋಡ್ರಿ"
ಅಂತ ರೋಪ್ ಹೊಡೆದ..
ನಿರ್ವಾಹಕರು ದಕ್ಷಿಣ ಕನ್ನಡದವರು ಅನ್ನಿಸುತ್ತೆ ಅದೇ ತರದ ಭಾಷೆಯಲ್ಲಿ
ಅವರು ನಿಧಾನವಾಗಿ..
"ಇಲ್ಲ,ನೀವು ಹೇಳುವ ಹೆಸರು ಇಲ್ಲಿ ಇಲ್ಲ ಮಾರಾಯ್ರೆ..
ಸರಿ ನೋಡಿದೇ ಆಯ್ತಾ..
ಬೇರೆಯ ಹೆಸರು ಇದೆ."
ಅಂತ ಆ ಹೆಸರು ಅಲ್ಲಿದ್ದ ಹೆಸರು ಹೇಳಿದರು..
ಆತ ಅದಕ್ಕೆ
"ಹುಂ ಅದೇ ನಂದು ಇರಬೇಕು"
ಅಂದ..
ಉಡಾಫೆಯಿಂದ ದೊಡ್ಡ ದ್ವನಿಯಲ್ಲಿ.
"ಹೋ ಹೌದಾ ಐಡಿ ಕೊಡಿ ನೋಡುವಾ"
ಅಂದರು..ನಿರ್ವಾಹಕರು..
ಇಷ್ಟೆಲ್ಲಾ ಆಗುತ್ತಾ ಇದ್ದರೂ Head phone ತೆಗೆದು,ಅವರ ವಯಸ್ಸಿಗೆ ಮತ್ತು ವ್ಯಕ್ತಿಗೆ,ಮಾತಿಗೆ ಗೌರವ ಕೊಡುವ ಮನಸ್ಸು ಮಾಡಲಿಲ್ಲ ಆ ಭವ್ಯ ಭಾರತದ ಪ್ರಜೆ..
ನಿಧಾನಕ್ಕೆ ಪರ್ಸು ತೆಗೆದು
"ನೋಡಿ"
ಅಂತ ಯಾವುದೋ ID ತೋರಿಸಿದ.
ನೋಡಿದರೆ ಲಿಸ್ಟಲ್ಲಿ ಇರುವ ಹೆಸರು ಇಲ್ಲ..
"ಈ ಐಡಿ ಆಗುದಿಲ್ಲ,ಐಡಿಯಲ್ಲಿ ಇರುವ ಹೆಸರು,ಇಲ್ಲಿ ನಿಮ್ಮ ಹೆಸರು match ಆಗ್ತಾ ಇಲ್ಲ ಮಾರಾಯ್ರೆ.."
ಅಂದರು..
"ಅದು ಹೇಗ್ರಿ ಹಾಗೆ ಹೇಳ್ತೀರಾ ನನ್ನ ಹತ್ರ ಇರೋದೇ ಈ ಐಡಿ ನೋಡಿ ಸರಿಯಾಗಿ"
ಅಂತ ಮತ್ತೆ ಹಾರ್ಶ್ ಆಗಿ ಮಾತಾಡಿದ..
ನಿರ್ವಾಹಕರು..
"ಇನ್ನೊಮ್ಮೆ ನಿಮ್ಮ ಮೆಸೇಜ್ ತೋರಿಸಿ ನೋಡುವ" ಅಂದರು..
"ನೋಡಿ"
ಅಂತ ಸಿಟ್ಟಲ್ಲೇ ಮೊಬೈಲ್ ಮುಖಕ್ಕೆ ಹಿಡಿದ..
ನಿರ್ವಾಹಕರು ಶಾಂತವಾಗಿ..
"ಸಾರ್..
ನೀವು ಬುಕ್ ಮಾಡಿದ್ದು ಇದೇ ಬಸ್ಸನ್ನ ಆಯ್ತಾ,ಇದೆ ಸೀಟನ್ನ ಸಹಾ..ಆದರೆ ಇವತ್ತಿಗೆ ಅಲ್ಲ ನಾಳೆಗೆ ಆಯ್ತಾ.."
ಅಂದರು..
ಆ ಮನುಷ್ಯ,ಇಂಗು ತಿಂದ ಮಂಗನಂತೆ ತನ್ನ ಕಿವಿಯಲ್ಲಿ ಇದ್ದ head phone ತೆಗೆದು,ಒಂದೂ ಮಾತನಾಡದೇ,ನಿಧಾನಕ್ಕೆ ತನ್ನ back pack ಬೆನ್ನಿಗೆ ಹಾಕಿ ಕೊಂಡು ಆಚೆ ಈಚೆ ನೋಡದೆ ಗಾಡಿ ಬಿಟ್ಟ..!!
ನಿರ್ವಾಹಕರು ಅದೇ ಶಾಂತ ಚಿತ್ತದಿಂದ ಮುಗುಳು ನಕ್ಕರು,ಅಷ್ಟೇ,
ಆತನಿಗೆ ಏನೂ ಹೇಳಲಿಲ್ಲ....♥️
ನಿರ್ವಾಹಕರು ತಮ್ಮ ಕರ್ತವ್ಯ ನಿರ್ವಹಿಸಲು ಬಂದಾಗ ಅವರಿಗೆ ಪೂರಕ ದಾಖಲೆ ತೋರಿಸಿ ಆಮೇಲೆ ಏನಾದರೂ ಮಾಡಬಹುದು..
ಅದು ನಮ್ಮ ಜವಾಬ್ದಾರಿ,ಅವರ ಕೆಲಸ..
ಎದುರಿಗಿರುವ ಒಬ್ಬ ವ್ಯಕ್ತಿಯ ಮಾತಿಗೆ ಬೆಲೆ ಕೊಡದಷ್ಟು ಮೊಬೈಲ್,ವಿಡಿಯೋ,ಹಾಡು,ಚಾಟ್,ಸಾಮಾಜಿಕಜಾಲತಾಣ ಮುಖ್ಯವಾಗಿ ಹೋಗುತ್ತಾ?
ಜೀವ ಇಲ್ಲದ ವಸ್ತುಗಿಂತ,ಜೀವ ಇರುವ ವ್ಯಕ್ತಿಗೆ ಬೆಲೆ ಕಡಿಮೆಯೇ?
ಮನುಷ್ಯ,ಮನುಷ್ಯನಿಗೆ ಗೌರವಿಸೋದು,ಪ್ರೀತಿಸೋದು,ಮಾತನಾಡಿಸೋದು ಮುಖ್ಯವೇ ಹೊರತು..
ಮನುಷ್ಯ ತಯಾರಿಸಿದ ವಸ್ತುಗಳಿಗೆ ಅಲ್ಲ ಅಲ್ವಾ..
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ