ನಿನ್ನೆ ಮಾಗಡಿ ರೋಡಿಗೆ ಕೆಲಸದ ನಿಮಿತ್ತ ಹೋಗಿದ್ದೆ,
ಅಲ್ಲಿ ಒಬ್ಬ ಶಣ್ಮುಖ ಎಂಬ ಒಬ್ಬ ವ್ಯಕ್ತಿ ಪರಿಚಯವಾದ,ನಾವು ಪ್ರಾಜೆಕ್ಟ್ ಬಗ್ಗೆ ಏನೋ ಕೆಲವು ವಿಚಾರವನ್ನು ಚರ್ಚೆ ಮಾಡುತ್ತಿದ್ದಾಗ ಅಚಾನಕ್ ಆಗಿ
"ಸಾರ್ ನಾನೂ ಒಂದು ಸಣ್ಣ ಮನೆ ಕಟ್ಟಿದ್ದೀನಿ ನೋಡ್ತೀರ"
ಎಂದ ಶಣ್ಮುಖ,
ನನಗೆ,ಮನೆ ಕಟ್ಟೋದ್ರಲ್ಲಿ ಏನು ವಿಶೇಷ,ಈತ ಯಾಕೆ ಹೀಗೆ ಹೇಳ್ತಾ ಇದ್ದಾನೆ ಅಂತ ಒಮ್ಮೆ ಅವರನ್ನು ನೋಡಿದೆ,
ಅಲ್ಲೇ ಇದ್ದದ್ದು ವಿಶೇಷ..
ಅವರಿಗೆ ರಾಜಾಜಿನಗರ ಹತ್ತಿರ ಇರುವ ರಾಮ ಮಂದಿರದ ಹತ್ತಿರ ಒಂದು ಏರಿಯಾದಲ್ಲಿ ನಿವೇಷನ ಅಲಾಟ್ ಆಗಿತ್ತಂತೆ,ಆದರೆ ಮನೆ ಕಟ್ಟಲು ಯೋಚಿಸುವ ಮೊದಲೇ ಎರಡೂ ಕಡೆಯ ನಿವೇಶನದವರು ಇವರ ನಿವೇಶನವನ್ನೂ ಒತ್ತುವರಿ ಮಾಡಿ ಇವರ ನಿವೇಶನದಲ್ಲಿ ತಮ್ಮ ಮನೆ ಕಟ್ಟಿ ಕೊಂಡಿದ್ದರಂತೆ,
ಕೊನೆಗೆ ಇವರಿಗೆ ಉಳಿದದ್ದು ಕೇವಲ 5'-3'x20"-0"ಮಾತ್ರ.!!!??? :-(
ಇನ್ನೇನು ಮಾಡಿದರೂ ಪ್ರಯೋಜನವಿಲ್ಲ ಎಂದು ಅರಿತ ಶಣ್ಮುಖ,ತನ್ನ ಸಹೋದರನ ಜೊತೆ ಸೇರಿ ಅಷ್ಟೇ ಜಾಗದಲ್ಲಿ ತನ್ನ 3 ಅಂತಸ್ತಿನ ಮನೆ ಕಟ್ಟಿಕೊಂಡಿದ್ದಾರೆ..
ನನ್ನನ್ನು ಮತ್ತು ನನ್ನ ಸ್ನೇಹಿತರಾದ ನಾಗರಾಜರನ್ನು ಆತ್ಮೀಯವಾಗಿ ಅವರ ಮನೆಗೆ ಆಹ್ವಾನಿಸಿ ಕರೆದು ಕೊಂಡು ಹೋದರು..
ಕೇವಲ 4'-6 x 19'-3" ನ ಒಳ ಆಯದಲ್ಲಿ,ಒಂದು ಬಾತ್ ರೂಮ್ ಹಾಗೂ ಅಡುಗೆಮನೆ ಮತ್ತು ಮಲಗಲು ವ್ಯವಸ್ಥೆ ಹಾಗೂ ದೇವರ ಗೂಡನ್ನೂ ಕೂಡ ಮಾಡಿ ಕೊಂಡು,
ಗ್ರೌಂಡ್ ಪ್ಲೋರಿ ತನ್ನ ತಂಗಿಗೆ ಕೊಟ್ಟು,
ಮೊದಲನೆ ಹಾಗೂ ಎರಡನೆ ಮಹಡಿಯಲ್ಲಿ ನೆಮ್ಮದಿಯಿಂದ ತಮ್ಮ ಹೆಂಡತಿ ಮಗನ ಜೊತೆ ಜೀವನ ಮಾಡಿಕೊಂಡಿದ್ದಾರೆ,
ಟೆರಾಸಿನಲ್ಲಿ ವಾಶಿಂಗ್ ಮಶಿನ್ ಹಾಗೂ ಇನ್ನಿತರೆ ವಸ್ತು ಹಾಗೂ ಒಂದು ಕಾಮನ್ ಬಾತ್ ರೂಮ್ ಮಾಡಿ ಕೊಂಡಿದ್ದಾರೆ,
ಎಲ್ಲಾ ಪ್ಲೋರಿಗೆ ಓಡಾಡಲು 3"-3"ಸ್ಪೈರಲ್ ಸ್ಟೈರ್ ಕೇಸ್ ಹಾಕಿ ಕೊಂಡಿದ್ದಾರೆ..
ಇವರ ನೆಮ್ಮದಿಯ ಜೀವನ ನೋಡಿ ನನಗೆ ಅನ್ನಿಸಿದ್ದು,ಕೋಟಿ ಕೋಟಿ ಸುರಿದು ಬಂಗಲೆ,ಪೆಂಟ್ ಹೌಸ್,ಅಪಾರ್ಟ್ಮೆಂಟ್,ಗೆಸ್ಟ್ ಹೌಸ್ ಕಟ್ಟೋರಿಗಿಂತ,ನಾನು ಹೋದ ಮನೆಯಲ್ಲಿ ನೆಮ್ಮದಿ ಹಾಗೂ ಆತ್ಮೀಯತೆ ಹೆಚ್ಚಾಗಿ ಕಾಣುತ್ತಿತ್ತು..
ಆ ಮನುಷ್ಯನ ಜೀವನ ತೃಪ್ತಿಯನ್ನು ಹಾಗೂ ತನ್ನ ಮನೆಯನ್ನು ತಾನೇ ಕಟ್ಟಿಕೊಂಡೆ ಎಂಬ ಹೆಮ್ಮೆ ಎದ್ದು ಕಾಣುತ್ತಿತ್ತು..
ಮನೆಯ ವಿಸ್ತೀರ್ಣಕ್ಕಿಂತ,ಒಳ್ಳೆಯ ಮನಸ್ಸಿನ ವಿಸ್ತೀರ್ಣ ಎದ್ದು ಕಾಣುತ್ತಿತ್ತು..
ಶಣ್ಮುಖ ಮೂಲತಹ ತಮಿಳುನಾಡಿಅನವರಂತೆ 1990ರಲ್ಲಿ ಬೆಂಗಳುರಿಗೆ ಬಂದು ನೆಲೆಸಿದರಂತೆ,ತಮಿಳು ಮಿಶ್ರಿತ ಕನ್ನಡ ಹಾಗೂ ಆತನಿಗೆ ನಮ್ಮ ಕರ್ನಾಟಕದ ಮೇಲಿರುವ ಅಭಿಮಾನ ಕಂಡು ನನಗೆ ಎಲ್ಲಿಲ್ಲದ ಸಂತೋಷವಾಯಿತು..
ನೀವೇನು ಕೆಲಸ ಮಾಡುತ್ತೀರಿ ಅಂತ ಕೇಳಿದರೆ..
"ನಾನು ಆಲ್ ರೌಂಡರ್ ಸಾ ನೀವು ಏನು ಕೆಲ್ಸ್ ಹೇಳಿದರೂ ಮಾಡುತ್ತೇನೆ'ಎಂದು ಹೆಮ್ಮೆ ಇಂದ ಯಾವುದೇ ಅಳುಕಿಲ್ಲದೆ ಹೇಳುತ್ತಾರೆ..
ಈತ ಸಮಾಜ ಸೇವಕ ಕೂಡ..!!!ಹಾಗೂ ಮಹಾನ್ ದೈವ ಭಕ್ತ!!!
ಈತನೂ ಕೂಡ ಮನೆಯನ್ನು ಕಟ್ಟಿ ಎಲ್ಲರಿಗೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ,...
ಆದರೆ ದೊಡ್ಡಸ್ತಿಕೆಗೆ ಅಲ್ಲ ಎನ್ನುವುದು ಇಲ್ಲಿ ಮುಖ್ಯ..!!!!
ಸುರೇಶ್ ಕುಮಾರ್ ಅವರು ಕೂಡ ಇವರ ಮನೆಗೆ ಬೇಟಿ ಕೊಟ್ಟಿದ್ದರಂತೆ..
ಅಂದ ಹಾಗೆ ಅವರು ಮನೆ ಕಟ್ಟಲು ತಗುಲಿದ ವೆಚ್ಚ 6 ರಿಂದ 7 ಲಕ್ಷ ಇರಬಹುದು ಎಂದರು..!!!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ