ಸೋಮವಾರ, ನವೆಂಬರ್ 22, 2021

ಕನ್ನಡ ಕತೆ

ಕೆಲವು ದಿನದ ಹಿಂದೆ ನಾನು ಮತ್ತೆ ನನ್ನ ಒಬ್ಬ ತಮಿಳುನಾಡಿನ ಸ್ನೇಹಿತರು ಒಬ್ಬರ ಜೊತೆ ಬ್ರಾಡ್ ಪರ್ಡ್ ನಗರದ ಬೀದಿ ಸುತ್ತುತ್ತಾ,ಸಂಜೆಯ ಹೊತ್ತಿಗೆ ಮನೆಗೆ ಹೊರಡಲು ಬ್ರಾಡ್ಪರ್ಡ್ ಇಂಟರ್ ಚೆಮ್ಜ್ ರೈಲ್ವೆ ನಿಲ್ದಾಣದ ಕಡೆ ಹೆಜ್ಜೆ ಹಾಕುತ್ತಾ ಇದ್ದೆವು,ತಣ್ಣನೆ ಗಾಳಿ ಇನ್ನೇನು ಮಳೆ ಬರುವ ಸಾಧ್ಯತೆ ಇದೆ ಎಂದು ಕೊಂಡು ಕಾಲನ್ನ ಸ್ವಲ್ಪ ಚುರುಕಾಗಿ ಹಾಕುತ್ತಾ ಹೊರಟೆವು..
ಹಿಂಬದಿಯಿಂದ,
ತಂಬಿ,ನಲ್ಲ ಇರುಕಾ ಅಂತ ಯಾರೋ ಕೇಳಿದ ಹಾಗೆ ಆಯ್ತು..
ನೋಡಿದರೆ ಸುಮಾರು 65 ವರ್ಷದ ಮೇಲೆ ವಯಸ್ಸಾಗಿರುವ ವ್ಯಕ್ತಿ ನನ್ನ ಸ್ನೇಹಿತ ರನ್ನ ಕರೆದು ಮಾತಾಡಿಸಿದ್ದು.,
"ಇವರ ಯಾರೋ ಪರಿಚಯಸ್ಥರು ಇರಬಹುದಾ!?
ಈ ದೊಡ್ಡ ನಗರದಲ್ಲಿ ಹಿಂದಿನಿಂದ ಕಂಡು ಹಿಡಿದು ಮಾತಾಡಿಸಿದ್ರಲ್ಲ...ಗ್ರೇಟ್,
ಅಥವಾ ಸಂಬಂಧಿ ಯಾರಾದ್ರೂ ಇರಬಹುದಾ..ಅಂತ ಮನಸ್ಸಲ್ಲೇ ಸುಮಾರು ಪ್ರಶ್ನೆಗಳನ್ನ ಮಾಡಿ ಕೊಂಡೇ.."

ಅಷ್ಟು ಹೊತ್ತಿಗೆ ಸುಮಾರು ಉಭಯ ಕುಶಲೋಪರಿ ಅಚ್ಚ ತಮಿಳಿನಲ್ಲೇ ಮುಗಿಸಿ,ಊರು,ಮನೆ ಎಲ್ಲಿರೋದು,ಇಲ್ಲಿ ಯಾರ ಜೊತೆ ಇರೋದು,ಬಂದು ಎಷ್ಟು ದಿನ ಆಯ್ತು,ತ.ನಾಡಿನಲ್ಲಿನ ವೈರಸ್ ವಿಚಾರ ಹೀಗೆ ಸುಮಾರು ವಿಚಾರ ವಿನಿಮಯ ಮಾಡಿಕೊಂಡು ಬಿಟ್ಟಿದ್ರು ಇಬ್ಬರೂ..
ಕೊನೆಗೆ,ಖುಷಿ ಆಯ್ತು ನಿಮ್ಮನ್ನ ಭೇಟಿಯಾಗಿ ಅಂತ, ಬೀಳ್ಕೊಡಿಗೆ ಸಮಾರಂಭ ಕೂಡ ನಡೆಯಿತು..

ಸ್ನೇಹಿತರನ್ನ ಕೇಳಿದೆ ನಿಮಗೆ ಪರಿಚಯ ಮೊದಲೇ ಇತ್ತಾ ಅಂತ..

ಹೇ...ಇಲ್ಲ ಸಾರ್...
ನನ್ನ ಹಿಂದಿನಿಂದ ನೋಡಿ ತಮಿಳು ನವನು ಅಂತ ಗುರುತಿಸಿ ಬಂದು ಮಾತಾಡಿಸಿ ಹೋದರು..
ಯಾರು ಅಂತ ನಂಗೆ ಗೊತ್ತೇ ಇಲ್ಲ ಅಂದ್ರು..!!?
ನಾನು 😳

ಹೋದ ವಾರ..
Yorkshire Dale National park ಅಂತ ಒಂದು ಜಾಗವಿದೆ,ಬಹಳ ವಿಸ್ತಾರವಾದ ಗುಡ್ಡ ಬೆಟ್ಟ ಹಾಗೂ ಹುಲ್ಲುಗಾವಲು ಪ್ರದೇಶ,ಅಲ್ಲಿಗೆ ಹೈಕಿಂಗ್,ವಾಕಿಂಗ್,ಪಿಕ್ನಿಕ್ ಗೆ ಬಂದು ಕೆಲವು ಚಾಲೆಂಜ್ ತಗೊಂಡು ಜನರು ಬೆಟ್ಟ ಹತ್ತೋದು ಬಹಳ ಸಾಮಾನ್ಯ..
ಆ ಜಾಗಕ್ಕೆ ನಮ್ಮ ಊರಿನ ಒಂದು ಕುಟುಂಬದ ಜೊತೆ ಅಲ್ಲಿ ಹೋಗಿದ್ದೆವು..

ಕೆಲವು ಕಡೆ ಹೈಕಿಂಗ್ ಮುಗಿಸಿ,ಕೊನೆಗೆ Horton in ribblesdale ಎಂಬ ಜಾಗಕ್ಕೆ ಬಂದು,ಮನೆಯಿಂದ ತಂದಿದ್ದ ಊಟ ಮಾಡಲು ಅಚ್ಚುಕಟ್ಟಾದ ಜಾಗ ಹುಡುಕುತ್ತಾ ಹೋಗಿ ಒಂದು ಮರದ ಕೆಳಗೆ ಕುಳಿತು ಊಟ ಮಾಡಿ ವಾಪಾಸ್ ಅದೇ ದಾರಿಯಲ್ಲಿ ಹೊರಟು,
ನಡೆದು ಬರುತ್ತಾ ಇರುವಾಗ ದೂರದಿಂದ ಜೋರಾಗಿ ಕನ್ನಡ ಮಾತಾಡುತ್ತಾ ಬರುತ್ತಾ ಇರುವ ಕುಟುಂಬ ಕಾಣಿಸ್ತು..
ಹತ್ತಿರ ಬಂದಾಗ,
ಓಹ್..ನಮ್ಮೂರು ನವರು ಅಂತ,
ಸಹಜವಾಗಿ ಮುಖ ನೋಡಿ ನಕ್ಕು,ಬೆಂಗಳೂರು ಅಲ್ವಾ ಅಂದೇ..!

"Ya.."ಅಂತ ಸಣ್ಣ ಶಬ್ದ ತೆಗೆದು ಮುಖದ ಮೇಲೆ ಬಿಸಾಡಿದ್ರು,ಬಿಟ್ಟರೆ ಸಣ್ಣ ನಗುವಿನ ಸಾಲವನ್ನೂ ತೀರಿಸಲಿಲ್ಲ,
ಒಂದೇ ಒಂದು ಬೇರೆಯ ಶಬ್ದ ಬರಲಿಲ್ಲ,
ನನಗೆ,
ನೀನು ಯಾವ ನಾಯಿ ಸಂತೆ ಅಂತಲೂ ಕೇಳಲಿಲ್ಲ..!

ಎದೆ ಉಬ್ಬಿಸಿ ಕೊಂಡು,ನೀನ್ಯಾವನೋ ಕನ್ನಡದಲ್ಲಿ ಮಾತಾಡಿಸ್ತೀಯಾ ಅಂತ ಅನ್ನೋ ಹಾಗೆ ನಮ್ಮನ್ನ ದಾಟಿ ಹೋಗೇ ಬಿಟ್ಟರು..!

ನಮ್ಮಿಂದ ಸ್ವಲ್ಪ ಅಡಿ ದೂರ ಹೋಗಿ..
ಅಲ್ಲೇ ನಡೆದು ಬರುತ್ತಾ ಇದ್ದ ಬ್ರಿಟೀಷ್ ಮಹಿಳೆಯ ತಡೆದು ಅವರ ಹತ್ರ,
ನಗು ನಗುತ್ತಾ ಇಲ್ಲಿ ಎಲ್ಲಿಯಾದ್ರು ಕೂರೋಕೆ ಜಾಗ ಇದ್ಯಾ,
ಕೆಫೆ ಇದಿಯಾ ಅಂತ ಅಚ್ಚ ಆಂಗ್ಲ ಭಾಷೆಯಲ್ಲಿ ವಿಚಾರಿಸಿಕೊಂಡು,ದೊಡ್ಡ ಧನ್ಯವಾದ ಅರ್ಪಿಸಿ
ಅಲ್ಲಿಂದ ಜಾಗ ಬಿಟ್ಟರು..

ನಾನು ಆ ಬ್ರಿಟೀಷ್ ಮಹಿಳೆಯನ್ನ ನೋಡಿ ಒಂದು ಸಣ್ಣ ನಗು ನಕ್ಕೆ,
ಹೇಗಿದಿರಿ?
ಹೈಕಿಂಗ್ ಚನ್ನಾಗಿತ್ತಾ?
ಇವತ್ತು ದಿನ ಚನ್ನಾಗಿದೆ ಅಲ್ವಾ?
ಎಂಜಾಯ್ ಮಾಡಿ..
ಚಿಯರ್ಸ್ ಅಂತ ಬಾಯ್,ಬಾಯ್..ಎಂದು ಹೋದ್ರು,
ನನ್ನ ಕೇವಲ ಒಂದು ಸಣ್ಣ ನಗುಗೆ ಅಷ್ಟು ಬಾಯಿ ತುಂಬಾ ಮಾತು ಆಡಿ,ನನಗೆ ನಗು ಹಾಗೂ ಮಾತಿನ ಸಾಲ ಕೊಟ್ಟು,
ಖುಷಿಯಿಂದ ಹೊರಟು ಹೋದರು...!

ನನಗೆ ನಮ್ಮ ಕನ್ನಡದವರ ವರ್ತನೆ ನಿಜಕ್ಕೂ ಬಹಳ ಬೇಸರ ತರಿಸಿತು..

ಇಷ್ಟ್ಯಾಕ್ ನಮ್ಮ ಭಾಷೇ ಹಾಗೂ ನಮ್ಮವರ ಮೇಲೆ ತಾತ್ಸಾರವೋ..!

ಈ ರೀತಿಯ ಅನುಭವ ನನಗೆ ಹೊರ ದೇಶದಲ್ಲಿ ಆಗಿದ್ದು ಇದೇ ಮೊದಲೇನಲ್ಲ..!
ಹಲವು ಸರಿ,ಹಲವು ಪ್ರದೇಶಗಳಲ್ಲಿ ಆಗಿದೆ..

ಎಲ್ಲಾದರೂ ಪ್ರವಾಸಕ್ಕೆ ಹೋದಾಗ..
ಓಹ್..ಸೌತ್ ಇಂಡಿಯನ್ ಅಂತ ಬಂದು ಮಾತಾಡಿಸೋ..
ಮರಾಠಿ,ಒರಿಸ್ಸಾ,ಪಂಜಾಬಿ,ಬೆಂಗಾಲಿ,ಗುಜರಾತಿ,ಇದ್ದಾರೆ..

ಬೆಂಗಳೂರ ಅಂತ ಮಾತಾಡಿಸೋ,ತಮಿಳು,ಮಲೆಯಾಳಿ,ತೆಲುಗರು ಸಿಕ್ತಾರೆ..

ಆದರೆ ಕನ್ನಡದವರೆ ನಮ್ಮವರು ನೀವು ಅಂತ ನಾಲ್ಕು ಮಾತಾಡದೇ ಹೋದಾಗ ಸ್ವಲ್ಪ ಬೇಸರ ನನಗೆ ಮಾತ್ರ ಆಗುತ್ತಾ ಅಥವಾ ಎಲ್ಲರಿಗೂ ಆಗುತ್ತಾ ನನಗೆ ಗೊತ್ತಿಲ್ಲ..!

ಆದರೆ ಕೆಲವು ಕನ್ನಡಿಗರು ಹೀಗೆ ಎಲ್ಲೋ ದಾರಿಯಲ್ಲಿ ಸಿಕ್ಕಿ ಆತ್ಮೀಯವಾಗಿ ಮಾತಾಡಿ,ಇಂದಿಗೂ ಉಭಯ ಕುಶಲೋಪರಿ ಮಾತಾಡಿಸೋಕೆ ಕರೆ ಮಾಡೋರು ಇದ್ದಾರೆ..
ಆದರೆ ಅಂತವರ ಪ್ರಮಾಣ ಕಡಿಮೆ ಅನ್ನೋದು ನೋವಿನ ಸಂಗತಿ..

ಎಲ್ಲಾದರೂ ಇರು,ಎಂತಾದರು ಇರು,ಎಂದೆಂದಿಗೂ ನೀ ಕನ್ನಡವಾಗಿರು..
ಕನ್ನಡವೇ ಸತ್ಯ,ಕನ್ನಡವೇ ನಿತ್ಯ ಅನ್ನೋದು ಇಂತವರು ಓದಿ ಅರ್ಥ ಮಾಡಿಕೊಂಡಿಲ್ಲ ಅನಿಸುತ್ತೆ..
🙏

ಶಾರ್ಡ್

The Shard/Shard Of glass

"Renzo piano"
ಎಂಬ ಇಟಲಿಯ ಆರ್ಕಿಟೆಕ್ಟ್ ಒಬ್ಬರು Neo futurism ವಿನ್ಯಾಸದಲ್ಲಿ ಮಾಡಿದ,72 ಸ್ಟೋರಿ,309.6 ಮೀಟರ್(1016 ಅಡಿ)ಎತ್ತರದ ಗಗನ ಚುಂಬಿ ಕಟ್ಟಡ,
ಇದರ ವೆಚ್ಚ ಸುಮಾರು £435,023,425(contract cost) ಗಳು(ಇಂದು£1=100.79 ₹),ಮಾರ್ಚ್ 2009ಕ್ಕೆ ಪ್ರಾರಂಭವಾಗಿ 2012 ಜುಲೈನಲ್ಲಿ ಕಟ್ಟಡ ಪೂರ್ಣಗೊಂಡಿತ್ತು,
ಇದನ್ನ ಲಂಡನ್ ಸೌತ್ ವರ್ಕ್ ಬೀದಿಯಲ್ಲಿ ಕಟ್ಟಲಾಗಿದೆ,
ಯುರೋಪಿನ 7ನೇ ಅತಿ ಎತ್ತರದ ಹಾಗೂ 2012ರವರೆಗೆ ಯುಕೆ ಯ ಅತಿ ಎತ್ತರದ ಕಟ್ಟಡ ಹಾಗೂ ನಂತರ ಎರಡನೇ ಎತ್ತರದ ಕಟ್ಟಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ..

ಇಂತಹ ಕಟ್ಟಡದ ತುದಿಗೆ ಹತ್ತಲೇ ಬೇಕು..😬😉
ಓಹ್ Sorry,ಒಮ್ಮೆ ಹೋಗಲೇ ಬೇಕು ಅಂತ ಹಲವು ಸರಿ ಪ್ರಯತ್ನ ಮಾಡಿದಾಗೆಲ್ಲಾ ಟಿಕೆಟ್ ಹಾಗೂ ಟೈಮ್ ಸ್ಲಾಟ್ ಸಿಗದ ಕಾರಣ ಹೋಗಲು ಸಾಧ್ಯವಾಗಿರಲಿಲ್ಲ..
ಅಂತೂ
ಮೊನ್ನೆ ಟಿಕೆಟ್ ಹಾಗೂ ಟೈಮ್ ಸ್ಲಾಟ್ ಎರಡೂ ಸಿಕ್ಕಿ ಸಂಜೆಯ ಹೊತ್ತಿಗೆ ಈ ಬಹುಮಹಡಿ ಕಟ್ಟದವನ್ನ ವೇಗದ ಎಲಿವೇಟರ್ ಮೂಲಕ ಮೇಲಿನ ಮಹಡಿಗೆ ಹೋಗಿ ಲಂಡನ್ ನಗರವನ್ನ ಕಣ್ಣು ಹಾಗೂ ಕ್ಯಾಮೆರಾ,ಮೊಬೈಲ್ ಗೆ ತುಂಬಿ ಕೊಂಡು ಬರುವ ಹಾಗಾಯ್ತು...
ಮೇಲೆ ಹೋಗುವಾಗ ಹಾಗೂ ಎತ್ತರದ ಮಹಡಿಯಿಂದ ಕೆಳಗೆ ನೋಡುವಾಗ ಹೇಗನಿಸಿತು ಅಂತ ಕೇಳಿದ್ರಾ!!!!
ಅದೇ ಬಾಯಿಗೆ ಬರೋದು ಅಂತಾರಲ್ಲ(ಹೃದಯ) ಆ ಅನುಭವ ಇನ್ಪನೈಟ್ ಟೈಮ್ ಆಯ್ತು,
ಅಷ್ಟೆಯಾ..
The Shard ಮೇಲಿನ ಮಹಡಿಯಿಂದ ಚಿತ್ರಿಸಿದ ಹಾಗೂ ಕ್ಲಿಕ್ಕಿಸಿದ ಕೆಲವು ಫೋಟೋ ಹಾಗೂ ವೀಡಿಯೊ ಗಳು👇
😊

ಸೂಲಿ

𝗧𝗵𝗲 𝗦𝘂𝗹𝗹𝘆 (𝘁𝘄𝗼 𝘀𝗵𝗼𝘁𝘀 𝗼𝗳 𝗴𝗿𝗲𝘆 𝗴𝗼𝗼𝘀𝗲 𝘃𝗼𝗱𝗸𝗮 𝗮𝗻𝗱 𝗮 𝘀𝗽𝗹𝗮𝘀𝗵 𝗼𝗳 𝘄𝗮𝘁𝗲𝗿)
ಅನ್ನೋದು ಹಲವು ಕಡೆ ಜನಪ್ರಿಯ,ಮದ್ಯ ಪ್ರಿಯರು ಈ Sully ಎಣ್ಣೆ ಬಗ್ಗೆ ಕೇಳಿರ್ತಾರೆ..

ಇದಕ್ಕೆ
The Sully ಅಂತ ಹೆಸರು ಬರೋಕೆ ಒಂದು ಕಾರಣವಿದೆಯಂತೆ..

ಜನವರಿ 15,2009 ರಲ್ಲಿ ನ್ಯೂಯಾರ್ಕ್ ಸಿಟಿ ಲಾ ಗಾರ್ಡಿಯಾ ಏರ್ ಪೋರ್ಟ್ ನಿಂದ ಚಾರ್ಲೊಟೆ ಡಗ್ಲಾಸ್,ನಾರ್ತ್ ಕೆರೋಲಿನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು, ಟೇಕ್ ಆಪ್ ಆದ 𝙐𝙎 𝙖𝙞𝙧𝙬𝙖𝙮𝙨 𝙛𝙡𝙞𝙜𝙝𝙩 1549,ಕೆಲವೇ ಹೊತ್ತಿನಲ್ಲಿ ಕೆನಡಾ ಗೂಸ್ ಎಂಬ ಹಕ್ಕಿಗಳ ಹಿಂಡು ವಿಮಾನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಂಜಿನ್ ಪವರ್ ಲಾಸ್ ಆಗಿ ಪೈಲ್ಯೂರ್ ಆಗಿ ಬಿಡುತ್ತೆ..
ಆದರೆ ತುರ್ತು ಭೂಸ್ಪರ್ಶ ಮಾಡುವಷ್ಟು ಸಮಯ ಇರುವುದಿಲ್ಲ..
ಕ್ಯಾಪ್ಟನ್ Chesley Sullenberger(Sully).. ಕಂಟ್ರೋಲ್ ರೂಮ್ ಸಂಪರ್ಕಿಸಿ ವಿಷಯ ಮುಟ್ಟಿಸಿ ಮುಂದಿನ ಕ್ರಮ ಏನು ತೆಗೆದು ಕೊಳ್ಳೋದು ಅಂತ ಸಲಹೆ ಕೇಳುವಷ್ಟು ಸಮಯವೂ ಇರಲಿಲ್ಲ..
ಆ ಸಂಧರ್ಭದಲ್ಲಿ ವಿಮಾನ ಹಡ್ಸನ್ ನದಿಯ ಹತ್ತಿರವೇ ಹಾರುತ್ತಾ ಇತ್ತು..
ಕೂಡಲೇ ಸಮಯ ಪ್ರಜ್ಞೆ ಮೆರೆದ ಕ್ಯಾಪ್ಟನ್ Sully  ಪಸ್ಟ್ ಆಫೀಸರ್ ಕೋ ಪೈಲೆಟ್ Jeffrey Skiles ಗೆ ನದಿಯಲ್ಲೇ ಇಳಿಸಿ ಬಿಡೋಣ ಬೇರೆ ದಾರಿ ಇಲ್ಲ ಎಂದು ಹೇಳಿ.
ಹಾಗೆ ಪ್ರಯಾಣಿಕರಿಗೆ ಎಮರ್ಜೆನ್ಸಿ ಲ್ಯಾಮ್ದಿಂಗ್ ಆಗ್ತಾ ಇದೆ ಸುರಕ್ಷಿತವಾಗಿ ಕುಳಿತು ಕೊಳ್ಳೋಕೆ ಅನೌನ್ಸ್ ಕೊಡ್ತಾರೆ,
ಹಡ್ಸನ್ ನದಿಯ ಮಧ್ಯದಲ್ಲೇ ವಿಮಾನ ಇಳಿಸಿ ಬಿಡ್ತಾರೆ..
ಆ ಸಂಧರ್ಭದಲ್ಲಿ ಪೈಲೆಟ್ ಹಾಗೂ ಕ್ಯಾಬಿನ್ ಕ್ರು ಪ್ರಯಾಣಿಕರು ಎಲ್ಲಾ ಸೇರಿ ಬರೋಬ್ಬರಿ ಆ ಏರ್ ಬಸ್ ನಲ್ಲಿ 155 ಜನ ಪ್ರಯಾಣ ಮಾಡುತ್ತಾ ಇದ್ದರು..
ಆದರೆ ಅದೃಷ್ಟವಶಾತ್ Sully ಅವರ ಸುಮಾರು 20000 ಗಂಟೆಗಳ ವಿಮಾನ ಹಾರಾಟ ಅನುಭವ ಹಾಗೂ ಈ ಹಿಂದೆ ಏರ್ ಫೋರ್ಸ್ ನಲ್ಲಿ ಸೇವೆ ಸಲ್ಲಿಸಿದ ಅನುಭವದಿಂದ ಹಾಗೂ ಸಮಯ ಪ್ರಜ್ಞೆಯಿಂದ ಒಬ್ಬರಿಗೂ ಪ್ರಾಣಾಪಾಯ ಆಗದಂತೆ ಮಧ್ಯ ನದಿಯಲ್ಲಿ ಇಳಿಸಿ,ಕೊನೆಗೆ ಅಲ್ಲೇ ಇದ್ದ ಬೋಟ್ ಗಳು ಬಂದು ಜನರನ್ನ ರಕ್ಷಣೆ ಮಾಡಿದ್ರು ಹಾಗೂ,ರೇಸ್ಕ್ಯೂ ಆಫೀಸರ್ಸ್ ಎಲ್ಲಾ ಬಂದು 154 ಜನರನ್ನ ರಕ್ಷಿಸಿ ಎಲ್ಲರೂ ಸುರಕ್ಷಿತ ಅಂತ ತಿಳಿಯುವ ವರೆಗೆ Sully ವಿಮಾನ ಬಿಟ್ಟು ಇಳಿದಿರಲಿಲ್ಲವಂತೆ..

ಹಾಗಾಗಿ Sully ಬಹಳ ಜನಪ್ರಿಯರಾಗಿ ಬಿಟ್ಟರು..
ಈ ನೆನಪಿಗಾಗಿ ಅಲ್ಲಿನ ಜನತೆ ಆ ಡ್ರಿ0ಕ್ಸ್ ಗೆ The Sully ಅಂತ ಹೆಸರು ಇಟ್ಟಿದ್ದಾರಂತೆ..

ಟಾಮ್ ಹ್ಯಾಮ್ಕ್ ನಟಿಸಿದ ಚಿತ್ರವೂ ಆಗಿ ಈ ಕತೆ ತೆರೆಯ ಮೇಲೆಯೂ ಬಂತು..


ಡಿಗ್ ಯಾರ್ಕ್

ಇಂಗ್ಲೆಂಡ್ ನ ಯಾರ್ಕ್ ಎಂಬ ಅತ್ಯಂತ ಹಳೆಯ ನಗರ ಯಾರ್ಕ್ ಗೋಡೆಯಿಂದ ಆವೃತವಾಗಿದೆ,ಇದನ್ನ ರೋಮನ್ನರು 71 AD ಯಲ್ಲಿ ಕಟ್ಟಿದ್ದು ಎನ್ನಲಾಗಿದೆ,ನಂತರ ಡಿಯರಾ,ನಾರ್ತ್ ಉಂಬ್ರಿಯಾ,ಯೋರ್ವಿಕ್(ಸ್ಕಾ0ಡಿನೇವಿಯನ್ ಯಾರ್ಕ್),ರ ರಾಜಧಾನಿ ಮುಖ್ಯ ವ್ಯವಹಾರ ಕೇಂದ್ರವಾಗಿ ಬದಲಾಗುತ್ತಾ ಬಂತು,ಔಸ್ ನದಿ ಹಾಗೂ ಅತ್ಯಂತ ಹಳೆಯ ಕಟ್ಟಡಗಳು ಇಲ್ಲಿಯ ಮುಖ್ಯ ಆಕರ್ಷಣೆಗಳು...

ಇಲ್ಲಿ ತೀರಾ ಇತ್ತೀಚಿನ ವರೆಗೆ 2000 ವರ್ಷದ ಹಳೆಯ ಪಳೆಯುಳಿಕೆ ಪುರಾತತ್ವ ಇಲಾಖೆಗೆ ದೊರಕುತ್ತಲೇ ಇದೆ..
ಯಾರ್ಕ್ ನಗರ,
ಪುರಾತತ್ವ ಇಲಾಖೆಗೆ ಒಂದು ಹಾಟ್ ಸ್ಪಾಟ್ ಎನ್ನಬಹುದು..
ಇಂತಹಾ ಜಾಗದಲ್ಲಿ ಮಕ್ಕಳು ಹಾಗೂ ಇತಿಹಾಸದಲ್ಲಿ ಆಸಕ್ತಿ ಇರುವ ಯಾರಿಗಾದರೂ,
ಪುರಾತತ್ವ ಇಲಾಖೆ ಯಾವ ಟೆಕ್ನಿಕ್ ಬಳಸಿ ಹೇಗೆ ಕಾರ್ಯ ನಿರ್ವಹಿಸುತ್ತೇ,ಸಿಕ್ಕಿರುವ ಪಳೆಯುಳಿಕೆಯ,ಎಷ್ಟು ಹಳೆಯದು,ವ್ಯಕ್ತಿ,ಪ್ರಾಣಿ ಆದರೆ ಅದು ಯಾವ ಪ್ರಾಣಿ,ವಯಸ್ಸು,ಲಿಂಗ,ಎತ್ತರ,ವಯಸ್ಸು ಹೇಗೆ ಕಂಡು ಹಿಡಿಯಲಾಗುತ್ತೆ ಹಾಗೂ ಅದರಲ್ಲಿ ಭಾಗವಹಿಸಿ ನಾವೂ ಉತ್ಕನನ ಮಾಡಿ ಸಿಗುವ ಪಳೆಯುಳಿಕೆ ಬಗ್ಗೆ ಅಲ್ಲಿರುವ ಎಕ್ಸ್ ಪರ್ಟ್ ರಿಂದ ಮಾಹಿತಿ ಕೂಡ ಪಡೆಯುವ ಜಾಗ ಒಂದಿದೆ,
ಅದಕ್ಕೆ 
DIG ಎಂದು ಹೆಸರಿಸಲಾಗಿದೆ..

ಸುಮಾರು 2000 ವರ್ಷ ಹಳೆಯ ಸೇಂಟ್ ಸೇವಿಯರ್ಸ್ ಎಂಬ ಚರ್ಚ್ ಕಟ್ಟಡ ಒಂದಿದೆ,
ಅಲ್ಲಿ ಹಿಂದಿನ ಕಾಲದ ಜನರ ಜೀವನ ಹಾಗೂ ಮನೆಯಲ್ಲಿನ ಮಲಗುವ ಕೋಣೆ,ಅಡುಗೆ ಮನೆ,ಒಲೆ,ಶೌಚಾಲಯ ಎಲ್ಲದರ ಉತ್ಕನನ ನಾವೇ ಸ್ವತಹಾ ಮಾಡಿ,ಅದರ ಬಗ್ಗೆ ಮಾಹಿತಿ ಪಡೆಯ ಬಹುದಾಗಿದೆ....
ಕೆಲವು ವೀಡಿಯೊ ಸಹಿತ ಮಾಹಿತಿ ಹಾಗೂ ಉತ್ಕನನ ದಲ್ಲಿ ಸಿಕ್ಕ ಬಹಳ ಹಳೆಯ ಮೂಳೆ ಗಳು ಹಾಗೂ ವೈಕಿಂಗ್ ದೋಣಿಗಳು ಅವರು ಬಳಸುತ್ತಾ ಇದ್ದ ವಿವಿಧ ಆಯುಧಗಳು ಆಹಾರ ಪದ್ಧತಿ,ಮೀನು ಹಾಗೂ ಪ್ರಾಣಿಗಳನ್ನ ಹಿಡಿದು ದೋಣಿಯಲ್ಲಿ ಸಾಗಾಣಿಕೆ ಮಾಡುತ್ತಾ ಇದ್ದದ್ದು,ಹಲ್ಲು ಉಜ್ಜುವ ಪೇಸ್ಟ್,ನಾಣ್ಯಗಳು,ಭೇಟೆಯಾಡಲು ಬಳಸುತ್ತಾ ಇದ್ದ ಪರಿಕರ,ಜೀವನ ಶೈಲಿ,ಬಟ್ಟೆಗಳು ಹಾಗೂ ಹತ್ತು ಹಲವು ಸಲಕರಣೆಗಳನ್ನ ಪ್ರದರ್ಶನಕ್ಕೆ ಇಡಲಾಗಿದೆ..

ಈ ಚರ್ಚ್ ನ್ನ ಬಹಳ ಹಿಂದೆ ಈ ರೀತಿಯ ಪಳೆಯುಳಿಕೆಯ ಮೇಲೆ ಗೊತ್ತಿಲ್ಲದೇ ಕಟ್ಟಲಾಗಿತ್ತಂತೆ,ನಂತರದ ಸಮಯದಲ್ಲಿ ಪುರಾತತ್ವ ಇಲಾಖೇ ಚರ್ಚ್ ಕೆಳಗೆ ಉತ್ಕನನ ನಡೆಸಿದಾಗ 2000 ವರ್ಷದ ಹಿಂದಿನ ಪಳೆಯುಳಿಕೆ ದೊರೆತಿದೆ ಎನ್ನಲಾಗಿದೆ..!

ಆಸಕ್ತಿ ಇದ್ದರೆ ಒಂದು ಸಣ್ಣ ತರಗತಿಯನ್ನ ಕೂಡ ಕ್ಲಾಸ್ ರೂಮ್ ನಲ್ಲಿ ಕುಳಿತು ಎಕ್ಸ್ಪರ್ಟ್ ರಿಂದ ಕೇಳಬಹುದು..

ಅಲ್ಲಿರುವ ಇನ್ಸ್ತ್ರಕ್ಟರ್ ಹೇಗೆ ಉತ್ಕನನ ಮಾಡೋದು ಎನ್ನುವುದರ ಬಗ್ಗೆ,ಸಲಕರಣೆ ಒದಗಿಸಿ ನಮ್ಮ ಬಳಿಯೇ ಡಿಗ್ ಮಾಡಲು ಹೇಳುತ್ತಾರೆ(ಒಂತರಾ ಪ್ರಾತ್ಯಕ್ಷಿಕೆ ಹೊರತು ನಿಜವಾಗಿಯೂ ನಾವೇ ಹೊಸಾ ಜಾಗ ಉತ್ಕನನ ಮಾಡೋದು ಅಲ್ಲ),ಕೇಳಿದ ಮಾಹಿತಿ ಒದಗಿಸುತ್ತಾರೆ..

ಇದೊಂದು ಹೊಸ ಅನುಭವ..

ಬುಧವಾರ, ಅಕ್ಟೋಬರ್ 13, 2021

ಒಕಪಿ

ಒಕಪಿ(Okapi)..
(Okapi Jhonstoni)

ಈ ಪ್ರಾಣಿಯನ್ನ ನೋಡಿದ್ರೆ
ಜಿರಾಫೆ,ಜೀಬ್ರಾ ಕಾಕ್ಟೈಲ್ ಅನಿಸುತ್ತೆ ಅಲ್ವಾ..

ಒಕಪಿಗೆ, 
ಜೀಬ್ರಾ ಜಿರಾಫೆ,
ಪಾರೆಸ್ಟ್ ಜೀಬ್ರಾ,
ಕಾಂಗಲೋಸ್ ಜಿರಾಫೆ,ಎಂಬ ಹಲವು ಹೆಸರು ಇದೆ, 
ಇವುಗಳು ಹೆಚ್ಚಾಗಿ ಡೆಮಾಕ್ರಾಟಿಕ್ ರಿಪ್ಲೇಬಿಕ್ ಅಪ್ ಕಾಂಗೋ ದಲ್ಲಿ ಕಾಣಸಿಗುತ್ತವೆ..

ಒಕಪಿ(Okapi)ಎಂಬ ಪ್ರಾಣಿಯ ಶರೀರ ರಚನೆ ತುಂಬಾ ವಿಭಿನ್ನವಾಗಿದೆ,
ದೇಹದ ಮೇಲ್ಬಾಗ ಚಾಕಲೇಟ್ ಬ್ರೌನ್ ರೆಡ್ ಬಣ್ಣ ಹೊಂದಿದೆ,ಕಾಲು ಹಾಗೂ ಹೊಟ್ಟೆಯ ಭಾಗ ಜೀಬ್ರಾ ಪ್ರಾಣಿಯ ಮೈಮೇಲೆ ಇರುವಂತೆ ಪಟ್ಟಿ ಹೊಂದಿದೆ,
ಮುಖದ ರಚನೆ ಜಿರಾಫೆಯನ್ನ ಹೋಲುತ್ತದೆ..

ಒಕಪಿ(Okapi) ಮತ್ತು ಜಿರಾಫೆ(Giraffe) ಎರಡು ಜೀವಿಗಳು ಮಾತ್ರ ಜಿರಾಫೆಡಿ(Giraffidae) ಎಂಬ ಕುಟುಂಬಕ್ಕೆ ಸೇರಿರುವ ಪ್ರಸ್ತುತ ಭೂಮಿಯ ಮೇಲೆ ಅಸ್ತಿತ್ವದಲ್ಲಿ ಇರುವ ಪ್ರಾಣಿಗಳು ಎನ್ನಲಾಗಿದೆ..!
Okapi ಸುಮಾರು 4.9 ಅಡಿ ಎತ್ತರ,8.2ಅಡಿ ಉದ್ದ,ಸುಮಾರು 200 ರಿಂದ 350 ಕೆಜಿಯ ವರೆಗೆ ತೂಕ ಹೊಂದಿರುತ್ತವೆ,ಗಂಡು ಸಣ್ಣ ಕೋಡು ಗಳನ್ನ ಹೊಂದಿರುತ್ತವೆ,ಹಾಗೂ18 ಇಂಚು ಉದ್ದದ ನಾಲಿಗೆ ಹೊಂದಿರುವ ಇವುಗಳು ಕಿವಿ ಹಾಗೂ ಮುಖವನ್ನ ಇದರಿಂದ ಸ್ವಚ್ಛ ಗೊಳಿಸುವುದು ಹಾಗೂ ಮರದಲ್ಲಿನ ಸೊಪ್ಪು ಹಾಗೂ ಇನ್ನಿತರೆ ಹಸಿರನ್ನ ಎಳೆದು ತಿನ್ನಲು ಇದು ಸಹಾಯಕವಾಗಿದೆ..
ಸಂಪೂರ್ಣ ಸಸ್ಯಾಹಾರಿ ಆಗಿರುವ ಇವು,100 ಕ್ಕೂ ಹೆಚ್ಚು ವಿವಿಧ ರೀತಿಯ ಸಸ್ಯ,ಹುಲ್ಲು,ಎಲೆ,ಹಣ್ಣು ತಿಂದು ಜೀವಿಸುತ್ತವೆ..!
440 ರಿಂದ 450 ದಿನ ಗರ್ಭಧರಿಸಿ ಒಂದು ಮರಿಗೆ ಜನ್ಮ ನೀಡುತ್ತವೆ ಈ ಒಕಪಿ..!
ಸುಮಾರು 20 ರಿಂದ 30 ವರ್ಷ ಇವುಗಳ ಜೀವಿತಾವಧಿ..
ದಟ್ಟ ಕಾಡಿನಲ್ಲಿ ಜೀವಿಸುವ ಇವುಗಳು ಸುಮಾರು 22ಸಾವಿರಕ್ಕೂ ಹೆಚ್ಚು ಸಂಖ್ಯೆ ಇವೆ ಎನ್ನಲಾಗಿದೆ..

ಬಹಳ ವಿಶೇಷ ವಿಷಯವೆಂದರೆ

ಈ ಮಾದರಿಯ ಜೀವ ಸಂಕುಲ ಅಸ್ತಿತ್ವ ಇದೆ ಎಂದು ಸಂಪೂರ್ಣವಾಗಿ ಮಾಹಿತಿ ಎಲ್ಲರಿಗೂ ತಿಳಿದದ್ದೇ 20 ನೇ ಶತಮಾನದಲ್ಲಿ ಎನ್ನಲಾಗಿದೆ..!

1885ರಲ್ಲಿ ಹೆನ್ರಿ ಮೊರ್ಟ್ನ ಸ್ಟಾನ್ಲಿ(Henry Morton Stanley) ಎಂಬ ಪ್ರಾಣಿ ಶಾಸ್ತ್ರಜ್ಞ ಕಾಂಗೋ ಭೇಟಿ ನೀಡಿದಾಗ ಈ ಪ್ರಾಣಿಯನ್ನ ಗಮನಿಸಿದವ್ರು ಹೇಳಿದಾಗ,ಇದು ಒಂದು ರೀತಿಯ ಕತ್ತೆ ಇರಬಹುದು ಎಂದು ವ್ಯಾಖ್ಯಾನಿಸಿದ್ದರಂತೆ.

ಉಗಾಂಡದಲ್ಲಿ ಇದ್ದ ಒಬ್ಬ ಸಸ್ಯ ಶಾಸ್ತ್ರಜ್ಞ ಸರ್.ಹ್ಯಾರಿ ಜಾನ್ಸ್ಟನ್(Sir.Harry Johnston) ಎನ್ನುವವರು ಆಫ್ರಿಕಾದ ಕಾಡು ಭೇಟೆಗಾರರ ಬಳಿ ಇದ್ದ ಒಂದು ಪ್ರಾಣಿಯ ಚರ್ಮ ಹಾಗೂ ಮೂಳೆ ಹಾಗೂ ತಲೆ ಬುರುಡೆ ಗಮನಿಸಿ ಅವರಲ್ಲಿ ಅದನ್ನ ಕೊಡಲು ವಿನಂತಿ ಮಾಡಿ,ಅದನ್ನ ತಂದು ಪರೀಕ್ಷೆ ನಡೆಸಿ ನೋಡಿದಾಗ ಇದು ಬೇರೆಯ ತರದ ಪ್ರಾಣಿ,ಹೆನ್ರಿ ಅವರು 1885 ರಲ್ಲಿ ವ್ಯಾಖ್ಯಾನಿಸಿದ್ದ ರೀತಿಯಲ್ಲೇ ಈ ಪ್ರಾಣಿಯ ಅವಶೇಷಗಳ ಹೋಲಿಕೆ ಇತ್ತು,
ಜಾನ್ಸನ್ ಸ್ವತಃ ಆ ಪ್ರಾಣಿಯನ್ನ ನೋಡಿರಲಿಲ್ಲ,ಯಾವುದೋ ಹೊಸ ಪ್ರಾಣಿಯೇ ಇರಬೇಕು ಎಂದು ಶಂಕೆ ವ್ಯಕ್ತ ಪಡಿಸಿದ್ದರು,ನಂತರ
ಇದರ ಜಾಡು ಹಿಡಿದು ಹೋದಾಗ ಒಕಪಿ ಪ್ರಾಣಿ ಪತ್ತೆಯಾಗಿದೆ..

1901ರಲ್ಲಿ ಅಧಿಕೃತವಾಗಿ ಒಕಪಿ ಜಾನ್ಸ್ಟಾನಿ (Okapi Jhonstani) ಎಂಬ ಪ್ರಾಣಿ ಇದೆ ಎಂದು ಫಿಲಿಪ್ ಲ್ಯೂಟ್ಲಿ ಸ್ಕ್ಲಟರ್(Philip lutly Sclater) ಎಂಬ ಪ್ರಾಣಿ ಶಾಸ್ತ್ರಜ್ಞ ಈ ಹೊಸಾ ಸ್ಪೆಸಿಮನ್ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹ ಸಹಿತ,
ಈ ಪ್ರಾಣಿಯ ಅಸ್ತಿತ್ವದ ಬಗ್ಗೆ ಜಗತ್ತಿಗೆ ಅಧಿಕೃತವಾಗಿ ಪರಿಚಯಿಸಿದರು ಎನ್ನಲಾಗಿದೆ..

ಇಂತಹಾ ವಿಶೇಷ ಪ್ರಾಣಿ ಪ್ರಭೇಧ
ಮಾಂಸ,ಚರ್ಮಕ್ಕಾಗಿ ಭೇಟೆ ಹಾಗೂ ಗಣಿಗಾರಿಕೆ,ಅರಣ್ಯ ನಾಶದಿಂದ ಅಳಿವಿನ ಅಂಚಿಗೆಬಂದು ನಿಂತಿದೆ ಎಂದು International Union for Conservation of Nature
ಆತಂಕ ವ್ಯಕ್ತ ಪಡಿಸಿ ಎಚ್ಚರಿಸಿದೆ ಹಾಗೂ okapi Conservation Project ಕೂಡ 1987ರಲ್ಲಿ ಸ್ಥಾಪಿಸಿ ಇವುಗಳ ರಕ್ಷಣೆಯಲ್ಲಿ ತೊಡಗಿದೆ..

#chesterzoo 
#ukdiaries 
#okapi

ಸೋಮವಾರ, ಆಗಸ್ಟ್ 16, 2021

ಬಳೆಗಾರ್ತಿ

ಪದ್ದಮ್ಮ...
ಮನೆಯಲ್ಲಿ ಕಟ್ಟೆ ಮೇಲೆ ಕೂತವರು ಇಣುಕಿ,ಬಗ್ಗಿ ನೋಡಿ,ಕೂಗಿ ಹೇಳ್ಯಾತು....

"ಏಯ್..ಮಾಣಿ...
ಅದ್ಯಾರ ಉಣುಗೋಲು ಹತ್ರ ತಲೆ ಮೇಲೇ ಗಂಟು ಇಟ್ಟ ಕಂಡು ಬರ್ತಾ ಇರಂಗೆ ಕಾಣುತ್ತೆ..
ಯಾರು ನೋಡ ಮಾಣಿ..
ಬಳೆಗಾರ್ತಿಯಾ ಅಂತ...!"

ಮಾಣಿ...
ಬುರ್ರು..ಬುರ್ರು...ಬಾಯಿಂದ ಎಂಜಲು ಹಾರಿಸುತ್ತಾ  ಬಸ್ ಬಿಟ್ ಗಂಡು,ಹೋಗಿ ನೋಡಿಕಂಡು ಬಂದು ಕೂಗಿ ಹೇಳ್ ಯಾತು..

"ಬಳೆಗಾರ್ತಿ ಬಂದುದಾರೆ
ದೊಡ್ಡಮ್ಮ.."

ಓಹ್ ಹೌದಾ..

"ಸುಮಾರು ದಿನಾ ಆಗಿತ್ತು ಅವಳು ಈ ಕಡೆ ಬರದೇ. 
ಶ್ರಾವಣ,ಗೌರಿ ಹಬ್ಬ ಬೇರೆ ಹತ್ರ ಬರ್ತಾ ಅದೇ ಅದಕ್ಕೆ ನಿಧಾನಕ್ಕೆ ಈ ಕಡೆ ಬಂತು ಇವಳದ್ದು ಸವಾರಿ.."

"ಬಾರೇ....ಎಂತು ಸುಮಾರು ಸಮಯ ಆಗಿತ್ತು ಈ ಕಡೆ ಬರದೇ..

ಹುಷಾರಿದಿಯಾ..!?
ಬಾ ಕೂತಕಾ, ನೀರು ಬೇಕಾ..!?"

ಅಂತ 
ಪದ್ದಮ್ಮ ಬಳೆಗಾರ್ತಿ ಉಭಯ ಕುಶಲೋಪರಿ ಕೇಳಿ ಕೂರೋಕೆ ಹೇಳಿದ್ರು...

ಬಳೆಗಾರ್ತಿ
ತಲೆ ಮೇಲಿನ ಗಂಟು ಇಳಿಸಿ...

"ಏನಮ್ಮ,ಆರಾಮಾ" ಅಂತ..

ಕೂತವಳೇ
ಬಳೆ ಗಂಟು ಬಿಚ್ಚಿ,
ಹಸಿರು,ಕೆಂಪು,ನೀಲಿ,ಗಚ್ಚಿನ ಬಳೆ, ಪ್ಲೇನ್ ಬಳೆ ಇನ್ನೂ ತರ ತರದ ಬಳೆ ತೆಗೆದು ತೆಗದು ಇಡೋಕೆ ಶುರು...

"ಏಯ್..ಮಾಣಿ,
ಮೇಲಿನ ಮನೆ ಸರಸ್ವತಮ್ಮ,
ತೋಟದೆ ಮನೆ ಗೌರಮ್ಮ,
ಆಚೆ ಮನೆ ಶಾಂತಮ್ಮ,
ಗದ್ದೆಮನೆ ಸುಭದ್ರಮ್ಮ,
ಕಡೇ ಮನೆ ಲಕ್ಷ್ಮಮ್ಮ,
ಎಲ್ಲರಿಗೂ ಹೇಳಿ ಬಾರಾ,
ಮನಿಗೆ ಬರುಕಂತೆ ಬಳೆಗಾರ್ತಿ ಬಂದಳೆ ಅಂತ"

ಪದ್ದಮ್ಮ ಕೂಗಿ ಆರ್ಡರ್ ಹೊರಡಿಸಿದ್ರು ಮಾಣಿಗೆ..

ಮಾಣಿ... ಬಸ್ ಬಿಟ್ ಗಣುತ್ತಾ...ಹೋಗಿ ಸುದ್ದಿ ತಲುಪಿಸಿದಾ..

ಆಚೆ,ಈಚೆ ಮನೆ ಹೆಂಗಸರು 100 ಕಿಮೀ ಪಾಸ್ಟ್ ನಲ್ಲಿ ಪದ್ದಮ್ಮನ ಮನೆಗೆ ಬಂದು ಬಳೆಗಾರ್ತಿ ಸುತ್ತ ಕೂತಾಯ್ತು..
ನಂಗೆ ಇದು ಬೇಕು ಕಣೆ ನನ್ನ ಹತ್ರ ಈ ಬಣ್ಣವೇ ಇಲ್ಲ..ನಿನ್ನ ಹತ್ರ ಇದು ಅದೇಯಾ ಅಂತ ಮಾತಾಡುತ್ತಾ

ಬಳೆಗಳ ಆಯ್ಕೆ ಶುರು,ಆಯ್ಕೆ ಮುಗಿದ ನಂತರ,ಬಳೆಗಳ ಸೈಜ್,ಎಲ್ಲಾ ಬಳೆಗಾರ್ತಿಯಾ ಕಣ್ಣಳತೆಯಲ್ಲೇ ನಿರ್ದಾರ ಆಗೋದು..!

ಬಳೆ ತೊಡಿಸುವಾಗ ನೋವಾದರೆ ಗೊತ್ತಾಗಬಾರದು ಎನ್ನುವ ಕಾರಣಕ್ಕೋ ಏನೋ..
ತೊಡಿಸುವ ಸಮಯದಲ್ಲಿ ಹಾಡು ಕೂಡ ಸಾಮಾನ್ಯವಾಗಿತ್ತು..
ಬಳೆ ತೊಡಿಸೋದು ಬಹಳ ಕಷ್ಟ ಆದ್ರೆ ಬಚ್ಚಲ ಮನೆಯಿಂದ ಲಕ್ಸ್ ಸೋಪ್ ತಂದು ಕೈಗೆ ಹಚ್ಚೋದು ಅಷ್ಟೇ...
ಆಗ ಬಳೆ ಸೈಜ್ ಅಂದ್ರೆ ಕಣ್ಣ ಹತ್ರ ಹಿಡಿದು ಈ ಬಳೆ ಸೈಜ್ ನನ್ನ ಕೈಗೆ ಆಗುತ್ತೆ ಅಂತ ಕಾಣುತ್ತೆ ಅಂತ..
😂

ಅದೆಷ್ಟೇ ಬಂಗಾರದ ಬಳೆ ಗಳು,ಕಡಗಗಳು ಬೀರು ಒಳಗೆ ಇದ್ದರೂ .

ಈ ಗಾಜಿನ ಬಳೆಗಳು ಅಂದರೆ ಹೆಂಗಳೆಯರಿಗೆ ಅದೇನೋ ಪ್ರೀತಿ,
ಅದೇನೋ ಅವಿನಾಭಾವ ಸಂಬಂಧ,
ಅದೇನೋ ಸೆಳೆತ..
ಅದೇನೋ ಆಪ್ತತೆ...
ಅದೇನೋ ಸೇಂಟಿಮೆಂಟ್..
ಅದೇ ಹೆಣ್ಣಿಗೆ ಇನ್ನೂ ಹೆಚ್ಚಿನ ಮೆರುಗು ಕೊಡೋದೋ ಏನೋ ಅಲ್ವಾ?!

ಬೀರುವಿನಲ್ಲಿ ಎಷ್ಟು ಡಜನ್ ಬಣ್ಣ ಬಣ್ಣದ ತರಹೇವಾರಿ ಗಾಜಿನ ಬಳೆ ಇದ್ದರೂ,
ನಂಗೆ ಗಚ್ ನ ಬಳೆ ಬೇಕು,
ನನ್ನ ಹತ್ರ ಪ್ಲೇನ್ ಬಳೆ ಇಲ್ಲ,
ದಿನ ಹಾಕೋಕೆ ಎರಡು ಬಳೆ ತಗಣುಕು,
ಹಸಿರು ಬಳೆ ಎಲ್ಲಾ ಒಡೆದು ಹೋಗಿದ್ದಾವೆ,
ಒಂದು ಡಜನ್ ತಗಣುಕು,
ಹಳದಿ ಕಲರ್ ಸೀರೆ ತಗಂಡಿದಿನಿ ಮ್ಯಾಚ್ಹಿಂಗ್ ಬಳೆ ಇಲ್ಲ, 
ಹೀಗೆ ಒಂದೊಂದು ಅತ್ಯಂತ ನಂಬಲು ಅರ್ಹವಲ್ಲದ ಹೆಳೆಯೊಂದಿಗೆ,
ಇನ್ನೂ ಬೇಕು ಮತ್ತೂ ಬೇಕು ಎನ್ನುವ ಆಸೆ..

ಬಳೆಗಳನ್ನು ಒಟ್ಟು ಹಾಕುವ,ಆಸೆ,ಧಾವಂತ..
ನಾನು ಇಷ್ಟು ಬಳೆಗಳ ಒಡತಿ ಎಂದು ಗರ್ವದಿಂದ ಹೇಳಿಕೊಳ್ಳೋ ಖುಷಿ...ಅಷ್ಟೇ...
❤️

ದೂರದಲ್ಲಿ ಕೂತು ಗಂಡು ಹುಡುಗರು ನಮಗೇನಾದ್ರು ಆಟದ ಸಾಮಾನು ಇದೆಯಾ ಅಂತ ಓರೆ ಗಣ್ಣಲ್ಲಿ ನೋಡುತ್ತಾ ಬೇಸರ ಪಟ್ಟು ಕೊಳ್ಳೋದಂತೂ ಪ್ರತಿ ವರ್ಷ ಕಟ್ಟಿಟ್ಟ ಬುತ್ತಿ ..

ಬಾಚಣಿಗೆ,ಸೇಫ್ಟಿ ಪಿನ್,ಒಂದಷ್ಟು ಸ್ಟಿಕ್ಕರ್,ಹೇರ್ ಕ್ಲಿಪ್,ಕನ್ನಡಿ,ಇನ್ನಿತರೆ ಬಿಟ್ಟರೆ..

ಹುಡುಗರಿಗೆ ಬೇಕಾಗಿದ್ದು ಏನೂ ಕಾಣಿಸಲ್ಲ..
ಅದು ಹುಡುಗರಿಗೆ ಒಂತರಾ ರಾಜಕೀಯ ಪಕ್ಷದ ಪ್ರಣಾಳಿಕೆಯಂತೆ..
ನೋಡೋಕೆ ಮಾತ್ರ,ಉಪಯೋಗ ಇಲ್ಲ..😂

ಇದರ ಮಧ್ಯೆ ನಮ್ಮ ಜೇಬಿಗೆ ಕತ್ತರಿ ಎಷ್ಟು ಬೀಳುತ್ತೋ ಅಂತ ಮನೆ ಯಜಮಾನ್ರು..
"ಇನ್ನು ಅಗಲ್ವೇನ್ರಾ ಬಳೆ ತಗೊಂಡು,ಬೇಗ ತಗಳಿ"
ಅಂತ ಟೆನ್ಷನ್ ನಲ್ಲಿ ಎಲೆ ಅಡಿಕೆ ಹರಿವಾಣ ಎಳಕಂಡು ಡಬ್ಬಿಲಿದ್ದ ಹೊಗೆ ಸೊಪ್ಪು ತೆಗದು ಸುಣ್ಣ ಹಾಕಿ ಕೈಯಲ್ಲಿ  ತಿಕ್ತಾ ಪದ್ಮಾಸನದಲ್ಲಿ ಕೂತಿರೋದು ಬೇರೆ..😂

ಬಳೆಗಾರರು ಹಳ್ಳಿಯಲ್ಲಿ ಮಳೆಗಾಲದಲ್ಲಿ ಕೂಡ, ನಡೆದು ಕೊಂಡೇ,ತಲೆಯ ಮೇಲೆ ಬಳೆ ಗಂಟು ಇಟ್ಟು ಕೊಂಡು,
ಬಳೆ.... ಬೇಕಾ ಬಳೆ......
ಅಂತ ಕೂಗುತ್ತಾ,
ಮನೆ ಮನೆಗೆ ಹೋಗಿ,
ಶ್ರಾವಣದಲ್ಲಿ,ಗೌರಿ ಹಬ್ಬದಲ್ಲಿ,ಇನ್ನಿತರೆ ಹಬ್ಬಗಳಲ್ಲಿ ವ್ಯಾಪಾರ ಮಾಡೋದು ಸಾಮಾನ್ಯವಾಗಿತ್ತು...

ಪ್ರತಿ ವರ್ಷ ಭೇಟಿ ಕೊಡುವ ಮನೆಗೆ ಕಡ್ಡಾಯ ಪ್ರವೇಶ ಇದ್ದೇ ಇರುತ್ತೆ..!

ಅದನ್ನ ಬಳೆ ವ್ಯಾಪಾರ ಅನ್ನೋದಕ್ಕಿಂತ.....
ಸಂಸ್ಕೃತಿ,
ಸಂಪ್ರದಾಯ,
ಪದ್ದತಿ, 
ಹಿಂದೂ ಧರ್ಮದ ಪ್ರತೀಕ,
ಹೆಂಗಳೆಯರು ಸಂಭ್ರಮ ಪಡಲು,ಖುಷಿ ಪಡಲು ಒದಗಿ ಬರುವ ಒಂದು ಸುಸಂಧರ್ಭ..
ಎನ್ನಬಹುದು...
ಅಲ್ವಾ❤️

ಬಳೆಗಳ ಮೇಲೆ ಸಾಕಷ್ಟು ಹಾಡುಗಳು ಬಂದಿರೋದು ಕೇಳಿದ್ದೇವೆ..

ಆದರೆ ಇತ್ತೀಚೆಗೆ ಮಾಡ್ರನೈಜೇಶನ್ ಭರಾಟೆಯಲ್ಲಿ, ಇಂತಹ ಪದ್ಧತಿಗಳು ಬಹಳ ಕಡಿಮೆ ಯಾಗುತ್ತಾ ಬಂದಿದೆ..

ಕೆಲವು ಕಡೆ ಹೀಗೆ ಹಳೆಯ ಪದ್ಧತಿಯಂತೆ ಬಳೆ ವ್ಯಾಪಾರ ಮಾಡೋರು ಈಗಲೂ ಇದ್ದಾರಂತೆ..!

ಆದರೆ ಇತ್ತಿಚೆಗೆ ಮನೆ ಮನೆಗೆ ಹೀಗೆ ಬರುವವರ ಸಂಖ್ಯೆ ವಿರಳವಾದಂತೆ ಕಾಣಿಸುತ್ತಾ ಇದೆ..!?
ಅಲ್ವಾ?

ಈ ವರ್ಷವಂತೂ ಕೋವಿಡ್ ಹತ್ತೊಂಬತ್ತು ಇಂತಹಾ
ಹಳೆಯ ಪದ್ಧತಿಗಳನ್ನ,ಸಂಪ್ರದಾಯಗಳನ್ನ,ಹಬ್ಬ ಹರಿದಿನಗಳನ್ನ,ಆಪೋಷಣ ತೆಗೆದು ಕೊಂಡು ಬಿಡ್ತು..
ಅನ್ನಬಹುದೇನೋ..

ನಾನು ಮೊನ್ನೆ ನನ್ನ ಸಂಬಂಧಿಕರ ಮನೆಗೆ ಹೋದಾಗ,
ಅಲ್ಲಿಗೆ ಪರಿಚಯಸ್ಥ
ಬಳೆಗಾರರು,ವರ್ಷ ವರ್ಷ ಬರುವವರು,ಗಂಡ ಹೆಂಡತಿ ಇಬ್ಬರು,
ಬಹಳ ಅರ್ಜೆಂಟ್ ನಲ್ಲಿ ಮಾರುತಿ ಓಮ್ನಿ ಕಾರಿನಲ್ಲಿ ಬಂದು,
ಏನು ಬೇಕು ಅದನ್ನ ಕೂಡಲೇ ಅಲ್ಲೇ ಕೊಟ್ಟು,ವ್ಯಾಪಾರ ಮಾತ್ರ ಮಾಡಿ ಬಂದಷ್ಟೇ ವೇಗದಲ್ಲಿ ಹೊರಟೇ ಬಿಟ್ಟರು..!

ಅಲ್ಲಿ ಯಾವ ಆಚೆ ಮನೆ,ಈಚೆ ಮನೆಯ ಹೆಂಗಸರೂ ಬರಲಿಲ್ಲ..
ಬಳೆಗಾರ್ತಿ ಕೈಗೆ ಬಳೆ ತೊಡಿಸೋಕೆ ಅಂತ ಕೂತು ಒಂದಷ್ಟು ಸಮಯ ಕೂಡ ಮೀಸಲು ಇಡಲಿಲ್ಲ..
ಬಳೆ ತೊಡಿಸೋಕೆ ಯಾವ ಹಾಡು ಹೇಳಲಿಲ್ಲ..

ಈಗ ಕಾರಣ 
ಕೋವಿಡ್ 19 ಇರಬಹುದು ಆದರೆ ಅದು ಒಂದೇ ಅಲ್ಲ...

ಇನ್ನೂ ಹತ್ತು ಹಲವು ಕಾರಣವಿದೆ..!.

ಯಾರಿಗೂ ಸಮಯವಿಲ್ಲ ಇಲ್ಲಿ..
 
ಹೋಗ್ತಾ ಹೋಗ್ತಾ ಕೆಲವು ವರ್ಷಕ್ಕೆ..
"ಬಳೆಗಾರ ಚನ್ನಯ್ಯ ಬಾಗಿಲಿಗೆ"ಬರೋದೇ ಅನುಮಾನ ಅನಿಸುತ್ತೆ..
😣

ಹೋದ ವರ್ಷ ಕೋವಿಡ್ 19 ಬಂದ ಸಮಯದಲ್ಲಿ
ಅನಿಸಿದ್ದು,ಕಂಡಿದ್ದು,ಬರೆದಿದ್ದು..
ಹಳೆಯದು..
😊

ಶನಿವಾರ, ಮಾರ್ಚ್ 20, 2021

Micheal fagan(Intruder)

𝐌𝐢𝐜𝐡𝐞𝐚𝐥 𝐅𝐚𝐠𝐚𝐧(Intruder)
(ಮೈಕೆಲ್ ಪಾಗೇನ್)

ಜಗತ್ತಿನ ಅತ್ಯಂತ ಭದ್ರತೆ ಹೊಂದಿರುವ ಜಾಗಗಳಲ್ಲಿ ಬ್ರಿಟಿಷ್ ರಾಯಲ್ ಪ್ಯಾಮಿಲಿಯ ಬಕಿಂಗ್ ಹ್ಯಾಮ್ ಅರಮನೆಯೂ ಒಂದು..

ಸುಮಾರು 39 ಎಕರೆ ಪ್ರದೇಶಕ್ಕೆ ಬಹಳ ಕಟ್ಟು ನಿಟ್ಟಿನ ಭದ್ರತೆ ಇದೆ,
77000 ಸ್ಕ್ವೇರ್ ಮೀಟರ್ ಫ್ಲೋರ್ ಏರಿಯಾ ಹೊಂದಿರುವ ಈ ಅರಮನೆ,
2020ರ ಒಂದು ವರದಿಯಲ್ಲಿನ ವ್ಯಾಲ್ಯೂಯೇಷನ್ ಪ್ರಕಾರ ಇದರ ಬೆಲೆ ಸುಮಾರು 4.9 ಬಿಲಿಯನ್ ಪೌಮ್ಡ್ ..!

ಇಂತಹಾ ಅತಿ ಸೂಕ್ಷ್ಮ,ಸುರಕ್ಷಿತ, ಹದ್ದಿನ ಕಣ್ಣಿರುವ,ಪ್ರದೇಶದ ಒಳಗೆ ಹೋಗಿ ಅದರಲ್ಲೂ ಬ್ರಿಟನ್ ರಾಣಿಯ ಮಲಗುವ ಕೋಣೆಗೆ ಒಬ್ಬ ಆಗಂತುಕ ನುಗ್ಗಿದ್ದ ಎಂದರೆ ನೀವು ನಂಬಲೇ ಬೇಕು.. 

ಇದು 20 ನೇ ಶತಮಾನದಲ್ಲಿ ನಡೆದ ಬ್ರಿಟಿಷ್ ರಾಯಲ್ ಪ್ಯಾಮಿಲಿಯ ಅತಿ ದೊಡ್ಡ ಭದ್ರತಾ ಲೋಪ ಎನ್ನಲಾಗಿದೆ..!

ಆ ಸಮಯದಲ್ಲಿ ಬ್ರಿಟನ್ ಪ್ರಧಾನಿಯಾಗಿ ಆಡಳಿತ ಮಾಡುತ್ತಾ ಇದ್ದವರು..
ಉಕ್ಕಿನ ಮಹಿಳೆ(𝐈𝐫𝐨𝐧 𝐋𝐚𝐝𝐲) ಎಂಬ ಖ್ಯಾತಿಯ ಕನ್ಸರ್ ವೇಟಿವ್ ಪಾರ್ಟಿಯ,

"ಮಾರ್ಗರೇಟ್ ಹಿಲ್ಡಾ ಥ್ಯಚರ್"..
(𝐌𝐚𝐫𝐠𝐞𝐫𝐞𝐭𝐞 𝐇𝐢𝐥𝐝𝐚 𝐓𝐡𝐚𝐭𝐜𝐡𝐞𝐫)

ಅರಮನೆಯ ಭದ್ರತೆಯನ್ನ ಭೇದಿಸಿ,ಕಣ್ಣು ತಪ್ಪಿಸಿ ಕದ್ದು ಒಳಬಂದ ಮನುಷ್ಯನ ಹೆಸರು ಮೈಕೆಲ್ ಪಾಗನ್,
ಇವರು ಹುಟ್ಟಿದ್ದು ಕ್ಲರ್ಕನ್ವೆಲ್,ಲಂಡನ್ ನಲ್ಲಿ 1948 ಇಸವಿಯಲ್ಲಿ,ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಇವರಿಗೆ ಬಾಲ್ಯ ಬಹಳ ಕಠಿಣವಾಗಿತ್ತು,
ತಂದೆ ಸ್ವಲ್ಪ ವಿಚಿತ್ರ ಸ್ವಭಾವದ ಮನುಷ್ಯ,ಇವರು ಬೆಳೆಯುತ್ತಾ ಇದ್ದ ಹಾಗೆ ತಂದೆಯ ಕೆಲವು ವರ್ತನೆ ನೋಡಲಾಗದೆ,ಮನೆ ಬಿಟ್ಟು ಹೊರಬಂದು,ಪೈಂಟಿಂಗ್ ಹಾಗೂ ಡೆಕೋರಿಟಿಂಗ್ ಕೆಲಸ ಮಾಡಲು ಪ್ರಾರಂಭ ಮಾಡಿಕೊಂಡು,1972 ಕ್ರಿಸ್ಟಿನ್ ಎಂಬುವರನ್ನ ಮದುವೆ ಕೂಡ ಆಗುತ್ತಾರೆ,ನಾಲ್ಕು ಜನ ಮಕ್ಕಳು ಜನಿಸುತ್ತಾರೆ..

ಅದಾದ ಸ್ವಲ್ಪ ಸಮಯಕ್ಕೆ ಗಂಡ ಹೆಂಡಿರ ಸಂಬಂಧದಲ್ಲಿ ಬಿರುಕು ಮೂಡಿ,ಕ್ರಿಸ್ಟಿನ್ ಇವರನ್ನ ಬಿಟ್ಟು,ಇನ್ನೊಬ್ಬ ಪ್ರಿಯಕರನ ಜೊತೆ ಜೀವನ ಮಾಡೋಕೆ ಪ್ರಾರಂಭ ಮಾಡುತ್ತಾರೆ..!

ಮೈಕೆಲ್ ಪಾಗನ್ ಒಬ್ಬಂಟಿಯಾಗುತ್ತಾರೆ...
ಆ ಸಮಯದಲ್ಲಿ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಸೃಷ್ಟಿಯಾಗಿರುತ್ತೆ,ಆರ್ಥಿಕ ಪರಿಸ್ಥಿತಿ ಗಂಭೀರವಾಗಿರುತ್ತೆ..
ಪಾಗನ್ ಕೂಡ ಕೆಲಸವಿಲ್ಲದೇ ಕಷ್ಟದಲ್ಲಿರುತ್ತಾರೆ,
ಆದರೆ ಬ್ರಿಟನ್ 
ಸರ್ಕಾರ ಕೆಲಸವಿಲ್ಲದವರಿಗೆ,ಸರ್ಕಾರದ ವತಿಯಿಂದ ಮೂಲಭೂತ ಭತ್ಯೆ ಕೊಡುತ್ತಿರುತ್ತದೇ..

ಆ ಸಮಯದಲ್ಲಿ ಥ್ಯಚರ್ ಪಕ್ಕದ ಪ್ಯಾಕಲ್ಯಾಮ್ಡ್ ಐಲ್ಯಾನ್ಡ್ ಮೇಲೆ ಯುದ್ಧ ಘೋಷಣೆ ಮಾಡಿರುತ್ತಾರೆ..
ದೇಶ ಇಷ್ಟು ಕಷ್ಟದಲ್ಲಿದ್ದು,ಇದರ ಬಗ್ಗೆ ಗಮನ ಹರಿಸೋದು ಬಿಟ್ಟು,
ಥ್ಯಚರ್ ಸರ್ಕಾರಕ್ಕೆ ಈ ಅನಾವಶ್ಯಕ,ಅಹಂ,ದೊಡ್ಡಸ್ತಿಕೆ ತೋರಿಸಿಕೊಳ್ಳೋಕೆ,ಶೋ ಆಪ್ ಗಾಗಿ ಯುದ್ಧ ಬೇಕಿರಲಿಲ್ಲ ಅನ್ನೋ ಪ್ರಶ್ನೆ ಕಾಡುತ್ತಾ ಇರುತ್ತೆ,ಇದರ ಬಗ್ಗೆ ಬೇಸರ,ತೀವ್ರ ಅಸಮಾಧಾನ,ಪಾಗೇನ್ ಗೆ ಇರುತ್ತೆ...

ಒಮ್ಮೆ ತಾನು ನಿರುದ್ಯೋಗ ಭತ್ಯೆ ತೆಗೆದು ಕೊಳ್ಳಲು ಸರ್ಕಾರದ ಕಚೇರಿಗೆ ಹೋದಾಗ ಅಲ್ಲಿರುವ ಅಧಿಕಾರಿಯ ಹತ್ರ..
"ನಾನು ಸರ್ಕಾರದ ಮುಖ್ಯಸ್ಥರ ಬಳಿ ನೇರವಾಗಿ ಮಾತಾಡಬೇಕು"ಅಂತ ಕೇಳಿದ್ದಾರೆ,ಪಾಗನ್..

ಅದಕ್ಕೆ ಅವರು 
"ನಿನ್ನ ಕ್ಷೇತ್ರದ ಎಂ.ಪಿ ಹತ್ರ ಹೋಗಿ ಮಾತಾಡು ಅವರು ಸರ್ಕಾರಕ್ಕೆ ನಿನ್ನ ಅಹವಾಲು ಮುಟ್ಟಿಸುತ್ತಾರೆ"ಎಂದು ವ್ಯ0ಗ್ಯವಾಗಿ ಹೇಳಿ,ನಗುತ್ತಾರೆ ಆ ಮಹಿಳಾ ಅಧಿಕಾರಿ..

ಮೈಕೆಲ್ ಪಾಗನ್ ಕೂಡಲೇ ತನ್ನ ಕ್ಷೇತ್ರದ ಎಂ.ಪಿ ಆಫೀಸ್ ಹುಡುಕಿ ಹೊರಟೇ ಬಿಡ್ತಾರೆ,ಆಫೀಸ್ ವಿಳಾಸ ಹುಡುಕಿ ಹೊರಗೆ ಕಾದಿದ್ದು,ಎಂ.ಪಿ ಬಂದ ಕೂಡಲೇ ಪರ್ಮಿಶನ್ ಕೇಳಿ ಒಳಗೆ ಹೋಗಿದ್ದಾರೆ..

(ಅಣ್ಣನ್ನ ನೋಡಬೇಕು ಅಂತ ಕೇಳೋದು..ನಾಳೆ ಬಾ..ಅಣ್ಣಾ ಬ್ಯುಜಿ,ಮೀಟಿಂಗ್ ನಲ್ಲಿದ್ದಾರೆ ಅಂತ ಅಣ್ಣ ನ ಚೇಲಾಗಳ ಹತ್ರ ಹೇಳಿಸಿ ಕೊಳ್ಳೋದು ಎಲ್ಲಾ ಇಲ್ಲಿ ಇರಲ್ಲ..ಸಮಸ್ಯೆ ನೇರವಾಗಿ ಅಪ್ರೋಚ್ಮಾಡುವ ಅಧಿಕಾರ ಪ್ರಜೆಗಳಿಗೆ ಇರುತ್ತೆ...
ಈಗಲೂ ಹಾಗೇ ಇದೆ..)

ಎಂ.ಪಿ ಕರೆದು ಕೂರಿಸಿ ಕೇಳಿದ್ರು..
ಹೇಳಿ,ಯಾರು ನೀವು,ಏನು ಸಮಸ್ಯೆ..
ಅದಕ್ಕೆ
ಪಾಗೇನ್ ನೋಡಿ 
"ಸಾರ್..ನಾನು ಪೈ0ಟರ್ ಮತ್ತೆ ಡೆಕೋರೆಟರ್ ನಂಗೇ ಕೆಲಸ ಇಲ್ಲ,
ದೇಶದ ಪ್ರಧಾನಿ ಇದರ ಬಗ್ಗೆ ಗಮನ ಹರಿಸೋದು ಬಿಟ್ಟು,ಯುದ್ಧ ಮಾಡೋಕೆ ಗಮನ ಕೊಡ್ತಾ ಇದ್ದಾರೆ,ದಯಮಾಡಿ ಇದನ್ನ ನೀವು ನನ್ನ ಪರವಾಗಿ ಹೇಳಿ.."
ಎಂದರು..
ಅದಕ್ಕೆ ಎಂ.ಪಿ
"ಅದೆಲ್ಲಾ ನಾನು ಹೇಳೋಕೆ ಸಾಧ್ಯವಿಲ್ಲ,
ಕಾರಣ ಮಾರ್ಗರೇಟ್ ಥ್ಯಚರ್ ನನ್ನ ಬಾಸ್,
ನನ್ನದೇ ಪಕ್ಷ ಕನ್ಸರ್ವೆಟಿವ್ ಪಾರ್ಟಿ ಲೀಡರ್,
ಯುದ್ಧಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ,
ಸರ್ಕಾರದ ಎಲ್ಲಾ ನಡೆಗೇ ನನ್ನ ಬೆಂಬಲ ಹಾಗೂ ಸಮರ್ಥನೆ ಇದೆ
ನೀನು ಒಂದು ಕೆಲಸ ಮಾಡ
ವಿರೋಧ ಪಕ್ಷದ ನಾಯಕರ ಹತ್ರ ಹೇಳು ಅವರು ಸದನದಲ್ಲಿ ನಿನ್ನ ಪರ ಪ್ರಶ್ನೆ ಮಾಡ್ತಾರೆ,
ಇಲ್ಲ ಅಂದ್ರೆ ರಾಯಲ್ ಹೈನೆಸ್(𝐐𝐮𝐞𝐞𝐧 𝐄𝐥𝐢𝐳𝐚𝐛𝐞𝐭𝐡-2) ಇದಾರಲ್ಲ ಅವರ ಅರಮನೆಗೆ ಹೋಗಿ ನೇರವಾಗಿ ಹೇಳು ಅವರೇ ಸುಪ್ರೀಂ ಇಡೀ ದೇಶಕ್ಕೆ,
ಅಂತ ಸಂಪೂರ್ಣ ವ್ಯ0ಗ್ಯ ಮಾಡಿ,
ನನಗೆ ಬಹಳ ಕೆಲಸವಿದೆ,ಕ್ಷಮಿಸಿ"ಅಂತ ಎದ್ದು ಹೊರಡುತ್ತಾರೆ..

ಆದ್ರೆ ಪಾಗನ್ ಅಷ್ಟು ಸುಲಭದ ಮನುಷ್ಯ ಅಲ್ಲ..
ಅವರು 

ನಾನು 
ಹರ್ ಮೇಜಿಸ್ಟಿ ಅಂದರೆ ಕ್ವೀನ್ ಎಲಿಜಬೆತ್-2 ನ ಮೀಟ್ ಆಗಿ ಕಷ್ಟ ಹೇಳಿ ಕೊಳ್ಳಲೇಬೇಕು ಎಂದು
ಅಲ್ಲೇ ನಿರ್ಧರಿಸಿಯೇ ಬಿಡ್ತಾರೆ..

ಆದರೆ ಬ್ರಿಟನ್ ಕ್ವೀನ್ ಮೀಟ್ ಅಗೋದರ ಕತೆ ಬಿಡಿ,ಗೇಟ್ ಹತ್ರ ಇರೋ ಗಾರ್ಡ್ ಹತ್ರ ಹೋಗೋಕೆ ಆಗಲ್ಲ ಬೇರೆಯವರಿಗೆ,
ಅಷ್ಟು ಭದ್ರತೆ ಇರುವ ಜಾಗ,ಬಕಿಂಗ್ ಹ್ಯಾಮ್ ಅರಮನೆ..
ಇನ್ನು ರಾಣಿ ಮಾತಾಡಿಸೋದು ಸಾಧ್ಯವಾ?

ಆದ್ರೆ ಪಾಗನ್ ಒಂದು ದಿನ ಬಸ್ ಹತ್ತಿ,ರಾಣಿ ಅರಮನೆ ಇರುವ ವೆಸ್ಟ್ ಮಿನಿಸ್ಟರ್ ಕಡೆ ಹೊರಟೆ ಬಿಟ್ಟರು..

ಎಲ್ಲಾ ಭದ್ರತೆ ಸಾಧನಗಳು ಹಾಗೂ ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಿ,ಡ್ರೈನ್ ಪೈಪ್ ಹತ್ತಿ ಎತ್ತರದ ಗೋಡೆ ಹತ್ತಿ ರೂಪ್ ನಲ್ಲಿ ಓಡಾಡಿ ಅಲ್ಲಿಂದ ಇಳಿದು,ಲಾಕ್ ಮಾಡಿರದ ಕಿಟಕಿ ದಾಟಿ ಅರಮನೆಯ ಒಳ ನುಗ್ಗಿ,ರಾಯಲ್ ಚೇರ್ ಮೇಲೆ ಕೂತು,ಆಮೇಲೆ ಎಲ್ಲಾ ಕಡೆ ಓಡಾಡಿ,ಒಂದು ಕೊಠಡಿಗೆ ಹೋಗಿ ಅಲ್ಲಿ ಸಿಕ್ಕ ವೈಟ್ ವೈನ್ ಕುಡಿದು,ಒಂದು ಪ್ಲವರ್ ವಾಸ್ (ಆಫ್ರಿಕಾದವರು ಕೊಟ್ಟಿದ್ದ ಗಿಫ್ಟ್) ಅಕಸ್ಮಾತ್ ಆಗಿ ಕೈ ತಾಗಿ ಒಡೆದು ಹಾಕಿದ್ದರು,(ಆ ಕೋಣೆ ಎಲಿಜಬೆತ್ 2 ಅವರ ಅಜ್ಜನಿಗೆ ವಿವಿಧ ದೇಶದವರಿಂದ ಬಂದ ಉಡುಗೊರೆಗಳ ಸಂಗ್ರಹಣೆ ಮಾಡಲು ಮೀಸಲು ಇಡಲಾಗಿತ್ತು),ಕೊನೆಗೆ ಅರಮನೆಯ ಪರಿಚಾರಕಿ ಇವನನ್ನ ನೋಡಿ ಕೂಡಲೇ ಯಾರೋ ಅಪರಿಚಿತ ಇದ್ದಾನೆ ಅರಮನೆ ಒಳಗೆ ಅಂತ ಭದ್ರತಾ ಸಿಬ್ಬಂದಿಗೆ ಸುದ್ದಿ ಮುಟ್ಟಿಸುತ್ತಾಳೆ,
ಸಿಬ್ಬಂದಿ ಕೂಡಲೇ ಕಾರ್ಯ ನಿರತರಾಗಿ ವ್ಯಕ್ತಿಗೆ ಅರಮನೆಯ ಎಲ್ಲಾ ಜಾಗದಲ್ಲಿ ಹುಡುಕಾಡಿದ್ದಾರೆ..ಆದರೆ ಆ ವ್ಯಕ್ತಿ ಎಲ್ಲೂ ಸಿಗಲೇ ಇಲ್ಲ..
ಪರಿಚಾರಕಿ ಸುಮ್ಮನೆ ಹೇಳಿದ್ದಾಳೆ ಅಂತ ಸಿಬ್ಬಂದಿ ಸುಮ್ಮನಾಗ್ತಾರೆ..

ಅಷ್ಟು ಹೊತ್ತಿಗೆ ಆಗಲೇ ಅವನು ಅರಮನೆ ಆವರಣ ಬಿಟ್ಟು ಹೊರಗೆ ಹೋಗಿ ತಪ್ಪಿಸಿ ಕೊಂಡು ಬಿಟ್ಟಿರ್ತಾರೆ...!ಮಾಧ್ಯಮಗಳಲ್ಲಿ ಸುದ್ದಿ ಯಾಗುತ್ತೆ..
ಆದರೆ ಕ್ವೀನ್ ಎಲಿಜಬೆತ್,ಅಧಿಕಾರಿಗಳನ್ನ ಕರೆಸಿ,ಇದನ್ನ ದೊಡ್ಡದು ಮಾಡೋದು ಬೇಡ,ಬಿಟ್ಟು ಬಿಡಿ ಎಂದು ಸಲಹೆ ಕೊಟ್ಟಿದ್ದಾರೆ,ನಂತರ ಅಧಿಕಾರಿಗಳು ತನಿಖೆಯನ್ನ ಗಂಭೀರವಾಗಿ ತೆಗೆದು ಕೊಂಡಿಲ್ಲ..
ಈ ಘಟನೆ ನಡೆದದ್ದು 1982 ಜುಲೈ 9ರಲ್ಲಿ..

ಸರಿಯಾಗಿ ಒಂದು ತಿಂಗಳ ನಂತರ ಮತ್ತೊಮ್ಮೆ ಪಾಗನ್ ತನ್ನ ಮನೆಯಿಂದ ಬೆಳಗಿನ ಜಾವ ಬಸ್ ಹತ್ತಿ 7 ಗಂಟೆಗೆ 𝐖𝐞𝐬𝐭 𝐦𝐢𝐧𝐢𝐬𝐭𝐞𝐫,𝐋𝐨𝐧𝐝𝐨𝐧 ನಲ್ಲಿರುವ ಬಕಿಂಗ್ ಹ್ಯಾಮ್ ಪ್ಯಾಲೇಸ್ ಗೆ ಬಂದು ಹೊಂಚು ಹಾಕಿ,ಡ್ರೈನ್ ಪೈಪ್ ಹತ್ತಿ,ಗೋಡೆಗೆ ಹಾಕಿದ್ದ ಮುಳ್ಳು ತಂತಿ ಕಟ್ ಮಾಡಿ,ಕಾಂಪೌಂಡ್ ವಾಲ್ ಹಾರಿದ್ದಾರೆ..
ಅಲ್ಲಿದ್ದ ಡಿಟೆಕ್ಟರ್ ಶಬ್ದಮಾಡಿದೆ,ರಾತ್ರಿಯ ಪಾಳಯದ ಭದ್ರತಾ ಸಿಬ್ಬಂದಿ ತನ್ನ ಕೆಲಸ ಮುಗಿಸಿ ಬೆಳಗಿನ ಪಾಳಯದವರಿಗೆ ವಹಿಸಿ ಹೊರಟಿರುತ್ತಾರೆ ಅಷ್ಟೇ,
ಅಲರಾಮ್ ಶಬ್ದ ಬಂದ ಕೂಡಲೇ ಸಿಬ್ಬಂದಿ ಬಂದು ಕೂಡಲೇ ಪರಿಶೀಲನೆ ಮಾಡಿದಾಗ ಯಾವ ವ್ಯಕ್ತಿಯು ಕಾಣಲಿಲ್ಲ..
ಓಹ್ ಇದು
ಪಾಲ್ಸ್ ಅಲಾರಂ ಇರಬೇಕು ಅಂತ ನಿರ್ಧರಿಸಿ ಸುಮ್ಮನಾಗಿದ್ದಾರೆ..

ಆದ್ರೆ ಪಾಗನ್ ಒಬ್ಬೊಬ್ಬರೇ ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಿ,ಕಿಟಕಿಯ ಗಾಜು ಒಡೆದು,ಕಿಟಕಿ ಬಾಗಿಲು ತೆಗೆದು,ಅರಮನೆ ಆವರಣದ ಒಳಗೆ ಬಂದು
ನಿಧಾನವಾಗಿ ಅರಮನೆಯ ಒಂದೊಂದೇ ಕೊಠಡಿ ದಾಟುತ್ತಾ ಬಂದು,ಅಲ್ಲಿದ್ದ ಒಂದು ಗ್ಲಾಸ್ ಆಶ್ ಟ್ರೇ ಕೈಯಲ್ಲಿ ಒಡೆದು ಗಾಯ ಮಾಡಿಕೊಂಡು,
ಕ್ವೀನ್ ಎಲಿಜಬೆತ್-2 ಕೋಣೆಗೆ ಬಂದು,ಬೆಳಗಿನ ಜಾವ ನಿದ್ರೆಯಲ್ಲಿದ್ದ ರಾಣಿಗೆ ತಿಳಿಯದಂತೆ ಕಿಟಕಿ ಹತ್ತಿರ ಹೋಗಿದ್ದಾರೆ,
ದೊಡ್ಡ ಕಿಟಕಿಯ ಕರ್ಟನ್ ನಿಧಾನಕ್ಕೆ ಸರಿಸಿದ್ದಾರೆ..

ರಾಣಿ ಶಬ್ದ ಕೇಳಿ ಮಲಗಿದ್ದಲ್ಲೇ ಪರಿಚಾರಕಿ ಇರಬೇಕು ಎಂದು ಕೊಂಡು..
"ಇಷ್ಟು ಬೇಗ ಯಾಕೆ ಬಂದಿದ್ದು"ಅಂತ ಮಲಗಿದ್ದಲ್ಲೇ ಕೇಳಿದ್ದಾರೆ 
ಆದರೆ ಉತ್ತರ ಬಂದಿಲ್ಲ..!

"ಇವತ್ತು ಬೇಗ ಎಬ್ಬಿಸಬೇಕು ಅಂತ ತೀರ್ಮಾನ ಮಾಡಿದ್ದೀಯಾ ಅಂತ ಕಾಣುತ್ತೆ"ಎಂದು ಹೇಳುತ್ತಾ ಕಣ್ಣು ಬಿಟ್ಟು ನೋಡಿದ್ದಾರೆ...

ಅಪರಿಚಿತ ಅಜಾನುಬಾಹು ವ್ಯಕ್ತಿ ಕಣ್ಣು ಮುಂದೆ ನಿಂತಿದ್ದಾನೆ..
ಗಾಬರಿಯಾಗಿ 
ಕೂಡಲೇ ಭದ್ರತಾ ಸಿಬ್ಬಂದಿ ಕರೆಯಲು ಪ್ರಯತ್ನ ಮಾಡಿದ್ದಾರೆ,ಸಿಬ್ಬಂದಿ ರಾಣಿಯ ನಾಯಿ ಕೂರ್ಗಿ ಯನ್ನ ವಾಕಿಂಗ್ ಕರೆದು ಕೊಂಡು ಹೋಗಿರ್ತಾರೆ..

ಆದರೆ ಪಾಗನ್ ನಿಧಾನಕ್ಕೆ ಹತ್ತಿರ ಬಂದು ನಾನೇನು ಮಾಡಲ್ಲ..
𝐘𝐨𝐮𝐫 𝐡𝐢𝐠𝐡𝐧𝐞𝐬𝐬 ನಾನು ಕಳ್ಳ ಅಲ್ಲ,
ನಿಮ್ಮ ಹತ್ರ ಮಾತಾಡಬೇಕು ಕೆಲವೇ ನಿಮಿಷ ಅಷ್ಟೇ ಎಂದು ಅವರ ಬೆಡ್ ನಲ್ಲೇ ಪಕ್ಕ ಕುಳಿತು ಕೊಳ್ತಾರೆ..

ರಾಣಿ.. 
"ಇದು ಪ್ರೈವೇಟ್ ಪ್ರಾಪರ್ಟಿ,
ನೀನು ಹೇಗೆ ಒಳಗೆ ಬಂದೆ,ಹಾಗೆಲ್ಲಾ ಬರಬಾರದು ಅಂತ ಗೊತ್ತಿಲ್ವಾ"ಕೇಳ್ತಾರೆ,

"ಇದು ಪ್ರೈವೇಟ್ ಅಲ್ಲ ದೇಶದ ಪ್ರಾಪರ್ಟಿ"ಅಂತಾರೆ ಪಾಗನ್,
ರಾಣಿ,ಪಾಗನ್ ಕೈಯನ್ನ ನೋಡಿ,
"ಗಾಯವಾಗಿದೆ ರಕ್ತ ಸುರಿತಾ ಇದೆ,ಬಾತ್ ರೂಮ್ ಅಲ್ಲಿದೆ,ಹೋಗಿ ಕೈ ತೊಳೆದು ಕೊಳ್ಳಿ"ಅಂತ ಹೇಳುತ್ತಾರೆ,
ರಾಣಿ ಅನುಮತಿ ಕೊಟ್ಟ ಕೂಡಲೇ ಬಾತ್ ರೂಮ್ ಗೆ ಹೋಗಿ,ಗ್ಲಾಸ್ ಒಡೆದು ಗಾಯವಾಗಿದ್ದ ಕೈ ತೊಳೆಯುತ್ತಾ ಇರುವ ಸಮಯದಲ್ಲಿ,ರಾಣಿ,ಎಮರ್ಜನ್ಸಿ ಬೆಲ್ ಹಲವು ಸಲ ಒತ್ತುತ್ತಾರೆ,ಆದರೆ ಯಾರೂ ಸ್ಪಂದನೆ ಮಾಡಲ್ಲ..
ಪರಿಚಾರಕಿ ಬೇರೆ ಜಾಗದಲ್ಲಿ ವ್ಯಾಕ್ಯೂಮ್ ಕ್ಲಿನರ್ ಬಳಸಿ ಕೆಲಸ ಮಾಡುತ್ತಾ ಇರುವಾಗ ಅವರು ಶಬ್ದ ಕೇಳಿರುವುದಿಲ್ಲ,ಹಾಗಾಗಿ ಗಮನಿಸಿರಲ್ಲ..

ಇತ್ತ ಪಾಗನ್ ರಾಯಲ್ ಪ್ಯಾಮಿಲಿ ಬಾತ್ ರೂಮ್ ರಾಣಿಯ ಬಾತ್ ರೂಮ್ ಹೇಗಿರುತ್ತೆ ಅಂತ ಕುತೂಹಲದಿಂದ ನೋಡುತ್ತಾ ಕೈ ತೊಳೆದು..ಅಲ್ಲೇ ಇದ್ದ ಟೂತ್ ಬ್ರಶ್ ನೋಡಿ ಹಿಡಿದು ಹೊರ ಬಂದು, "ಇದೇನು ಸಾಮಾನ್ಯ ಟೂತ್ ಬ್ರಶ್,ಎಲೆಕ್ಟ್ರಿಕ್ ಇಟ್ಟಿಲ್ವಾ!?ಜಗತ್ತಿನ ಶ್ರೀಮಂತಾ ಮಹಿಳೆ ಆಗಿ ನೀವು ಈ ಟೂತ್ ಬ್ರಶ್ ಬಳಸೋದಾ"
ಅಂತ ಆಶ್ಚರ್ಯದಿಂದ ಪ್ರಶ್ನೆ ಕೂಡಾ ಮಾಡ್ತಾರೆ ಪಾಗನ್..

"ರೂಮಿನ ಬಣ್ಣ ಹಲವು ಕಡೆ ಹೋಗಿದೆ,ವಾಲ್ ಪೇಪರ್ ಹಳೆದು ಆಗಿದೆ,ಬಾತ್ ರೂಮ್ ಅಷ್ಟೇ ಏನಿದು ರಾಯಲ್ ಬೆಡ್ ರೂಮ್ ಹೀಗಿದೆ"ಅಂತಾರೆ..

ಅದಕ್ಕೆ ರಾಣಿ ನಕ್ಕು ಸುಮ್ಮನಾಗಿ,ಕುಳಿತು ಕೊಳ್ಳೋಕೆ ಹೇಳಿ.
"ನೀನು ಅದೇ ಕೆಲಸ ಮಾಡೋದಾ"ಅಂತ ಕೇಳ್ತಾರೆ..

ಪಾಗನ್... ಹೌದು...
ಈಗ
ಕೆಲಸವಿಲ್ಲ,ಸರ್ಕಾರದ ಭತ್ಯೆಯಿಂದ ಜೀವನ ಮಾಡ್ತಾ ಇದ್ದೇನೆ,
ನಾನು ಈಗ ಬಡವನಾಗಿದ್ದೇನೆ,ಹಣವಿಲ್ಲ ಅಂತ ಹೆಂಡತಿ ಮಕ್ಕಳು ಬಿಟ್ಟು ಹೋದ್ರು...
ಎಂದು ತನ್ನ ಸಂಕಷ್ಟ ಹಾಗೂ ದೇಶದ ಸಂಕಷ್ಟ,ಥ್ಯಾಚೆರ್ ರ ಆಡಳಿತ ವೈಖರಿ ಬಗ್ಗೆ,ಯುದ್ಧ ಘೋಷಣೆ ಬಗ್ಗೆ,ಜನಗಳ ಅಭಿಪ್ರಾಯ ಎಲ್ಲಾ ಹೇಳಿ, ಅಸಮಾಧಾನ ವ್ಯಕ್ತ ಮಾಡುತ್ತಾ ಎಲ್ಲಾ ವಿವರಿಸುತ್ತಾರೆ..
ರಾಣಿ ಎಲ್ಲಾ ಸಮಚಿತ್ತದಲ್ಲಿ ಗಾಬರಿ,ಭಯ ಇಲ್ಲದೇ ಕೇಳಿಸಿ ಕೊಳ್ಳುತ್ತಾರೆ..
 
ಕೆಲವು ಸಮಯದ ನಂತರ
ರಾಣಿಯ ಮಲಗುವ ಕೋಣೆಗೆ ಪರಿಚಾರಕಿ ದಿನ ನಿತ್ಯ ಬೆಳಿಗ್ಗೆ ರಾಣಿಗೆ ಟೀ ಕೊಡುವ ಸಮಯಕ್ಕೆ ಟೀ ಟ್ರೇ ಹಿಡಿದು ಬೆಡ್ ರೂಮ್ ಗೆ ಬರುತ್ತಾರೆ...

ಅಲ್ಲಿರುವ ಅಪರಿಚಿತ ವ್ಯಕ್ತಿ ರಾಣಿಯ ಪಕ್ಕದಲ್ಲಿ ಇರೋದನ್ನ ನೋಡಿ ಗಾಬರಿಯಾಗಿ..

"ನೀವು ಚನ್ನಾಗಿದ್ದೀರಾ ನಿಮಗೇನು ತೊಂದರೆ ಆಗಿಲ್ಲ ಅಲ್ವಾ"ಅಂತ ರಾಣಿಯನ್ನ ಕೇಳ್ತಾರೆ..

"ರಾಣಿ ನಂಗೆ ಏನೂ ಆಗಿಲ್ಲ.. 

ಭದ್ರತಾ ಸಿಬ್ಬಂದಿ ಕರೆ ತನ್ನಿ"ಅಂತ ಹೇಳುತ್ತಾರೆ..

ಸಿಬ್ಬಂದಿ ಬರುವವರೆಗೆ ಪಾಗನ್ ಸ್ಥಿತ ಪ್ರಜ್ಞನಾಗಿ,ಯಾವುದೇ ಭಯ ಇಲ್ಲದೇ ಅಲ್ಲೇ ಕುಳಿತಿರುತ್ತಾರೆ...

ಕೊನೆಗೆ ಸಿಬ್ಬಂದಿ ಬಂದ ಕೂಡಲೇ ಪಾಗನ್ ಎದ್ದು ರಾಣಿಗೆ ಕೈ ಕೊಟ್ಟು ವಿಶ್ ಮಾಡಲು ಮುಂದಾಗ್ತಾರೆ ಪಾಗನ್,
ಅಲುಗಾಡಬೇಡ ಅಂತ ಕೂಡಲೇ ಸಿಬ್ಬಂದಿ ಎಚ್ಚರಿಕೆ ಕೊಡ್ತಾರೆ..

ಅದಕ್ಕೆ ರಾಣಿ ಪರವಾಗಿಲ್ಲ ಅವರು ನನಗೆ ಅಪಾಯ ಏನೂ ಮಾಡಲ್ಲ ಅಂತ ಹೇಳಿ,
ಕೈ ಕೊಟ್ಟ ನಂತರ ಸಿಬ್ಬಂದಿ ಅವರನ್ನ ವಶಕ್ಕೆ ತಗೊಳ್ತಾರೆ,ಕರೆದು ಕೊಂಡು ಹೋಗ್ತಾರೆ..

ಮತ್ತೆ ಇದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗುತ್ತೆ,ಭದ್ರತೆಯ ಬಗ್ಗೆ ಚರ್ಚೆ ಶುರುವಾಗುತ್ತೆ..
ಆಗಿನ ಉಕ್ಕಿನ ಮಹಿಳೆ ಪ್ರಧಾನಿ ಮಾರ್ಗರೇಟ್ ಥಾಚರ್,ರಾಣಿಯ ಅರಮನೆಯ ಭದ್ರತಾ ಲೋಪದ ಬಗ್ಗೆ ಕ್ಷಮೆ ಕೋರಲು ದಾವಿಸುತ್ತಾರೆ..
ರಾಣಿ..ಆಗ ಪ್ರಶ್ನೆ ಮಾಡ್ತಾರೆ ಏನು ನಡೀತಾ ಇದೇ ನಮ್ಮ ದೇಶದಲ್ಲಿ..ಅಂತ ಪಾಗೇನ್ ಕೇಳಿದ ಪ್ರಶ್ನೆ ಕೇಳ್ತಾರೆ ಥ್ಯಚರ್ ತಮ್ಮ ಸಮರ್ಥನೆ ಮಾಡಿ ಕೊಳ್ತಾರೆ..
ಅದನ್ನ ಥಾಚರಿಸಮ್ ಅಂತ ಆಗಿನ ಕಾಲದಲ್ಲಿ ಕರೆಯಲಾಗುತ್ತಾ ಇತ್ತು .

ಆದ್ರೆ ಮೈಕೆಲ್ ಪಾಗನ್ ಲಕ್ಕಿ, ಆಗಿನ ಬ್ರಿಟನ್ ಕಾನೂನು ಪ್ರಕಾರ ಮನೆ ನುಗ್ಗೋದು ಬಹಳ ದೊಡ್ಡ ಅಪರಾಧವಲ್ಲ ಸಿವಿಲ್ ಅಪರಾಧವಾಗಿತ್ತು,ಹಾಗಾಗಿ ಪಾಗನ್ ವೈನ್ ಕಳ್ಳತನದ ಅಪರಾಧದ ಮೇಲೆ ಕೆಲವು ಸಮಯ ಜೈಲು ಶಿಕ್ಷೆ ಆಗುತ್ತೆ ಅಷ್ಟೇ,ಜನವರಿ 1983ರಲ್ಲಿ ಪಾಗನ್ ಮಾನಸಿಕ ಸಮಸ್ಯೆಗಾಗಿ ಆರೋಗ್ಯ ಕೇಂದ್ರಕ್ಕೆ ದಾಖಲಾಗಿ ಹೊರಗೆ ಬಂದಿರ್ತಾರೆ,ಈ ಘಟನೆ ನಂತರ,ಮಾನಸಿಕ ಆರೋಗ್ಯ ಸಮಸ್ಯೆಗಾಗಿ 3 ತಿಂಗಳು ಆರೋಗ್ಯ ಕೇಂದ್ರಕ್ಕೆ ಮತ್ತೆ ದಾಖಲೆಯಾಗ್ತಾರೆ ಪಾಗನ್..

ಆಮೇಲೆ ಗುಣ ಮುಖರಾಗಿ ಲಂಡನ್ ನಲ್ಲೇ ಜೀವನ ನಡೆಸುತ್ತಾ ಇರುತ್ತಾರೆ..

1997ರಲ್ಲಿ ಡ್ರಗ್ ಸಪ್ಲೈ ಕೇಸ್ನಲ್ಲಿ ಅವರ ಮಗನ ಸಹಿತ ಮತ್ತೊಮ್ಮೆ ಬಂದಿತರಾಗಿ ಜೈಲು ಶಿಕ್ಷೆ ಆಗುತ್ತೆ ಮೈಕೆಲ್ ಪಾಗನ್ ಗೆ..
ಈಗಲೂ ಮೈಕೆಲ್ ಪಾಗಲ್ ಲಂಡನ್ ನಲ್ಲಿ ಜೀವನ ನಡೆಸುತ್ತಾ ಇದ್ದಾರೆ..
ಒಮ್ಮೆ ಹಾರ್ಟ್ ಅಟ್ಯಾಕ್ ಆಗಿತ್ತು ಹಾಗೆ ಇತ್ತೀಚೆಗೆ ಅವರಿಗೆ ಕೋವಿಡ್ 19 ಬಂದಿತ್ತಂತೆ..

"𝐏𝐞𝐨𝐩𝐥𝐞 𝐰𝐡𝐨 𝐡𝐚𝐯𝐞 𝐝𝐨𝐧𝐞 𝐦𝐚𝐫𝐯𝐞𝐥𝐨𝐮𝐬 𝐭𝐡𝐢𝐧𝐠𝐬 𝐠𝐞𝐭 𝐭𝐨 𝐤𝐧𝐞𝐞𝐥 𝐢𝐧 𝐟𝐫𝐨𝐧𝐭 𝐨𝐟 𝐡𝐞𝐫 𝐭𝐨 𝐛𝐞 𝐡𝐨𝐧𝐨𝐫𝐞𝐝," 𝐅𝐚𝐠𝐚𝐧 𝐬𝐚𝐢𝐝, "𝐛𝐮𝐭 𝐈 𝐚𝐜𝐭𝐮𝐚𝐥𝐥𝐲 𝐬𝐚𝐭 𝐨𝐧 𝐡𝐞𝐫 𝐛𝐞𝐝 𝐚𝐧𝐝 𝐚𝐥𝐦𝐨𝐬𝐭 𝐠𝐨𝐭 𝐭𝐨 𝐭𝐚𝐥𝐤 𝐭𝐨 𝐡𝐞𝐫."

ದೊಡ್ಡ ಸಾಧಕರು,ಅದ್ಬುತ ಕೆಲಸ ಮಾಡಿದವರು ರಾಣಿಯ ಎದುರು ಮಂಡಿಯೂರು ಗೌರವ ಸೂಚನೆ ಮಾಡ್ತಾರೆ,ಆದರೆ ನಾನು ಅವರ ಹಾಸಿಗೆಯ ಮೇಲೆ ಕುಳಿತು ಮಾತನಾಡಿದ್ದೇನೆ..
ಅಂತ ಹೆಮ್ಮೆ ಹಾಗೂ ಖುಷಿ ಯಿಂದ ಹೇಳ್ತಾರೆ
ಮೈಕೆಲ್ ಪಾಗನ್..

2005ರಲ್ಲಿ ಸರ್ಕಾರ ಕಾನೂನು ಬದಲಾವಣೆ ಮಾಡಿ ಬಕಿಂಗ್ ಹ್ಯಾಮ್ ಪ್ಯಾಲೇಸ್ ನ್ನ 𝐃𝐞𝐬𝐢𝐠𝐧𝐚𝐭𝐞𝐝 𝐒𝐢𝐭𝐞 ಎಂದು ಘೋಷಣೆ ಮಾಡಿ,ಅನುಮತಿ ಇಲ್ಲದೇ ಅರಮನೆಗೆ ಪ್ರವೇಶ ಮಾಡಿದರೆ ಅದು ಗಂಭೀರ ಅಪರಾಧ ಎಂದು ತಿದ್ದು ಪಡಿ ಮಾಡಲಾಯ್ತು..
(ವಿ.ಸೂ:-ಈ ಘಟನೆ ಹಲವು ರೀತಿಯ ವ್ಯಾಖ್ಯಾನವೂ ಮಾಡಿದ್ದಾರೆ ಹಲವರು,ನನಗೆ ಸಿಕ್ಕ ಮಾಹಿತಿ ನನ್ನದೇ ರೀತಿಯಲ್ಲಿ ಇಲ್ಲಿ ಬರೆದಿದ್ದೇನೆ..!)

ಮಂಗಳವಾರ, ಫೆಬ್ರವರಿ 9, 2021

ವ್ಯಾಪಾರಿ ಸಾವು

ಸುಮಾರು 1939 ರಿಂದ 1945 ರವರೆಗೆ
ಎರಡನೇ ವಿಶ್ವ ಯುದ್ಧ ನಡೆಯಿತು..
ಅಮೇರಿಕಾ,ಬ್ರಿಟನ್,ರಷ್ಯಾ,ಚೀನಾ ಹಾಗೂ ಜರ್ಮನಿ,ಜಪಾನ್,ಇಟಾಲಿ ಇತರ ಯುರೋಪ್ ದೇಶಗಳ ನಡುವೆ.....

ಈ ಸಮಯದಲ್ಲಿ ಬ್ರಿಟನ್ ಪ್ರಮುಖ ನಗರಗಳ ಮೇಲೆ ಜರ್ಮನಿ,ರಾತ್ರಿ ವೇಳೆಯಲ್ಲಿ ವಿಮಾನದ ಮೂಲಕ ಬಾಂಬ್ ದಾಳಿ ಮಾಡುತ್ತಾ ಇದ್ದಿದ್ದು ಸಾಮಾನ್ಯವಾಗಿತ್ತು..
ಈ ಕಾರಣದಿಂದ ಲಂಡನ್ ಸೇರಿದಂತೆ ಬ್ರಿಟನ್ ಹಲವು ನಗರ ಗಳಲ್ಲಿ ಬ್ಲಾಕ್ ಔಟ್ ಕಡ್ಡಾಯವಿತ್ತು,ಎಂದರೆ ಸಂಜೆಯ ವೇಳೆ,ಕತ್ತಲಾದ ಮೇಲೆ ಬೀದಿ ದೀಪ ಹಾಗೂ ರೈಲು,ಬಸ್ ಹಾಗೂ ಇನ್ನಿತರೆ ಮುಖ್ಯ ಪ್ರದೇಶಗಳಲ್ಲಿ ವಿದ್ಯುತ್ ದೀಪಗಳನ್ನ ಬಳಸುತ್ತಾ ಇರಲಿಲ್ಲ...
ಉದ್ದೇಶ ಬೆಳಕು ಜಾಸ್ತಿ ಇರುವ ಪ್ರದೇಶ ಪ್ರಮುಖ ನಗರ ಎಂದು ಕೊಂಡು ವಿಮಾನದ ಮೂಲಕ ಬಾಂಬ್ ದಾಳಿ ಮಾಡುತ್ತಾರೆ ಎಂದು ಹೀಗೆ ಮಾಡಲಾಗುತ್ತಾ ಇತ್ತು..ಅದೇ ಕಾರಣ...!

ಇಂತಹಾ ಸಮಯದಲ್ಲಿ ಒಬ್ಬ ವ್ಯಾಪಾರಿ ತನ್ನ ಕೆಲಸದ ನಿಮಿತ್ತ ಯಾವುದೋ ಪರ ಊರಿಗೆ ರೈಲಿನ ಮೂಲಕ ಹೋಗಿ,ರಾತ್ರಿ ವೇಳೆ ರೈಲಿನಲ್ಲಿ ತನ್ನ ಊರಿಗೆ ವಾಪಾಸ್ ಪ್ರಯಾಣ ಬೆಳೆಸಿದ್ದರು...
ಆ ಸಮಯದಲ್ಲಿ ನಿಲ್ದಾಣ ಬಂದ ಕೂಡಲೇ ಹೆಸರು ತೋರಿಸುವ ಈಗ ಇರುವಂತೆ ಡಿಜಿಟಲ್ ಡಿಸ್ಪ್ಲೇ,ಆಟೊಮ್ಯಾಟಿಕ್ ಬಾಗಿಲು ಇರಲಿಲ್ಲ...
ಕಗ್ಗತ್ತಲು, ಯಾವುದೇ ಬೀದಿ ದೀಪಗಳಿಲ್ಲ,ಇನ್ನೇನು ರೈಲು ವೇಗ ಕಡಿಮೆ ಆಗುತ್ತಾ ಬಂತು,ತನ್ನ ಊರನ್ನು ತಲುಪಿತು ಎಂದು ಕೊಳ್ಳುತ್ತಾ ಬಾಗಿಲ ಹತ್ತಿರ ಬಂದರು ವ್ಯಾಪಾರಿ...!
ವೇಗ ಸಂಪೂರ್ಣ ಕಡಿಮೆ ಆಗಿ
ರೈಲು ನಿಧಾನವಾಗುತ್ತಾ ನಿಂತು ಬಿಡುತ್ತೆ..

ಓಹ್...ತನ್ನ ಊರಲ್ಲಿ ನಿಂತಿತು ರೈಲು ಅಂತ ಕೂಡಲೇ ಬಾಗಿಲು ತೆಗೆದು ಕೆಳಗೆ ಇಳಿದು ಬಿಡ್ತಾರೆ..

ಆದರೆ ದುರಂತ ಎಂದರೆ ರೈಲು ನಿಲ್ದಾಣ ತಲುಪಿರಲೇ ಇಲ್ಲ..ರೈಲ್ ಚಾಲಕ(ಲೋಕೋಮೋಟಿವ್ ಪೈಲಟ್)ಸ್ಟೇಶನ್ ನ ಸಿಗ್ನಲ್ ಗಾಗಿ ಕಾಯುವ ಸಲುವಾಗಿ,ರೈಲ್ವೆ ಸೇತುವೆಯ ಮೇಲೆ ರೈಲು ನಿಲುಗಡೆ ಮಾಡಿರುತ್ತಾರೆ....!

ಕತ್ತಲೆಯಲ್ಲಿ ಏನನ್ನೂ ಗಮನಿಸಲಾಗದೇ,ಕಾಣದೇ, ವ್ಯಾಪಾರಿ ಗಡಿಬಿಡಿ ಯಲ್ಲಿ ಬಾಗಿಲು ತೆಗೆದು ಇಳಿದಿದ್ದಾರೆ..
ನೇರವಾಗಿ,ರೈಲು ಸೇತುವೆಯಿಂದ ಕೆಳಗೆ ಬಿದ್ದು ಮರಣ ಹೊಂದುತ್ತಾರೆ..


ಟೂವೆ ಟಿಕೆಟ್ ತಗಂಡವರು..
ಒನ್ ವೇ ಟಿಕೆಟ್ ನಲ್ಲೇ ಹೋಗಿ ನೇರವಾಗಿ ಮೇಲೆ ಬಿಡ್ತಾರೆ..

#ಅವಿವೇಕದ_ಸಾವು

ಕಥೆ_13

#stupid_death

(ಮೂಲ:-Horrible histories)

ಎಡ್ಮಂಡ್-2

ಎಡ್ಮಾಂಡ್-||
ಸುಮಾರು 1016 ರಲ್ಲಿ 23 ಎಪ್ರಿಲ್ನಿಂದ 30 ನವೆಂಬರ್ 1016 ವರೆಗೆ ಕೆಲವೇ ತಿಂಗಳು ಇಂಗ್ಲೆಂಡ್ ನ ರಾಜನಾಗಿದ್ದ ಎಡ್ಮಾಂಡ್ ಐರನ್ ಸೈಡ್(ಎಡ್ಮಾಂಡ್-||)
ಸಾವನ್ನಪ್ಪಿದ್ದು ಬಹಳ ವಿಚಿತ್ರವಾಗಿ..
ಎಂದಿನಂತೆ ತನ್ನ ನಿತ್ಯ ಕರ್ಮ ಮುಗಿಸಲು ಶೌಚಾಲಯಕ್ಕೆ ಹೋಗಿ ಕೂತಿದ್ದರಂತೆ
ಶೌಚಾಲಯದ ಗುಂಡಿಯಲ್ಲಿ ಅವಿತು ಕುಳಿತಿದ್ದ ವೈಕಿಂಗ್ ವೈರಿ ಒಬ್ಬ ಎಡ್ಮಾಂಡ್ ¡¡ ನ ಹಿಂಬದಿಗೆ ಎರಡು ಬಾರಿ ಈಟಿಯಿಂದ ಚುಚ್ಚಿದ್ದಾನೆ ಇದರಿಂದ
ಎಡ್ಮಾಂಡ್-¡¡ ಮರಣ ಹೊಂದಿದರಂತೆ..
ಎಂತಾ ಸಾವು ಮಾರಾಯ್ರೆ..

ಹೇಗೆ ಸತ್ತರು ರಾಜ ಅಂತ ಅವರ ಕೊನೆಯ ದರ್ಶನ ಮಾಡೋಕೆ ಕೇಳಿದರೆ,ಬಂದವರಿಗೆ ಹೇಗೇ ವಿವರಣೆ ನೀಡಬೇಕು ಅರಮನೆ ಕಡೆಯವರು ಅಲ್ವಾ!?

#ಸ್ಟುಪಿಡ್_ಡೆತ್
#ಕಥೆ_02

(ಮೂಲ:-Horrible history series)

ಕಿತ್ತಳೆ ಹಣ್ಣಿನ ಸಿಪ್ಪೆಯಿಂದ ಸಾವು

ಬಾಬಿ ಲೀಚ್ ಎಂಬ ವ್ಯಕ್ತಿ 1858ರಲ್ಲಿ ಇಂಗ್ಲೆಂಡ್ ನಲ್ಲಿ ಜನಿಸಿದರು,
ಜುಲೈ 1911ರಲ್ಲಿ,ಅಮೆರಿಕಾದ ಜೋಗ ಜಲಪಾತವಾದ,
ನಯಾಗರ ಜಲಪಾತದಲ್ಲಿ ಬ್ಯಾರೆಲ್ ಮೂಲಕ ಹೋದ ಎರಡನೇ ವ್ಯಕ್ತಿಯಂತೆ,
ಆತ ಇದರಿಂದ ಬಹಳ ಜನಪ್ರಿಯತೆಗಳಿಸಿದ್ದರಂತೆ,
ಹೀಗೆ ನಯಾಗರದಲ್ಲಿ ಬ್ಯಾರೆಲ್ ಮೂಲಕ ಹೋಗುವಾಗ ಬಿದ್ದು ಎರಡು ಮೊಣಕಾಲು ಹಾಗೂ ದವಡೆ ಮುರಿದು,ತೀವ್ರ ಪೆಟ್ಟಾಗಿತ್ತಂತೆ,ನಿಧಾನಕ್ಕೆ ಗುಣ ಮುಖರಾಗಿ ಮತ್ತೆ ಈ ರೀತಿಯ ಅನೇಕ ಸಾಹಸ ಮಾಡಿದ್ದರಂತೆ ಲೀಚ್..
ಹೀಗೆ ತಮ್ಮ 60ನೇ ವಯಸ್ಸಿನಲ್ಲಿ ಲೀಚ್ ಮತ್ತೊಮ್ಮೆ ನಯಾಗರಕ್ಕೆ ಬ್ಯಾರೇಲ್ನಲ್ಲಿ ನೀರಿನ ಸುಳಿಯಲ್ಲಿ ಈಜಲು ಹೋಗಿ,ಹಲವು ಭಾರಿ ವಿಫಲರಾಗಿದ್ದರಂತೆ..

ಒಮ್ಮೆ ಹೀಗೆ ನೀರಿನ ಸುಳಿಯಲ್ಲಿ ಬ್ಯಾರೆಲ್ ಮೂಲಕ ದಾಟಲು ಹೋಗಿ,ಜಲಪಾತದಲ್ಲಿ ಸಿಕ್ಕಿ ಹಾಕಿಕೊಂಡು ಸಾವು ಬದುಕಿನ ನಡುವೆ ಹೋರಾಟ ಮಾಡುವಾಗ,ಅವರನ್ನ ವಿಲಿಯಂ ರೆಡ್ ಹಿಲ್ ಅನ್ನುವವರು ರಕ್ಷಣೆ ಮಾಡಿದ್ದರಂತೆ..!

ಪದೇ ಪದೇ ಸಾವಿಗೆ ಸಾವಾಲೊಡ್ಡಿ ಜಯಿಸಿದ್ದ ಈ ವ್ಯಕ್ತಿ,ಸತ್ತಿದ್ದು ಎಷ್ಟು "ಸಿಂಪಲ್"ಗೊತ್ತಾ..!
😢

ಹೇಳ್ತೀನಿ ಕೇಳಿ..

ಬಾಬಿ ಲೀಚ್ ತನ್ನ ಬಗ್ಗೆ ಬುಲ್ಡ್ ಅಪ್ ಕೊಟ್ಟು ಕೊಳ್ಳುತ್ತಾ ಇಂಗ್ಲೆಂಡಿನಿಂದ ನ್ಯೂಜಿಲೆಂಡ್ ದೇಶಕ್ಕೆ ಪ್ರವಾಸಕ್ಕೆ ಹೋಗಿದ್ದರಂತೆ..

ಅಲ್ಲಿ ಒಂದು ದಿನ ರಸ್ತೆಯಲ್ಲಿ ನಡೆದು ಹೋಗುತ್ತಾ ಇರುವಾಗ ಗಮನಿಸದೇ ಯಾರೋ ಕಿತ್ತಳೆ ಹಣ್ಣು ತಿಂದು,ಎಸೆದು ಹೋಗಿದ್ದ ಸಿಪ್ಪೆಯ ಮೇಲೆ ಕಾಲು ಇಟ್ಟು ಜಾರಿ ಬಿದ್ದಿದ್ದಾರೆ..!

ಕಾಲಿಗೆ ಸಣ್ಣ ಪೆಟ್ಟಾಗಿದೆ..

ಆ ಪೆಟ್ಟು ನಿಧಾನವಾಗಿ ಗ್ಯಾ0ಗ್ರೀನ್ ಆಗಿ ರೂಪುಗೊಂಡು,ಲೀಚ್ ಅದರಿಂದಲೇ ಮರಣ ಹೊಂದಿ ಬಿಡ್ತಾರೆ..

ಅಂತಹಾ ದೊಡ್ಡ ಜಲಪಾತದಲ್ಲೇ ಹಲವು ಸರಿ ಸಾಯುವ ಸ್ಥಿತಿಯಿಂದ ಬದುಕಿ ಬಂದ ಇವರು..

ಯಕಶ್ಚಿತ್ ಕಿತ್ತಳೆ ಸಿಪ್ಪೆಯಿಂದ ಸಾಯುವ ಹಾಗೆ ಆಯ್ತು ನೋಡಿ..

ಕಿತ್ತಳೆ ಸಿಪ್ಪೆನ ಯಕಶ್ಚಿತ್ ಅಂದ,ಅಂತ ಕಿತ್ತಳೆ ಸಿಪ್ಪೆಲಿ ಚಟ್ನಿ ಮಾಡೋರು ಬಡಿಗೆ ಹಿಡಕಂಡು ಬರಬೇಡಿ ಮಾರಾಯ್ರೆ...

ಲಿಂಬೆ ಹಣ್ಣಿಗೆ ಮಾತ್ರ ಶಕ್ತಿ ಇರಲ್ಲ...
ಕಿತ್ತಳೆ ಸಿಪ್ಪೆಗೂ,ಬಣ್ಣ,ರುಚಿ,(ಸಾಯಿಸುವ)ಶಕ್ತಿ ಇದೆ ನೋಡಿ..
ಅಲ್ವಾ
😂

#ಅವಿವೇಕದ_ಸಾವು

ಕಥೆ_04

#stupid_death

(Source:-Horrible histories Series)

ಮೊಲಿಯರ್ ಸಾವು

ಮೊಲಿಯರ್ ಎಂಬ ನಟ ಹಾಗೂ ನಾಟಕ ರಚನೆಕಾರರು 1622 ರಲ್ಲಿ ಪ್ರಾನ್ಸ್ ನ ಪ್ಯಾರೀಸ್ ನಗರದಲ್ಲಿ ಹುಟ್ಟಿ,ಅಲ್ಲಿ ಬೆಳೆದವರು..
ಇವರ ಸಂಪೂರ್ಣ ಹೆಸರು ಜೀನ್ ಬ್ಯಾಪ್ಟಿಸ್ಟ್ ಪೊಕ್ವಿಲಿನ್...
ಮೊಲಿಯರ್ ಎನ್ನೋದು ಅವರ ಸ್ಟೇಜ್ ನೇಮ್..

ಇವರು ಬಹಳ ಜನಪ್ರಿಯ ನಾಟಕ ರಚನೆಕಾರ ಹಾಗೂ ನಾಟಕ ಪಾತ್ರಧಾರಿ ಎಂದು ಹೆಸರುವಾಸಿ..

ಇಂತಹಾ ವ್ಯಕ್ತಿ ಸತ್ತದ್ದು,ಹಾಗೇ ಅವರ ಅಂತಿಮ ವಿಧಿ ವಿಧಾನಕ್ಕೆ ಆದ ಸಮಸ್ಯೆ ಮಾತ್ರ ವಿಚಿತ್ರವಾಗಿದೇ..
ಬೇಸರ ತರಿಸುವಂತೆ ಇದೆ..

ಪ್ಯಾರಿಸ್ ನ ಒಂದು ಥಿಯೇಟರ್ ನಲ್ಲಿ,ಅವರೇ ಬರೆದ "le malade imaginaire"(the imaginary invalid)ಎಂಬ ನಾಟಕದ ದೃಶ್ಯದಲ್ಲಿ ಮೊಲಿಯರ್ ಮಾಡುತ್ತಾ ಇದ್ದ ಪಾತ್ರ ಒಬ್ಬ ರೋಗಿಯದ್ದು,
ಆ ಪಾತ್ರದಲ್ಲಿ ಕೆಮ್ಮುತ್ತಾ ರೋಗಿಯಂತೆ ನಟಿಸುವ ಪಾತ್ರ,
ಕೆಮ್ಮುತ್ತಾ ನಟಿಸುತ್ತಾ ಇದ್ದ ಇವರು,
ವಿಪರೀತ ಕೆಮ್ಮುತ್ತಾ,ಕೆಮ್ಮುತ್ತಾ,ಕೆಮ್ಮು ಒಮ್ಮೆಲೇ ಜಾಸ್ತಿಯಾಗಿ,ತಡೆಯಲಾಗದೆ
ಸ್ಟೇಜ್ ನಲ್ಲಿ ಕುಸಿದು ಬಿದ್ದು ಬಿಡ್ತಾರೆ ಮೊಲಿಯರ್..!

ಮೊಲಿಯರ್ ಗೆ "haemorrhaging"ಇತ್ತು ಅಂತಲೂ ಹೇಳಲಾಗಿದೆ..(ತಲೆಯಲ್ಲಿ ರಕ್ತ ಸ್ರಾವ!)
ಅವರು ಮಧ್ಯ ವಯಸ್ಸಿನಲ್ಲಿ ಇರುವಾಗ ಯಾವುದೋ ಸಾಲದ ಸಮಸ್ಯೆಗೆ ಒಳಗಾಗಿ,ಕಾನೂನು ಪ್ರಕಾರ ಬಂಧನಕ್ಕೆ ಒಳಗಾಗಿ ಸೆರೆವಾಸದಲ್ಲಿ ಶಿಕ್ಷೆ ಅನುಭವಿಸುತ್ತಾ ಇದ್ದಾಗ ಅವರಿಗೆ Pulmonary tuberculosis(ಕ್ಷಯ ರೋಗ) ಖಾಯಿಲೆ ಅಂಟಿಕೊಂಡು ಬಿಟ್ಟಿತ್ತು.....
ಅದು ಮುಖ್ಯ ಕಾರಣವಾಗಿತ್ತು ಅವರ ಕೆಮ್ಮಿಗೆ ಎನ್ನಲಾಗಿದೆ..!

ಇನ್ನೊಂದು ವಿಷಯ ಏನೆಂದರೆ
ಮೊಲಿಯರ್ ಸ್ಟೇಜ್ ನಲ್ಲಿ ಕುಸಿದು ಬೀಳುವ ಸಂಧರ್ಭದಲ್ಲಿ,ಆ ಪಾತ್ರಕ್ಕೆ ಬೇಕಾಗಿದ್ದ ಹಾಗೂ ಒಪ್ಪುವ ಹಸಿರು ಬಣ್ಣದ ಬಟ್ಟೆ ತೊಟ್ಟಿದ್ದರಂತೆ,
ಪ್ರಾನ್ಸ್ ನಲ್ಲಿ ಆಗ ನಟನೆ ಮಾಡೋರು ಹಸಿರು ಬಟ್ಟೆ ತೊಟ್ಟರೆ ಕೆಟ್ಟದಾಗುತ್ತೆ ಅಂತ ಮೂಢನಂಬಿಕೆ ಬಲವಾಗಿ ಇತ್ತಂತೆ..!
ಅದರಂತಯೇ ಮೊಲಿಯರ್ ಕೂಡ ಅದನ್ನ ಧರಿಸಿದ್ದಾಗಲೇ ಹೀಗಾಯ್ತು..!
ಎನ್ನೋದು ಈ(ಮೂಢ)ನಂಬಿಕೆಗೆ ಮತ್ತಷ್ಟು ಇಂಬು ಕೊಡ್ತು...!

ಕೊನೆಗೆ ಕೆಲವು ಗಂಟೆಗಳ ನಂತರ ಮೊಲಿಯರ್ ಸಾವನ್ನಪ್ಪಿ ಬಿಡ್ತಾರೆ...
ಸಾವಿನ ಸುದ್ದಿ ಖಚಿತವಾಗಿ ಘೋಷಣೆ ಮಾಡಿ ಬಿಡುತ್ತಾರೆ...


ದುರಂತ ಎಂದರೆ..
ಪ್ರಾನ್ಸ್ ನ ಆಗಿನ ಕಾನೂನು ಪ್ರಕಾರ,
ನಟನೆ ಮಾಡುವವರಿಗೆ (sacred ground)ಗೌರವಯುತವಾಗಿ,ಸ್ಮಶಾನದಲ್ಲಿ ಅಂತಿಮ ವಿಧಿ ವಿಧಾನ ನೆರವೇರಿಸಿ, ಹೂಳಲು ಅವಕಾಶ ಕಡ್ಡಾಯವಾಗಿ ನಿಷೇಧ ಮಾಡಲಾಗಿತ್ತಂತೆ..!

ಇದಕ್ಕಾಗಿ
ಮೊಲಿಯರ್ ಹೆಂಡತಿ "ಅರ್ಮಾ0ಡೇ"..
ರಾಜರ ಬಳಿ ಹೋಗಿ,ದಯಮಾಡಿ ರಾತ್ರಿಯಾದರೂ ಪತಿಯ ಅಂತಿಮ ವಿಧಿ ವಿಧಾನ ಮಾಡಿ ಅಲ್ಲೇ ಹೂಳಲು ಅವಕಾಶ ಮಾಡಿ ಕೊಡಿ ಎಂದು ಕೇಳಿ ಕೊಂಡ ಮೇಲೆ..
ರಾಜ ಅನುಮತಿ ನೀಡುತ್ತಾರೆ.
ಕೊನೆಗೆ
ಅಂತಿಮ ವಿಧಿ ವಿಧಾನಕ್ಕೆ,ಕುಟುಂಬದವರು ಪ್ರೀಸ್ಟ್ ಗಳನ್ನ ಬರಲು ಹೇಳುತ್ತಾರೆ,ಆದರೆ ಕರೆದ ಇಬ್ಬರು ಪ್ರೀಸ್ಟ್ ಗಳು ಬರಲೇ ಇಲ್ಲ.. ಕೊನೆಯ ಕ್ಷಣದಲ್ಲಿ ಕೈ ಕೊಟ್ಟು ಬಿಡ್ತಾರೆ..!

ಮೂರನೆಯವರಿಗೆ ಹೇಳಿ ಕಳುಹಿಸಿದರೆ,ಅವರು ಹೊರಟು ಬರೋದು ಬಹಳ ತಡವಾಗಿ,ಮೊಲಿಯರ್ ಗೆ ಅಂತಿಮ ವಿಧಿ ವಿಧಾನದ ಗೌರವ ಕೂಡ ಸರಿಯಾಗಿ ಸಿಗದೇ ಹೂಳಲಾಯಿತು ಎನ್ನಲಾಗಿದೆ..!

ನಂತರ ದಿನಗಳಲ್ಲಿ ಮೊಲಿಯರ್ ಸಮಾಧಿಯನ್ನ ಪ್ರಾನ್ಸ್ ಮ್ಯೂಸಿಯಂ ಗೆ ಸ್ಥಲಾಂತರ ಮಾಡಿ,
ಕೊನೆಯದಾಗಿ ಪೆರ್ರಿ ಲ್ಯಾ0ಚೆಸ್ಟರ್ ಸಿಮಿಟ್ರಿ ಎಂಬಲ್ಲಿ ಸ್ಥಳಾ0ತರ ಮಾಡಿ ಸ್ಮಾರಕ ಮಾಡಿದ್ದಾರೆ...

#ಅವಿವೇಕದ_ಸಾವು

ಕಥೆ_07.

#stupid_death

(Source:-Horrible histories Series)

ಟ್ಯೂ ಡರ್ ಸಾವು

ಸುಮಾರು ವರ್ಷಗಳ ಹಿಂದೆ...
ಸ್ಟೇಜ್ ನಲ್ಲಿ ಚಿತ್ರ ವಿಚಿತ್ರ ಸಾಹಸ ಮಾಡಿ,ಮನರಂಜನೆ ಮಾಡುವುದಕ್ಕೆ ಒಬ್ಬ ವ್ಯಕ್ತಿ ಬಹಳ ಜನಪ್ರಿಯರಾಗಿದ್ದರಂತೆ..
(Tudor Entertainer and performer)

ಸ್ಟೇಜ್ ಕಾರ್ಯಕ್ರಮದಲ್ಲಿ,ಚಾಕುವಿನಿಂದ ಎದೆಗೆ ಚುಚ್ಚಿಕೊಂಡು ರಕ್ತ ಬರಿಸಿಕೊಳ್ಳುವಂತ ಸಾಹಸ ಮಾಡಿ,ಜನರನ್ನ ಗಾಬರಿ ಪಡಿಸುತ್ತಾ ಇದ್ದರಂತೆ..

ಅದು ಹೇಗೆ ಸಾಧ್ಯ ಅಂದ್ರಾ?

ಅದರಲ್ಲಿ ಒಂದು ಒಳಮರ್ಮ ಇತ್ತು..

ಅವರು ಬಟ್ಟೆಯ ಒಳಗೆ,ಚಾಕು ಹೋಗದಂತ ಸುರಕ್ಷಾ ಕವಚ (stab protection Jacket)ಹಾಕಿಕೊಂಡು,ಚಾಕು ಹಾಕಿಕೊಳ್ಳುವ ಜಾಗದಲ್ಲಿ ಪ್ರಾಣಿಯ ರಕ್ತದ ಚೀಲವನ್ನ ಕಟ್ಟಿ ಇಟ್ಟಿರುತ್ತಾ ಇದ್ದರಂತೆ,ನಟನೆಯ ಸಂಧರ್ಭದಲ್ಲಿ,ಪ್ರಾಣಿ ರಕ್ತ ಚೀಲ ಕಟ್ಟಿದ ಜಾಗಕ್ಕೆ ಜೋರಾಗಿ ಚಾಕು ಚುಚ್ಚಿದ ಹಾಗೆ ಮಾಡಿದ ಕೂಡಲೇ ರಕ್ತ ಸ್ರಾವ ಪ್ರಾರಂಭವಾಗುತ್ತಾ ಇತ್ತಂತೆ,ಕುಸಿದು ಬೀಳುವಂತೆ ನಟಿಸುತ್ತಾ ಇದ್ದರಂತೆ ಜನ ಗಾಬರಿಯಾಗುತ್ತಾ ಇದ್ದರಂತೆ.ಇದು ನಿಜವೇನೋ ಅನ್ನುವ ಹಾಗೆ..!

ಹೀಗೆ ಜನಪ್ರಿಯರಾಗಿದ್ದ ಈ ವ್ಯಕ್ತಿ..
ಒಮ್ಮೆ ಇದೇ ರೀತಿಯ ನಟನೆ ಯಾವುದೋ ಸ್ಟೇಜ್ ನಲ್ಲಿ ಮಾಡಲು ಹೋಗಿ ರಕ್ತ ಸ್ರಾವ ಆಗಿ,ಸತ್ತೇ ಹೋಗಿ ಬಿಟ್ಟರಂತೆ...

ಕಾರಣ ಕೇಳಿದ್ರ..

ಕಾರ್ಯ ಕ್ರಮ ನಡೆಸಿ ಕೊಡುವ ಗಡಿಬಿಡಿಯಲ್ಲಿ ಈ ಸಾಹಸ ಪ್ರದರ್ಶನ ಮಾಡುವ ಸಮಯದಲ್ಲಿ, ಒಳಗಡೆಯ ಸುರಕ್ಷಾ ಅಂಗಿ(ಸ್ಟಾಬ್ ಪ್ರೊಟೆಕ್ಷನ್ ಜಾಕೆಟ್)ಹಾಕೋದನ್ನೇ ಮರೆತು,ಸಾಹಸ ಮಾಡಲು ಹೋಗಿ,ನೇರವಾಗಿ ತನ್ನ ಹೃದಯಕ್ಕೆ ಚಾಕು ಚುಚ್ಚಿ ಕೊಂಡು ಅಲ್ಲೇ ರಕ್ತ ಸ್ರಾವವಾಗಿ ಕುಸಿದು ಬಿದ್ದು ಸಾವನ್ನಪ್ಪುತ್ತಾರಂತೆ..

ಅದೇ..
ನಾವು ಚಿಕ್ಕವರಿದ್ದಾಗ ಕೇಳಿಸಿ ಕೊಳ್ತಾ ಇದ್ವಲ್ಲ..
ತೋಳ ಬಂತು ತೋಳ ಕತೆ ಹಾಗೇ ಆಯ್ತು,
ಜನ ಸಾಹಸ ಮಾಡಿದ್ದು ಅಂತ ಅಂದು ಕೊಂಡು ಚಪ್ಪಾಳೆ ತಟ್ಟಿರ್ತಾರೋ ಏನೋ...
ಅಲ್ವಾ..


#ಅವಿವೇಕದ_ಸಾವು

ಕಥೆ_09

#stupid_death

(ಮೂಲ:-Horrible histories)

ಡ್ರಾ ಕೋ

ಸುಮಾರು 650 BC ಅಂದರೆ 7ನೇ ಶತಮಾನದಲ್ಲಿ,ಗ್ರೀಕ್ ನಲ್ಲಿ ಹುಟ್ಟಿದ ಡ್ರಾಕೋ ಎಂಬ ವ್ಯಕ್ತಿ..
ಪುರಾತನ ಗ್ರೀಸ್ನ,ಅಥೆನ್ಸ್ ನ ಮೊಟ್ಟ ಮೊದಲ ಶಾಸಕ ಎಂಬ ಖ್ಯಾತಿಗೆ ಒಳಗಾದವರು..
ಡ್ರಾಕೋ..ಮಾತಿನಲ್ಲೇ ನಡೆಯುತ್ತಾ ಇದ್ದ,ನ್ಯಾಯ ತೀರ್ಮಾನ,ಹಾಗೂ ಘೋರ ಶಿಕ್ಷೆಗಳನ್ನ,
ಕಡತಗಳಲ್ಲಿ ದಾಖಲೆ ಮಾಡಿದ ಮೊದಲ ವ್ಯಕ್ತಿ ಕೂಡ..

ಇವರು ಪ್ರಜಾಪ್ರಭುತ್ವದಲ್ಲಿ ಆಥೆನಿಯನ್ ನಾಗರೀಕ ರಿಂದ ಶಾಸಕರಾಗಿ ಆಯ್ಕೆ ಆದ ಮೊದಲ ಜನ ಪ್ರತಿನಿಧಿ ಹಾಗೂ ಕಾನೂನು ರಚನೆ ಮಾಡಲು ನಿಯೋಜನೆಯಾದ ಮೊದಲ ವ್ಯಕ್ತಿಯಂತೆ..!!

ಆದರೆ ಡ್ರಾಕೋ..
ಜನರ ನಿರೀಕ್ಷೆಯಂತೆ ನಡೆದು ಕೊಳ್ಳದೇ..
ಸಣ್ಣ ಅಪರಾಧಕ್ಕೂ ಕಠಿಣ ಶಿಕ್ಷೆ,ರಕ್ತಪಾತದಂತ ಕಾನೂನು ಜಾರಿಗೆ ತರುತ್ತಾರೆ..
ಇಷ್ಟು ಕ್ರೂರ ಹಾಗೂ ಅಮಾನವೀಯ ಶಿಕ್ಷೆ ತರುತ್ತಾರೆ ಎಂದು ಸ್ವತಃ ಡ್ರಾಕೋನನ್ನ ಚುನಾಯಿಸಿದ ಜನರಿಗೆ ಅರಿವಿರಲಿಲ್ಲವಂತೆ..

ಉದಾಹರಣೆಗೆ
ಕೋಸು,ಸೇಬು ಹಣ್ಣು,ಕದ್ದರೂ,ಇನ್ನಿತರೆ ಸಣ್ಣ ಅಪರಾಧಕ್ಕೂ ಮರಣ ದಂಡನೆಗೆ ಗುರಿ ಪಡಿಸುವಂತ ಕಾನೂನು ಬಹಳ ಕಠಿಣವಾಗಿ ಜಾರಿಗೆ ತರಲಾಗಿತ್ತು..
ಡ್ರಾಕೋ ನಿಂದ..

ಕಾರಣ ಕೇಳಿದರೆ..
ಇಂತಹಾ ಸಣ್ಣ ಅಪರಾಧ ಮುಂದೆ ದೊಡ್ಡದಕ್ಕೆ ಪ್ರೇರಣೆ,ಹಾಗಾಗಿ ಈ ಶಿಕ್ಷೆ ಎಂಬಂತೆ ಕೆಲವು ಬೇರೆಬೇರೆ ಸಮಜಾಯಿಷಿ ಬರುತ್ತಾ ಇತ್ತಂತೆ..!!

ಹೀಗೆ ಈಗಿನ ದಿನಮಾನದಲ್ಲಿ ಡ್ರಾಕೋ ಕಾನೂನು ಪ್ರಕಾರ ಶಿಕ್ಷೆ ಕೊಟ್ಟರೆ,ಪರಿಸ್ಥಿತಿ ಏನಾಗುತ್ತಾ ಇತ್ತು ಅಂತ ಊಹಿಸಿ ಕೊಳ್ತಾ ಇದೀರಾ...!
😂😛

ಸುಮಾರು 19ನೇ ಶತಮಾನದ ವರೆಗೆ,
ಕ್ಷಮೆ ಇಲ್ಲದ,ಅಮಾನವೀಯ,ಕ್ರೌರ್ಯದಿಂದ ಕೂಡಿದ ಕಾನೂನು ಗಳ ಬಗ್ಗೆ,
ಡ್ರಾಕೋನಿಯನ್ ಎಂಬ ವಿಶೇಷಣ,ಗ್ರೀಕ್,ಇಂಗ್ಲೀಷ್, ಯುರೋಪಿಯನ್ ಭಾಷೆಗಳಲ್ಲಿ ಬಳಸುತ್ತಾ ಇದ್ದರಂತೆ..!!

ಇದೆಲ್ಲಾ ಕಠಿಣ ಕಾನೂನು ಗಳನ್ನ ನಂತರ ತೆಗೆದು ಹಾಕಲಾಯಿತಂತೆ..!

ಇಂತಹಾ ಡ್ರಾಕೋ ಸತ್ತಿದ್ದು ಹೇಗೆ ಗೊತ್ತಾ..

ಒಮ್ಮೆ ಡ್ರಾಕೋಗೆ,ಗ್ರೀಸ್ ನ ಎಜಿನೇಟನ್ ಥಿಯೇಟರ್ ನಲ್ಲಿ,ಅಲ್ಲಿನ ಸ್ಥಳೀಯ ನಾಗರೀಕರು ಎಲ್ಲಾ ಸೇರಿ ಸನ್ಮಾನ ಸಮಾರಂಭ ಇಟ್ಟುಕೊಂಡಿದ್ದರಂತೆ..

ಡ್ರಾಕೋ ಸಮಾರಂಭಕ್ಕೆ ಆಗಮಿಸಿ ಸ್ಟೇಜ್ ಹತ್ತಿದ ಕೂಡಲೇ,
ಅಲ್ಲಿದ್ದ ಅವರ ಬೆಂಬಲಿಗರು ಹಾಗೂ ಅಭಿಮಾನಿಗಳು,
ಘೋಷಣೆ ಕೂಗುತ್ತಾ,
ತಮ್ಮ ತಮ್ಮ,ಟೊಪ್ಪಿ,ಬಟ್ಟೆಗಳು,ಕ್ಲೋಕ್ ಗಳನ್ನ ಖುಷಿಯಿಂದ ಎಸೆಯಲು ಪ್ರಾರಂಭಿಸಿದರಂತೆ..

ಸಾವಿರಾರು ಜನ,ಈ ರೀತಿ ಬಟ್ಟೆಗಳನ್ನ,ಟೊಪ್ಪಿಗಳನ್ನ ಒಮ್ಮೆಲೇ ಎಸೆದರ ಪರಿಣಾಮ,
ಡ್ರಾಕೋ ಉಸಿರಾಡೋಕೆ ಆಗದೇ..ಉಸಿರು ಕಟ್ಟಿ ಅದೇ ಎಜಿನೇಟನ್ ಥಿಯೇಟರ್ ಸ್ಟೇಜ್ ನಲ್ಲಿ ಮರಣ ಹೊಂದಿ ಬಿಡುತ್ತಾರಂತೆ ಡ್ರಾಕೋ..

ಅಲ್ಲೇ ಅವರ ಅಂತ್ಯಕ್ರಿಯೆ ಮಾಡಿ ಸಮಾಧಿಯನ್ನ ಮಾಡಲಾಯಿತಂತೆ..

ಜನ ಹೇಗೆ ಪರೋಕ್ಷವಾಗಿ ಡ್ರಾಕೋ ಮೇಲೆ ಸೇಡು ತೀರಿಸಿ ಕೊಂಡ್ರು ನೋಡಿ ಅಲ್ವಾ..!
😂

#ಅವಿವೇಕದ_ಸಾವು

ಕಥೆ_06

(ಮೂಲ:-Horrible histories)

#stupid_death

ತಲೆನೋವು ಚಿಕಿತ್ಸೆ

ಶಿಲಾಯುಗದಲ್ಲಿ(Stone age)
ತಲೆ ನೋವು ಬಂದರೆ ಏನು ಮಾಡ್ತಾ ಇದ್ರಂತೆ ಗೊತ್ತಾ?

ಒಂದು ಚೂಪಾದ(ಉಳಿಯ ತರದ) ಕಲ್ಲು ಹಾಗೂ ಒಂದು ದೊಡ್ಡ ಉಂಡನೆಯ ಕಲ್ಲು ತೆಗೆದು ಕೊಂಡು,
ಚೂಪನೆ ಕಲ್ಲು ತಲೆ ಬುರುಡೆಗೆ ಇಟ್ಟು,
ದೊಡ್ಡ ಕಲ್ಲಿಂದ ಹೊಡೆದು ರಂದ್ರ ಮಾಡುತ್ತಾ ಇದ್ದರಂತೆ..
ಬುರುಡೆಯಲ್ಲಿ ಆದ ರಂಧ್ರದಿಂದ ತಲೆಯಲ್ಲಿ ಇರುವ ಭೂತ,ಪಿಶಾಚಿ,ಚೇಷ್ಟೆ ಎಲ್ಲಾ,ಹೊರ ಹೋಗಿ..(empty mind devils work shop ಅನ್ನೋದನ್ನ ಗಂಭೀರವಾಗಿ ತಗೊಂಡಿದ್ರಾ ಕೇಳಬೇಡಿ)ತಲೆ ನೋವು ಮಾಯವಾಗುತ್ತಾ ಇತ್ತು ಅಂತ ನಂಬಿಕೆ ಅಂತೆ..
ಈ ಚಿಕಿತ್ಸೆಗೆ ತ್ರಿಪೆಂಡಲ್ ಎನ್ನುತ್ತಾ ಇದ್ದರಂತೆ...
ಅಕ್ಯುಪಂಚರ್ ಚಿಕಿತ್ಸೆ ತರ ಇರಬಹುದು..!!

ತಲೆ ನೋವು ಹೋಗಿತ್ತಾ ಇದರಿಂದ ಅಂತ ಕೇಳಬೇಡಿ, ಹೊಡೆದಿದ್ದು ಹೆಚ್ಚು ಕಮ್ಮಿಯಾಗಿ ತಲೆಯೇ ಹೋಗಿರುವ ಸಾಧ್ಯತೆ ಹೆಚ್ಚು ಅನಿಸುತ್ತೇ ಅಲ್ವಾ..!
😂

ಹೆಂಗೆ ಪ್ರಕೃತಿ ಕಲ್ಲು ಚಿಕಿತ್ಸೆ...

ಈಗ ಆ ಚಿಕಿತ್ಸೆ ನೆನಸಿ ಕೊಂಡು ತಲೆ ನೋವು ಅಂತ ಯಾರಾದ್ರೂ ಹೇಳಿ ನೋಡೋಣ..

ಸಣ್ಣ ಪುಟ್ಟ ವಿಷಯಕ್ಕೆ ಡಾಕ್ಟ್ರೆ..
ಅಂತ ಓಡಿ ಹೋಗ್ತಾ ಇದ್ದೋರು ಹಲವರು
ಕರೋನಾ ಬಂದ ಮೇಲೆ ಏನಾಗಿಲ್ಲಪ್ಪ ಅಂತ ಮನೇಲಿ ಇಲ್ವಾ..

ಹಾಗೆ ಈ ರೀತಿ ಚಿಕಿತ್ಸೆ ಎಲ್ಲಾದ್ರೂ ಈಗಲೂ ಮಾಡ್ತಾ ಇದ್ದಿದ್ರೆ..
ತಲೆನೋವ,
ಹಾಗಂದ್ರೆ ಎಂತಾ ಅಂತ,ಹೃದಯ ಕಲ್ಲು ಮಾಡಿಕೊಂಡು,ತಲೆಗೆ ಕಲ್ಲಿನಲ್ಲಿ ಹೊಡೆಸಿಕೊಳ್ಳೋ ಸಹವಾಸ ಬೇಡಪ್ಪ ಅಂತಿದ್ರಾ ಅಂತ ಹಲವು ಜನ..
ಅಲ್ವಾ😂

ಪ್ರಾನ್ಸಿಸ್ ಬೇಕಾನ್

ಪ್ರಾನ್ಸಿಸ್ ಬೇಕಾನ್
ಎಂಬ ಇಂಗ್ಲೆಂಡ್ನ ತತ್ವ ಜ್ಞಾನಿ ಸುಮಾರು
1626 ನೇ ಇಸವಿಯಲ್ಲಿ ಮರಣ ಹೊಂದುತ್ತಾರೆ..

ಅವರು ಸತ್ತದ್ದು ಹೇಗೆ ಗೊತ್ತಾ..
ಕೋಳಿ ಮಾಂಸ ಸುಮಾರು ದಿನ ಕಾಪಾಡೋಕೆ ಹೋಗಿ..!!

ಒಂದು ದಿನ ಸ್ನೋ ನಲ್ಲಿ ಹೋಗುತ್ತಾ ಇರುವಾಗ ಒಂದು ಆಲೋಚನೆ ಬಂತಂತೆ,ಸಾಯಿಸಿದ ಕೋಳಿಯನ್ನ ಶೀತಲ ಪ್ರದೇಶದಲ್ಲಿ ಇಟ್ಟರೆ ಹಲವು ದಿನ ಕೆಡದಂತೆ ಇಡಬಹುದು ಅಂತ....!
ಸತ್ತ ಕೋಳಿಯನ್ನ ಶೀತ ಪ್ರದೇಶದಲ್ಲಿ ಇಟ್ಟು ಸಂರಕ್ಷಣೆ ಮಾಡಲು ಸಾಧ್ಯ ಎನ್ನುವ ಬಗ್ಗೆ ಪ್ರಯೋಗವನ್ನ ಪ್ರಾರಂಭ ಮಾಡಿ ದೀರ್ಘಕಾಲ ಮಾಡಲು ಮುಂದುವರೆಸಿದರಂತೆ...
ದುರಂತ ಅಂದರೆ
ದಿನ ನಿತ್ಯವೂ ಮಂಜು ಗಡ್ಡೆಯ ಶೀತ ವಾತಾವರಣದಲ್ಲಿ ಕೆಲಸ ಮಾಡಿದ ಪ್ರಾನ್ಸಿಸ್ಗೆ ನ್ಯುಮೋನಿಯಾ ಬಂದು ಖಾಯಿಲೆ ಉಲ್ಬಣವಾಗಿ ಬಿಡುತ್ತೆ....!

ಅವರು ಮಾಡಿದ ಪ್ರಯೋಗ ಸಂಪೂರ್ಣ ಫಲಪ್ರದ ವಾಗುತ್ತದೆ..
ಆದರೆ ಪ್ರಾನ್ಸಿಸ್ ನ್ಯುಮೋನಿಯಾದಿಂದ ಮರಣ ಹೊಂದಿ ಪ್ರೀಜ್ ಆಗುತ್ತಾರೆ..!
ಪಾಪ..

ನಿಗತ್ ಕೊಂಡಿದ್ದ ಕೋಳಿನ ಹಾಳಾಗದ ಹಾಗೆ ಸುಮಾರು ದಿನ ಕಾಪಾಡೋಕೆ ಹೋಗಿ ಇವರೇ ಕೋಲ್ಡ್ ಜಾಸ್ತಿಯಾಗಿ ಸೆಟ್ ಗೊಂಡು,
ನಿಗತ್ ಕಂಡು ಬಿಟ್ರು ನೋಡಿ...😣

(Source:-Horrible histories Series)

#ಅವಿವೇಕದ_ಸಾವು
#ಕಥೆ_03

#stupid_death

ಬೋಳು ತಲೆಯಿಂದ ಸಾವು

ಸುಮಾರು 523 BC ಯಲ್ಲಿ Aeschylus(ಐಸೂಲಾಸ್)
ಎಂಬ ವ್ಯಕ್ತಿ ಗ್ರೀಕ್ ನ ಅಥೆನ್ಸ್ ನಲ್ಲಿ ಜನಿಸಿ
ಪುರಾತನ ಗ್ರೀಕ್ ಟ್ರಾಜಿಡಿಯನ್(ಪಾದರ್ ಅಪ್ ಟ್ರಾಜೆಡಿ) ಎಂದೇ ಜನಪ್ರಿಯರಾಗಿದ್ದರಂತೆ..
ಕಾರಣ
ಪುರಾತನ ಕಾಲದಲ್ಲಿ ನಡೆದ ದುರಂತ ಕತೆಗಳ ಬಗ್ಗೆ ಸಣ್ಣ ನಾಟಕಗಳ ಮೂಲಕ ಬಹಳ ಸುಂದರವಾಗಿ ಚಿತ್ರಿಸುವುದರ ಮೂಲಕ ಜನಪ್ರಿಯರಾಗಿ,ಈ ಹೆಸರಿಗೆ ಪಾತ್ರರಾಗಿದ್ದರಂತೆ..!

ಈ ವ್ಯಕ್ತಿ ಸುಮಾರು 67 ವರ್ಷ ಬದುಕಿದ್ದರಂತೆ..

ಅವರ ಸಾವು ಹೇಗಾಯ್ತು ಅಂತೀರಾ..!
ಅದೊಂದು ಬ್ಯಾಡ್ ಲಕ್ ಬಿಡಿ..

ಒಂದು ದಿನ,ಐಸೂಲಸ್
ಏನೋ ಯೋಚಿಸುತ್ತಾ ಅವರ ಪಾಡಿಗೆ ಅವರು ನಡೆದು ಹೋಗುತ್ತಾ ಇದ್ದರಂತೆ,
ತಲೆಯ ಮೇಲೆ ಏನೋ ವಸ್ತು ಬಿದ್ದಿದೆ,ಆ ವಸ್ತು ಏನೆಂದರೆ ಆಮೆ!
ಒಂದು ಹದ್ದು ಆಮೆಯನ್ನ ಹಿಡಿದು ಬಹಳ ಎತ್ತರದಲ್ಲಿ ಹಾರುತ್ತಾ ಇರುವಾಗ,ಆಮೆ ಇವರ ತಲೆಯ ಮೇಲೆ ಬಿದ್ದಿದ್ದರೆ ಪರಿಣಾಮ ತಲೆಗೆ ಪೆಟ್ಟು ಬಿದ್ದು ತೀರಿ ಹೋದರಂತೆ..

ಹದ್ದು ಆಮೆಯನ್ನ ಮೇಲಿಂದ ಬಂಡೆಗಳ ಮೇಲೆ ಹಾಕಿ ಅದು ಒಡೆದಾಗ ತಿನ್ನುವುದುಅನುಕೂಲ ಅಂತಲೇ ಬಂಡೆಯ ಮೇಲೆ ಹಾಕುವುದಂತೆ....!

ಅದಕ್ಕೂ ಇದಕ್ಕೂ ಏನು ಸಂಬಂದ ಎಂದು ಯೋಚಿಸ್ತಾ ಇದೀರಾ..!!!!

ಅದೇ ನೋಡಿ ಕತೆಯ ರೋಚಕತೆ..

ಐಸೂಲಾಸ್ ತಲೆ ಬೋಳು ಇದ್ದ ಕಾರಣ ಹದ್ದಿನ ಕಣ್ಣು ಗೊತ್ತಲ್ಲ,ಮೇಲಿನಿಂದ ಪಳ ಪಳ ಹೊಳೆಯುತ್ತಾ ಇದ್ದ ಇವರ ಬೋಳು ತಲೆಯನ್ನೇ ಬಂಡೇ ಎಂದು ತಿಳಿದು,ಸರಿಯಾಗಿ ಗುರಿ ಇಟ್ಟು ಅಮೆಯನ್ನ ಇವರ ತಲೆಯ ಮೇಲೆ ಹಾಕಿದ್ದರ ಪರಿಣಾಮವೇ,ಅವರು ದುರಂತ ಸಾವನ್ನಪ್ಪ ಬೇಕಾಯ್ತು ಅನ್ನೋದು ಬೇಸರದ ಸಂಗತಿ..

ಪಾದರ್ ಅಪ್ ಟ್ರಾಜಿಡಿಯ ಜೀವನ ಈ ರೀತಿ ಟ್ರಾಜಿಡಿ ಆಗಿ ಅಂತ್ಯ ಆಯ್ತು..

#ಸ್ಟುಪಿಡ್_ಡೆತ್
ಕಥೆ_01

(ಮೂಲ:-Horrible history Series)

ಮಿಲೋ ರಸ್ಲರ್

ಮಿಲೋ ಅಪ್ ಕ್ರೋಟಾನ್ 6ನೇ ಶತಮಾನದ ಜನಪ್ರಿಯ ರೆಸ್ಲರ್,ಕ್ರೋಟಾನ್ ನ ಮ್ಯಾಗ್ನ ಗ್ರೇಸಿಯಾ ಎಂಬಲ್ಲಿನವ್ರು..
ಇವರು ರಸ್ಲಿಂಗ್ ನಲ್ಲಿ ಆಗಿನ ಕಾಲದಲ್ಲಿ ಹಲವು ಪ್ರಶಸ್ತಿ ಗಳಿಸಿ,ಬಹಳ ಯಶಸ್ವಿ ರಸ್ಲರ್ ಎಂದು ಹೆಸರುವಾಸಿಯಾದವರು..

ಬಹಳ ಶಕ್ತಿವಂತ ಹಾಗೂ ಧೈರ್ಯ ವಂತ ಅಂತಲೂ ಹೆಸರಿತ್ತು..

ಇವರು 510 BC ಯಲ್ಲಿ ಸೈಬೀರಿಯಾ ವಿರುದ್ಧ ಕಾರ್ಯಾಚರಣೆಯಲ್ಲಿ ನಾಗರೀಕರನ್ನ ಒಂದು ಮಾಡಿ ಸಹಾಯ ಮಾಡಿದ್ದರೂ ಎನ್ನಲಾಗಿದೆ..!

ಮಿಲೋ...
ಒಂದು ಗೂಳಿಯನ್ನ ಅನಾಮತ್ತಾಗಿ ಎತ್ತಿ ತನ್ನ ಹೆಗಲ ಮೇಲೆ ಇಟ್ಟುಕೊಳ್ಳುತ್ತಾ ಇದ್ದರಂತೆ..
ಇದು ಒಂದು ಇವರ ಶಕ್ತಿಗೆ ದೊಡ್ಡ ಉದಾಹರಣೆ..

ಇಂತಿಪ್ಪ ಮಿಲೋ ಗೆ ನಾನು ಎಂಬ ಕೊಲೆಸ್ಟ್ರಾಲ್ ಸ್ವಲ್ಪ ಜಾಸ್ತಿಯೇ ಇತ್ತು ಅನಿಸುತ್ತೆ.

ಒಮ್ಮೆ ಮಿಲೋ..
ಕಾಡಿನಲ್ಲಿ ನಡೆದು ಹೋಗುತ್ತಾ ಇರುವಾಗ ಒಂದು ಮರದ ದಿಮ್ಮಿ ಸ್ವಲ್ಪ ಸೀಳಿರೋದು ಬಿದ್ದಿದ್ದು ಕಾಣಿಸಿತಂತೆ,
ಈ ಮರದ ದಿಮ್ಮಿಯನ್ನ ಬರಿ ಗೈಯಿಂದ ಸೀಳಿದ್ರೆ ನನ್ನ ಪರಾಕ್ರಮ ಬಲ ಮತ್ತಷ್ಟು ಒರೆಗೆ ಹಚ್ಚಿದ ಹಾಗೆ ಆಗುತ್ತೆ,ಎದುರಾಳಿಗಳಿಗೆ ಸವಾಲು ಹಾಕಲು ಅನುಕೂಲವಾಗುತ್ತೆ ಎಂದು ಯೋಚಿಸಿ,
ಆ ಮರದ ದಿಮ್ಮಿಯನ್ನ,ಬರಿಗೈಯಿಂದ ಸೀಳಲು ನಿರ್ಧರಿಸಿದರಂತೆ,ಹಾಗೆ ಮರದ ಸೀಳಿನ ಮಧ್ಯೆ ಕೈ ಹಾಕಿದ ಮಿಲೋಗೆ,ಕೈ ಆ ಮರದ ದಿಮ್ಮಿಯ ಸೀಳಿನ ಮಧ್ಯ ಸಿಕ್ಕಿಕೊಂಡು ವಾಪಾಸ್ ತೆಗೆದು ಕೊಳ್ಳದಂತಾಗಿ ಲಾಕ್ ಆಗಿ ಬಿಡುತ್ತೆ,
ಸಹಾಯಕ್ಕೆ ಸುತ್ತ ಮುತ್ತ ಜನರೂ ಇರಲಿಲ್ಲ..
ಸ್ವಲ್ಪ ಸಮಯ ತಮ್ಮೆಲ್ಲಾ ಶಕ್ತಿ ಬಳಸಿ ಬಿಡಿಸಿ ಕೊಳ್ಳಲು ಕಷ್ಟಪಟ್ಟು ಬಳಲಿ ಬೆಂಡಾಗಿದ್ದ ಮಿಲೋಗೆ ಒಂದು ಗಂಡಾಂತರ ಕಾದಿತ್ತು..
ಕಾಡಿನ ಮಧ್ಯ ಸಿಕ್ಕಿ ಹಾಕಿಕೊಂಡಿದ್ದ ಮಿಲೋನ ಕೊಸರಾಟ ಸದ್ದು ಕೇಳಿ,
ಆಹಾರ ಹುಡುಕುತ್ತಾ ಬಂದ ತೋಳದ ಗುಂಪು
ಮಿಲೋನ ಮೇಲೆ ದಾಳಿ ಮಾಡುತ್ತವೆ..
ತಪ್ಪಿಸಿ ಕೊಳ್ಳಲಾಗದೆ ಅಸಹಾಯಕನಾಗಿ
ಈ ದಾಳಿಯಿಂದಾಗಿ ರಕ್ತ ಸ್ರಾವವಾಗಿ ಮಿಲೋ ಸಾವನ್ನಪ್ಪಿದರು ಎನ್ನಲಾಗಿದೆ..

ಎಷ್ಟೇ ಶಕ್ತಿ ಇದ್ದರೂ,ಎಷ್ಟೇ ಜನರನ್ನ ತನ್ನ ಪರಾಕ್ರಮದಿಂದ ರಸ್ಲಿಂಗ್ ನಲ್ಲಿ ಮಣ್ಣು ಮುಕ್ಕಿಸಿದ್ದರೂ,ಎಷ್ಟೇ ಪ್ರಶಸ್ತಿ,ಬಿರುದುಬಾವಳಿಗಳನ್ನ ಪಡೆದಿದ್ದರೂ..
ತನ್ನ ಮೂರ್ಖತನ ಹಾಗೂ ಅಹಂಕಾರದಿಂದ ತನ್ನ ಸಾವನ್ನ ತೋಳಗಳಿಂದ ತಾನಾಗೇ ಆಹ್ವಾನಿಸಿ ಕೊಂಡು ಬಿಟ್ಟರು ಮಿಲೋ...




ಸಗಣಿ ಸಾವು


ಹೆರಾಕ್ಲಿಟಸ್ ಎಂಬ ತತ್ವ ಜ್ಞಾನಿ ಪರ್ಷಿಯನ್ ಎಂಪರರ್ ಎಂಪಿಸಿಸ್ ಎಂಬ ಊರಿನವರು..

ಇಂತಹಾ ತತ್ವಜ್ಞಾನಿ
ಹೆರಾಕ್ಲಿಟಸ್ ಸತ್ತಿದ್ದು ಹೇಗೆ ಗೊತ್ತಾ..

ಇವರಿಗೆ "Dropsy" ಎಂಬ ಮೈಯೆಲ್ಲಾ ಊದಿ ನೀರು ತುಂಬಿದ ರೀತಿ ಆಗುವ ಖಾಯಿಲೆಗೆ ತುತ್ತಾಗಿ ಬಿಡ್ತಾರೆ...
ಇದನ್ನ ಗುಣ ಪಡಿಸಿ ಕೊಳ್ಳಲು ಹಲವು ಚಿಕಿತ್ಸೆ ಪಡೆದು ಕೊಂಡರೂ ಗುಣವಾಗಲೇ ಇಲ್ಲವಂತೆ..
ಖಾಯಿಲೆ ದಿನೇ ದಿನೇ ಉಲ್ಬಣ ವಾಗೋದು ನೋಡಿ..

ಕೊನೆಗೆ ತತ್ವ ಜ್ಞಾನಿ ಹೆರಾಕ್ಲಿಟಸ್,ಒಂದು ಯೋಜನೆ ರೂಪಿಸಿದರು,ಮೈ ಎಲ್ಲಾ ಊದಿಕೊಂಡು ನೀರು ತುಂಬಿದಂತೆ ಆಗಿರುವ ಈ ಖಾಯಿಲೆಯನ್ನ ಶಾಖದಲ್ಲಿ ಇದ್ದರೆ ಮೈಯಲ್ಲಿ ಇರುವ ನೀರು ಆವಿಯಾಗಿ,ಬತ್ತಿ ಹೋಗಿ,ಖಾಯಿಲೆ ಕಡಿಮೆ ಯಾಗಬಹುದು ಎಂದು ತಾವೇ ಊಹಿಸಿ..
ಒಂದು ನಿರ್ದಾರಕ್ಕೆ ಬಂದರಂತೆ..!

ಒಂದಷ್ಟು ಸಗಣಿಯನ್ನ ಒಟ್ಟು ಮಾಡಿ,
ದೊಡ್ಡ ಸಗಣಿಯ ರಾಶಿ ಮಾಡಿ ಅದರ ಮಧ್ಯ ಕಣ್ಣು,ಬಾಯಿ,ಮೂಗು ಬಿಟ್ಟು ಅವರು ಕುಳಿತು ಬಿಟ್ಟರಂತೆ ಹೆರಾಕ್ಲಿಟಸ್..
ಒಂತರಾ ತಪಸ್ಸಿಗೆ ಕುಳಿತ ಹಾಗೆ ಅಂತಿಟ್ಟು ಕೊಳ್ಳಿ..

ಆದರೆ ಜೊತೆಗೆ ನೀರನ್ನು ಇಟ್ಟುಕೊಳ್ಳೋದನ್ನ ಮರೆತು ಬಿಟ್ಟರಂತೆ...!

ಹಾಗೆ ಕುಳಿತವರಿಗೆ,ಒಳಗೆ ಸಗಣಿ ರಾಶಿಯಲ್ಲಿನ ಶಾಖ ಕ್ರಮೇಣ ಹೆಚ್ಚಾಗಿ,
ದೇಹದಲ್ಲಿನ ನೀರು ಹೋಗುವ ಬದಲು..
ನಿರ್ಜಲೀಕರಣ ಹಾಗೂ ನಿಶಕ್ತಿ ಆಗಿ,ಅಂಗಾಂಗ ವೈಫಲ್ಯವಾಗಿ,
ಅವರ ಪ್ರಾಣವೇ ಹೋಗಿ ಬಿಟ್ಟಿಟಂತೆ....!

ಸ್ವಯಂ ವೈದ್ಯರು ಆಗಲು ಹೋದ
ತತ್ವ ಜ್ಞಾನಿ ಕೊನೆಗೆ ತಾವು ವೈದ್ಯರ ಬಳಿ ಹೋಗಲು ಸಮಯವೇ ಸಿಗದೇ ಸತ್ತು ಹೋಗಿ ಬಿಟ್ಟರಂತೆ..!

ಅತಿ ಬುದ್ಧಿವಂತಿಕೆ,ಅಂ* ಚಪ್ಪಟೆ ಅಂತಾರೆ ಹಳ್ಳಿಯ ಕಡೆ..

ಅದೇ ಆಯ್ತು ಅನಿಸುತ್ತೆ ಇವರ ವಿಷಯದಲ್ಲಿ..
ಅಲ್ವಾ..


#ಅವಿವೇಕದ_ಸಾವು

ಕಥೆ_08.

#stupid_death

(Source:-Horrible histories Series)

ಮರಿಯಾ ಕೋವೆಂಟ್ರಿ

ಮರಿಯಾ ಕೋವೆಂಟ್ರಿ ಎಂಬುವವರು ಐರಿಷ್ ನ ಯುವತಿ,ಕಿಂಗ್ ಜಾರ್ಜ್-2 ಆಡಳಿತ ಕಾಲದಲ್ಲಿ,ಇವರು ಬಹಳ ಸೌಂದರ್ಯ ವತಿ ಎಂದು ಗುರುತಿಸಲ್ಪಟ್ಟವರಂತೆ..!

ಇವರು ಹುಟ್ಟಿದ್ದು 1733 ರಲ್ಲಿ ಮರಣ ಹೊಂದಿದ್ದು 1760 ರಲ್ಲಿ..

ಅಯ್ಯೋ..ಚೇ...
ಅಷ್ಟು ಚಿಕ್ಕ ವಯಸ್ಸಿಗೆ ಅವರು ಮರಣ ಹೊಂದಲು ಕಾರಣ ಏನು ಅಂದ್ರಾ...!?

ಅವರ ಸಾವಿಗೆ ಕಾರಣ ಸೌಂದರ್ಯ ವರ್ಧಕ ಅದೇ ಮೇಕ್ ಅಪ್ ಅಂದರೆ ನಂಬಲೇ ಬೇಕು...!


17,18 ನೇ ಶತಮಾನದಲ್ಲಿ ಮಹಿಳೆಯರು ಸೌಂದರ್ಯ ವರ್ಧಕ ಬಳಸೋದು,ಮೇಕ್ ಅಪ್ ಕೆನ್ನೆಗೆ ಹಾಗೂ ಹಣೆಗೆ ಬೇರೆ ಬೇರೆ ಬಣ್ಣ ಬಳಿದು,ಚಂದ ಕಾಣಿಸಿಕೊಳ್ಳೋದು ಒಂದು ಹೆಗ್ಗಳಿಕೆಯಾಗಿತ್ತಂತೆ..

ತಮ್ಮ ಚರ್ಮದ ಬಣ್ಣ ಹಾಗೂ ಚರ್ಮದ ಕಲೆಗಳು ಕಾಣದಂತೆ ಮಾಡಲು ಬೇರೆ ಬೇರೆ ಸೌಂದರ್ಯ ವರ್ಧಕಗಳನ್ನ ಬಳಸುತ್ತಾ ಇದ್ದರಂತೆ..

ಅದರಲ್ಲಿ ವೆನಿಟಿಯನ್ ಸೈರಸ್ ಎಂಬ ಪದಾರ್ಥ ಚರ್ಮದ ಬಣ್ಣ ಬಿಳಿಯಾಗಲು ಸಹಾಯಕವಂತೆ,ಅದನ್ನ ಮರಿಯಾ ಯಥೇಚ್ಛವಾಗಿ ಬಳಸುತ್ತಾ ಇದ್ದರಂತೆ..
ವೆನಿಟಿಯನ್ ಸೈರಸ್ ವಿಷ ಪೂರಿತ ಸೌಂದರ್ಯ ವರ್ಧಕ,ದೀರ್ಘ ಕಾಲ,ಹೆಚ್ಚಾಗಿ ಬಳಸುವುದರಿಂದ,ನಾನಾ ತರದ ಆರೋಗ್ಯ ಸಮಸ್ಯೆಯಾಗಿ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಾಗಿತ್ತಂತೆ..!
ಅದೇ ಸೌಂದರ್ಯವರ್ಧಕ ಪದಾರ್ಥವನ್ನು ಹೆಚ್ಚು ಬಳಸಿ ಲೆಡ್ ಪಾಯ್ಸನಿಂಗ್ ಆಗಿ..
ಮರಿಯಾ ಕೋವೆಂಟ್ರಿ ಕೇವಲ 27 ವರ್ಷ ವಯಸ್ಸಿಗೆ ಮರಣ ಹೊಂದಿದರಂತೆ..

ತಾವು ಚನ್ನಾಗಿ ಕಾಣುತ್ತೇನೆ ಅಂತ ಬಹಳ ಅರ್ಜೆಂಟ್ ಮಾಡಿ..
ತಾವೇ ಕಾಣದೇ ಇರೋ ಜಾಗಕ್ಕೆ ಅರ್ಜೆಂಟ್ ಆಗಿ ಸಣ್ಣ ವಯಸ್ಸಲ್ಲೇ ಹೋಗಿ ಬಿಟ್ಟರು..
ಮರಿಯಾ ಕೋವೆಂಟ್ರಿ..

ಈಗ ಬಿಡಿ,
ಸೌಂದರ್ಯ ವರ್ಧಕ ಬಹಳ ಸುರಕ್ಷಿತವಾಗಿ ಇರುತ್ತೆ..
ಹಾಗೆ ಹಣವೂ ಕೂಡ ಕಡಿಮೆ ಅಂದ್ರಾ..😛
ಏನೋಪಾ..
ನಾನು ಸೌಂದರ್ಯ ವರ್ಧಕ ಬಳಸಲ್ಲಪ್ಪ..
ನೀವು ಅಷ್ಟೇ ಅಲ್ವಾ..
ನಾಚ್ಯುರಲ್..

#ಅವಿವೇಕದ_ಸಾವು

ಕಥೆ_06

(ಮೂಲ:-Horrible histories)



ಸ್ಪಾರ್ಟಾ

ಪೊಸಾನಿಯಸ್ ಎಂಬ ಸ್ಪಾರ್ಟಾನ್ ಜನರಲ್ ಹಾಗೂ ಯುದ್ಧ ಮುಖ್ಯಸ್ಥರು..470 bc ಯಲ್ಲಿ ಸತ್ತು ಹೋಗ್ತಾರೆ..

ಇವರ ಮೇಲೆ,ಪರ್ಷಿಯನ್ ಕಿಂಗ್ ಕ್ಸೆರಕಿ ವಿರುದ್ಧ ಜೊತೆಗೆ ಇದ್ದು ಕೊಂಡೆ,
ಗ್ರಿಕೋ-ಪರ್ಶಿಯನ್ ಯುದ್ಧದಲ್ಲಿ ಪಿತೂರಿ ಮಾಡಿದ್ದರು ಎಂಬ ರಾಜ ದ್ರೋಹದ ಆರೋಪ ಕೇಳಿ ಬರುತ್ತೆ....

ಅವರು ಸತ್ತದ್ದು ಹೇಗೆ ಗೊತ್ತಾ..

ಕೂಡಲೇ ಅವರನ್ನ ರಾಜದ್ರೋಹದ ಆಧಾರದ ಮೇಲೆ ಬಂಧಿಸಲು ರಾಜಾಜ್ಞೆ ಬರುತ್ತೆ..

ಸಂಬಂಧ ಪಟ್ಟ ಮುಖ್ಯಸ್ಥರು ಅವರನ್ನ ಹಿಡಿಯಲು ಯೋಜನೆ ಮಾಡಿ,
ಅವರನ್ನ ಬೀದಿಯಲ್ಲಿ ಹಿಡಿಯಬೇಕು ಅಂತ ತಯಾರು ಆಗಿ,ಸೈನಿಕರು ಕಾಯುತ್ತಾ ಇರುತ್ತಾರೆ..

ಈ ವಿಷಯ ಪೊಸಾನಿಯಸ್ ಗೆ ಹೇಗೋ ತಿಳಿದು,
ಕೂಡಲೇ ತಪ್ಪಿಸಿ ಕೊಂಡು ಓಡಲು ಪ್ರಯತ್ನ ಮಾಡುತ್ತಾನೆ..

ಹಾಗೆ ಓಡುತ್ತಾ ಓಡುತ್ತಾ...

ಟೆಂಪಲ್ ಆಪ್ ಅಥೆನಾದ ಹತ್ತಿರ ಹೋಗಿ ಬಿಡುತ್ತಾನೆ,ಹಿಂದೆ ಸೈನಿಕರು ಅಟ್ಟಿಸಿಕೊಂಡು ಬರುತ್ತಾ ಇರೋದು ನೋಡಿ,ಮುಖ್ಯ ದ್ವಾರದಿಂದ,ಆಥೆನಾ ಎಂಬ ಅವರ ಪವಿತ್ರ ದೇವಸ್ಥಾನದ ಒಳಗೆ ನುಗ್ಗಿ...
ಒಳಗೆ ಕದ್ದು ಕುಳಿತು ಬಿಡುತ್ತಾರೆ..ಜೀವ ಉಳಿಸಿಕೊಳ್ಳೋಕೆ..

ಸೈನಿಕರು ತಮ್ಮ ಆಯುಧಗಳ ಸಮೇತ, ಅಥೆನಾ ಟೆಂಪಲ್ ಒಳಗಡೆ ನುಗ್ಗುವುದಿಲ್ಲ,ಅದು ಪವಿತ್ರ ಸ್ಥಳ,ರಾಜನೂ ಅದಕ್ಕೆ ಅನುಮತಿ ಕೊಡುವುದಿಲ್ಲ ಎಂಬ ಗ್ಯಾರಂಟಿ ಅವನಿಗೆ ಇತ್ತು..!

ಅವನ ಯೋಜನೆ,ಯೋಚನೆ ಸರಿ ಇತ್ತು..
ರಾಜ ಅಥೆನಾ ಒಳಗೆ ಯಾರೂ ಹೋಗಬಾರದು,ಅಲ್ಲೇ ಹೊರಗೆ ಪೊಸಾನಿಸ್ ಗೆ ಕಾಯಬೇಕು ಎಂದು ಆಜ್ಞೆ ಹೊರಡಿಸಿ ಬಿಡ್ತಾರೆ..

ಸೈನಿಕರು,ರಾಜನ ಅಣತಿಯಂತೆ ಅಥೆನಾ ದೇವಸ್ಥಾನದ ಸುತ್ತ 24/7 ಕಾವಲು ಕಾಯುತ್ತಾ ನಿಂತು ಬಿಡ್ತಾರೆ...

ಒಳಗೆ ಇರುವ ಪೊಸಾನಿಯಸ್ ಹೊರಗೆ ಯಾವುದೇ ರೀತಿಯಲ್ಲೂ ತಪ್ಪಿಸಿ ಕೊಳ್ಳದಂತೆ ನಾಖಾಬಂದಿ ಮಾಡಿರುತ್ತಾರೆ..

ಹಾಗೆ ಬಾಗಿಲಿಗೆ ಸಂಪೂರ್ಣ ಗೋಡೆ ಕಟ್ಟಿ ಮುಚ್ಚಿ ಬಿಡುತ್ತಾರೆ..

ಆದರೆ ಪೊಸಾನಿಯಸ್ಗೆ ಆದ ದೊಡ್ಡ ಸಮಸ್ಯೆ ಎಂದರೆ
ಒಳಗೆ ಆಹಾರ,ನೀರು ಇಲ್ಲ..!
ಎಷ್ಟು ದಿನ ಅಂತ ಒಳಗೆ ಉಪವಾಸ ಇರಲು ಸಾಧ್ಯ??!

ಆದರೂ
ಹೀಗೆ ಕೆಲವು ದಿನ ಉಪವಾಸವಿದ್ದು,ನಂತರ ದಿನೇದಿನೇ ನಿಶಕ್ತನಾಗಿ,ಕೃಶನಾಗಿ ಬಿಡುತ್ತಾನೆ..

ಇನ್ನೇನು ಕೊನೆ ಉಸಿರು ಇದೆ,ಯಾರ ಮೇಲೂ ದಾಳಿ ಮಾಡಲು ಶಕ್ತನಲ್ಲ ಎಂದು ದೂರದಿಂದ ಖಚಿತವಾದ ಮೇಲೆ,ನಿರಾಯುಧರಾದ ಕೆಲವರು ಅಥೆನಾ ದೇವಳದ ಒಳಗೆ ಹೋಗಿ..

ಅವನನ್ನ ಹೊರಗೆ ಎತ್ತಿ ಕೊಂಡು ತಂದು ಮಲಗಿಸುತ್ತಾರೆ..

ಅಥೆನಾ ದೇವಸ್ಥಾನದ ಒಳಗೆ ಮರಣ ಹೊಂದಿದರೆ,ದೇವಸ್ಥಾನ ಅಪವಿತ್ರವಾಗುತ್ತೆ ಎನ್ನುವ ಕಾರಣಕ್ಕೆ...!
ಜೀವ ಒಳಗೆ ಹೋಗಬಾರದು ಎನ್ನುವುದೇ ಉದ್ದೇಶ..

ಆಗಿನ್ನೂ ಕೊನೆಯ ಕ್ಷಣ ಎಣಿಸುತ್ತಾ ಇದ್ದ ಪೊಸಾನಿಸ್
ಹೊರಗೆ ತಂದು ಸ್ವಲ್ಪ ಸಮಯಕ್ಕೆ ಕೊನೆ ಉಸಿರು ಎಳೆದು ಬಿಡ್ತಾರೆ..!

ಉಪವಾಸದಿಂದ ಹಸಿವು ತಡೆಯಲೂ ಆಗದೆ..ಹೊರಗೆ ಬರಲೂ ಆಗದೆ
ಸ್ಪಾರ್ಟಾನ್ ಜನರಲ್ ಪೊಸಾನಿಯಸ್ ತಮ್ಮ ಜೀವನ ಹೀಗೆ ಅಂತ್ಯ ಮಾಡಿಕೊಂಡರು..

ಎಷ್ಟೇ ದೊಡ್ಡ ವೀರ,ಶೂರ,ದೈರ್ಯವಂತ,ಶಕ್ತಿವಂತ,ವಾರಿಯರ್ ಆದರೂ..

ಹೊಟ್ಟೆ ಯಾರಪ್ಪನ ಮನೆದು..
ಊಟ,ನೀರು ಇಲ್ಲದೇ ಬದುಕಲು ಸಾಧ್ಯವೇ..

#ಅವಿವೇಕದ_ಸಾವು

ಕಥೆ_11

#stupid_death

(ಮೂಲ:-Horrible histories)

Hampri

ಹಂಪ್ರಿ ದ ಬಹೋನ್
ಎಂಬುವವರು 1341ನೇ ಇಸವಿಯಲ್ಲಿ ನಾರ್ತ್ ಆ0ಪ್ಟನ್ ನ,ಹೇರ್ ಫೋರ್ಡ್ ನಲ್ಲಿ ಹುಟ್ಟಿ ಬೆಳೆದವರು..
ಇವರು ಪ್ರಭಲ ಆಂಗ್ಲೋ ನಾರ್ಮನ್ ಕುಟುಂಬಕ್ಕೆ ಸೇರಿದವರು ಹಾಗೂ ಇಂಗ್ಲೆಂಡ್ ನ ರಾಜ ಎಡ್ವರ್ಡ್-2 ಎದುರು ಭಂಡಾಯ ಪಡೇ ಕಟ್ಟಿ ಅವರ ವಿರುದ್ಧ ಸಮರ ಸಾರಿದವರು...

ಹಂಪ್ರಿ ತನ್ನ ಸಣ್ಣ ಸೈನ್ಯವನ್ನ ಒಗ್ಗೂಡಿಸಿ ಕೊಂಡು ಎಡ್ವರ್ಡ್ ಮೇಲೆ ಧಾಳಿ ಮಾಡಲು ಸಜ್ಜಾಗಿ ಒಮ್ಮೆ ಹೊರಟು ಬಿಡುತ್ತಾರೆ..
ಎಡ್ವರ್ಡ್-2 ಬಲಿಷ್ಠ ಸೇನೆಯನ್ನೇ ಹೊಂದಿರುತ್ತಾನೆ..
ಎಷ್ಟು ಅಂದರೂ ರಾಜನಲ್ಲವೇ?!

ಭಂಡಾಯ ಪಡೆ ಇನ್ನೆಷ್ಟು ಬಲಿಷ್ಟವಿರಲು ಸಾಧ್ಯ..!? ಎಷ್ಟು ರೀತಿ ಯುದ್ಧ ಪಟ್ಟುಗಳನ್ನ,ಹಾಕಲು ಸಾಧ್ಯ...

ಆದರೂ ಹಂಪ್ರಿ ತನ್ನ ಸೈನ್ಯದೊಂದಿಗೆ ವೀರಾವೇಶದಿಂದ ಬಹಳ ಉಮೇದಿನಿಂದ ಬಂದು ಯಾರ್ಕ್ ಶೈರ್ ಬಳಿಯ,ಬರೋ ಬ್ರಿಡ್ಜ್ ಎಂಬ ಮರದ ಸೇತುವೆ ಬಳಿ ಎಡ್ವರ್ಡ್ ಸೇನೆಯ ಮೇಲೆ ಮುಗಿಬಿದ್ದು ಸೇತುವೆಯ ಮೇಲೆ ನಿಂತು ಎದುರಾಳಿಗಳ ಜೊತೆ ಸೆಣಸುತ್ತಾ ಇರುತ್ತಾನೆ,

ಆದರೆ
ಎಡ್ವರ್ಡ್ ಸೈನ್ಯದ ಒಬ್ಬ ಸೈನಿಕ ಒಬ್ಬ ಮರದ ಸೇತುವೆ ಕೆಳಗೆ ಹೊಂಚು ಹಾಕಿ ಮೊದಲೇ ಕುಳಿತು..
ಹಂಪ್ರಿ ಅವನಿದ್ದ ಸ್ಥಳಕ್ಕೆ ಬಂದ ಕೂಡಲೇ ಸರಿಯಾದ ಜಾಗ ನೋಡಿ ಗುರಿ ಇಟ್ಟು ಕೆಳಗಿನಿಂದ ಈಟಿ ಚುಚ್ಚಿ ಬಿಡುತ್ತಾನೆ..
ಹಂಪ್ರಿ ಹಠಾತ್ ಅಗಬಾರದ ಜಾಗಕ್ಕೆ ಆದ ಧಾಳಿ ಕುಸಿದು ಬಿದ್ದು ಅಲ್ಲೇ ಮರಣ ಹೊಂದುತ್ತಾನೆ..!

ಹಂಪ್ರಿ ಎದುರು,ಅಕ್ಕ,ಪಕ್ಕ,ಹಿಂದೆ ಇದ್ದವರ ಜೊತೆ ವೀರಾವೇಶದಲ್ಲಿ ಹೋರಾಡುತ್ತಾ ಇರುವ ಭರದಲ್ಲಿ, ಕೆಳಗೆ ಈಟಿ ಹಿಡಿದು ಕಾಯುತ್ತಾ ಕೂತಿದ್ದ ಸೈನಿಕ ರೂಪದ ಜವರಾಯನನ್ನ ಗಮನಿಸದೇ..
ತಾನು ನಿರೀಕ್ಷಿಸದ ಜಾಗದಲ್ಲಿ ಚುಚ್ಚಿಸಿ ಕೊಂಡು ಬಹಳ ಸರಳವಾಗಿ ಸತ್ತರು
ಹಂಪ್ರಿ ...

ಸಾವು ಎಲ್ಲಿಲ್ಲಿ...
ಯಾವ ಯಾವ ರೂಪದಲ್ಲಿ..
ಯಾವ ಯಾವ ಜಾಗದಲ್ಲಿ..
ಹೇಗೇಗೆ ಬರುತ್ತೋ...

ತಲೆಯಿಂದ ಬುಡದವರೆಗೂ ಜಾಗ್ರತೆಯಿಂದ ನೋಡುತ್ತಾ ಇರಬೇಕು ಅಲ್ವಾ..
😂

#ಅವಿವೇಕದ_ಸಾವು

ಕಥೆ_12

#stupid_death

(ಮೂಲ:-Horrible histories)

ಹಲ್ಲಿನಿಂದ ಸಾವು

875-892 ರಲ್ಲಿ ಸಿಗರ್ಡ್ ಐನ್ಸ್ಟಿನ್ಸನ್ ಎಂಬ ಅರ್ಲೆಂಡ್ ಅಪ್ ಆರ್ಕಿ (ಈಗಿನ ಉತ್ತರ ಸ್ಕಾಟ್ಲೆಂಡ್ ನ)ಸಣ್ಣ ಪ್ರದೇಶದ ನಾಯಕರಾಗಿದ್ದರು,

ಅದೇ ಉತ್ತರ ಸ್ಕಾಟ್ಲೆಂಡ್ ನಲ್ಲಿ ಮುರ್ರೆ ಎಂಬ ಒಂದು ಜಾಗದಲ್ಲಿನ,ಪಿಕ್ಟ್ಸ್ ಜನಾಂಗದ ವರಿಷ್ಠ ನಾಯಕ ಮಯಲ್ ಬ್ರೈಟ್ ಎಂಬುವವರು ತಮ್ಮ ಜನಾ0ಗದ ಜೀವನ ಸಾಗಿಸುತ್ತಾ ಇದ್ದರು,

ಒಮ್ಮೆ ಸಿಗರ್ಡ್,ಈ ಮೂರೇ ಎಂಬ ಜನಾ0ಗದ ಜಾಗವನ್ನ ವಶ ಮಾಡಿಸಿ ಕೊಳ್ಳಲು ನಿರ್ಧರಿಸಿ,ಆ ಪ್ರದೇಶಕ್ಕೆ ತನ್ನ ಸೈನ್ಯದೊಂದಿಗೆ ದಂಡೆತ್ತಿ ಹೋಗಲು ನಿರ್ದಾರ ಮಾಡಿದರು,
ನಿರ್ಧರಿಸಿದಂತೆ ದಂಡೆತ್ತಿ ಹೋಗಿ,ವೀರಾವೇಶದಿಂದ ಹೋರಾಟ ಮಾಡಿದ ಸಿಗರ್ಡ್,ಸಂಪೂರ್ಣ ಮುರ್ರೆ ಜಾಗ ಹಾಗೂ ಪಿಕ್ಟ್ಸ್ ಜನಾಂಗದ ಮೇಲೆ ಹಿಡಿತ ಸಾಧಿಸಿ..

ಕೊನೆಗೆ
ಅವರ ನಾಯಕ,ಮಯಿಲ್ ಬ್ರೈಟ್ ನ ತಲೆಯನ್ನ ಕಡಿದು,
ವಿಜಯದ ಸಂಕೇತವಾಗಿ ಪ್ರಶಸ್ತಿಗಳಿಸಿ,ಟ್ರೋಫಿ ಯನ್ನ ಎತ್ತಿ ತರುವಂತೆ,
ತನ್ನ ಪ್ರದೇಶದ ಜನಕ್ಕೆ ತೋರಿಸಲು
ಆ ಕಡಿದ ಮುಂಡವನ್ನ ಹಿಡಿದು ಕೊಂಡು ಕುದುರೆ ಹತ್ತಿ ತನ್ನ ಊರಿನ ಕಡೆಗೆ ಹೊರಟನಂತೆ..!?

ಅದ್ರಲ್ಲೇನು ವಿಶೇಷ ಅಂತೀರಾ?

ಇದರಲ್ಲಿ ಒಂದು ಟ್ವಿಸ್ಟ್ ನೋಡಿ..

ಯುದ್ಧ ಗೆದ್ದು,ಕುದುರೆ ಹತ್ತಿದ ಸಿಗರ್ಡ್,ತಾನು ಕಡಿದ ವೈರಿಯ ತಲೆಯನ್ನ,ತನ್ನ ಹಿಂದೆ ಕಾಲು ಬುಡದಲ್ಲಿ ಕಟ್ಟಿ ನೇತು ಹಾಕಿಕೊಂಡು ವೇಗವಾಗಿ ಖುಷಿಯಿಂದ ತನ್ನ ಪ್ರದೇಶಕ್ಕೆ ಬಂದು ಇಳಿದಿದ್ದಾರೆ..

ತಾನು ಧಾಳಿ ಮಾಡಿ,ಗೆದ್ದ ಸಂಭ್ರಮ ಆಚರಣೆ ಎಲ್ಲಾ ಮುಗಿದು ತನ್ನ ಆಡಳಿತದ ಬಗ್ಗೆ ಗಮನ ಹರಿಸುತ್ತಾ ಇದ್ದ ಈತನಿಗೆ,ಒಂದು ಆಘಾತ ಕಾದಿತ್ತು,!

ಯುದ್ಧ ಗೆದ್ದು,ಕುದುರೆ ಓಡಿಸಿಕೊಂಡು ಬರುತ್ತಾ ಇರುವಾಗ,ಹಿಂದೆ ಕಟ್ಟಿದ್ದ ಮಯಲ್ ಬ್ರೈಟ್ ನ ಹಲ್ಲು ಕಾಲಿಗೆ ತಾಗಿ ಗಾಯವಾಗಿತ್ತು,ಅದು ಸ್ವಲ್ಪ ದಿನಕ್ಕೆ ಸೆಪ್ಟಿಕ್ ಆಗಿ ಬಿಟ್ಟಿತ್ತು,
ಅದೇ ಉಲ್ಬಣವಾಗಿ ಗ್ಯಾಂಗ್ರೀನ್ ಜಾಸ್ತಿಯಾಗಿ ಮರಣ ಹೊಂದಿದರು ಈ ಸಿಗರ್ಡ್..!

ವೈರಿಯನ್ನ ಸಾಯಿಸಿ ತಲೆ ಕಡಿದರೂ,ವೈರಿಯ ಹಲ್ಲು ಛಲ ಬಿಡದೇ ತನ್ನ ಹೋರಾಟ ಮುಂದುವರೆಸಿ ಸೇಡು ತೀರಿಸಿ ಕೊಂಡೇ ಬಿಡ್ತು ನೋಡಿ..

ಕಡಿದ ತಲೆಯಲ್ಲಿ ಇದ್ದ ಅವನ ತುರೆ ಮಣೆ ಹಲ್ಲಿನಿಂದ,ಅಂತಹಾ ದೊಡ್ಡ ಶೂರ,ಗೆಲವಿನ ಸರದಾರನ,ಸಾವು ಆಯ್ತು ಅಂದ್ರೆ ಮರ್ಯಾದೆ ಪ್ರಶ್ನೆ ಅಲ್ವಾ ಮರ್ರೆ..
ಥೋ...

#ಅವಿವೇಕದ_ಸಾವು

ಕಥೆ_05

#stupid_death

(ಮೂಲ:-Horrible histories)

ಅಲ್ಡಬ್ರಾ ದೈತ್ಯ ಆಮೆ

ಆಮೆ..
ಆಮೆ ಎಂದ ತಕ್ಷಣ ನಮಗೆ ನೆನಪಾಗೋದು..
ಆಮೆ ಮೊಲದ ಓಟದ ಸ್ಪರ್ಧೆ..
Slow and study wins race ಅನ್ನೋ ಮಾತು ಅಲ್ವಾ..

ಅಲ್ಡಬ್ರಾ ದೈತ್ಯ ಆಮೆ (Aldabra Giant Tortoise)ಜಗತ್ತಿನ ಅತಿ ದೊಡ್ಡ ಆಮೆಗಳು ಎಂದು ಖ್ಯಾತಿ ಪಡೆದಿವೆ..

ಇವು ಅಲ್ಡಬ್ರಾ ದ್ವೀಪ ಗಳಲ್ಲಿ(Aldabra Island) ಸಿಕ್ಕಿದ್ದರಿಂದ ಈ ಹೆಸರು ಬಂದಿದೆ ಎನ್ನಲಾಗಿದೆ..
ಇವುಗಳು ಹಿಂದೂ ಮಹಾಸಾಗರದ(Indian Ocean) ಕೆಲವು ದ್ವೀಪಗಳಲ್ಲಿ ಹಾಗೂ ಮಡಗಾಸ್ಕರ್ ನಲ್ಲಿ ಹೆಚ್ಚಾಗಿ ಕಾಣ ಸಿಗುತ್ತವೆ..
ಪಳೆಯುಳಿಕೆ ಮಾಹಿತಿಯ ಹಾಗೂ ದಾಖಲೆಯ ಪ್ರಕಾರ,ಆಸ್ಟ್ರೇಲಿಯಾ ಹಾಗೂ ಅಂಟಾರ್ಟಿಕ ಕೆಲವು ಪ್ರದೇಶ,ಬಿಟ್ಟು ಹೆಚ್ಚಿನ ಖಂಡ ಹಾಗೂ ದ್ವೀಪಗಳಲ್ಲಿ ಇವುಗಳ ವಾಸದ ಕುರುಹು ಸಿಕ್ಕಿದೆಯಂತೆ..!

ಹಿಂದೂ ಮಹಾಸಾಗರದಲ್ಲಿನ ಹಲವು ವಿಶೇಷ ಜೀವಿಗಳು ಯುರೋಪಿನ ನಾವಿಕರ ನಿರಂತರ ಶೋಷಣೆಯಿಂದ ಹಾಗೂ ಸೆರೆ ಹಿಡಿಯೋದು,ಭೇಟೆ ಯಾಡೋದು ಮಾಡಿದ್ದರಿಂದ ಅಲ್ಡಬ್ರಾ ಆಮೆ ಯೊಂದನ್ನ,ಬಿಟ್ಟು ಹಲವು ಅಪರೂಪದ ಇನ್ನಿತರ ಕೆಲವು ಸಾಗರ ಜೀವಿಗಳು ಅಳಿವಿನಂಚಿಗೆ ಬಂದು ನಿಂತಿದ್ದವು ಎನ್ನಲಾಗಿದೆ..!

ಉದ್ದನೆಯ ಕತ್ತನ್ನ ಹೊಂದಿರುವ ಇವು,ಆಹಾರವನ್ನ ತಿನ್ನಲು ಸಹಾಯ ಮಾಡುತ್ತವಂತೆ,ದಪ್ಪನೆಯ ಕಾಲು ಹಾಗೂ ಉಗುರು,
ಸುಮಾರು 48 ಇಂಚು ಉದ್ದನೆಯ ಚಿಪ್ಪು ಹೊಂದಿರುವ ಇವು 250 ಕೆ.ಜಿಗೂ ಹೆಚ್ಚು ತೂಕ ವಿರುತ್ತವೆ..
ಹೆಣ್ಣು ಗಂಡಿಗಿಂತ ಗಾತ್ರದಲ್ಲಿ ಚಿಕ್ಕದಿರುತ್ತದೆ,
ಸುಮಾರು 36 ಇಂಚು ಉದ್ದನೆಯ ಚಿಪ್ಪು ಹೊಂದಿರುತ್ತದೇ,ತೂಕ 159 ಕೆ.ಜಿ ವರೆಗೆ ಇರುತ್ತದೆ,
ಸಾಮಾನ್ಯ ಗಾತ್ರದವು 70 ರಿಂದ 110 ಕೆ.ಜಿ ತೂಕ ವಿರುತ್ತವೆ..
ಫೆಬ್ರವರಿ ಮತ್ತೆ ಮೇ ತಿಂಗಳಲ್ಲಿ ಹೆಣ್ಣಾಮೆ 9 ರಿಂದ 25 ಮೊಟ್ಟೆಗಳನ್ನ ಇಡುತ್ತವೆ ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಮೊಟ್ಟೆ ಮರಿಯಾಗುತ್ತವೆ, 8 ತಿಂಗಳವರೆಗೆ ಕಾವು ಕೊಟ್ಟ ನಂತರ ಆಕ್ಟೊಬರ್ ನಿಂದ ಡಿಸೆಂಬರ್ ವರೆಗೆ ಮರಿಗಳು ಮೊಟ್ಟೆಒಡೆದು ಹೊರಬರುತ್ತವೆ..

ಈ ದೈತ್ಯ ಆಮೆಗಳು ಸಸ್ಯಾಹಾರಿಗಳು...
ಹುಲ್ಲು,ಎಲೆ,ಹಾಗೂ ಮರದ ತೊಗಟೆಯನ್ನ ತಿಂದು ಜೀವಿಸುತ್ತವಂತೆ..
ಆದರೆ
ಅಪರೂಪಕ್ಕೆ ಹುಳ ಹಾಗೂ ಪ್ರಾಣಿ ತಿನ್ನುವುದೂ ಇದೆಯಂತೆ!..
ಒಮ್ಮೊಮ್ಮೆ ಸತ್ತ ಬೇರೆಯ ಆಮೆಗಳ ದೇಹವನ್ನೂ ತಿನ್ನುವುದು ಇದೆ ಎನ್ನಲಾಗಿದೆ..!
ಬಹಳ ಸೋಮಾರಿಗಳಾದ ಇವುಗಳು ದಿನದಲ್ಲಿ ನಾಲ್ಕು ಗಂಟೆ ಮಾತ್ರ ಆಕ್ಟೀವ್ ಇರುತ್ತವೆ ಎನ್ನಲಾಗಿದೆ..

ಅಲ್ಡ್ರಬ್ರಾ ದೈತ್ಯ ಆಮೆ ಗಳು(Aldabra Giant Tortoise) ಹೆಚ್ಚಾಗಿ ಸಂಘಜೀವಿಗಳು ಗುಂಪಿನಲ್ಲಿ ಜೀವಿಸುತ್ತವೆ,ಹಗಲಿನಲ್ಲಿ ಆಹಾರ ಹುಡುಕುತ್ತಾ ಇರುತ್ತವೆ,ರಾತ್ರಿ ನಿದ್ರೆಗೆ ಜಾರುತ್ತವೆ..
ಹಗಲಿನಲ್ಲಿ ಶೆಖೆ ಹೆಚ್ಚಾದಾಗ ಕೆಸರು ಅಥವಾ ಕಂಪದಲ್ಲಿ ಹೊಂಡ ಮಾಡಿ ಕೂತು ದೇಹವನ್ನ ತಣ್ಣಗೆ ಮಾಡಿಕೊಳ್ಳುತ್ತವೆ..

ಹೆಚ್ಚಿನ ಅಲ್ಡ್ರಬ್ರಾ ಆಮೆ ಸಂಖ್ಯೆ ಹಿಂದೂ ಮಹಾಸಾಗರದ ಅಟೋಲ್ ಎಂಬ ದ್ವೀಪದಲ್ಲಿ ಇದೆಯಂತೆ ಅಲ್ಲಿಗೆ ಮನುಷ್ಯರ ಪ್ರವೇಶ ಇಲ್ಲದೆ ಇರೋದು ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ..!
1ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ಇಲ್ಲಿ ಈ ಪ್ರಭೇಧದ ಆಮೆ ಗಳು ಜೀವಿಸುತ್ತಾ ಇವೆಯಂತೆ..
ಇದು ಜಗತ್ತಿನಲ್ಲೇ ಅತಿ ಹೆಚ್ಚು ಸಂಖ್ಯೆಯಲ್ಲಿ ಒಂದೇ ಪ್ರಭೇಧದ ಪ್ರಾಣಿಗಳು ಒಂದೇ ಕಡೆ ವಾಸಿಸುವ ಪ್ರದೇಶ ಎನ್ನಲಾಗಿದೆ..!


ಒಂದು ಮೂಲದ ಪ್ರಕಾರ 200 ವರ್ಷ ಇವುಗಳ ಜೀವಿತಾವಧಿ ಎನ್ನಲಾಗಿದೆ..ಆದ್ರೆ ಅದನ್ನ ಇಂತಿಷ್ಟೇ ಅಂತ ಸರಿಯಾಗಿ ಎಲ್ಲೂ ದಾಖಲೆ ಇಟ್ಟಿಲ್ಲ..ಕಾರಣ ಮನುಷ್ಯ ಅಷ್ಟು ವರ್ಷ ಬದುಕಲ್ಲ ಅಲ್ವಾ...😁😂
ಅದರ ವಯಸ್ಸು ಲೆಕ್ಕ ಇಡೋಕೆ ಅವಕ್ಕೆ ಲೆಕ್ಕ ಬರಲ್ಲ..😂
ಮರಗಳ ರಿಂಗ್ ನೋಡಿ ವಯಸ್ಸು ಅವುಗಳ ನಿರ್ಧರಿಸಿದ ಹಾಗೆ ಇವುಗಳ ಚಿಪ್ಪಿನ ಮೇಲೆ ಇರುವ ರಿಂಗ್ ನೋಡಿ ಕೆಲವೊಮ್ಮೆ ನಿರ್ಧರಿಸುತ್ತಾರೆ ಎನ್ನಲಾಗಿದೆ..!

ಅದ್ವೈತ ಎಂಬ(Aldabra Giant Tortoise) ಆಮೆಯನ್ನ 18 ನೇ ಶತಮಾನದಲ್ಲಿ ಹಿಂದೂ ಮಹಾಸಾಗರದಲ್ಲಿನ ಸಿಚೆಲ್ ದ್ವೀಪದಲ್ಲಿ ಬ್ರಿಟಿಷ್ ನೌಕಾಪಡೆ ಹಿಡಿದು ತಂದು,ಈಸ್ಟ್ ಇಂಡಿಯಾ ಕಂಪನಿಯ ರಾಬರ್ಟ್ ಕ್ಲೈವ್ ಎಂಬುವ ಅಧಿಕಾರಿಗೆ ಕೊಡುಗೆ ನೀಡಿದ್ದರಂತೆ,ಆ ದೈತ್ಯ ಆಮೆಯನ್ನ ಅಂದಿನ ಕಲ್ಕತ್ತಾ (ಈಗಿನ ಕೋಲ್ಕೊತ್ತಾ)ಮೃಘಾಲಯದಲ್ಲಿ 1875ರಲ್ಲಿ ಇಡಲಾಗಿತ್ತಂತೆ..

ಅದ್ವೈತ 2006 ಮಾರ್ಚ್ ನಲ್ಲಿ ಮರಣ ಹೊಂದಿತ್ತು ಎನ್ನಲಾಗಿದೆ..
ಈ ಆಮೆ ಸುಮಾರು 255 ವರ್ಷ ಜೀವಿಸಿ
ಅತ್ಯಂತ ಹೆಚ್ಚು ವರ್ಷ ಜೀವಿಸಿದ ಆಮೆ ಎಂಬ ಹೆಗ್ಗಳಿಕೆ ಹೊಂದಿದೆ..(1755 ಹುಟ್ಟಿದ್ದು ಎನ್ನಲಾಗಿದೆ)

2016ರ ವರದಿಯ ಪ್ರಕಾರ ಸಿಚೆಲ್ ದೈತ್ಯ ಆಮೆ(Seychelles Giant Tortoise) 188 ವರ್ಷ ಬದುಕಿರುವ ಅತ್ಯಂತ ಹಿರಿಯ ಆಮೆ..ಜೋನಾಥನ್ ಅದರ ಹೆಸರು..

ಅಲ್ಡ್ರಬ್ರಾ ದೈತ್ಯ ಆಮೆ(Aldabra Giant Tortoise) ಅದ್ವೈತನ ನಂತರ 176 ವರ್ಷ ಬದುಕಿದ್ದದ್ದು ಹರಿಯತ್ ಎಂಬ ಆಮೆ ಎನ್ನಲಾಗಿದೆ..!

ಈ ಫೋಟೋ ಮತ್ತು ವೀಡಿಯೊ ತೆಗೆದದ್ದು ಬ್ಲಾಕ್ ಪೂಲ್ ಮೃಘಾಲಯದಲ್ಲಿ
ಇವನ ಹೆಸರು ಡಾರ್ವಿನ್ ವಯಸ್ಸು ಸುಮಾರು 100 ದಾಟಿದೆ ಎನ್ನಲಾಗಿದೆ..
ಇವನಿಗೆ ಮೆಲನ್ ಹಾಗೂ ತರಕಾರಿ ಬಹಳ ಇಷ್ಟವಂತೆ..
ಅವನ ಗಾತ್ರ ಹಾಗೂ ನಡಿಗೆಯ ವೇಗ ನೀವೇ ನೋಡಿ..



ರೆಡ್ ಪಾ0ಡಾ

ನೋಡಿ..
ಇವನಿಗೆ ಪುಲ್ ಗಾಂಚಲಿ,ಎಷ್ಟು ಹೊತ್ತು,ಈ ಕಡೆ ಈಗ ತಿರುಗ್ತಾನೆ ಈಗ ತಿರುಗ್ತಾನೆ ಅಂತ ಕ್ಯಾಮೆರಾ ಹಿಡಿದು ನಿಂತರೂ ಅವನ ಪಾಡಿಗೆ ಅವನು ಮಜಾ ತಗೊಳ್ತಾ ಬಿದಿರು ತಿನ್ನೋದ್ರಲ್ಲಿ ಬ್ಯುಜಿ..

ಏಯ್..ಹೊಗ್ರೋ ಅತ್ಲಾಗೆ ದಿನ ಬೆಳಗಾದ್ರೆ ನಿಮ್ಮದು ಇದ್ದಿದ್ದೇ..ನಿಮ್ಮನ್ನ ಹುಲಿ ಹಿಡಿಯಾ,ನನ್ನ ಹೊಟ್ಟೆ ಪಾಡು ನಾನು ನೋಡ್ತೇನೆ ಅನ್ನೋ ಹಾಗಿತ್ತು ಅವನ ವರ್ತನೆ...

ಮತ್ತೆ ಇನ್ನೊಂದು "ವಿಶೇಷ" ಏನು ಗೊತ್ತಾ,
ಅಲ್ಲಿ ಬರುವ ಪ್ರವಾಸಿಗರು,
ಚುಪ್..ಚುಪ್..
ಕೂ.. ಕೂ..
ಶು..ಶ್..
ಹೈ..ಹೈ..
ಟಕ್..ಟಕ್..
ಅಂತೆಲ್ಲಾ ಶಬ್ದಮಾಡುತ್ತಾ,ಕೈ ಗೆ ಸಿಕ್ಕಿದ್ದನ್ನ ಗುರಿ ಇಟ್ಟು ಅವುಗಳ ಕಡೆ ಎಸೆಯುತ್ತಾ,
ಯಾವುದೇ ಪ್ರಾಣಿಗಳಿಗೆ ತೊಂದರೆ ಮಾಡುವ ಅಭ್ಯಾಸವೂ ಇರಲ್ಲ..
ಎಷ್ಟೆ ಚಿಕ್ಕ ಮಕ್ಕಳಾದ್ರೂ ಅಷ್ಟೇ..

ಪ್ರಾಣಿಗಳು ಹೇಳಿದ ಹಾಗೇ ನಾವು ಕೇಳಬೇಕು..
ಅಷ್ಟೇ..

ಜನ ಸರಿ ಇಲ್ಲ ಬಿಡಿ ಅಲ್ವಾ..!!!😂

ಈ ಸುಂದರ ಪ್ರಾಣಿಯ ಹೆಸರು ರೆಡ್ ಪಾಂಡಾ,(Red Panda)

ಲೆಸರ್ಪಾಂಡಾ/ರೇಡಿಬಿಯರ್ ಕ್ಯಾಟ್/ರೆಡ್ ಕ್ಯಾಟ್ ಬಿಯರ್,ತ್ರು ಪಾಂಡಾ,ಕಾಮನ್ ಪಾಂಡ ಅಂತಲೂ ಹಲವು ನಾಮಧ್ಯೇಯದಿಂದ ಕರೆಸಿಕೊಳ್ಳುತ್ತವೆ ಇವು..
ನೇಪಾಲಿಯಲ್ಲಿ ಪೋನ್ಯಾ ಅಂತಾರಂತೆ ಅಂದರೆ ಬಿದಿರು ತಿನ್ನುವವನು ಅಂತ..😛


ನೋಡೋಕೆ ಹೆಚ್ಚು ಕಡಿಮೆ ಬೆಕ್ಕಿನಕ್ಕಿಂತ ಸ್ವಲ್ಪ ದೊಡ್ಡದಾಗಿ ಕಾಣುವ ಇವುಗಳು ಕೆಂಪು,ಕಂದು ಕೂದಲು ಬಣ್ಣ ಬೆನ್ನಮೇಲೆ ಹಾಗೂ ಬಾಲದಲ್ಲಿ ಹೊಂದಿರುತ್ತವೆ,ಹೊಟ್ಟೆಯಬಾಗದಲ್ಲಿ ಕಪ್ಪು ಬಣ್ಣದ ಕೂದಲು ಹಾಗೂ ಮುಖದಲ್ಲಿ,ಕಿವಿಯ ಕೆಲವು ಭಾಗ ಬಿಳಿಯ ಬಣ್ಣದ ಕೂದಲು ಇದೆ,ದೇಹದ ಹೆಚ್ಚಿನ ಭಾಗ ಕೆಂಪು ಕೂದಲು ಇರುವುದಕ್ಕೆ ರೆಡ್ ಪಾಂಡಾ ಎಂದು ಕರೆಯುತ್ತಾರೆ..!!!

ಇವುಗಳು ನಿದ್ರೆಯಿಂದ,ಎದ್ದ ನಂತರ ಬೆಕ್ಕುಗಳಂತೆ ಮೈಯನ್ನ,ಮುಖವನ್ನ ತಮ್ಮ ಕಾಲಿನ ಮೂಲಕ ಸ್ವಚ್ಛ ಮಾಡಿಕೊಳ್ಳೋದು ಸಾಮಾನ್ಯವಂತೆ,ಹಳ್ಳಿಯ ಕಡೆ ಬೆಕ್ಕು ಮುಖ ತೊಳಿತಾ ಇದೆ ಅಂತಾರಲ್ಲ ಹಾಗೆ ಇದೂ ಮಾಡುತ್ತೆ,ಹಾಗೆ ತಮ್ಮ ಜಾಗವನ್ನ ಗುರುತಿಸಲು ತಮ್ಮ ಮೂತ್ರ ವಿಸರ್ಜನೆ ಮಾಡಿ ಮಾರ್ಕ್ ಮಾಡುತ್ತವಂತೆ...
ಅದನ್ನ ಅಧರಿಸಿಯೇ ಅವುಗಳು ತಮ್ಮ ಜಾಗ ಹಾಗೂ ದಾರಿಯನ್ನ ಗುರುತು ಹಿಡಿಯುತ್ತವೆಯಂತೆ,ನಾಯಿ ಹಾಗೂ ಕೆಲವು ಪ್ರಾಣಿಗಳು ಈ ರೀತಿಯೇ ಮಾಡೋದು ಸಾಮಾನ್ಯವಾಗಿ ಗಮನಿಸಿರುತ್ತೇವೆ..
ಎತ್ತರದ ಮರಗಳನ್ನ,ಬಂಡೆಗಳನ್ನ ಬಹಳ ಸುಲಭವಾಗಿ ಹತ್ತಲು ಅವುಗಳ ಕೈಗಳ ವಿನ್ಯಾಸ,ಪಂಜಗಳು ಬಹಳ ಸಹಾಯಕವಂತೆ..

ಸುಮಾರು 20 ರಿಂದ 25 ಇಂಚು ಉದ್ಧವಿರುತ್ತವೆ, ಬಾಲ 11 ರಿಂದ 23 ಇಂಚು ಉದ್ಧವಿರುತ್ತವೆ,
ಗಂಡು 3.7 ರಿಂದ 6.2 ಕೆ.ಜಿ,ಹೆಣ್ಣು 3 ರಿಂದ 6 ಕೆ.ಜಿ ತೂಕವಿರುತ್ತವೆ..
ಇವುಗಳು ಸಂತಾನೋತ್ಪತ್ತಿ,112 ರಿಂದ 158 ದಿನ ಗರ್ಭದರಿಸಿ..ಸುಮಾರು 1 ರಿಂದ ನಾಲ್ಕು ಮರಿಯವರೆಗೆ ಒಮ್ಮೆಗೆ ಜನ್ಮ ಕೊಡಲು ಸಾಮರ್ಥ್ಯ ಹೊಂದಿವೆ..
ಮರಿಗಳ ಜನ್ಮ ಕೊಡುವ ಸ್ವಲ್ಪ ದಿನದ ಮೊದಲು ತಾಯಿ,ಎಲೆ,ಕಡ್ಡಿ,ಹುಲ್ಲು ಬಳಸಿ,ಮರದ ಪೊಟರೆ ಅಥವಾ ಕಲ್ಲಿನ ಬಿರುಕು ಅಥವಾ ರಂಧ್ರದಲ್ಲಿ ಗೂಡನ್ನು ಮಾಡಿ ನಂತರ ಅಲ್ಲಿಯೇ ಮರಿಗಳನ್ನ ಹಾಕುತ್ತದೆಯಂತೆ,
ಹುಟ್ಟಿದಾಗ ಮರಿಗಳು 110 ರಿಂದ 130 ಗ್ರಾಮ್ ತೂಕವಿರುತ್ತವೆ ಹಾಗೂ
ಕುರುಡು ಹಾಗೂ ಕಿವಿ ಕೇಳಿಸುವುದಿಲ್ಲ,16 ರಿಂದ 18 ದಿನಕ್ಕೆ ನಿಧಾನವಾಗಿ ಕಣ್ಣು ತೆರೆಯುತ್ತದೆ ಹಾಗೂ ಕಿವಿಗಳು ಕೆಲಸ ಮಾಡಲು ಪ್ರಾರಂಭಿಸುತ್ತವೆ,90 ದಿನಕ್ಕೆ ಸಂಪೂರ್ಣ ಮೈ ಮೇಲೆ ಕೂದಲು ಬರಲು ಪ್ರಾರಂಭವಾಗುತ್ತದೆ..6 ರಿಂದ 8 ತಿಂಗಳಿಗೆ ಇವುಗಳು ತಮ್ಮ ಆಹಾರ ತಾವೇ ಹುಡುಕಿ ಸೇವಿಸಲು ಪ್ರಾರಂಭಿಸುತ್ತವೆ,ಇನ್ನೊಂದು ಮರಿ ಹಾಕುವವರೆಗೆ ತಾಯಿ ತನ್ನ ಮರಿಗಳ ಜೊತೆಯೇ ಇರೋದು ಸಾಮಾನ್ಯವಂತೆ. !
ರೆಡ್ ಪಾಂಡಾ ಗಳು
10°ರಿಂದ 25° ತಾಪಮಾನದ ಪ್ರದೇಶದಲ್ಲಿ ಇವುಗಳ ಹೆಚ್ಚಾಗಿ ಜೀವಿಸುತ್ತವೆ..

ಇವಕ್ಕೆ ಬಿದಿರು ಹಾಗೂ ಕಳಲೇ ಬಹಳ ಅಚ್ಚು ಮೆಚ್ಚಿನ ಆಹಾರ,ಹಾಗೆ ಹಣ್ಣು,ಹುಲ್ಲು,ಮೊಟ್ಟೆ,ಮೀನು ಕೆಲವು ಪಕ್ಷಿಗಳನ್ನು,ಕೀಟಗಳನ್ನು ಕೂಡ ಭೇಟೆಯಾಡಿ ಭಕ್ಷಿಸುತ್ತವೆ..

ಭಾರತದ,ಸಿಕ್ಕಿಂ,ಹಿಮಾಚಲ ಪ್ರದೇಶ,ಹಿಮಾಲಯ,ಚೀನಾ,ಭೂತಾನ್,ಬರ್ಮಾ ಹಾಗೂ ಇನ್ನಿತರೆ ಪ್ರದೇಶದಲ್ಲಿ ಇವುಗಳು ಹೆಚ್ಚಾಗಿ ಕಂಡು ಬರುತ್ತವೆ..

ಇತ್ತೀಚಿನ ದಿನದಲ್ಲಿ ಅರಣ್ಯ ನಾಶ, ಮನುಷ್ಯರು ಬೇಟೆಯಾಡೋದು,ಕಳ್ಳ ಸಂತೆಯಲ್ಲಿ ಮಾರಾಟ,ಮನೆಗಳಲ್ಲಿ ಸಾಕಿಕೊಳ್ಳೋದು,ಸಾಕಿದ ಇವುಗಳಲ್ಲಿ ಸಂತಾನೋತ್ಪತ್ತಿ ಬಹಳ ಕಡಿಮೆಯಾಗುತ್ತಾ ಇರುವುದು ಹಾಗೂ ಕೆಲವು ಪ್ರಾಣಿಗಳ ದಾಳಿಯಿಂದ ಇವುಗಳ ಸಂತತಿ ವಿನಾಶದ ಅಂಚಿನಲ್ಲಿ ಬಂದು ನಿಂತಿದೆಯಂತೆ...

ಬ್ಲಾಕ್ ಪೂಲ್ ಮೃಘಾಲಯದಲ್ಲಿ ಕಂಡ ಇವನು..
ಪೋಸ್ ಮಾತ್ರ ಕೊಡಲಿಲ್ಲ..
ಇವನ ಸೊಡ್ಡಿಗೆ ವರ್ಲೆ ಹಿಡಿಯಾ..
❤️


ಆಡ್ವರ್ಕ್

ಆಡ್ವರ್ಕ್ ಎನ್ನುವ(Aardvark) ಸಸ್ತನಿ ಕಂಡು ಬರೋದು ಆಫ್ರಿಕಾ ಖಂಡದಲ್ಲಿ.

ಈ ಜೀವಿಗಳು ನೋಡಲು ಹಂದಿಯ
ರೀತಿ ಕಾಣುವ ಚೂಪಾಗಿರುವ ಮೂತಿಯನ್ನ ಹೊಂದಿರುತ್ತವೆ,ಇದು ವಾಸನೆ ಗ್ರಹಿಸಲು ಹಾಗೂ ಆಹಾರ ತೆಗೆದು ತಿನ್ನಲು ಸಹಾಯಕ,
ನೋಡಲು ಧಡೂತಿ ದೇಹಿಯಾಗಿರುವ ಇವುಗಳು, ತಿನ್ನೋದು ಇರುವೆ ಹಾಗೂ ವರಲೇ(ಗೆದ್ದಲು)....

ಇವು ನಿಷಾಚರಿಗಳಾಗಿವೆ,ರಾತ್ರಿ ವೇಳೆ ಆಹಾರ ಅಂದರೆ,ಇರುವೆ ಹಾಗೂ ಗೆದ್ದಲು ಗೂಡನ್ನು ಹುಡುಕಿ,ತನ್ನ ಶಕ್ತಿಯುತ ಪಂಜ ಹಾಗೂ ಉಗುರುಗಳಿಂದ ಮಣ್ಣನ್ನ ಹೊರ ತೆಗೆದು ತಿಂದು ಬಿಡುತ್ತವೆ..

ಇವುಗಳು ವಾಸ ಮಾಡಲು ಹಾಗೂ ಸಂತಾನ ಅಭಿವೃದ್ಧಿಯ ಸಮಯಕ್ಕೆ ಸಹಾಯವಾಗಲು ಬಿಲವನ್ನ ತೋಡುವುದು ಸಾಮಾನ್ಯ..
ಇವಗಳನ್ನ African Ant eater ಎಂದು ಕರೆಯುವುದು ಇದೆಯಂತೆ ಆದರೆ ಅಮೆರಿಕನ್ ಆಂಟ್ ಈಟರ್ ಗಳು ಬೇರೆ...
ಎರಡರ ನಡುವೆ ಬಹಳ ವ್ಯತ್ಯಾಸ ಇದೆ..!

ಆರ್ಡ್ವಕ್ ಎಂದರೆ ಅರ್ಥ್ ಪಿಗ್/ಗ್ರೌಂಡ್ ಪಿಗ್ ಅಂತ ಅರ್ಥ ಬರುತ್ತಂತೆ...

ಆರ್ಡ್ವಕ್ ಗೆ ಹಾಗೂ ಹಂದಿ ಅಥವಾ ಅಂಟ್ ಈಟರ್ ಗೆ ಯಾವುದೇ ಸಂಬಂಧ ಅಥವಾ ಅವುಗಳ ಸಂತತಿ ಅಲ್ಲ..!

ಆರ್ಡ್ವಕ್ ಗಳ ದೇಹ ರಚನೆ,ಮೇಲೆ ಹೇಳಿದಂತೆ ಹಂದಿಯ ರೀತಿಯ ಮುಖ ಹಾಗೂ ಹಿಂದಿನ ಕಾಲು ಉದ್ದ,ಮುಂದಿನ ಕಾಲು ಗಿಡ್ಡದಾಗಿರುತ್ತೆ..
ಮುಂದಿನಕಾಲಿನಲ್ಲಿ 4 ಬೆರಳು,5ಬೆರಳು ಹಿಂದಿನ ಕಾಲಲ್ಲಿ ಇರುತ್ತೆ ಹಾಗೂ ಚೂಪಾದ ಉಗುರುಗಳು ಇರುತ್ತವೆ..ಇದೆ ಇವಕ್ಕೆ ಗೂಡು ಮಾಡಿ ಕೊಳ್ಳಲು ಹಾಗೂ ಇರುವೆ,
ಗೆದ್ದಲಿನ ಗೂಡು ತೆಗೆಯಲು ಆಯುಧವಾಗಿವೆ..

ಆರ್ಡ್ವಕ್ ಸುಮಾರು 60 ರಿಂದ 80 ಕೆ.ಜಿ ತೂಕ
ಹಾಗೂ 3.44 ರಿಂದ 4.27 ಅಡಿ ವರೆಗೆ ಉದ್ಧವಿರುತ್ತವೆ..
ಬಾಲವೂ ಸೇರಿದರೆ 7 ಅಡಿ 3 ಇಂಚು ವರೆಗೆ ಉದ್ಧವಿರುತ್ತವೆ,(ಬಾಲ 28 ಇಂಚುವರೆಗೂ ಉದ್ಧವಿರುತ್ತವೆ)..
ಎತ್ತರ ಸುಮಾರು 24 ಇಂಚು ಎನ್ನಲಾಗಿದೆ..

ಬಣ್ಣ ಅರಿಶಿನ ಕಂದು,
ತಲೇ,ಬಾಲದಲ್ಲಿ ಸ್ವಲ್ಪ ಕೂದಲು ಹಾಗೂ ಕಾಲಿನ ಭಾಗದಲ್ಲಿ ಉದ್ಧನಾದ ಕೂದಲು ಹೊಂದಿದ್ದು, ಇವುಗಳ ಚರ್ಮ ತುಂಬಾ ಒರಟಾಗಿರುತ್ತದೆ,ಮೂಗಿನ ಭಾಗದಲ್ಲಿ ಕೂದಲು ಇರುವುದು ಮಣ್ಣನ್ನ ತೆಗೆಯುವಾಗ ಮಣ್ಣು,ದೂಳು ಒಳ ಹೋಗದಂತೆ ಪ್ರೊಟೆಕ್ಟ್ ಮಾಡಿ ಸಹಾಯ ಮಾಡುತ್ತದೆ..

ಆರ್ಡ್ವಕ್ ಗಳಿಗೆ ಮೇಲೆ14,ಕೆಳಗೆ12,
ಹಲ್ಲಿನ ಪಂಕ್ತಿ ಗಳು ಇರುತ್ತವೆ,
ಇವು ಸವೆದು ಹೋದ ಹಾಗೆ ಮತ್ತೆ ಮತ್ತೆ ಬೆಳೆಯುತ್ತದೇ....!

12 ಇಂಚು ಉದ್ದದ ನಾಲಿಗೆ ಹಾಗೂ 7.9 ರಿಂದ 8 ಇಂಚು ಉದ್ದದ ಚುರುಕಾದ ಕಿವಿ ಹೊಂದಿವೆ,ರಾತ್ರಿ ವೇಳೆ ಸಹಾಯವಾಗುವಂತೆ ಕಣ್ಣಿನ ವಿನ್ಯಾಸ ಹೊಂದಿವೆ..

ಇವುಗಳ ಸಂತಾನೋತ್ಪತ್ತಿ 7 ತಿಂಗಳು ಗರ್ಭ ಧರಿಸಿ,ಒಂದು ಮರಿಗೆ ಜನ್ಮ ನೀಡುತ್ತದೆ,ಮರಿ ಹುಟ್ಟಿ 9 ವಾರಕ್ಕೆ ಆಹಾರ ತಿನ್ನಲು ಪ್ರಾರಂಭಿಸಿ,
16 ವಾರಕ್ಕೆ ಬಿಲ ತೋಡುವ ಸಾಮರ್ಥ್ಯ ಹೊಂದುತ್ತವೆ..

ತಾಯಿ ಇನ್ನೊಂದು ಗರ್ಭ ಧರಿಸುವವರೆಗೆ ತಾಯಿಯ ಜೊತೆಯೇ ಜೀವನ ಸಾಗಿಸುತ್ತವೆ ಇವು..

ಇವುಗಳು ಕೆಸರು,ಜೌಗು ಹಾಗೂ ಕಲ್ಲಿನ ಪ್ರದೇಶದಲ್ಲಿ ವಾಸ ಮಾಡೋದು ಬಹಳ ಕಡಿಮೆ..
ಕಾರಣ ಬಿಲವನ್ನ ತೋಡಲು ಅನುಕೂಲವಿಲ್ಲದೆ ಇರುವುದು..!

ಇವುಗಳು ಸುಮಾರು 10,500 ಅಡಿ ಬಿಲವನ್ನ ತೋಡಿರುವ ದಾಖಲೆ ಇಥಿಯೋಪಿಯಾದಲ್ಲಿ ಸಿಕ್ಕಿತ್ತು ಎನ್ನಲಾಗಿದೆ..

ದಿನದ ಸಮಯದಲ್ಲಿ ಬಿಲದಲ್ಲಿ ವಾಸ ಮಾಡಿ ಉಷ್ಣತೆಯಿಂದ ತಮ್ಮನ್ನ ತಾವು ಸಂರಕ್ಷಣೆ ಮಾಡಿ ಕೊಳ್ಳುತ್ತವೆ..

ಇವುಗಳು 23 ವರ್ಷಗಳವರೆಗೆ ಬದುಕಬಲ್ಲವು..
ಚಿರತೆ,ಸಿಂಹ,ಆಫ್ರಿಕಾ ಕಾಡು ನಾಯಿ,ಹೈನಾ,ಪೈತಾನ್ ಗಳು ಇವುಗಳ ವೈರಿಗಳು..

ವೈರಿಗಳ ಚಲನ ವಲನ ಬಹು ಬೇಗ ಸೆನ್ಸ್ ಮಾಡೋದು,ಆಕ್ರಮಣದ ಸಮಯದಲ್ಲಿ ವೇಗವಾಗಿ ಜಿಗ್ ಜಾಗ್ ಆಗಿ ಓಡೋದು,ಬಹುಬೇಗ ಬಿಲ ತೋಡಿ ತಪ್ಪಿಸಿ ಕೊಳ್ಳೋದು,ಹಾಗೂ ತನ್ನ ಚೂಪಾದ ಉಗುರಿನಿಂದ ವೈರಿಯನ್ನ ಆಕ್ರಮಣ ಮಾಡೋದು ಇದೆ ಎನ್ನಲಾಗಿದೆ..
ಮನುಷ್ಯರು ಮಾಂಸಕ್ಕಾಗಿ ಇವಗಳನ್ನ ಭೇಟೆಯಾಡೋದು ಇದೆಯಂತೆ..
ಇವುಗಳು ವಿನಾಶದ ಸಂತತಿಯಲ್ಲಿ ಇವೆ ಎನ್ನಲಾಗಿದೆ..























ಕ್ಯಾಪಿಬರಾ

ಕ್ಯಾಪಿಬರಾ (Capybara)
ಇದರ ವೈಜ್ಞಾನಿಕ ಹೆಸರು Hydrochoerus hydrochaeris..
ಇದನ್ನ capivara ಅಂತ ಬ್ರೆಜಿಲ್ ನಲ್ಲಿ ದಲ್ಲಿ,chigüire, chigüiro,fercho ಕೊಲಂಬಿಯಾ ಮತ್ತೆ ವೆನಿಜುಲಾದಲ್ಲಿ ,carpincho ಎಂದು,ಆರ್ಜಾಂಟೈನಾ, ಪರುಗ್ವೆ,ಉರುಗ್ವೆ ಪ್ರದೇಶದಲ್ಲಿ, ronsoco ಎಂದು ಪೆರು ವಿನಲ್ಲಿ ಕರೆಯುತ್ತಾರೆ..

ಇದನ್ನ ಜಗತ್ತಿನ ಲಾರ್ಜೆಸ್ಟ್ ದಂಶಕ (Rodent)ಎನ್ನಲಾಗಿದೆ ..

ಇವು ದಕ್ಷಿಣ ಅಮೆರಿಕಾದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ,
ವಯಸ್ಸಿಗೆ ಬಂದ ಕ್ಯಾಪಿಬರಾ 3.48 ರಿಂದ 4.40 ಅಡಿ ಉದ್ಧವಿರುತ್ತವೆ,20 ರಿಂದ 24 ಇಂಚು ಎತ್ತರವಿರುತ್ತವೆ..ಸುಮಾರು 35 ರಿಂದ 66 ಕೆ.ಜಿ ತೂಕವಿರುತ್ತವೆ..ಗಂಡಿಗಿಂತ ಹೆಣ್ಣು ಸ್ವಲ್ಪ ಗಾತ್ರ ಹಾಗೂ ತೂಕದಲ್ಲಿ ತುಸು ಹೆಚ್ಚು ಇರುತ್ತವೆ ಎನ್ನಲಾಗಿದೆ..
ಬ್ರೆಜಿಲ್ ನಲ್ಲಿ ಒಂದು ಹೆಣ್ಣು ಕ್ಯಾಪಿಬೇರಾ ತೂಕ 91 ಕೆ.ಜಿ ವೆರೆಗೂ ಇತ್ತು ಎಂದು ಹೇಳಲಾಗಿದೆ..
ಉರುಗ್ವೆಯಲ್ಲಿ ಒಂದು ಗಂಡು 73 ಕೆ.ಜಿ ತೂಕದ್ದು ದಾಖಲೆಗೆ ಸಿಕ್ಕಿತ್ತಂತೆ..
ಇವುಗಳ ದೇಹ ರಚನೆ..
ಕ್ಯಾಪಿಬರಾ ಗುಂಡ ಗುಂಡಗೆ ಇರುತ್ತವೆ ಉದ್ದನೆಯ ಮೂತಿ ಹಾಗೂ ಬ್ಯಾರೆಲ್ ಆಕಾರದ ದೇಹ ಹೊಂದಿರುತ್ತವೆ,ಸಣ್ಣ ರೋಮವನ್ನ ಹೊಂದಿರುವ ಇವು,ಬೆನ್ನಿನ ಮೇಲೆ ಕೆಂಪು ಹಾಗೂ ಕಂದು ಬಣ್ಣ ಹಾಗೂ ಹೊಟ್ಟೆಯ ಭಾಗದಲ್ಲಿ ಅರಿಶಿನ ಹಾಗೂ ಕಂದು ಮಿಶ್ರಿತ ಕೂದಲು ಹೊಂದಿರುತ್ತವೆ..
ಮುಂದಿನ ಕಾಲು ಸ್ವಲ್ಪ ಗಿಡ್ಡನಾಗಿ, ಹಿಂದಿನ ಕಾಲು ಸ್ವಲ್ಪ ಉದ್ಧವಿರುತ್ತವೆ,3 ಬೆರಳು ಮುಂದೆ ಹಾಗೂ 4 ಬೆರಳು ಹಿಂದಿನ ಕಾಲಿನಲ್ಲಿ ಹೊಂದಿರುತ್ತವೆ,ಬೆರಳುಗಳ ಮಧ್ಯೆ ತೆಳ್ಳನೆ ಚರ್ಮದ ಪದರವಿರುತ್ತದೆ..
1.0.1.3/1.0.1.3 ರಚನೆಯ ಹಲ್ಲನ್ನ ಹೊಂದಿರುತ್ತವೆ,
ಅಂದರೆ 1 ಬಾಚಿ ಹಲ್ಲು,0ಕೋರೆ ಹಲ್ಲು,1 ಮುಂದವಡೆ ಹಲ್ಲು ಹಾಗೂ 3 ದವಡೆ ಹಲ್ಲುಗಳನ್ನ,ಬಾಯಿಯ ಮೇಲೆ ಹಾಗೂ ಕೆಳಗಿನ ಭಾಗದಲ್ಲಿ ಹೊಂದಿರುತ್ತವೆ..

ಕ್ಯಾಪಿಬರಾ ಗಳು ದಟ್ಟ ಕಾಡಿರುವ ಹಾಗೂ ಜೊತೆಗೆ ನದಿ,ಕೆರೆ,ಹಳ್ಳ,ಜೌಗು ಪ್ರದೇಶ,ಕೆಸರು ಹೆಚ್ಚಿರುವ,ನೀರಿನ ಮೂಲ ಇರುವ ಜಾಗದಲ್ಲೇ ಹೆಚ್ಚಾಗಿ ಬದುಕುತ್ತವೆ..
ಇವುಗಳು ಉಭಯವಾಸಿಗಳು ಅಂತಲೂ ಹೇಳಬಹುದು..
ಇವುಗಳು ಅದ್ಬುತ ಈಜುಗಾರರು ನೀರಿನ ಒಳಗೆ 5 ನಿಮಿಷಕ್ಕಿಂತ ಹೆಚ್ಚು ಉಸಿರು ಹಿಡಿದು ಇರಬಲ್ಲ ಸಾಮರ್ಥ್ಯ ಕೂಡ ಹೊಂದಿವೆ..ಇವಕ್ಕೆ ಸ್ವಚ್ಛ0ದವಾಗಿ ವಿಹರಿಸಲು ಸುಮಾರು 10 ಹೆಕ್ಟೇರ್ ಗೂ ಹೆಚ್ಚು ದಟ್ಟ ಕಾಡನ್ನ ತಮ್ಮ ವ್ಯಾಪ್ತಿಯಲ್ಲಿ ಇಟ್ಟುಕೊಂಡು ಇರುತ್ತವಂತೆ.!
ಇವುಗಳು ತಮ್ಮ ವ್ಯಾಪ್ತಿಯನ್ನ ಹೆಚ್ಚಿಸಿ ಕೊಳ್ಳುತ್ತಾ ಬೇರೆ ಬೇರೆ ಜಾಗಗಳಲ್ಲಿ ತಮ್ಮ ಆಸ್ತಿತ್ವ ಸ್ಥಾಪನೆ ಮಾಡಿತ್ತಾ ವಂಶಾಭಿವೃದ್ಧಿ ಮಾಡುವುದು ಸಾಮಾನ್ಯವಂತೆ..
ಇವುಗಳ ಆಹಾರ ಕ್ರಮ ತುಂಬಾ ಕಟ್ಟು ನಿಟ್ಟು ಎನ್ನಲಾಗಿದೆ..ಸಂಪೂರ್ಣ ಸಸ್ಯಾಹಾರಿಯಾದ ಇವುಗಳು,ಜಲಸಸ್ಯ,ಹುಲ್ಲು,ಕೆಲವು ಸೊಪ್ಪು ಹಾಗೂ ಕೆಲವು ಸಣ್ಣ ಸಸ್ಯಗಳನ್ನ ಮಾತ್ರ ತಿನ್ನುತ್ತವೆ,ಮಳೆ,ಚಳಿಗಾಲದಲ್ಲಿ ಹುಲ್ಲು ಹಾಗೂ ಬೇಸಿಗೆಯಲ್ಲಿ ವಿವಿಧ ಬಗೆಯ ಸಸ್ಯ ಇವುಗಳ ಆಹಾರ...
ತಮಗೆ ಚಳಿಗಾಲದಲ್ಲಿ ಸಿಗದ ಪೌಷ್ಟಿಕಾಂಶದ ಕೊರತೆಯನ್ನ ಬೇರೆಯ ಕಾಲಗಳಲ್ಲಿ ತಿಂದು ಸಮತೋಲನ ಮಾಡಿಕೊಳ್ಳುತ್ತವೆಯಂತೆ..
ಒಮ್ಮೊಮ್ಮೆ ಪೌಷ್ಟಿಕಾಂಶದ ಕೊರತೆಯಾದಾಗ ತಮ್ಮ ಮಲವನ್ನ ತಾವೇ ತಿನ್ನುವುದೂ ಇದೆಯಂತೆ!
ದನ,ಎಮ್ಮೆ,ಕುರಿಗಳಂತೆ ಇವು ತಿಂದ ಆಹಾರವನ್ನ ಮೆಲುಕು ಹಾಕುತ್ತವೆ..
ಇವುಗಳ ಹಲ್ಲು ನಿರಂತರ ಬೆಳೆಯುತ್ತಾ ಇರುತ್ತ್ವಂತೆ, ಕಾರಣ ನಿರಂತರ ಹಲ್ಲಿನ ಬಳಕೆಯಿಂದ ಸವೆದು ಹೋದ ಹಲ್ಲು ಮತ್ತೆ ಬೆಳೆಯುತ್ತಾ ಇರೋದು ಇವಕ್ಕೆ ವರದಾನ..


ಇವು ಹೆಚ್ಚಾಗಿ ಗುಂಪಿನಲ್ಲೇ ಬದುಕುತ್ತವೆ 10 ರಿಂದ 20 ಒಟ್ಟೊಟ್ಟಿಗೆ ಬದುಕುತ್ತವೆ..
ಸುಮಾರು 3 ರಿಂದ ನಾಲ್ಕು ಗಂಡು ಹಾಗೂ 7 ರಿಂದ 8 ಹೆಣ್ಣು ಹಾಗೂ ಮರಿಗಳು ಗುಂಪಿನಲ್ಲಿ ಇರುತ್ತವೆ..
ಬೇಸಿಗೆಯಲ್ಲಿ 40 ರಿಂದ100 ಕ್ಕೂ ಹೆಚ್ಚು ಗುಂಪು ಒಟ್ಟಾಗೋದು ಇದೆ ಎನ್ನಲಾಗಿದೆ..
ಅಪಾಯ ಎದುರಾದಾಗ ಅಥವಾ ಗುಂಪಿಗೆ ಎಚ್ಚರಿಸಲು ನಾಯಿ ರೀತಿ ಬೊಗಳಿ ಶಬ್ದ ಮಾಡುತ್ತವೆ..

ಇವು..ಮೂಗು ಹಾಗೂ ಗುದದ್ವಾರದಲ್ಲಿ
ಎರಡು ಕಡೆ ವಾಸನೆ ಗ್ರಂಥಿ ಹೊಂದಿರುತ್ತವೆ,ತಮ್ಮ ಗುಂಪನ್ನು ಗುರುತಿಸಲು ಗುದದ್ವಾರದ ಭಾಗವನ್ನ ಯಾವುದಾದರೂ ಮರಕ್ಕೆ ತಾಗಿಸಿ ಆ ಭಾಗದಲ್ಲಿ ಇದ್ದ ಕೂದಲನ್ನು ಅಲ್ಲಿಗೆ ಅಂಟಿಸಿ ಹೋಗುತ್ತವೆ ಆ ವಾಸನೆ ಬಹಳ ಸಮಯದ ವರೆಗೆ ಇರುತ್ತದೆ ಅದನ್ನ ತನ್ನ ಜೊತೆಗಾರರು ಗುರುತಿಸಿ ತನ್ನ ಗುಂಪು ಅಥವಾ ಸಂಗಾತಿಯನ್ನ ಸೇರಲು ಸಹಾಯಕ ವಾಗುತ್ತದೆ ಹಾಗೂ ಮೂತ್ರ ವಿಸರ್ಜನೆಯೂ ಹೀಗೆ ತಮ್ಮವರನ್ನ ಗುರುತಿಸುತ್ತವೆ ಗಂಡು ಕ್ಯಾಪಿಬರಾ ಮಾತ್ರ..

ಕ್ಯಾಪಿಬರಾ ಗಳು ಸಂತಾನೋತ್ಪತ್ತಿ ಪ್ರಕ್ರಿಯೆ ನೀರಿನಲ್ಲಿ ಮಾಡುತ್ತವೆ..
ಸುಮಾರು 130 ರಿಂದ 150 ದಿನ ಗರ್ಭದರಿಸಿದ ನಂತರ ಹೆಣ್ಣು ಮರಿ ಹಾಕಿ ಕೆಲವೇಹೊತ್ತಿನಲ್ಲಿ ಮತ್ತೆ ತನ್ನ ಗುಂಪನ್ನು ಸೇರಿಕೊಳ್ಳುತ್ತದೆ..
ಒಮ್ಮೆಗೆ 3 ರಿಂದ ನಾಲ್ಕು ಮರಿ ಹಾಕುತ್ತವೆ..ಮರಿಗಳು ಒಂದು ವಾರಕ್ಕೆ ಹುಲ್ಲು ತಿನ್ನಲು ಪ್ರಾರಂಭ ಮಾಡುತ್ತವೆ..16 ವಾರಗಳ ಕಾಲ ತಾಯಿ ಹಾಲುಣಿಸುತ್ತದೆ..
ದೊಡ್ಡವಾದ ಕೂಡಲೇ ಅವುಗಳು ಗುಂಪಿಗೆ ಸೇರಿಕೊಂಡು ಸ್ವಂತ ಜೀವನ ಪ್ರಾರಂಭಿಸುತ್ತವೆ..
ಏಪ್ರಿಲ್ ನಿಂದ ಮೇ ಇವುಗಳು ಮರಿ ಹಾಕುವ ಕಾಲ ಎನ್ನಲಾಗಿದೆ..

ಕ್ಯಾಪಿಬರಾಗಳು ಮೂಗು ಮಾತ್ರ ನೀರಿಂದ ಮೇಲೆ ಇಟ್ಟುಕೊಂಡು ನೀರಿನಲ್ಲೇ ನಿದ್ರಿಸ ಬಲ್ಲವು..
ರಾತ್ರಿ ಹೊತ್ತು ಹೆಚ್ಚು ನಿದ್ರೆ ಮಾಡುತ್ತವೆ..ಉಳಿದ ಸಮಯ ಆಹಾರ ಹುಡುಕಾಟದಲ್ಲಿ ತೊಡಗಿಸಿ ಕೊಳ್ಳುತ್ತವೆ..

ಸುಮಾರು 8ರಿಂದ 10 ವರ್ಷ ಜೀವಿತಾವಧಿ ಹೊಂದಿರುವ ಇವು..
ಈ ಕ್ಯಾಪಿಬರಾ ಗಳು
ವೈರಿಗಳಾದ,ಚಿರತೆ,ನರಿ,ತೋಳ,ಹಸಿರು ಅನಾಕೊಂಡಾ,ಗಿಡುಗ ಗಳ ದಾಳಿಯಿಂದ ಆಯಸ್ಸು ಕಳೆಯುವ ಮೊದಲೇ ಹೆಚ್ಚಾಗಿ ಸಾವಿಗೆ ತುತ್ತಾಗೋದು ಸಾಮಾನ್ಯ ಎನ್ನಲಾಗಿದೆ..

ಒಂದು ಖುಷಿಯ ವಿಷಯ ಎಂದರೆ
ಈ ಅಪರೂಪದ ಪ್ರಾಣಿಗಳು ವಿನಾಶದ ಅಂಚಿನಲ್ಲಿ ಇಲ್ಲ..

ಈ ಫೋಟೋ ನಾರ್ತ್ ವೆಸ್ಟ್ ಇಂಗ್ಲೆಂಡ್ ನ ಬ್ಲಾಕ್ ಪೂಲ್ ಜೂ ನಲ್ಲಿ ತೆಗೆದದ್ದು..

ಇಲ್ಲಿ
ಕ್ಯಾಪಿಬರಾ ಮತ್ತು ಸ್ಪೈಡರ್ ಮಂಗಗಳ ನ್ನ ಒಂದೇ ಕಡೆ ಇಡಲಾಗಿದೆ..
ಈ ಪಾಪದ ಕ್ಯಾಪಿಬರಾ ಗಳನ್ನ..
ಈ ಮಂಗ ಮುಂಡೆವು,ಇನ್ನಿಲ್ಲದಂತೆ ಕೀಟಲೆ ತರಲೆ,ಜೀವ ತಿಂದು ರಗಳೆ ಮಾಡಿ,ಹಿಂಸೆ ಮಾಡುತ್ತಾ ಇದ್ದವು..
ಆದರೆ ಅವು ಸುಮ್ಮನೆ ಮಲಗಿದ್ದವು..
ಪಾಪ..
















ಪೆಟಗೋನಿಯನ್ ಮಾರಾ.

ಪೆಟಗೋನಿಯನ್ ಮಾರಾ..
ಇದರ ವೈಜ್ಞಾನಿಕ ಹೆಸರು Dolichotis patagonum..
ಇವಕ್ಕೆ Patagonian cavy, Patagonian hare, or dillaby.ಎನ್ನುವ ವಿವಿಧ ಹೆಸರೂ ಇದೆ..

ಇವುಗಳನ್ನ ಸ್ವಲ್ಪ ದೊಡ್ಡ ದೇಹದ ದಂಶಕಗಳು,(Rodent)ಎನ್ನಬಹುದು..
ಜಾಕ್ ಮೊಲ ದಂತೆ ಸ್ವಲ ಮಟ್ಟಿಗೆ ಕಾಣಿಸುವ ಜೀವಿಗಳು,ಇವುಗಳು ಸಂಪೂರ್ಣ ಸಸ್ಯಾಹಾರಿಗಳು..
ಇವುಗಳು ಉದ್ದ ಕಿವಿ,ಉದ್ದ,ತೆಳ್ಳನೆಯ ಕಾಲು ಹೊಂದಿರುತ್ತವೆ,ಹಿಂದಿನ ಕಾಲು ಉದ್ಧವಿದ್ದು,ಮುಂದಿನ ಕಾಲು ಸ್ವಲ್ಪ ಗಿಡ್ಡ ಇರುತ್ತದೆ..
ಮುಂದಿನ ಕಾಲಿನಲ್ಲಿ ನಾಲ್ಕು ಹಾಗೂ ಹಿಂದಿನ ಕಾಲಿನಲ್ಲಿ 3 ಬೆರಳು ಇರುತ್ತವೆ ಓಡಲು ಸಹಾಯವಾಗುವ ಪಂಜವಿರುತ್ತದೆ,ತಲೆ ಮತ್ತು ದೇಹದ ಉದ್ದ 27 ರಿಂದ 30 ಇಂಚು,1.6 ರಿಂದ 2 ಇಂಚು ಉದ್ದದ ಬಾಲ,ಸುಮಾರು 3 ಅಡಿ ಎತ್ತರ,8 ರಿಂದ 16 ಕೆ.ಜಿ ತೂಕವಿರುತ್ತವೆ...
ಬಹಳ ಸಣ್ಣ ಬಾಲ ಹೊಂದಿರುವ ಇವು,ಕೂದಲು ಸ್ವಲ್ಪ ಕಡಿಮೆ ಇರುತ್ತದೆ,ಹೊಟ್ಟೆಯ ಭಾಗದಲ್ಲಿ,ಹಿಂದಿನ ಭಾಗದಲ್ಲಿ ಸ್ವಲ್ಪ ಬಿಳಿಯಬಣ್ಣ ಹಾಗೂ ಸಂಪೂರ್ಣ ಕಂದು ಬಣ್ಣ ಇವುಗಳ ಮೈ ಬಣ್ಣವಿರುತ್ತೆ..
ಕಿತ್ತಳೆ ಬಣ್ಣ ಮುಖದ ಕೆಲವು ಭಾಗದಲ್ಲಿ ಕಾಣಸಿಗುತ್ತೆ..

14 ವರ್ಷ ಇವುಗಳ ಜೀವಿತಾವಧಿ ಎನ್ನಲಾಗಿದೆ..

ಮಾರಾ ಕೇವಲ ಮಧ್ಯ ಹಾಗೂ ದಕ್ಷಿಣ ಅರ್ಜಂಟೈನಾ ಹಾಗೂ ಪೆಟಗೋನಿಯಾದ ಕೆಲವು ಭಾಗದಲ್ಲಿ ಮಾತ್ರ ಕಾಣ ಸಿಗುತ್ತವೆ ಎನ್ನಲಾಗಿದೆ..ಇವುಗಳು ಹೆಚ್ಚಾಗಿ ಕುರುಚಲು ಗಿಡ ಹಾಗೂ ಸಣ್ಣ ಕಾಡಿನಲ್ಲಿ ವಾಸ ಮಾಡುತ್ತವೆ,ಕಾರಣ ವೈರಿಗಳಿಂದ ಅಡಗಿ ಕೂರಲು, ತಪ್ಪಿಸಿ ಕೊಳ್ಳಲು ಅವಕ್ಕೆ ಸಹಾಯಕ..

ದಿನದ 46%ಸಮಯ ಆಹಾರ ಹುಡುಕಲು ತಿನ್ನಲು ತೊಡಗಿಸಿ ಕೊಳ್ಳುತ್ತವೆ..ಅದ್ರಲ್ಲಿ ಹೆಣ್ಣು ಇನ್ನೂ ಹೆಚ್ಚು ಸಮಯ ಆಹಾರ ಹುಡುಕಾಟ ತಿನ್ನುವುದರಲ್ಲಿ ಹೆಚ್ಚು ಸಮಯ ಕಳೆಯುತ್ತದೆ,ಗಂಡು ವೈರಿಗಳನ್ನು ಕಾಯುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎನ್ನಲಾಗಿದೆ..
ಗಂಟೆಗೆ 45 ಮೈಲಿ ವೇಗದಲ್ಲಿ ಓಡುವ ಸಾಮರ್ಥ್ಯ ಹೊಂದಿರುವ ಇವು..
ಉದ್ದನೆಯ ಕಾಲುಗಳೇ ವೈರಿಗಳಿಂದ ತಪ್ಪಿಸಿ ಕೊಳ್ಳಲು ಸಹಾಯಕ ಎನ್ನಲಾಗಿದೆ..!
ಹೆಚ್ಚಾಗಿ ಗಂಡು ಹೆಣ್ಣಿನ ಜೊತೆಯೇ ಇರುತ್ತದೆ ಹಾಗೂ ಅದನ್ನೇ ಅನುಸರಿಸುತ್ತಾ ಹೋಗುತ್ತದೆ..ಸಂಬಂಧ ಉಳಿಸಿ ಕೊಳ್ಳುವ ಹೆಚ್ಚಿನ ಜವಾಬ್ದಾರಿ ಗಂಡಿನದ್ದೇ ಆಗಿರುತ್ತದೆಯಂತೆ,ಮೂತ್ರದ ಮೂಲಕ ಅವುಗಳನ್ನ ಗುರುತಿಸಿ ಹಿಂಬಾಲಿಸುವುದು ಇದೆಯಂತೆ..
ಒಂದು ಸಂಗಾತಿ ತೀರಿ ಕೊಂಡ ಮೇಲಷ್ಟೇ ಇನ್ನೊಂದು ಸಂಗಾತಿ ಆರಿಸಿ ಕೊಳ್ಳುವುದು ಇವುಗಳ ವಿಶೇಷ ಜೀವನ ಶೈಲಿ..!

100 ದಿನ ಗರ್ಭ ಧರಿಸಿ,ಮರಿ ಹಾಕುವ ಸಮಯದಲ್ಲಿ 10 ಅಡಿಗೂ ಹೆಚ್ಚು ಮಣ್ಣಿನಲ್ಲಿ ಹೊಂಡ ತೆಗೆದು ಅಲ್ಲಿ ಮರಿ ಹಾಕಿ ಹಾಲುಣಿಸಿ ಸುಮಾರು 75 ದಿನ ಸಾಕುತ್ತವೆ..ಇವುಗಳ ಪ್ರಭೇಧದಲ್ಲಿ ಇವುಗಳೇ ಹೆಚ್ಚು ದಿನ ಮರಿಗಳನ್ನ ಸಾಕುವ ದ0ಶಕಗಳು ಎನ್ನಲಾಗಿದೆ,ಮರಿ ಹುಟ್ಟಿದ ತಕ್ಷಣ ನಡೆಯುವ ಸಾಮರ್ಥ್ಯ ಹೊಂದಿವೆ,ಇದು ಸೆಪ್ಟೆಂಬರ್ ಅಥವಾ ಆಕ್ಟೊಬರ್ ನಲ್ಲಿ ನಡೆಯುವ ಪ್ರಕ್ರಿಯೆ..ವರ್ಷಕ್ಕೆ ಒಮ್ಮೆ ಒಂದು ಅಥವಾ ಎರಡು ಮರಿಯನ್ನ ಹಾಕುವ ಸಾಮರ್ಥ್ಯ ಹೊಂದಿದೆ ಹೆಣ್ಣು ಮಾರಾ..
ಸಾಕಿದ ಮಾರಾ ಗಳು ಮೂರರಿಂದ ನಾಲ್ಕು ಮರಿ ಹಾಕುವುದೂ ಇದೆಯಂತೆ..!


ಹೆಚ್ಚು ವೈರಿ ಪ್ರಾಣಿಗಳ ದಾಳಿ,ಕೃಷಿ ಭೂಮಿ ವಿಸ್ತರಣೆ,ಕಾಡ್ಗಿಚ್ಚು,ಕಾಡು ನಾಶ ಹಾಗೂ ಮಾಂಸಕ್ಕಾಗಿ,ಚರ್ಮಕ್ಕಾಗಿ ಮನುಷ್ಯ ಮಾಡುತ್ತಿರುವ ಭೇಟೆಯಿಂದಾಗಿ ಈ ಅಪರೂಪದ ಜೀವಿಗಳು ವಿನಾಶದ ಅಂಚಿಗೆ ನಿಧಾನಕ್ಕೆ ತಲುಪುತ್ತಾ ಇವೆ ಅನ್ನೋದು ಆತಂಕಕಾರಿ ಸಂಗತಿ..

ನಾರ್ತ್ ವೆಸ್ಟ್ ಇಂಗ್ಲೆಂಡ್ ನ ಬ್ಲಾಕ್ ಪೂಲ್ ಜೂ ನಲ್ಲಿ ತೆಗೆದ ಫೋಟೋ ಇದು..

ಸೋಮವಾರ, ಫೆಬ್ರವರಿ 8, 2021

Giant Ant Eater

Giant Ant Eater ಎಂದು ಕರೆಸಿ ಕೊಳ್ಳುವ ಈ ಸುಂದರಪ್ರಾಣಿಯ ಮುಖ ಯಾವುದು ಹಿಂದೆ ಯಾವುದು ಅಂತ ತಿಳಿಯೋಕೆ ಬಹಳ ಸಮಯ ಬೇಕಾಯ್ತು ನನಗೆ...

ಸುಮಾರು 6 ಅಡಿ ಉದ್ದ,
14 ಇಂಚು ಎತ್ತರ,ಗಂಡು 33-41ಕೆ.ಜಿ,ಹೆಣ್ಣು 27-39ಕೆ.ಜಿ ತೂಕ ಇರುತ್ತದೆ,ಈ ಪ್ರಾಣಿಯ ವೈಜ್ಞಾನಿಕ ಹೆಸರು Myrecophaga tridactyla..

ಗಿಯಂಟ್ ಆಂಟ್ ಈಟರ್,ಹೆಚ್ಚು ಕಡಿಮೆ ಕಣ್ಣಿನ ದೃಷ್ಟಿ ಹಾಗೂ ಕಿವಿ ಎರಡೂ ಸ್ವಲ್ಪ ಮಂದ,ಹಲ್ಲುಗಳು ಕೂಡ ಇಲ್ಲದ ಈ ಪ್ರಭೇಧ,ಉದ್ದನೆಯ ಮೂತಿ ಹಾಗೂ ಚಾಮರದಂತ ದಟ್ಟ ಕೂದಲು ಹೊಂದಿರುವ ಬಾಲ ಹೊಂದಿರುತ್ತವೆ,
ಅದ್ಬುತ ಅಘ್ರಾಣ ಶಕ್ತಿ ಹೊಂದಿರುವ ಇವು,
ವಾಸನೆಯ ಮೂಲಕವೇ ಇರುವೆ,ವರಲೇ(ಗೆದ್ದಲು) ಹಾಗೂ ಇನ್ನಿತರೆ ಕೀಟಗಳ ಜಾಗದ ಗೂಡನ್ನು ಹುಡುಕಿ ತನ್ನ ಬಲಿಷ್ಠ ಉಗುರುಗಳ ಮೂಲಕ ಮಣ್ಣನ್ನ ಹೊರ ತೆಗದು 1000ಕ್ಕೂ ಹೆಚ್ಚು ಇರುವೆ,ವರಲೆಗಳನ್ನ(ಗೆದ್ದಲು)ತನ್ನ ಉದ್ದವಾದ ಅಂಟಿರುವ ನಾಲಿಗೆಯ ಸಹಾಯದಿಂದ ಒಮ್ಮೆಲೇ ಸ್ವಾಹ ಮಾಡಿ ಬಿಡುವ ಸಾಮರ್ಥ್ಯ ಹೊಂದಿವೆ..
ಒಂದು ನಿಮಿಷಕ್ಕೆ
150 ಕ್ಕೂ ಹೆಚ್ಚು ಸರಿ ತನ್ನ ನಾಲಿಗೆಯನ್ನ ಹೊರ ಹಾಕುತ್ತವಂತೆ ಈ ಪ್ರಾಣಿಗಳು..!

ಅರಣ್ಯ ನಾಶ,ಕಾಡ್ಗಿಚ್ಚು,ರಸ್ತೆ ಅಪಘಾತ ಹಾಗೂ ನಾಯಿಗಳ ದಾಳಿ,ಮನುಷ್ಯರು ಮಾ0ಸಾಹಾರಕ್ಕೆ,ಹಣಕ್ಕಾಗಿ ವ್ಯಾಪಾರ,ಕಳ್ಳ ಸಾಗಾಣಿಕೆ ತುತ್ತಾಗಿ,ಈ ಅಪರೂಪದ ಪ್ರಭೇಧ ಇತ್ತೀಚೆಗೆ ವಿನಾಶದ ಅಂಚಿಗೆ ಬಂದು ನಿಂತಿದೆ ಅನ್ನೋದು ವಿಷಾದದ ಸಂಗತಿ..!
ಅಂತಹಾ ಅಪಾಯಕಾರಿ ಆಕ್ರಮಣ ಕಾರಿ ಅಲ್ಲದ ಇವುಗಳು,ಕೆಲವೊಮ್ಮೆ ಮನುಷ್ಯರ ಮೇಲೆ ದಾಳಿ ಮಾಡಿದ್ದೂ ವರಡಿಯಾಗಿದೆಯಂತೆ..!

6 ತಿಂಗಳಿಗೆ ಒಂದು ಸಂತಾನೋತ್ಪತ್ತಿ ಮಾಡುವ ಈ ಪ್ರಭೇಧದ ಜೀವಿತ ಅವಧಿ,
ಸುಮಾರು 16 ರಿಂದ 25 ವರ್ಷದ ವರೆಗೆ ಎನ್ನಲಾಗಿದೆ..!
ಇವುಗಳು ಹೆಚ್ಚಾಗಿ,ಮಧ್ಯ ಅಮೇರಿಕಾ,ಹಾಂದುರಾಸು,ದಕ್ಷಿಣ ಅಮೇರಿಕಾದ,ಬೊಲಿವಿಯಾ ಮತ್ತಿತರ ಒಣ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ...

ನಿನ್ನ ಮುಖಕ್ಕೆ ವರ್ಲೆ(ಗೆದ್ದಲು) ಹಿಡಿಯಾ ಅಂತ
ಬೇರೆಯವರಿಗೆ ಮಲೆನಾಡ ಬೈಗುಳ ಬೈದರೆ
ಬೇಜಾರಾಗ್ತಾರೋ ಏನೋ..

ಆದ್ರೆ
ಗಿಯ0ಟ್ ಆ0ಟ್ ಈಟರ್ ಗೆ ಹಾಗೇ ಬೈದ್ರೆ
ಸಕತ್ ಖುಷಿ ಯಾಗುತ್ತಾ ಅಂತ..
ಮುಖದಲ್ಲೇ ಗೆದ್ದಲನ್ನ ಆರಾಮಾಗಿ ಹಿಡಿದು ತಿನ್ನ ಬಹುದು ಅಂತ..
ಅಲ್ವಾ
😂
ಅಂದ ಹಾಗೆ ಕೂದಲು ಅಷ್ಟು ಚನ್ನಾಗಿ ಬೆಳೆಯೋಕೆ ಯಾವ ಎಣ್ಣೆ ಹಾಗೂ ಶಾಂಪೂ ಹಾಕುತ್ತೇ ಅಂತ ನನ್ನ ಕೇಳಬೇಡಿ..
ನಾನು ಈ ವಿಷಯ ಕೇಳೋಕೆ ಮರೆತೇ ಅದರ ಹತ್ರ..😂

ಚಿತ್ರಗಳು ತೆಗೆದದ್ದು
ನಾರ್ಥವೇಸ್ಟ್ ಇಂಗ್ಲೆಂಡ್ ನ ಬ್ಲಾಕ್ ಪೂಲ್ ಮೃಗಾಲಯದಲ್ಲಿ.











Bacterial camel


Bactrian Camel,ಎರಡು ಡುಬ್ಬದ ಒಂಟೆ,(Two Hump)
ಇವುಗಳನ್ನ ಮಂಗೋಲಿಯನ್ ಒಂಟೆ ಅಂತಲೂ ಕರೆಯುತ್ತಾರೆ..

ವೈಜ್ಞಾನಿಕ ಹೆಸರು Camelus Bactrianus..
ಇವುಗಳಿಗೆ ಬ್ಯಾಕ್ಟ್ರಿಯನ್ ಒಂಟೆ ಎಂದು ಹೆಸರು ಬರಲು ಕಾರಣ ಪ್ರಾಚೀನ ಕಾಲದ ಬ್ಯಾಕ್ಟ್ರಿಯನ್ ಎಂಬ ಪ್ರದೇಶದಿಂದ ಎನ್ನಲಾಗಿದೆ...
ಪ್ರಾಚೀನ ಗ್ರೀಕ್ ತತ್ವಜ್ಞಾನಿ ಆರಿಸ್ಟಾಟಲ್ ಮೊತ್ತ ಮೊದಲು ಒಂಟೆಯ ಬಗ್ಗೆ 4 ನೇ ಶತಮಾನದಲ್ಲಿ ಒಂದು ಬೆನ್ನುಬ್ಬು ಇರೋದನ್ನ ಅರೇಬಿಯನ್ ಒಂಟೆ..
ಹಾಗೂ ಎರಡು ಬೆನ್ನುಬ್ಬು ಇರುವ ಒಂಟೆಯನ್ನ ಬ್ಯಾಕ್ಟ್ರಿಯನ್ ಒಂಟೆ ಎಂದು ವಿಂಗಡಿಸಿದ್ದರು ಅಂತಲೂ ಹೇಳಲಾಗಿದೆ..!

ಸುಮಾರು 1.8 ರಿಂದ 2 ಮೀಟರ್ ಎತ್ತರವಿರುವ ಇವುಗಳು 35 ರಿಂದ 40 ವರ್ಷ ಜೀವಿತಾವಧಿ,ಸರಿ ಸುಮಾರು 480 ರಿಂದ 500 ಕೆ.ಜಿ ತೂಕವಿರುತ್ತವೆ..
ಇವುಗಳ ಜೀವಿತ ಅವಧಿ 50 ವರ್ಷದವರೆಗೆ ಎನ್ನಲಾಗಿದೆ..
ಇವುಗಳು ಗಂಟೆಗೆ ಅಪರೂಪಕ್ಕೆ 65 ಕಿಮೀ ಓಡಬಲ್ಲವು, ಹಾಗೂ ಅದ್ಬುತ ಅಘ್ರಾಣ ಶಕ್ತಿ ಮತ್ತು ಕಣ್ಣು ದೃಷ್ಟಿ ಹೊಂದಿವೆ..
ಒಳ್ಳೆಯ ಈಜುಪಟುಗಳೂ ಹೌದಂತೆ..!

ವರ್ಷಕ್ಕೆ ಒಮ್ಮೆ ಒಂದು ಅಥವಾ ಎರಡು ಮರಿಯನ್ನ ಹಾಕುವ ಸಾಮರ್ಥ ಹೊಂದಿರುವ ಇವು..
13 ತಿಂಗಳು ಗರ್ಭ ಧರಿಸಿ ಮರಿಹಾಕುತ್ತವೆ,ಮರಿ ಹುಟ್ಟಿದ ತಕ್ಷಣ ಎದ್ದು ನಿಲ್ಲುವ ಸಾಮರ್ಥ್ಯ ಹೊಂದಿರುತ್ತವೆ ಹಾಗೂ 36 ಕೆಜಿವರೆಗೆ ತೂಕವಿರುತ್ತವೆ, ತಾಯಿ ಸುಮಾರು 1.5 ವರ್ಷ ಸಾಕಿದ ನಂತರ,3 ವರ್ಷದ ವರಗೆ ತಾಯಿಯ ಜೊತೆಯೇ ಜೀವನ ಸಾಗಿಸುತ್ತವೆ,ದೊಡ್ಡವಾದ ನಂತರ ಬೇರೇಯಾಗುತ್ತವೆ..

ಅಗಲವಾದ ಹಾಸು ಗೊರಸು,ಉದ್ದವಾದ ಕಾಲು ಇರುವುದರಿಂದ ಮರಳಿನಲ್ಲಿ ಸುಲಭವಾಗಿ ನಡೆಯುವುದಕ್ಕೆ ಸಹಾಯಕ ಹಾಗೂ ದಪ್ಪವಾದ ರೋಮ ಬಿಸಿಲಿನಿಂದ ರಕ್ಷಣೆಯಾಗಲು ಹಾಗೂ ರಾತ್ರಿ ಚಳಿಯಿಂದ ರಕ್ಷಣೆಗೆ ಸಹಾಯಕ..
ಬಹಳ ಗಟ್ಟಿಯಾದ ಬಾಯಿ ಹಾಗೂ ನಾಲಿಗೆ ಹೊಂದಿರುವ ಇವು,ಚೂಪಾದ ಮುಳ್ಳು,ಮುಳ್ಳಿನ ಗಿಡ,ಒಣಗಿದ ಗಿಡ ಅಥವಾ ಹುಲ್ಲು,ಉಪ್ಪು ಅಥವಾ ಕಹಿ ಇರುವ ಇನ್ನಿತರೆ ಯಾವುದೇ ಸಸ್ಯಾಹಾರವನ್ನ ಸುಲಭವಾಗಿ ತಿನ್ನುತ್ತವೆ,ಒಮ್ಮೊಮ್ಮೆ ತಮಗೆ ಬೇಕಾದ ಖನಿಜಅಂಶ ಸಿಕ್ಕದೇ ಇದ್ದಾಗ,ಸತ್ತ ಪ್ರಾಣಿಗಳ ಮಾಂಸ,ಚರ್ಮ,ಮೀನು,ಮೂಳೆಗಳಿಗೆ ಹೊಡೆದು,ಟೆಂಟ್ ಹಾಗೂ ದೊಡ್ಡ ಹಗ್ಗ,ಚಪ್ಪಲಿಗಳನ್ನ ಸಹ ಸುಲಭವಾಗಿ ಜಗಿಯುತ್ತ ತಿನ್ನುವುದೂ ಇದೆಯಂತೆ..!!!

ತಿಂದ ಆಹಾರವನ್ನ ಸ್ವಲ್ಪ ಸಮಯದ ನಂತರ,ದನ,ಎಮ್ಮೆ,ಕುರಿಗಳಂತೆ ಮೆಲುಕು ಹಾಕುತ್ತವೆ..


ಚಳಿಗಾಲದಲ್ಲಿ ನೀರಿನ ಅಭಾವ ಇರುವುದರಿಂದ ಹಿಮವನ್ನ ತಿಂದು,ನೀರಿನ ಅವಶ್ಯಕತೆಯನ್ನ ನೀಗಿಸಿ ಕೊಳ್ಳುತ್ತವಂತೆ..
ಇವುಗಳು ನೀರು ಸಿಕ್ಕಾಗ ಒಮ್ಮೆಲೇ 57 ಲೀಟರ್ ವರೆಗೆ ಹೀರಬಲ್ಲ ಸಾಮರ್ಥ್ಯ ಹೊಂದಿದೆ!!
ಹೀಗೆ ಹೀರಿದ ನೀರು,ತಿಂದ ಹಿಮ ಮೇಲಿರುವ ಎರಡು ಡುಬ್ಬದಲ್ಲಿ ಶೇಖರಣೆಯಾದಾಗ ಅವುಗಳು ನೇರವಾಗಿ ನಿಂತಿರುತ್ತದಂತೆ,
ಡುಬ್ಬದ ನೀರಿನ ರೂಪದ ಅಂಶ(ಪ್ಯಾಟ್ ಎನ್ನಲಾಗಿದೆ) ನೀರು ಸಿಗದೇ ಇದ್ದಾಗ,ಅವಶ್ಯಕತೆ ಇದ್ದಾಗ,ಉಪಯೋಗಿಸುತ್ತಾ ಬಂದಂತೆ ನೇರವಾಗಿರುವ ಡುಬ್ಬ ನಿಧಾನವಾಗಿ ಮೆತ್ತಗೆ ಆಗುತ್ತಾ ಬರುತ್ತದೆ,
ಸಂಪೂರ್ಣ
ಖಾಲಿಯಾದಾಗ ಒಂದು ಕಡೆ ವಾಲಿಕೊಂಡು ಬಿಡುತ್ತದೆಯಂತೆ...
ಇದೊಂಥರಾ ಒಂಟೆಯ ನೀರಿನ ಓವರ್ ಹೆಡ್ ಅಲ್ಲಲ್ಲ ಓವರ್ ಬೆನ್ನಿನ ಟ್ಯಾ0ಕ್ ಎನ್ನಬಹುದು..ಅಲ್ವಾ..!


ಈ ಪ್ರಭೇಧಗಳು,ಪ್ರಾಚೀನ ಕಾಲದಿಂದ ಬಹಳ ಶೀತಲ ಪ್ರದೇಶ ಹಾಗೂ ಉಷ್ಣ ಮತ್ತು ನೀರಿನ ಅಭಾವ ಇರುವ ಮರಳುಗಾಡಿನಲ್ಲಿ,ಸಾರಿಗೆ ಹಾಗೂ,ಹಾಲು,ಉಣ್ಣೆ ಮಿಲಿಟರಿ ಹಾಗೂ ಮಾಂಸಕ್ಕಾಗಿ ಬಳಕೆಯಾಗುತ್ತಿದ್ದವಂತೆ....
170 ರಿಂದ 250 ಕೆ.ಜಿ ಭಾರ ಹೊತ್ತು ದಿನಕ್ಕೆ 47 ಕಿಮೀ,ಗಂಟೆಗೆ 4ಕಿಮೀ ಕ್ರಮಿಸುವ ಸಾಮರ್ಥ್ಯ ಹೊಂದಿವೆಯಂತೆ..
ಈಗ 2 ಮಿಲಿಯನ್ ಸಂಖ್ಯೆ ಇರುವ ಇವು ಹೆಚ್ಚಿನ ಸಂಖ್ಯೆಯಲ್ಲಿ ಸಾಕು ಪ್ರಾಣಿಗಳಾಗಿಯೇ ಬಳಕೆಯಾಗುತ್ತಾ ಇವೆ...

ಬ್ಯಾಕ್ಟ್ರಿಯನ್ ಒಂಟೆಗಳು(ಎರಡು ಡುಬ್ಬಇರುವ ಒಂಟೆಗಳು)ಮಧ್ಯ ಏಷಿಯಾ ಭಾಗದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ..

ಭಾರತೀಯ ಸೈನ್ಯ ಒಬ್ಬರು ಅಧಿಕಾರಿಗಳ ಪ್ರಕಾರ,ಈ ಎರಡು ಡುಬ್ಬದ ಒಂಟೆಗಳು,ಲಡಾಖ್ ಬಾರ್ಡರ್ ನಲ್ಲಿ ಗಸ್ತು ತಿರುಗಲು ಬಹಳ ಸಹಕಾರಿಯಂತೆ ಹಾಗೂ ಸುಮಾರು 170 ಕೆಜಿ ಗೂ ಹೆಚ್ಚು ಭಾರವನ್ನ ಹೊತ್ತು 17000 ಅಡಿ ಸುಲಭವಾಗಿ ಚಲಿಸುತ್ತವೆಯಂತೆ..ಇವು ಅರೇಬಿಯನ್ ಒಂಟೆಗಳಿಗಿಂತ ಹೆಚ್ಚು ಸಾಮರ್ಥ್ಯ ಹೊಂದಿವೆಯಂತೆ..

ಮಂಗೋಲಿಯಾದಲಿ 4,30,000 ಹೆಚ್ಚು ಬ್ಯಾಕ್ಟ್ರಿಯನ್ ಒಂಟೆಗಳು ಇವೆಯಂತೆ..
ನಮ್ಮ ದೇಶದಲ್ಲಿ ಸುಮಾರು 150 ಬ್ಯಾಕ್ಟ್ರಿಯನ್ ಒಂಟೆಗಳು ಇವೆ ಎಂದು ಹೇಳಲಾಗಿದೆ..