ಬುಧವಾರ, ಫೆಬ್ರವರಿ 24, 2016

ಥೋ ಕರ್ಮ ಕಾಂಡ..

ನಿಮ್ಮ ಹೆಂಡತಿ ಫೋಟೋ ನೀವು ಯಾಕೆ ಹಾಕಲ್ಲ..!!!!
ನಿಮ್ಮ ಫೋಟೋ ಮಾತ್ರ ಹಾಕ್ತಿರ ನಿಮ್ಮ ಗಂಡಂದು ಹಾಕ್ರಿ !!
ಇದು ನಿಜವಾದ ಪಾಯಿಂಟ್..
ಯಾರೋ ಫೋಟೋ ಹಾಕಿದ್ರು ಅಂತ ನಾವು ಹಾಕ್ಬೇಕು..
ಯಾರೋ ಸೆಲ್ಫಿ ವಿತ್ ವೈಫ್ ಹಾಕಿದ್ರು ಅಂದ್ರೆ ನಾವು ಹಾಕ್ಬೇಕು..
ಯಾರೋ ಗಲ್ ಫ್ರೆಂಡು ಅಥವಾ ಬಾಯ್ ಫ್ರೆಂಡ್ ಜೊತೆ ಪೌಟ್ ಮಾಡಿ ಫೋಟೋ ಹಾಕಿದ್ರೆ ನಾವು ಹಾಕಬೇಕು..
ಯಾರೋ ಕತೆ ಬರೆದರು ಕವನ ಬರೆದರೂ ನಾವು ಬರೀಬೇಕು..

ಸ್ವಂತಿಕೆಯೆ ಇಲ್ಲದಂತಾಗಿದೆ ನಮ್ಮ ಜನಕ್ಕೆ..
ಥೋ ಕರ್ಮ ಕಾಂಡ..

ನಮಗೋಸ್ಕರ ಬದುಕೊದಕ್ಕಿಂತ
ಮಾರ್ಕ್ ಜೂಕರ್ ಬರ್ಗೆ ಗೋಸ್ಕರ ಬದುಕೊದೆ ಜೀವನ ಆಗಿದೆ.

ಐಬೆಕ್ಸ್ ಬೇಲಿ ಮತ್ತು ಕ್ವಾಸ

ಗದ್ದೆ ಮತ್ತು ತೋಟಗಳನ್ನು ಜಾನುವಾರುಗಳು ನುಗ್ಗಿ ಹಾಳು ಮಾಡದಂತೆ ತಡೆಯಲು ನಮ್ಮ ಕಡೆ ಐಬೆಕ್ಸ್ ಬೇಲೆ ಅಂತ ಹಾಕಿರುತ್ತಾರೆ.ಇದಕ್ಕೆ ಬಹಳ ಕಡಿಮೆ ಪ್ರಮಾಣದ ಬ್ಯಾಟರಿ ವಿದ್ಯುತ್ ಹರಿಸಿ ಸಣ್ಣ ಶಾಕ್ ಹೊಡೆಯುವಂತೆ,ಮಾಡಿರುತ್ತಾರೆ..
ಆದರೆ ಇದರಿಂದ ಪ್ರಾಣಾಪಾಯ ಯಾರಿಗೂ ಇಲ್ಲ.. .

ಒಮ್ಮೆ ನಮ್ಮ ಕ್ವಾಸ ಗರಬಡಿದವನಂತೆ ರಸ್ತೆ ಬದಿ ಗಾಬರಿ ಇಂದ ನಡುಗುತ್ತಾ ನಿತ್ತಿದ್ದ..😞😞😞😞

ಮಂಜಪ್ಪ ಗೌಡ್ರು:-ಏ ಕ್ವಾಸ ಎಂತಾಗ್ಯದ ಡೈರಿಗೆ ಹಾಲ್ ಕೊಡಕೆ ಬರಲನಾ ಹಿಂಗೆ ಹೆದ್ರುಕುಂಡು ನಿತ್ಗುಂಡಿಯಲಾ ಅಂದ್ರು.😊

ಕ್ವಾಸ:-ಬೆವರು ಒರೆಸಿಕೊಂಡು, ಎಂತಾಇಲ್ಲಗೌಡ್ರೆ ಸುಮ್ನೆ ನಿತ್ತಿನಿ...😆

ಮಂ.ಗೌಡ್ರು:- ಏ ಸುಳ್ಳು ಹೇಳದ ಬ್ಯಾಡ,ಎಂತಾ ಐಬೆಕ್ಸ್ ಬೇಲಿ ಕರೆಂಟ್ ಹೊಡಿತನಾ ಥೋ....😃

ಕ್ವಾಸ:- ಹೌದು ಗೌಡ್ರೆ...😞😞😞

ಮಂ.ಗೌಡ್ರು :- ಅಷ್ಟು ಗೊತ್ತಾಗಲ ನಿಂಗೆ ನೋಡ್ಕಿಂಡು ನಿದಾನಕ್ಕೆ ಬೆನ್ನು ಬಗ್ಸಿ ನುಸಿಯದಲ, ಎಲ್ಡು ವೈರ್ ಮದ್ಯ..😤ಬೆನ್ನು ತಾಗ್ತಾ ಹಂಗ್ಯರೆ..???
ನೀನುಂದು ಮರಾಯ..😠

ಕ್ವಾಸ:- ಇಲ್ಲಾ ಗೌಡ್ರೆ,ಎಲ್ಲಾ ಕರೆಕ್ಟಾಗಿ ದಾಟಿನಿ..ಆದ್ರು ಹೊಡಿತು ಮರ್ರೆ..😞😞😞

ಗೌಡ್ರು:-ಅದೆಂಗೆ ಹೊಡಿತದೆ ಕಾಲು ಅಚಿಗಿಚಿಗೆ ಇಟ್ಟು ಬೆನ್ನು ಬಗ್ಗಿಸಿ ದಾಟಿರೆ,ಹೇಂಗೆ ಹೊಡಿತದೆ ಹೇಳು ನೋಡನಾ..😠😠😠
.
.
.
.
.
.
ಕ್ವಾಸ:- ಹಾಲ್ ಡೈರಿಗೆ ಬರ ಗಡಿಬಿಡಿಲಿ,ಮನಿಯಿಂದ ಬರ ಹೊತ್ತಿಗೆ,
ಚಡ್ಡಿ ಹಾಕಿರ್ಲ ಮರಾಯ್ರೆ..😊

ಮಂ.ಗೌಡ್ರು:-ಥೋ...ನಿನ್ನ ಮಕಕೆ ವರ್ಲೆ ಹಿಡಿಯಾ😂😂😂😂🙈🙈🙈🙈

ಕವರ್ ಇಲ್ಲದ ಕಥೆ

ಸುವರ್ಣ ನ್ಯೂಸ್ನಲ್ಲಿ ಕವರ್ ಸ್ಟೋರಿಯಲ್ಲಿ ಇಂದು ನರಸೀಪುರದ ಆಯುರ್ವೇದ ನಾಟಿ ವೈದ್ಯರ ಬಗ್ಗೆ ಕಾರ್ಯಕ್ರಮ ಪ್ರಸಾರವಾಯಿತು..

ಆದರೆ ಕಾರ್ಯಕ್ರಮದಲ್ಲಿ ಹೇಳಿದ್ದೇ ಹೇಳುವ, ಹಾಗೂ ಏನೋ ಹೈಪ್ ಕ್ರಿಯೇಟ್ ಮಾಡಿ ಕೊನೆಗೆ ಏನೂ ಹೇಳದೆ, ಇಡೀ ಕಾಡು ನಾಶವಾಗಿದೆ ಇವರಿಂದ,ಇದು ದೊಡ್ಡ ಮಾಪಿಯಾ,ಯಾರಿಗೂ ಗುಣವಾಗಿಲ್ಲ ಜನರಿಂದ ಹಣ ಲೂಟಿ ಮಾಡುತ್ತಿದ್ದಾರೆ,ಅಂತ ಹೇಳಿ, ಇವರು ಕೇವಲ ಮೂರು ಜನ ಹೇಳಿದ್ದೇ ಹೇಳುವವರನ್ನು ನಿಲ್ಲಿಸಿಕೊಂಡು,ಊರಿನ ಜನ ಏನು ಹೇಳ್ತಾರೆ ಕೇಳಿ ಅಂತ ಅವರತ್ರ ಮಾತ್ನಾಡಿಸಿದ್ರು..
ಇವರ ಉದ್ದೇಶ ಏನು ತಿಳಿಯಲಿಲ್ಲ..
ನೇರವಾಗಿ ನಾಟಿ ವೈದ್ಯರನ್ನು ಪ್ರಶ್ನಿಸಬಹುದಿತ್ತಲ್ಲಾ..???
ಎಲ್ಲಿಂದ ಇದು ಬರುತೆ,?
ಇದು ಹೇಗೆ ಸಾದ್ಯ?
ಕಾಡು ನಾಶ ಮಾಡುತಿದ್ದೀರ?
ಇದು ತಪ್ಪಲ್ಲವೇ ಎಂದು,
ಆಗ ಅವರ ಉತ್ತರ ಏನು ಕೇಳಬಹುದಿತ್ತು..!!!

ಅದು ಬಿಟ್ಟು,ಈ ಹಿಡನ್ ಕಾರ್ಯಾಚರಣೆ ಯಾಕೆ? ತಿಳಿಯಲಿಲ್ಲ..!!!
ಅದಿರಲಿ..

ಆಶ್ಚರ್ಯ ಅಂದ್ರೆ,
ಅಲ್ಲಿ ಹೋದವರಲ್ಲಿ ,ಹೆಚ್ಚಿನವರು ಗುಣವಾಗಿದೆ, ಇಂಪ್ರೂವ್,ಆಗಿದೆ ಎನ್ನುತ್ತಾರೆ(ನನಗೆ ತೀರಾ ಹತ್ತಿರದವರು ಹೇಳಿದ್ದು),ಹಾಗಾದರೆ ಇಲ್ಲಿ ಯಾರನ್ನ ನಂಬೋದು..????
ಮೊದಲು ಇವರು,ಉಚಿತವಾಗೇ ಔಷದಿ ಕೊಡುತ್ತಿದ್ದರಂತೆ,ಆದರೆ ಈಗೀಗ 200 ರಿಂದ 300 ಹಣವನ್ನು ಚಾರ್ಚ್ ಮಾಡುತ್ತಿದ್ದಾರಂತೆ..!!
ಹಾಗಾದರೆ ಗುಣವಾಗದೆ,ಅಲ್ಲಿ ಏನೂ ಉಪಯೋಗವಾಗದೆ ಇದ್ರೆ,ಯಾಕೆ ದೂರದ ಊರಿನ ಜನರು ಅಲ್ಲಿ ಬಂದು ಕಾದು ಕೂತು,ಔಷದಿ ಪಡೆಯುತ್ತಾರೆ..??

ಇದರಿಂದ ಇಷ್ಟೊಂದು ಕಾಡು ನಾಶವಾಗುತ್ತೆ,ಜನರಿಗೆಲ್ಲಾ ತೊಂದರೆ ಆಗುತ್ತೆ ಅಂದರೆ ಅಲ್ಲಿರುವ ಸ್ಥಳೀಯರು ಹಾಗೂ.ಜನಪ್ರತಿನಿದಿಗಳಿಗೆ ತಿಳಿದಿಲ್ಲವೇ..?
ಅವರು ಸುಮ್ಮನಿರುತ್ತಾರೆಯೇ?
ಜನರು ಅಷ್ಟು ಮೂರ್ಖರೇ..?

ಏನಿದರ ಅಸಲಿಯತ್ತು..

ತಿಳಿದವರು ಹೇಳಬೇಕು

ಸೋಮವಾರ, ಫೆಬ್ರವರಿ 8, 2016

ಯಾರೋ ಒಬ್ಬ ಅಮಾಯಕ ಕಥೆ

ಯಾರೋ ಒಬ್ಬ ಅಮಾಯಕನಿದ್ದನಂತೆ 👨👨👨👨👨
ಆತ ಹೊಳೆ ದಾಟಲು ಕಷ್ಟಪಡುತ್ತಿದ್ದನಂತೆ,🌊🌊🌊
ಅಲ್ಲಿಗೆ ಬಂದ ಬುದ್ದಿವಂತ 👲👲👲👲ಒಬ್ಬ ಆತನಿಗೆ ಒಂದು ಸಲಹೆ ಕೊಟ್ಟನಂತೆ..

"ನೀನು ಹೊಳೆಗೆ ಹಾರು ನಿನ್ನ ಮರ್ಮಾಂಗವು ನಿನ್ನನ್ನು ಮುಳುಗಲು ಬಿಡುವುದಿಲ್ಲ ಅದು ನಿನ್ನನ್ನು life ಜ್ಯಾಕೆಟ್ನಂತೆ ತೇಲಿಸುತ್ತಾ ಆಚೆ ದಡವನ್ನು ಸೇರಿಸುತ್ತದೆ"😍😍😍
ಎಂದು,
ಆ ಅಮಾಯಕ ಈ ಬುದ್ದಿವಂತನ ಮಾತನ್ನು ನಂಬಿ, ಹೊಳೆಗೆ ಹಾರಿದನಂತೆ...🌊🌊🌊🌊💧💧💧💧

ಮೊದಲು ಮುಳುಗಿದ್ದೇ ಅಮಾಯಕನಂತೆ..
ಆಮೇಲೆ ಆತನ ಮರ್ಮಾಂಗ..🐒🐒🐒😥😥😥

ಅದಕ್ಕೆ ಹಳ್ಳಿಯ ಕಡೆ ಒಂದು ಗಾದೆ ಮಾತು ಹೇಳ್ತಾರೆ
ಕೆಲವರ ಮಾತನ್ನು ನಂಬಿದರೆ,
"ಮರ್ಮಾಂಗ"ನಂಬಿ ಹೊಳೆಗೆ ಹಾರಿದ ಹಾಗೆ ಅಂತ.

ಅನ್ಯಾಯವಾಗಿ ಜೀವನ,ಹಾಗೂ ಜೀವ ಕಳ್ಕೋಬೇಕಾಗುತ್ತೆ..😀😁😂😂😇

ವಿಶೇಷ ಸೂಚನೆ:- ಇಲ್ಲಿ ಅಮಾಯಕ ವೆಂಕಟ್ ಮತ್ತೆ ಬುದ್ದಿವಂತರು ★★★ಹೌದಾ ಅಂತ ಕೇಳ್ಬೇಡಿ ನನಗೆ ಗೊತ್ತಿಲ್ಲ..ಮರಾಯ್ರೆ..💭💭💭

ಜ್ಯೋತಿಷ್ಯ ಟಾರ್ಗೆಟ್

ನನಗೊಂದು ಅರ್ಥವಾಗದ ವಿಷಯ.
ಈ ಜೋತಿಷ್ಯ ಕಾರ್ಯಕ್ರಮ ನೋಡಿ ಎಷ್ಟು ಜನ ಮನೆ,ಮಟ ಕಳೆದು ಕೊಂಡಿದ್ದಾರೆ??
ಸಂಸಾರ ಹಾಳು ಮಾಡಿಕೊಂಡಿದ್ದಾರೆ?
ಅದರಿಂದ ಯಾರಿಗೆ ಹಾನಿಯಾಗಿದೆ?
ಜೋತಿಷ್ಯ ಕಾರ್ಯಕ್ರಮ ನೋಡುವಾಗ ಚಾನಲ್ ಚೇಂಜ್ ಆಗದಂತೆ ಏನಾದ್ರು ಮಾಡ್ಸಿರ್ತಾರ ಜೋತಿಷಿಗಳು?
ಇಲ್ವಲ್ಲಾ..ಬೇಕಾದ್ರೆ ನೋಡೋದು,ಬೇಡ ಅಂದ್ರೆ ಚಾನಲ್ ಚೇಂಜ್ ಅಷ್ಟೆ..
ನೋಡೋದು ಬಿಡೋದು ಜನಗಳ ವೈಯಕ್ತಿಕ ವಿಷಯ,ಹಾಗಂತ ಈ ಕೆಲವು ಜೋತಿಷಿಗಳು ಸುಮ್ಮನೆ ಇಲ್ಲದನ್ನು ಹೇಳುವುದು ನಿಜ,
ಎಲ್ಲರೂ ಸರಿ ಇದ್ದಾರೆ ಎನ್ನುವುದು ನಂಬಲಸಾದ್ಯ,
ಆದರೆ
ಹಾಗಂತ ಜೋತಿಷ್ಯ ಮೂದನಂಬಿಕೆ ಎನ್ನುವುದು ಸುಳ್ಳು,,

ಅಷ್ಟಕ್ಕೂ ಜೋತಿಷಿಗಳೇನು ಜನಗಳ ಜೇಬಿಗೆ ಕೈ ಹಾಕಿ ಹಣ ತೆಗೆದು ಕೊಳ್ತಾ ಇದ್ದಾರ ಅಥವಾ ಬಾಂಬ್ ಹಾಕಿ ಅಥವಾ ಇನ್ನಿತರೆ ಸಮಾಜ ಘಾತುಕ ಚಟುವಟಿಕೆ ಮಾಡಿ ಅಂತ ಹೇಳ್ತಿದ್ದಾರ??
ಏನೋ ಗೊತ್ತಾಗ್ತಿಲ್ಲ..
ಬೇರೆ ಧರ್ಮದವರು ಮಾಡುವ ಕೆಲಸಗಳಿಗೂ ಇದೇ ಮಾತು ಹೇಳ್ತಾರಾ ಇವರುಗಳು..?!!
ಅಲ್ಲಾ
ಸಮಸ್ಯೆಗಳು ಸಾವಿರ ಇದೆ ಅದನ್ನು ಪರಿಹರಿಸೋದು ಬಿಟ್ಟು,ಸುಮ್ಮನೆ ಯಾವುದೋ ವಿಷಯ ಇಟ್ಟು ಕೊಂಡು ಅವರ ಮೇಲೆ ದ್ವೇಶ ಸಾದಿಸೋ ಅಗತ್ಯ ಇದೆಯೇ?

ಇಷ್ಟೆಲ್ಲಾ ಸಮಾಜದ ಕಾಳಜಿ ಇರುವ ಇವರುಗಳು..
ಸಿಗರೇಟ್ ನಿಷೇದಿಸಲಿ..
ಮದ್ಯಪಾನ ನಿಷೇದಿಸಲಿ..
ತಂಬಾಕು ನಿಷೇದಿಸಲಿ..
ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳ ಸುಲಿಗೆ ನಿಲ್ಲಿಸಲಿ..
ಭೂಮಾಪಿಯಾ ಹಾಗೂ ಮರಳು ಮಾಪಿಯಾ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಿ..
ಬೆಂಗಳೂರಿನ ಟ್ರಾಪಿಕ್ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲಿ..
ಕಸದ ವಿಲೇವಾರಿ ಬಗ್ಗೆ ಯೋಚಿಸಲಿ..
ಅವರ ಪಕ್ಷದವರೇ ಮಾಡುತ್ತಿರುವ ಬ್ರಷ್ಟಾಚಾರದ ಬಗ್ಗೆ ಕ್ರಮ ಕೈಗೊಳ್ಳಲಿ..
ರಸ್ತೆಗಳನ್ನು ದುರಸ್ತಿ ಮಾಡಲಿ..
ಅನ್ಯಾಯವಾಗಿ ಜೀವ ಕಳೆದು ಕೊಳ್ಳುತ್ತಿರುವ ರೈತರಿಗೆ,ಹಾಗಾಗದಂತೆ ಶಾಶ್ವತ ಪರಿಹಾರ ಕಂಡುಹಿಡಿಯಲಿ..
ವಿಧ್ಯುತ್ ಸಮಸ್ಯೆ ಬಗ್ಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಿ..
ಬಡತನ ರೇಖೆಗಿಂತ ಕೆಳಗಿರುವ ಎಲ್ಲರಿಗೂ ಉನ್ನತ ಶಿಕ್ಷಣದ ವರೆಗೆ ಉಚಿತವಾಗಿ ಶಿಕ್ಷಣ ಕೊಡಲಿ..
ರೈತನಿಗೆ ಎಲ್ಲಾ ಬೆಳೆಗಳಿಗೂ ಒಂದು ನ್ಯಾಯವಾದ ಬೆಂಬಲ ಬೆಲೆ ಕೊಡಿಸಲಿ..
ಯುವಕರು ಕೃಷಿಯ ಬಗ್ಗೆ ಹೆಚ್ಚಿನ ಒಲವು ತೋರುವಂತೆ ಏನಾದರು ಕಾರ್ಯಕ್ರಮ ಹಮ್ಮಿಕೊಳ್ಳಲಿ..
ಜನರನ್ನು ಸೋಮಾರಿಗಳನ್ನಾಗಿ ಮಾಡುವ ಯೋಜನೆಯನ್ನು ಬಿಟ್ಟು ಅವರಿಗೆ ಕೆಲಸ ಕೊಡಲಿ..
ಜಾತಿ ರಾಜಕೀಯ ಮೊದಲು ಬಿಡಲಿ..
ಹಾಗೂ ಎಲ್ಲರನ್ನೂ ಸಮಾನವಾಗಿ ಕಾಣಲಿ..
ದಿನಕ್ಕೊಂದು ವಿವಾದಾತ್ಮಕ ಹೇಳಿಕೆ ಕೊಡುತ್ತಾ ಸಮಾಜವನ್ನು ಒಡೆಯಲು ಹಾಗೂ ಅದರಿಂದ ತಮ್ಮ ಬೇಳೆ ಬೇಯಿಸಿಕೊಳ್ಳುವವರ ವಿರುದ್ದ ಕ್ರಮ ಕೈಗೊಳ್ಳಲಿ..
ಎಲ್ಲರಿಗೂ ಗೌರವಿಸೋದು ಹಾಗೂ ಅವರವರ ನಂಬಿಕೆಗಳಿಗೆ ಯಾವುದೇ ಅಡ್ಡಿ ಬರದೇ ಇದ್ದರೆ,ಅದೇ ಈ "ಜ್ಯಾತ್ಯಾತೀತ"ಸರ್ಕಾರ ಅಂತ ಮೂರು ಹೊತ್ತು ಡಂಗುರ ಸಾರುತ್ತ,ದಿನವೂ ಜಾತಿಯ ಬಗ್ಗೆ ಮಾತನಾಡುವ ಸರ್ಕಾರ ಜನರಿಗೆ ಮಾಡುವ ದೊಡ್ಡ ಉಪಕಾರ..
ಮಾಡೋ ಕೆಲ್ಸ ಬಿಟ್ಟುಕೊಂಡು..ಹಾಡೋ ದಾಸಯ್ಯನ ಹಿಂದೆ ಹೋಗ್ತಿದ್ದಾರೆ..
ಇದೆಲ್ಲಾ ಬೇಕಾ??

ಪರಪರ ಪಂಚ ಫಿಲಂ

ಯಾಕೆ..ಯಾಕೆ..ಇಷ್ಟು ಕೆಟ್ಟ ಪಿಲಮ್ ತೆಗೆದಿದ್ದಾರೆ ಕಾಲಿ ಪೀಲಿ..ಯಾಕೆ..😜😜😜😜😜
ಅಯ್ಯಬ್ಬ..😃😤😤😤😨😨
ಪರಪಂಚ ಚಿತ್ರ ನೋಡಿ..
ಬಟ್ಟೆ ಪರಪರ ಹರಿದು ಕೊಳ್ಳೋಹಾಗೆ ಆಯ್ತು..
ರಂಗಾಯಣ ರಘು ನಟನೆ ಒಂದು ಬಿಟ್ಟರೆ..
ಚಿತ್ರಕ್ಕೆ ತಲೆಯಿಲ್ಲ ಬುಡವಿಲ್ಲ..
ನರೇಶನ್ ಸರಿ ಇಲ್ಲ..
ಸಂಕಲನ ಸರಿ ಇಲ್ಲ..
ಸುಮ್ಮನೆ ಯಾವುದೋ ಹಾಡನ್ನು ಯಾವುದೋ ಸಮಯದಲ್ಲಿ ಯಾವುದೋ ನಟರನ್ನು ಯಾವುದೋ ಸೀಕ್ವೆನ್ಸ್ ಅಲ್ಲಿ ತಂದು..
ಇಷ್ಟ ಬಂದ ಹಾಗೆ ಚಿತ್ರವನ್ನು ಮಾಡಿದ್ದು ನೋಡಿ..
ಅನಿಸಿದ್ದು..
ಜನರು,
ನಾವು ಹೇಗೆ ಏನು ಮಾಡಿದ್ರು ನೋಡಲೇ ಬೇಕು
ಅನ್ನೋ ಉದ್ದಟ ತನಾನೋ..
ಅಥವಾ
ಏನು ಮಾಡಿದ್ರು ನೋಡ್ತಾರೆ ಅನ್ನೋ ಓವರ್ ಕಾನ್ಪಿಡೆನ್ಸೋ..
ಅಥವಾ
ಏನು ಬೇಕಾದ್ರು ಮಾಡ್ತೀವಿ ನಮ್ಮಿಷ್ಟ ಅನ್ನೋ ಉಡಾಪೆನೋ ಗೊತ್ತಾಗ್ತಾ ಇಲ್ಲ..

ಕನ್ನಡ ಚಿತ್ರ ಜನ ನೋಡಲ್ಲ ಅಂತ ಈ ತರ ಚಿತ್ರಗಳನ್ನು ತೆಗೆದು ಜನಗಳನ್ನು ದೂರಿದ್ರೆ ಕನ್ನಡಿಗರು ಏನು ಮಾಡ್ಬೇಕು..!!!???😢😠😞
#dontbalme_us

4'-6"‍x19"-3" House

ನಿನ್ನೆ ಮಾಗಡಿ ರೋಡಿಗೆ ಕೆಲಸದ ನಿಮಿತ್ತ ಹೋಗಿದ್ದೆ,
ಅಲ್ಲಿ ಒಬ್ಬ ಶಣ್ಮುಖ ಎಂಬ ಒಬ್ಬ ವ್ಯಕ್ತಿ ಪರಿಚಯವಾದ,ನಾವು ಪ್ರಾಜೆಕ್ಟ್ ಬಗ್ಗೆ ಏನೋ ಕೆಲವು ವಿಚಾರವನ್ನು ಚರ್ಚೆ ಮಾಡುತ್ತಿದ್ದಾಗ ಅಚಾನಕ್ ಆಗಿ
"ಸಾರ್ ನಾನೂ ಒಂದು ಸಣ್ಣ ಮನೆ ಕಟ್ಟಿದ್ದೀನಿ ನೋಡ್ತೀರ"
ಎಂದ ಶಣ್ಮುಖ,
ನನಗೆ,ಮನೆ ಕಟ್ಟೋದ್ರಲ್ಲಿ ಏನು ವಿಶೇಷ,ಈತ ಯಾಕೆ ಹೀಗೆ ಹೇಳ್ತಾ ಇದ್ದಾನೆ ಅಂತ ಒಮ್ಮೆ ಅವರನ್ನು ನೋಡಿದೆ,
ಅಲ್ಲೇ ಇದ್ದದ್ದು ವಿಶೇಷ..
ಅವರಿಗೆ ರಾಜಾಜಿನಗರ ಹತ್ತಿರ ಇರುವ ರಾಮ ಮಂದಿರದ ಹತ್ತಿರ ಒಂದು ಏರಿಯಾದಲ್ಲಿ ನಿವೇಷನ ಅಲಾಟ್ ಆಗಿತ್ತಂತೆ,ಆದರೆ ಮನೆ ಕಟ್ಟಲು ಯೋಚಿಸುವ ಮೊದಲೇ ಎರಡೂ ಕಡೆಯ ನಿವೇಶನದವರು ಇವರ ನಿವೇಶನವನ್ನೂ ಒತ್ತುವರಿ ಮಾಡಿ ಇವರ ನಿವೇಶನದಲ್ಲಿ ತಮ್ಮ ಮನೆ ಕಟ್ಟಿ ಕೊಂಡಿದ್ದರಂತೆ,
ಕೊನೆಗೆ ಇವರಿಗೆ ಉಳಿದದ್ದು ಕೇವಲ 5'-3'‍x20"-0"ಮಾತ್ರ.!!!??? :-(
ಇನ್ನೇನು ಮಾಡಿದರೂ ಪ್ರಯೋಜನವಿಲ್ಲ ಎಂದು ಅರಿತ ಶಣ್ಮುಖ,ತನ್ನ ಸಹೋದರನ ಜೊತೆ ಸೇರಿ ಅಷ್ಟೇ ಜಾಗದಲ್ಲಿ ತನ್ನ 3 ಅಂತಸ್ತಿನ ಮನೆ ಕಟ್ಟಿಕೊಂಡಿದ್ದಾರೆ..

ನನ್ನನ್ನು ಮತ್ತು ನನ್ನ ಸ್ನೇಹಿತರಾದ ನಾಗರಾಜರನ್ನು ಆತ್ಮೀಯವಾಗಿ ಅವರ ಮನೆಗೆ ಆಹ್ವಾನಿಸಿ ಕರೆದು ಕೊಂಡು ಹೋದರು..

ಕೇವಲ 4'-6 x 19'-3" ನ ಒಳ ಆಯದಲ್ಲಿ,ಒಂದು ಬಾತ್ ರೂಮ್ ಹಾಗೂ ಅಡುಗೆಮನೆ ಮತ್ತು ಮಲಗಲು ವ್ಯವಸ್ಥೆ ಹಾಗೂ ದೇವರ ಗೂಡನ್ನೂ ಕೂಡ ಮಾಡಿ ಕೊಂಡು,
ಗ್ರೌಂಡ್ ಪ್ಲೋರಿ ತನ್ನ ತಂಗಿಗೆ ಕೊಟ್ಟು,
ಮೊದಲನೆ ಹಾಗೂ ಎರಡನೆ ಮಹಡಿಯಲ್ಲಿ ನೆಮ್ಮದಿಯಿಂದ ತಮ್ಮ ಹೆಂಡತಿ ಮಗನ ಜೊತೆ ಜೀವನ ಮಾಡಿಕೊಂಡಿದ್ದಾರೆ,
ಟೆರಾಸಿನಲ್ಲಿ ವಾಶಿಂಗ್ ಮಶಿನ್ ಹಾಗೂ ಇನ್ನಿತರೆ ವಸ್ತು ಹಾಗೂ ಒಂದು ಕಾಮನ್ ಬಾತ್ ರೂಮ್ ಮಾಡಿ ಕೊಂಡಿದ್ದಾರೆ,
ಎಲ್ಲಾ ಪ್ಲೋರಿಗೆ ಓಡಾಡಲು 3"-3"ಸ್ಪೈರಲ್ ಸ್ಟೈರ್ ಕೇಸ್ ಹಾಕಿ ಕೊಂಡಿದ್ದಾರೆ..

ಇವರ ನೆಮ್ಮದಿಯ ಜೀವನ ನೋಡಿ ನನಗೆ ಅನ್ನಿಸಿದ್ದು,ಕೋಟಿ ಕೋಟಿ ಸುರಿದು ಬಂಗಲೆ,ಪೆಂಟ್ ಹೌಸ್,ಅಪಾರ್ಟ್ಮೆಂಟ್,ಗೆಸ್ಟ್ ಹೌಸ್ ಕಟ್ಟೋರಿಗಿಂತ,ನಾನು ಹೋದ ಮನೆಯಲ್ಲಿ ನೆಮ್ಮದಿ ಹಾಗೂ ಆತ್ಮೀಯತೆ ಹೆಚ್ಚಾಗಿ ಕಾಣುತ್ತಿತ್ತು..

ಆ ಮನುಷ್ಯನ ಜೀವನ ತೃಪ್ತಿಯನ್ನು ಹಾಗೂ ತನ್ನ ಮನೆಯನ್ನು ತಾನೇ ಕಟ್ಟಿಕೊಂಡೆ ಎಂಬ ಹೆಮ್ಮೆ ಎದ್ದು ಕಾಣುತ್ತಿತ್ತು..

ಮನೆಯ ವಿಸ್ತೀರ್ಣಕ್ಕಿಂತ,ಒಳ್ಳೆಯ ಮನಸ್ಸಿನ ವಿಸ್ತೀರ್ಣ ಎದ್ದು ಕಾಣುತ್ತಿತ್ತು..
ಶಣ್ಮುಖ ಮೂಲತಹ ತಮಿಳುನಾಡಿಅನವರಂತೆ 1990ರಲ್ಲಿ ಬೆಂಗಳುರಿಗೆ ಬಂದು ನೆಲೆಸಿದರಂತೆ,ತಮಿಳು ಮಿಶ್ರಿತ ಕನ್ನಡ ಹಾಗೂ ಆತನಿಗೆ ನಮ್ಮ ಕರ್ನಾಟಕದ ಮೇಲಿರುವ ಅಭಿಮಾನ ಕಂಡು ನನಗೆ ಎಲ್ಲಿಲ್ಲದ ಸಂತೋಷವಾಯಿತು..
ನೀವೇನು ಕೆಲಸ ಮಾಡುತ್ತೀರಿ ಅಂತ ಕೇಳಿದರೆ..
"ನಾನು ಆಲ್ ರೌಂಡರ್ ಸಾ ನೀವು ಏನು ಕೆಲ್ಸ್ ಹೇಳಿದರೂ ಮಾಡುತ್ತೇನೆ'ಎಂದು ಹೆಮ್ಮೆ ಇಂದ ಯಾವುದೇ ಅಳುಕಿಲ್ಲದೆ ಹೇಳುತ್ತಾರೆ..
ಈತ ಸಮಾಜ ಸೇವಕ ಕೂಡ..!!!ಹಾಗೂ ಮಹಾನ್ ದೈವ ಭಕ್ತ!!!

ಈತನೂ ಕೂಡ ಮನೆಯನ್ನು ಕಟ್ಟಿ ಎಲ್ಲರಿಗೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ,...
ಆದರೆ ದೊಡ್ಡಸ್ತಿಕೆಗೆ ಅಲ್ಲ ಎನ್ನುವುದು ಇಲ್ಲಿ ಮುಖ್ಯ..!!!!
ಸುರೇಶ್ ಕುಮಾರ್ ಅವರು ಕೂಡ ಇವರ ಮನೆಗೆ ಬೇಟಿ ಕೊಟ್ಟಿದ್ದರಂತೆ..

ಅಂದ ಹಾಗೆ ಅವರು ಮನೆ ಕಟ್ಟಲು ತಗುಲಿದ ವೆಚ್ಚ 6 ರಿಂದ 7 ಲಕ್ಷ ಇರಬಹುದು ಎಂದರು..!!!

ಅಕ್ರಮ ವಲಸಿಗರು

ಬಾಂಗ್ಲಾ ದೇಶದಿಂದ ಅಕ್ರಮ ವಲಸಿಗರು ಬಂದಿದ್ದಾರೆ,ಎಂದು ಹಲವು ಮಾದ್ಯಮಗಳು ಈ ಹಿಂದೆ ಹಲವು ಬಾರಿ ವರದಿ ಮಾಡಿದ್ದವು..
ಮೊನ್ನೆ ಸುವರ್ಣವಾರ್ತಾವಾಹಿನಿಯಲ್ಲಿ, ವಿಜಯಲಕ್ಶ್ಮಿ ಶಿಬರೂರು ಅವರು ಕೂಡ,ಕುಟುಕು ಕಾರ್ಯಚರಣೆಯಲ್ಲಿ,ಬೆಂಗಳೂರಿನ ಹೊರವಲಯದಲ್ಲಿ ಇರುವ ಜಾಗಕ್ಕೆ ಹೋಗಿ,ಅಲ್ಲಿನ ನಿವಾಸಿಗಳನ್ನು ಮಾತನಾdiಸಿದರು,ಅವರು ಯಾವುದೇ ಮುಜುಗರ ಹಾಗೂ ಹೆದರಿಕೆ ಇಲ್ಲದೆ..

"ಹೌದು ನಾವು ಬಾಂಗ್ಲಾ ದವರು,ನಮ್ಮ ಬಳಿ ವೀಸಾ ಏನೂ ಇಲ್ಲ..ಇಲ್ಲಿನ ಸಿಟಿಜೆನ್ ಕಾರ್ಡ್ ಕೂಡ ಇಲ್ಲ..ಬಾರ್ಡರಿನಲ್ಲಿ ಬಿ ಎಸ್ ಎಪ್ ನವರಿಗೆ 1000 ರೂ ಕೊಟ್ಟರೆ ಯಾವಾಗ ಬೇಕಾದ್ರೆ ಬರಬಹುದು ವಾಪಾಸ್ ಹೋಗಬಹುದು"ಎಂದು ದೈರ್ಯವಾಗಿ ಹೇಳುತ್ತಾನೆ..
ಒಮ್ಮೆ Indian border ಒಳದಾಟಿದರೆ ರೈಲಿನಲ್ಲಿ ಯಾವುದೇ ಸಮಸ್ಯೆ ಇಲ್ಲದೇ ಓಡಾಡಬಹುದು ಎನ್ನುತ್ತಾರೆ..
ರಾಜ್ಯ ಸರ್ಕಾರ ಏನು ಮಾಡುತ್ತಿದೆ..??
ಇದಕ್ಕೆಲ್ಲಾ ಯಾರು ಜವಾಬ್ದಾರರು..??
ಮುಂದೆ ಎಂತಾ ಅನಾಹುತ ಕಾದಿದೆ ಎಂಬ ಅರಿವು ಯಾರಿಗೂ ಇಲ್ಲವೇ??

ನಮ್ಮ ಬಗಲಿನಲ್ಲೇ ಇಷ್ಟು ದೊಡ್ಡ ಆತಂಕವನ್ನು ಇಟ್ಟು ಕೊಂಡು,ಕಂಡು ಕಾಣದಂತೆ ನಾವುಗಳು ನಿರಮ್ಮಳವಾಗಿ ಕೂತಿದ್ದೀವಲ್ಲಾ..
ಎಂತಹಾ ಅಸಹಾಯಕತೆ ನಮ್ಮದು..
ಮುಂದೊಂದು ದಿನ ಇದರಿಂದ ಆಗುವ ಅನಾಹುತಕ್ಕೆ..
ಅವರ party ಮೇಲೆ ಇವರು,ಇವರ party ಮೇಲೆ ಅವರು ಕೆಸರೆರೆಚಾಡೋದು,ಆಮೇಲೆ ಸುಮ್ಮನೆ ವಿಷಯವನ್ನು ಮರೆತು ಬೀಡೋದು ಬಿಟ್ಟರೆ ಇನ್ನೇನು ಆಗುವುದಿಲ್ಲ..
ಇದರಿಂದ ತೊಂದರೆ ಅನುಭವಿಸುವವರು ಸಾಮಾನ್ಯ ಜನರು ಮಾತ್ರ..

ಎಲ್ಲರಿಗೂ ಅವರವರ ಚಿಂತೆ ಬಿಟ್ಟರೆ..
ಬೇರೆಯ ಅನಾಹುತದ ಬಗ್ಗೆ ಯೋಚನೆಯೇ ಇಲ್ಲ..😞😞

ನಮ್ಮ ಸರ್ಕಾರಗಳಿಗೆ, ಅರ್ಜೆಂಟ್ ಆದಾಗಲೇ ಟಾಯ್ಲೆಟ್ ಎಲ್ಲಿದೆ ಅಂತ ಹುಡುಕೋದು ಸಾಮಾನ್ಯ ವಾಗಿದೆ..ಎಲ್ಲಾ ವಿಷಯದಲ್ಲೂ..😠😠😠
Please save our state from like these kind of elements.

Sez

ಹಲವು ತಿಂಗಳ,ಹಿಂದೆ ಕಸ್ತೂರಿ ರಂಗನ್ ವರದಿ ಬಂದಿದೆ,ಅದರಲ್ಲಿ ಮೂರು ಜೋನ್ ಮಾಡಿದ್ದಾರೆ,ಅದರಲ್ಲಿ ಒಂದೊಂದು ಜೋನ್ ಒಂದೊಂದು ನಿಯಮಾವಳಿ ಇದೆ,ಅದರಂತೆ ಕೆಲವರು mane ಜಮೀನು ಎಲ್ಲಾ ಬಿಟ್ಟು ಬೇರೆ ಕಡೆ ಹೋಗ ಬೇಕಾಗುತ್ತೆ ಅಂತ ಏನೇನೋ ಮಾತುಗಳುಚರ್ಚೆಗಳು,ನಮ್ಮ ಮಲೆನಾಡು ಭಾಗದಲ್ಲಿ ಕೇಳಿ ಬರುತ್ತಿತ್ತು,ಅದರ ಬಗ್ಗೆ ತಾಲೂಕ್ ಮಟ್ಟದಲ್ಲಿ ಬಹಳ ಹೋರಾಟಗಳು ನಡೆದವು..
ಇದರಿಂದ ಹಲವು ಜನರು ಆತಂಕಗೊಂಡಿದ್ದರು ಕೂಡ..
ರಿಕ್ಕಿ.....
ಈ ಚಿತ್ರ ನೋಡಿದಾಗ,ನನಗೆ ಅನ್ನಿಸಿದ್ದು ಇದೇ..
ಎಷ್ಟೋ ಜನ ಹೀಗೆ ಸರ್ಕಾರದ ಯೋಜನೆಗಳಿಂದಾಗಿ ಅನಿವಾರ್ಯವಾಗಿ ಹಲವು  ದಶಕಗಳಿಂದ ವಾಸವಿದ್ದ ಮನೆ, ಜೀವನಕ್ಕಾಗಿ ಮಾಡುತ್ತಿದ್ದ ವ್ಯವಸಾಯ, ಹಾಗೂ ಅವರ ಪೂರ್ವಜರು ಮಾಡಿಟ್ಟ ಆಸ್ಥಿ ಎಲ್ಲವನ್ನೂ ಬಿಟ್ಟು ,ಏನೂ ಅರಿಯದ ಜನ ಹಾಗೂ ಜಾಗಕ್ಕೆ ಹೋಗಿ ಅಂದರೆ ಒಮ್ಮೆ ಬರಸಿಡಿಲು ಬಡಿದಂತೆ ಆಗುವುದು ಸತ್ಯ,
ಬಹಳ ಜನ ತಮ್ಮ ಜಮೀನು,ಮನೆ ಹಾಗೂ ಜಾನುವಾರುಗಳೊಂದಿಗೆ ಭಾವನಾತ್ಮಕ ಸಂಬಂದವನ್ನು ಇಟ್ಟು ಕೊಂಡಿರುತ್ತಾರೆ,ಅದನ್ನೆಲ್ಲ ಬಿಟ್ಟು ಒಮ್ಮೆಲೆ ಹೋಗುವುದು ಕಷ್ಟ ಅದರಿಂದ ಆಘಾತವಾಗುವುದು ಸಹಜ..
ಅದರಿಂದ ಉಂಟಾದ ಮಾನಸಿಕ ಅಘಾತದಿಂದ ಕೆಲವರು ಹೊರ ಬರಬಹುದು,
ಕೆಲವರಿಗೆ ಜೀವನಕ್ಕೆ ಬೇರೆ ದಾರಿ ಇರಬಹುದು, ಆದರೆ ಕೆಲವರು ಅದನ್ನು ತಡೆಯದೆ ಜೀವ ಕಳೆದು ಕೊಳ್ಳಬಹುದು,!!😞😞😞
ಕೆಲವರು ದ್ವೇಷ ತುಂಬಿಕೊಂಡು,ನಾವು ನ್ಯಾಯ ಪಡೆಯುತ್ತೇವೆ ರಕ್ತ ಪಾತದಿಂದ ಎಂದು,ವ್ಯವಸ್ತೆಯ ವಿರುದ್ದ ಬಂದೂಕು ಹಿಡಿದು ನಿಲ್ಲುತ್ತಾರೆ..!!😠😠😠

ಅದು ಅವರ ಮನಸ್ಸನ್ನು ಅಷ್ಟು ಕಲ್ಲಾಗಿಸಿ ವ್ಯವಸ್ತೆಯ ವಿರುದ್ದ ಹೋರಾಡುವಂತೆ ಮಾಡಿ,
ತಮ್ಮ ಜೀವವನ್ನೇ ಕಳೆದು ಕೊಳ್ಳುವಂತೆ ಮಾಡುತ್ತದೆ,

ಈ ನಕ್ಸಲ್ ಹೋರಾಟ ನಮ್ಮ ಮಲೆನಾಡ ಕಡೆ ಇನ್ನೂ ಇದೆ..😞😞😞

ಇಂತಹಾ ಅಮಾಯಕ ಯುವಕ ಯುವತಿಯರು,ಈ ಹುಚ್ಚು ಹೋರಾಟ ಮಾಡಲು ಹೋಗಿ ಪೋಲೀಸರ ಗುಂಡಿನಿಂದ ಜೀವ ಕಳೆದು ಕೊಂಡಿದ್ದಾರೆ..

ಇದನ್ನೆಲ್ಲಾ ನೋಡಿದರೆ..
ಯಾರನ್ನು ದೂರುವುದು ತಿಳಯುತ್ತಿಲ್ಲ..

ಸರ್ಕಾರವನ್ನೋ..!!??

ಸರ್ಕಾರದ ಯೋಜನೆಯನ್ನೋ!!??

ಪೋಲೀಸರನ್ನೋ..!!??

ಅಥವಾ ಹೀಗೆ ವ್ಯವಸ್ತೆಯ ವಿರುದ್ದ ಹೋರಾಡಿ ರಕ್ತ ಪಾತ ಮಾಡಿ ಗೆಲ್ಲುತ್ತೇವೆ ಎಂದು ಹೊರಟಿರುವ ಈ ಹುಡುಗರನ್ನೋ..

ಕೊನೆಗಾಣದ ಸಮಸ್ಯೆಯಾ ಇದು..??

ನಕ್ಸಲಿಸಮ್ ಬಗ್ಗೆ ಎಳೆ ಇಟ್ಟು ಕೊಂಡು ಮಾಡಿದ ಚಿತ್ರ
"ರಿಕ್ಕಿ "
ಒಳ್ಳೆಯ ಪ್ರಯತ್ನ..

ಅಭಿನಂದನೆಗಳು ರಿಕ್ಕಿ ಚಿತ್ರತಂಡಕ್ಕೆ.
ಖಂಡಿತ ನೋಡಲೇ ಬೇಕಾದ ಚಿತ್ರ..

ಚಿತ್ರೀಕರಣದ ಸ್ಥಳಗಳು ಹಾಗೂ ಕ್ಯಾಮೆರಾ ವರ್ಕ್ ಹಾಗೂ ಸಂಭಾಷಣೆ,
ರಕ್ಷಿತ್ ಹಾಗೂ ಇನ್ನಿತರರ ನಟನೆಯೂ ಚನ್ನಾಗಿದೆ,
ಕೆಲವು ಹಾಡುಗಳು ತುರುಕಿದಂತಿದೆ ಬಿಟ್ಟರೆ ಮತ್ತೆ ಚಲನಚಿತ್ರ ಚನ್ನಾಗಿ ಮೂಡಿಬಂದಿದೆ.

ಮತ್ತೊಮ್ಮೆ ಅಭಿನಂದನೆಗಳು ಋಶಬ್ ಹಾಗೂ Rakshit Shettyit Shetty