ಸೋಮವಾರ, ಮೇ 1, 2023

ಕ್ಯಾಟ್ ಓ ನೈನ್ ಟೈಲ್

ಮಿಲಿಟರಿ ಅಂದರೆ ಶಿಸ್ತು,ಅದನ್ನ ಉಲ್ಲಂಘನೆ ಮಾಡೋದು ಅಪರಾಧ ಎನ್ನುವುದು ಸಾಮಾನ್ಯ ವಿಷಯ...

ಸುಮಾರು 20ನೇ ಶತಮಾನ 1761 ರ ಕಾಲ ಘಟ್ಟದಲ್ಲಿ ಬ್ರಿಟನ್ ನಲ್ಲಿ
ಯುದ್ಧ ಅಥವಾ ಸಂಘರ್ಷದಲ್ಲಿ,ಯೋಧ ಹೋರಾಡುತ್ತಾ ವೈರಿಗೆ ಬೆನ್ನು ಹಾಕಿ ಓಡಿ ಬಂದಿದ್ದು ತಿಳಿದರೆ,ಅದನ್ನ ಘೋರ ಅಪರಾಧ ಎಂದು ಪರಿಗಣಿಸಿ ನೇಣು ಹಾಕಿದ್ದು ಇದೆಯಂತೆ..!

ಬ್ರಿಟಿಷ್ ಆರ್ಮಿ,ನೇವಿ,ಜೈಲಿನಲ್ಲಿರುವ ಅಪರಾಧಿಗಳು ಹಾಗೂ ಪೊಲೀಸ್ ಇಲಾಖೆಯಲ್ಲಿ ನೌಕರರು ಶಿಸ್ತು ಮರೆತು ವರ್ತನೆ ಮಾಡಿದ್ದು,ತಪ್ಪು ಮಾಡಿದ್ದು ಗಮನಕ್ಕೆ ಬಂದರೆ,ಅವರಿಗೆ ಕಾನೂನು ಪ್ರಕಾರ ಶಿಕ್ಷೆ ಕಡ್ಡಾಯವಿತ್ತಂತೆ..!

ಈಟಿಗಳನ್ನ ಕ್ರಾಸ್ ರೀತಿಯಲ್ಲಿ ಗಟ್ಟಿಯಾಗಿ ಕಟ್ಟಿ ನಿಲ್ಲಿಸಿ,ತಪ್ಪಿತಸ್ತನನ್ನ ಬೆನ್ನು ಮಾಡಿ ನಿಲ್ಲಿಸಿ,ಅಂಗಿಯನ್ನು ತೆಗೆದು,ಎರಡೂ ಕೈಗಳನ್ನ ಈಟಿಗೆ ಕಟ್ಟಿ,
ಬರೀ ಬೆನ್ನಿಗೆ
"Cat o Nine Tail" ಅಂದರೆ
ಒಂದು ಮರದ ಹಿಡಿಗೆ 9 ಹಗ್ಗ ಸುಮಾರು  ಹಾಗೂ ಪ್ರತಿ ಹಗ್ಗಕ್ಕೆ ಅಲ್ಲಲ್ಲಿ ಗಂಟು ಹಾಕಿರುವುದನ್ನ ಒಟ್ಟು ಮಾಡಿ ಕಟ್ಟಿ ಒಂದು ಚಾಟಿ ಮಾಡಿರುವ ಕೋಲಿಗೆ ಕ್ಯಾಟ್ ಓ ನೈನ್ ಟೈಲ್ ಎನ್ನಲಾಗುತ್ತಾ ಇತ್ತು..!

ಕೆಲವು ಕಡೆ ಚರ್ಮದ ಚಾಟಿಯ ಬಳಕೆ ಇರುತ್ತಾ ಇತ್ತು,ಅದು ಸುಮಾರು ಒಟ್ಟು ಉದ್ದ 30 ಇಂಚು ಇರುತ್ತಿತ್ತು ಎನ್ನಲಾಗಿದೆ...!
.
19 ನೇ ಶತಮಾನದ ಕ್ಯಾಟ್ ಓ ನೈನ್ ಟೈಲ್ ಸುಮಾರು 38.1/4 ಇಂಚು ಒಟ್ಟು ಉದ್ದ ಹಾಗೂ 18 ಇಂಚು ಹಗ್ಗದ ವಿರುತ್ತಿತ್ತು ಎನ್ನಲಾಗಿದೆ...
ಉಲನ್ ನಿಂದಲೂ ಈ ಚಾಟಿಯನ್ನ ಮಾಡಲಾಗುತ್ತಾ ಇತ್ತು..!
1681 ರಲ್ಲಿ ಮೊತ್ತ ಮೊದಲಿಗೆ ಲಂಡನ್ ನಲ್ಲಿ ಒಬ್ಬ ಕೊಲೆಗಾರನಿಗೆ ಶಿಕ್ಷೆ ಕೊಡಲು ಬಳಸಲಾಗಿತ್ತು ಎನ್ನಲಾಗಿದೆ..!
1695 ರಲ್ಲಿ ಇದು ಸಂಪೂರ್ಣವಾಗಿ ಶಿಕ್ಷೆಗೆ ಬಳಸುವುದು ಪ್ರಾರಂಭವಾಯಿತು..!


ಅಂದರೆ ಮಲೆನಾಡ ಕಡೆ,ಗಾಡಿ ಎತ್ತು(Bullock Cart)ಹೊಡೆಯಲು,ಬಾರು ಕೋಲು ಎನ್ನುವುದು ಬಳಕೆಯಲ್ಲಿದೆ,ಅದೇ ರೀತಿಯ 9 ಗಿಡ್ಡನಾದ ಸುಮಾರು 18 ಇಂಚು ಉದ್ದದ ಹಗ್ಗದ,ಮಧ್ಯ ಮಧ್ಯ ಗಂಟು ಹಾಕಿರುವ ಸಣ್ಣ ಗೊಂಚಲು ಅದಾಗಿತ್ತು..!

ಬ್ರಿಟನ್ ನಲ್ಲಿ,ಆರ್ಮಿ ಯಲ್ಲಿ,ತಪ್ಪಿತಸ್ತನಿಗೆ,ಅಧಿಕಾರಿಯೊಬ್ಬ ಕ್ಯಾಟ್ ಓ ನೈನ್ ಟೈಲ್ ಎಂಬ ಹಗ್ಗದ ಗೊಂಚಲಿನ ಚಾಟಿಯನ್ನ ಬಳಸಿ 500 ಕ್ಕೂ ಹೆಚ್ಚು ಚಾಟಿ ಏಟು ಬರಿಯ ಬೆನ್ನ ಮೇಲೆ ಹೊಡೆಯುತ್ತಾ ಇದ್ದರಂತೆ,500 ಏಟು ಹೊಡೆಯಲು 2 ಗಂಟೆಗಳಿಗೂ ಹೆಚ್ಚು ಸಮಯ ಒಬ್ಬ ವ್ಯಕ್ತಿಗೆ ಬೇಕಾಗುತ್ತಾ ಇತ್ತಂತೆ..!

ಈ ಶಿಕ್ಷೆಯ ಸಂಧರ್ಭದಲ್ಲಿ ಬ್ಯಾನ್ಡ್ ಸೆಟ್ ನವರ ಗ್ರೂಪ್ ಬ್ಯಾನ್ಡ್ ಬಾರಿಸುತ್ತಾ ಇರಬೇಕಿತ್ತಂತೆ,ಬ್ಯಾನ್ಡ್ ನ ರಿದಂಗೆ ತಕ್ಕ ಹಾಗೆ (ಕ್ಯಾಟ್ ಓ ನೈನ್ ಟೈಲ್)ಶಿಕ್ಷಿಸುವವನು ಚಾಟಿಯಿಂದ ಏಟು ಹೊಡೆಯ ಬೇಕಿತ್ತಂತೆ,
ಚಾಟಿ ಏಟು ಹೊಡೆಯುವುದನ್ನ ಒಬ್ಬ ಬ್ಯಾನ್ಡ್ ಸೆಟ್ ನ ಸದಸ್ಯ ಗಮನಿಸುತ್ತಾ ನಿಂತಿರ ಬೇಕಿತ್ತಂತೆ...!
ಈ ಕೃತ್ಯವನ್ನ ಇಡೀ ಬೆಟಾಲಿಯನ್ ವೀಕ್ಷಣೆ ಮಾಡುತ್ತಾ ಇರುತ್ತಿತ್ತು..ಒಬ್ಬ ಸರ್ಜನ್ ಕೂಡ ಅಲ್ಲಿ ಹಾಜರಿದ್ದು,ಅಪರಾಧಿಗೆ ಶಿಕ್ಷೆ ಕೊಟ್ಟಿದ್ದು ಸಾಕು ಅಥವಾ ಇನ್ನು ಮುಂದುವರಿಸಬೇಕು ಎಂದು ನಿರ್ಧಾರ ಅವರು ಮಾಡುತ್ತಾ ಇದ್ದರಂತೆ..!!
ಈ ರೀತಿಯ ಶಿಕ್ಷೆ ಕಾನೂನು ಮಾಡಲಾಗಿತ್ತಂತೆ..!

ಆರ್ಮಿಯಲ್ಲಿ ಬ್ಯಾನ್ಡ್ ಸೆಟ್ ನವರನ್ನ ಬಳಸಿ ಹಾಗೂ ಬ್ರಿಟಿಷ್ ನೇವಿ ಯಲ್ಲಿ ಶಿಕ್ಷೆ ಕೊಡಲು ನಾಲ್ಕು ಅಧಿಕಾರಿಗಳು ಕ್ಯಾಟ್ ಓ ನೈನ್ ಟೈಲ್ ಹಿಡಿದು ಅಪರಾಧಿಯನ್ನ ಹೊಡೆಯುವಾಗ ಪಕ್ಕದಲ್ಲೇ ತಮ್ಮ ಸರದಿಗಾಗಿ ಕಾಯುತ್ತಾ ನಿಲ್ಲುತ್ತಾ ಇದ್ದರಂತೆ, ಹಾಗೂ ಬ್ರಿಟಿಷ್ ರಾಯಲ್ ಏರ್ಪೋರ್ಸ್ ನಲ್ಲಿ ಬೇರೆ ಬೇರೆ ರೀತಿಯಲ್ಲಿ ಈ ಕ್ಯಾಟ್ ಓ ನೈನ್ ಟೈಲ್ ಬಳಸಿ ಶಿಕ್ಷೆ ವಿಧಿಸುತ್ತಾ ಇದ್ದರೂ ಎನ್ನಲಾಗಿದೆ..!

ಈ ಶಿಕ್ಷೆ ಆಸ್ಟ್ರೇಲಿಯಾ, ಕೆನಡಾ ದಲ್ಲೂ 1867,1881 ರಲ್ಲಿ ನಡೆಯುತ್ತಾ ಇತ್ತು ಎನ್ನಲಾಗಿದೆ!
1948ರಲ್ಲಿ ಬ್ರಿಟನ್ ನಲ್ಲಿ ಈ ಕಾನೂನನ್ನು ತೆಗೆದು ಹಾಕಲಾಯಿತು ಹಾಗೂ ಆಸ್ಟ್ರೇಲಿಯಾದಲ್ಲಿ 1957ರಲ್ಲಿ ಇದನ್ನ ತೆಗೆಯಲಾಯ್ತು..
ಆದರೆ ಕೆಲವು ಕಾಮನ್ ವೆಲ್ತ್ ರಾಷ್ಟ್ರಗಳಲ್ಲಿ ತೀರಾ ಇತ್ತೀಚಿನ ವರೆಗೆ ಇದು ಬಳಕೆಯಲ್ಲಿ ಇತ್ತು ಎನ್ನಲಾಗಿದೆ..!!!!

1997ರಲ್ಲಿ,ಸೌತ್ ಜಾ0ಬಿಯಾ,ಜಮೈಕಾ,ಸೌತ್ ಆಫ್ರಿಕಾ,ಉಗಾಂಡ 2001,ಪಿಜಿ2002,ಕೆಲವು ದೇಶದಲ್ಲಿ ಈ ರೀತಿಯ ಶಿಕ್ಷೇ ನಿಷೇಧ ಮಾಡಲಾಯ್ತು ಎನ್ನಲಾಗಿದೆ..!
ಇನ್ನೂ ಹಲವು ರಾಷ್ಟ್ರಗಳಲ್ಲಿ ಕ್ರಮೇಣ ಈ ಶಿಕ್ಷೆಯನ್ನ ಸಂಪೂರ್ಣ ನಿಷೇಧ ಮಾಡಲಾಗಿದೆ..

ತೀರಾ ಇತ್ತೀಚೆನವರೆಗೆ ಟ್ರಿನಿಡಾದ್ ಅಂಡ್ ಟ್ಯೂಬ್ಯಾಗೋ ಈ ಶಿಕ್ಷೆ ತೆಗೆದು ಹಾಕಿರಲಿಲ್ಲ,ಅಂದರೆ 2005 ರಲ್ಲಿ ಕ್ಯಾಟ್ ಓ ನೈನ್ ಟೈಲ್ ಬಳಸಿ ಶಿಕ್ಷೆ ಕೊಟ್ಟಿದ್ದು ತಿಳಿದು,ಅಮೇರಿಕಾದ ಮಾನವ ಹಕ್ಕು ಕೋರ್ಟ್,15 ಏಟು ತಿಂದು,
ದೈಹಿಕ ಹಾಗೂ ಮಾನಸಿಕ ಹಿಂಸೆ ಅನುಭವಿಸಿದ ಅಪರಾಧಿಗೆ,ಸುಮಾರು 50,000 ಡಾಲರ್ ಪಾವತಿಸುವಂತೆ ತಾಕೀತು ಮಾಡಿತ್ತು..!
ಆದರೆ
ಈ ತೀರ್ಪು ಎಷ್ಟರ ಮಟ್ಟಿಗೆ ಯಶಸ್ವಿಯಾಗಿ ಶಿಕ್ಷೆ ಪಡೆದ ವ್ಯಕ್ತಿಗೆ ಸಹಾಯವಾಯ್ತು ಸ್ಪಷ್ಟವಾಗಿ ಮಾಹಿತಿ ಇಲ್ಲ ಎನ್ನಲಾಗಿದೆ..!

ಥೋ..
ಕ್ಯಾಟ್ ಓ ನೈನ್ ಟೈಲ್...ಇದೆಲ್ಲಾ ಎಂತಾ..
ನಮ್ಮ ಸ್ಕೂಲ್ ನಲ್ಲಿ ಮಾಸ್ಟ್ರು ಹತ್ರ ಬೆತ್ತದಲ್ಲಿ,
ಲಕ್ಕಿ ಬರ್ಲಿನಲ್ಲಿ,
ಹೈಸ್ಕೂಲ್ ನಲ್ಲಿ,ಮಾಸ್ಟ್ರು ಡಸ್ಟರ್ ನಲ್ಲಿ, ಪಿಟಿ ಮಾಸ್ಟ್ರು ವಿಶಲ್ ಗಾರ್ಡ್ ನಲ್ಲಿ,
ಅಪ್ಪನ ಹತ್ರ,ಬೆಲ್ಟ್ನಲ್ಲಿ,
ಅಮ್ಮನ ಹತ್ರ ದೋಸೆ ಸೆಟಗಾ,ಬರಿ ಕೈಯಲ್ಲಿ ಹೊಡೆತ ತಿಂದು,ಹೊಡೆಯುವಾಗ ಜಾತ್ರೆಲಿ ತಗೊಂಡ ಗಾಜಿನ ಬಳೆ ಒಡೆದ ಸಿಟ್ಟಿಗೆ ಇನ್ನೊಂದು ರೌಂಡ್,ಲೆಕ್ಕ ಇಡದಷ್ಟು ಇನ್ಪನೈಟ್ ಹೊಡೆತ ತಿಂದಿದ್ದೇವೆ..
ಇದೆಲ್ಲಾ ನತಿಂಗ್ ಯಾ....
ಅನ್ನೋದು ಬೇಡ ನೀವು ಆಯ್ತಾ..
😂

ಭಾನುವಾರ, ಏಪ್ರಿಲ್ 23, 2023

ವೃದ್ದಾಪ್ಯ

ಸಾಮಾನ್ಯವಾಗಿ ಯು.ಕೆಯಲ್ಲಿ ವಯಸ್ಸಾದವರು ಯಾರ ಸಹಾಯ ಇಲ್ಲದೇ ತಮಗೆ ಬೇಕಾದ ಶಾಪಿಂಗ್ ಮಾಲ್,ಅಂಗಡಿ,ರೆಸ್ಟೋರೆಂಟ್,ಮ್ಯೂಸಿಯಂ,ಪ್ರವಾಸಿತಾಣ ಗಳಲ್ಲಿ ಓಡಾಡಿ ಕೊಂಡು ಇರ್ತಾರೆ,ಹಾಗೆ ಸೌಲಭ್ಯವೂ ಸ್ಥಳೀಯ ಸಂಸ್ಥೆ ಹಾಗೂ ಸರ್ಕಾರದ ವತಿಯಿಂದ ಇರುತ್ತೆ ಹಾಗೂ ನೋಡಿಕೊಳ್ಳೋರು ಇರ್ತಾರೆ,ಹಿರಿಯರಿಗೆ ಹಾಗೂ ಅಶಕ್ತರು,ಚಿಕ್ಕ ಮಕ್ಕಳು ಇರುವವರಿಗೆ ವಿಶೇಷ ಸ್ಥಾನ ಮಾನವೂ ಇತರರು ಕೊಡೋದು ಸಾಮಾನ್ಯ..!
ಹೀಗೆ ಹಿರಿಯರು
ಯಾರಾದರೂ ಸಿಕ್ಕಾಗ ಚನ್ನಾಗಿ ಮಾತಾಡಿಸ್ತಾರೆ..

ಇಂತಹಾ ತುಂಬು ಜೀವನ ಕಂಡ ಹಿರಿಯ ಜೀವಗಳ ಜೊತೆ ಮಾತಿಗಿಳಿದು ಅವರ ಬಳಿ ನಿಂತು,ಅವರ ಜೀವನ ಅನುಭವ, ಒಳ್ಳೆಯ ಮಾತು ಹೇಳಿಸಿ ಕೊಳ್ಳೋದೇ ನೆಮ್ಮದಿ,ಸಂತೋಷ..

ಹೇಗಿದ್ದೀರಿ,ನಿಮ್ಮ ಲೈಫ್ ಹೇಗಿದೆ,ಕಾಫಿ,ತಿಂಡಿ,ಊಟ ಆಯ್ತಾ,ನಿಮ್ಮದೇನು ಪ್ಲಾನ್ ಇವತ್ತು,ವೀಕ್ ಎಂಡ್ ಎಲ್ಲಿ ಹೋಗೋದು,ಇವತ್ತು ದಿನ ಚನ್ನಾಗಿದೆ ಕೋಲ್ಡ್ ಕಡಿಮೆ ಇದೆ ಅಲ್ವಾ!??
ಹೀಗೆಲ್ಲಾ..
ಶಾರ್ಟ್ ಟಾಕ್ ಸಾಮಾನ್ಯ ವಾಗಿ ಯಾವುದೇ ಹಮ್ಮು,ಬಿಮ್ಮು ಇಲ್ಲದೇ,ಸೀನಿಯಾರಿಟಿ ತೋರಿಸದೆ ಮಾತಿಗೆ ಇಳಿಯುತ್ತಾರೆ,
ಬಹಳ ಆತ್ಮೀಯತೆಯಿಂದ ಮಾತಾಡ್ತಾರೆ ಹಲವು ಹಿರಿಯರು..❤️

ಹೆಚ್ಚಾಗಿ ತುಂಬಾ ವಯಸ್ಸಾದ ಗಂಡ,ಹೆಂಡತಿ,ಪ್ರೇಮಿಗಳಂತೆ ಒಟ್ಟಿಗೆ ಓಡಾಡೋದು ಬಹಳ ಸಾಮಾನ್ಯವಾಗಿ ನೋಡಿದ್ದೇನೆ..ಒಮ್ಮೆಯೂ ವಿಚ್ಛೇದನ ವಾಗದೆ ಸುಮಾರು 60 ವರ್ಷ ಜೊತೆಗೆ ಜೀವನ ಸಾಗಿಸಿದವರನ್ನ ಭೇಟಿಯಾಗಿದ್ದೇನೆ, ಮಾತಾಡಿಸಿದ್ದೇನೆ..!

ಹೀಗೆ ಒಬ್ಬ ದಂಪತಿಯನ್ನ ಒಮ್ಮೆ ಪ್ರವಾಸಕ್ಕೆ ಹೋದಾಗ ಭೇಟಿ ಆಗಿದ್ದೆ,ಹೀಗೆ ಮಾತಿಗೆ ಇಳಿದಾಗ,ಅವರು ಎಷ್ಟು ಚೆನ್ನಾಗಿ ಜೀವನದ ಸಾರ ಹೇಳಿದ್ರೂ ಗೊತ್ತಾ..
ಇಬ್ಬರೂ ಅನ್ಯೋನ್ಯವಾಗಿ ಒಬ್ಬರಿಗೆ ಒಬ್ಬರು ಸಹಾಯ ಮಾಡಿಕೊಂಡು ಇರೋ ಹಾಗೆ ಕಂಡರು,ಅವರ ಜೀವನ ಉತ್ಸಾಹ ನೋಡಿ ಸಕತ್ ಖುಷಿ ಅನಿಸ್ತು..

"ನಿಮಗೆ ಎಷ್ಟು ಏಜ್" ಕೇಳಿದೆ..

"ನನಗೆ ಸುಮಾರು 86 ವರ್ಷ,RAF(Royal Air force)ನಲ್ಲಿ ಸೇವೆ ಸಲ್ಲಿಸಿದ್ದೆ,ಪಕ್ಕದಲ್ಲೇ ಇದ್ದ
ಹೆಂಡತಿಯನ್ನ ನೋಡಿ ನಗುತ್ತಾ ಹನಿ ನಿನಗೆ 81 ಅಲ್ವಾ!!?" ಅಂದ್ರು,
"ಹೂ 81 ಅಂತ"ಯಾವುದೇ ಅನುಮಾನ ಹಾಗೂ ಕೆಂಗಣ್ಣು ಬಿಡದೇ ಒಪ್ಪಿ ಕೊಂಡರು ಹೆಂಡತಿ..!
ಅವರ ಹಾಸ್ಯ ಪ್ರಜ್ಞೆ ಇಷ್ಟ ಆಯ್ತು..

ಆ ಹಿರಿಯರು ಹೇಳಿದ್ದು
"60 ವರ್ಷ ಆದ ಮೇಲೆ ಮನುಷ್ಯನಿಗೆ ಜೀವನ ಶುರುವಾಗೋದು,ಜೀವನ ಅನುಭವಿಸೋಕೆ ಸಮಯ ಸಿಗೋದು,ಹುಟ್ಟಿದಾಗಿಂದ ಓದೋದು,ಕೆಲಸ ಹಿಡಿಯೋದು,ಮದುವೆ,ಮಕ್ಕಳು,ಕಾರು,ಮನೆ ಎಲ್ಲಾ ಜವಾಬ್ದಾರಿ ಸಾಮಾನ್ಯವಾಗಿ ಹೆಚ್ಚಿನವರಿಗೆ ಅದೆಲ್ಲಾ ಮುಗಿಸುವಾಗ 60 ಆಗಿರುತ್ತೆ,ನಂತರವೇ ನಾವು ಪ್ರಪಂಚವನ್ನ ಸುಂದರವಾದ ಕಣ್ಣಿನಿಂದ ನೋಡಬೇಕಾಗುತ್ತೆ..

ನಮಗೆ ಮದುವೆ ಆಗಿ 61 ವರ್ಷ ಆಗಿದೆ,
ನಾವು
ಬೇಕಾಗಿದ್ದನ್ನ ತಿಂತೇವೆ,ಎಲ್ಲಾದ್ರೂ ಹೋಗಬೇಕು ಅನಿಸಿದ್ರೆ ಹೊರಡುತ್ತೇವೆ,ವಾರಕ್ಕೆ ಒಮ್ಮೆ ಮಕ್ಕಳು,ಮೊಮ್ಮಕ್ಕಳು ಬಂದು ನಮ್ಮ ಜೊತೆ ಸಮಯ ಕಳೆದು ಊಟ,ತಿಂಡಿ ಮಾಡಿ ಹೋಗ್ತಾರೆ..
ಒಂದು ನಾಯಿ ಸಾಕಿ ಕೊಂಡಿದ್ದೇವೆ..
ಬದುಕು ಚನ್ನಾಗಿದೆ.."

ಅಂದ್ರು ಎಷ್ಟು ನಿಜ ಅನಿಸ್ತು ಅಂದ್ರೆ..!

ಹೌದಲ್ವಾ 60 ನಂತರವೇ ಮನುಷ್ಯನಿಗೆ ಸ್ವಲ್ಪ ಬಿಡುವು ಸಿಗುವ ಹಾಗೆ ಆಗೋದು..!!

ನಮ್ಮವರಲ್ಲಿ ಹಲವರನ್ನ ನೋಡಿದ್ದೇನೆ..
60 ವರ್ಷ ಆಯ್ತಾ..!!

ನೌಕರಿ ಇದ್ದರೆ ನಿವೃತ್ತಿ ಆದ ಕೂಡಲೇ ಅವರು ಅಪ್ರಯೋಜಕರು ಅನ್ನುವ ಹಾಗೆ ಮನೆಯವರು,ನೆಂಟರು ಇಷ್ಟರು ಇಂಡೈರೆಕ್ಟ್ ಮಾತು ಶುರುವಿಟ್ಟು ಕೊಳ್ತಾರೆ..!

"ಇನ್ನೇನು ವಯಸ್ಸಾಯ್ತು ನಿಮಗೆ,ಮಕ್ಕಳ ಮದುವೆ ಎಲ್ಲಾ ಮಾಡಿಯಾಯ್ತು,ಜವಾಬ್ದಾರಿ ಮುಗೀತು,ಇನ್ನೇನು,ಮನೇಲಿ ಇರಿ ಎಲ್ಲೂ ಹೋಗಬೇಡಿ,ಅಲ್ಲಿ ಟ್ರಾಫಿಕ್,ಇಲ್ಲಿ ಜನ ಜಾಸ್ತಿ,ನಿಮಗೆ ಕಾಲು ನೋವು,ಕೈ ನೋವು,ಶುಗರ್,ಬಿಪಿ ಇದೆ ಏನೋ ಅಲ್ವಾ!?,ತಲೆ ತಿರುಗುತ್ತೆನಾ!?,ಗ್ಯಾಸ್ಟ್ರಿಕ್ ಇದೆಯಾ!? ಅಂತ ಹೇಳಿ ಹೇಳಿ ಅವರನ್ನ ಕೈಲಾಗದವರು ಎನ್ನುವ ಹಾಗೆ ಮನಸ್ಸಿಗೆ ಬರುವಂತೆ ಮಾತಾಡಿ ಮೂಲೆಗೆ ಕೂರಿಸುವ ಜನರೇ ಹೆಚ್ಚು..!

ಸ್ವತಃ ಇದನ್ನ ಕೇಳಿದವರೂ,ಅನಿವಾರ್ಯವಾಗಿ ನಮಗೆ ವಯಸ್ಸಾಯ್ತು,ಕರೆಕ್ಟ್,ಖಾಯಿಲೆ ಇದೆಯೋ ಏನೋ,ಆಗಾಗ ಹೊಟ್ಟೆ, ಕೈ,ಕಾಲು,ಎದೆ ಬೇರೆ ನೋವುತ್ತೆ,ಇನ್ನೇನು ಹೊರಗೆ ಹೋಗೋದು ಎನ್ನುವ ಹಾಗೆ ಮಾನಸಿಕವಾಗಿ ತಾನು ಅಪ್ರಯೋಜಕ,ವೃದ್ದಾಶ್ರಮಕ್ಕೆ ಹೋಗೋಕೆ ಪೆಟ್ಟಿಗೆ ಕಟ್ಟ ಬೇಕು ಎನ್ನುವ ರೀತಿಯಲ್ಲೇ ತಮ್ಮನ್ನ ತಯಾರಿ ಮಾಡಿ ಕೊಂಡು ಬಿಡ್ತಾರೆ..!?

ದುಡಿಯುತ್ತಾ ಇದ್ದಾಗ ಶಕ್ತಿವಂತ,
ದುಡಿಯುದು ನಿಲ್ಲಿಸಿದಾಗ ಅವರು ಕೈಲಾಗದವರು,ವಯಸ್ಸಾಯ್ತು,ಮನೇಲಿ ಇರಬೇಕು..!?

60 ವರ್ಷದ ನಂತರವೇ ಸಮಯ ಹಾಗೂ ಹಣ ಎಲ್ಲಾ ಇದ್ದೂ ಜೀವನದಲ್ಲಿ ಎಲ್ಲಾ ಇದೆ ಅನಿಸುತ್ತಾ ಇರುವಾಗ,ಅವರಿಗೆ ಸಿಗದ ಸಮಯ,ಅವರಿಗೆ ಅವರು ಕೊಡೋಕೆ ಆಗದ ಸಮಯ,ಸ್ವಾತಂತ್ರ,ಕೊಡೋಕೆ ಬಿಡದಷ್ಟು ಮಾನಸಿಕವಾಗಿ ದಾಳಿ ಶುರು,ನಿಮಗೆ ಆರೋಗ್ಯ ಸರಿ ಇಲ್ಲ,ನೀವು ವೀಕ್ ಆಗಿದಿರಿ,ಮನೇಲಿ ಇರಿ ಅಂತ ಅವರ ಮಕ್ಕಳೋ,ಮೊಮ್ಮಕ್ಕಳೋ,ಸೊಸೆಯಂದಿರೋ ಮನೇಲಿ ಇರಿ ಅಂತ ಪರ್ಮಾನು ಹೊರಡಿಸಿದರೆ,ಅಷ್ಟು ವರ್ಷ ಮನೆ,ಸಂಸಾರ ಸಾಕಿ ಸಲುಹಿದ್ದ ಹಿರಿಯ ಜೀವಗಳ ಮನಸ್ಥಿತಿ ಏನಾಗಬೇಡ..!
ಅಲ್ವಾ!?

ಇದ್ಯಾಕೆ ಹೇಳಿದೆ ಅಂದರೆ
ಮೊನ್ನೆ ಎಲ್ಲೋ ನೋಡಿದ್ದೆ 70 ವರ್ಷದ ವೃದ್ಧರು ಉನ್ನತ ಪದವಿ ಪಡೆದು ಲೆಚ್ಚರ್ ಕೆಲಸ ಮುಂಬೈ ನಲ್ಲಿ ಎಲ್ಲೋ ಮಾಡಿ ನಂತರ ನಿವೃತ್ತಿ ಪಡೆದು,ಆಟೋ ಓಡಿಸಿ ಜೀವನ ಮಾಡುತ್ತಾ ಇದಾರೆ..
ತನ್ನ ಪತ್ನಿಗೆ ತಾನು ಗಲ್ ಫ್ರೆಂಡ್ ಅಂತಾರೆ ಅನ್ನೋ ವಿಷಯ..
ಆಗ ಇದು ನೆನಪಾಯ್ತು..
😍
ಹೀಗೆ 60 ನಂತರ ಜೀವನವನ್ನ ಎಂಜಾಯ್ ಮಾಡಬೇಕು,ನಮಗೇನು ವಯಸ್ಸಾಯ್ತು ಮನೇಲಿ ಕೂರಬೇಕು ಎನ್ನುವ ಮನಸ್ಥಿತಿ ಬಿಟ್ಟು,ನಾವು ದಂಪತಿಗಳು ಯಾವತ್ತಿದ್ರೂ ಯಂಗ್,ನನ್ನ ಹೆಂಡತಿ ನನಗೆ ಯಾವತ್ತಿದ್ರೂ ಮದುವೆ ಹೊಸತರಲ್ಲಿ ಇದ್ದ ಗಲ್ ಫ್ರೆಂಡ್ ಎನ್ನುವ ಹಾಗೆ ಮನಸ್ಥಿತಿ ಇರುವ ಎಲ್ಲಾ ಸ್ವಾವಲಂಭಿ 😍,ಜೀವನೋತ್ಸಾಹ ಇರುವ ಹಿರಿಯ ಜೀವಗಳಿಗೆ ನಮಸ್ಕಾರಗಳು..
❤️❤️❤️❤️❤️🙏


ಸಾಂಕ್ರಾಮಿಕ ರೋಗಗಳ ಇತಿಹಾಸ

ಜಗತ್ತಿನಲ್ಲಿ ಹಲವು ವರ್ಷಗಳಿಂದ ನಾನಾ ತರದ ಸಾಂಕ್ರಾಮಿಕ ರೋಗಗಳು,ಮಾರಾಣಾ0ತಿಕ ಖಾಯಿಲೆಗಳು ಜನರನ್ನ ಭಾದಿಸಿವೆ,ಈಗಲೂ ಭಾದಿಸುತ್ತಾ ಇವೆ ಹಾಗೂ ಅದಕ್ಕೆ ಲಸಿಕೆ ಕಂಡು ಹಿಡಿದು ಅದು ಪರಿಣಾಮಕಾರಿಯಾಗುವುದರ ಒಳಗೆ ಪ್ರಾಣ ಹಾನಿ ಕೂಡ ಕೋಟಿ ಲೆಕ್ಕದಲ್ಲಿ ಆಗಿದ್ದ ಉದಾಹರಣೆಗಳು ಇವೆ.
ಹೀಗೆ ಜಗತ್ತಿನ ವಿವಿಧ ಕಡೆಯಿಂದ ಪ್ರಾರಂಭವಾದ
ಖಾಯಿಲೆಗಳು ಹಾಗೂ ಅದರಿಂದ ವಿವಿದ ದೇಶದಲ್ಲಿ ಮರಣದ ಸಂಖ್ಯೆಗಳ ಕೆಲವು ವಿವರ,ಉತ್ತರ ಇಂಗ್ಲೆಂಡ್ ನ ಚೆಸ್ಟರ್ ನಗರದಲ್ಲಿ ಇರುವ ಸಿಖ್ ಟು ಡೆತ್ ಎಂಬ ಒಂದು ಆರೋಗ್ಯಕ್ಕೆ ಸಂಬಂಧಿಸಿದ ಮ್ಯೂಸಿಯಂ ನಲ್ಲಿ ನನಗೆ ಸಿಕ್ಕ ಮಾಹಿತಿ ಇಲ್ಲಿದೆ..

𝐏𝐥𝐚𝐠𝐮𝐞 𝐨𝐟 𝐣𝐮𝐬𝐭𝐢𝐧𝐢𝐚𝐧.
(541-542)541ನೇ ಇಸವಿಯಲ್ಲಿ
ಯುರೋಪ್ನಲ್ಲಿ ಪ್ರಾರಂಭವಾದ ಈ ಖಾಯಿಲೆಗೆ
ಮರಣ ಹೊಂದಿದವರ ಸಂಖ್ಯೆ
ಅಂದಾಜು 50,000,000

𝑩𝒍𝒂𝒄𝒌 𝑫𝒆𝒂𝒕𝒉
(1347-1351)1347 ನೇ ಇಸವಿಯಲ್ಲಿ
ಅಪ್ರೋ ಯುರೇಷಿಯಾದಲ್ಲಿ ಪ್ರಾರಂಭವಾದ ಈ ಖಾಯಿಲೆಯಿಂದ
ಮರಣ ಹೊಂದಿದವರ ಸಂಖ್ಯೆ ಅಂದಾಜು
200,000,000..
ಸುಮಾರು 30 ರಿಂದ 60% ಯುರೋಪ್ ಜನಸಂಖ್ಯೆ ಇದರಿಂದ ಮರಣ ಹೊಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ..

𝑺𝒎𝒂𝒍𝒍𝒑𝒐𝒙,(ವೇರಿಯೋಲಾ,ವೇರಿಯೊಲವೆರಾ,ಪಾಕ್ಸ್,ರೆಡ್ ಪ್ಲೇಗ್) (1520-1979) 1520 ನೇ ಇಸವಿಯಲ್ಲಿ
ಪ್ರಾರಂಭವಾದ ಸಾಂಕ್ರಾಮಿಕ ಖಾಯಿಲೆಯಿಂದ
ಮರಣ ಹೊಂದಿದವರ ಸಂಖ್ಯೆ
ಅಂದಾಜು56,000,000.

𝑰𝒕𝒂𝒍𝒊𝒂𝒏 𝒑𝒍𝒂𝒈𝒖𝒆
(1629-1631) 1629 ನೆ ಇಸವಿಯಲ್ಲಿ
ಇಟಲಿಯಲ್ಲಿ ಗುರುತಿಸಿ ಕೊಂಡ ಈ ಸಾಂಕ್ರಾಮಿಕ ಖಾಯಿಲೆಯಿಂದ
ಮರಣ ಹೊಂದಿದವರ ಸಂಖ್ಯ
1,000,000.
35% ರಷ್ಟು ಇಟಲಿಯ ಜನಸಂಖ್ಯೆ ಇದರಿಂದ ಮರಣ ಹೊಂದಿರ ಬಹುದು ಎನ್ನಲಾಗಿದೆ..!

𝑮𝒓𝒆𝒂𝒕 𝒑𝒍𝒂𝒈𝒖𝒆.
(1665-1666)1665 ಇಸವಿಯಲ್ಲಿ ಲಂಡನ್ನಲ್ಲಿ ಕಾಣಿಸಿ ಕೊಂಡಿತ್ತು,ಈ ಸಾಂಕ್ರಾಮಿಕ ರೋಗದಿಂದ
ಮರಣ ಹೊಂದಿದವರ ಸಂಖ್ಯೆ ಅಂದಾಜು
100,000
ಎನ್ನಲಾಗಿದೆ..

𝑪𝒉𝒐𝒍𝒆𝒓𝒂.
(1817-1923)1817ರಲ್ಲಿ ಭಾರತದ ಜೆಸೋರಿಯಲ್ಲಿ ಕಾಣಿಸಿ ಕೊಂಡಿದ್ದ,ಈ ರೋಗದಿಂದ
ಮರಣ ಹೊಂದಿದವರ ಸಂಖ್ಯೆ ಅಂದಾಜು 1,000,000ವಂತೆ..!

𝒀𝒆𝒍𝒍𝒐𝒘 𝒇𝒆𝒘𝒆𝒓.
1850 ರಲ್ಲಿ ಮೊಟ್ಟ ಮೊದಲು ಆಫ್ರಿಕಾದಲ್ಲಿ ಕಂಡು ಬಂದಿದ್ದು
ಈ ಖಾಯಿಲೆಯಿಂದ
ಮರಣ ಹೊಂದಿದವರ ಸಂಖ್ಯೆ
ಅಂದಾಜು150,000!

𝑪𝒉𝒊𝒏𝒆𝒔𝒆/𝑰𝒏𝒅𝒊𝒂𝒏 𝒑𝒍𝒂𝒈𝒖𝒆.
(1855-1960) 1855 ಇಸವಿಯಲ್ಲಿ ಮೊದಲು ಮಧ್ಯ ಏಷ್ಯಾದಲ್ಲಿ ಕಂಡು ಬಂದಿತ್ತು ಈ ಖಾಯಿಲೆ,ಭಾರತವೂ ಸೇರಿದಂತೆ ಹಲವು ರಾಷ್ಟ್ರಕ್ಕೆ ದೊಡ್ಡ ಹೊಡೆತವೇ ಕೊಟ್ಟಿತ್ತು ಇದರಿಂದ
ಮರಣ ಹೊಂದಿದವರ ಸಂಖ್ಯೆ ಅಂದಾಜು ಬರೋಬ್ಬರಿ
12,000,000..!

𝑹𝒖𝒔𝒔𝒊𝒂𝒏 𝒇𝒍𝒖
1889 ಇಸವಿಯಲ್ಲಿ  ರಷ್ಯಾ ದೇಶದ ಭುಕಾರ ಎಂಬಲ್ಲಿ ಕಂಡು ಬಂದಿತ್ತು,ಇದರಿಂದ
ಮರಣ ಹೊಂದಿದವರ ಸಂಖ್ಯೆಅಂದಾಜು1,000,000.
1890ರವರೆಗೆ ಇದರ ತೀವ್ರತೆ ಇತ್ತು..

𝑴𝒂𝒍𝒂𝒓𝒊𝒂
1897 ಮೊದಲ ಕೇಸ್ ಸಿಕಂದರಾ ಬಾದ್ ನಲ್ಲಿ ಕಾಣಿಸಿ ಕೊಂಡಿತ್ತು
ಸುಮಾರು 627000 ಜನ ಮಲೇರಿಯಾದಿಂದ ಇಲ್ಲಿಯವರೆಗೆ ಸಾವಿನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ..

𝑺𝒑𝒂𝒏𝒊𝒔𝒉 𝒇𝒍𝒖(The great influenza epidemic).(1918-1919)1918 ರಲ್ಲಿ ಮೊದಲು ಅಮೆರಿಕಾದಲ್ಲಿ ಕಾಣಿಸಿ ಕೊಂಡ ಈ ಪ್ಲು..
ಸುಮಾರು 50,000,000 ಜನರನ್ನ ಬಲಿ ತೆಗೆದು ಕೊಂಡಿದೆಯಂತೆ..

𝑨𝒔𝒊𝒂𝒏 𝑭𝒍𝒖(H2N2),
(1957-1958)1957ರಲ್ಲಿ ಪ್ರಥಮವಾಗಿ ದಕ್ಷಿಣ ಚೀನಾದಲ್ಲಿ ಕಾಣಿಸಿ ಕೊಂಡಿತ್ತು ಈ ಖಾಯಿಲೆ,
ಸುಮಾರು 1,100,000 ಜನರು ಇದರಿಂದ ಸಾವನ್ನಪ್ಪಿದ್ದಾರೆ..

𝑯𝒐𝒏𝒈𝒌𝒐𝒏𝒈 𝑭𝒍𝒖
(1968-1970)1968ರಲ್ಲಿ ಮೊದಲ ಬಾರಿಗೆ ಹಾಂಗ್ ಕಾಂಗ್ ನಲ್ಲಿ ಕಾಣಿಸಿ ಕೊಂಡಿತ್ತು ಈ ರೋಗ...
ಈ ಖಾಯಿಲೆಯಿಂದ ಸಾವನ್ನಪ್ಪಿದರು ಸುಮಾರು ಅಂದಾಜು 1,000,000..

𝑯𝑰𝑽/𝑨𝑰𝑫𝑺
1981-? ಇಸವಿಯಲ್ಲಿ ಅಮೆರಿಕಾದಲ್ಲಿ ಮೊಟ್ಟ ಮೊದಲು ಕಾಣಿಸಿ ಕೊಂಡ ಈ ಭಯಾನಕ ಖಾಯಿಲೆಗೆ ಇಲ್ಲಿಯವರೆಗೆ
ಮರಣ ಹೊಂದಿದವರ ಸಂಖ್ಯೆ ಅಂದಾಜು 35,000,000,ಇಂದಿಗೂ ಇದಕ್ಕೆ ಲಸಿಕೆ ಕಂಡು ಹಿಡಿಯಲು ಸಾಧ್ಯವಾಗಿಲ್ಲ..

𝑺𝒂𝒓𝒔
(2002-2003)2002 ರಲ್ಲಿ ಮೊದಲಿಗೆ ಚೀನಾದ ಶು0ದೇ ಎಂಬಲ್ಲಿ ಕಂಡು ಬಂದಿತ್ತು,ಇದರಿಂದ
ಮರಣ ಹೊಂದಿದವರು 770 ಜನ

𝑺𝒑𝒂𝒊𝒏 flu(H1N1).
(2009-2010) 2009 ರಲ್ಲಿ ಮೊದಲು ಉತ್ತರ ಅಮೇರಿಕಾದಲ್ಲಿ ಕಂಡು ಬಂದಿತ್ತು
ಮರಣ ಹೊಂದಿದವರು 200,000..

𝑬𝒃𝒐𝒍𝒂.
(2014-2016) 2014 ಇಸವಿಯಲ್ಲಿ ಮೊದಲಿಗೆ ಆಫ್ರಿಕಾದಲ್ಲಿ ಕಾಣಿಸಿ ಕೊಂಡ ಈ ಮಾರಣಾ0ತಿಕ ಖಾಯಿಲೆಗೆ
ಮರಣ ಹೊಂದಿದವರ ಸಂಖ್ಯೆ-11,000..

𝑴𝒆𝒓𝒔.
2015 ರಲ್ಲಿ ಮೊದಲ ಬಾರಿಗೆ ಸೌದಿ ಅರೇಬಿಯಾದಲ್ಲಿ ಕಾಣಿಸಿ ಕೊಂಡ ರೋಗ,
ಈ ರೋಗದಿಂದ
ಮರಣ ಹೊಂದಿದವರು 850..

𝑪𝒐𝒗𝒊𝒅 19.
2019-?
ಎಂಬ ಸಾಂಕ್ರಾಮಿಕ ಖಾಯಿಲೆ ಮೊದಲ ಭಾರಿಗೆ ಚೀನಾ ದೇಶದ ವುಹಾನ್ ಎಂಬ ನಗರದಲ್ಲಿ ಕಾಣಿಸಿ ಕೊಂಡು ಇಡೀ ಜಗತ್ತನ್ನೇ ತಲ್ಲಣ ಗೊಳಿಸಿತ್ತು ಈಗಲೂ ಆ ವೈರಾಣು ವಿವಿಧ ರೂಪಾಂತರಗೊಂಡು ತೊಂದರೆ ಕೊಡುತ್ತಲೇ ಇದೆ..!
ಹಾಗೆ ನೋಡಿದರೆ ನಮ್ಮ ಜನರೇಷನ್ ನಲ್ಲಿ ಮಾರಣಾ0ತಿಕ ಖಾಯಿಲೆಗಳು ಹಿಂದೆ ಬಂದಂತೆ ಭೀಕರ ಖಾಯಿಲೆಗಳನ್ನ ಇತ್ತೀಚಿನ ಕೋವಿಡ್ ಬಿಟ್ಟರೆ ಬೇರೆಯದು ನಾವೆಂದೂ ಕಂಡಿಲ್ಲ, ಅನಿಸುತ್ತೆ.
ಸುಮ್ಮ ಸುಮ್ಮನೆ ಮಾತು ಮಾತಿಗೆ ಮುಖ ಮುಚ್ಚ ಅಂತ ಬೈಯುತ್ತಾ ಇದ್ದವರ ಶಾಪ ಎಲ್ಲರಿಗೂ ತಟ್ಟಿದ ಹಾಗೇ ಆಗಿದೆ,
ಈಗ ನಿಜಕ್ಕೂ ಎಲ್ಲರೂ ಮುಖ ಮುಚ್ಚಿ ಕೊಂಡು ಓಡಾಡುವ ಹಾಗೆ ಆಗಿದೆ..!😂

ಈ ಹೊಸಾ ಸಾಂಕ್ರಾಮಿಕ ಖಾಯಿಲೆಯಿಂದ
ಇಲ್ಲಿಯವರೆಗೆ ಪ್ರಪಂಚದಾದ್ಯಂತ ಮರಣ ಹೊಂದಿದವರ ಸಂಖ್ಯೆ ಅಂದಾಜು 5,425,817
ಆದರೆ ಕೇವಲ ಕೆಲವೇ ತಿಂಗಳುಗಳಲ್ಲಿ ಇದಕ್ಕೆ ಮೊತ್ತ ಮೊದಲು ಬ್ರಿಟನ್ ನಲ್ಲಿ ಲಸಿಕೆ ಕಂಡು ಹಿಡಿಯಲಾಗಿತ್ತು,ನಂತರ ಭಾರತವೂ ಸೇರಿದಂತೆ ಹಲವು ದೇಶಗಳು ಲಸಿಕೆ ಆವಿಷ್ಕಾರ ಮಾಡಿದ್ದು ಇತಿಹಾಸ..

ಇನ್ನು ಕೆಲವೇ ದಿನಗಳಲ್ಲಿ ಈ ಸಾಂಕ್ರಾಮಿಕ ಖಾಯಿಲೆ ಕೊನೆಗಾಣಲಿ ಎಂದು ದೇವರಲ್ಲಿ ಹುಲುಮಾನವರಾದ ನಾವು ಪ್ರಾರ್ಥನೆ ಮಾಡುವುದು ಒಂದೇ ನಮಗಿರುವ ದಾರಿ..
🙏

(ವಿ.ಸೂ:-ಸಿಕ್ ಟು ಡೆತ್ ಎಂಬ ಮ್ಯೂಸಿಯಂ ನಲ್ಲಿ ಸಿಕ್ಕ ಕೆಲವು ಮಾಹಿತಿಯನ್ನ ಇಲ್ಲಿ ಹಂಚಲು ಪ್ರಯತ್ನಿಸಿದ್ದೇನೆ..ಮಾಹಿತಿ ಹಾಗೂ ಅಂಕಿ ಅಂಶಗಳು ಅವರದ್ದೇ ಮೂಲ,ಇದು ಕೇವಲ ವಿಷಯ ಸಂಗ್ರಹ ಹಾಗೂ ಮಾಹಿತಿಗಾಗಿ ಮಾತ್ರ, ಯಾರಿಗೋ ಆತಂಕ,ಭಯ ಅಥವಾ ಬೇಸರಗೊಳಿಸಲು ಅಲ್ಲ..!)

Face Space Hand




ಟವರ್ ಬ್ರಿಡ್ಜ್ ನ ಗ್ಲಾಸ್ ಫ್ಲೋರ್ ಒಂದು ಅದ್ಭುತ ಅನುಭವ

ಲಂಡನ್ ಟವರ್ ಬ್ರಿಡ್ಜ್ ನ 42m ಎತ್ತರದ(ಸುಮಾರು137ಅಡಿ)ಜಾಗದಲ್ಲಿ ಎರಡು ಕಡೆ ನದಿ ದಂಡೆಯಲ್ಲಿರುವ ಟವರ್ ಗೆ(Pedestrains walkway)44mಉದ್ದದ(143ಅಡಿ)ಎರಡು ಕಾಲ್ನಡಿಗೆಯ ದಾರಿ ಮಾಡಲಾಗಿದೆ....!

ಇದಕ್ಕೆ ಹೋಗಲು ಲಿಫ್ಟ್ ವ್ಯವಸ್ಥೆ ಕೂಡ ಮಾಡಲಾಗಿದೆ....

ಈ ಎರಡೂ 42m ಎತ್ತರದಲ್ಲಿ ಇರುವ(Pedestrains walkway)ಕಾಲು ನಡಿಗೆಯ ದಾರಿಯ ಮಧ್ಯಭಾಗದಲ್ಲಿ ಎರಡೂ ಕಡೆ ಸುಮಾರು 11 m(ಸುಮಾರು 36ಅಡಿ) ಉದ್ದ, 1.8 m(ಸುಮಾರು 6ಅಡಿ) ಅಗಲ,ಗ್ಲಾಸ್ ಫ್ಲೋರ್ ಮಾಡಲಾಗಿದೆ,

ಸುಮಾರು 530 ಕೆಜಿ ತೂಕವಿರುವ ಒಂದು ಗ್ಲಾಸ್ ಪ್ಯಾನಲ್ ಇದು,

ಇದನ್ನ 2014 ರಲ್ಲಿ ಮಾಡಲಾಯಿತಂತೆ, ಸುಮಾರು 80mm(3.15 ಇಂಚು) ದಪ್ಪದ ಈ 7ಲೇಯರ್ ಫ್ಲೋರ್ ನ್ನ ಅಸ್ಟ್ರಿಯಾದಲ್ಲಿ ಮಾಡಲಾಯಿತಂತೆ,

ಈ ಫ್ಲೋರ್ ಮೇಲೆ 6 ಆನೆಗಳು ಒಂದರ ಮೇಲೆ ಒಂದು ನಿಂತರೂ
ಅಥವಾ
ಅಲ್ಲೇ ಸೇತುವೆಯ ಪಕ್ಕ ಇರುವ ಅತಿ ಎತ್ತರದ The Shard ಎಂಬ (ಸುಮಾರು 1017 ಅಡಿ ಎತ್ತರದ) ಕಟ್ಟಡದಷ್ಟು ಎತ್ತರಕ್ಕೆ 1Pound ಕಾಯಿನ್ ಒಂದರ ಮೇಲೆ ಒಂದು ಇಟ್ಟರೂ ಅದರ ಭಾರ ತಡೆಯುವಷ್ಟು ಗಟ್ಟಿಯಾಗಿ ಈ ಗ್ಲಾಸ್ ಫ್ಲೋರ್ ವಿನ್ಯಾಸ ಮಾಡಲಾಗಿದೆಯಂತೆ...!

ಹಾಗಾಗಿ ಧೈರ್ಯವಾಗಿ ಅಷ್ಟು ಎತ್ತರದಲ್ಲಿ ಗ್ಲಾಸ್ ಫ್ಲೋರ್(ಗಾಜಿನ ನೆಲದ) ಮೇಲೆ ನಿಂತು ಕೆಳಗೆ ಥೇಮ್ಸ್ ನದಿಯಲ್ಲಿ ಓಡಾಡುವ ಬೋಟ್ ಹಾಗೂ ಸಣ್ಣ ಪುಟ್ಟ ಪ್ರವಾಸಿ ದೋಣಿ ಹಾಗೂ ಸೇತುವೆಯ ರಸ್ತೆಯ ಮೇಲೆ ಓಡಾಡುತ್ತಾ ಇರುವ ಬಸ್,ಕಾರು ಇನ್ನಿತರೆ ವಾಹನಗಳು ಹಾಗೂ ನಡೆದಾಡುವ ಜನರ ಟಾಪ್ view ಅಥವಾ ಪಕ್ಷಿ ನೋಟ ನೋಡಬಹುದು(Birds view)..!

ಪ್ರವಾಸಿಗರು ಈ ಗ್ಲಾಸ್ ಫ್ಲೋರ್ ಮೇಲೆ ನಿಂತು,ಕುಳಿತು, ಮಲಗಿ ಇನ್ನೂ ಬೇರೆಬೇರೆ ವಿಧ ವಿಧದ,ಚಿತ್ರ ವಿಚಿತ್ರ ಭಂಗಿಗಳಲ್ಲಿ ಪೋಸ್ ಕೊಟ್ಟು, ಅಲ್ಲಿಂದ ಕೆಳಗೆ ಕಾಣುವ ರಸ್ತೆ ಹಾಗೂ ಥೇಮ್ಸ್ ನದಿಯ ದೃಶ್ಯ,ಸೆಲ್ಫಿ ಮೊಬೈಲ್ನಲ್ಲಿ ಹಾಗೂ ಕ್ಯಾಮರಾದಲ್ಲಿ ಫೋಟೋ ತೆಗೆದು ಕೊಳ್ಳೋದು ಸಾಮಾನ್ಯವಾಗಿರುತ್ತೆ..!

ಇದೊಂತರಾ ಖುಷಿ ಕೊಡುವ ಜಾಗ..
ಹಾಗೆ ಕೆಲವರು ಗ್ಲಾಸ್ ಮೇಲೆ ನಡೆದು ಹೋಗೋಕೆ ಜೀವ ಕೈಯಲ್ಲಿ ಹಿಡಿದುಕೊಂಡು,ಜೊತೆಗೆ ಇದ್ದವರನ್ನ ಗಟ್ಟಿ ಹಿಡಿದು ಕೊಂಡು ಹೋಗೋದು ನೋಡೋದೆ ಮಜಾ..!😂

ಅಂದ ಹಾಗೆ ಈ ಗಾಜಿನನೆಲ ಅಷ್ಟು ಜಾಗಕ್ಕೆ ತಯಾರಿಸಿ ಇಡಲು ತಗುಲಿದ ವೆಚ್ಚ ಸುಮಾರು £ 1 ಮಿಲಿಯನ್ ಅಂತೆ..!!!!

ಇದಕ್ಕೆ ಪುಕ್ಷಟ್ಟೆ ಬಿಡೋದಿಲ್ಲ..
ಒಬ್ಬರಿಗೆ £9.50 ಪೌಂಡ್ ಟಿಕೆಟ್ ಶುಲ್ಕ ಪಾವತಿ ಮಾಡಬೇಕು...!

Tower Bridge,London.

(ವಿ.ಸೂ:-ಗ್ಲಾಸ್ ಫ್ಲೋರ್ ಬಗ್ಗೆ,ಕೆಳಗೆ ನಿಂತಿದ್ದೇನೆ ಎಂದು ನೀವು ಊಹೆ ಮಾಡಿಕೊಂಡು ಬೇರೆ ಬೇರೆ ತರದ ಅನುಮಾನದ ಪ್ರಶ್ನೆಗಳನ್ನ ಕೇಳುವುದನ್ನ ಕಡ್ಡಾಯವಾಗಿ ನಿಷೇಧ ಮಾಡಲಾಗಿದೆ,ಕಾರಣ ನಾನು ಅಮಾಯಕ😉😂)

ಬುಧವಾರ, ಜೂನ್ 29, 2022

ಅಔರಿಗಾ ಲ್ಯಾಬ್ ಪ್ರಾಡ್






ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಸೆಂಬರ್ 1ನೇ ತಾರೀಖು ಬೆಳಿಗಿನ ಜಾವ 4.45 ಬಂದಿಳಿದ ಕೂಡಲೇ "ಅವರಿಗಾ"ಲ್ಯಾಬ್ಸ್ ನ ಥೋ Auriga Lab ಸಿಬ್ಬಂದಿ ಬಂದು ಒಂದು QR ಕೋಡ್ ಇರುವ ಸಣ್ಣ ಚೀಟಿ ಕೈಗೆ ನೀಡಿ..
ಇದನ್ನ ನಿಮ್ಮ ಮೊಬೈಲ್ನಲ್ಲಿ ಸ್ಕಾನ್ ಮಾಡಿ ನಿಮ್ಮ ವಿವರ ನೀಡಿ ನಂತರ ಆನ್ ಲೈನ್ ಹಣ ಪಾವತಿ ಮಾಡಿ ಇಲ್ಲವಾದರೆ,ಇಲ್ಲೇ ನಿಮ್ಮ ಕಾರ್ಡ್ ಅಥವಾ ನಗದು ಕೂಡ ಕೊಡುವ ವ್ಯವಸ್ಥೆ ಇದೆ ಎಂದು ವಿನಮ್ರವಾಗಿ ವರದಿ ಒಪ್ಪಿಸಿದರು..!

ಕೇಳಿದ ಪ್ರಶ್ನೆಗೆ ಮಿನಿಮಮ್ 10 ಸರಿ ತಲೆ ಕೆರೆದುಕೊಂಡು..
"ಬಂದೆ ಸಾ..."
ಅಂತ ಆ ಕಡೆ ಈ ಕಡೆ ಓಡಾಡಿ..
"ಸಾರ್... ಇವತ್ತು ಮೊದಲ ದಿನ ಆದ್ದರಿಂದ ನಮಗೂ ಹೆಚ್ಚಿನ ಮಾಹಿತಿಯಿಲ್ಲ,
ದಯಮಾಡಿ ಸಹಕರಿಸಿ ಅಂದರು.."
ಅಂದಿನಿಂದ ವಿದೇಶದಿಂದ ನಮ್ಮ ದೇಶಕ್ಕೆ ಬೆಳಿಗ್ಗಿನ ಜಾವ 4 ಗಂಟೆಯ ನಂತರ ಬಂದ ಎಲ್ಲಾ ವಿಮಾನಗಳ ಪ್ರಯಾಣಿಕರನ್ನ ಕಡ್ಡಾಯವಾಗಿ RT-PCR ಪರೀಕ್ಷೆ(Real time-polymerase chain reaction)ಮಾಡಿಸಿ ಋಣಾತ್ಮಕ ಅಂತ ವರದಿ ಬಂದ ಮೇಲೆ ವಿಮಾನ ನಿಲ್ದಾಣದಿಂದ ಹೊರ ಕಳಿಸುವಂತೆ ಸಾಮಾನ್ಯ ಪ್ರಜೆಗಳಿಗೆ ಮಾತ್ರ ಆದೇಶ ನೀಡಲಾಗಿತ್ತು(ಬೇರೆಯವರ ಬಗ್ಗೆ ನಂಗೊತ್ತಿಲ್ಲ!)
ಹೆಂಗೆ ಲಕ್ ನಮ್ಮದು..😉

ನಂತರದ್ದು ಎಲ್ಲಾ ಅಯೋಮಾಯ..

ಒಬ್ಬರು...
ಎರಡೂ ಮುಕ್ಕಾಲು ಅಡಿಯ ಅಂತರಲ್ಲಿ ಕಾಟಾಚಾರಕ್ಕೆ ಇಟ್ಟ ಚೇರ್ ನಲ್ಲಿ ಕೂರೋಕೆ ಹೇಳಿದ್ರೆ..

ಇನ್ನೊಬ್ಬ ಸಿಬ್ಬಂದಿ ಬಂದು..
ಸರತಿ ಸಾಲಲ್ಲಿ ನಿಲ್ಲಿ ಅಂತಿದ್ರು,ಯಾರ ಮಾತು ಕೇಳೋದು ಅಂತ ಮೀನ,ಮೇಷ ಎಣಿಸುತ್ತಾ ಅಲ್ಲಿ ಇಲ್ಲಿ ನೋಡುತ್ತಾ ನಿಂತಿದ್ದಾಗ ನನಗಿಂತ ಹಿಂದೆ ಇದ್ದವರು ಹಲವು ಜನ,ನಿದ್ರೆಗಣ್ಣಲ್ಲಿ ಕಣ್ಣು ಉಜ್ಜುತ್ತಾ ಮುಂದೆ ಹೋಗೆ ಬಿಟ್ರು..!

ನಾನು ಆಗಲೇ ಮೊಸಳೆ ಬಾಯಿ ಕಳೆದಷ್ಟು ಅಗಲ 25 ಸರಿ ಆಕಳಿಸಿ ಆಗಿತ್ತು,ನಂಗೆ ಅದು ನಿದ್ರೆಯ ಸಮಯ..!

ನಾವೇನು ಮಾಡೋದು ಅಂತ ಕೇಳಿದ್ರೆ ಮತ್ತೆ ಆ ಸಿಬ್ಬಂದಿ
ಅದೇ ತಲೆ ಕೆರೆಯುವ ಪ್ರೊಸೆಸ್ ಮುಂದು ವರಿಸಿದ್ರು..

ಕೊನೆಗೆ ಸರತಿ ಸಾಲಲ್ಲಿ ನಿಂತು ಹಣ ಪಾವತಿ ಮಾಡುವ ಸ್ಥಳ ಹೇಗೋ ತಲುಪಿಯಾಯ್ತು ..

ಹಣ ಪಾವತಿ ಮಾಡುವ ಜಾಗದಲ್ಲಿ,
ಹೋಟೆಲ್ ನಲ್ಲಿ ಏನಿದೆ ಕೇಳಿದಾಗ
ಮಸಾಲೆ ದೋಸೆ..
ಸೆಟ್ದೋಸೆ..
ಇಡ್ಲಿ ಸ್ವಲ್ಪ ಲೇಟ್ ಆಗುತ್ತೇ ನೋಡಿ..
ವಡೆ ಮಾತ್ರ ಈಗಲೇ ಕೊಡ್ತೇವೆ ಕೊನೆಗೆ ವಡೆ ಕಾಲಿ ಆದ್ರೆ ನಿಮಗೆ ಕಷ್ಟ ಅಂತ ಭಯ ಪಡಿಸಲ್ವಾ!
ಹಾಗೆ..
ನೋಡಿ
500 ರೂಪಾಯಿ
ಮತ್ತೆ
3000 ರೂಪಾಯಿ
ಇದೆ ಆರ್ "ಡಿ ಬಿ" ಸಿ ಆರ್,(RT-PCR)
ಅಂದರು ಆ ಮಹಾತ್ಮ ತಮಿಳು ಮಿಶ್ರಿತ ಕನ್ನಡದಲ್ಲಿ..

ಎರಡರ ಮಧ್ಯ ಏನು ವ್ಯತ್ಯಾಸ ಕೇಳಿದ್ರೆ..!?
500 ರೂಪಾಯಿದು 4 ಗಂಡೆಯಿಂದ 14 ಗಂಡೇ ಆದ್ರೂ ಆಗಬಹುದು..
3000 ರೂಪಾಯಿದು ಕೇವಲ 30 ನಿಮಿಷದಲ್ಲಿ ನಿಮಗೆ ಕೊರೊನಾ ಪರೀಕ್ಷೆ ಪಲಿತಾಂಶ..
ಅಂದ್ರು,

ಈ ಆಪರ್ ನಿಮಗೆ ಮಾತ್ರ,ಫಲಿತಾಂಶ ಖಚಿತ ತ್ವರೆ ಮಾಡಿ ಅಂತ
ಉಜಾಲಾ ಜಾಹೀರಾತಿನ ತರ ಹೇಳಿದ್ರೂ..😂

ನನ್ನ ಜೊತೆಗೇ ಬಂದಿದ್ದ ನನ್ನ ಆಪ್ತ ಸ್ನೇಹಿತರು ಸರತಿ ಸಾಲಲ್ಲೇ ನನಗೆ ಹೇಳಿದ್ರೂ,
ನಾನು 500 ದ್ದೇ ತಗೋತಿನಿ ನಿಧಾನ ಆದ್ರೂ ಪರವಾಗಿಲ್ಲ ಸುಮ್ಮನೆ ಹಣ ಯಾಕೆ ಪೋಲು ಮಾಡೋದು ಅಂದ್ರು..

ನಾನು 3000 ರೂಪಾಯದ್ದು ತಗೋತೆನೆ..
ಇಲ್ಲಿದ್ದು ಮತ್ತೆ ಸೋಂಕು ಬಂದ್ರೆ ರಗಳೆ ಆದಷ್ಟು ಬೇಗ ಹೊರಗೆ ಹೋಗಬೇಕಪ್ಪ,
ವಿಷಯ ಏನು ಅಂದ್ರೆ..
ಹಸಿವಾಗ್ತಾ ಇದೆ ಒಂದು ಮಸಾಲೆ,ದೋಸೆ ಕಾಯಿ ಚಟ್ನಿ ಹಾಗೇ ಇಡ್ಲಿ ವಡೆ,ಒಂದು ಲೋಟ ಬೋರಮ್ಮನವಿಟಾ ಸಿಕ್ಕಿದ್ರೆ ಸಾಕಾಗಿದೆ ಅಂತ ಸುಮ್ನೆ ನೇರವಾಗಿ ಹೇಳೋ ಹಾಗಿಲ್ಲ ಅಲ್ವಾ..
ಅದಕ್ಕೆ ಈ ರೀತಿ ಡೈಲಾಗ್ ದೋಸೆ ಮಗುಚಿ ಹಾಕಿದ ಹಾಗೆ ಅವರಿಗೆ ಹೇಳಿದ್ದು ಅನ್ನೋದನ್ನ ಹೇಳೋಕೆ ಬಯಸುತ್ತೇನೆ..😁

ನನ್ನ ಹಿಂದೆ ಇದ್ದೆ ನನ್ನ ಸ್ನೇಹಿತರು 500 ರೂಪಾಯಿಯ ಪರೀಕ್ಷೆಗೆ ಕೊಡಿ ಅಂದರು..!

ಆ ವ್ಯಕ್ತಿ ಅವರನ್ನ ಹೇಗೆ ಮೇಲಿಂದ ಕೆಳಗೆ ನೋಡಿದ ಅಂದ್ರೆ ಏನೋ ಅಪರಾಧ ಮಾಡಿ ಬಿಟ್ರು 500ರೂಪಾಯಿ ಪರೀಕ್ಷೆಗೆ ಕೇಳಿ ಅನ್ನುವ ಹಾಗೆ..!!!

ಆದರೂ ಆ ಹಣ ತೆಗೆದು ಕೊಳ್ಳುವ ವ್ಯಕ್ತಿ ಮತ್ತೆ ತನ್ನ ಪ್ರಯತ್ನ ಬಿಡಲಿಲ್ಲ...

ಸಾರ್..
ನನಕೆ ಬೈಯಬೇಡ ನೀನು,4  ರಿಂದ 14 ಗಂಟೆ ಆಗುತ್ತೆ..
ಅಂತ ಮತ್ತೆ ಅದೇ ವಿಚಿತ್ರವಾದ ತಮಿಳು ಮಿಶ್ರಿತ ಹೇಳಿಕೆ ಕೊಟ್ರು..
ಆದ್ರೆ ನನ್ನ ಸ್ನೇಹಿತರು ಪರವಾಗಿಲ್ಲ ಅಂತ ಛಲ ಬಿಡದ ತ್ರಿವಿಕ್ರಮನಾಗಿ ಹಣ ಪಾವತಿ ಮಾಡಿ,ನನ್ನ ನೋಡಿ ಗೆಲುವಿನ ಮುಗುಳು ನಗೆ ಬೀರಿದರು,ನೀವು 3000 ಕೊಟ್ಟು ಪೆದ್ದರಾದ್ರಿ ಅನ್ನೋ ಹಾಗೆ ಇತ್ತು ಅವರ ನಗು...ನಾನು ನೋವಿನಿಂದ, ಭಾರದ ಹೆಜ್ಜೆ ಮುಂದೆ ಇಟ್ಟೆ..

ಸ್ವಲ್ಪ ಮುಂದೆ ಆಧಾರ್ ನಂಬರ್ ತೆಗೆದು ಕೊಂಡು,
ಮೂಗಿನ ಮೂಲಕ ಮೆದುಳಿಗೆ ಹೆಟ್ಟುವ ಒಂದು ಪ್ಯಾಕ್ ನಲ್ಲಿರುವ ಕಡ್ಡಿ ಯನ್ನ ನಮ್ಮ ಬಳಿ ಕೊಟ್ಟರು ಇನ್ನೊಬ್ಬರು "ಅವರಿಗಾ" ಸಿಬ್ಬಂದಿ..

ಸಾರ್ವಜನಿಕ ಕಾರ್ಯಕ್ರಮದಲ್ಲಿ ಒಂದೊಂದು ರೀತಿಯ ಪಾವತಿ ಮಾಡಿದವರಿಗೆ  ಇಂತಿಂತ ಸರತಿ ಸಾಲು ಅಂತಿರುತ್ತಲ್ಲ ಹಾಗೆ 3000 ಲೈನ್ ಇದು ಇಲ್ಲಿ ಹೋಗಿ ಅಂತ ಹೇಳಿ ಕಳುಹಿಸಿದ್ರು,

ಅಡ್ಡ ಗೋಡೆ ಹಳೇ ಸೀರೆ ಮಾಡಿ ಕಟ್ಟಿದ ಜಾಗದಲ್ಲಿ, ಅಲ್ಯಾರೋ ಇದ್ದ ಮಲೆಯಾಳಿ ನರಸಮ್ಮ,
"ನೀವು ಇಲ್ಲಿ ಗೂರಿ",ಅಂತ ಒಂದು ಕೃಶವಾದ ಚೇರ್ ತೋರಿಸಿ,
ಅದು
"ಇಲ್ಲಿ ಗೊಡಿ" ಅಂತ ಕೈಯಲ್ಲಿದ್ದ ಮೂಗುಗೆ ಚುಚ್ಚುವ ಕಡ್ಡಿಯನ್ನ ಕಿತ್ತು ಕೊಂಡು,ಅದರ ಕವರ್ ತೆಗೆದು ಕಡ್ಡಿಯನ್ನ ಮೆದುಳು ವರೆಗೆ ಹಾಕೋಕೆ ಪ್ರಯತ್ನ ಪಟ್ಟು ನನ್ನ ಹತ್ರ ಬೈಸಿ ಕೊಂಡು,ಕೊನೆಗೆ ಕಡ್ಡಿ ಮೆದುಳು ಅಲ್ಲಲ್ಲ ಮೂಗಿನಿಂದ ತೆಗೆದು ಅಲ್ಲೇ ಪಕ್ಕದಲ್ಲಿದ್ದ ಟ್ರೇ ಗೆ ಜಾ0ಟಿ ರೋಡ್ಸ್ ತರ ಗುರಿ ಇಟ್ಟು ಎಸೆದರು..ಅಲ್ಲೇ ಪಕ್ಕದಲ್ಲಿದ್ದ ಟ್ರೇ ಗೆ ಹೋಗಿ ಬಿತ್ತು ಆ ಮೆದುಳು ಕೆರೆಯುವ ಕಡ್ಡಿ..!

ಜೇರ್ ಅಲ್ಲಲ್ಲ ಚೇರ್ ನಿಂದ ಎದ್ದು ಹಿಂದೆ ನೋಡಿದ್ರೆ ನನ್ನ ಸ್ನೇಹಿತರು..!

"ಹೋ..ನಿಮಗೂ ಬಿಟ್ರ ಇಲ್ಲೇ"ಅಂದೆ..!?

"ಹೇ...ಇಲ್ಲ ಮಾರಾಯ್ರೆ..
ನನಗೇ ಭಯ ಆಯ್ತು ಕೊನೆಗೆ ಇವರು 500ರೂಪಾಯಿ ಅಂತ 4 ಗಂಟೆ ಆದ್ರೂ ಫಲಿತಾಂಶ ಕೊಡಲ್ಲ ಅಂತ ಹೇಳಿದ್ರೆ ಕಷ್ಟ ಅಂತ ಅದಕ್ಕೆ ಉಳಿದ 2500 ಹಣ ಪಾವತಿ ಮಾಡಿ 3000 ದ್ದೇ ತಗೊಂಡು ಬಂದೆ" ಅಂತ ಹ್ಯಾಪ್ ಮೋರೆ ಹಾಕೊಂಡು ಹೇಳಿದ್ರೂ..😉

ನಾನೇ 3ಸಾವಿರ ಕೊಟ್ಟು ಪೆದ್ದ ಆದನೇನೋ,500 ನವರಿಗೇ ನಮಗೆ ಒಟ್ಟಿಗೆ ಪಲಿತಾಂಶ ಕೊಡ್ತಾರಾ ಅಂತ,
"ಕೆಲವು" ಹೆಣ್ಣು ಮಕ್ಕಳು 99 ಬಂದಿದ್ರೆ ಪಕ್ಕದವಳಿಗೆ 98 ಅಂಕ ಬಂದಿದೆ ಅಂತ ಹೊಟ್ಟೆ ಕಿಚ್ಚು,ಬೇಜಾರು ಮಾಡಿಕೊಳ್ತಾರಲ್ಲ ಹಾಗೆ ಬೇಜಾರಲ್ಲಿ ಇದ್ದವನಿಗೆ..
ಅವರ ಹ್ಯಾಪ್ ಮೋರೆ ನೋಡಿ ಸಮಾಧಾನಾ ಆಯ್ತು ಅಂತ ಸತ್ಯ ಹೇಳ್ತಿನಪ್ಪ..!
😂

ಕೊನೆಗೆ ಫಲಿತಾಂಶಕ್ಕಾಗಿ (ಎಸ್ ಎಸ್ ಎಲ್ ಸಿ ದೂ ಕೂಡ ಹೀಗೆಲ್ಲಾ ಕಾಯುತ್ತಾ ಕುಳಿತಿರಲಿಲ್ಲ ಬಿಡಿ😂)
ಕಾಯುತ್ತಾ ಕೂರುವ ಸರದಿ ನಮ್ಮದು..!

ಅಲ್ಲೇ ಇದ್ದ ಸಹಾಯಕ ಸಿಬ್ಬಂದಿ ಗವಾಕ್ಷಿ  ಮುಂದೆ ಜನರು ಕೊರೊನಾ ಅಂದ್ರೆ ಏನು ಅಂತಲೇ ತಲೆ ಕೆಡಿಸಿ ಕೊಳ್ಳದೇ ಈ ಭಯಂಕರ "ಟಾಪ್" ಬರೋರು ಶಾಲೆಲಿ ಫಲಿತಾಂಶ ನೋಡೋಕೆ ಫಲಿತಾಂಶ ಹಲಗೆ ಹತ್ರ, ನುಗ್ಗಿ ನುಗ್ಗಿ,ಬಗ್ಗಿ ಬಗ್ಗಿ ಅತಿ ನಟನೆ ಮಾಡ್ತಾ ನೋಡ್ತಾರಲ್ಲ ಹಾಗೆ ಮುತ್ತಿಗೆ ಹಾಕಿ ಕೇಳ್ತಾ ಇದ್ರು..!

ಅರ್ಧ ಗಂಟೆ ಆಯ್ತು 45 ನಿಮಿಷ ಆಯ್ತು ಒಂದು ಗಂಟೆ ಆದ್ರೂ ಫಲಿತಾಂಶ ಬರಲೇ ಇಲ್ಲ..

ಅಲ್ಲಲ್ಲಿ ಹೋರಾಟಗಾರರು ಎದೆ ಸೆಟೆದು ನಿಂತು ಎಲ್ಲಿ ನನ್ನ 3000ಸಾವಿರ,ವಾಟ್ ದ ಡಕ್ ಈಸ್ ದಿಸ್,ನಾವು 500 ಕೊಡ್ತಾ ಇದ್ವಿ ಇಷ್ಟು ನಿಧಾನ ಅಂತಾಗಿದ್ರೆ,2500 ಹೆಚ್ಚು ಕೊಟ್ಟ ಹಾಗಾಯ್ತು ಅಂತ ತರ ತರದ ಬೆಂಕಿ ಉಗಳೋಕೆ  ಶುರುವಾಯ್ತು..!

ಇದೆಲ್ಲ ಗಲಾಟೆ ಮಧ್ಯ,
ಇಷ್ಟೆಲ್ಲಾ ಹಣ RT-PCR ಗೆ ತಗೊಂಡು ಅರ್ಧ ಗಂಟೆ ಗೆ ಫಲಿತಾಂಶ ಅನ್ನೋದು,
"ಅವರಿಗಾ"!?
"ಇವರಿಗಾ"!?
ಯಾರಿಗ!? ಅಂತ
"Auriga Lab"ಬಗ್ಗೆ ಗೂಗಲ್ ಮಾಡಿ ನೋಡಿದ್ರೆ ಬಹಳ ಬಿರುದು ಬಾವಲಿಗಳು,ಕೇಸ್ಗಳು ಇದ್ದಿದ್ದು ಕಂಡು ಬಂತು..!

(ನೀವು ಅದರ ಬಗ್ಗೆ ಹುಡುಕಿ ನೋಡಿ ಆಸಕ್ತಿ ಇದ್ದರೆ!)

ಕೊನೆಗೆ ಫಲಿತಾಂಶ ನೋಡೋಕೆ ಅಂತ ಇಟ್ಟಿದ್ದ ಒಂದು ಸಣ್ಣ ಪರದೆ ಕೂಡ ಕೊನೆ ಉಸಿರು ಎಳೆಯಿತು ಅಂತ ಹಲವರು ಉಘ್ರ ರೂಪ ತಾಳಿದ್ರು..

ಅದರ ಮಧ್ಯ ಯಾರೋ ಕನ್ನಡಿಗರು ಒಂದು ವೆಬ್ ಸೈಟ್ ಕೊಂಡಿ ಕೊಟ್ಟು ಅದರಲ್ಲಿ ಫಲಿತಾಂಶ ಸಿಗುತ್ತಾ ನೋಡಿ ಅಂದ್ರು..
25 ಸರಿ ನಮ್ಮ ಫೋನ್ ನಂಬರ್ ಹೊಡೆದು ಬುಕಿಂಗ್ ನಂಬರ್ ಹೊಡೆದಮೇಲೆ ನನ್ನ ಫಲಿತಾಂಶ ಬಂದೇ ಬಿಡ್ತು..
ಕೊನೆಗೂ ಪಾಸಾಗಿದ್ದೆ ಅದೇ ಋಣಾತ್ಮಕ ಫಲಿತಾಂಶ!...😂

ಆದರೆ ನನ್ನ ಸ್ನೇಹಿತರು 500 ಕೊಡೋಕೆ ಹೋಗಿ ಕೊನೆಗೆ 3ಕ್ಕೆ ತಿರುಗಿದ್ದವರು ಆಗ ರುದ್ರ ತಾಂಡವ ಆಡೋಕೆ ಶುರು ಮಾಡಿದ್ರು..!

ಅವರ ಬಾಯಲ್ಲಿ @$#%ನ್,@#%$^ನ್,ಇನ್ನೇನೋ ಬರೋಕೆ ಶುರು ಆಗಿದ್ರಲ್ಲಿತ್ತು..
ಅದನ್ನ ಗಮನಿಸಿದ ಒಬ್ಬಳು ಹುಡುಗಿ ಸಿಬ್ಬಂದಿ ಬಂದು ಅವರ ಬುಕಿಂಗ್ ನಂಬರ್ ತೆಗೆದು ಕೊಂಡು,
ನೋಡ್ತೇನೆ ಸಾರ್ ಅಂತ ಹೋದಳು..
ಅವಳು ಫಲಿತಾಂಶ ಕೇಳೋಕೆ,ಕೊರೊನಾ ಜನ್ಮ ಸ್ಥಳ ಚೀನಾದ ವುವಾನ್ ಗೆ ಹೋಗಿದ್ದಾ ಏನೋ..ನಂತರ ಅವಳ ವಿಳಾಸ,ಮುಖದರ್ಶನವೇ ಇಲ್ಲ..!.

ಕೊನೆಗೆ ಅಲ್ಲೇ ಇದ್ದ ಸಹಾಯ ಗವಾಕ್ಷಿ ಸಿಬ್ಬಂದಿ ಹರಸಾಹಸ ಪಟ್ಟು,
ಕೆಲವೇ ಕ್ಷಣದಲ್ಲಿ ಅಪ್ ಡೇಟ್ ಮಾಡಿ ಕೊಟ್ರು,ಇವರ ಫಲಿತಾಂಶ ಬಂದೇ ಬಿಡ್ತಪ್ಪ..!🤪

ಫಲಿತಾಂಶ ಬಂದಿದ್ದು ಸುಮಾರು 1.45 ಗಂಟೆ ನಂತರ...

3000 ರೂಪಾಯಿ ಪ್ರತಿಯೊಬ್ಬರ ಬಳಿ ನುಣ್ಣಗೆ ಬೋಳಿಸಿದ್ದು ಯಾಕೆ ಅಂತ,
ದಟ್ಟ ಕೂದಲು ಇರುವ ಆರೋಗ್ಯ ಸಚಿವರ ಹತ್ರ
ಅವರಿಗಾ,ಇವರಿಗಾ ಕೇಳೋಕೇ ಹೋಗಿಲ್ಲಪ್ಪ..!

ಮುಖ ಗವಸು ಹಾಕದ,
ಕೊರೊನಾ ನಿಯಮ ಪಾಲಿಸದ,ಸಾಮಾನ್ಯ ನಾಗರೀಕನದ್ದು ಘೋರ ಅಪರಾಧ ಅಂತ ಸರ್ಕಾರ ಯಾವುದೇ ಮುಲಾಜು ನೋಡದೇ ಕ್ರಮ ಕೈಗೊಂಡು ಹಣವನ್ನ ಕಿತ್ತು ಕೊಂಡು,ಆ ಹಣವನ್ನ
ಕರ್ನಾಟಕ ರಾಜ್ಯದ ಜನತೆಯ ಸರ್ವತೋಮುಖ ಶ್ರೇಯೋಭಿವೃದ್ಧಿಗೆ ಮಾತ್ರ ಅಂತ ನಮಗೆ ನಿಮಗೆಲ್ಲಾ ಅರಿವಿದೆಯಲ್ಲವೇ...!!
😂
ಜೈ ಅವರಿಗಾ,ಇವರಿಗಾ,ಯಾರುಯಾರಿಗಾ?!!

ಮಾನ್ಯಥ್ ರಾಯರ ಕಥೆ

ಮನ್ನ್ಯಾಥ ರಾಯ್ರ ತೋಟ ಹಾಗೂ ಗದ್ದೆ,ತರಕಾರಿಗೆ ಮಂಗನ  ಕಾಟ ತಡೆಯೋಕಾಗದೆ..
ಬಹಳ ತಲೆ ಬಿಸಿಲಿ ಇದ್ರು..

ಬಹಳ ವರ್ಷಗಳ ಹಿಂದೆ ಹೊಸದಾಗಿ ಸಾಫ್ಟ್ವೇರ್ ಕಂಪನಿ ಪ್ರಾರಂಭವಾದಾಗ ಆಗಲೇ ಡಿಗ್ರಿ ಮಾಡಿ,ಸಾಪ್ಟವೇರ್ ಬಗ್ಗೆ ಅಲ್ಪ ಸ್ವಲ್ಪ ಕಲಿತಿದ್ದ ಮನ್ ನ್ಯಾಥ ರಾಯ್ರ ಮಗ ವಿಸ್ನಾಥ್ ಬೆಂಗಳೂರು ಹೋಗಿ ಹಲವು ವರ್ಷ ಉದ್ಯೋಗ ಮಾಡಿ,ಸಾಕಪ್ಪ ಈ ಕೆಲಸ ಅಂತ ಊರು ಕಡೆ ಹೋಗಿ ತ್ವಾಟ ನೋಡ್ ಕಂಡು ಅಪ್ಪಗೆ ಸಹಾಯ ಮಾಡಿಕೊಂಡು ಇರೋಣ ಅಂತ ಊರಿಗೆ ಬಂದಿದ್ದರು ಅಷ್ಟೇ..

ಅಪ್ಪನ ತಲೆ ಬಿಸಿ,ಚಡಪಡಿಕೆ,ಟೆನ್ಷನ್ ದಿನಾ ನೋಡುತ್ತಾ ಇದ್ದವರು..

"ಎಂತಾಯ್ತು ಮಾರಾಯ್ರೆ"ಅಂದ್ರು..

"ಈ ಮಲೆನಾಡು ರೈತನಿಗೆ ಮಂಗನ ಕಾಟ ತಪ್ಪಲ್ಲ ಮರಾಯಾ,
ಎಂತಾ ಸಾಯದು ತ್ವಾಟದಲ್ಲಿ ಹಿಂಗಾರ,ಏಲಕ್ಕಿ,ಕಾಪಿ ಬೀಜ,ಬಾಳೆ ಕೊನೆ ಎಂತೂ ಬಿಡಲ್ಲ ನೋಡು,ಹೆಂಗೆ ಬದುಕುಕು ನಾವು" ಅಂದ್ರು..

ಅಪ್ಪನ ಒದ್ದಾಟ ನೋಡಿ ಬೇಸರವಾಗಿ,
ಕೂಡಲೇ ತನ್ನೊಳಿಗಿನ ಹಳೆಯ ಹೋರಾಟಗಾರನನ್ನ ಜಾಗೃತ ಗೊಳಿಸಿದ ವಿಸ್ನಾಥ್...

ಈ ಮಂಗನ ಕಾಟಕ್ಕೆ ಒಂದು ಶಾಶ್ವತ ಪರಿಹಾರ ಕಂಡು ಹಿಡಿಯಲೇ ಬೇಕು ಎಂದು ಶಪಥ ಗೈದು ಬಿಟ್ರು..

ಹಲವು ತಾಂತ್ರಿಕ ಪುಸ್ತಕಗಳನ್ನೆಲ್ಲಾ ಹುಡುಕಾಡಿ,ಗೂಗಲ್ ನೋಡಿ,ತನ್ನ ಕಂಪನಿಯ ಪ್ರಚಂಡ ಬುದ್ಧಿವಂತರನ್ನ ಸಂಪರ್ಕ ಮಾಡಿ,ತನ್ನ ಬುದ್ಧಿಯನ್ನೆಲ್ಲಾ ಉಪಯೋಗಿಸಿ, ದಿನವೂ ಪ್ರೋಗ್ರಾಮ್ ಬರೆಯಲು ಪ್ರಯತ್ನಿಸಿ ಒಂದೊಂದು ಪ್ರಯೋಗ ಮಾಡ ತೊಡಗಿದ್ರು..

ಒಂದು ದಿನ
ತನ್ನ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಕ್ತು..!

ಅದೇನೆಂದರೆ ಮಂಗನ ಅಂಡು ಮೇಲೆ ಹೊಡೆಯೋ ರೋಬೋಟ್..
ಮಂಗಗಳು ಬೇಲಿ ದಾಟಿ ಗದ್ದೆ ತೋಟಕ್ಕೆ ಬಂದ ಕೂಡಲೇ ಅದರ ಶಬ್ದಕ್ಕೆ,ಈ ರೋಬೋಟ್ ಎಷ್ಟೇ ದರುಗು,ಹೊಂಡ, ತ್ವಾಟದ ಕಪ್ ಇದ್ರೂ,ಸದ್ದಿಲ್ಲದೇ ಹತ್ತಿರ ಶರವೇಗದಲ್ಲಿ  ಹೋಗಿ ಮಂಗನ ಅಂಡಿಗೆ ಗುರಿ ಇಟ್ಟು ಬಾರು ಕೋಲಿನಲ್ಲಿ ಬಡಿಯೋದು..

ಆ ಬಾರು ಕೋಲಿನ ಹೊಡೆತದಿಂದ ಆದ ಬಾಸುಂಡೆ,ತುರಿಕೆ ಹಾಗೂ ಉರಿಯ ವ್ಯಾಲಿಡಿಟಿ ಮಿನಿಮಮ್ 72 ಗಂಟೆ...!

ಮಂಗಗಳಿಗೆ ಅಂಡು ತುರಿಸೋಕೆ ಎರಡು ಕೈ ಸಾಲದು ಆಗಬೇಕು ಅಷ್ಟು ತುರಿಕೆ ಬರುವ ಹಾಗೆ ಪೆಟ್ಟು..!

ಕೆಲವು ದಿನದ ಈ ಯಂತ್ರದ ಪೆಟ್ಟಿನ ಕಾರ್ಯಾಚರಣೆಗೆ ಹೆದರಿ ಮಂಗಗಳು ಅವರ ತೋಟಕ್ಕೆ ಬರೋದು ಇರಲಿ,ತಿರುಗಿ ನೋಡೋಕೆ ಭಯ ಪಡು ವ ಹಾಗೆ ಆಗಿ ಬಿಟ್ಟವು,ಸಂಪೂರ್ಣ ಮಂಗಗಳಿಂದ ಬಿಡುಗಡೆ ಸಿಕ್ತು ಮನ್ನ್ಯಾಥ್ ರಾಯರಿಗೆ..
ಮಗನ ಸಾಧನೆಗೆ ಶಬ್ಬಾಶ್ ಅಂದ್ರು ರಾಯರು..
ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ...!

ಕೆಲಸ ಆಯ್ತಾ..
ವಿಸ್ನಾಥ ಮಂಗಗಳ ಕುಂಡೆ ಮೇಲೆ ಹೊಡೆಯೋ ರೋಬೋಟ್ ನ ಹಿತ್ತಲಕಡೆ ಕೊಟ್ಟಿಗೆ ಮೂಲೆಗೆ ಇಟ್ಟರು..

ಅದು ಬ್ಯಾಟರಿ ಡವ್ನ್ ಆಗಿ ಸುಮ್ಮನೆ ಪಕ್ಕಕ್ಕೆ ಕೂತಿತ್ತು..
ಕೆಲವು ದಿನದ ನಂತರ ಅದರ ಮೇಲೆ ಹಲವು ಕೃಷಿ ಉಪಕರಣಗಳು ಬಂದು ಕೂತವು..
ಒಂದು ಹಳೆಯ ಟೇಬಲ್ ಆಗಿ ಪರಿವರ್ತನೆ ಆಯ್ತು ರೋಬೋಟ್..!

ಕೆಲವು ಸಮಯದ ನಂತರ  ಪ್ಯಾಟೆಲಿ ಕೃಷಿ ಮೇಳ ಇದೆಯಂತೆ ಅಂತ ಯಾರೋ ಮೆಸೇಜ್ ಮಾಡಿದ್ದು ನೋಡಿ..
ತನ್ನ ಬಜಾಜ್ ಎಂ.ಎಂಬತ್ತು ಬೈಕ್ ತಗೊಂಡು ವಿಸ್ ನಾತ ರ ಸವಾರಿ ಪೇಟೆಗೆ ಹೊರಡ್ತು..
ಬಜಾಜ್.ಎಂ.
ಎಂಬತ್ತು ಒಂದು ಕಡೆ ನಿಲುಗಡೆ ಮಾಡಿ..

ಕೃಷಿ ಮೇಳ ಪ್ರವೇಶ ದ್ವಾರದ ಮೂಲಕ ಒಳಗೆ ಹೋಗಿ ಒಂದೊಂದೇ ಮಳಿಗೆಯಲ್ಲಿ ಹೊಸ ತಂತ್ರಜ್ಞಾನ ಹಾಗೂ ಆವಿಷ್ಕಾರಗಳನ್ನ ನೋಡುತ್ತಾ ಯಾಕೋ ಒಂದು ಕಡೆ ಕಣ್ಣು ಆಡಿಸ್ತಾರೆ..
ವಿಸ್ನಾಥ್ ತಯಾರಿಸಿದ್ದೆ ತರದ ಮಂಗನ ಕುಂಡೆ ಮೇಲೆ ಬಾರುಕೋಲಿನಲ್ಲಿ ಬಾರಿಸೋ ರೋಬೋಟ್ ಪರೀಕ್ಷಾ ಪ್ರದರ್ಶನ ನಡೆಯುತ್ತಾ ಇದೆ..
ಅದರ ಹೆಸರು "ಮಂಕುಮೇ" ರೋಬೋಟ್ ಅಂತ ಬೇರೆ ಇಟ್ಟು ಬೆಲೆ ಬೇರೆ ಹಾಕಿದ್ರೂ..
ಯಂತ್ರ ಬಹಳ ಸುಂದರವಾಗಿ ವಿನ್ಯಾಸ ಗೊಳಿಸಿದ್ದರು,ನೋಡೋಕೆ ಚನ್ನಾಗಿ ಕಾಣಿಸುತ್ತಾ ಇತ್ತು,
ಆದರೆ ಮಾಡುವ ಕೆಲಸ,ಸೇಮ್ ವಿಸ್ ನಾಥ್ ಮಾಡಿದ್ದ ರೋಬೋಟ್ ಕೆಲಸವನ್ನೇ...!!

ಜನ ಮುಗಿಬಿದ್ದು ಯಂತ್ರ ಖರೀದಿಗೆ ಮುಂಗಡ ಪಾವತಿ ಮಾಡ್ತಾ ಇದ್ರು..

ಇದನ್ನೆಲ್ಲಾ ನೋಡಿದ
ಮನ್ನ್ಯಾಥ್ ರಾಯರ ಮಗ ವಿಸ್ನಾಥ..
ಹೌ ಹಾರಿದ್ರು..

"ಅಯ್ಯೋ..ನಾನು ಹೇಗೆಗೋ ತಿಂಗಳು ಗಟ್ಟಲೆ ಕಷ್ಟ ಪಟ್ಟು ಓದಿ,ಯೋಚಿಸಿ,ಗೂಗಲ್ ನಲ್ಲಿ ಎಲ್ಲಾ ಹುಡುಕಿ ಪ್ರೋಗ್ಗ್ರಾಮ್ ಬರೆದು,ಟೆಸ್ಟಿಂಗ್ ಮಾಡಿ,ಕಚ್ಚಾ ವಸ್ತುಗಳನ್ನ ಒಟ್ಟು ಹಾಕಿ ರೋಬೋಟ್ ತಯಾರಿಸಿ ಯಶಸ್ವಿ ಯಾಗಿ ಅದು ಓಡಾಡುವಂತೆ ಮಾಡಿ...ಮಂಗಗಳ ಕುಂಡೆಗೆ ಯಶಸ್ವಿಯಾಗಿ ಪೆಟ್ಟು ಕೊಟ್ಟು ಶಾಶ್ವತ ವಾಗಿ ಓಡಿಸಿದ್ದು..ಈಗ ಯಾರೋ ಅದೇ ತರಹದ್ದು ರೋಬೋಟ್ ಮಾಡಿ,
ಸಾವಿರಗಟ್ಟಲೆ ದುಡ್ಡಿಗೆ ಮಾರುತ್ತಾ ಇದ್ದಾರೆ..
ಇದು ಅನ್ಯಾಯ ಅಂತ ಕೆಂಡಾ ಮಂಡಲವಾಗ್ತಾರೆ..."

ಇದರ ವಿರುದ್ಧ ಹೋರಾಡ್ತೇನೆ ಅಂತ ಫೇಸ್ಬುಕ್,ಟ್ವಿಟ್ಟರ್ ಎಲ್ಲಾ ಕಡೆ #ವಿಸ್ನಾಥಗೆವಿಷ  ಅಂತ ಹ್ಯಾಶ್ ಟ್ಯಾಗ್ ಹಾಕಿ,ಪ್ಲೀಸ್ ಸ್ಟಾ0ಡ್,ಸಿಟ್,ಏನಾದ್ರು ಮಾಡಿ,ವಿತ್ ಮಿ ಅಂತ ಹಾಕಬೇಕು ಅಂತ ತೀರ್ಮಾನ ಮಾಡಿ,ಅಲ್ಲಿಂದ ಬಾಜಾಜ್ ಎಂ.ಎಂಬತ್ತು ಹತ್ತಿ 80 ಕಿಮೀ ವೇಗದಲ್ಲಿ ಬರೋಕೆ ಆಕ್ಸಲರೇಟರ್ ತಿರುಪುತ್ತಾ ಪ್ರಯತ್ನಿಸುತ್ತಾ..ಮನೆ ಕಡೆ ನಿಧಾನಕ್ಕೆ ಬಂದರು..!

ಇದನ್ನ ಊರಲ್ಲೇ ಇರೋ ತನ್ನ ಆಪ್ತ ಸ್ನೇಹಿತರಿಗೂ ಹೇಳಿ ಕೊಂಡಿದ್ದರಿಂದ,ಒಮ್ಮೆ ಅವರಿಗೂ ತಮ್ಮ ನೋವನ್ನ ತೋಡಿ ಕೊಳ್ಳೋಣ ಅಂತ ಎಲ್ಲರನ್ನೂ ತಾವು ದಿನಾ ಸೇರೋ ಜಾಗಕ್ಕೆ ಬನ್ನಿ ಅಂತ ವಾಟೆ ಸೊಪ್ಪಲ್ಲಿ ಇರೋ ಗ್ರೂಪಲ್ಲಿ ಮೆಸೇಜ್ ಹಾಕಿದ್ರು..!

ಮನ್ನ್ಯಾಥ್ ರಾಯರು,ಗೊಬ್ಬರ ಗುಂಡಿಲಿ ಗೊಬ್ಬರದ ಹೆಡಗೆ ತಲೆ ಮೇಲೆ ಇಟ್ಟುಕೊಂಡವರು ಮಗ ಗಡಿಬಿಡಿಲಿ ಬಂದಿದ್ದು ನೋಡಿ.
"ಎಂತಾಯ್ತು ಮರಯಾ..ಹಂಗೇ ಬಂದ್ಯಲ್ಲ ಅಂದ್ರು.."

"ಎಂತಿಲ್ಲಾ,ಅಂದ ವಿಸ್ನಾಥ ಒಂದು ಲೋಟ ಕರಿ ಕಾಪಿ ಅಮ್ಮನ ಹತ್ರ ಕೇಳಿ ಕುಡಿದು,
ಪಂಚೆ ಉಟ್ಟು
ಸ್ನೇಹಿತರನ್ನ ಭೇಟಿಯಾಗೋಕೆ ಮತ್ತೆ ಗಡಿಬಿಡಿಲಿ ಎಂ ಎಂಬತ್ತು ತಗೊಂಡು "ಶರವೇಗದಲ್ಲಿ" ನಿಧಾನಕ್ಕೆ ಹೋದ್ರು..!

ಖಾಯಂ ಮೀಟಿಂಗ್ ಸೇರೋ ಜಾಗಕ್ಕೆ ಬಂದ್ರೂ ಎಲ್ಲಾ ಸ್ನೇಹಿತರು..

ಶುರು ಮಾಡಿದ್ರು ತನ್ನ ಸಿಟ್ಟು ಮಿಶ್ರಿತ ನೋವಿನ ಸಂಗತಿ ವಿಸ್ ನಾಥ...!

ಎಲ್ಲಾ ಕತೆ ಮುಗಿದ ಮೇಲೆ ಅವನ ಸ್ನೇಹಿತ ರಮೇಸ ಹೇಳಿದ..

"ಅಲಾ ಮರಾಯಾ..
ನೀನು ಮಂಗನ ಕುಂಡೆ ಮೇಲೆ ಹೊಡೆಯೋ ಮಷಿನ್ ಕಂಡು ಹಿಡಿದು,ಅದರ ಉಪಯೋಗ ಆದ ಮೇಲೆ,ಊರು ಮನೆ ಬಿಟ್ಟು,ಬೇರೆ ಕಡೆ
ಇನ್ನೊಬ್ಬರಿಗೆ ಉಪಯೋಗ ಆಗಲಿ ಅಂತ ಕೊಟ್ಟಿಯಾ..!?
ಅಥವಾ ಪ್ರಚಾರ ಮಾಡಿದ್ಯಾ..!?ಇದರ ಬಗ್ಗೆ ಹೇಳಿ ಕೊಂಡಿಯಾ!?
ಅಥವಾ ಅದನ್ನ ಅನುಷ್ಠಾನ ಮಾಡೋಕೆ ಪ್ರಯತ್ನ ಪಟ್ಟಿಯಾ!?
ಎಂತಾ ಇಲ್ಲ..

ಈಗ ಯಾರೋ ಯಶಸ್ವಿಯಾಗಿ ಮಾಡಿದ ಕೂಡಲೇ..
ಇದನ್ನ ನಾನು ಮಾಡಿದ್ದು..
ಇದನ್ನ ಕಾಪಿ ಮಾಡಿದ್ದಾರೆ..
ಇದು ಅನ್ಯಾಯ,ಅಕ್ರಮ..
ಇದು ಬಹಳ ಹಿಂದೆ ನಾನು ಮಾಡಿ ಬಿಟ್ಟಿದ್ದು,ಈಗ ಮಾಡಿದವರು ಸರಿ ಇಲ್ಲ ಅಂತ ಅವರನ್ನ ದೂರೋದು,ಸರಿ ಇಲ್ಲ ಅನ್ನೋದು,ಸಿಟ್ಟು ಮಾಡೋದು,ಆಕ್ರೋಶ ವ್ಯಕ್ತ ಪಡಿಸೋದು ಸರಿಯಾ!?
ಅವರು ಮಾಡಿದ್ದೆ ಸರಿ ಇಲ್ಲ ಎನ್ನುವ ಹಾಗೆ,ಪ್ರತಿಭೆಗೆ,ಬುದ್ಧಿವಂತಿಕೆಗೆ,ಜ್ಞಾನಕ್ಕೆ,ಎಪರ್ಟ್ ಗೆ ಬೆಲೆ ಇಲ್ಲದ ಹಾಗೆ ಹೇಳೋದು ಇಷ್ಟು ಸರಿ..!?
ಅಂದ್ರು ರಮೇಸ...!


"ಅದೆಲ್ಲಾ ಸರಿ,ಬೆಲೆ ಇಲ್ವಾ ಮರಾಯಾ ನಮ್ಮ ಎಪರ್ಟ್ ಗೆ ಹಂಗಾದ್ರೆ"ಅಂದ್ರು..
ವಿಸ್ನಾಥ ರಾಯ್ರು..

ರಮೇಸ:-ನಿನ್ನ ಪ್ರತಿಭೆಗೆ,ಶ್ರಮಕ್ಕೆ ಬೆಲೆ ಇದೆ ಮರಾಯ..
ಆದ್ರೆ,ಮಾಡಿದ್ದ ಕೆಲಸ ಯಶಸ್ವಿ ಆಗಿ,ಅದನ್ನ ಸರಿಯಾಗಿ ಅನುಷ್ಠಾನ ಮಾಡಿ,ಎಲ್ಲರಿಗೂ ತಲುಪುವಂತೆ ಮಾಡೋದು ನಿನ್ನದೆ ಕೆಲಸ..
ಅದು ಬಿಟ್ಟು ನೀನು ಮನೇಲಿ ಮೂಲೆಗೆ ಇಟ್ಟು,
ಬೇರೆಯವರು,ಸಂಶೋಧನೆ ಮಾಡಿದ್ದು,ಕಂಡು ಹಿಡಿದಿದ್ದು,ಅವರ ಶ್ರಮ,ಅವರ ಪ್ರತಿಭೆ ಅಥವಾ ಸಾಧನೆ ಎಲ್ಲವನ್ನ..ನಾವು ಇದನ್ನ ಬಹಳ ಹಿಂದೆ ಕಂಡು ಹಿಡಿದ್ದಿದ್ದು,ಇದೇನು ದೊಡ್ಡ ವಿಶೇಷ,ನಮ್ಮ ಹತ್ರಾನೆ ತಗೊಂಡರು,ಈಗ ಕಂಡು ಹಿಡಿದದ್ದು ಅಪ್ರಯೋಜಕ ಅಂದರೆ ಅರ್ಥವಿರುತ್ತಾ!?,ಇನ್ನೊಬ್ಬರ ಎಪರ್ಟ್,ಅಥವಾ ಸಾಧನೆಯನ್ನ ಕೀಳಾಗಿ ಕಾಣೋದು,ಅದು ಅಪ್ರಯೋಜಕ,ನಂದೆ ಕಾಪಿ ಎನ್ನುವ ಹಾಗೆ ಹೇಳೋದು ಸರಿಯಲ್ಲ..!

ನಮಗೆ ಅದನ್ನ ಎನ್ ಕ್ಯಾಶ್ ಮಾಡುವ ಶಕ್ತಿ ಇರಲಿಲ್ಲ,ಹಾಗಾಗಿ ಅದು ಜನರಿಗೆ ತಲುಪಿಲ್ಲ,ಅವರಿಗೆ ಆ ಶಕ್ತಿ,ಯುಕ್ತಿ ಇತ್ತು ಅದಕ್ಕೆ ಅವರು ಜನರಿಗೆ ತಲುಪಿಸಿ,ಎನ್ ಕ್ಯಾಶ್ ಮಾಡಿಕೊಂಡು ಹಣ ಮಾಡಿದ್ದಾರೆ ಅಷ್ಟೇ ಅನ್ನೋ ಸತ್ಯ ಒಪ್ಪಿಕೊಳ್ಳಬೇಕು.. ಅದ್ಕಯಾಕೆ ನೀನು ಅಸಮಾಧಾನ ವ್ಯಕ್ತ ಮಾಡ್ತಿಯಾ ಅಂದ್ರು..!

ನಿಮಗೆ ಏನು ಅನಿಸ್ತು..
ನಿಜ ಅಲ್ವಾ..
ಯಾರೋ ಸಾಧಿಸಿದ್ದಕ್ಕೆ ವ್ಯ0ಗ್ಯವಾಡಿ, ಇದನ್ನ ಹಲವು ವರ್ಷದ ಹಿಂದೆ ಮಾಡಿದ್ದುಅನ್ನೋದಕ್ಕಿಂತ ಒಳ್ಳೆಯದು ಅಂತ ಬೆನ್ನು ತಟ್ಟೋದು ದೊಡ್ಡ ತನ ಅಲ್ವಾ!?

ಯಾವುದೋ ಕೆಲಸ ಮಾಡಿ,ನಮಗೆ ಧಕ್ಕಿಸಿ ಕೊಳ್ಳಲಾಗದೇ,ಅದರಲ್ಲಿ ಯಶಸ್ಸು ಪಡೆಯಲಾಗದೇ
ಅದು ಪೈಲ್ಯೂರ್ ಆದರೆ ಅದರಲ್ಲಿ,ನಮ್ಮ ಸೋಮಾರಿತನ,ನಮ್ಮ ಉಡಾಫೆ,ಪ್ರಚಾರ,ನಮ್ಮ ಲೋಪ ಇನ್ನೂ ಏನೇನೋ ಇದ್ದದ್ದರಿಂದ ಆದ ಸೋಲೇ ಹೊರತು..!

ಅದೇ ಕೆಲಸವನ್ನ ಇನ್ನೊಬ್ಬರು ಮಾಡಿ ಧಕ್ಕಿಸಿ ಕೊಂಡವರು ನಮಗೆ
ಮಾಡಿದ ಮೋಸ,ವಂಚನೆ ಆಗೋಕೆ ಸಾಧ್ಯವಿಲ್ಲ..
ಅವನಿಗೆ ಆ ಟ್ಯಾಲೆಂಟ್ ಇತ್ತು ಮಾಡಿ ಧಕ್ಕಿಸಿ ಕೊಂಡ..

ನಮಗೆ ಇರಲಿಲ್ಲ ಸೋತೆವು ಮತ್ತೆ ಪ್ರಯತ್ನಿಸಿ ನೋಡೋಣ ಅಂತ ಅಷ್ಟೇ ಅಲ್ವಾ..!

ಕೆಲವರ ಮನಸ್ಥಿತಿ

ನಮ್ಮೂರಲ್ಲಿ,ಒಬ್ಬರು,ದೂರದ ಊರಿನವರು,ಒಂದು ಖಾಸಗಿ ಗಣಿಗಾರಿಕಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ,ಅಲ್ಲೇ ವಾಸವಿದ್ದರು,

ಅವರ ಸ್ವಭಾವ ಹೇಗೆ ಅಂದ್ರೆ,
ಯಾರು ಏನೇ ವಿಷಯವನ್ನ ಪ್ರಸ್ತಾಪ ಮಾಡಿದ್ರು,ಏನೇ ಒಳ್ಳೆಯ ಸುದ್ದಿಯನ್ನ,ಸಾಧನೆಯನ್ನ,ಸಕ್ಸಸ್,ಸಂತಸ,ಖುಷಿ ಹೇಳಿ ಕೊಂಡರೂ,

ಏಯ್..ಅದೆಲ್ಲಾ ಎಂತಾ ದೊಡ್ಡ ವಿಷಯವಾ..ನಂದು ಏನು ಆಗಿತ್ತು ಗೊತ್ತಾ,ಅದರ ಮುಂದೆ ಇದೆಲ್ಲಾ ಯಾವ ಲೆಕ್ಕ,ಯಾವ ಸಾಧನೆ,ಯಾವ ಸಕ್ಸಸ್,ಇದೆಲ್ಲಾ ಕಾಮನ್ ಅಂತ ಕತೆ ಶುರು ಮಾಡ್ತಾ ಇದ್ರು...

ಹಾಗೆ
ಕೆಲವರು
ಯಾವುದೇ ವಿಷಯ ಹೇಳಿ..
ಅದಕ್ಕೆ
ಇದನ್ನ ನಾವು ಯಾವಾಗಲೋ ನೋಡಿ ಬಿಟ್ಟಾಗಿದೆ,ಈಗ ಗೆದ್ದಿರೋದು,ಸಾಧಿಸೋರು ಇದೇನು ಸಾಧನೆ..
ನೀವ್ಯಾವ ಲೆಕ್ಕ,ನಾವೇ ಗ್ರೇಟ್,ನಮ್ಮದೇ ಗ್ರೇಟ್ ಎನ್ನುತ್ತಾ ಇನ್ನೊಬ್ಬರನ್ನ ತೀರಾ ನಿಕೃಷ್ಟವಾಗಿ ಕಾಣೋದು,ಬೇರೆಯವರ ಸಾಧನೆ,ಖುಷಿ,ಸಕ್ಸಸ್,ಕೆಲಸ ಅಪ್ರಯೋಜಕವಾದದ್ದು ಅನ್ನುವ ಹಾಗೆ ರಾಗ ಎಳೆಯೋದು,ಕೊಕ್ಕೆ ಹಾಕೋದು,ಕೊಂಕು ತೆಗೆಯೋದು ಒಂತರ ಕೆಟ್ಟ ಖಯಾಲಿ ಬೆಳೆಸಿ ಕೊಂಡಿರ್ತಾರೆ...
ಅದು ಕೆಲವರಲ್ಲಿ ಬಹಳ ಸಾಮಾನ್ಯ ಅನಿಸುತ್ತೆ ಅಲ್ವಾ!!?
ಅದೇನು ಸಮಸ್ಯೆ ಇರುತ್ತೋ ಏನೋ..

ಒಬ್ಬರಿಗೆ
ತೋಟದಲ್ಲಿರುವ
ಪೇರಲೇ(ಸೀಬೆ ಕಾಯಿ) ಮರ ಹತ್ತಿ,ಇರುವೆ ಹತ್ರ ಕಚ್ಚಿಸಿ ಕೊಂಡು
ಪೇರಲೇ ಹಣ್ಣು ಉದುರಿಸಿ,ಕಳೆ ಮಧ್ಯೆ ಪೇರಲೇ ಕಾಯಿ ಎಲ್ಲಿ ಬಿದ್ದಿದೆ ಅಂತ ಹುಡುಕಿ ಅಂಡಿಗೆ ಒರೆಸಿ ಕೊಂಡು ಕ್ಲಿನ್ ಆಯ್ತು ಅಂತ ಅಂದು ಕೊಂಡು ತಿಂದರೆ ಅದೇ ಖುಷಿ,ಅದೇ ಸಾಧನೆ,ಗ್ರೇಟ್ನೆಸ್



ಮತ್ತೊಬ್ಬರಿಗೆ
ಕಾಶ್ಮೀರಿ ಸೇಬು ಹಣ ಕೊಟ್ಟು ಸೂಪರ್ ಸ್ಟೋರ್ ನಿಂದ ತಂದು 25 ಸರಿ ಬಟ್ಟೆ ತೊಳೆದಂತೆ ತೊಳೆದು,ಸಿಪ್ಪೆ ತೆಗೆದು,ಕತ್ತರಿಸಿ ಬೀಜ ಎಲ್ಲಾ ಬೇರ್ಪಡಿಸಿ,ಒಂದು ಗಾಜಿನ ತಟ್ಟೆಯಲ್ಲಿ ಸುಂದರವಾಗಿ ಜೋಡಿಸಿ,ಚುಚ್ಚಿ ತಿನ್ನಲು ಒಂದು ಚಮಚ ಹಾಕಿಕೊಂಡು ಸೋಪಾದ ಮೇಲೆ ಕೂತು ತಿನ್ನೋದು ಸಾಧನೆ,ಖುಷಿ...ಗ್ರೇಟ್ನೆಸ್...
ಅಷ್ಟೇ..
ಅವರವರ ಖುಷಿ,ಅವರವರ ಸಾಧನೆ,ಅವರವರ ಭಾವಕ್ಕೆ..
ಅಲ್ವಾ...

ಶೌಚಾಲಯ

ಇಂಗ್ಲೆಂಡ್ ನಲ್ಲಿ,ಕೆಲವು ವಿಕ್ಟೊರಿಯನ್ ಟೈಮ್ ನಲ್ಲಿ
ದೊಡ್ಡ ಪಟ್ಟಣಗಳಲ್ಲಿ ಹೆಚ್ಚು ಜನಸಂಖ್ಯೆ ಇರುವ ಸ್ಥಳಗಳಲ್ಲಿ ಒಂದೇ ಶೌಚಾಲಯವನ್ನ ಸುಮಾರು 100 ಕ್ಕೂ ಹೆಚ್ಚು ಜನರು ಬಳಸ ಬೇಕಾದ ಅನಿವಾರ್ಯವಿತ್ತಂತೆ...
ಹೀಗೆ ಬಳಕೆ ಯಾದ ಶೌಚಾಲಯದಿಂದ ಸಂಗ್ರಹವಾದ ಶೌಚದ ಗುಂಡಿ ಒಮ್ಮೊಮ್ಮೆ ತುಂಬಿ ಉಕ್ಕಿ ಬೀದಿಗೆ ಹಾಗೂ ಕೆಲವೊಮ್ಮೆ ದಿನ ನಿತ್ಯ ಕೆಲಸಕ್ಕೆ ಬಳಸುವ ನೀರಿನ ನಾಲೆ ಹಾಗೂ ಕಾಲುವೆಗೆ ಸೇರುವ ಹಾಗೂ ಆಗೋದು ಸಾಮಾನ್ಯವಾಗಿತ್ತಂತೆ...!?

ಇದನ್ನೆಲ್ಲಾ ಗಮನಿಸಿದ ಸರ್ಕಾರ
1848 ರಲ್ಲಿ ಪ್ರತಿ ಮನೆಯಲ್ಲೂ ಶೌಚ ಗುಂಡಿ(Toilet Pit)ಕಡ್ಡಾಯ ಎಂಬ ಕಾನೂನು ತಂದರಂತೆ..
ಈ ಗುಂಡಿಯನ್ನ ಸ್ವಚ್ಛ ಗೊಳಿಸಲು,ಕಾಲಿ ಮಾಡಲು,ನೈಟ್ ಸಾಯಿಲ್ ಮ್ಯಾನ್ ಎಂಬವರನ್ನ ನೇಮಕ ಮಾಡಿಲಾಗಿತ್ತಂತೆ..

ರೋಮನ್ನರು ಪ್ರಾರಂಭಿಸಿದ್ದ ಸಾರ್ವಜನಿಕ ಶೌಚಾಲಯದ ಮಾದರಿ ಕೆಳಗೆ ಇದೆ..
ಮರದಲ್ಲಿ ಮಾಡಲಾಗುತ್ತಾ ಇದ್ದ ಈ ಶೌಚಾಲಯದಲ್ಲಿ ಖಾಸಗೀತನ ಕೇಳಲೇ ಬೇಡಿ..ಎಲ್ಲಾ ಖುಲ್ಲಂ ಖುಲ್ಲಾ,
ಪಕ್ಕ ಪಕ್ಕವೇ ಕುಳಿತು ಉಭಯ ಕುಶಲೋಪರಿ ಮಾತಾಡುತ್ತಾ ಶೌಚಾಲಯ ಬಳಸ ಬೇಕಾಗಿತ್ತು..

ಏನಂದ್ರಿ..
ಚಿಕ್ಕವರಿದ್ದಾಗ ಟಾಯ್ಲೆಟ್ ಹೋಗೋದು ಬೇಜಾರು ಅಂತ ಸ್ನೇಹಿತರು,ಕಸಿನ್ ಗಳ ಜೊತೆ,ಗೋಲಿ,ಲಗೋರಿ,ಚಿನ್ನಿದಾಂಡು,ಬಸ್ ಆಟ ಇನ್ನಿತರೆ ಕ್ರೀಡೆಗಳ ಬಗ್ಗೆ ಗಂಭೀರ ಸಮಾಲೋಚನೆ ಮಾಡುತ್ತಾ,ಅಡಿಕೆ ತೋಟದ ಕಪ್ ನಲ್ಲಿ,ಬಯಲಲ್ಲಿ,ಕಾಡಲ್ಲಿ, ಹೊಳೆ,ನದಿ ಬದಿ ಹೋಗಿದ್ದು ನೆನಪಾಯ್ತಾ..
ಈ ಚಿತ್ರ ನೋಡಿ..
😂

ವಿಶೇಷ ಜಾಗ

ಆಗಾಗ ಕೆಲವರು ಇಂತಾ ಜಾಗಕ್ಕೆ ಹೋಗಿ ಇರಬೇಕಪ್ಪ..ಪ್ರಕೃತಿ,ಹಸಿರು,
ನೆಮ್ಮದಿಯಾಗಿರುತ್ತೆ ಜೀವನ,ಯಾರ ತಂಟೆ ತಾಪತ್ರಯ ಇರಲ್ಲ,ಸ್ವರ್ಗ,
ಅಂತ ಕೆಲವು ಫೋಟೋ ಹಂಚಿ ಕೊಂಡು,ಕವನ,ಕವಿತೆ,ಕತೆ, ಮೂಲಕ
ತಮ್ಮ ಅಭಿಪ್ರಾಯ,ಆಸೆ ವ್ಯಕ್ತ ಪಡಿಸೋದು ಆಗಾಗ ಗಮನಿಸಿರುತ್ತೇವೆ..

ಇತ್ತೀಚೆಗೆ
ಸಾಮಾಜಿಕ ಜಾಲತಾಣಗಳಲ್ಲಿ,ದೂರದಲ್ಲಿರುವ
ಒಂದು ದ್ವೀಪ ಪ್ರದೇಶ ಅದರ ಮಧ್ಯ ಒಂದು ಬಿಳಿ ಬಣ್ಣದ ಕಟ್ಟಡದ ಫೋಟೋ ಎಲ್ಲಾ ಕಡೆ ಹರಿದಾಡುತ್ತಾ ಇತ್ತು..

ಕೆಲವರು ಅದನ್ನ ಫೋಟೋ ಶಾಪ್,ಅಸ್ತಿತ್ವದಲ್ಲೇ ಇಲ್ಲ,ಫೇಕ್ ಅಂದಿದ್ರು,ಕೆಲವರು ಅದು ಅಲ್ಲಿದೆ,ಇಲ್ಲಿದೆ ಸ್ವರ್ಗ ಅಲ್ಲೇ ಹೋಗಿ ಜೀವನ ಮಾಡಬೇಕು ತಲೆಬಿಸಿ ಇರಲ್ಲ ಅಂತಲೂ ಹೇಳಿದ್ದೂ ಗಮನಿಸಿರಬಹುದು..!

ಆದರೆ ಈ ಕಟ್ಟಡ ಇರೋದು ನಿಜ.
ಹೌದು..
ಈ ಬಿಳಿಯ ಮನೆ ಅಸ್ತಿತ್ವದಲ್ಲಿ ಇದೆ..

ಯುರೋಪ್ ನ ಒಂದು ದೇಶವಾದ ಐಸ್ ಲ್ಯಾನ್ಡ್ ದಕ್ಷಿಣ ಭಾಗದ Elidaey ಎಂಬಲ್ಲಿ,Vestmannaeyjar, Archipelago ಎಂಬ 15 ರಿಂದ 18 ಹಲವು ದ್ವೀಪ ಸಮೂಹದ,ಒಂದು ದ್ವೀಪದ ಭಾಗದಲ್ಲಿ ಈ ಬಿಳಿ ಬಣ್ಣದ ಕಟ್ಟಡ ನಿರ್ಜನ ಪ್ರದೇಶದಲ್ಲಿ ಅಸ್ತಿತ್ವದಲ್ಲಿ ಇದೆ..

ಕೆಲವು ವರದಿಯ ಪ್ರಕಾರ ಹಲವು ವರ್ಷಗಳ ಹಿಂದೆ ಸುಮಾರು 5 ಕುಟುಂಬ ಗಳು ಇಲ್ಲಿ ವಾಸವಿದ್ದವು,ಆಗಲೇ ಈ ಮನೆ ಕಟ್ಟಲಾಗಿತ್ತು,1930ರ ನಂತರ ಈ ದ್ವೀಪವನ್ನ ತೊರೆದು ಜನ ಇರುವ ಪ್ರದೇಶಕ್ಕೆ ಜೀವನ ಅರಸಿ ಹೊರಟರು,ಅದರ ನಂತರ ಇದು ನಿರ್ಜನ ಪ್ರದೇಶದ ಹಾಗೆ ಆಗಿದೆ ಅಂತಲೂ ಹೇಳಲಾಗಿದೆ..
ಇದರ ಬಗ್ಗೆ ನಿಖರ ಮಾಹಿತಿ ಅಥವಾ ದಾಖಲೆಗಳು ಗೊತ್ತಿಲ್ಲ!!

ಕೆಲವು ರೂಮರ್ ಗಳು ಯಾರೋ ಕೋಟಿಪತಿ ಈ ಜಾಗದಲ್ಲಿ ಜೋಂಬಿ ಅಪಕಲಿಪ್ಸ್ ಎಂಬ ಯಾವುದೋ ಈವೆಂಟ್ ಕೆಲಸಕ್ಕೆ ಈ ಕಟ್ಟಡ ಕಟ್ಟಿಸಿದ್ದರು ಅಂತ ಸುದ್ದಿಯೂ ಓಡಾಡಿತ್ತು.!

ಬಲ್ಲ ಮೂಲದ ಪ್ರಕಾರ ಒಂದು ಸಣ್ಣ ಕಟ್ಟಡ,ಈ ಕಟ್ಟಡದ ಪಕ್ಕ ಇದೆ..ಕೆಲವು ರಿಸರ್ಚರ್ ಪಕ್ಷಿಗಳ ಮೇಲೆ ರಿಸರ್ಚ್ ಮಾಡುವ ಸಲುವಾಗಿ ಈ ಜಾಗಕ್ಕೆ ಬಂದು ಕೆಲವು ಸಮಯ ತಂಗುತ್ತಾ ಇದ್ದರು..
ಅದೇ ಮೊದಲು ಕಟ್ಟಿದ್ದು ನಂತರ ಈ ಮನೆಯನ್ನ ಕಟ್ಟಲಾಯ್ತು
ಎನ್ನುವ ಮಾತು ಇದೆ..!
1950ರಲ್ಲಿ ಹಂಟಿಂಗ್ ಅಸೋಸಿಯೇಷನ್ ಈ ಕಟ್ಟಡವನ್ನು ಕಟ್ಟಿಸಿದ್ದಾರೆ ಎನ್ನುವ ಸುದ್ದಿಯೂ ಇದೆ..!

Bjork ಎಂಬ ಹಾಡುಗಾರರು ದೇಶಕ್ಕೆ ಸಲ್ಲಿಸಿದ ಸೇವೆ ಪರಿಗಣನೆ ಮಾಡಿ,ಐಸ್ ಲ್ಯಾನ್ಡ್ ಸರ್ಕಾರ ಈ ದ್ವೀಪ ಕೊಡುಗೆಯಾಗಿ ನೀಡಿದ್ದಾರೆ ಎಂಬ ಸುದ್ದಿಯೂ ಓಡಾಡಿತ್ತು..!

ಈಗ Ellideay Hunter's association ಎಂಬ ಸಂಸ್ಥೆ ಈ ಮನೆ ಹಾಗೂ ಜಾಗವನ್ನ ನೋಡಿಕೊಳ್ಳುತ್ತಾ ಇದೆ ಹಾಗೂ ಪ್ರವಾಸಿಗರಿಗೆ ಕೆಲವು ಟೂರಿಸ್ಟ್ ಸಂಸ್ಥೆಗಳು ಒಂದು ದಿನದ ಪ್ರವಾಸ ವನ್ನ ಕೂಡ ಏರ್ಪಾಡು ಮಾಡುತ್ತಾರೆ ಎನ್ನಲಾಗಿದೆ..!

ಹೀಗೆ ಹತ್ತು ಹಲವು ಅಂತೆ ಕಂತೆಗಳು,ಕನ್ ಪ್ಯೂಜ್ ನಲ್ಲಿ ಇರುವ ಈ ಜಾಗದ ಇತಿಹಾಸದ ಬಗ್ಗೆ ಸ್ಪಷ್ಟವಾದ ಮಾಹಿತಿ ಯಾರ ಬಳಿ ಇದೆಯೋ ಗೊತ್ತಿಲ್ಲ..!!?

ಯುಟ್ಯೂಬರ್ ಒಬ್ಬರು ತೀರಾ ಇತ್ತೀಚೆಗೆ ಈ ದ್ವೀಪಕ್ಕೆ ಹೋಗಿ ಇದರ ಬಗ್ಗೆ ಮಾಹಿತಿ ಅವರಿಗೆ ಸಿಕ್ಕಿದ್ದನ್ನು ಒದಗಿಸಿದ್ದಾರೆ,ಆಸಕ್ತರು ಕೆಳಗೆ ಹಾಕಿರುವ ಲಿಂಕ್ ಬಳಸಿ ವೀಡಿಯೊ ನೋಡ ಬಹುದು..!

ನಂತರ ಜಗತ್ತಿನ ನಿರ್ಜನ ಪ್ರದೇಶದಲ್ಲಿರುವ ಮನೆಯಲ್ಲಿ ಬಂದು ಜೀವನ ಮಾಡುವುದರ ಬಗ್ಗೆ ತಯಾರಿ ಮಾಡಿ ಕೊಳ್ಳಬಹುದು..
😉











ಬಿಳಿ ಕುದುರೆ ಸಾವು



ಉತ್ತರ ಇಂಗ್ಲೆಂಡ್ ನ,ವೆಸ್ಟ್ ಯಾರ್ಕ್ ಶೈರ್ ಎಂಬಲ್ಲಿ ಒಂದು ಬೆಟ್ಟವಿದೆ ಬೀಕನ್ ಹಿಲ್ ಎಂದು ಕರೆಯಲಾಗುವ ಈ ಬೆಟ್ಟ ಹತ್ತೋದು,ಒಂತರಾ ಎತ್ತರದ ಮರ ಹತ್ತಿದ ಹಾಗೆ,ಬಹಳ ಕಡಿದಾದ ದಾರಿ,
ತಣ್ಣನೆ ಗಾಳಿಯಲ್ಲಿ ಬೆಟ್ಟ ಹತ್ತುವಾಗ ಎಂತಹಾ ಚಳಿಯಲ್ಲೂ ಬೆವರು ಬರದವರು ಇಲ್ಲವೇನೋ..!

ಹೈಕಿಂಗ್,ಮೌಂಟೈನ್ ಬೈಕ್,ವಾಕಿಂಗ್,ರನ್ನಿಂಗ್,ಹಾಗೂ ಪಿಕ್ನಿಕ್,ಗೆ ಜನರು ಇಲ್ಲಿಗೆ ಬೇರೆ ಬೇರೆ ಊರಿನಿಂದ ಬರೋದು ಬಹಳ ಸಾಮಾನ್ಯ..

ಈ ಬೆಟ್ಟ ಹತ್ತಿ ಸ್ವಲ್ಪ ದೂರ ಹೋದ ಮೇಲೆ ಕೆಲವು ಮನೆ ಹಾಗೂ ಕೃಷಿ ಭೂಮಿ,ಸಾಕು ಪ್ರಾಣಿಗಳಾದ,ಲಾಮ,ಅಲ್ಪಾಕ,ಉಣ್ಣೆ ಕುರಿ,ಕುದುರೆ,ಫೋನಿ(ಸಣ್ಣ ಕುದುರೆ)ರೈತರ ಜಾಗದಲ್ಲಿ ಬೇಲಿಯ ಒಳಗೆ ಮೇಯುತ್ತಾ ಇರೋದು ಹಾಗೂ ಬಹಳ ಅಪರೂಪಕ್ಕೆ ರೈತರು ಕಾಣಸಿಗೋದು ಇರುತ್ತೆ..

ಹೀಗೆ ಮೊದಲ ಸಲ ಹೋದಾಗ,ಒಂದು ದೊಡ್ಡ ಬಿಳಿಯ ಕುದುರೆ(Percheron breed) ಹಾಗೂ ಇನ್ನೆರಡು ಸಣ್ಣ ಕುದುರೆ ಪೋನಿ ಅಂದು ಹೇಳಲಾಗುವ ಕುದುರೆಯನ್ನ,ಒಬ್ಬರು ರೈತ ಮಹಿಳೆ,ಅವರ ಇಬ್ಬರು ಮಕ್ಕಳು ಸವಾರಿ ಮಾಡಿಕೊಂಡು ಬರುತ್ತಾ ಇದ್ದರು,
ದೂರದಿಂದಲೇ ಫೋಟೋ ತೆಗದು ಕೊಂಡೇ..

ಸಾಮಾನ್ಯವಾಗಿ ನಡೆದು ಹೋಗುತ್ತಾ ಇರುವವರಿಗೆ ಮೊದಲು ಜಾಗ ಕೊಡುವುದು ಇಲ್ಲಿ ಸಾಮಾನ್ಯ..ಬಹಳ ಹತ್ತಿರ ಬಂದಾಗ ನಮಗೆ ಜಾಗ ಕೊಡಲು ನಿಂತಾಗ ನನ್ನ ನೋಡಿ ಹೇಗಿದಿರಿ ಅಂದರು ರೈತ ಮಹಿಳೆ,ಚನ್ನಾಗಿದ್ದೇವೆ ಎಂದು ಮಾತಿಗಿಳಿದು,
ಕುದುರೆಯನ್ನ ಮುಟ್ಟ ಬಹುದಾ ಎಂದೇ..

ಓಹ್..ಧಾರಾಳವಾಗಿ ಅಂದ್ರು..
ತಮ್ಮ ಮಕ್ಕಳನ್ನ ಕುದುರೆ ಸವಾರಿಗೆ ಆಗಾಗ ಅಭ್ಯಾಸ ಆಗಲಿ ಅಂತ ಕರೆದು ಕೊಂಡು ಬರ್ತೇನೆ..

ಇದು ನನ್ನ ಇಷ್ಟದ ಕುದುರೆ ಅಂತ ತಾನು ಸವಾರಿ ಮಾಡುತ್ತಾ ಇದ್ದ ಕುದುರೆಗೆ ಹೇಳಿದ್ರೂ..

ಕುದುರೆಗಳನ್ನ ಬಹಳ ಹಚ್ಚಿ ಕೊಂಡಂತೆ ಕಂಡರು,ಹೆಚ್ಚಿನವರು ನಾಯಿ,ಕುದುರೆ,ಬೆಕ್ಕು,ಇನ್ನಿತರ ಪ್ರಾಣಿಗಳನ್ನ ಮಕ್ಕಳಂತೆ ಕಾಣುತ್ತಾರೆ ಇಲ್ಲಿ..

ಹೀಗೆ ಕೆಲವು ವಿಷಯ ಮಾತಾಡಿ,ಕೊನೆಗೆ ಹೊರಟರು..
ಅವರ ಚಿಕ್ಕ ಮಗಳು,ಮಗ ಕೂಡ ಸ್ಮೈಲ್,ಬಾಯ್,ಟೇಕ್ ಕೇರ್,ಸೀ ಯು ಲೇಟರ್ ಹೇಳಿ ಹೊರಟರು..

ನಂತರ ಕೆಲವು ಬಾರಿ ಆ ಜಾಗಕ್ಕೆ ಭೇಟಿ ಕೊಟ್ಟಾಗ ಅದೇ ಬಿಳಿ ಕುದುರೆ ಅವರದ್ದೇ ಜಾಗದಲ್ಲಿ ಮೇಯುತ್ತಾ ಇದ್ದಾಗ,ಹೊರಗೆ ನಿಂತು, "ಏಯ್ ಬಿಳಿಯ ಬಾರೋ ಇಲ್ಲಿ" ಅಂದರೆ ಏನೋ ನನಗೆ ಕನ್ನಡದಲ್ಲಿ ಕರೆದಿದ್ದು ಅರ್ಥವಾಯ್ತು ಅನ್ನುವ ಹಾಗೆ ಓಡಿ ಬಂದು ಹತ್ರ ನಿಲ್ಲುತ್ತಾ ಇದ್ದ ಬಿಳಿಯ,ನಮ್ಮ ಭೇಟಿಗೆ ಬಂದ ಆಪ್ತರನ್ನ ಈ ಜಾಗಕ್ಕೆ ಕರೆದು ಕೊಂಡು ಹೋದಾಗ ಹಲವರು,ಈ ಬಿಳಿಯ ಹಾಗೂ ಸಣ್ಣ ಕುದುರೆಗಳನ್ನ ಹತ್ತಿರದಿಂದ ನೋಡಿ ಫೋಟೋ ತೆಗೆದು ಖುಷಿ ಪಟ್ಟಿದ್ದರು..!

ಆದರೆ ಚಳಿಗಾಲದಲ್ಲಿ ಹಲವು ಸಮಯ ಇಲ್ಲಿಗೆ ಭೇಟಿ ಕೊಟ್ಟಿರಲಿಲ್ಲ..!

ತೀರಾ ಇತ್ತೀಚೆಗೆ ಒಬ್ಬನೇ ಹೋಗಿದ್ದೆ ಅದೇ ಜಾಗಕ್ಕೆ..
ಎಲ್ಲಿ ಹುಡುಕಿದರೂ ಬೇಲಿಯ ಪಕ್ಕ ಮೇಯುತ್ತಾ ಇದ್ದ ನಮ್ಮ ಬಿಳಿಯ ಕಾಣಿಸಲೇ ಇಲ್ಲ..

ಬೇಲಿಯ ಪಕ್ಕ ಬಿಳಿಯದಾದ 2 ಒಂದರ ಕೆಳಗೆ ಒಂದು ವೈರ್ ಕಟ್ಟಲಾಗಿತ್ತು,
ಬೇಲಿಯ ಎದುರು ಹಲವು ಕಡೆ "ಡೋಂಟ್ ಫೀಡ್ ದ ಹಾರ್ಸ್ ದೇ ಆರ್ ಇನ್ ಸ್ಪೆಶಲ್ ಡಯಟ್"ಅಂತ ಪಲಕ ಹಾಕಲಾಗಿತ್ತು..

ಏನೋ ಅನುಮಾನ ಬಂತು..
ಅಲ್ಲಿ ಇಲ್ಲಿ ನೋಡಿದೆ ಯಾವುದೋ ಒಮ್ಮೆಯೂ ನೋಡದ ಎರಡು ಸಣ್ಣ ಹಾಗೂ ಒಂದು ದೊಡ್ಡ ಕುದುರೆ ಮೇಯುತ್ತಾ ಇದ್ದವು..!

ಯಾಕೋ ಅನುಮಾನ ಹಾಗೂ ತಳಮಳವಾಯ್ತು,ಏನೋ ಅವಘಡ ಆಗಿದೆ ಅಂತ ಅನಿಸ್ತು..

ವಾಪಾಸ್ ಬಂದೆ...

ಮತ್ತೆ ಅದಾದ ನಂತರ ಹಲವು ಸಲ ಭೇಟಿ ಕೊಟ್ಟಾಗಲೂ ಬಿಳಿಯನ ಪತ್ತೆ ಇಲ್ಲ..

ಕೇಳೋಣ ಎಂದರೆ ಹಲವು ಭಾರಿ ಭೇಟಿ ಕೊಟ್ಟಾಗಲೂ ಅದರ ಮಾಲೀಕರು ಜಮೀನಿನ ಸುತ್ತಮುತ್ತ ಎಲ್ಲೂ ಕಾಣಿಸಲಿಲ್ಲ!!?

ನಂತರ ಒಮ್ಮೆ ಪಕ್ಕದ ಜಮೀನಿನ ರೈತರು ಸಿಕ್ಕಾಗ,ಅವರ ಬಳಿ ಬಿಳಿ ಕುದುರೆ ಬಗ್ಗೆ ಕೇಳಿದಾಗ ಅವರು ಹೇಳಿದ್ದು,
ಬೆಟ್ಟಕ್ಕೆ ಅಂತ ಕುಟುಂಬದ ಜೊತೆ ಪಿಕ್ನಿಕ್ ಬರುವ ಕೆಲವರು
ತಾವು ತಿಂದು ಉಳಿದ ಆಹಾರವನ್ನ ಹೀಗೆ ಬೇಲಿಯ ಬಳಿ ಬಂದು ಸಾಕು ಪ್ರಾಣಿಗೆ ಕೊಡ್ತಾರೆ,ಅದನ್ನ ತಿಂದು ಫುಡ್ ಪಾಯ್ಸನ್ ಆಗಿ ಕುದುರೆ ಆರೋಗ್ಯ ಹಾಳಾಗಿತ್ತು ನಂತರ ಅದು ತೀರಿ ಹೋಯ್ತು ಎಂದು ಹೇಳಿದ್ರೂ..!

ಬಹಳ ನೋವು,ಬೇಸರವಾಯ್ತು,
ಅಷ್ಟು ಪ್ರೀತಿಯಿಂದ ಸಾಕಿದ್ದ ಅಷ್ಟು ದೈತ್ಯ ದೇಹಿ ಪ್ರಾಣಿಯನ್ನ ಹೀಗೆ ಯಾರೋ ಮಾಡಿದ ತಪ್ಪಿಗೆ ಕಳೆದು ಕೊಂಡಾಗ ಅದರ ಮಾಲೀಕರಿಗೆ ಎಷ್ಟು ನೋವಾಗ ಬಹುದು ಅಲ್ವಾ!!?

ಯಾರದ್ದೋ,ಪ್ರಾಣಿ,ಪಕ್ಷಿಗಳಿಗೆ,ಮೃಗಾಲಯದಲ್ಲಿ ಇರುವ ಪ್ರಾಣಿಗಳಿಗೆ,ಪಾರ್ಕ್ ನಲ್ಲಿರುವ ಪಕ್ಷಿಗಳಿಗೆ,ಪ್ರವಾಸಕ್ಕೆ ಹೋದಾಗ ಕಾಡಿನ ಮಧ್ಯ ರಸ್ತೆಯಲ್ಲಿ ನಿಲ್ಲಿಸಿ ನಾವು ತಿಂದು ಉಳಿದ,ಬ್ರೆಡ್,ರೈಸಬಾತ್,ದೋಸೆ,ಚಪಾತಿ,ಬಿಸ್ಕೆಟ್,ಹಾಳಾದ ಹಣ್ಣು ಪ್ಲಾಸ್ಟಿಕ್ ಸಹಿತ ಎಸೆಯೋದು,ತಿನ್ನಿಸೋದು,ಅವಕ್ಕೆ ಒಗ್ಗದ ಆಹಾರ ಕೊಟ್ಟು ಅವುಗಳ ಆರೋಗ್ಯ ಹಾಳು ಮಾಡಿ ಅವುಗಳ ಸಾವಿಗೆ ಕಾರಣವಾಗೋದು ಸರಿ ಅಲ್ಲ ಅಲ್ವಾ!?

ಅವುಗಳ ಆಹಾರ ಪದ್ಧತಿಯೇ ಬೇರೆ ಇರುತ್ತೆ ಅನ್ನೋದು ಗಮನದಲ್ಲಿ ಇಟ್ಟು ಕೊಳ್ಳೋದು ಅವುಗಳಿಗೆ ನಾವು ಮಾಡುವ ಸಹಾಯ..
ಅವು ಅಳಿದು ಉಳಿದ ಹಾಳಾದ ಆಹಾರ ಹೊಟ್ಟೆಗೆ ತುಂಬಿ ಕೊಳ್ಳುವ ಡಸ್ಟ್ ಬಿನ್ ಗಳು ಅಲ್ಲ..

ನಮ್ಮ ನಿಮ್ಮ ಹಾಗೆ ಜೀವ ಇರುವ ಪ್ರಾಣಿಗಳು..