ಭಾನುವಾರ, ಮೇ 5, 2019

ಮಾನವೀಯತೆ ಮತ್ತು ಪ್ರಾಣಿಗಳು

ಯಾವುದೋ ಮೀಟಿಂಗ್ನಲ್ಲಿ ನಿಂತಿದ್ದ ನನಗೆ,ಯಾರೋ streak ದ್ವಿಚಕ್ರ ವಾಹನದಲ್ಲಿ,ಒಬ್ಬರು ವಯಸ್ಸಾದ ವ್ಯಕ್ತಿ ಸಿಕ್ಕಾಪಟ್ಟೆ ಲಾಂಗ್ ಆಗಿ, ಕಿ.ಕೀ.ಕಿ.ಕೀ.......
ಅಂತ ಹಾರ್ನ್ ಮಾಡುತ್ತಾ ಬರೋದು ಕಾಣಿಸ್ತು,ತುಂಬಾ ಕಿರಿಕಿರಿ ಅನಿಸ್ತು..

ನಾನು,
ಇವರಿಗೇನು ಕಣ್ಣು ಕಾಣಲ್ವಾ..ಇಷ್ಟು ಕಾಲಿ ರಸ್ತೆ ಇರೋ ಲೇ ಔಟ್ ನಲ್ಲಿ ಹೀಗೆ ಹಾರ್ನ್ ಮಾಡುತ್ತಾ ಬರ್ತಾ ಇದಾರಲ್ಲ..
ಎಂತೆಂತಾ ತಿಕ್ಕಲು ಜನ ಇರ್ತಾರಪ್ಪ ಈ ಸಮಾಜದಲ್ಲಿ ಅಂತ ಮನಸ್ಸಿನಲ್ಲೇ ಬೈದುಕೊಂಡು😠

ಹಾಗೇ,ನಮ್ಮ Meeting ಮುಂದುವರೆಸುತ್ತಾ,ಯಾಕೋ ತಿರುಗಿ ನೋಡ್ತೇನೆ ಸುಮಾರು 10 ರಿಂದ 15 ಬೀದಿ ನಾಯಿಗಳು ಓಡೋಡಿ,ಆ ವ್ಯಕ್ತಿಯ ಗಾಡಿಯ ಬಳಿ ಬಂದು ಸಂತೋಷದಿಂದ ಬಾಲ ಗುಂಡಾಡಿಸುತ್ತಾ ನಿಂತು ಬಿಟ್ಟವು!ಅವರು ಅಲ್ಲೇ ತಮ್ಮ ವಾಹನವನ್ನ ಸೈಡ್ಗೆ ನಿಲ್ಲಿಸಿದರು..

ನನಗೆ ಅದನ್ನ ನೋಡಿ, ಒಮ್ಮೆ ನನ್ನ ಬಗ್ಗೆ ನನಗೆ ತುಂಬಾ ಅಸಹ್ಯ ಅನಿಸಿ ಬಿಡ್ತು,ನಾನು ಏನೋ ಅಂದು ಕೊಂಡು ಬೈದು ಕೊಂಡೆನಲ್ಲ ಈ ವ್ಯಕ್ತಿ ಬಗ್ಗೆ ಅಂತ..😢

ಆ ವಯಸ್ಸಾದ ವ್ಯಕ್ತಿ,ತನ್ನ ಗಾಡಿಯಲ್ಲಿ ಎರಡು ಬಾಕ್ಸ್ ಇಟ್ಟು ಕೊಂಡಿದ್ದರು,ಬಾಕ್ಸ್ ನಿಂದ ಒಂದೊಂದೇ,ಬಿಸ್ಕೆಟ್ ಪ್ಯಾಕ್ ತೆಗೆದು..
ಒಂದೊಂದು ಕಡೆ ಕವರ್ ಓಪನ್ ಮಾಡಿ ಹಾಕುತ್ತಾ ಇದ್ದರು..

ಅದನ್ನ ನಾಯಿಗಳು ಯಾವುದೇ ಕಚ್ಚಾಟ,ಗಲಾಟೆ ಇಲ್ಲದೇ, ಅವರು ಹಾಕಿದ ಬಿಸ್ಕೆಟ್ನ್ನ ಅಚ್ಚುಕಟ್ಟಾಗಿ ಬಾಲ ಗುಂಡಾಡಿಸುತ್ತಾ,ಖುಷಿ ಖುಷಿಯಿಂದ ತಿನ್ನುತ್ತಾ ಇದ್ದವು...

ಅವರು ಮಕ್ಕಳನ್ನ ಮಾತಾಡಿಸುವಂತೆ..

ಏ ಇಲ್ಲಿ ಬಾರೋ..
ನಿಧಾನ ತಿನ್ನೋ ಮರಾಯಾ..
ಗಡಿಬಿಡಿ ಬೇಡ..
ನೀನ್ಯಾಕೋ ದೂರ ಇದ್ದಿ ಬಾ ಇಲ್ಲಿ,ಅಂತ ಕರೆದು ಕರೆದು,ಎಲ್ಲಾ ನಾಯಿಗಳನ್ನ ಮಾತಾಡಿಸುತ್ತಾ ಇದ್ದಿದ್ದು ನೋಡಿ..
ನಾನು ಎಲ್ಲಿದ್ದೇನೆ ಅನ್ನೋದೇ ನನಗೆ ಒಮ್ಮೆ ಮರೆತು ಹೋಯ್ತು..

ಆ ಪ್ರಾಣಿಗಳ ಖುಷಿಯಲ್ಲಿ,ತನ್ನ ನೆಮ್ಮದಿಯನ್ನು ಅವರು ಹುಡುಕಿಕೊಂಡಿದ್ದರು ಅನ್ನೋದು ಸ್ಪಷ್ಟವಾಗಿ ಕಾಣಿಸುತ್ತಾ ಇತ್ತು.

ನಾನು ಒಂದೆರಡು ಫೋಟೋ ದೂರದಿಂದ ತೆಗದು,ಅವರ ಹತ್ತಿರ ಹೋದೆ,

"ಏನು ಸಾರ್..ನಾಯೀ ಅಂದ್ರೆ ಇಷ್ಟನಾ..
ದಿನಾ ಹಾಕ್ತಿರಾ ಈ ತರ ಆಹಾರ"ಅಂದೆ..
ಅವರು
"ಅವು ನಮ್ಮ ಹಾಗೆ ಅಲ್ವಾ,ಕೈಲಾಗಿದ್ದು ಮಾಡೋದು", ಅಂತ ಅಷ್ಟೇ ಮಾತು ಮುಗಿಸಿದರು,
ನಾನು ಫೋಟೋ ತೆಗೆಯೋಕೆ ಹೋದೆ..
ಬೇಡ ಅನ್ನುವ ಹಾಗೆ ಕೈ ಸನ್ನೆ ಮಾಡಿ,ಗಾಡಿ ಸ್ಟಾರ್ಟ್ ಮಾಡಿ,ಉಳಿದ ಬಿಸ್ಕೆಟ್ ಬಾಕ್ಸ್ ನಲ್ಲಿ ಇಟ್ಟುಕೊಂಡು ಹೊರಟೇ ಬಿಟ್ಟರು..!

ಊರ ತುಂಬಾ ಸೈಟ್,ಮನೆ,ಬಂಗಲೆ,ಜಮೀನು,ಶಾಪಿಂಗ್ ಕಾಂಪ್ಲೆಕ್ಸ್,ಮನೆ ತುಂಬಾ ಗಾಡಿ ಇದ್ದರೂ,
ಅಯ್ಯೋ ಕಷ್ಟ,ಹಣವೇ ಇಲ್ಲ,ಹಣ ಬೇಕು ಅಂತ ಯಾವಾಗಲೂ ಅಳುತ್ತಾ,ಯಾರಿಗಾದರೂ,ಮೋಸ, ವಂಚನೆ ಮಾಡಿಯಾದರೂ ಗಳಿಸಬೇಕು ಅನ್ನುವ,ಎಂಜಲು ಕೈಯಲ್ಲಿ ಕಾಗೆ ಓಡಿಸದ ಜನ,ಜೀವಪರ,ಮಾನವೀಯತೆ,ಪ್ರಾಣಿ ಎಲ್ಲಾ ಒಂದೇ,ನಾವು ಅವನ್ನ ರಕ್ಷಿಸಬೇಕು ಅಂತ ಕತೆ ಬಿಡೋ ಜನರ ಸಮೂಹ ಒಂದು ಕಡೆ ಆದರೆ..

ಸದ್ದೇ ಇಲ್ಲದೆ,
ಪ್ರಾಣಿಗಳನ್ನ,ಪಕ್ಷಿಗಳನ್ನ,ಮರ,ಗಿಡವನ್ನ,ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ರಕ್ಷಣೆ ಮಾಡೋ,ಸಲಹೋ ಜನಗಳು ಒಂದು ಕಡೆ..
ಎಷ್ಟು ಭಿನ್ನ ವಿಭಿನ್ನ ವ್ಯಕ್ತಿತ್ವ,ಪರಿಶುದ್ಧ ಆತ್ಮಗಳು ಇರುತ್ತೆ ಅಲ್ವಾ ಪ್ರಪಂಚದಲ್ಲಿ..
ಅಲ್ವಾ
😊😍

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ