ಭಾನುವಾರ, ನವೆಂಬರ್ 15, 2015

lesson

ನೀವು ಒಂದು ಕಪ್ಪೆಯನ್ನು ಪಾತ್ರೆಯ ಒಳಗೆ ಹಾಕಿ ಪಾತ್ರೆಯನ್ನು ಬಿಸಿಯಾಗಲು ಇಡಿ..

ಪಾತ್ರೆಯಲ್ಲಿರುವ ನೀರು ಬಿಸಿಯಾಗುತ್ತಾಹೋದಂತೆ ಕಪ್ಪೆ ಆ ಬಿಸಿಗೆ ತಕ್ಕಂತೆ ತನ್ನ ದೇಹವನ್ನು ಶಕ್ತಿ ಮೀರಿ ಹೊಂದಿಸಿ ಕೊಳ್ಳಲು ಪ್ರಯತ್ನಿಸುತ್ತಾ ಇರುತ್ತದೆ...
ಇನ್ನೇನು ಕುದಿಯುವ ಬಿಂದು ಅತಿ ಹೆಚ್ಚಾದಾಗ ಕಪ್ಪೆ ಇನ್ನೇನು ಆ ಪಾತ್ರೆಯಲ್ಲಿ ಇರುವುದು ಕಷ್ಟ ಸಾಧ್ಯ ಎಂದಾಗ,ಅಲ್ಲಿಂದ ಅದು ನೆಗೆದು ಹೊರ ಹಾರಲು ತೀರ್ಮಾನಿಸುತ್ತದೆ..
ಹಾಗೆ ಹೊರ ಹಾರಲು ಪ್ರಯತ್ನಿಸುತ್ತದೆ ಆದರೆ ಅದರಿಂದ ಅದು ಕಷ್ಟ ಸಾಧ್ಯವಾಗುತ್ತದೆ,ಏಕೆಂದರೆ ಅದು ತನ್ನ ದೇಹವನ್ನು ಬಿಸಿ ಏರುತ್ತಿರುವ ನೀರಿನಲ್ಲಿ ಹೊಂದಿಸಿ ಕೊಂಡು ಇರಲು ಪ್ರಯತ್ನಿಸುವ ಸಮಯದಲ್ಲಿ ತನ್ನ ಎಲ್ಲಾ ಶಕ್ತಿಯನ್ನು ಕಳೆದು ಕೊಂಡು ಆಶಕ್ತವಾಗಿರುತ್ತದೆ..
ಕೊನೆಗೆ ಹೊರಬರಲಾಗದೆ ಮರಣ ಹೊಂದುತ್ತದೆ.😢😢😢😢

ಕಪ್ಪೆ ಸಾಯಲು ಕಾರಣವೇನು??😨😨😨

ಬಹಳ ಜನ ಹೇಳುವ ಉತ್ತರ..
ಕುದಿಯುತ್ತಿರುವ ನೀರಿಂದ ಕಪ್ಪೆ ಸತ್ತಿತು ಎಂದು..😷

ಆದರೆ ಉತ್ತರ ಅದಲ್ಲ..
ಸರಿಯಾದ ಸಮಯದಲ್ಲಿ ಕಪ್ಪೆ ತನ್ನ ಪ್ರಾಣವನ್ನು ಉಳಿಸಿಕೊಳ್ಳುವ ತೀರ್ಮಾನ ತೆಗೆದು ಕೊಳ್ಳುವಲ್ಲಿ ವಿಪಲ ವಾಗಿದ್ದೇ ಕಾರಣ.😜

ನಾವು ಜನರು ಹಾಗೂ ಸಂಧರ್ಭಕ್ಕೆ ತಕ್ಕಂತೆ ಹೊಂದಿ ಕೊಂಡು ಹೋಗುವುದು ಅಗತ್ಯ..😃

ಆದರೆ

ನಮಗೆ ಯಾವಾಗ ಹೊಂದಿಕೊಳ್ಳಬೇಕು,ಯಾರಿಗೆ ಹೊಂದಿ ಕೊಳ್ಳಬೇಕು,ಯಾವಾಗ ಅವರಿಗೆ ಪ್ರತ್ಯುತ್ತರ ನೀಡ ಬೇಕು ಅಥವಾ ಅವರನ್ನು ಎದುರಿಸ ಬೇಕು,ಅನ್ನುವುದು ಚೆನ್ನಾಗಿ ತಿಳಿದಿರ ಬೇಕು..👍

ಕೆಲವು ಸಂಧರ್ಭಗಳು ಕೆಲವರನ್ನು ಎದುರಿಸಲು ಹಾಗೂ ನಮ್ಮನ್ನ ನಾವು ರಕ್ಷಿಸಿ ಕೊಳ್ಳಲು ಪ್ರತಿಕ್ರಿಯಿಸ ಬೇಕಾಗುತ್ತದೆ, ಅದಕ್ಕೆ ತಯಾರಿರಬೇಕು..👍

ನಾವು ಕೆಲವು ಜನರನ್ನು ನಮ್ಮ,ಒಳ್ಳೆಯತನ,ಹಣ,ಮಾನಸಿಕವಾಗಿ,ದೈಹಿಕವಾಗಿ ದುರ್ಭಳಕೆ ಮಾಡಲು ಬಿಟ್ಟೆವೆಂದರೆ..
ಅವರು ಅದನ್ನೇ ಮುಂದುವರೆಸಲು ಪ್ರಯತ್ನಿಸುತ್ತಾರೆ..😈

ನಾವು ಯಾವಾಗ ಹಾರಬೇಕೆಂದು..ನಮ್ಮ ಶಕ್ತಿ ಕುಂದುವುದಕ್ಕಿಂತ ಮೊದಲು,
ನಾವೇ ತೀರ್ಮಾನಿಸ ಬೇಕು. 😎
.!!!
ಇದರ ಬಗ್ಗೆ ಒಮ್ಮೆ ಯೋಚಿಸಿ..😂☺

ಕೃಪೆ:ಪೇಸುಬುಕ್ನಲ್ಲಿ ಸಿಕ್ಕಿದ್ದು
ಇಂಗ್ಲೀಶ್ ನಿಂದ ಕನ್ನಡಕ್ಕೆ ಅನುವಾದಿಸಿದ್ದು..

Smart phone

ಮಂಜಪ್ಪ ಗೌಡ್ರು:-ಇತ್ತೀಚಿಗೆ ಎಂತ್ ಆಗ್ಯದೆ ಗೊತ್ತನಾ
ಕೆಲವು ಹುಡ್ಗುರು ಅಪ್ಪ ಅಮ್ಮನ ಮತ್ತೆ ಅವರ್ನೇ ನಂಬ್ಕಿಂಡು ಇರ್ತಾರಲ್ಲ ಎಂತಾರು ಮಾಡ್ತನೆ/ಳೆ ನಮ್ಮನ್ ಸಾಕ್ತಾನೆ/ಳೆ,ಮರ್ಯಾದಿ ಕಳಿಯಲ ಅನ್ಕುಂಡು,ಅಂತವರನ್ನು ಎಷ್ಟು ಘನಾಗಿ ಬಕ್ರ ಮಾಡ್ತವೆ ಕೆಲ್ವು ಹುಡ್ಗ್ರು ಗೊತ್ತನು..ಅಯ್ಯಯ್ಯಬ್ಬಾ..
ನಾವೆಲ್ಲಾ ಅವ್ರುನ್ ನೋಡ್ಕಿಂಡ್ ಕಲಿಯದು ತುಂಬಾ ಅದೆ ಗೊತ್ತದ್ಯಾ..!!!
ಅವರು ಹಣಿ ಬರ ಯಾವಾಗ ಗೊತ್ತಾದೆ ಹೇಳ್ ಪಾಸ್,ಪೈಲ್ ಅಂತ ಬತ್ತದಲಾ ಆಗ್ಲೇ ಗೊತ್ತಾಗದ್ ಅಲ್ಲನಾ
"ಅಯ್ಯಯ್ಯೋ ನಮ್ಮ ಕಿಮಿ ಮೇಲೆ ಇಷ್ಟು ದಿನ ಹ್ಯಾಂಗಿಂಗ್ ಗಾರ್ಡನ್ ಇಡ್ತಾ ಇದ್ದ/ಇದ್ಲು ನನ್ನ ಮಗ/ಮಗಳು ಅಂತ..."
ಅವರ ಅಪ್ಪಯ,ಅಮ್ಮ ಗೊಳೋ ಅನ್ತಾವೆ ಕಡಿಗೆ..
ಅಲ್ಲಾ ಮರೆನೆ ಇವು ಎಲ್ಲೋ ಇದ್ಕಿಂಡ್ ,ಪೋನ್ ಮಾಡ್ಕಿಂಡ್,ಏನು ಹೇಳ್ರು ನಂಬ್ಕಿ ಕುತ್ಕುತರಲ್ಲ ಅವರ ಅಪ್ಪಯ,ಅಮ್ಮ ಅಂತವ್ರನ್ನ ನೋಡ್ರೆ ಬೇಜಾರಾತದೆ ಕಣ,ಎಂತ ಅಮಾಯಕರು ಅಲನಾ..
ಪಾಪ..

ಯಂಕ:- ಹೌದು ಗೌಡ್ರೆ..

ಮಂಜಪ್ಪ ಗೌಡ್ರು:-ಏನಾರು ಸುಳ್ಳು ಹೇಳಿ ನಂಬಸ್ತವಲ ಅವು ಇನ್ನು ಎಂತ ಬುದ್ದಿ ಇಟ್ಕುಂಡು ಇರ್ಬಕು ತಲೆಲಿ ಅಲಾ..
ಇದೇ ಬುದ್ದಿ ಒಳ್ಳೆದ್ ಉಪ್ಯೋಗ್ಸಲ ನೋಡು ಹಂಗ್ಯಾರೆ ಇವು ಹಪ್ಪು ಗೆಟ್ಟವು,ಅಲಾ..
೨೪ ಘಂಟೆ ಎಂತದೋ ಮೊಬೈಲ್ ಹಿಡ್ಕುಣದು
ವಾಟೆ ಸೊಪ್ಪಂತೆ,
ಸ್ಪೈಕ್ ಅಂತೆ,
ಟಿಲ್ಲರ್ ಅಂತೆ,
ವೀಕ್ ಕಾಟ್ ಅಂತೆ,
ಕೇಸ್ಬುಕ್ ಅಂತೆ,
ಇಷ್ಟೆ ಗ್ರಾಂ,
ಎಂತೆಂತದೋ ಬಂದದೆ ಅದ್ನ ಉಪಯೊಗ್ಸಿ ಕುಂಡು ಏನೇನೋ ಮಾಡ್ತರೋ,ಯಾರಿಗೆ ಗೊತ್ತಾದೆ ಹೇಳು,ಅದೂ ಅಲ್ದೆ ಮೊಬೈಲಿಗೆ ಎಂತದೋ ನಂಬರ್ ಹಾಕಿಂಡಿರ್ತವಪ್ಪಾ,ಅದೆಂತದೋ ಎಟಿಎಮ್ ಅಲ್ಲಿ ದುಡ್ಡು ತೆಗಿಯಕೆ ಹೊಡಿತಿವಲಾ ಅದು,
ಇದೆಲ್ಲಾ ಎಂತದಾ..??

ಯಂಕ;-ಗೌಡ್ರೆ,ಥೋ
ಅದು ವಾಟೆ ಸೊಪ್ಪಲ್ಲ,ವಾಟ್ಸ್ ಅಪ್
ಸ್ಪೈಕ್ ಅಲ್ಲ,ಸ್ಕೈಪ್
ಟಿಲ್ಲರ್ ಅಲ್ಲ ಟ್ವಿಟರ್
ವೀಕ್ ಕಾಟ್,ವಿ ಚಾಟ್
ಕೇಸ್ಬುಕ್ ಅಲ್ಲ,ಪೇಸ್ಬುಕ್
ಇಷ್ಟೆ ಗ್ರಾ ಅಲ್ಲಾ,ಇನ್ಷ್ಟಾಗ್ರಾಂ
ಅದಕ್ಕೆ ಆತರ ನಂಬರ್ ಹಾಕೊಳ್ಳೋದಕ್ಕೆ ಪಾಸ್ವರ್ಡ್ ಅಂತಾರೆ
ಮರ್ರೆ.
ಮಂಜಪ್ಪ ಗೌಡ್ರು:-ಎಂತದೋ ಮರಾಯ,ಸುಡುಗಾಡು ಈ ಟೆಕ್ನಾಲಜಿ ಎಲ್ಲಾ ಬಂದ್ಕುಂಡು ,ಎತ್ಲಗೆ ಹೋತಾ ಅದ್ಯೋ ಮರೆನೆ ಈ ಪ್ರಪಂಚ ಅಲಾ..
ಅಲಾ ಅವರು ಬಾರಿ ಒಳ್ಳೆಯವರಾದ್ರೆ ಅದೇ ನೀ ಹೇಳಿದ್ಯಲ್ಲ ಆ ಪಾಸ್ವರ್ಡ ಎಂತ ಸುಡುಗಾಡು,
ಅದು ಎಂತಕೆ ಹಾಕುಬಕು ಹೇಳು ನೋಡನ..
ಥೋ..
ಎಂತದೋ..
ಊರು ಪಾರ್ ಪತ್ಗಿ ಕಟ್ಕುಂಡು,ಮಂಜಪ್ಪ್ ಗೌಡ ಬಡವಾದ್ನಂತೆ ಊರು ಮನೆಯವರು ಮಾತಾಡ್ಕಿಣದು ಬ್ಯಾಡ ಮರೆನೆ,ಅಲಾ ..
ನಮ್ಗ್ಯಾಗೆ ಯಾರು ಏನಾರು ಸತ್ಗಿಲಿ ಅಲಾ,..
ಅದೆಂತದೋ ಹೇಳ್ತಾರಲ್ಲ
ಕಾಲಾಯ ತಸ್ಮೈ ನಮಹಾ..
ಕೊನೆ ತೆಗಿಯಕೆ ಬತ್ತಿನಿ ಅಂದನೆ ಶಂಕ್ರ,ಬೇಗ ತ್ವಾಟಕ್ಕೆ ಹೋಬಕ್ ಅತಾ...ಸಾಯಂಕಾಲ ಡೈರಿ ಹತ್ರ ಸಿಕ್ತಿನಾ ಅತಾ,ಬರ್ಲಾ..

ಗುರುವಾರ, ಅಕ್ಟೋಬರ್ 29, 2015

#ಮತ್ತೊಂದು_ತಪ್ಪಿಸಿಕೊಂಡ_ಮೊಬೈಲ್_ಕಥೆ

ಇದರ ಹಿಂದೆಯೂ ಒಬ್ಬರ ಜಂಗಮವಾಣಿಸಿಕ್ಕಿತ್ತು(Mobile) ಅದರ ಬಗ್ಗೆಯೂ ಬರೆದಿದ್ದೆ,
ಇದು ನಂತರ ನಡೆದ ಘಟನೆ,
ಎರಡಕ್ಕೂ ಬಹಳ ವ್ಯತ್ಯಾಸವಿದೆ:-
ನಾನು ಕೆಲಸ ಮುಗಿಸಿ ಕೊಂಡು ಮೋಟಾರು(ಬಸ್)ವಾಹನ ಇಳಿದು ಮನೆಯ ಕಡೆ ಹೆಜ್ಜೆ ಹಾಕುತ್ತಾ ಇದ್ದೆ,ಇನ್ನೇನು ರಸ್ತೆಯನ್ನು ದಾಟಬೇಕು ಅನ್ನುವಷ್ಟರಲ್ಲಿ,ಇಬ್ಬರು ಚಿಗುರು ಮೀಸೆಯ ಹುಡುಗರು,ಯಾವುದೋ ಮರುವಿನ್ಯಾಸ ಮಾಡಿದ,ಹೋಂಡಾ ಡಿಯೋ ದ್ವಿಚಕ್ರವಾಹನದಲ್ಲಿ ಏಕ ಮುಖ ರಸ್ತೆಯಲ್ಲಿ ವೇಗವಾಗಿ ಬಂದರು,ಅಲ್ಲೇ ಹತ್ತಿರದ ತಂಗು ನಿಲ್ದಾನದಲ್ಲಿ ನಿಂತಿದ್ದ ಕೆಲವು ಯುವತಿಯರ ಹತ್ತಿರ ಹೋಗಿ ಏನೋ ಹೇಳಿ,ಅಲ್ಲಿಂದ ದ್ವಿಚಕ್ರ ವಾಹನವನ್ನು ತಿರುಗಿಸಿ ಕೊಂಡು ವೇಗವಾಗಿ ಕರ್ಕಶ ವಾಗಿ ಶಬ್ದಮಾಡುತ್ತಾ ಹೊರಟೇ ಬಿಟ್ಟರು,ತಿರುಗಿಸುವ ಭರದಲ್ಲಿ ಹಿಂಬದಿಯ ಸವಾರನ ಒಂದು ನೋಕಿಯಾ ಜಂಗಮವಾಣಿ(ಮೊಬೈಲ್) ಬಿದ್ದು ಹೋಯಿತು,ಅದನ್ನು ನೋಡಿದ ರಸ್ತೆ ದಾಟುತ್ತಿದ್ದವರು ಯಾರೂ ಗಮನಿಸಲಿಲ್ಲ,ಗಮನಿಸಿದವರು ನಮಗೆ ಅಗತ್ಯವಿಲ್ಲ್ ಅನ್ನೋ ಹಾಗೆ ನೋಡಿಯೂ ನೋಡದ ಹಾಗೇ ಹೊರಟು ಹೋದರು,
ನಾನು'ಹಲೋ...ಹಲೋ...'ಎಂದು ಕಿರುಚಿದರೂ ಆ ಯುವಕರಿಗೆ ಕೇಳಿಸಲಿಲ್ಲ,
"ಮೀಸೆ ಬಂದೋರಿಗೆ ದೇಶ ಕಾಣಲ್ವಂತಲ್ಲ..."ಹಾಗೇ...ಹೊರಟೇ ಹೋದರು..
ಆ ಪೊರ್ಕಿಗಳಂತೆ ಕಾಣುತ್ತಿದ್ದ ಯುವಕರು..
ಕೊನೆಗೆ ನಾನು ಆ ಜಂಗಮವಾಣಿಯ ಎಲ್ಲಾ ಅವಯವಗಳನ್ನು ಎತ್ತಿ ಕೊಂಡು ನನ್ನ ಕೈ ಚೀಲದಲ್ಲಿ ಹಾಕಿ ಕೊಂಡು ಮನೆಗೆ ಹೊರಟೆ.
ಮನೆಗೆ ಬಂದು ಅದನ್ನು ಎಲ್ಲಾ ಸೇರಿಸಿ ಜಂಗಮವಾಣಿಯನ್ನು ಚಾಲೂ ಮಾಡಿದೆ,ಆದರೆ ಅದಕ್ಕೆ ಆ ಚಾಲೂಕು "ಬಾಲ"ವಿರದ ಬಾಲಕ ಅದಕ್ಕೆ ಸುರಕ್ಷತಾ ಸಂಖ್ಯೆಯನ್ನು ಹಾಕಿದ್ದ,ಕೊನೆಗೆ ಅವನ ಜಂಗಮವಾಣಿಯಿಂದ ಆತನ ಸಿಮ್ ಬೇರ್ಪಡಿಸಿ ನನ್ನ ಒಂದು ಜಂಗಮವಾಣಿಗೆ ಹಾಕಿ,ಆತನ ಸಿಮ್ ನಲ್ಲಿ ಯಾರಾದರೂ ಪೋಷಕರ ಸಂಖ್ಯೆ ಸಿಗಬಹುದೆಂದು ಹುಡುಕುತ್ತಾ ಹೋದೆ,ಆತ ಎಲ್ಲೋ ಪಾರಿನ್ನಲ್ಲಿ ಹುಟ್ಟಿ ಬೆಳೆದವರಂತೆ ಮಾಮಾ ಅಂತ ಹಾಕಿ ಕೊಂಡಿದ್ದ,ನಾನು ಅವನ ಮಾವನ ಸಂಪರ್ಕ ಸಂಖ್ಯೆ ಇರಬಹುದು ಎಂದು ಕರೆ ಮಾಡಿದೆ ನೋಡಿದರೆ ಯಾರೋ ಹೆಂಗಸು ಕರೆ ಸ್ವೀಕರಿಸಿದರು,
ನಾನು ನಿಮ್ಮ ಹುಡುಗನ ಜಂ.ವಾ ನನ್ನ ಬಳಿ ಇದೆ ಅಂತ ಅವರಿಗೆ ನೆಡೆದ್ದನ್ನು ಹೇಳುವುದಕ್ಕೆ ಮೊದಲೇ..
ಆಕೆ ಏರು ಧ್ವನಿಯಲ್ಲಿ..
"ಏನು ನನ್ನ ಮಗನ ಜಂ.ವಾ ನಿನ್ನ  ಬಳಿ ಹೇಗೆ ಬಂತು,ನೀನು ಕದ್ದಿದ್ದೀಯ",ಅಂತ ಏಕವಚನದಲ್ಲಿ ಏನೇನೋ ಬಡಬಡಾಯಿಸಲು ಶುರುವಿಟ್ಟು ಕೊಂಡರು,
ನಾನು ಕೂಡಲೇ ಏರು ಧ್ವನಿಯಲ್ಲಿ ಉತ್ತರಿಸಿದೆ,
"ನಾನು ಜಂ.ವಾ ಕದ್ದಿದ್ದರೆ ನಿಮ್ಗ್ಯಾಕೆ ಕರೆ ಮಾಡುತ್ತಿದ್ದೆ,ಸಾಮಾನ್ಯ ಜ್ನಾನ ಇಟ್ಟು ಕೊಂಡು ಮಾತಾಡಿ ಮೊದಲು ಗೌರವ ಕೊಟ್ಟು,ಗೌರವ ತೆಗೆದು ಕೊಳ್ಳುವುದು ಅಭ್ಯಾಸ ಮಾಡಿ ಕೊಳ್ಳಿ,ಹೆಚ್ಚಿಗೆ ಮಾತಾಡಿದ್ರೆ ಇದನ್ನ ಇಲ್ಲೇ ಎಸೆಯುತ್ತೇನೆ,ನೀವು ಏನು ಮಾಡುತ್ತೀರೋ ಮಾಡಿ ಕೊಳ್ಳಿ "ಎಂದೆ,(ಆ ಜಂಗಮವಾಣಿಯನ್ನು ನೋಡಿದರೆ ಪೌಷ್ಟಿಕಾಂಶದ ಕೊರತೆಯುಳ್ಳ ವ್ಯಕ್ತಿಯಂತೆ ಸೊರಗಿ ಹೋಗಿತ್ತು,ಅದರಲ್ಲಿ ಅಂಕಿ,ಸಂಕಿ,ಕೀನಲ್ಲಿದ್ದ ಅಕ್ಷರಗಳು ಏನೂ ಕಾಣುತ್ತಿರಲಿಲ್ಲ ಅಷ್ಟರ ಮತ್ತಿಗೆ ಅದನ್ನು ಅದನ್ನು ಶೋಷಿಸಲಾಗಿತ್ತು ಬಿಡಿ)
ಆಕೆ ಕೂಡಲೆ
ಓ ಕ್ಷಮಿಸಿ ಸಾರ್,ಗೊತ್ತಾಗಲಿಲ್ಲ'ಅಂದರು.
ಕೊನೆಗೆ
"ನಿಮ್ಮ ಮಗನಿಗೆ ಇದನ್ನು ತೆಗೆದು ಕೊಂಡು ಹೋಗಲು ಹೇಳಿ,ಈಗ ಸಾಧ್ಯವಿಲ್ಲ ಬೆಳಿಗ್ಗೆ ಬರಲು ಹೇಳಿ ಅಂದೆ.."
ಅದಕ್ಕೆ ಆ ಪುಣ್ಯಾತ್ ಗಿತ್ತಿ ಏನು ಹೇಳಬೇಕು.
"ನೀವೇ ತಂದು ಕೊಟ್ಟು ಹೋಗಿ ಸಾರ್ ಮನೆ ಹತ್ರ ಬಂದು,ನಮ್ಮ ಮನೆ ಉತ್ತರಹಳ್ಳಿ ನಿಲ್ದಾನದ ಹತ್ತಿರ ವಿಳಾಸ ಹೇಳುತ್ತೇನೆ,"
ಎನ್ನಬೇಕೆ..!!!
ನನಗೆ ನಖಶಿಖಾ ಅಂತ ಸಿಟ್ಟು ನೆತ್ತಿಗೇರಿತು
"ಬೇಕಾದರೆ ಬಂದು ನಾಳೆ ತಗೊಂಡು ಹೋಗಿ,ಇಲ್ಲವಾದರೆ ಅದು ನನಗೆ ಎಲ್ಲಿ ಸಿಕ್ಕಿತ್ತೋ ಅಲ್ಲಿ ಈಗಲೇ ಎಸೆದು ಬರುತ್ತೇನೆ" ಅಂತ ತುಂಬಾ ಖಾರವಾಗಿ ಉತ್ತರಿಸಿದೆ.
ಅದಕ್ಕೆ ಆಕೆ ಅವನಿಗೆ ಹುಷಾರಿಲ್ಲ ಸಾರ್ ಅದಿಕ್ಕೆ ಅಂದ್ರು..
ನಾನು ಅಂದೆ
"ಅಲ್ಲಾರೀ ನಿಮ್ಮ ಮಗನಿಗೆ ಸಂಜೆ ಬಸ್ ನಿಲ್ದಾಣದ ಹತ್ತಿರ ವೇಗವಾಗಿ ಜಂಗಮವಾಣಿ ತನ್ನ ಜೇಬಿನಿಂದ ಬಿದ್ದಿದ್ದು ಅರಿವಿಲ್ಲದಂತೆ ದ್ವಿಚಕ್ರವಾಹನದಲ್ಲಿ ತಿರುಗಾಡುವಾಗ ಹುಷಾರಿರಲಿಲ್ಲವೇ!!!,ಅದಕ್ಕೆಲ್ಲ ಸಮಯವಿರುತ್ತೆ"!!!,ಅಂದೆ..
ಅದಕ್ಕೆ ಆಕೆ ಉತ್ತರಿಸಲು ತಡಬಡಾಯಿಸಿ,
ಕೊನೆಗೆ
"ಸರಿ ಸಾರ್..ಅವನಿಗೆ ನಾಳೆ ಬಂದು ತೆಗೆದು ಕೊಂಡು ಹೋಗಲು ಹೇಳುತ್ತೇನೆ"ಅಂದು,
ಧನ್ಯವಾದ ಹೇಳದೆ,
ಕರೆ ಸ್ಥಗಿತ ಗೊಳಿಸಿದರು..
ರಾತ್ರಿ ಆತನ ಜಂಗಮವಾಣಿಗೆ ಕೆಲವು ತಲೆ ಕೆಟ್ಟ ಯುವತಿಯರು,ಏನೇನೋ ಮೆಸೇಜ್ ಕಳುಹಿಸುತ್ತಿದ್ದರು,ಕೊನೆಗೆ ನಾನು ಜಂ ವಾ ಬಂದ್ ಮಾಡಿ ಮಲಗಿದೆ..
ಮರುದಿನ ಬೆಳಿಗ್ಗೆ ಆತನೇ ಯಾವುದೋ ಸಂಖ್ಯೆಯಿಂದ ಕರೆ ಮಾಡಿ ಬಂದ,
ಅವನ ಅವತಾರವೋ,ಅವನ ಕೇಶವಿನ್ಯಾಸವೋ ಅಬ್ಬಬ್ಬಾ ಅವನಿಗೇ ಪ್ರೀತಿ,ಕೊನೆಗೆ ನನ್ನಿಂದ ಜಂಗಮವಾಣಿ ಪಡೆದ,
"ನಾನು
ಏನು ಮಾಡುತ್ತಿದ್ದೀಯ ಅಂದೆ",
"ಅದಕ್ಕೆ ಆತ ಪಿ ಯು ಸಿ ೨ನೇ ವರ್ಷ ಅಂದ",
ನನಗೆ ಒಂದು ಕೃತಜ್ನತೆಯನ್ನೂ ಹೇಳದೆ ಅಂಡು ತಿರುಗಿಸಿ ಕೊಂಡು ನೀನ್ಯಾವ ಲೆಕ್ಕ ಅನ್ನೋ ಹಾಗೆ ಹೋಗೇ ಬಿಟ್ಟ..
ಪಿ ಯು ಸಿ ಎರಡನೇ ವರ್ಷಕ್ಕೆ ಹೀಗೆ,ಅಲ್ಲಿಗೆ ಸಾರ್ಥಕ ವಾಯಿತು ನಮ್ಮ ಸಮಾಜ ಹಾಗೂ ಪೋಷಕರ ಬದುಕು ಎಂದು ಮನಸ್ಸಲ್ಲೇ ಅಂದು ಕೊಂಡು,ಒಂದು ಸಣ್ಣ ಮುಗುಳುನಗೆ ಬೀರುತ್ತಾ ಮನೆ ಕಡೆ ಬಂದೆ.
ಇಂತವರೂ ಇದ್ದಾರೆ ನಮ್ಮ ಜಗತ್ತಲ್ಲಿ...
ಉಪಕಾರಕ್ಕೆ ಒಂದು ಧನ್ಯವಾದವನ್ನೂ ಹೇಳದೆ,ನೀನೇನು ನನಗೆ ಕೋಟಿ ಕೊಟ್ಟಿದ್ದೀಯ ನನ್ನ ಜಂಗಮವಾಣಿಯನ್ನು ನನಗೆ ಕೊಟ್ಟಿದ್ದೀಯ ಅದರ್ಲ್ಲೇನು ದೊಡ್ಡ ಸಾಧನೆ,ಅನ್ನೋ ಹಾಗೆ ಅಂದು ಕೊಂಡು ಹೋಗೋದು..
ಅದಕ್ಕೆ ದೊಡ್ಡೋರು ಹೇಳೋದು ಸುಳ್ಳಲ್ಲ ಅನ್ನೋದು..
"ಊರು ಪಾರುಪತ್ತಿಗೆ ಕಟ್ಟಿ ಕೊಂಡು,ನಮ್ಮ ಖಾಜಿ ಸಾಬ್ರು ಬಡವಾಗಿದ್ರಂತೆ"..



ಬುಧವಾರ, ಸೆಪ್ಟೆಂಬರ್ 2, 2015

ಮೊಬೈಲ್ ಕಥೆ...

ಸುಮಾರು ಒಂದು ವರ್ಷದ ಹಿಂದೆ ನೆಡೆದ ವಿಷಯ:-
ಬೆಳಿಗ್ಗೆ ನಾನು ಯಾವುದೋ ಕೆಲಸದ ನಿಮಿತ್ತ ಅರಸೀಕೆರೆ ಹೊರಡುವವನಿದ್ದೆ,ಮೆಜೆಸ್ಟಿಕ್ ಹೋಗಲು ಬಸ್ ಲೇಟ್ ಆಗುತ್ತದೆ ಎಂದು ನನ್ನ ಏರಿಯಾದಲ್ಲಿ ಆಟೋಗಾಗಿ ಕಾಯುತ್ತಾ ನಿಂತಿದ್ದೆ,
ಆಗ ಒಬ್ಬಳು ಕಾಲೇಜ್ ಹುಡುಗಿಯಂತೆ ಕಾಣುವ ಸುಮಾರು ೨೦ ರಿಂದ ೨೨ ವಯಸ್ಸಿನ ಹುಡುಗಿ,ಆಟೋದಲ್ಲಿ ಬಂದು ಇಳಿದಳು,ನಾನು ಅದೇ ಆಟೋದವನಿಗೆ(ಯುವತಿ ಆಟೋ ಮೀಟರ್ ಚಾರ್ಜ್ ಕೊಡುತ್ತಿರುವಾಗಲೆ),
"ಮೆಜೆಸ್ಟಿಕ್ ಬರ್ತೀರಾ???" ಅಂದೆ
"ಆತ ಬನ್ನಿ ಸಾರ್ ಎಂದ,"ಅವಳು ತನ್ನ ಚಿಲ್ಲರೆ ತಗೊಂಡು ಹೊರಟಳು.
ನಾನು ಆಟೋ ಹತ್ತಿ ಸ್ವಲ್ಪ ದೂರಹೋದ ನಂತರ, ಪಕ್ಕಕ್ಕೆ ನೋಡಿದರೆ ಸೀಟಿನಲ್ಲಿ ಒಂದು ಸ್ಯಾಂಮ್ಸಂಗ್ ಗ್ರಾಂಡ್ ೨ ಸ್ಮಾರ್ಟ್ ಪೋನ್,ಅದನ್ನು ಎತ್ತಿ ಕೊಂಡು ಆಟೋದವನನ್ನ ಕೇಳಿದೆ,
"ಯಾರದ್ದೋ ಪೋನ್ ಬಿದ್ದಿದೆ ನೋಡಿ!!!" ಅಂತ,ಆತ
"ಯಾರೋ ಗೊತ್ತಿಲ್ಲಾ ಸಾರ್,ಮೋಸ್ಟ್ಲಿ ಹಿಂದೆ ಇಳಿದ್ರಲ್ಲ ಆ ವಮ್ಮಂದೆ ಇರಬೇಕು ಸಾ..ನಮ್ಗ್ಯಾಕೆ ಊರ ಉಸಾಬರಿ,ಅದೆಲ್ಲ ಡೇಂಜರ್ ಅಲ್ವಾ ಸಾ.."ಅಂತ ಉಡಾಪೆಯ ಉತ್ತರ ಕೊಟ್ಟ..
ನಾನು ಆ ಮೊಬೈಲ್ ತೆಗೆದು ಬ್ಯಾಗಲ್ಲಿ ಹಾಕಿ ಕೊಂಡೆ,ಪದೇ ಪದೇ ವಾಟ್ಸ್ ಆಪ್ ಮೆಸೇಜ್ ಬರುತ್ತಲೇ ಇತ್ತು ಪೋನ್ ಬೇರೆ ಲಾಕ್ ಆಗಿರಲಿಲ್ಲ,ಕೊನೆಗೆ ನಾನು ಪೋನ್ ಬ್ಯಾಗಿಂದ ತೆಗೆದು ಪೋನ್ ಬುಕ್ಕಲ್ಲಿ ಹುಡುಕಿದಾಗ ಮಾಮ್ ಅಂತ ಒಂದು ನಂಬರ್ ಸಿಕ್ತು,ಅದಕ್ಕೆ ಕರೆ ಮಾಡಿದೆ ಯಾರೋ ಒಬ್ಬರು ವಯಸ್ಸಾದವರು ಕರೆ ಸ್ವೀಕರಿಸಿ ಮಾತನಾಡಿದರು,ಅವರಿಗೆ ನಾನು ಕನ್ನಡದಲ್ಲಿ ಹೇಳುತ್ತಿರುವುದು ಅರ್ಥವಾಗುತ್ತಿರಲಿಲ್ಲ,ಕೊನೆಗೆ ನಾನು ಇಂಗ್ಳೀಶ್ ನಲ್ಲಿ ಹೇಳಿದಾಗ ಅವರು ಸ್ವಲ್ಪ ಸ್ವಲ್ಪ ಮಂಗ್ಳೀಶ್ ನಲ್ಲಿ(ಮಾತನಾಡುವ ದಾಟಿಯಲ್ಲಿ ಗೊತ್ತಾಯಿತು ಮಲೆಯಾಳಿ ಮಹಿಳೆ ಅಂತ)ಉತ್ತರಿಸಿದರು,ಕೊನೆಗೆ ಅವರಿಗೆ ಅರ್ಥವಾಗಿ ಅದು "ನಮ್ಮ ಹುಡುಗಿಯದ್ದೇ ಪೋನ್ ಅವಳಿಗೆ ಕರೆ ಮಾಡಲು ಹೇಳುತ್ತೇನೆ!!!",
ಅಂತ ಕರೆ ಕಟ್ ಮಾಡಿದರು,
ಸ್ವಲ್ಪ ಸಮಯದ ನಂತರ ಆ ಯುವತಿ ಕರೆ ಮಾಡಿದಾಗ ವಿಷಯ ಹೇಳಿದೆ,ಆಕೆ ನನಗೆ ಯಾವಾಗ ಪೋನ್ ಸಿಗುತ್ತೆ ಅಂದರು??.
"ನಾನು ಇಂದು ನಿಮಗೆ ಪೋನ್ ತಲುಪಿಸಲು ಸಾದ್ಯವಿಲ್ಲ,ನಾಳೆ ಬೆಳಿಗ್ಗೆ ತಲುಪಿಸುತ್ತೇನೆ"ಎಂದೆ,
ಅದಕ್ಕೆ ಆ ಯುವತಿ ಒಪ್ಪಿಕೊಂಡರು,
ಮರು ದಿನ ಬೆಳಿಗ್ಗೆ ನಾನು ಬಸ್ ಸ್ಟಾಪ್ ಹತ್ತಿರ ಹೋಗಿ ಮೊಬೈಲ್ ಕೊಡಲು ಕಾಯುತ್ತಾ ಇದ್ದೆ,
ಆ ಯುವತಿಯ ತಂದೆ,ತಾಯಿ ಒಂದು ಆಕ್ಟೀವಾ ಗಾಡಿಯಲ್ಲಿ ಬಂದು ನನಗೆ ಕರೆ ಮಾಡಿದರು,ನಾನು ಅವರನ್ನು ಗುರುತಿಸಿ ಹತ್ತಿರ ಹೋಗಿ, ಮೊಬೈಲ್ ಕೊಟ್ಟೆ ಹೊರಡಲು ಸಿದ್ದವಾದೆ,ಅವರು ತನ್ನ ಕೈಯಲ್ಲಿದ್ದ ಒಂದು ದೊಡ್ಡ ಬಾಕ್ಸ್ ನನ್ನ ಕೈಗೆ ಕೊಡುತ್ತಾ......
"ಸಾರ್ ನಿಮ್ಮಂತವರು ಇಂತಹ ನಗರದಲ್ಲಿ ಇನ್ನೂ ಇದ್ದಾರಲ್ಲಾ ಸಾರ್ ಬಹಳ..!!!
ನನಗೆ ನಿಜವಾಗಿಯೂ ತುಂಬಾ ಸಂತೋಷವಾಯಿತು" ಅಂದ್ರು ,
"ನಾನು ಇದೇನು ಬಾಕ್ಸ್ ಅಂದೆ!!!????"
"ನನಗೆ ಈ ಪೋನ್ ಸಿಗದಿದ್ದರೂ ಏನು ಸಮಸ್ಯೆ ಆಗುತ್ತಿರಲಿಲ್ಲ ಇನ್ನೊಂದು ನನ್ನ ಮಗಳಿಗೆ ಕೊಡಿಸ್ತಾ ಇದ್ದೆ,ಆದರೆ ನಿಮ್ಮ ಒಳ್ಳೆಯತನಕ್ಕೆ ಖುಷಿಯಾಗಿ ಏನು ಕೊಡಬೇಕೆಂದು ತೋಚದೆ ಸ್ವೀಟ್ ಬಾಕ್ಸ್ ತಂದಿದ್ದೇನೆ ದಯಮಾಡಿ ತಗೊಳ್ಳಿ"ಅಂದ್ರು..
ನಾನು ಸುಮ್ಮನೆ ನಕ್ಕು,"ಅಯ್ಯೋ ಇದೆಲ್ಲ ಬೇಡ ಸಾರ್ ಅಂದೆ" ಅವರು ಒತ್ತಾಯ ಮಾಡಿ ತಗೊಳ್ಳಲೇ ಬೇಕು ಅಂದ್ರು,..
ನನಗೆ ಅವರ ಮುಖದಲ್ಲಿ ಇದ್ದ ಧನ್ಯತೆ ನೋಡಿ ಖುಷಿ ಹಾಗೂ ಆಶ್ಚರ್ಯ &,ಬೇಜಾರೂ ಆಯ್ತು,
ಖುಷಿ ಯಾಕೆಂದರೆ ಅವರ ನುಡಿ ಕೇಳಿ..
ಆಶ್ಚರ್ಯ ಯಾಕೆಂದರೆ,
ಸಹಾಯ ಮಾಡಿದವರನ್ನು ,ಆತ್ಮೀಯರಾದರೂ ತಿರುಗಿ ನೋಡದೆ,ಒಂದು ಕ್ಶಣಕ್ಕೂ ಸ್ಮರಿಸದೇ,
ಅವನ್ಯಾವನು ಅವನಿಗ್ಯಾಕೆ ನಾನು ಥ್ಯಾಂಕ್ಸ್ ಹೇಳಬೇಕು,
ನನಗೆ ಇನ್ನೇನು ಮಾಡಿದ್ದಾನೆ,
ಅವನಿಗ್ಯಾಕೆ ಕಾಲ್ ಮಾಡಿ ಹೇಳಬೇಕು,
ಅಂತ,
ಅಂದು ಕೊಳ್ಳುವ #ದುರಂಹಕಾರಿ ಹಾಗೂ #ಸ್ವಾರ್ಥಿ ಜನರ ಮದ್ಯೆ,
ಇವರು,ನಾನು ಯಾರು ಎಂದು ಗೊತ್ತಿಲ್ಲದೆ ಇದ್ದರೂ,
ಕೇವಲ ಕಳೆದು ಕೊಂಡ ಮೊಬೈಲ್ ವಾಪಾಸ್ ಕೊಟ್ಟಿದ್ದಕ್ಕೆ,ಇಸ್ಟು ಕೃತಜ್ನತಾ ಭಾವ ನೋಡಿ ಆಸ್ಚರ್ಯ ವಾಯಿತು"!!!!
#ಬೇಜಾರು ಯಾಕೆ ಆಯಿತು ಎಂದರೆ..!!!
ಅಂದರೆ ಬೆಂಗಳೂರೆಂಬ ಮಹಾನಗರದಲ್ಲಿ ಒಳ್ಳೆಯತನ ಎಂಬುದು ಅಸ್ಟೊಂದು ಕಡಿಮೆ ಆಗಿದೆಯೇ???
ಹಾಗಾದರೆ ಒಳ್ಳೆಯತನವನ್ನು ಕಂಡರೆ ಮರುಭೂಮಿಯಲ್ಲಿ #ಓಯಸಿಸ್ ಕಂಡಹಾಗೆ ಆಗುತ್ತದೆಯೇ???😨
ಹಾಗಾದರೆ ಬೇರೆಯವರಿಗೆ ಮೋಸ ವಂಚನೆ ಮಾಡಿ ಬದುಕುವುದೇ ಜೀವನವೇ???😨
ಜನ ಅಸ್ಟೊಂದು #ಪ್ರಾಕ್ಟಿಕಲ್ ಆಗಿ ಹೋಗಿದ್ದಾರಾ???
ನಾನು ನನ್ನ ಮಕ್ಕಳು,ನನ್ನ ಜೀವನ ಬೇರೆಯವರು ಏನಾದ್ರು ಹಾಳಾಗಿ ಹೋಗ್ಲಿ,ನನಗೆ ಸಹಾಯ ಬೇಕಾದಾಗ ತಗೊಳ್ಳೋದು,ಬೇಡವಾದಾಗ ತಿರುಗಿ ನೋಡದೆ ಹೋಗೋದು,ಇಸ್ಟೊಂದು ಸ್ವಾರ್ಥ ಜೀವನನಾ ಅಬ್ಬಾ...😟
ನನ್ನಪ್ಪ ಈಗ್ಲೂ ಹೇಳ್ತಾರೆ,#ಪರರ_ಸ್ವತ್ತು_ಅಂದ್ರೆ,#ಪಾಶಾಣ_ಇದ್ದಂಗೆ ಅಂತ..ಅದಕ್ಕೆ ನನಗೆ ಪರರ ಸ್ವತ್ತು ಬೇಡ..ವಾಪಾಸ್ ಕೊಟ್ಟೆ..

Camara zamana

ಮೊನ್ನೆ ನಾಯಂಡಳ್ಳಿಯಿಂದ ಬನಶಂಕರಿ ರಿಂಗ್ ರಸ್ಥೆಯಲ್ಲಿ ಜನತಾಬಜಾರ್ ಸಿಗ್ನಲ್ಲಿನಲ್ಲಿ,ಒಂದು ಕಾಂಕ್ರೀಟ್ ಕಂಟೈನರ್ಗೆ ಒಬ್ಬ ಬೈಕ್ ಸವಾರ ರಾಂಗ್ ಸೈಡಲ್ಲಿ ಬಂದು ಹಿಂದಿನ ಚಕ್ರಕ್ಕೆ ಸಿಲುಕಿ ಗಂಭೀರ ಸ್ಥಿತಿಯಲ್ಲಿ ಇದ್ದಾಗಲೂ,ಇದೇ ತರಹ ಜನರು ತಮ್ಮ ಮೊಬೈಲ್ನಿಂದ ಪೋಟೋ ತೆಗೆಯಲು ಪ್ರಯತ್ನಿಸುತ್ತಿದ್ದರು,ಟ್ರಾಪಿಕ್ ಸಂಪೂರ್ಣ ಜಾಮ್ ಆಗಿ ಪೋಲೀಸರು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದರೂ,ಪೋಟೋ ತೆಗೆಯುತ್ತಿದ್ದವರು ಯಾವುದರ ಪರಿವೇ ಇಲ್ಲದೆ,(ಕೆಲವು ಸಾರ್ವಜನಿಕರ ಸಹಕರಿಸುತ್ತಿದ್ದದ್ದು ಬಿಟ್ಟರೆ)ಅವರ ಕೆಲಸ ಮುಂದುವರೆಸುತ್ತಿದ್ದರು,ಎಂತಹಾ ದುರಂತ ಅನ್ನಿಸಿ ಅಸಾಹಯಕನಾಗಿ,ನಾನು ಬಾರವಾದ ಹೆಜ್ಜೆ ಹಾಕುತ್ತಾ ಮನೆಗೆ ಬಂದೆ..
ನಿಜಕ್ಕೂ ಇದು ಸಮಾಜದ ಒಂದು ದುರಂತ..
ಈ ಸೆಲ್ಪಿ ಹಾಗೂ ಯಾವ ಸನ್ನಿವೇಶವನ್ನೂ ನೋಡದೆ ಪೋಟೋ ತೆಗೆಯುವ ಸಾಂಕ್ರಾಮಿಕ ಕಾಯಿಲೆಯಿಂದ ನಮ್ಮ ಕೆಲವು ಜನರು ಯಾವಾಗ ಹೊರಗೆ ಬರುತ್ತಾರೋ ದೇವರೇ ಬಲ್ಲ

ಮಂಗಳವಾರ, ಮೇ 19, 2015

ಎಲ್ಲೋ ಸಿಕ್ಕ ಒಳ್ಳೆಯ ಮಾಹಿತಿ.

ಎಕಂ,ದಹಂ,ಶತಂ,ಸಹಸ್ರ,ದಶಸಹಸ್ರ,ಲಕ್ಷ,ದಶಲಕ್ಷ,ಕೋಟಿ,ದಶಕೋಟಿ . .  . . . . . .  . ಮುಂದೆ?

ನೆನಪಿದೆಯೇ ಸ್ನೇಹಿತರೆ
ಕನ್ನಡ ಶಾಲೆಯಲ್ಲಿ ಕಲಿತ ಅಂಕಿಅಂಶಗಳ ವಿವರ

ಅಷ್ಟಕ್ಕೂ ಇದರ ಅಂತಿಮ ಹಂತ ಎಲ್ಲಿಯವರೆಗೆ?

ನೋಡಿ ತಿಳಿಯಿರಿ

ಕನ್ನಡದಲ್ಲಿ ಅಂಕಿ ಅಂಶಗಳ ಪ್ರಕಾರ ಹೀಗಿದೆ;-

ಏಕಂ (ಒಂದು),
ದಶಂ (ಹತ್ತು),
ಶತಂ (ನೂರು),
ಸಹಸ್ರ (ಸಾವಿರ),
ದಶಸಹಸ್ರ (ಹತ್ತು ಸಾವಿರ),
ಲಕ್ಷ,
ದಶಲಕ್ಷ (ಹತ್ತು ಲಕ್ಷ),
ಕೋಟಿ,
ದಶಕೋಟಿ,
ಅಬ್ಜ (ನೂರು ಕೋಟಿ),
ದಶ ಅಬ್ಜ,
ಖರ್ವ,
ದಶಖರ್ವ,
ಪದ್ಮ,
ದಶಪದ್ಮ,
ನೀಲ,
ದಶನೀಲ,
ಶಂಖ,
ದಶಶಂಖ,
ಕ್ಷಿತಿ,
ದಶಕ್ಷಿತಿ,
ಕ್ಷೋಭ,
ದಶಕ್ಷೋಭ,
ಋದ್ಧಿ,
ದಶಋದ್ಧಿ,
ಸಿದ್ಧಿ,
ದಶಸಿದ್ಧಿ,
ನಿಧಿ,
ದಶನಿಧಿ,
ಕ್ಷೋಣಿ,
ದಶಕ್ಷೋಣಿ.
ಕಲ್ಪ,
ದಶಕಲ್ಪ,
ತ್ರಾಹಿ,
ದಶತ್ರಾಹಿ,
ಬ್ರಹಮಾಂಡ,
ದಶಬ್ರಹಮಾಂಡ,
ರುದ್ರ,
ದಶರುದ್ರ,
ತಾಲ,
ದಶತಾಲ,
ಭಾರ,
ದಶಭಾರ,
ಬುರುಜ,
ದಶಬುರುಜ,
ಘಂಟಾ,
ದಶಘಂಟಾ,
ಮೀಲ,
ದಶಮೀಲ,
ಪಚೂರ,
ದಶಪಚೂರ,
ಲಯ,
ದಶಲಯ,
ಫಾರ,
ದಶಫಾರ,
ಅಷಾರ,
ದಶಅಷಾರ,
ವಟ,
ದಶವಟ,
ಗಿರಿ,
ದಶಗಿರಿ,
ಮನ,
ದಶಮನ,
ವವ,
ದಶವವ,
ಶಂಕು,
ದಶಶಂಕು,
ಬಾಪ,
ದಶಬಾಪ,
ಬಲ,
ದಶಬಲ,
ಝಾರ,
ದಶಝಾರ,
ಭೀರ,
ದಶಭೀರ,
ವಜ್ರ,
ದಶವಜ್ರ,
ಲೋಟ,
ದಶಲೋಟ,
ನಜೆ,
ದಶನಜೆ,
ಪಟ,
ದಶಪಟ,
ತಮೆ,
ದಶತಮೆ,
ಡಂಭ,
ದಶಡಂಭ,
ಕೈಕ,
ದಶಕೈಕ,
ಅಮಿತ,
ದಶಅಮಿತ,
ಗೋಲ,
ದಶಗೋಲ,
ಪರಿಮಿತ,
ದಶಪರಿಮಿತ,
ಅನಂತ,
ದಶಅನಂತ.
ದಶಅನಂತಕ್ಕೆ ಒಂದರ ಮುಂದೆ ೯೬(96) ಶೂನ್ಯವನ್ನ ಸೇರಿಸಬೇಕಾಗುತ್ತೆ.{೧೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦} =ದಶಅನಂತ.

ಮಿತ್ರರೇ,.
ಪ್ರಾಚೀನ ಭಾರತದ ಮಹಿಮೆ ನಮಗೆಲ್ಲರಿಗೂ ತಿಳಿಯದಷ್ಟು ಅಪಾರವಾಗಿದೆ.

Mind Your own business

ನನ್ನ ಸ್ನೇಹಿತ ಒಬ್ಬ ಹಾಸ್ಯ ಮಾಡೋಕೆ ಬಂದ "ಅಯ್ಯೋ ಎನೋ ನೀನು ಇಸ್ಟು ದಪ್ಪ ಆನೆ ಆಗಿದಿಯ ಏನೋ ಕತೆ ನಿಂದು ಅಂದ".#ಅದಕ್ಕೆ_ನಾನು_ಅಂದೆ,#ನಾನು_ಏನು_ನಿನ್ನ_ಎದೆ_ಮೇಲೆ_ಓಡಾಡ್ತಾ_ಇದೀನ ಅಥವಾ #ಊಟಕ್ಕೆ_ಹಣ_ಇಲ್ಲಾ_ಅಂತ_ನಿನ್ನತ್ರ_ಸಾಲ_ಕೇಳಿದ್ನಾ_ಯಾಕೆ_ಇಸ್ಟು_ಟೆನ್ಸಂನ್_ಆಗ್ತೀಯ_ಅಂದೆ..
#ಪುಂಗಿ_ಬಂದ್..󾌱󾌱󾌱󾌱󾌱
ನಮಗೆ ಇಸ್ಟ ಬಂದಾಗ ದಪ್ಪ ಆಗೋದು..ನಮಗೆ ಇಸ್ಟ ಬಂದಾಗ ತೆಳ್ಳಗಾಗೋಕೆ ನಾವೇನು ಬಲೂನ,...
ಕೆಲವರು ದಪ್ಪಗಿರುವವರನ್ನು ಅಸ್ಪೃಶ್ಯರಂತೆ ನೋಡುವುದು ಮತ್ತೆ ಹಾಸ್ಯ ಮಾಡೋದು ಮತ್ತೆ ಉಚಿತ ಸಲಹೆಗಳು ಕೊಡೋರು ಹೆಚ್ಚು,(ಅಂತವರೇನು ತಿಕ್ ಎನ್ದ್ ತಿನ್ ಆಗಿರಲ್ಲಾ ಬಿಡಿ)
ಯಾರೂ ಆಗ್ಬೇಕು ಅಂತ ದಪ್ಪ ಅಥವಾ ತೆಳ್ಳಗೆ ಆಗ್ತಾರ..
ಕುಳ್ಳಕಿರುವವನು ನಾನು ಕುಳ್ಳಗೆ ಇರ್ಬೇಕು ಅಂತ ಅಪ್ಲಿಕೇಶನು ಹಾಕಂಡು ಬಂದಿರ್ತಾನ..!!!!.
ಹಾಗೇ ದಪ್ಪಗಿರೋರು,ಎತ್ತರ ಇರೋರು ಹಾಗೆ ಅಪ್ಳಿಕೇಶನ್ ಹಾಕ್ಕಂಡು ಬಂದಿರ್ತಾರ!!!!.
ಕೆಲವರಿಗೆ ಬೇರೆಯವರನ್ನು ಅಪಹಾಸ್ಯ ಮಾಡೋದು ಅಂದ್ರೆ ವಿಕೃತ ಸಂತೋಷ,
#ಅದೇ_ಅವರ_ನ್ಯೂನತೆ_ಬಗ್ಗೆ_ಹಾಸ್ಯ_ಮಾಡಿದರೆ_ಅವರಿಗೆ_ದೇಹದ_ಎಲ್ಲಾ_ಬಾಗದಲ್ಲಿ_ಉರಿಕಿತ್ತುಕೊಳ್ಳುತ್ತೆ..
ಅಂತವರಿಗೆ ನನ್ನ ಸಲಹೆ #ಮೈಂಡ್_ಯುವರ್_ಓನ್_ಬುಸಿನೆಸ್..󾌮󾌮󾌮󾌮󾌠󾌠󾌠󾌠

೨೫ ವರ್ಷಕ್ಕೆ ಒಮ್ಮೆ ನೆಡೆಯುವ,ನೂರೊಂದೆಡೆ ಉತ್ಸವ

ಮೊನ್ನೆ(5_04_2015) ನನ್ನ ಸ್ನೇಹಿತರ (Sandeep) ಊರಾದ ಚಿತ್ರದುರ್ಗದ ಹತ್ತಿರದ ತಾಳ್ಯ ಎಂಬ ಊರಲ್ಲಿ"ನೂರೊಂದೆಡೆ ಮಹೋತ್ಸವ" ವಿತ್ತು ಇದು ೨೫ ವರ್ಷಕ್ಕೆ ಒಮ್ಮೆ ನೆಡೆಯುವ ಮಹೋತ್ಸವ ವಂತೆ,ತಾಳ್ಯದ ಗ್ರಾಮಸ್ತರು ಬೇರೆ ಬೇರೆ ಊರಲ್ಲಿರುವ ದೇವಸ್ತಾನದ ಮುಖ್ಯಸ್ತರಲ್ಲಿ ಹೋಗಿ ಈ ಮಹೋತ್ಸವಕ್ಕೆ ಅಹ್ವಾನ ನೀಡಿ ಬರುತ್ತಾರಂತೆ,ಆ ಅಹ್ವಾನಕ್ಕೆ ಅಲ್ಲಿನ ಮುಖ್ಯಸ್ತರು ಹಾಗೂ ಗ್ರಾಮಸ್ತರು ಒಪ್ಪಿಗೆ ಕೊಟ್ಟು,ನೂರೊಂದೆಡೆ ಮಹೋತ್ಸ್ವಕ್ಕೆ ಪಾಲ್ಗೊಳ್ಳಲು ಸಿದ್ದರಾಗುತ್ತಾರಂತೆ,ಹೀಗೆ ಸಿದ್ದರಾಗಿ ಕೆಲವು ದೇವರುಗಳನ್ನು ವಾಹನ ಮೂಲಕ ಕರೆ ತರುತ್ತಾರಂತೆ,ಕೆಲವರು ಬರಿಗಾಲು ನಡಿಗೆಯಲ್ಲಿ ಅವರ ಊರು ಗಳಿಂದಲೇ ಪಲ್ಲಕ್ಕಿಯನ್ನು ಹೊತ್ತು ತರುತ್ತಾರಂತೆ,ಇಲ್ಲಿ ೧೧೦ ಕ್ಕೂ ಹೆಚ್ಚು ಬೇರೆ ಬೇರೆ ಊರಿನ ದೇವರುಗಳನ್ನು ಗ್ರಾಮಸ್ತರು ಉತ್ಸವದೊಂದಿಗೆ ಬೆಳ್ಳಿಯ ಪಲ್ಲಕ್ಕಿಯಲ್ಲಿ(ಹೆಚ್ಚಿನವು)ತಂದಿದ್ದರು,ಬೇರೆ ಊರಿನ ಗ್ರಾಮಸ್ತರು ಪಲ್ಲಕ್ಕಿಯ ಮೆರವಣಿಗೆ ಯೊಂದಿಗೆ ಆಗಮಿಸುವಾಗ ಅವರನ್ನು ತಾಳ್ಯದ ಗ್ರಾಮಸ್ತರು ಊರದೇವರ ಪಲ್ಲಕ್ಕಿಯೊಂದಿಗೆ ಎದುರುಗೊಂಡು ಅವರನ್ನು ಅದ್ದೂರಿಯಾಗಿ,ಡೊಳ್ಳುಕುಣಿತ,ವೀರಗಾಸೆ,ಇನ್ನಿತರೆ ಗ್ರಾಮ್ಯ ಕಲೆಗಳೊಂದಿಗೆ ಸ್ವಾಗತಿಸುತ್ತಾರೆ,ನಂತರ ತಾಳ್ಯದಲ್ಲಿರುವ ಹನುಮಂತರಾಯರ ಗುಡಿಯ ಹತ್ತಿರ ಪೂಜೆ ಸಲ್ಲಿಸಿ ಗುಡಿಯಿಂದ ಅನತಿ ದೂರದಲ್ಲಿ ನಿಗದಿ ಪಡಿಸಿರುವ ಜಾಗದಲ್ಲಿ,ಬೇರೆಯ ಊರಿಂದ ತಂದಿರುವ ದೇವರನ್ನು ಇರಿಸಿ ಪೂಜಿಸುತ್ತಾರೆ ಹಾಗೂ ರಾತ್ರಿ ಇಡೀ ಭಜನೆ ಮಾಡುತ್ತಾ ಬೇರೆ ಬೇರೆ ಊರಿಂದ ಬಂದಿರುವ ಗ್ರಾಮಸ್ತರು ಕಾಲ ಕಳೆಯುತ್ತಾರೆ,ಬೆಳಿಗ್ಗೆ ಎದ್ದು ಎಲ್ಲಾ ನೂರೊಂದೆಡೆಯ ವಿಧಿ ವಿಧಾನದ ಪೂಜೆಯನ್ನು ಪೂರೈಸಿಕೊಂಡು ಮದ್ಯಾನದ ಭೋಜನವನ್ನು ಮುಗಿಸಿಕೊಂಡು ತಮ್ಮ ತಮ್ಮ ಊರಕಡೆಗೆ ಪಲ್ಲಕ್ಕಿಯ ಉತ್ಸವದೊಂದಿಗೆ ಹೊರಡುತ್ತಾರೆ,ಬೇರೆ ಬೇರೆ ಊರುಗಳಿಂದ ಬಂದ ಸಾವಿರಾರು ಭಕ್ತರು ೧೧೦ ಕ್ಕೂ ಹೆಚ್ಚು ದೇವರ ದರ್ಶನ ಪಡೆಯಲು,ರಾತ್ರಿ ಯೆಲ್ಲ ಜಾಗರಣೆ ಇದ್ದು ಎಲ್ಲಾ ದೇವರ ದರ್ಶನ ಪಡೆದರು,ಬಂದವರಿಗೆಲ್ಲ ಮೃಸ್ಟಾನ ಭೋಜನವೂ ಇತ್ತೂ,ರಾತ್ರಿ ಹಗಲೆನ್ನದೆ ಸಮರೋಪಾದಿಯಲ್ಲಿ ಭೋಜನ ತಯಾರಾಗುತ್ತಲೇ ಇತ್ತು,ಎಲ್ಲಿ ನೋಡಿದರೂ ವಿದ್ಯುತ್ ದೀಪಾಲಂಕಾರ ಸ್ವಾಗತ ಕಮಾನು ರಾರಾಜಿಸುತ್ತಿದ್ದವು,ಊರಿನ ಗ್ರಾಮಸ್ತರು ವ್ಯವಸ್ತಿತ ವಾಗಿ ಈ ಕಾರ್ಯಕ್ರಮವನ್ನು ನೆಡೆಸಿದರು,ಇಸ್ಟೊಂದು ಒಗ್ಗಟ್ಟು ಹಾಗೂ ಬಕ್ತಿಯಿಂದ ಈ ಮಹೋತ್ಸವವನ್ನು ಯಾವುದೆ ತೊಂದರೆ ಇಲ್ಲದೆ ಸರಾಗವಾಗಿ ನೆಡಿಸಿದ್ದು ತುಂಬಾ ಖುಷಿ ಕೊಟ್ಟಿತು....ಇದರಲ್ಲಿ ನಾನು ಕೂಡ ಭಾಗವಹಿಸಿದ್ದು ಸಂತೋಷ ಕೊಟ್ಟಿತು..

#ಪ್ರಶ್ನಾತೀತರು

ನಾನು ಹಲವು ದಿನಗಳ ಹಿಂದೆ ಒಮ್ಮೆ channelanalli ಆಂಗ್ಲ ಭಾಷಾ ಶೀರ್ಷಿಕೆಗಳನ್ನು ಕಡಿಮೆ ಕೊಡಿ,ಸಣ್ಣಪುಟ್ಟ ತಪ್ಪುಗಳನ್ನು ಸರಿ ಪಡಿಸಿಕೊಳ್ಳಿ,ಕಂಗ್ಲೀಶ್ ಮಾತುಗಳನ್ನ ಹಾಗೂ ವಿಷಯಗಳನ್ನು ಆದಸ್ಟು ಕನ್ನಡದಲ್ಲೇ ಕೊಡಿ ಎಂದು ಒಬ್ಬ ಬಹಳ ದೊಡ್ಡ ಪತ್ರಕರ್ತರಿಗೆ ಮುಖಪುಸ್ತಕದಲ್ಲಿ ಹೇಳಿದೆ,ಅದಕ್ಕೆ ಅವರು ನಿನ್ನದು ನೀನು ನೋಡಿಕೋ ,ನಿನ್ನ ಮುಖಪುಸ್ತಕದಲ್ಲಿ ಎಲ್ಲವೂ ಆಂಗ್ಲ ಮಯವಾಗಿದೆ,ನೀನೇನು ನನಗೆ ಹಾಗೂ ನನ್ನ ಚಾನಲ್ಗೆ ಹೇಳೋದು ಅಂತ ಆರ್ಭಟಿಸಿ ಬಿಟ್ರು..
ಕೊನೆಗೆ ಅವರು ಆ ಚಾನಲನ್ನು ಬಿಟ್ಟ್ರು ಅದು ಬೇರೆ ಪ್ರಶ್ನೆ....(ಕೆಲವು ಪತ್ರಕರ್ತರು ಪ್ರಶ್ನಾತೀತರು ಅಂತ ನನಗೆ ಗೊತ್ತಿರಲಿಲ್ಲ)..
ಅದಕ್ಕೆ ನಾನೂ ಕೂಡ ಉತ್ತರಿಸಿದೆ..ಸ್ವಾಮಿ ನನ್ನದು ಸ್ವಂತ ಪ್ರೊಪೈಲ್ ಹಾಗೂ ನಾನು ಎಲ್ಲೂ ನನ್ನದು ಕನ್ನಡ ಪ್ರೊಪೈಲ್ ಅಂತ ಹೇಳಿಕೊ0ಡಿಲ್ಲ,ಮತ್ತು ಮಾರ್ಕ್ ಜುಕರ್ ಬರ್ಗ್ ಗೆ ಇನ್ನೂ ಕನ್ನಡದ ಬಗ್ಗೆ ಅರಿವಿಲ್ಲ,ಹಾಗಾಗಿ ಇಂಗ್ಲೀಶ್ ಮಯ,
ನಿಮ್ಮದು ಕನ್ನಡ ಮಾದ್ಯಮ ಅಂತೀರ,ಕನ್ನಡಿಗರೇ ನಮ್ಮ ವೀಕ್ಶಕರು ಅಂತೀರ,ಆದ್ರೆ ನೀವು ಹೆಚ್ಚಿನ ಶೀರ್ಷಿಕೆ ಹಾಗೂ ಮಾತು ಹಾಗೂ ವಿಷಯಗಳನ್ನು ಕಂಗ್ಲೀಶ್ ನಲ್ಲಿ ಪ್ರಸಾರ ಮಾಡ್ತೀರ,ಕನ್ನಡ ಹೋರಾಟ ಗಾರರು ಮಾಡಿದ್ದನ್ನೆಲ್ಲಾ ತಪ್ಪು ಅನ್ನುತ್ತೀರಲ್ಲ,ನಿಮ್ಗೇನಿದೆ ನೈತಿಕತೆ ಹಾಗೆ ಹೇಳಲು,ಆದರೆ ನೀವು ಈ ಸಣ್ಣ ಪುಟ್ಟ ತಪ್ಪುಗಳನ್ನು ಸರಿ ಪಡಿಸಿಕೊಳ್ಳಿ, ಎಂದು ಹೇಳಿದೆ ಅಸ್ಟೆ...
ಮರು ಕ್ಶಣದಲ್ಲೇ ನಾನು...
ಬ್ಲಾಕ್...
#ಕೆಲವು_ಪತ್ರಕರ್ತರು_ಎಲ್ಲರಿಗಿಂತ_ದೊಡ್ಡವರೇ..

#ಮಂಜಪ್ಪ_ಗೌಡ್ರ_ಕಥೆ

#ಮಂಜಪ್ಪ_ಗೌಡ್ರು "ಪ್ಯಾಟಿಗೆ ಹೋಗ್ ಬತ್ತಿನೇ ಒಂಚೂರು ಬ್ಯಾಂಕಲ್ಲಿ ಕೆಲ್ಸ್ ಅದೆ ಅತಾ...ಕೇಳ್ತನೇ!!!????"...ಅಂತ ಹೆಂಡತಿಗೆ ಕೂಗಿ ಹೇಳಿ,ಬಸ್ ಹತ್ತಿಕೊಂಡು ತೀರ್ಥಹಳ್ಳಿಗೆ ಬಂದ್ರು...
ತೀರ್ಥಹಳ್ಳಿನಲ್ಲಿ ಬಸ್ ಇಳಿದು ಬ್ಯಾಂಕ್ ಕಡೆ ನೆಡ್ಕೊಂಡು ಹೋಗ್ತಾ ಇದ್ರು,ಅಸ್ಟೊತ್ತಿಗೆ ದಾರಿಯಲ್ಲಿ ಅಡಿಕೆ ಕೊನೆ ತೆಗೆಯೋ ಶೀನ ಸಿಕ್ಕಿದ...
#ಶೀನ :- ಹ್ವಾಯಿ...ಗೌಡ್ರೆ ಎಂತ ಪ್ಯಾಟೆ ಬದಿ ಸವಾರಿ ಅಂದ...
#ಮಂಜಪ್ಪಗೌಡ್ರು :- ಹೌದು ಮರೆನೆ ಬ್ಯಾಂಕಲ್ಲಿ ಒಂಚೂರು ಕೆಲ್ಸ ಅದೆ..ಅದ್ಕೆ ಸುಮ್ನೆ ಅದಾರು ಆತದಲ ಪ್ಯಾಟಿಗೆ ಬಂದ್ರೆ,ಅಂತ ಹತ್ಗಿಂಡು ಬಂದೆ,ಅಂದ್ರು.
#ಶೀನ:- ಥೋ...ಕಥೆ ಗಂಡಾಂತ್ರ ಆತಲ ಈಗ...
#ಮಂಜಪ್ಪಗೌಡ್ರು :- ಎಂತದ ಮರಾಯ..
#ಶೀನ:- ಗೌಡ್ರೆ..."ಎಂತಾಗ್ಯದೆ ಗೊತ್ತಾ,ಈ ಸಲ #GOOD_FRIDAY,ಶುಕ್ರವಾರ ಬಂದದೆ,#SECOND_SATARDAY,ಶನಿವಾರ ಬಂದದೆ,#SUNDAY,ಬಾನುವಾರ ಬಂದದೆ,ಹಂಗ್ಯಾಗಿ ಸೋಮುವಾರದವರೆಗೆ ಬ್ಯಾಂಕ್ ರಜಾ ಅಂತೆ ಮರ್ರೆ..."
#ಮಂಜಪ್ಪಗೌಡ್ರು :- "ಥೋ...ಸತ್ಗುಂಡು ಸುಮ್ನೆ ಅಲ್ಲಿಂದ ಹತ್ಗುಂಡು ಬಂದ್ನಲ್ಲ ಮರೇನೆ....ದ್ವಾರಕ ಓಟ್ಲಲಲ್ಲಿ ಕಾಫಿ ಕುಡ್ಕಿಂಡ್ ಮನಿಗೆ ಹೋಗದೆ ಉಳಿತು ಮರೆನೆ"....

ಸೋಮವಾರ, ಮೇ 18, 2015

#ಡೇಂಜರ್_ಜನ_ಇದ್ದಾರೆ_ಎಚ್ಚರಿಕೆ

ಬಹಳ ದಿನಗಳ ಹಿಂದೆ ನನ್ನ ಊರಿನವನೆ ಆದ ನನ್ನ ಸ್ನೇಹಿತನ ಬೇಟಿಯಾಯಿತು....:-
ಹೀಗೇ ಊರು,ಹಳೆಯ ನೆನಪು,ಉಭಯ ಕುಶಲೋಪರಿ ಮಾತನಾಡುತ್ತಾ,ಕೊನೆಗೆ ಪೇಸ್ ಬುಕ್ ಕಡೆಗೆ ನಮ್ಮ ಮಾತು ಹೊರಳಿತು...(ನನ್ನ ಸ್ನೇಹಿತ ತುಂಬಾ ಮುಗ್ದ ಹಾಗೂ ಸ್ನೇಹ ಜೀವಿ,ಪರೋಪಕಾರಿ ಪಾಪಣ್ಣ,)..ವಿಷಯವೇನಂದರೆ,ಆತ ಸುಮಾರು ದಿನಗಳ ಕೆಳಗೆ ನಮ್ಮದೇ ಊರಿನ ಹುಡುಗಿಯನ್ನು ಪೇಸ್ಬುಕ್ ಪ್ರೆಂಡ್ ಮಾಡಿಕೊಂಡಿದ್ದಾನೆ,ಆಕೆ ಆತ್ಮೀಯವಾಗಿ ಇವನೊಂದಿಗೆ ಚಾಟ್ ಕೂಡ ಮಾಡುತ್ತಿದ್ದಳಂತೆ,
ಎಸ್ಟಂದರೂ ನಮ್ಮ ಊರಿನವರು ಎಂದರೆ ಅಭಿಮಾನ ನಂಬಿಕೆ ಇದ್ದೇ ಇರುತ್ತೆ ಅಲ್ವಾ...
ಹಾಗೆ ಪೋನ್ ನಂಬರ್ ಕೂಡ ಹಂಚಿ ಕೊಂಡಿದ್ದಾರೆ,ಸ್ವಲ್ಪ ದಿನಗಳ ನಂತರ ಆಕೆ  ನನಗೆ ತುಂಬಾ ಬಡತನ,ಕಾಲೇಜ್ ಪೀಸ್ ಕಟ್ಟಲು ಹಣವಿಲ್ಲದಂತಾಗಿದೆ ಎಂದಿದ್ದಾಳೆ,ಇವನು ನಂಬಿ ಹಣವನ್ನು ಆನ್ ಲೈನ್ ಟ್ರಾನ್ಸರ್ ಮಾಡಿದ್ದಾನೆ.
ಇದು ಹೀಗೆ ಮುಂದುವರೆದು ಹಲವು ಬಾರಿ ಹಲವು ಕಾರಣ ಹೇಳಿ ಆಕೆ ಈತನಿಂದ ಸುಮಾರು 12ಸಾವಿರದಸ್ಟು ಹಣವನ್ನು ತೆಗೆದು ಕೊಂಡಿದ್ದಾಳೆ,ಹಾಗೂ ಆಗಾಗ ಅವಳ ನಂಬರ್ಗೆ ಕರೆನ್ಸಿ ಕೂಡ ಹಾಕಿಸಿಕೊಂಡಿದ್ದಾಳೆ..
ಈತನಿಗೆಒಮ್ಮೆ ಅನುಮಾನ ಬಂದು,"ನಾನು ನಿನ್ನನ್ನು ಒಮ್ಮೆಬೇಟಿಯಾಗ ಬೇಕು ಎಲ್ಲಿದ್ದಿಯಾ ಅಲ್ಲಿಗೇ ಬರುತ್ತೇನೆ"ಎಂದಿದ್ದಾನೆ,ಆದರೆ ಆಕೆ ಹಲವು ಬಾರಿ ಸಬೂಬು ಹೇಳಿ ತಪ್ಪಿಸಿ ಕೊಂಡಿದ್ದಾಳೆ,ಆದರ್ ಇವನು ಸ್ವಲ್ಪ ಗಟ್ಟಿಯಾಗಿ ನನಗೆ ಹಣದ ಅವಶ್ಯವಿದೆ ಹಿಂದಿರುಗಿಸು ಎಂದು ಕೇಳಿದಾಗ,ಆಕೆ ಇವನನ್ನು ಪೇಸ್ಬುಕ್ನಿಂದ ಬ್ಲಾಕ್ ಮಾಡಿದ್ದಾಳೆ,ಹಾಗೂ ಪೋನ್ ನಂಬರ್ ಕೂಡ ಕೂಡಲೆಚೇಂಜ್ ಮಾಡಿ ಕೊಂಡಿದ್ದಾಳೆ...
ಕೊನೆಗೆ ನನ್ನ ಸ್ನೇಹಿತ ಆ12 ಸಾವಿರಕ್ಕೆ 3ನಾಮ ತಿಕ್ಕಿಸಿ ಕೊಂಡು ಸುಮ್ಮನಾಗಿದ್ದಾನೆ.ಯಾರೊಂದಿಗೆ ಹೇಳಲು ಮರ್ಯಾದಿ ಹೋಗುತ್ತೆ ಎಂಬ ಭಯದಿಂದ ಸುಮ್ಮನಿದ್ದಾನೆ...
"ಸ್ನೇಹಿತರೆ ಎಚ್ಚರ ಇಂತಹ ಜನಗಳು ಪೇಸ್ಬುಕ್ನಲ್ಲಿ ಸಾಕಸ್ಟಿದ್ದಾರೆ..ಪ್ರೆಂಡಾಗುವ ಮೊದಲು ಅವ್ರ ಪೂರ್ವಾಪರ ತಿಳಿದು ಅವರ ಸ್ನೇಹ ಹಸ್ತ ಚಾಚಿ..ಸುಮ್ಮನೆ ಮೋಸ ಹೋಗಬೇಡಿ."(ಇಲ್ಲಿ ನನ್ನ ಸ್ನೇಹಿತನ ಹೆಸರನ್ನು ಹಾಗೂ ಆಕೆಯ ಹೆಸರನ್ನು ಹಾಕುವುದು ಸಮಂಜಸವಲ್ಲ ಎಂದು ನನ್ನ ಅನಿಸಿಕೆ).

#ಎಂತೆಂತೋರು_ಈ_ಜಗತ್ತಿನಲ್ಲಿ_ಇರ್ತಾರೆ_ನೋಡಿ :-

#ಎಂತೆಂತೋರು_ಈ_ಜಗತ್ತಿನಲ್ಲಿ_ಇರ್ತಾರೆ_ನೋಡಿ :-
ಸುಮಾರು ೬ ವರ್ಷದ ಹಿಂದೆ ನಾನು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ,ಆಗ ನನ್ನ ಪರಿಚಯಸ್ತರ ಮಗಳೊಬ್ಬಳು ನನ್ನೊಂದಿಗೆ ಆತ್ಮೀಯವಾಗಿ ಇದ್ದಳು,ಅವಳು ತನ್ನ ಪಧವಿಯನ್ನು ಮುಗಿಸಿ ಕೆಲಸ ಹುಡುಕುವದರಲ್ಲಿದ್ದಳು,ಒಮ್ಮೆ ನನಗೆ ಕರೆ ಮಾಡಿ,ಎಲ್ಲಾದರು ಕೆಲಸವಿದ್ದರೆ ನನಗೆ ತಿಳಿಸು ಎಂದಳು,ನಾನು ಅದಕ್ಕೆ ಸಮ್ಮತಿಸಿ,ಅವಳದೇ ವಿಭಾಗದಲ್ಲಿ ಪದವಿ ಪಡೆದು ಒಂದು ಒಳ್ಳೆಯ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ,ನನ್ನ ಆತ್ಮೀಯ ಸ್ನೇಹಿತನಿಗೆ ಈ ವಿಷಯ ತಿಳಿಸಿದೆ ಅವನು ನನ್ನ ನಂಬರ್ ಅವಳಿಗೆ ಕೊಡು ಅಂದ,ನಾನು ನನ್ನ ಸ್ನೇಹಿತನ ಪೊನ್ ನಂಬರ್ ಅವಳಿಗೆ ಕೊಟ್ಟು ಕರೆ ಮಾಡುವಂತೆ ತಿಳಿಸಿದೆ,ಹಾಗೆ ಅವಳು ಒಂದು ಖಾಸಗಿ ಸಂಸ್ಥೆಗೂ ಸೇರಿ ಕೊಂಡಳು(ನನ್ನ ಸ್ನೇಹಿತ ಕೊಡಿಸಿದ್ದಲ್ಲ), ಆ ನಂತರ ನನಗೆ ಆ ವಿಷಯವನ್ನು ತಿಳಿಸುವ ಸೌಜನ್ಯ ಸಹ ತೋರಲಿಲ್ಲ(ಕೆಲಸವಾದ ಮೇಲೆ ಕೆಲವರು ಅಸ್ಟೆ ಬಿಡಿ),ಆ ನಂತರ ಆಕೆಯ ಪೋನ್ ಇಲ್ಲ ಮೇಸೇಜ್ ಕೂಡ ಇಲ್ಲ,ಹಲವು ತಿಂಗಳು ಕಳೆದ ನಂತರ,ನನಗೆ ಒಂದು ಮಾಹಿತಿ ತಿಳಿಯಿತು,
ನನ್ನ ಸ್ನೇಹಿತ ಮತ್ತು ಈಕೆ ಆತ್ಮೀಯರಾಗಿ,ಬೆಂಗಳೂರನ್ನು ರೌನ್ಡ್ ಹೊಡೆಯುತ್ತಿದ್ದಾರೆ ಅಂತ!!!!,
ಅದಕ್ಕೆ ನನ್ಗೆ ಸಂಬಂದ ವಿಲ್ಲದ ವಿಷಯ ಎಂದು ಸುಮ್ಮನಾದೆ,ನನ್ನ ಸ್ನೇಹಿತನೂ ಕೂಡ ಈ ವಿಷಯವನ್ನು ನನ್ನ ಹತ್ತಿರ ಹಂಚಿ ಕೊಳ್ಳಲಿಲ್ಲ!!!!!,
ನನ್ನ ಸ್ನೇಹಿತ ಆ ಹುಡುಗಿಯ ಕುಟುಂಬದ ಬಗ್ಗೆ ಕೆಲವು ಮಾಹಿತ ಕೂಡ ಕೇಳಿದ,ನಾನು ಕ್ಯಾಸುಯಲ್ ಆಗಿ ಕೇಳುತ್ತಿದ್ದಾನೆ ಎಂದು ಅನ್ಯತಾ ಬಾವಿಸದೇ ನನಗೆ ತಿಳಿದಿದ್ದನ್ನು ಹೇಳಿದೆ,
ಆ ನಂತರ ನನಗೆ ತೀಳಿಯದಂತೆ ನನ್ನ ಸಹಾಯವನ್ನು ಪಡೆದೇ ಕೆಲವು ಸ್ಥಳಗಳಲ್ಲಿ ಅವರಿಬ್ಬರು ವಿಹರಿಸಿದ್ದಾರೆ,ಆದರೆ ನನ್ನ ಹತ್ತಿರ ನನ್ನ ಮಾವನ ಮಗಳು ಎಂದು ಸುಳ್ಳು ಹೇಳಿದ್ದಾನೆ!!!!,ನನಗಿದರ ಅರಿವಿರಲಿಲ್ಲ,ಸ್ವಲ್ಪ ದಿನದ ನಂತರ ಆ ಹುಡುಗಿಗೆ ಬೇರೊಬ್ಬನ ಜೊತೆ ಮದುವೆ ನಿಶ್ಚಯವಾಗಿದೆ,ಮದುವೆ ಕೂಡ ಆಗಿದೆ,ಇದಾಗಿ ಸ್ವಲ್ಪ ದಿನದ ನಂತರ ನನ್ನ ಸ್ನೇಹಿತ ಕರೆ ಮಾಡಿ "ಇಸ್ಟು ದಿನ ನಾನು ಸುತ್ತಾಡುತ್ತಿದ್ದಿದ್ದು ನನ್ನ ಮಾವನ ಮಗಳ ಜೊತೆ ಅಲ್ಲ,ನಾನು ಇದೇ ಯುವತಿಯ ಜೊತೆ ಇದ್ದದ್ದು,ನಿನ್ನ ಹತ್ತಿರ ಹೇಳ ಬಾರದು ಹಾಗೂ ನಿನ್ನ ಸ್ನೇಹವನ್ನು ಅವನೊಂದಿಗೆ ಶಾಶ್ವತವಾಗಿ ಕಳೆದು ಕೊಳ್ಳಬೇಕು ಎಂದು ಶರತ್ತು ವಿದಿಸಿ ಆಣೆ ಹಾಕಲು ಆ ಯುವತಿ ಹೇಳಿದ್ದಳು",(ಆದರಿಂದ ನಿನ್ನೊಂದಿಗೆ ಈ ವಿಷಯ ಹಂಚಿಕೊಳ್ಳಲಿಲ್ಲ ಅಂದ),"ಅವನು ನನ್ನ ಚಡ್ಡಿ ದೋಸ್ತ್,ನಾನು ಅವನು ಹಲವು ವರ್ಶದಿಂದ ಸ್ನೇಹಿತರು,ನಿನ್ನ ಪರಿಚಯವಾಗಿದ್ದೇ ಅವನಿಂದ ನಾನು ಅವನನ್ನು ದೂರಮಾಡಲು ಸಾದ್ಯವಿಲ್ಲ" ಎಂದು ನೇರವಾಗಿ ಹೇಳಿದ್ದೆ(ನನ್ನ ಸ್ನೇಹಿತ ನಮ್ಮ ಸ್ನೇಹವನ್ನು ಬಿಟ್ಟು ಕೊಟ್ಟಿಲ್ಲ)ಎಂದು ನನಗೆ ನೆಡೆದ ಘಟನೆ ವಿವರಿಸಿದ...
ನನಗೆ ಇವತ್ತಿಗೂ ಅರ್ಥವಾಗದ ವಿಷಯ,ನಾನು ಉಪಕಾರ ಮಾಡಿದ್ದಕ್ಕೆ ಆಕೆ ನನ್ನ ಸ್ನೇಹಿತನನ್ನು ನನ್ನಿಂದ ದೂರ ಮಾಡಲು ಪ್ರಯತ್ನಿಸಿದಳಾ?
ಈ ಪ್ರಶ್ನೆ ಇಂದಿಗೂ ನಿಘೂಡವಾಗಿದೆ!!!
ನೋಡಿ ಅದಕ್ಕೆ ಅಲ್ವಾ ದೊಡ್ಡವರು ಹೇಳಿದ್ದು "#ಉಪಕಾರ_ಸ್ಮರಣೆಯಲಿ_ಪ್ರಾಣಿಗಳು_ಬಲು_ಮೇಲು_ಕೆಲಜನರು_ಬಲು_ಕೀಳು"
ಅದಿಕ್ಕೆ ಹೇಳೋದು"ಊರು ಪಾರು ಪತ್ತಿಗೆ ಕಟ್ಕೊಂಡು ಖಾಜಿ ಸಾಬ್ರು ಬಡವಾಗಿದ್ರಂತೆ"...ಅಲ್ವಾ...

#ಸುಮಾರು_2_ವರ್ಷಗಳ_ಹಿಂದಿನ_ಘಟನೆ..(BEING HUMAN...)

#ಸುಮಾರು_2_ವರ್ಷಗಳ_ಹಿಂದಿನ_ಘಟನೆ..(BEING HUMAN...)
ನಾನು ಕೆಲಸ ಮುಗಿಸಿ ಮನೆಗೆ ಆಗಸ್ಟೆ ಬಂದಿದ್ದೆ,ಆಗ ನನಗೆ ನನ್ನ ಪಾರ್ ಕಸಿನ್ ಒಬ್ಬಳು ಕಾಲ್ ಮಾಡಿ ಉಬಯ ಕುಶಲೋಪರಿ ವಿಚಾರಿಸಿ ಒಂದಸ್ಟು ಹೊತ್ತು ಹರಟೆ ಹೊಡೆದು ಕರೆ ಕಟ್ ಮಾಡಿದಳು,ಅದಾದ ಕೆಲವೇ ನಿಮಷಕ್ಕೆ ಆಕೆಯೇ ಮತ್ತೊಮ್ಮೆ ಕರೆ ಮಾಡಿದಳು ನಾನು ಸುಮ್ಮನೆ ಮಾಡಿರಬೇಕು ಎಂದು ಮತ್ತೆ ಕರೆ ಸ್ವೀಕರಿಸಿ ಹೇಳು ಎಂದೆ...ಆದರೆ ಆ ಕಡೆಯಿಂದ ವಿಪರೀತ ಗಲಾಟೆ ಮತ್ತು ನನ್ನ ಕಸಿನ್ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು,ಏನಾಯಿತು ಎಂದು ಕೇಳಿದರೆ ಹೇಳುತ್ತಿಲ್ಲ..ನನಗೆ ಗಾಬರಿಯಾಯಿತು ಕೊನೆಗೆ ನೀನು ಆದಸ್ಟು ಬೇಗ ಬಾ ಇಲ್ಲಿ ಒಂದು ಆಕ್ಸಿಡೆಂಟ್ ಆಗಿದೆ,ರಿಂಗ್ ರೋಡ್ ಜಾಗದ ಹತ್ತಿರ ಒಂದು ಆಸ್ಪತ್ರೆ ಇದೆ ಅಲ್ಲಿಗೆ ಬಾ ಎಂದು ಅಳುತ್ತಲೇ ಹೇಳಿದಳು,,..ನಾನು ಗಡಿಬಿಡಿಯಲ್ಲಿ ಹೊರಟು ಆಸ್ಪತ್ರೆಗೆ ಹೋದೆ...ಇವಳು ತನ್ನ ಕಂಪನಿಯ ಕ್ಯಾಭ್ನಲ್ಲಿ ಕೂತು ಬಿಕ್ಕಿ ಬಿಕ್ಕಿ ಅಳುತ್ತಲೇ ಇದ್ದಳು,ಮುಂದಿನ ಸೀಟ್ನಲ್ಲಿ ಯಾರೋ ಒಬ್ಬ ತನ್ನ ಕಾಲು ಹಿಡಿದು ಕೊಂಡು ಕೂತಿದ್ದ..ಕೊನೆಗೆ ಆತನನ್ನು ಡ್ರೈವರ್ ಮತ್ತು ಇನ್ನುಳಿದ ಸಾರ್ವಜನಿಕರ ಸಹಾಯದಿಂದ ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ದೆವು...ನಾನು ಮತ್ತೆ ನನ್ನ ಕಸಿನ್ಗೆ ಸಮಾದಾನ ಮಾಡಿ ಏನು ವಿಷಯ ಎಂದು ಕೇಳಿದಾಗ,..ಇವಳು ತನ್ನ ಕ್ಯಾಬ್ನಿಂದ ಇಳಿಯುತ್ತಿರುವಾಗ ಈ ಗಾಯಗೊಂಡ ಮನುಷ್ಯ ತನ್ನ ದ್ವಿಚಕ್ರವಾಹನವನ್ನು ವೇಗವಾಗಿ ಪುಟ್ ಪಾತ್ನಲ್ಲಿ ರಾಂಗ್ ಸೈಡ್ನಲ್ಲಿ ಬಂದು ಕಾರಿನ ಡೋರಿಗೆ ಹೊಡಿದಿದ್ದಾನೆ,ನನ್ನ ಕಸಿನ್ ಇವನು ವೇಗವಾಗಿ ಬರುವುದು ನೋಡಿ ಇಳಿಯುತ್ತಿರುವವಳು ತಕ್ಶಣ ಒಳಗೆ ಕೂತು ಡೋರ್ ಎಳೆದು ಕೋಳ್ಳಲು ಪ್ರಯ್ನತ್ನಿಸಿದ್ದಾಳೆ ಆದರೂ ಅಸ್ಟರೊಳಗೆ ಆತ ಬಂದು ಹೊಡೆದು ಬಿದ್ದಿದ್ದಾನೆ...ಅಲ್ಲಿದ್ದವರು ಹಾಗೂ ಈ ಗಾಯಾಳು ಒಟ್ಟಾಗಿ ಭಾಯಿಗೆ ಬಂದಂತೆ ಅವಾಚ್ಯ ಶಬ್ದದಿಂದ ನನ್ನ ಕಸಿನ್ಗೆ ಬೈದು ಹೆದರಿಸಿದ್ದಾರೆ,,...ಅವಳ ಜೊತೆ ಇದ್ದ ಅವಳ ಕಂಪನಿಯ ಉದ್ಯೋಗಿ,ಹಾಗು ಕ್ಯಾಬ್ ಡ್ರೈವರ್ ಹಾಗೂ ಕಂಪನಿ ಸೆಕ್ಯುರಿಟಿ ಯಾರೂ ಕೂಡ ಇವಳ ಸಪೊರ್ಟಿಗೆ ಬರಲಿಲ್ಲವಂತೆ..ಇವಳು ಹೆದರಿ ನನಗೆ ಕಾಲ್ ಮಾಡಿದ್ದಾಳೆ..ಕೊನೆಗೆ ನಾನು ಆತನಿಗೆ ಮಾನವೀಯತೆ ದೃಸ್ಟಿಯಿಂದ ಪ್ರಥಮ ಚಿಕಿತ್ಸೆ ಕೊಡಿಸಿದೆ...ಅಸ್ಟರಲ್ಲಿ ದಾರಿಯಲ್ಲಿ ಹೋಗುತ್ತಿದ್ದ ನನ್ನ ಸ್ನೇಹಿತರೂ,ಊರಿನವರು ಹಾಗೂ ಚಿತ್ರನಟರೊಬ್ಬರು ಅವರ ಸ್ನೇಹತರೊಡನೆ ಹೋಗುತ್ತಿದ್ದಾಗ ಅಕಸ್ಮಾತಾಗಿ ಏನು ನೆಡೆಯುತ್ತಿದೆ ಎಂದು ನೋಡಲು ಬಂದು ನನ್ನನ್ನು ನೋಡಿ ಏನಾಯಿತು ಎಂದರು,ಘಟನೆ ವಿವರಿಸಿದೆ,ಆಗ ಅವರು ನಾನು ನಿಮ್ಮ ಜೊತೆಯೇ ಇರುತ್ತೇನೆ ಎಂದರು(ಎಸ್ಟಂದರೂ ಊರಿನವರು ನಮ್ಮವರು ನಮ್ಮನ್ನು ಬಿಟ್ಟು ಕೊಡುತ್ತಾರೆಯೇ)..ಕೊನೆಗೆ ಈ ಅಸ್ಪತ್ರೆಯಲ್ಲಿ ಸ್ಕಾನಿಂಗ್ ಸೌಲಭ್ಯವಿಲ್ಲ ಮುಂದಿನ ಆಸ್ಪತ್ರೆಗೆ ಹೋಗಿ ಎಂದು ಅಲ್ಲಿನ ವೈದ್ಯರು ಹೇಳಿದರು..ಇಲ್ಲಿನ ಆಸ್ಪತ್ರೆಯ ಕರ್ಚನ್ನು ನಾನೇ ಭರಿಸಿ,ಇನ್ನೊಂದು ಆಸ್ಪತ್ರೆಗೆ ಈ ಗಾಯಳುವನ್ನು ಕರೆದು ಕೊಂಡು ಹೋದೆವು..ಆ ಗಾಯಳುವೋ ಯಾವ ಎಮ್ಮೆ ಹಾಲು ಕುಡಿದು ಬೆಳೆದವನೋ ಆ ದೇವರೇ ಬಲ್ಲ...ತನ್ನ ಮನೆಯವರಿಗೆ ಕರೆ ಮಾಡಲು ೧ಘಂಟೆ ಸಮಯ ತಗೊಂಡ...ಕೊನೆಗೆ ದೊಡ್ಡ ಆಸ್ಪತ್ರೆಯಲ್ಲಿ ಸ್ಕಾನಿಂಗ್ ಎಲ್ಲಾ ಮಾಡಿಸಿ,ಸ್ವಲ್ಪ ಹೈರ್ ಲೈನ್ ಕ್ರಾಕ್ ಇದ್ದಂತೆ ಕಾಣುತ್ತೆ ಬೇರೆ ಏನು ತೊಂದರೆ ಇಲ್ಲ ಅಂದ್ರು ಡಾಕ್ಟ್ರು ಆದರೆ ಈತ ಅಸ್ಟರೊಳಗೆ ತಮಿಳಿನಲ್ಲಿ ಇನ್ಯಾವುದೋ ಭಾಷೆಯಲ್ಲಿ ಯಾರ್ಯಾರಿಗೋ ಕಾಲ್ ಮಾಡುತ್ತಾ ಏನೇನೋ ಇಲ್ಲ ಸಲ್ಲದ ವಿಷಯ ಬಡಬಡಿಸುತ್ತ ಸುಮ್ಮನೆ ಕಾಲ ಹರಣ ಮಾಡತೊಡಗಿದ,ಕೊನೆಗೆ ಇಲ್ಲ...ನಾನು ನಮ್ಮ ಪರಿಚಿತರ ಡಾಕ್ಟರ್ ಒಬ್ಬರ ಆಸ್ಪತ್ರೆ ರಾಜಾಜಿ ನಗರದಲ್ಲಿ ಇದೆ ಅಲ್ಲೇ ಹೋಗಬೇಕೆಂದು ಹೇಳತೊಡಗಿದ...ಆತನ ಕನ್ನಡ ದೇವರಿಗೇ ಪ್ರೀತಿ...ಎಲ್ಲೋ ಬ್ರಿಟನಲ್ಲಿ ಹುಟ್ಟಿದವರ ತಡ ಮಾತಾಡುತ್ತಿದ್ದ..ಆಮೇಲೆ ಅವರ ಸಂಬಂದಿಕರು ಬಂದೊಡನೆ ತಿಳಿಯಿತು ಇವನು ಅಪ್ಪಟ ತಮಿಳಿಯನ್ ಎಂದು ಅವರ ಸಂಬಂದಿಕರು ಬಂದೊಡನೆ ಕೂಗಾಡ ತೊಡಗಿದರು"ಅಸ್ಟು ಗೊತ್ತಾಗಲ್ವ ರಾಂಗ್ ಸೈಡ್ ಡೋರ್ ತೆಗಿಬಾರ್ದು ಅಂತೆಲ್ಲಾ ಏನೇನೋ ಕೂಗ ತೊಡಗಿದರು..ಇವನು ತಮಿಳಲ್ಲಿ ಹೇಳುತ್ತಿದ್ದಾನೆ ಅಯ್ಯೋ ನಾನೆ ರಾಂಗ್ ಸೈಡಲ್ಲಿ ಹೊಡೆದಿದ್ದು ಸುಮ್ಮನಿರು ಅಂತ ಆದ್ರೆ...ಇವರಿಗೆ ಗೊತ್ತಾಗುತ್ತಿಲ್ಲ..
ಕೊನೆಗೆ ಅವನು ಕೇಳಿದ ಅಂತ ಸುಮಾರು ೧೨.೩೦ ರಾತ್ರಿಗೆ ಒಂದು ಆಂಬುಲೆನ್ಸ್ ವ್ಯವಸ್ತೆ ಮಾಡಿದೆ ಆತ ೧೫೦೦ ರೂ ಕೇಳಿದ ಅದನ್ನೂ ನಾನೇ ಕೊಟ್ಟೆ...ಕೊನೆಗೆ ಗಾಯಾಳು ಸಾರ್ ಧನ್ಯವಾದ ಸಾರ್ ನಿಮ್ಮ ಮಾನವೀಯತೆಗೆ ಇಸ್ಟೆಲ್ಲಾ ನನ್ನನ್ನು ನೋಡಿಕೊಂಡಿದ್ದಕ್ಕೆ,ಇದರ ಖರ್ಚು ವೆಚ್ಚವೆಲ್ಲ ನನ್ನ ಆಪೀಸ್ ನೋಡಿಕೊಳ್ಳುತ್ತೆ ಅಂತಂದ..ನನ್ನ ಮೊಭೈಲ್ ನಂಬರ್ ಕೇಳಿದ ನಾನು ಯಾವುದೇ ಅನುಮಾನವಿಲ್ಲದೆ ಕೊಟ್ಟೆ...ಕೊನೆಗೆ ಆತನನ್ನು ಆಂಬುಲೆನ್ಸ್ಗೆ ಹಾಕಿ ಕಳುಹಿಸಿ ಕೊಟ್ಟೆವು..
ನನ್ನ ಸ್ನೇಹಿತರು ನೀವ್ಯಾಕೆ ಇದೆಲ್ಲಾ ಮಾಡ್ತೀರಿ ಸಾರ್ ಬೆಂಗಳೂರಲ್ಲಿ ಮಾನವೀಯತೆ ಎಲ್ಲ ನೆಡೆಯೋಲ್ಲ ಅಂದಿದ್ರು ಆದರೂ ನನ್ನ ಮನಸ್ಸು ತಡೆಯದೇ ನಾನು ಇಸ್ಟೆಲ್ಲ ಮಾಡಿದೆ ಹೋಗ್ಲಿ ಬಿಡಿ ಅಂದಿದ್ದೆ..ಇದಾಗಿ ೩ ದಿನ ಕಳೆಯಿತು...ಆ ಆಸಾಮಿಯ ಕಾಲ್ ಬಂತು ನಾನು ಹೇಗಿದ್ದೀರ ಅಂದೆ ಅಯ್ಯೋ ನನ್ನ ಆಪೀಸ್ನಲ್ಲಿ ಹಣ ಕೊಡುವುದಿಲ್ಲವಂತೆ ನನಗೆ ಕಾಲು ಆಪರೇಟ್ ಮಾಡಬೇಕು ಅಂದಿದ್ದಾರೆ ತುಂಬಾ ಖರ್ಚು ಬೀಳುತ್ತೆ ಅಂತ ಕಥೆ ಹೇಳಲು ಪ್ರಾರಂಭಿಸಿದ...ನಾನು ಅದಕ್ಕೆ ನೀವು ಅವತ್ತೇ ಹೇಳಿದಿರಲ್ಲ...ಆಪೀಸ್ ಕೊಡುತ್ತೆ ಅಂತ ಈಗ ಏನು ಬೇರೆಯದೇ ಹೇಳುತಿದ್ದೀರ ಅಂದೆ...ಇಲ್ಲ ನೀವು ೩೦ ಸಾವಿರ ಕೊಡಬೇಕಾಗುತ್ತೆ ಹಾಗೆ ನನ್ನ ಬೈಕ್ ಕೂಡ ರಿಪೈರ್ ಮಾಡಿಸಿ ಕೊಡಲೇ ಬೇಕಾಗುತ್ತೆ ಅಂತ ಹೊಸ ಕಥೆ ಶುರುವಿಟ್ಟು ಕೊಂಡ..
ನಾನು ಅದಕ್ಕೂ ಏನು ಹೇಳದೇ ನಾನು ಸ್ವಲ್ಪ ಬ್ಯುಸಿ ಇದ್ದ ಕಾರಣ ನಂತರ ಕರೆ ಮಾಡುವಂತೆ ಹೇಳಿದೆ...
ಮತ್ತೆ ಕರೆ ಮಾಡಿದ ಈತ ತನ್ನ ಟಾರಿಪ್ ಹೆಚ್ಚಿಸಿ ನೀವು ೫೦ ಸಾವಿರ ಕೊಡಬೇಕಾಗುತ್ತೆ ಬೈಕ್ ರಿಫೈರ್ ಮಾಡಿಸಿಯಾಗಿದೆ ಆ ಶೋರೂಮ್ ಹತ್ತಿರ ಈಗಲೇ ಬಂದು ಬಿಲ್ ಪಾವತಿಸಿ ಅಂತ ಏರು ಧ್ವನಿಯಲ್ಲಿ ಮಾತಾಡಿದ...ನನಗೆ ಆಸ್ಚರ್ಯ ವಾಯಿತು ನಾನು ಅಂದೆ ಅಲ್ಲ ಸ್ವಾಮಿ ನನಗೆ ಇದು ಸಂಬಂದವಿಲ್ಲ ವಿಷಯ ಮಾನವೀಯತೆ ದೃಸ್ಟಿಯಿಂದ ನಾನು ನಿಮಗೆ ಪ್ರಥಮ ಚಿಕಿತ್ಸೆ ಹಾಗೂ ಇನ್ನಿತರೆ ಸುಮಾರು ೩೦೦೦ ರೂಪಾಯಿ ವ್ಯಯಿಸಿದೆ ಈಗ ನೋಡಿದರೆ ನೀವು ಈ ರೀತಿ ಮಾತನಾಡುವುದು ಯಾವ ನ್ಯಾಯ ಅಂದೆ..ಅದಕ್ಕೆ ಆತ ನಾನು ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದ,ನಾನು ಮೊದಲು ಆ ಕೆಲಸ ಮಾಡು ನಾನೇ ರಾಂಗ್ ಸೈಡ್ನಲ್ಲಿ ಬಂದು ಹೊಡೆದು ಆಕ್ಸಿಡೆಂಟ್ ಮಾಡಿದೆ ಅಂತ ಕಂಪ್ಲೆಂಟ್ ಕೊಡು ಅಂದೆ..ಕರೆ ಕಟ್ ಮಾಡಿ,
ಆಮೇಲೆ ನಾನು ನನ್ನ ಲಾಯರ್ಗೆ ಕರೆ ಮಾಡಿ ಘಟನೆ ವಿವರಿಸಿದೆ ಲಾಯರ್ ನನಗೆ ಚನ್ನಾಗಿ ಬೈದರು..ನೀನ್ಯಾಕೆ ಊರು ಉದ್ದಾರ ಮಾಡಲು ಹೋಗಿದ್ದೀಯ ಅದು ನಿನ್ಗೆ ಸಂಬಂದವಿಲ್ಲದ ವಿಷಯ ಅದು ಕ್ಯಾಬ ಚಾಲಕ್ ಹಾಗೂ ಅವನ ವ್ಯವಹಾರ..ನಿನಗಾಗಲಿ ನಿನ್ನ ಕಸಿನ್ಗಾಗಲಿ ಏನೂ ಸಂಬಂದವಿಲ್ಲ..ಅಸ್ಟಕ್ಕೂ ನಿನ್ನ ಕಸಿನ್ಗೆ ಬಾಯಿಗೆ ಬಂದಂಗೆ ಬೈದಿದಕ್ಕೆ ನೀನೇ ಅವಳ ಹತ್ತಿರ ಕಂಪ್ಲೇಟ್ ಈಗಲೆ ಧಾಖಲು ಮಾಡು ಅಂದ್ರು...
ನಾನು ಹೋಗಲಿ ಬಿಡಿ ಸಾರ್ ಅಂತ ಸುಮ್ಮನಾದೆ..
ಆ ಆಸಾಮಿಯ ಸುದ್ದಿ ಇವತ್ತಿಗೂ ಇಲ್ಲ..
ನಿಜ ಬೆಂಗಳೂರಿನಲ್ಲಿ ಮಾನವೀಯತೆಗೆ,ಒಳ್ಳೆಯತನಕ್ಕೆ ಬೆಲೆ ಇಲ್ಲ.
ದುಡ್ಡೇ ಎಲ್ಲಾ...ಅದೇ ನಾನು ಏನು ಮಾಡದೆ ಹೋಗಿದ್ದರೆ ನನ್ನ ೩೦೦೦ ಸಾವಿರ ಉಳಿಯುತ್ತಿತ್ತು..ನನಗಾಗಲಿ ನನ್ನ ಕಸಿನ್ಗಾಗಲಿ ಅವನು ಏನೂ ಮಾಡಲು ಸಾದ್ಯವಿರಲಿಲ್ಲ..
ಈಗ ಹೇಳಿ #ನಾನು_ಸಲ್ಮಾನ್_ಖಾನ್ಗಿಂತ_ಗ್ರೇಟ್_ಅಲ್ಲವೇ(#ಬೀಯಿಂಗ್_ಹ್ಯುಮನ್).. ;-) ;-)