ಭಾನುವಾರ, ಮೇ 5, 2019

ಮಲ್ಯ,ಇಲ್ಯಾ

ಹೆದರ್ ಕಂಬುದು ಬ್ಯಾಡ್ದೇ,ಮಲ್ಯ..!

ನಿಮ್ಮ  ಸಪೋರ್ಟ್ ಗೆ,ನಾವಿಲ್ಯ!?

ಅಂತ ಅವರ ಎಣ್ಣೆಯ ಋಣದಲ್ಲಿ ಇರೋರು,ಮೋದಿಯ ವಿರೋಧಿಗಳು ಇನ್ನೂ ಯಾರೂ ಹಾಕಿಲ್ವಾ..!?🤔
😂

ಕೋಟಿ,ಕೋತಿ

ಬಜೆಟ್ ಅನುದಾನ:-
ಕ್ರೈಸ್ತರಿಗೆ ಒಂದಷ್ಟು ಕೋಟಿ..
ಮುಸಲ್ಮಾನರಿಗೆ ಒಂದಷ್ಟು ಕೋಟಿ..
ಹಿಂದೂಗಳಿಗೆ ಮಾತ್ರ ಊರು ತುಂಬಾ ಕೋತಿ..🐒🐵🙊

ಹೇ..airgun,ಲಕ್ಷಿಪಟಾಕಿ,ಚಾಟ್ರಿ ಬಿಲ್, ತಗೊಂಡು ಬನ್ರೋ..
ಕೋತಿ ಬಂದಿದ್ದಾವೆ ಸಿಕ್ಕಾಬಟ್ಟೆ..
😂🐒🐵🐒🐵🐒🐵🐒.

ಮುತ್ತಿನ ದಿನ

ಪ್ರಿಯೆ..
ನನಗ್ಯಾಕೆ ಬೇಕು ಮುತ್ತಿಗೆ ಒಂದು ದಿನ!?
ನಿನ್ನ ಅಮಲುಗಣ್ಣಿನ ನೋಟದಿಂದ,ನೀನೇ ಮುತ್ತಿಟ್ಟಂತೆ ಭಾಸವಾಗುತ್ತೆ
ಪ್ರತೀದಿನಾ.....!

ಅದೇನೋ ಕಿಸ್ ಡೇ ಅಂತಲ್ಲ ಅದಕ್ಕೆ ಹಾಕಿದೆ ಅಷ್ಟೆಯಾ
😜😉

ನೀನಿಲ್ಲದ ನಾನು

ಪ್ರಿಯೆ..
ನೀನಿಲ್ಲದ ನಾನು...!!

ಮರಗಳಲ್ಲಿದ ಅಮೆಜಾನು.
ಐಸ್ ಕ್ರೀಮ್ ಇಲ್ಲದ ಕೋನು.
ಸ್ವೀಟ್ ಇಲ್ಲದ ಜಾಮೂನು.
ಗೂಡೇ ಇಲ್ಲದ ಜೇನು.
ನೀರಿಲ್ಲದ ಜಮೀನು.
ಕೋತಿ ಇಲ್ಲದ ಕಾನು.
ಬೋಳುತಲೆಯಲ್ಲಿನ ಹೇನು.
ವಾಸನೆ ಇಲ್ಲದ ಮೀನು.
ಅಪ್ಸರೆ ಇಲ್ಲದ ಹೆವನ್ನು.
ಚುರುಕಿಲ್ಲದ ಡಾಲ್ಫಿನ್ನು.
ಈಜಲು ಬರದ ಪೇಂಗ್ವಿನ್ನು.
ಕಾಫಿ ಜೊತೆ ಇಲ್ಲದ ಕೆಪಿನ್ನು.
ಟೀ ಜೊತೆ ಇಲ್ಲದ ಟ್ಯಾನಿನ್ನು.
ತಂಬಾಕು ಜೊತೆ ಇಲ್ಲದ ನಿಕೋಟಿನ್ನು.
ಕರೆಂಟ್ ಇಲ್ಲದ ಓವನ್ನು.
ಕರೆಂಟ್ ಇಲ್ಲದ ಪ್ಯಾನು.
ಉಪ್ಪಿನ ಕಾಯಿ ಇಲ್ಲದ ಜವನ್.
ಗಾಳಿ ಇಲ್ಲದ ಬಲೂನು.
ಬ್ಯಾಟರಿ ಡೆಡ್ ಅದ ಮೊಬೈಲ್ ಫೋನ್.
ಸಿಮ್ಮೆ ಇಲ್ಲದ ಅಮೆಜಾನ್ ಪೈರ್ ಫೋನು.
ಸರ್ಕಸ್ನಲ್ಲಿ ಇಲ್ಲದ ಬಪೂನು.
Director ಇಲ್ಲದ ಆಡಿಷನ್ನು.

ಹೇಳಬೇಕಾ ನಿನಗೆ ಇಷ್ಟಾದ್ರೂ ಹ್ಯಾಪಿ
ವ್ಯಾಲಂಟೈನು..!
🤔

ಇವತ್ತೇನೋ
ಲವ್ "ದಿನ"ಅಂತಲ್ಲ ಅದಕ್ಕೆ ಸುಮ್ಮನೆ ಹಾಂಗೆ ಬುಟ್ಟೆ ಅಷ್ಟೆಯಾ..!
😂😜
ಅದ್ಯಾರೋ ಹುತಾತ್ಮದಿನ ಅಂತ ಸುಮ್ಮನೆ ಸುಳ್ಳು ಹಾಕಬೇಡಿ ಅವರ ಮರ್ಯಾದೆ ಕಳೆಯ ಬೇಡಿ..ಫ್ರೆಂಡ್ಸ್.

ವಿ.ಸೂ:-ತುಂಗಾ ನದಿ ನೀರಿನ ಮಹಿಮೆ😉

ಜಲ ದಿನ

ಜಲಕ್ಕೆ ಒಂದು ದಿನ ಬೇಡ.
ದಿನಾ ಜಲ ನಮಗೆ ಬೇಕು.

"ತಿಳುವಳಿಕೆ ಇರುವವರೆ"
ಇದನ್ನ
ಗಮನದಲ್ಲಿಟ್ಟುಕೊಂಡು
ನೀರು ಮಿತವಾಗಿ ಬಳಸಿ..

ವಿಶ್ವ ಜಲ ದಿನವಂತೆ..

ಮಂಜಪ್ಪ ಗೌಡರಿಗೆ ಬಂದ ಲೆಟರ್

ಮೊನ್ನೆ ಮಂಜಪ್ಪ ಗೌಡ್ರ ಮನಿಗೆ ಒಂದು ಲೆಟರ್ ಬಂತಂತೆ..
ನೋಡಿರೆ
ಮುಖ್ಯಮಂತ್ರಿಗಳು ಕಳ್ಸ್ಯರೆ..!😍

ಗೌಡ್ರು:-
"ಅಗ್ಗೇ ಹೋತಾ...
ನಮ್ಮ ಕುಮಾರಣ್ಣ,ನಂಗೆ ಕಾಗಜ ಬರದರೆ,
ನಾನೇನು ಕಮ್ಮಿನಾ ಹಂಗ್ಯಾರೇ" ಅಂತ ಕುಂಚಟ್ ಹೊಡೀತಾ..
"ಈ ಕ್ವಾಸ ಎಲ್ ಪ್ಯಾಟೆ ಬದಿ ಸತ್ಗು ಹೊಗ್ಯನೋ ಏನೋ,ಎಂತಾ ಬರೆದರೆ ಅಂತ ನೋಡಬಕಲ್ಲ,
ನಂಗೇನು ಕಣ್ ಹೊಟ್ ಹಾರ್ ಹೊಗ್ಯದೆ ಅಂದ್ ಕುಂಡ್ರಾ,ಇಲ್ಲಪ್ಪ
ಓದಕ್ಕೆ ಬರಲ್ಲ ಅಷ್ಟೆಯಾ..
ಹೆಬ್ಬೆಟ್ಟು ಮರ್ರೆ ನಾನು..

ಓದಕ್ಕೆ ಬರದೇ ಇದ್ರೂ,ಸರ್ಕಾರದ್ದು ಕಾಗಜ ಅಂತ
ಮು.ಮ ಬರೆದಿದ್ದು ಅಂತ ಹೆಂಗ್ ಗೊತಾತು ಅಂತೀರಾ..!?😉

ಕಾಗದದ ಮೇಲೆ ಗಂಡ ಬೇರು0ಡ ಇತ್ತಲ್ಲ ಅದುನ್ ನೋಡಿ,
ನಾನೇನು ಅಷ್ಟು ಹಮಾ ದಡ್ಡ ಅಲ್ಲ ಅತಾ,
ನೀವು ನಗ್ಯಾಡುದು ಬ್ಯಾಡ..!😊

ಕ್ವಾಸ:-ಗೌಡ್ರೆ ಯಾವ ಕಡೆ..!?

ಗೌಡ್ರು:-"ಅಗ್ಗೇ ಹೋತಾ..ನೀನು ಸತ್ಗು ಇಲ್ಲೇ ಅದಿಯಾ ಮರಾಯಾ,ನಿನ್ನ ಹುಲಿ ಹಿಡಿಯಾ..
ಅಲ್ಲೋ ಇದೆಂತದೋ ಉಂದು ಕಾಗದ ಬಂದದೇ, ನಮ್ಮ ಕುಮಾರಣ್ಣ ಬರದರೆ ಅಂತ ಕಾಂತದೇ ನೋಡು..
ಒಂಚೂರು ಓದು ಹೇಳ ಕಳ್ಳ ಮುಂಡೇಗಂಡ.."
😁

ಕ್ವಾಸ:-ಗೌಡ್ರೆ ಇದು,ನೀವು ಸಾಲ ಮನ್ನಾಕೆ ಅರ್ಹರು ಅಂತ ಸರ್ಕಾರದ ಕಡೆಯಿಂದ ಪತ್ರ ಬಂದಿದೆ ಮರ್ರೆ..ಅಷ್ಟೇ..!

ಗೌಡ್ರು:-ಥೋ..ಮರೆನೆ,ಅಲಾ ಹಂಗ್ಯಾರೇ,ಎಲ್ಲಾ ಸಾಲ ಕಟ್ಟಿ ಮುಗ್ಸ್ಯಾಗದೆ,ಈಗ ಇದುನ್ ಕಳ್ಸ್ಯಾರಲ್ಲ..ಎಂತಾ ಹಕಾಪತಿಗಳು ನೋಡ...
ಅಲ್ಲೋ..ಈಗ ಮೆನೇಜರ್ ಹತ್ರ ಹೋಗಿ..ಉಪೀಟ್..ಸಾಲ ಕಟ್ಟಿದ್ದು ವಾಪಾಸ್ ಕೊಡಿ,ಕುಮಾರಣ್ಣ ಕಾಗಜ ಕಳ್ಸ್ಯರೆ ನೋಡಿ, ಅಂತ ತೋರಿಸ್ಗಿ ಬತ್ತಿನಿ ಇವತ್ತೇ ಪ್ಯಾಟಿಗೆ ಹೋಗಿ,ಕೊಡು ಅದನ್ನ..

ಕ್ವಾಸ:-ಗೌಡ್ರೆ..ಮ್ಯಾನೇಜರ್ ಏನು ಮಾಡ್ತಾರೆ,ಇದಕ್ಕೂ ಅವರಿಗೂ ಸಂಬಂಧ ಇಲ್ಲ..ಹಾಗೆಲ್ಲಾ ಕಟ್ಟಿದ ಸಾಲ,ವಾಪಾಸ್ ಕೊಡಲ್ಲ ಮಾರಾಯ್ರೆ..
ಅದರ ಕತೆ ಅಷ್ಟೇ..ಬಿಡಿ..

ಗೌಡ್ರು:-ಅಲ್ಲ ಮರೆನೆ,ಇದೆಂತಾ ಹಪ್ ಗೆಟ್ಟಿದ್ ಸಾಲ ಮನ್ನಾ ಯೋಜನೇನಾ..ಕಟ್ಟೋರು ಕಟ್ ಬಕು,ಸುಮ್ನೆ ಇರೋರಿಗೆ ಸಾಲ ಮನ್ನಾ..
ಎಲ್ಲಾ ಮಕ್ಕರ್ ಮಾಡಿ,ನಮ್ಮನ್ನ ಲಗಾಡಿ ತೆಗೆಯೋರೆ ಅದರೆ ನೋಡ..
ಈ ಸರಿ ವೋಟ್ ಹಾಕಿ ಅಂತ ಬರ್ಲಿ,
ಕಣ್ಣೀರು ಸುರ್ಸ್ಕಿತ ಆಮೇಲೆ ಅದೇ ಅವರಿಗೆ..
ಬಿಲಾಸ್ ಬಿಟ್ಟವು..
ಅವು ಸೊಡ್ಡಿಗೆ ವರ್ಲ್ ಹಿಡಿಯ.

😢😠

ಹೆಬ್ಬೆಟ್ಟು

ಮೊಬೈಲ್ ಯಾಕೆ ತಗೊಂಡು ಹೋಗ್ತಾರೆ ಟಾಯ್ಲೆಟ್ಟಿಗೆ.!
ಸುಮ್ಮನೆ ಕೂತಾಗ,ಬೇಕಲ್ಲ ಕೆಲಸ
ಬೆಟ್ಟಿಗೆ.!
👍

ಕಮಲಿ ವಿಮಲಿ

ವಿಮಲಿ,
ಕಮಲಿ ಮನೆಯ ಪಾತ್ರೆ ತೊಳೆದರು..!

ಕಮಲಿ,
ವಿಮಲಿ ಮನೆಯ ಪಾತ್ರೆ ತೊಳೆದರು..!

ಯಾಕೆ ಅಂದರೆ

ದೇ ಆರ್ "MAID" ಪಾರ್ ಈಚ್ ಅದರು..!

😂

ರಿಸಲ್ಟ್

ಇಂದು ಪಿ.ಯು.ಸಿ
ಫಲಿತಾಂಶ..

ಈ ಸರಿಯೂ ಹುಡುಗಿಯರದ್ದೇ
ಮೇಲುಗೈ..

ಕೆಲವು ಹುಡುಗರದ್ದು.
35%ಬಂದು ಪಾಸ್ ಆದ್ರೆ
ಸೈ..
😂

ಸಾಮಾಜಿಕ ಜವಾಬ್ದಾರಿ

ಮಂಜಪ್ಪ ಗೌಡ್ರು:-
ಹೇ..ಕ್ವಾಸ,ಬೀಸ್ ಕಾಲ್ ಹಾಕಿತ,ಎತ್ಲಗ್ ಹೊರಟಿಯಾ..ಇಷ್ಟೊತ್ತಿಗೆ..
ಸರಗೋಲಲ್ ಕಡ್ಬು ಬೆಯ್ಲಾನ್ ಇನ್ನು ಮನೇಲಿ..

ಕ್ವಾಸ:-ಗೌಡ್ರೆ..ಒಂದು ವೋಟ್ ಹಾಕಿ ಬಂದು ಆಮೇಲೆ,ಸರಗೋಲ್ ಮುಚ್ಚಳ ತೆಗೆದು,ನಿನ್ನೆ ಮೀನು ಗಸಿ ಹಾಕಿಂದು ಹೊಡೆಯನ ಅಂತ..
ನೀವ್ಯಾಕೆ ಸಿಟ್ಟಲ್ಲಿ ಅದಿರಿ,ಎಂತಾಯ್ತು ಮರ್ರೆ..

ಗೌಡ್ರು:- ಅಲ್ಲ..ಮತ್ಯಂತದ..
ಅವ್ಯಾರೋ ಬೆಂಗಳೂರಿಂದ ಬಂದನೆ ಒಂದು,ಮಂಡ ಗತ್ತಿ ತರ ಇರೋ ಮೊಬೈಲ್ ಹಿಡಿಕಿಂದು,ಬಿಳೆ ಬೂಡ್ಸ್, ಒಂದು ಹರ್ಕಿ ಹೋಗಿದು pant,ಆಮೇಲೆ ಅದೆಂತದೋ ಎದೆಮೇಲೆ ಬರಕಿಂಡಿದ್ದು ಸಲ್ಟು,ಹಾಕಿಂದು,ನಂಗ್ ಬುದ್ದಿ ಹೇಳಕ್ ಬತ್ತನೆ ಮರೆನೆ..

ಕ್ವಾಸ:-ಏನಾಯ್ತು ಗೌಡ್ರೆ,ಯಾರು ಏನು ಹೇಳಿದ್ರು..
ಸಿಟ್ ಎಂತಕ್ಕೆ ಮರ್ರೆ..

ಗೌಡ್ರು:-ನಾನು ನಡ್ಕು ಹೋತಾ ಇದ್ನ,ಬೆಳಗಾತ ಬೇಗಲೇ ಉಂದು ಓಟ್ ಹಾಕಿ,ಕಡುಬು ತಿಂದು ಹತ್ಗಿ ತ್ವಾಟಕ್ಕೆ ಹೋಗಿ ನೀರು ಬಿಡಕೆ ಆತದೇ ಅಂತ..

ಇವ್ಯಾರೋ,ಸಿಕ್ಕಿ "ಗೌಡ್ರೆ..
ಓಟ್ ಹಾಕಿ ಅತಾ..ಮತದಾನ ನಮ್ಮ ಹಕ್ಕು,ಪ್ರಜಾಪ್ರಭುತ್ವ ಉಳುಸಬಕ್",ಅಂತೆಲ್ಲಾ ನಂಗೆ ಬುದ್ದಿ ಹೇಳಕ್ ಬತ್ತನೆ ನೋಡಾ..ಕಳ್ ಮುಂಡೇ ಗಂಡ..
ಎಂತಾ ತಿಳ್ಕುಂಡನೆ ನನ್ನ..

ನಾನು ತಗುಂಡೇ ನೋಡು ಅವನಿಗೆ.
"ನಾನು ವೋಟ್ ಹಾಕದಷ್ಟು ನಿಂಗೆ ವಯ್ಸಾಗ್ಯದನಾ ನಿಂಗೆ,
ಗ್ರಾಮ ಪಂಚಾಯ್ತ್ಗಿ,ತಾಲ್ಲೂಕ್ ಪಂಚಾಯ್ತ್ಗಿ,ಜಿಲ್ಲಾ ಪಂಚಾಯ್ತ್ಗಿ,ಎಂಎಲ್ಲೇ,ಇದು ಸಂಸತ್ತು ಅದು ಹೋಗ್ಲಿ ಮರೇನೇ, ಈ ಸೊಸೈಟಿ ಎಲೆಕ್ಷನ್,ಊರು ಮನೆ ಹಾಲ್ ಡೈರಿ ಎಲೆಕ್ಷನ್,ನಮ್ಮನೆ ಸಣಿ ಯುವಕ ಸಂಘಕ್ಕೆ ನಿಂತಾಗ,ಎಲ್ಲಾ ವೋಟ್ ಹಾಕಿನಿ,ಇದೆಲ್ಲಾ ಸೇರಿಸಿ ಲೆಕ್ಕ ಹಾಕುಂಡರೆ ನೀನು,ನಿಂಗ್ ಅರ್ಧ ವರ್ಸಾ ಆಗ್ಲ, ಎಷ್ಟು ನೋಡಿಯಾ ಎಲೆಕ್ಷನ್",
ಅಂತ ಸಮಾ ಬೈದಿನಿ..
ಕಡಿಗೆ ಅವನೇ ಇಲ್ಲ ತಪ್ಪಾಯ್ತು ಮರ್ರೆ ಅಂತ ಹೋದ ಗೊತ್ತಾದ್ಯಾ..!😊

ಕ್ವಾಸ:- ಗೌಡ್ರೆ,ಅದು ಮತದಾನದ ಬಗ್ಗೆ ಅವೇರ್ ನೆಸ್ ಕ್ರಿಯೆಟ್ ಮಾಡೋದು ಮಾರಾಯ್ರೆ,ಫೇಸ್ಬುಕ್ ನಲ್ಲಿ,ವಾಟ್ಸ್ ಅಪ್ ನಲ್ಲಿ,ಟ್ವಿಟ್ಟರ್ ನಲ್ಲಿ ಎಲ್ಲಾ..ಅಷ್ಟೇ..
ಅದ್ಕಯಾಕೆ ಅಷ್ಟು ಸಿಟ್ಟು ಬಿಡಿ ಹೋಗಲಿ..

ಗೌಡ್ರು:-ಎಂತಾ,ಅವರು ನೇಸು,ಅದೆಂತದಾ..

ಎಷ್ಟು ವರ್ಷ ಆಗ್ಯಾದ ನಿಮ್ಮ,ಈ ಪಾಸ್ ಬುಕ್,ವಾಟೆ ಸೊಪ್ಪು,ಟಿಲ್ಲರ್ ಎಲ್ಲಾ ಬಂದು,ಹೇಳು..
ಮುಂಚೆ ಎಲ್ಲಾ ವೋಟ್ ಹಾಕ್ತಿರ್ಲನ್..
ಆಗ ಎಂತಾ ಇತ್ತು..ಹೇಳು..
ವೋಟಿನ ದಿನ ಹೋಗಿ ಜನ ವೋಟ್ ಹಾಕ್ತಿರ್ಲ?!

ನೋಡ ವೋಟ್ ಹಾಕಲ್ಲ ಅಂತ ಅಂದು ಕುಂಡವರು, ಎಂತಾ ಹೇಳು,ಎಷ್ಟೇ ಒತ್ತಾಯ ಮಾಡು ಅವರು ಅವರು ಹಾಕಲ್ಲ ಅಷ್ಟೆಯಾ..
ನೀನು ಅಲ್ಲೆಲ್ಲೋ ಮೊಬೈಲ್ ಲ್ಲಿ ಹಾಕಿಯಾ ಅಂತ ಬಂದು ವೋಟ್ ಹಾಕ್ತಾರೆ ಅಂದು ಕುಂಡಿಯಾ..
ನೀನು ಹಾಂಗ್ ಅಂದು ಕುಂಡ್ರೆ ನಿನ್ನಷ್ಟು ಶತ ದಡ್ಡ ಯಾರೂ ಇಲ್ಲ ಅಷ್ಟೆಯಾ..!

ಹೀಗೆ ಮಾಡೋರೆಲ್ಲಾ ವಿದ್ಯಾವಂತರು ಜಾಸ್ತಿ ಅಲಾ....!?

ನಮ್ಮ ಹಂಗಿದ್ದು,ಹೆಬ್ಬೆಟ್ಟು ಗಳು,ಅದೆಂತಾ ಕಷ್ಟ ಇರ್ಲಿ,ಕೆಲಸ ಇರ್ಲಿ, ಮೊದ್ಲು ಹೋಗಿ ವೋಟ್ ಹಾಕಿ ಬೆರಳಿಗೆ ಇಂಕ್ ಹಾಕ್ಸಿಕಿ ಬತ್ತೀವಿ..

ಈಗ ಹೇಳ ಯಾರು,ವಿದ್ಯಾವಂತರು,ತಿಳುವಳಿಕೆ ಇರೋರು,ಜವಾಬ್ದಾರಿ ಇರೋರು,ಪ್ರಜಾಪ್ರಭುತ್ವ ಉಳಿಸೋರು ಅಂತ..

ಹಳ್ಳಿಯೋರು,ದಡ್ಡರು ಅಂತ ನಮಗೆ ಮಕ್ಕರ್ ಮಾಡ್ತಾರೆ ಮತ್ತೆ..

ನಿಮಗೆಲ್ಲಾ ಬ್ಯಾರೆ ಕೆಲ್ಸ್ ಇಲ್ಲ,ಅವರು ನೆಸ್ ಅಂತೆ..
ಏನೋ ಇದೆಲ್ಲಾ ಮೊಬೈಲ್ ಅಲ್ಲಿ ಹಾಕಿ,ದೇಶ ಉದ್ದಾರ ಮಾಡಿವಿ ಅಂತ..
ಎದೆ ನಿಟೇಸ್ ಗಿಂದು ನಡೀ ಬಹುದು ಅಷ್ಟೆಯಾ,ಅದು ಬಿಟ್ಟರೆ ಉಪಯೋಗ್ ಇಲ್ಲ ಬಿಡ...
ಹೋಗ್ ಮರೆನೆ..

ಕ್ವಾಸ:-ಗೌಡ್ರೆ,ನೀವ್ಯಾಕೋ ಇವತ್ತು ಸ್ವಲ್ಪ ಬೆಚ್ಚಗೆ ಆಗಿದ್ದೀರಿ,ನಾನು ಬರ್ಲಾ..

ಗೌಡ್ರು:-ವೋಟ್ ಹಾಕಿ ಹೋಗಿ..ಸರಗೋಲ್ ಕಡುಬು ಬೆಂದದ, ಮೀನು ಗಸಿ ಹಳಸಿ ಹೊಗ್ಯದಾ ನೋಡು..

ಹಪ್ ಗೆಟ್ಟವು,ನಿಮನ್ ಹುಲಿ ಹಿಡಿಯಾ...
ನಮಗೆ ಹೇಳಕ್ ಬತ್ತವೆ..😠

ಮಾನವೀಯತೆ ಮತ್ತು ಪ್ರಾಣಿಗಳು

ಯಾವುದೋ ಮೀಟಿಂಗ್ನಲ್ಲಿ ನಿಂತಿದ್ದ ನನಗೆ,ಯಾರೋ streak ದ್ವಿಚಕ್ರ ವಾಹನದಲ್ಲಿ,ಒಬ್ಬರು ವಯಸ್ಸಾದ ವ್ಯಕ್ತಿ ಸಿಕ್ಕಾಪಟ್ಟೆ ಲಾಂಗ್ ಆಗಿ, ಕಿ.ಕೀ.ಕಿ.ಕೀ.......
ಅಂತ ಹಾರ್ನ್ ಮಾಡುತ್ತಾ ಬರೋದು ಕಾಣಿಸ್ತು,ತುಂಬಾ ಕಿರಿಕಿರಿ ಅನಿಸ್ತು..

ನಾನು,
ಇವರಿಗೇನು ಕಣ್ಣು ಕಾಣಲ್ವಾ..ಇಷ್ಟು ಕಾಲಿ ರಸ್ತೆ ಇರೋ ಲೇ ಔಟ್ ನಲ್ಲಿ ಹೀಗೆ ಹಾರ್ನ್ ಮಾಡುತ್ತಾ ಬರ್ತಾ ಇದಾರಲ್ಲ..
ಎಂತೆಂತಾ ತಿಕ್ಕಲು ಜನ ಇರ್ತಾರಪ್ಪ ಈ ಸಮಾಜದಲ್ಲಿ ಅಂತ ಮನಸ್ಸಿನಲ್ಲೇ ಬೈದುಕೊಂಡು😠

ಹಾಗೇ,ನಮ್ಮ Meeting ಮುಂದುವರೆಸುತ್ತಾ,ಯಾಕೋ ತಿರುಗಿ ನೋಡ್ತೇನೆ ಸುಮಾರು 10 ರಿಂದ 15 ಬೀದಿ ನಾಯಿಗಳು ಓಡೋಡಿ,ಆ ವ್ಯಕ್ತಿಯ ಗಾಡಿಯ ಬಳಿ ಬಂದು ಸಂತೋಷದಿಂದ ಬಾಲ ಗುಂಡಾಡಿಸುತ್ತಾ ನಿಂತು ಬಿಟ್ಟವು!ಅವರು ಅಲ್ಲೇ ತಮ್ಮ ವಾಹನವನ್ನ ಸೈಡ್ಗೆ ನಿಲ್ಲಿಸಿದರು..

ನನಗೆ ಅದನ್ನ ನೋಡಿ, ಒಮ್ಮೆ ನನ್ನ ಬಗ್ಗೆ ನನಗೆ ತುಂಬಾ ಅಸಹ್ಯ ಅನಿಸಿ ಬಿಡ್ತು,ನಾನು ಏನೋ ಅಂದು ಕೊಂಡು ಬೈದು ಕೊಂಡೆನಲ್ಲ ಈ ವ್ಯಕ್ತಿ ಬಗ್ಗೆ ಅಂತ..😢

ಆ ವಯಸ್ಸಾದ ವ್ಯಕ್ತಿ,ತನ್ನ ಗಾಡಿಯಲ್ಲಿ ಎರಡು ಬಾಕ್ಸ್ ಇಟ್ಟು ಕೊಂಡಿದ್ದರು,ಬಾಕ್ಸ್ ನಿಂದ ಒಂದೊಂದೇ,ಬಿಸ್ಕೆಟ್ ಪ್ಯಾಕ್ ತೆಗೆದು..
ಒಂದೊಂದು ಕಡೆ ಕವರ್ ಓಪನ್ ಮಾಡಿ ಹಾಕುತ್ತಾ ಇದ್ದರು..

ಅದನ್ನ ನಾಯಿಗಳು ಯಾವುದೇ ಕಚ್ಚಾಟ,ಗಲಾಟೆ ಇಲ್ಲದೇ, ಅವರು ಹಾಕಿದ ಬಿಸ್ಕೆಟ್ನ್ನ ಅಚ್ಚುಕಟ್ಟಾಗಿ ಬಾಲ ಗುಂಡಾಡಿಸುತ್ತಾ,ಖುಷಿ ಖುಷಿಯಿಂದ ತಿನ್ನುತ್ತಾ ಇದ್ದವು...

ಅವರು ಮಕ್ಕಳನ್ನ ಮಾತಾಡಿಸುವಂತೆ..

ಏ ಇಲ್ಲಿ ಬಾರೋ..
ನಿಧಾನ ತಿನ್ನೋ ಮರಾಯಾ..
ಗಡಿಬಿಡಿ ಬೇಡ..
ನೀನ್ಯಾಕೋ ದೂರ ಇದ್ದಿ ಬಾ ಇಲ್ಲಿ,ಅಂತ ಕರೆದು ಕರೆದು,ಎಲ್ಲಾ ನಾಯಿಗಳನ್ನ ಮಾತಾಡಿಸುತ್ತಾ ಇದ್ದಿದ್ದು ನೋಡಿ..
ನಾನು ಎಲ್ಲಿದ್ದೇನೆ ಅನ್ನೋದೇ ನನಗೆ ಒಮ್ಮೆ ಮರೆತು ಹೋಯ್ತು..

ಆ ಪ್ರಾಣಿಗಳ ಖುಷಿಯಲ್ಲಿ,ತನ್ನ ನೆಮ್ಮದಿಯನ್ನು ಅವರು ಹುಡುಕಿಕೊಂಡಿದ್ದರು ಅನ್ನೋದು ಸ್ಪಷ್ಟವಾಗಿ ಕಾಣಿಸುತ್ತಾ ಇತ್ತು.

ನಾನು ಒಂದೆರಡು ಫೋಟೋ ದೂರದಿಂದ ತೆಗದು,ಅವರ ಹತ್ತಿರ ಹೋದೆ,

"ಏನು ಸಾರ್..ನಾಯೀ ಅಂದ್ರೆ ಇಷ್ಟನಾ..
ದಿನಾ ಹಾಕ್ತಿರಾ ಈ ತರ ಆಹಾರ"ಅಂದೆ..
ಅವರು
"ಅವು ನಮ್ಮ ಹಾಗೆ ಅಲ್ವಾ,ಕೈಲಾಗಿದ್ದು ಮಾಡೋದು", ಅಂತ ಅಷ್ಟೇ ಮಾತು ಮುಗಿಸಿದರು,
ನಾನು ಫೋಟೋ ತೆಗೆಯೋಕೆ ಹೋದೆ..
ಬೇಡ ಅನ್ನುವ ಹಾಗೆ ಕೈ ಸನ್ನೆ ಮಾಡಿ,ಗಾಡಿ ಸ್ಟಾರ್ಟ್ ಮಾಡಿ,ಉಳಿದ ಬಿಸ್ಕೆಟ್ ಬಾಕ್ಸ್ ನಲ್ಲಿ ಇಟ್ಟುಕೊಂಡು ಹೊರಟೇ ಬಿಟ್ಟರು..!

ಊರ ತುಂಬಾ ಸೈಟ್,ಮನೆ,ಬಂಗಲೆ,ಜಮೀನು,ಶಾಪಿಂಗ್ ಕಾಂಪ್ಲೆಕ್ಸ್,ಮನೆ ತುಂಬಾ ಗಾಡಿ ಇದ್ದರೂ,
ಅಯ್ಯೋ ಕಷ್ಟ,ಹಣವೇ ಇಲ್ಲ,ಹಣ ಬೇಕು ಅಂತ ಯಾವಾಗಲೂ ಅಳುತ್ತಾ,ಯಾರಿಗಾದರೂ,ಮೋಸ, ವಂಚನೆ ಮಾಡಿಯಾದರೂ ಗಳಿಸಬೇಕು ಅನ್ನುವ,ಎಂಜಲು ಕೈಯಲ್ಲಿ ಕಾಗೆ ಓಡಿಸದ ಜನ,ಜೀವಪರ,ಮಾನವೀಯತೆ,ಪ್ರಾಣಿ ಎಲ್ಲಾ ಒಂದೇ,ನಾವು ಅವನ್ನ ರಕ್ಷಿಸಬೇಕು ಅಂತ ಕತೆ ಬಿಡೋ ಜನರ ಸಮೂಹ ಒಂದು ಕಡೆ ಆದರೆ..

ಸದ್ದೇ ಇಲ್ಲದೆ,
ಪ್ರಾಣಿಗಳನ್ನ,ಪಕ್ಷಿಗಳನ್ನ,ಮರ,ಗಿಡವನ್ನ,ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ರಕ್ಷಣೆ ಮಾಡೋ,ಸಲಹೋ ಜನಗಳು ಒಂದು ಕಡೆ..
ಎಷ್ಟು ಭಿನ್ನ ವಿಭಿನ್ನ ವ್ಯಕ್ತಿತ್ವ,ಪರಿಶುದ್ಧ ಆತ್ಮಗಳು ಇರುತ್ತೆ ಅಲ್ವಾ ಪ್ರಪಂಚದಲ್ಲಿ..
ಅಲ್ವಾ
😊😍