ಮೊನ್ನೆ(5_04_2015) ನನ್ನ ಸ್ನೇಹಿತರ (Sandeep) ಊರಾದ ಚಿತ್ರದುರ್ಗದ ಹತ್ತಿರದ ತಾಳ್ಯ ಎಂಬ ಊರಲ್ಲಿ"ನೂರೊಂದೆಡೆ ಮಹೋತ್ಸವ" ವಿತ್ತು ಇದು ೨೫ ವರ್ಷಕ್ಕೆ ಒಮ್ಮೆ ನೆಡೆಯುವ ಮಹೋತ್ಸವ ವಂತೆ,ತಾಳ್ಯದ ಗ್ರಾಮಸ್ತರು ಬೇರೆ ಬೇರೆ ಊರಲ್ಲಿರುವ ದೇವಸ್ತಾನದ ಮುಖ್ಯಸ್ತರಲ್ಲಿ ಹೋಗಿ ಈ ಮಹೋತ್ಸವಕ್ಕೆ ಅಹ್ವಾನ ನೀಡಿ ಬರುತ್ತಾರಂತೆ,ಆ ಅಹ್ವಾನಕ್ಕೆ ಅಲ್ಲಿನ ಮುಖ್ಯಸ್ತರು ಹಾಗೂ ಗ್ರಾಮಸ್ತರು ಒಪ್ಪಿಗೆ ಕೊಟ್ಟು,ನೂರೊಂದೆಡೆ ಮಹೋತ್ಸ್ವಕ್ಕೆ ಪಾಲ್ಗೊಳ್ಳಲು ಸಿದ್ದರಾಗುತ್ತಾರಂತೆ,ಹೀಗೆ ಸಿದ್ದರಾಗಿ ಕೆಲವು ದೇವರುಗಳನ್ನು ವಾಹನ ಮೂಲಕ ಕರೆ ತರುತ್ತಾರಂತೆ,ಕೆಲವರು ಬರಿಗಾಲು ನಡಿಗೆಯಲ್ಲಿ ಅವರ ಊರು ಗಳಿಂದಲೇ ಪಲ್ಲಕ್ಕಿಯನ್ನು ಹೊತ್ತು ತರುತ್ತಾರಂತೆ,ಇಲ್ಲಿ ೧೧೦ ಕ್ಕೂ ಹೆಚ್ಚು ಬೇರೆ ಬೇರೆ ಊರಿನ ದೇವರುಗಳನ್ನು ಗ್ರಾಮಸ್ತರು ಉತ್ಸವದೊಂದಿಗೆ ಬೆಳ್ಳಿಯ ಪಲ್ಲಕ್ಕಿಯಲ್ಲಿ(ಹೆಚ್ಚಿನವು)ತಂದಿದ್ದರು,ಬೇರೆ ಊರಿನ ಗ್ರಾಮಸ್ತರು ಪಲ್ಲಕ್ಕಿಯ ಮೆರವಣಿಗೆ ಯೊಂದಿಗೆ ಆಗಮಿಸುವಾಗ ಅವರನ್ನು ತಾಳ್ಯದ ಗ್ರಾಮಸ್ತರು ಊರದೇವರ ಪಲ್ಲಕ್ಕಿಯೊಂದಿಗೆ ಎದುರುಗೊಂಡು ಅವರನ್ನು ಅದ್ದೂರಿಯಾಗಿ,ಡೊಳ್ಳುಕುಣಿತ,ವೀರಗಾಸೆ,ಇನ್ನಿತರೆ ಗ್ರಾಮ್ಯ ಕಲೆಗಳೊಂದಿಗೆ ಸ್ವಾಗತಿಸುತ್ತಾರೆ,ನಂತರ ತಾಳ್ಯದಲ್ಲಿರುವ ಹನುಮಂತರಾಯರ ಗುಡಿಯ ಹತ್ತಿರ ಪೂಜೆ ಸಲ್ಲಿಸಿ ಗುಡಿಯಿಂದ ಅನತಿ ದೂರದಲ್ಲಿ ನಿಗದಿ ಪಡಿಸಿರುವ ಜಾಗದಲ್ಲಿ,ಬೇರೆಯ ಊರಿಂದ ತಂದಿರುವ ದೇವರನ್ನು ಇರಿಸಿ ಪೂಜಿಸುತ್ತಾರೆ ಹಾಗೂ ರಾತ್ರಿ ಇಡೀ ಭಜನೆ ಮಾಡುತ್ತಾ ಬೇರೆ ಬೇರೆ ಊರಿಂದ ಬಂದಿರುವ ಗ್ರಾಮಸ್ತರು ಕಾಲ ಕಳೆಯುತ್ತಾರೆ,ಬೆಳಿಗ್ಗೆ ಎದ್ದು ಎಲ್ಲಾ ನೂರೊಂದೆಡೆಯ ವಿಧಿ ವಿಧಾನದ ಪೂಜೆಯನ್ನು ಪೂರೈಸಿಕೊಂಡು ಮದ್ಯಾನದ ಭೋಜನವನ್ನು ಮುಗಿಸಿಕೊಂಡು ತಮ್ಮ ತಮ್ಮ ಊರಕಡೆಗೆ ಪಲ್ಲಕ್ಕಿಯ ಉತ್ಸವದೊಂದಿಗೆ ಹೊರಡುತ್ತಾರೆ,ಬೇರೆ ಬೇರೆ ಊರುಗಳಿಂದ ಬಂದ ಸಾವಿರಾರು ಭಕ್ತರು ೧೧೦ ಕ್ಕೂ ಹೆಚ್ಚು ದೇವರ ದರ್ಶನ ಪಡೆಯಲು,ರಾತ್ರಿ ಯೆಲ್ಲ ಜಾಗರಣೆ ಇದ್ದು ಎಲ್ಲಾ ದೇವರ ದರ್ಶನ ಪಡೆದರು,ಬಂದವರಿಗೆಲ್ಲ ಮೃಸ್ಟಾನ ಭೋಜನವೂ ಇತ್ತೂ,ರಾತ್ರಿ ಹಗಲೆನ್ನದೆ ಸಮರೋಪಾದಿಯಲ್ಲಿ ಭೋಜನ ತಯಾರಾಗುತ್ತಲೇ ಇತ್ತು,ಎಲ್ಲಿ ನೋಡಿದರೂ ವಿದ್ಯುತ್ ದೀಪಾಲಂಕಾರ ಸ್ವಾಗತ ಕಮಾನು ರಾರಾಜಿಸುತ್ತಿದ್ದವು,ಊರಿನ ಗ್ರಾಮಸ್ತರು ವ್ಯವಸ್ತಿತ ವಾಗಿ ಈ ಕಾರ್ಯಕ್ರಮವನ್ನು ನೆಡೆಸಿದರು,ಇಸ್ಟೊಂದು ಒಗ್ಗಟ್ಟು ಹಾಗೂ ಬಕ್ತಿಯಿಂದ ಈ ಮಹೋತ್ಸವವನ್ನು ಯಾವುದೆ ತೊಂದರೆ ಇಲ್ಲದೆ ಸರಾಗವಾಗಿ ನೆಡಿಸಿದ್ದು ತುಂಬಾ ಖುಷಿ ಕೊಟ್ಟಿತು....ಇದರಲ್ಲಿ ನಾನು ಕೂಡ ಭಾಗವಹಿಸಿದ್ದು ಸಂತೋಷ ಕೊಟ್ಟಿತು..
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ