ಭಾನುವಾರ, ಮೇ 5, 2019

ಸಾಮಾಜಿಕ ಜವಾಬ್ದಾರಿ

ಮಂಜಪ್ಪ ಗೌಡ್ರು:-
ಹೇ..ಕ್ವಾಸ,ಬೀಸ್ ಕಾಲ್ ಹಾಕಿತ,ಎತ್ಲಗ್ ಹೊರಟಿಯಾ..ಇಷ್ಟೊತ್ತಿಗೆ..
ಸರಗೋಲಲ್ ಕಡ್ಬು ಬೆಯ್ಲಾನ್ ಇನ್ನು ಮನೇಲಿ..

ಕ್ವಾಸ:-ಗೌಡ್ರೆ..ಒಂದು ವೋಟ್ ಹಾಕಿ ಬಂದು ಆಮೇಲೆ,ಸರಗೋಲ್ ಮುಚ್ಚಳ ತೆಗೆದು,ನಿನ್ನೆ ಮೀನು ಗಸಿ ಹಾಕಿಂದು ಹೊಡೆಯನ ಅಂತ..
ನೀವ್ಯಾಕೆ ಸಿಟ್ಟಲ್ಲಿ ಅದಿರಿ,ಎಂತಾಯ್ತು ಮರ್ರೆ..

ಗೌಡ್ರು:- ಅಲ್ಲ..ಮತ್ಯಂತದ..
ಅವ್ಯಾರೋ ಬೆಂಗಳೂರಿಂದ ಬಂದನೆ ಒಂದು,ಮಂಡ ಗತ್ತಿ ತರ ಇರೋ ಮೊಬೈಲ್ ಹಿಡಿಕಿಂದು,ಬಿಳೆ ಬೂಡ್ಸ್, ಒಂದು ಹರ್ಕಿ ಹೋಗಿದು pant,ಆಮೇಲೆ ಅದೆಂತದೋ ಎದೆಮೇಲೆ ಬರಕಿಂಡಿದ್ದು ಸಲ್ಟು,ಹಾಕಿಂದು,ನಂಗ್ ಬುದ್ದಿ ಹೇಳಕ್ ಬತ್ತನೆ ಮರೆನೆ..

ಕ್ವಾಸ:-ಏನಾಯ್ತು ಗೌಡ್ರೆ,ಯಾರು ಏನು ಹೇಳಿದ್ರು..
ಸಿಟ್ ಎಂತಕ್ಕೆ ಮರ್ರೆ..

ಗೌಡ್ರು:-ನಾನು ನಡ್ಕು ಹೋತಾ ಇದ್ನ,ಬೆಳಗಾತ ಬೇಗಲೇ ಉಂದು ಓಟ್ ಹಾಕಿ,ಕಡುಬು ತಿಂದು ಹತ್ಗಿ ತ್ವಾಟಕ್ಕೆ ಹೋಗಿ ನೀರು ಬಿಡಕೆ ಆತದೇ ಅಂತ..

ಇವ್ಯಾರೋ,ಸಿಕ್ಕಿ "ಗೌಡ್ರೆ..
ಓಟ್ ಹಾಕಿ ಅತಾ..ಮತದಾನ ನಮ್ಮ ಹಕ್ಕು,ಪ್ರಜಾಪ್ರಭುತ್ವ ಉಳುಸಬಕ್",ಅಂತೆಲ್ಲಾ ನಂಗೆ ಬುದ್ದಿ ಹೇಳಕ್ ಬತ್ತನೆ ನೋಡಾ..ಕಳ್ ಮುಂಡೇ ಗಂಡ..
ಎಂತಾ ತಿಳ್ಕುಂಡನೆ ನನ್ನ..

ನಾನು ತಗುಂಡೇ ನೋಡು ಅವನಿಗೆ.
"ನಾನು ವೋಟ್ ಹಾಕದಷ್ಟು ನಿಂಗೆ ವಯ್ಸಾಗ್ಯದನಾ ನಿಂಗೆ,
ಗ್ರಾಮ ಪಂಚಾಯ್ತ್ಗಿ,ತಾಲ್ಲೂಕ್ ಪಂಚಾಯ್ತ್ಗಿ,ಜಿಲ್ಲಾ ಪಂಚಾಯ್ತ್ಗಿ,ಎಂಎಲ್ಲೇ,ಇದು ಸಂಸತ್ತು ಅದು ಹೋಗ್ಲಿ ಮರೇನೇ, ಈ ಸೊಸೈಟಿ ಎಲೆಕ್ಷನ್,ಊರು ಮನೆ ಹಾಲ್ ಡೈರಿ ಎಲೆಕ್ಷನ್,ನಮ್ಮನೆ ಸಣಿ ಯುವಕ ಸಂಘಕ್ಕೆ ನಿಂತಾಗ,ಎಲ್ಲಾ ವೋಟ್ ಹಾಕಿನಿ,ಇದೆಲ್ಲಾ ಸೇರಿಸಿ ಲೆಕ್ಕ ಹಾಕುಂಡರೆ ನೀನು,ನಿಂಗ್ ಅರ್ಧ ವರ್ಸಾ ಆಗ್ಲ, ಎಷ್ಟು ನೋಡಿಯಾ ಎಲೆಕ್ಷನ್",
ಅಂತ ಸಮಾ ಬೈದಿನಿ..
ಕಡಿಗೆ ಅವನೇ ಇಲ್ಲ ತಪ್ಪಾಯ್ತು ಮರ್ರೆ ಅಂತ ಹೋದ ಗೊತ್ತಾದ್ಯಾ..!😊

ಕ್ವಾಸ:- ಗೌಡ್ರೆ,ಅದು ಮತದಾನದ ಬಗ್ಗೆ ಅವೇರ್ ನೆಸ್ ಕ್ರಿಯೆಟ್ ಮಾಡೋದು ಮಾರಾಯ್ರೆ,ಫೇಸ್ಬುಕ್ ನಲ್ಲಿ,ವಾಟ್ಸ್ ಅಪ್ ನಲ್ಲಿ,ಟ್ವಿಟ್ಟರ್ ನಲ್ಲಿ ಎಲ್ಲಾ..ಅಷ್ಟೇ..
ಅದ್ಕಯಾಕೆ ಅಷ್ಟು ಸಿಟ್ಟು ಬಿಡಿ ಹೋಗಲಿ..

ಗೌಡ್ರು:-ಎಂತಾ,ಅವರು ನೇಸು,ಅದೆಂತದಾ..

ಎಷ್ಟು ವರ್ಷ ಆಗ್ಯಾದ ನಿಮ್ಮ,ಈ ಪಾಸ್ ಬುಕ್,ವಾಟೆ ಸೊಪ್ಪು,ಟಿಲ್ಲರ್ ಎಲ್ಲಾ ಬಂದು,ಹೇಳು..
ಮುಂಚೆ ಎಲ್ಲಾ ವೋಟ್ ಹಾಕ್ತಿರ್ಲನ್..
ಆಗ ಎಂತಾ ಇತ್ತು..ಹೇಳು..
ವೋಟಿನ ದಿನ ಹೋಗಿ ಜನ ವೋಟ್ ಹಾಕ್ತಿರ್ಲ?!

ನೋಡ ವೋಟ್ ಹಾಕಲ್ಲ ಅಂತ ಅಂದು ಕುಂಡವರು, ಎಂತಾ ಹೇಳು,ಎಷ್ಟೇ ಒತ್ತಾಯ ಮಾಡು ಅವರು ಅವರು ಹಾಕಲ್ಲ ಅಷ್ಟೆಯಾ..
ನೀನು ಅಲ್ಲೆಲ್ಲೋ ಮೊಬೈಲ್ ಲ್ಲಿ ಹಾಕಿಯಾ ಅಂತ ಬಂದು ವೋಟ್ ಹಾಕ್ತಾರೆ ಅಂದು ಕುಂಡಿಯಾ..
ನೀನು ಹಾಂಗ್ ಅಂದು ಕುಂಡ್ರೆ ನಿನ್ನಷ್ಟು ಶತ ದಡ್ಡ ಯಾರೂ ಇಲ್ಲ ಅಷ್ಟೆಯಾ..!

ಹೀಗೆ ಮಾಡೋರೆಲ್ಲಾ ವಿದ್ಯಾವಂತರು ಜಾಸ್ತಿ ಅಲಾ....!?

ನಮ್ಮ ಹಂಗಿದ್ದು,ಹೆಬ್ಬೆಟ್ಟು ಗಳು,ಅದೆಂತಾ ಕಷ್ಟ ಇರ್ಲಿ,ಕೆಲಸ ಇರ್ಲಿ, ಮೊದ್ಲು ಹೋಗಿ ವೋಟ್ ಹಾಕಿ ಬೆರಳಿಗೆ ಇಂಕ್ ಹಾಕ್ಸಿಕಿ ಬತ್ತೀವಿ..

ಈಗ ಹೇಳ ಯಾರು,ವಿದ್ಯಾವಂತರು,ತಿಳುವಳಿಕೆ ಇರೋರು,ಜವಾಬ್ದಾರಿ ಇರೋರು,ಪ್ರಜಾಪ್ರಭುತ್ವ ಉಳಿಸೋರು ಅಂತ..

ಹಳ್ಳಿಯೋರು,ದಡ್ಡರು ಅಂತ ನಮಗೆ ಮಕ್ಕರ್ ಮಾಡ್ತಾರೆ ಮತ್ತೆ..

ನಿಮಗೆಲ್ಲಾ ಬ್ಯಾರೆ ಕೆಲ್ಸ್ ಇಲ್ಲ,ಅವರು ನೆಸ್ ಅಂತೆ..
ಏನೋ ಇದೆಲ್ಲಾ ಮೊಬೈಲ್ ಅಲ್ಲಿ ಹಾಕಿ,ದೇಶ ಉದ್ದಾರ ಮಾಡಿವಿ ಅಂತ..
ಎದೆ ನಿಟೇಸ್ ಗಿಂದು ನಡೀ ಬಹುದು ಅಷ್ಟೆಯಾ,ಅದು ಬಿಟ್ಟರೆ ಉಪಯೋಗ್ ಇಲ್ಲ ಬಿಡ...
ಹೋಗ್ ಮರೆನೆ..

ಕ್ವಾಸ:-ಗೌಡ್ರೆ,ನೀವ್ಯಾಕೋ ಇವತ್ತು ಸ್ವಲ್ಪ ಬೆಚ್ಚಗೆ ಆಗಿದ್ದೀರಿ,ನಾನು ಬರ್ಲಾ..

ಗೌಡ್ರು:-ವೋಟ್ ಹಾಕಿ ಹೋಗಿ..ಸರಗೋಲ್ ಕಡುಬು ಬೆಂದದ, ಮೀನು ಗಸಿ ಹಳಸಿ ಹೊಗ್ಯದಾ ನೋಡು..

ಹಪ್ ಗೆಟ್ಟವು,ನಿಮನ್ ಹುಲಿ ಹಿಡಿಯಾ...
ನಮಗೆ ಹೇಳಕ್ ಬತ್ತವೆ..😠

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ