ಮಂಗಳವಾರ, ಮೇ 3, 2016

ಕ್ವಾಸನ ಪಾನ ಗೋಷ್ಠಿ

ಕ್ವಾಸ ತನ್ನ ಸ್ನೇಹಿತ ಕಲ್ಯನೊಡನೆ ದಿನವೂ ಬಾರ್ ಗೆ ಹೋಗಿ ಪಾನ ಗೋಷ್ಟಿ ಮಾಡಿ
ಎಲ್ಲರಿಗೂ ಮೊಳೆ ಹೊಡೆದು,ತಾನೂ ಮೊಳೆ ಹೊಡೆಸಿಕೊಂಡು ಮನೆಗೆ ಬರೋದು ಅವನ ಬಹಳ ವರ್ಷದ ಅಭ್ಯಾಸ..
ಇಬ್ಬರೂ ಒಂದೇ ಟೇಬಲ್ಲಿನಲ್ಲಿ ಕೂತು ಎರಡು ಗ್ಲಾಸ್ ಇಟ್ಕೊಂಡು ಕುದ್ರೆ ಕುಡಿಯೋ ಬ್ರಾಂಡ್ ತರಿಸಿ ಅದನ್ನ ಗಂಟಲಿನವರೆಗೆ ಕುಡಿದೇಹೊರಡುವವರು Daily,

ಇವರಿಗೆ ಒಬ್ಬ ಕಾಯಂ ಸಪ್ಲೈಯರ್ ಗುಂಡ ಅಂತ ಇದ್ದ,

ಒಂದು ದಿನ ಕ್ವಾಸ ಒಬ್ಬನೇ ಬಂದು
ಟೇಬಲ್ನಲ್ಲಿ ಕೂತು,ಎರಡು ಗ್ಲಾಸ್ ಹಾಗೂ ಕುದ್ರೆ ಕುಡಿಯೋ ಬ್ರಾಂಡ್ ದಿನಲೂ  ತರಲು    ಹೇಳುವಂತೆ,ಕಾಯಂ ಸಪ್ಲೈಯರ್ ಗುಂಡನಿಗೆ ಆರ್ಡರ್ ಮಾಡಿದ,
ಆತ
ಕ್ವಾಸನ ಕಾಯಂ ಕುದ್ರೆ ಕುಡಿಯುವ ಬ್ರಾಂಡ್ ತಂದಿಟ್ಟ,
ಎರಡು ಗ್ಲಾಸಿಗೂ ಎಣ್ಣೆ ಸುರಿದು ಕುಡಿಯ ತೊಡಗಿದ ಕ್ವಾಸ..🍻🍺

ಸಪ್ಲೈಯರ್ ಕುತೂಹಲ ತಾಳಲಾರದೆ
ಭಯದಿಂದ
"ಸಾ...ನಿಮ್ಮ ಪ್ರೆಂಡ್ ಎಲ್ಲಿ ಸಾರ್ ಬರ್ಲಿಲ್ಲ" ಅಂದ..
ಅದಕ್ಕೆ
ಕ್ವಾಸ :-ನನ್ನ ಪ್ರೆಂಡ್ ಅನಾರೋಗ್ಯದಿಂದ ತೀರ್ಕೊಂಡ ಕಣೋ"
ಅಂತ ಗೋಳೋ ಆಂತ ಅಳಲು ಶುರುವಿಟ್ಟುಕೊಂಡ..

ಆದ್ರೆ ಸಪ್ಲೈಯರ್ಗೆ ಇನ್ನೂ ಕುತೂಹಲ ತಣಿದಿರಲಿಲ್ಲ...

"ಸಾ..ಹೀಗಾಗ ಬಾರದಿತ್ತು.."😞
ಅಂದು
ಮತ್ತೆ ತನ್ನ ಅನುಮಾನ ಪರಿಹರಿಸಿಕೊಳ್ಳಲು ಮುಂದಾದ..
"ಸಾ....ಮತ್ಯಾಕೆ ಎರಡು ಗ್ಲಾಸಿನಲ್ಲಿ ಕುಡೀತಾ ಇದ್ದೀರಾ ಸಾ..."
ಅಂದ
ಅದಕ್ಕೆ ಕ್ವಾಸ..
"ನೋಡೋ...
ನನ್ನ ಸ್ನೇಹಿತ ನಾನು ಒಟ್ಟಿಗೆ ಕುಡೀತಾ ಇದ್ವಿ..
ಈಗ ಅವನು ಇಲ್ಲ,ಅವನನ್ನ ಬಿಟ್ಟು ಹೇಗೋ ಕುಡೀಲಿ,ಅದಕ್ಕೆ ಅವನ ಪಾಲಿಂದು ನನ್ನ ಪಾಲಿಂದು ಎರಡೂ ಕುಡೀತಾ ಇದ್ದೀನಿ" ಅಂದ
ಮತ್ತೆ ಬಿಕ್ಕಿ ಬಿಕ್ಕಿ ಅಳಲು ಶುರುಮಾಡಿದ..😭😭😭😭😭

ಸಪ್ಲೈಯರ್:-"ಅಬ್ಬಾ ಎಂತಾ ಸ್ನೇಹ ಸಾ..ನಿಮ್ದು".👏👏 ಅಂತಾ ಕ್ವಾಸನನ್ನು ಸಮಾಧಾನ ಮಾಡಿ ಹೋದ..

ಹೀಗೇ ಹಲವು ದಿನ ನಡೆಯಿತು,

ಆದರೆ ಒಂದು ದಿನ ಸಪ್ಲೈಯರ್ಗೆ ಮತ್ತೆ ಆಶ್ಚರ್ಯ ಕಾದಿತ್ತು

ಕ್ವಾಸ ಒಂದೇ ಗ್ಲಾಸ್ ತರಲು ಹೇಳಿದ ಹಾಗೂ ಅದಕ್ಕೆ ತನ್ನ ರೆಗ್ಯುಲರ್ ಎಣ್ಣೆ ಹಾಕಿ ಕುಡಿಯಲಾರಂಭಿಸಿದ,

ಸಪ್ಲೈಯರ್ಗೆ ಮತ್ತೆ ಕುತೂಹಲ, ಕೇಳಲೋ ಬೇಡ್ವೋ ಅಂತ ದೈರ್ಯ ಮಾಡಿ..

"ಸಾ...ಇವತ್ಯಾಕೆ ಸಾ ಒಂದೇ ಗ್ಲಾಸಲ್ಲಿ ಕುಡೀತಾ ಇದ್ದೀರ"ಅಂದ

ಕ್ವಾಸ:-
"ನಾನು ಕುಡಿಯೋದು ಬಿಟ್ಟೆ ಕಣೋ" ಅಂದ..

ಸಪ್ಲೈಯರ್:- "ಮತ್ಯಾಕೆ ಈ ಗ್ಲಾಸಲ್ಲಿ ಕುಡೀತಾ ಇದ್ದೀರ" ಅಂದ..

ಕ್ವಾಸ:-"ಇದು ನನ್ನ ಆತ್ಮ ಸ್ನೇಹತನ ಪಾಲು ಕಣೋ,ಅವನಿಗೆ ನಾನು ಯಾವತ್ತೂ ದ್ರೋಹ ಮಾಡಲ್ಲ" ಅಂದ...

ಸಪ್ಲೈಯರ್ ಕಣ್ಣು ಬಿಟ್ಟು ನೋಡಿದ್ರೆ ಆಸ್ಪತ್ರೆಯಲ್ಲಿ ಇದ್ನಂತೆ..😂😂😂😂😂

ಈ ಕಥೆಯ ನೀತು ಥೋ ನೀತಿ..
.
.
.
.
.
.
.
.
.
ಸ್ನೇಹ ಅಮರ ಅನ್ಕೊಂಡ್ರಾ..
ಎಂತ ಕರ್ಮನೂ ಇಲ್ಲ..
ಕ್ವಾಸಂಗೆ ಎಣ್ಣೆ ಹಾಕೋಕೆ ಒಂದು ರೀಸನ್ ಬೇಕಿತ್ತು ಅಷ್ಟೆ..🍻🍻🍻🍻🍻
(ಸೂಚನೆ:-ಈ ಕಥೆ ಎಲ್ಲೋ ಓದಿದ್ದೋ.ಕೇಳಿದ್ದೋ ನೆನಪು,
ಸ್ವಲ್ಪ ಮಾಡಿಪೈ ಮಾಡಲಾಗಿದೆ)

ಕ್ವಾಸ ನ ಗೋಳು ಭಾಗ 3

ಕ್ವಾಸ ಈ ಬಾರಿ ಅಂತೂ ಬಹಳ ಬೇಜಾರಾಗಿಬಿಟ್ಟಿದ್ದ,ಬೇಕಿತ್ತಾ ನನಗೆ ಸಾಲ ಮಾಡಿ ಈ ಕೋಳಿ ಪಾರಂ ಮಾಡುವ ಕೆಲ,ಸ ಅಂತ ತನ್ನನ್ನು ತಾನು ಶಪಿಸುತ್ತಾ,ಕೂತಿದ್ದ..😅😅😅
ದೂರದಲ್ಲಿ ಯಾರೋ ಗಿರಾಕಿ ಬರ್ತಾ ಇರೋದು ಕಾಣಿಸ್ತು..😊

ಕ್ವಾಸ ಈ ಭಾರಿ ಅತ್ಯಂತ ಜಾಗರೂಕತೆಯಿಂದ ಹಾಗೂ ಬುದ್ದಿವಂತಿಕೆಯಿಂದ ಇವರನ್ನು ಸಂಬಾಳಿಸಿ ವ್ಯಾಪಾರ ಮಾಡಬೇಕು ಮತ್ತೊಂದು ಸಮಸ್ಯೆಯಲ್ಲಿ ಸಿಕ್ಕಿಕೊಳ್ಳಬಾರದು ಅಂತ ದೃಡ ನಿರ್ಧಾರ ತೆಗೆದುಕೊಂಡ..

ಗಿರಾಕಿ ಬಂದರು..

"ಬನ್ನಿ ಸಾರ್..ಎಷ್ಟು ಕೋಳಿ 🐔🐓🐔🐓🐔ಬೇಕಿತ್ತು"ಅಂತ ಬಹಳ ವಿನಮ್ರತೆ ಹಾಗೂ ಜಾಗರೂಕತೆಯಿಂದ ಮಾತನಾಡಲು ಶುರುವಿಟ್ಟು ಕೊಂಡ ಕ್ವಾಸ..

ಗಿರಾಕಿ:-"ಹೌದು,ನಮಗೆ ಕೋಳಿ 🐔🐓🐔🐓🐔ಬೇಕಿತ್ತು,ಆದರೆ ಕೋಳಿ ನೋಡೋಕೆ ಸೂಪರ್ ಆಗಿ ಇದ್ದಾವೆ ಅಂದ ಹಾಗೆ ಏನು ಪುಡ್ ಎಲ್ಲಿಂದ ತಂದು ಹಾಕ್ತೀರ" ಅಂದ್ರು..

ಕ್ವಾಸ:- (ಈ ಭಾರಿ ತನ್ನೆಲ್ಲಾ ಬುದ್ದಿವಂತಿಕೆಯನ್ನು ಉಪಯೋಗಿಸಿ ಬಹಳ ಯೋಚಿಸಿ,ಒಳ್ಳೆಯ ಉತ್ತರ ಮೊದಲೇ ರೆಡಿ ಮಾಡಿಕೊಂಡಿದ್ದ).
ಕೂಡಲೇ ಕ್ವಾಸ..
"ಸಾರ್..ನಾವು ಪುಡ್ ಎಲ್ಲಾ ಏನೂ ತರಿಸಿ ಹಾಕಲ್ಲ,
ದಿನಾ ಬೆಳಿಗ್ಗೆ ಪ್ರತಿಯೊಂದು ಕೋಳಿಗೂ🐓🐔🐓🐔🐓💷💶💴 10 ರೂಪಾಯಿ ಕೊಟ್ಟು,ಅವಕ್ಕೆ ಏನೇನು ಬೇಕೋ ಅದನ್ನ ಖರೀಧಿಸಿ ತಿಂದು ಕೊಳ್ಳೋಕೆ ಹೇಳ್ತೀವಿ,ಅವು ತಿಂದು ಚನ್ನಾಗಿ ಬೆಳೆಯುತ್ತವೆ,ನಾವು ಹಾಗಂತ ರೇಟ್ ಜಾಸ್ತಿ ಹೇಳಲ್ಲ, ಎಲ್ಲರೂ ಮಾರುವ ರೇಟ್ಗೆ ಕೊಡ್ತೀವಿ" ಅಂದ..😂😂😂😂😂
.
.
.
.
.
ಗಿರಾಕಿ ಎಚ್ಚರ ತಪ್ಪಿ ಅಲ್ಲೇ ಕುಸಿದು ಬಿದ್ದನಂತೆ..😞😞😞
.
ಮೋರಲ್ 😜
.
.
.
.
..
.
ಮೋರಲ್ ಏನೂ ಇಲ್ಲ,ಕ್ವಾಸ ಟೆನ್ಶನಲ್ಲಿ ಇದ್ದಾನೆ ನಿಮಗೆ ಮೋರಲ್ ಬೇಕಾ,ಎಂತಾ ಜನ ಮರ್ರೆ ನೀವು..😉
ಕ್ವಾಸ ಕುಸಿದು ಬಿದ್ದಿದ್ದ ಗಿರಾಕಿನ ಆಸ್ಪತ್ರೆಗೆ ಸೇರಿಸಿ ಅವನ ಆಸ್ಪತ್ರೆ ಖರ್ಚು ಎಲ್ಲಾ ಕೊಟ್ಟು,ಕೈ ಕಾಲಿ ಮಾಡಿಕೊಂಡು,ಹೈರಾಣ ಆಗಿ ಬಂದು..
ಕೂಡಲೇ ಕೋಳಿ ಪಾರಂ ಮುಚ್ಚಿದನಂತೆ..😞😞😞

ಅಂದ ಹಾಗೆ
ಈ ಜೋಕ್ ಮೂಲ ಕರ್ತೃ ನಮ್ಮ ಖುಷಿ ಖುಷಿಯಲ್ಲಿ,
ದಿನವೂ 90 ಹಾಕುತ್ತಾ 99 ವರ್ಷ ನೆಮ್ಮದಿಯಾಗಿ ಬದುಕಿದ್ದ ಖುಷ್ವಂತಜ್ಜ..
..

ನಾನು ಕೋಳಿ ಸ್ಟೋರಿಗೆ ಮಸಾಲೆ ಹಾಕಿ,ಮದುವೆ ಮಾಡಿ ಹಾಕಿದ್ದೇನೆ ಅಷ್ಟೇ.. 😂😂😂😂
ಕ್ಷಮೆ ಇರಲಿ.ಖುಷ್ವಂತಜ್ಜ..

ಕ್ವಾಸ ನ ಗೋಳು ಭಾಗ 2

ಕ್ವಾಸನ ಗೋಳು Part-2. cont.....

ಕ್ವಾಸನ ಕೋಳಿ ಪಾರಂ ಗೆ ಐ ಟಿ ಯವರು ಬಂದು, ಇವನು ಅತಿಯಾಗಿ ಬುಲ್ಡ್ ಅಪ್ ಕೊಟ್ಟು,ಸಮಸ್ಯೆ ಆಗಿ ಹಣ ಕಳಕೊಂಡ ಮೇಲೆ,
ಕ್ವಾಸ ಬಹಳ ಎಚ್ಚರಿಕೆ ಇಂದ ವ್ಯವಹಾರ ಮಾಡೋಕೆ ತೀರ್ಮಾನ ಮಾಡಿದ್ದ...

ಒಂದಿನ ಬೆಳಿಗ್ಗೆ 🌇ಟಿಪ್ ಟಾಪಾಗಿ ಡ್ರೆಸ್ ಮಾಡಿಕೊಂಡು,ಬಹಳ ಅಪಿಶಿಯಲ್ ಆಗಿ ಕಾಣುವ ಇಬ್ರು ಬಂದ್ರು,
ಕ್ವಾಸ ಈಗ ಫುಲ್ ಜಾಗ್ರತೆಯಿಂದ ಮಾತಾಡೋಕೆ ಸುರು ಮಾಡಿದ..
ಕ್ವಾಸ:- ಬನ್ನಿ ಸಾ...ಹೇಗಿದ್ದೀರ..??
ಕೋಳಿ ಎಷ್ಟು ಕೆ ಜಿ ಬೇಕು??
ಗಿರಾಕಿಗಳು:-ಏನ್ರಿ,ಕೋಳಿಗೆ ಏನು ಫುಡ್ ಹಾಕ್ತಿರ,ಸಕತ್ತಾಗಿ ಕಾಣ್ತಾ ಇದ್ದಾವೆ ದಷ್ಟ ಪುಷ್ಟವಾಗಿ..

ಕ್ವಾಸ:- (ಬಹಳ ಜಾಗ್ರತೆಯಿ0ದ ಏನು ಹೇಳೋದು ಅಂತ,ಸಿಕ್ಕಾಬಟ್ಟೆ ಯೋಚನೆ ಮಾಡಿ ಕೊನೆಗೆ ಸೇಪರ್ ಸೈಡ್ ಇರ್ಲಿ ಅಂತ)
"ಸಾ...ಕೋಳಿಗೆ 🐓🐔🐓🐔🐓🐔ನಾವು ಏನು ಹಾಕಲ್ಲ ಸಾ..ಬರಿ ನೀರು ಕುಡ್ಕೊ0ಡು ಮತ್ತೆ ಗಾಳಿ ತಗೊಂಡು ಹಾಗೇ ಬೆಳಿತಾವೆ ಸಾ...ಹಾಗಂತ ನಾವು ಎಲ್ಲರು ಕೊಡೋ ರೇಟ್ಗೆ ನಾವು ಕೋಳಿ🐓🐔🐓🐔 ಮಾರೋದು ಸಾರ್ "ಅಂತ ಹಲ್ಲು ಕಿರುಯುತ್ತಾ ಹೇಳ್ದ..😁😀😁😀

ಗಿರಾಕಿ:-(ಫುಲ್ ರೈಸ್ ಆಗ್ಬಿಟ್ರು)😈😈😈😈,"ಏನ್ರಿ ಏನು ತಮಾಷೆ ಮಾಡ್ತಾ ಇದ್ದೀರಾ??ನಮ್ಮನ್ನು ಬಕ್ರಾ ಅನ್ಕೋ0ಡಿದ್ದೀರ??
ಅದು ಹೇಗೆ ಬರಿ ಗಾಳಿ ನೀರು,ಸೇವಿಸ್ಕೊಂಡುಇಷ್ಟು ಬೆಳೆಯೋಕೆ ಸಾಧ್ಯ??
ನಾವು ಪ್ರಾಣಿದಯಾ ಸಂಘದವರು,ನಿಮ್ಮ ಮೇಲೆ ಪ್ರಾಣಿ ಹಿಂಸೆ ಮಾಡ್ತಾ ಇದ್ದೀರಾ,ಯಾವುದೇ ದಯೆ ಇಲ್ದೆ,ಕೋಳಿಗೆ ಆಹಾರವನ್ನು ಸಹಾ ಕೊಡದೆ,ಸಾಕಿ ಹಣ ಮಾಡ್ತಾ ಇದ್ದೀರಾ???
ಕೇಸ್ ಹಾಕ್ಸಿ ಜೈಲಿಗೆ ಹಾಕಿಸುತ್ತಿನಿ"
ಅಂದ್ರು..

ಕ್ವಾಸ:- (ನಡುಗ್ಬಿಟ್ಟ)"😞
"ತಕ್ಷಣವೇ ಸಾರ್ ಕ್ಷಮಿಸಿ ಅಂತ"ಹಿಂದೆ ನಡೆದ ಕಥೆ ಹೇಳಿದ,
ಆಗ ಅವರು ಅದನ್ನು ಒಪ್ಪಿ ಹೋಗಲಿ ಬಿಡಿ,ಇನ್ನೇನು ಹೀಗೆ ಸುಳ್ಳು ಹೇಳಬೇಡಿ ಅಂದು ಹೊರಟರು..😷

ಕ್ವಾಸ,ಸ್ವಲ್ಪ ಹಣ ಮತ್ತು ಎರಡು ಕೋಳಿ🐔🐓🐔🐓🐔 ಕೊಡೋಕೆ ಹೋದ..
ಅವರು ಕೋಳಿ 🐓🐔🐓🐔🐓ತಗೊಳ್ಳೋಕೆ ಒಪ್ಪಲಿಲ್ಲ..

ಯಾಕೆ ಗೊತ್ತಾ???😃

ಅವರು ಇಬ್ಬರೂ ಶಿವರಾಜ್ ಕುಮಾರರ ಕಟ್ಟಾ ಅಭಿಮಾನಿಗಳು,ಅವರನ್ನ ತುಂಬಾ ಪಾಲೋ ಮಾಡೋರು..😉
.
.
.
.
.
.
.
.
.
.
ಥೋ...
ಅದೇ ಹಾಡು ಇಲ್ವಾ ಸಾ...ಅವರದ್ದು ಯಾವುದೋ ಪಿಚ್ಚರಲ್ಲಿ
"ಕುರಿ 🐏🐑🐏🐑ಕೋಳಿನಾ🐓🐔🐓🐔🐓,ಸೋಮವಾರ,ಶನಿವಾರ "ಕೊಯ್ಯೊ"ಹಾಗಿಲ್ಲ ಅಂತ..😂"

ಅವತ್ತು ಸೋಮವಾರ ಅಂತ ಒಬ್ಬನಿಗೆ ನೆನಪಾಯ್ತು ಗೊತ್ತಾ..!!
ಅದ್ಕೆ ನೋ ಕೋಳಿ..🐓🐔🐓🐔🐓😂

ಮೋರಲ್
.
.
.
.
.
.
.
.
.
ಇಲ್ಲ ಅ0ತ ತಿಳ್ಕಂಡ್ರಾ..
ಸೂಟ್ ಬೂಟ್ ಹಾಕಿದವರೆಲ್ಲಾ income tax Deptವರಲ್ಲ,
ಪ್ರಾಣಿದಯಾ ಸಂಘದವರು ಇರ್ತಾರೆ ಅಂತ ಅಷ್ಟೇ..

ಕ್ವಾಸ ನ ಗೋಳು ಭಾಗ 1

ಒಮ್ಮೆ ಕ್ವಾಸ ಸ್ವಂತ ಉದ್ಯಮ ಮಾಡಬೇಕೆಂದು ನಿರ್ಧರಿಸಿ,
ತಾನು ಬ್ಯಾಂಕಿನಿಂದ ಸಾಲ ತೆಗೆದು,
ಕೋಳಿ ಪಾರಂ ಮಾಡಲು ನಿರ್ಧರಿಸಿದ..🐓🐔🐓🐔🐓
ಕೋಳಿ ಪಾರಂ ಮಾಡಿ ವ್ಯಾಪಾರವನ್ನು ಶುರುಮಾಡಿಕೊಂಡ. 
ಒಂದು ದಿನ,ಕ್ವಾಸ ನ ಫಾರಂಗೆ  ಬಾರಿ ಶ್ರೀಮಂತರಂತೆ ಕಾಣುವ  ಸೂಟ್ ಬೂಟ್ ಹಾಕಿರುವ ಇಬ್ಬರು ವ್ಯಕ್ತಿಗಳು ಬಂದರು..

ಕ್ವಾಸ ಸಂತಸದಿಂದ ಅವರನ್ನು ಬರ ಹೇಳಿ..😃

ಇವರನ್ನು ಕುರಿ ಮಾಡಿ,ವ್ಯಾಪಾರ ಚನ್ನಾಗಿ ಮಾಡಿ ದುಡ್ಡು ಮಾಡಬೇಕು ಇವತ್ತೇ ಎಂದು ಮನಸ್ಸಿನಲ್ಲೆ ಲೆಕ್ಕ ಹಾಕಿದ..😍

ಬಂದವರು

"ಏನ್ರಿ ಕೋಳಿಗೆ 🐓🐓🐓🐓ಏನು ಹಾಕ್ತಿರ ಚನಾಗಿದಾವೆ ನೋಡೋಕೆ ಅಂದ..???😃

ಕ್ವಾಸ:-(ಖುಷಿಯಿಂದ ಉಬ್ಬಿ ಹೋದ ಬುಲ್ಡ್ ಅಪ್ ಕೊಡೊ ಭರದಲ್ಲಿ)"ಸಾರ್ ನಾವು ಕೋಳಿಗೆ🐔🐓🐔🐓🐔🐓
ಭಾರಿ ಕಾಸ್ಟ್ಲಿ ಫುಡ್ ಹಾಕ್ತಿವಿ
ದ್ರಾಕ್ಷಿ,ಗೋಡಂಬಿ,ಉತ್ತುತ್ತೆ, ಹಾಲು,ಮೊಸರು ಪೌಷ್ಟಿಕಾಂಶ ಸಿಗೋ ಎಲ್ಲಾ ಆಹಾರ ಹಾಕ್ತಿವಿ ಆದ್ರೆ ರೇಟ್ ಮಾತ್ರ ಎಲ್ಲರೂ ಕೊಡುವ ರೇಟಿಗೆ ಕೊಡ್ತೀವಿ,
ಅಂತ ಹಳಿ ಇಂಜಿನ್ ಏನೂ ಇರದ ರೈಲು ಬಿಟ್ಟು,ಸಿಕ್ಕಾಬಟ್ಟೆ ಬುಲ್ಡ್ ಅಪ್ ಕೊಟ್ಟ..😛😛😛😛

ಬಂದವರು:-
"ನಾವು ಇನ್ಕಮ್ ಟ್ಯಾಕ್ಸ್ ನವರು,ನಿಮಗೆ ಎಲ್ಲಿಂದ ಇಷ್ಟೆಲ್ಲಾ ಹಣ ಬರುತ್ತೆ,ಅದು ಹೇಗೆ ನಿಮಗೆ ಲಾಭ ಆಗುತ್ತೆ.. ಲೆಕ್ಕ ಕೊಡಿ"
ಅಂದ್ರು..

ಕ್ವಾಸ:-(ಫುಲ್ ತಬ್ಬಬ್ಬು)"ಸಾರ್,ತಪ್ಪಾಯ್ತು ಸಾರ್,ನಾನು ವ್ಯಾಪಾರ ಆಗ್ಲಿ ಅಂತ ಹೀಗೆ ಸುಳ್ಳು ಹೇಳಿದೇ ಸಾರ್, ಹಾಗೆಲ್ಲಾ ಏನೂ ಹಾಕಲ್ಲ ಸಾರ್..ಎಲ್ಲರ ಹಾಗೆ ನಾನೂ ಸಾಕುತ್ತೀನಿ ಅಂತ ಏನೇನೋ ಹೇಳಿ,ಅತ್ತು ಕರೆದು,ಕೊನೆಗೆ ಕೈಕಾಲು ಹಿಡಿದು,ಸ್ವಲ್ಪ ದುಡ್ಡು💵💶💷💸 ಎರಡು ಕೋಳಿ 🐓🐔ಕೊಟ್ಟು ಕಳುಹಿಸಿ ನಿಟ್ಟುಸಿರು ಬಿಟ್ಟ..😢😔
.
.
ಮೋರಲ್:-
.
.
.
.
.
.
.
.
ಮೋರಲ್ ಇಲ್ಲ ಎಣ್ಣೆ ಬ್ಯಾರಲ್ ಇಲ್ಲಾ.😷
ಕ್ವಾಸ ಸುಮ್ನೆ ಸುಳ್ಳು ಹೇಳಿ,ಲಾಸ್ ಮಾಡಿಕೊಂಡೆ ಅಂತಾ ಸಿಡಿಲು ಹೊಡೆಸಿಕೊಂಡು ಒಂದೇ ಕಣ್ಣಲ್ಲಿ ಅಳ್ತಾ ಕೂತಿದ್ದಾನೆ,ಸಮಾಧಾನ ಮಾಡಿ...
ಇದರಲ್ಲೂ ಮೋರಲ್ ಬೇಕಾ ನಿಮಗೆ..😂😂😂

ಒಂದು ಕೆಟ್ಟ ಅನುಭವ ಪರಮಾತ್ಮನ ಸನ್ನಿಧಿಯಲ್ಲಿ

ನಾನು ಕೆಲವು ತಿಂಗಳ ಹಿಂದೆ ವೈಯಕ್ತಿಕ ಕೆಲಸದ ನಿಮಿತ್ತ ಉಡುಪಿಗೆ ಹೋಗಿದ್ದೆ,ಹಾಗೆ ಶ್ರೀಕೃಷ್ಣ ಪರಮಾತ್ಮನ ದರುಶನ ಮಾಡೋಣವೆಂದು ದೇವಸ್ಥಾನದ ಬಳಿ ಹೋಗಿ,ಕನಕನ ಕಿಂಡಿಯ ಮೂಲಕ ದರುಶನ ಮಾಡಿ ಹೊರಡಲು ಅಣಿಯಾದೆ,

ಆದರೆ ಜೊತೆಗಿದ್ದ ಸ್ನೇಹಿತರು,ಒಳಗಡೆ ಹೋಗಿ ದರ್ಶನ ಮಾಡೋಣ ಅಂದ್ರು ನಾನು ಹೋಗೋಣ ಅಂತ ಒಳ ನಡೆದು ಯಾವುದೋ ಸೇವೆಗೆ ಚೀಟಿಯನ್ನು ಸಹ ಪಡೆದು,ಇನ್ನೇನು ಒಳ ಹೋಗ ಬೇಕು ಅನ್ನುವಾಗ,

ಬಲಗಡೆ ಇರುವ ಕಲ್ಯಾಣಿಗೆ ಎಲ್ಲರೂ ಹೋಗುತ್ತಿದ್ದರು,ಹಾಗೆ ನಾವು ಹೋಗೋಣಾ ಅಂತ,ಗೇಟ್ ದಾಟಿ ಒಳ ನಡೆದು ನೀರು ನೋಡುತ್ತಾ ಮೆಟ್ಟಿಲ ಮೇಲೆ ಕೂತಿದ್ದೆವು,ಅಲ್ಲಿ  ಹಲವು ವಟುಗಳು ಸಂಧ್ಯಾವಂಧನೆ ಮಾಡುತ್ತಿದ್ದರು,ಕೆಲವು ಮಹಿಳೆಯರು ಇನ್ನೇನೋ ಪಠಿಸುತ್ತಾ ಕೂತಿದ್ದರು,ಕಲ್ಯಾಣಿಯಲ್ಲಿ ಯಾವುದೇ ಮುಲಾಜಿಲ್ಲದೆ ಪಂಚೆ ಇನ್ನಿತರೇ ಬಟ್ಟೆಯನ್ನು (ಮಠದವರು ಅನ್ನಿಸುತ್ತೆ)ನೀರಿನಲ್ಲಿ ಅದ್ದಿ ತೊಳೆಯುತ್ತಿದ್ದರು,ಪಾಪ ಕಲ್ಯಾಣಿಗೆ ಬಂದ ನಮ್ಮಂತವರು ಅದರ ಅರಿವಿಲ್ಲದೇ ಅದೇ ನೀರನ್ನು ತಲೆಗೆ ಚಿಮುಕಿಸಿ ಕೊಂಡು ಹೋಗ್ತಾ ಇದ್ರೂ..😂😂😉😉

ಹಾಗೆ ಈ ಪ್ರಹಸನವೆಲ್ಲಾ ನೋಡುತ್ತಿದ್ದವರಿಗೆ,
ಕೂಡಲೇ ಒಂದು ಆವಾಜ್ ಕೇಳಿತು..
"ಏನ್ರಿ ಯಾರೀ ಇಲ್ಲಿ ನಿಮಗೆ ಬರೋಕೆ ಹೇಳಿದ್ದು,ಅಷ್ಟು ಗೊತ್ತಾಗಲ್ವಾ,ಏನು ತಿಳ್ಕಂಡಿದ್ದೀರ,ಯಾರು ಬಿಟ್ರು ನಿಮಗೆ"
ಅಂತ ಒಬ್ಬ ಗಾರ್ಡ್ ಕೂಗುತ್ತಾ,ನಮಗೆ ಬಯ್ಯಲು ಶುರುವಿಟ್ಟು ಕೊಂಡ...
ನಾನು ತುಂಬಾ ಕೂಲ್ ಆಗಿ,
"ಎಲ್ಲರೂ ಬರುತ್ತಿದ್ದರು ನಾವು ಬಂದ್ವಿ"ಅಂದೆ,
ನನ್ನ ಸ್ನೇಹಿತರೂ ಅದನ್ನೇ ಹೇಳಿದರು,
"ನಮಗೇನು ಗೊತ್ತು ಇಲ್ಲಿ ಬರಬಾರದು ಅಂತ ಹಾಗಂತ ಬೋರ್ಡ್ ಇಲ್ವಲ್ಲಾ,ಎಲ್ಲರೂ ಇದ್ದಾರಲ್ಲ ಅಂದ್ರು..."

ಆದರೂ ಏನೇನೋ ಬಡಬಡಿಸುತ್ತಲೇ ಆತ ಯಾರಿಗೋ ಕಾಲ್ ಮಾಡಿ ತುಳುವಿನಲ್ಲಿ ಮಾತನಾಡ ತೊಡಗಿದ,

ನಾನು ಏನೂ ಲೆಕ್ಕಿಸದೆ ಬಾಯಿ ಮುಚ್ಚಿಕೊಂಡು ಹೊರ ಹೊರಟೆ,
ನನ್ನ ಸ್ನೇಹಿತರು,ಬೇಡಿ ಹಾಗೆಮಾಡಬೇಡಿ ಇಲ್ಲಿ ವರೆಗೆ ಬಂದಿದ್ದೀರ ಒಳಗಡೆ ದರ್ಶನ ಮಾಡೇ ಹೋಗೋಣ ಅಂತ ಒತ್ತಾಯ ಮಾಡಿದರು,
ಕ್ಯೂ ನಲ್ಲಿ ನಿಂತು ದರ್ಶನ ಮಾಡುತ್ತಿದ್ದಾಗ ನನಗೆ ಅನ್ನಿಸಿದ್ದು,
ಇದು ಗೊತ್ತಿದ್ದೆ ಕೃಷ್ಣ ಪರಮಾತ್ಮ ಸಾಮಾನ್ಯರಿಗೆ ಯಾವುದೇ ತೊಂದರೆ ಇಲ್ಲದೆ ದರ್ಶನ ಕೊಡಲು ತಿರುಗಿ ನಿಂತಿದ್ದ ಅಂತಾ..!!!!

ನನಗೆ ತುಂಬಾ ಬೇಸರವಾಯಿತು,ಪಂಕ್ತಿ ಭೇದ ಇನ್ನೊಂದು ಮತ್ತೊಂದು ಅವರ ವೈಯಕ್ತಿಕ ನನ್ನ ವಿರೋಧವಿಲ್ಲ,
ಆದರೆ ಹೀಗೆ ಅಲ್ಲಿ ಬಂದವರನ್ನು ಭಾಯಿಗೆ ಬಂದಂತೆ ಬೈಯುವುದು,ಯಾವ ಮಠದ ಹಾಗೂ ದೇವಸ್ಥಾನದ ಸಭ್ಯತೆ,ಸಂಪ್ರದಾಯ,ಸಂಸ್ಕಾರ !????

ನನ್ನ ಸ್ನೇಹಿತರು ಕೇಳಿದರು ಅಲ್ಲಾ,ನೀವು ಅಷ್ಟು ಶಾರ್ಟ್ ಟೆಂಪರ್ ಮನುಷ್ಯ,ಯಾಕೆ ಸುಮ್ಮನೆ ಇದ್ರಿ ಹೆಚ್ಚು ಮಾತನಾಡಲ್ಲಿಲ್ಲ ಅಂದ್ರು,

ನಾನಂದೆ "ಅದು ಅವರ ಮಠ,ಅದು ವೈಯಕ್ತಿಕ ಆಸ್ತಿ,ಹೋಗಿದ್ದು ಮೊದಲು ನಮ್ಮ ತಪ್ಪು,
ನಿಂಗ್ಯಾರು ಇಲ್ಲಿ ಬರೋಕೆ ಹೇಳಿದ್ರು ಅಂತ ಮಠಕ್ಕೆ ಸಂಬಂಧ ಪಟ್ಟವರು  ಕೇಳಿದ್ರೆ,ಏನು ಹೇಳೋಕಾಗುತ್ತೆ ಉತ್ತರ,(ಇಲ್ಲಾ ಅಂದಿದ್ರೆ ಅವನಿಗೆ ಸಹಸ್ರನಾಮ ಅರ್ಚನೆ ಮಾಡಿ ಬರ್ತಿದ್ದೆ ಅದು ಬೇರೆ ಪ್ರಶ್ನೆ ಬಿಡಿ)😉
ಹೊರಗಿಂದಲೆ ದರ್ಶನ ಮಾಡಿಕೊಂಡು ಹೋಗಿದ್ದರೆ, ಇದೆಲ್ಲಾ ಆಗ್ತಿತ್ತಾ ಅಂದೆ..!!!!

ಇಂತಹಾ ಕೆಲವು ಜನ ಮಾಡುವ ಘನ ಕಾರ್ಯಕ್ಕೆ,ಆ ಹಿರಿಯ ಸ್ವಾಮಿಗಳು ಅನ್ನಿಸಿಕೊಳ್ಳುತ್ತಾರೆ,ಮೊದಲು ಸ್ವಾಮೀಜಿ ಮತ್ತು ಮಠದ ಆಡಳಿತ ಮಂಡಳಿ ಇಂತಹಾ ವಿಷಯಗಳನ್ನು ನಿಯಂತ್ರಣಕ್ಕೆ ತರೋದು ಒಳ್ಳೆಯದು...
ಎಲ್ರನ್ನು ಮನುಷ್ಯರಂತೆ ಟ್ರೀಟ್ ಮಾಡೋಕೆ, ಅವರ ಮಠದ ಎಂಪ್ಲಾಯ್ಸ್ಗೆ ಮೊದಲು ಸೂಚಿಸೋದು ಉತ್ತಮ.

ಸೋಮವಾರ, ಏಪ್ರಿಲ್ 18, 2016

ಮೇಧಾವಿಗಳು ಹೆಚ್ಚಾದ್ರಪ್ಪ

ಒಮ್ಮೆ ಒಬ್ಬ ಬಹಳ ಮೇಧಾವಿ,ಬುದ್ದಿವಂತ ಹಾಗೂ ತರ್ಕ ಪಂಡಿತ ಅಪಘಾತದಲ್ಲಿ ತನ್ನೆರಡೂ ಕಾಲು ಕಳೆದು ಕೊಳ್ಳುತ್ತಾನೆ..😔😔😔😔

ಹೀಗೆ ಹಲವು ವರ್ಷಗಳು ಚಿಕಿತ್ಸೆ ಪಡೆದ ನಂತರ,ತನ್ನ ಜೀವನ ತಾನು ನಡೆಸುವ ಮಟ್ಟಿಗೆ ಸುಧಾರಿಸಿಕೊಂಡು,ವಾಕಿಂಗ್ ಸ್ಟಿಕ್ ಸಹಾಯದ ಮೂಲಕ ನಡೆದಾಡುತ್ತಿರುತ್ತಾನೆ..😃

ಒಮ್ಮೆ ತಾನು ವಾಕಿಂಗ್ ಸ್ಟಿಕ್ ಸಹಾಯದಿಂದ ಕಾಡಿನ ದಾರಿಯಲ್ಲಿ ನಡೆದು ಹೋಗುತ್ತಿರುವಾಗ,ದಾರಿಯ ಪಕ್ಕ,ಒಂದು ದೊಡ್ಡ ಮಾವಿನ ಮರ ದಲ್ಲಿ ಹಣ್ಣುಗಳು ಇವನ ಕಣ್ಣಿಗೆ ಕಂಡಿದೆ..

ಆತನಿಗೆ ಅದನ್ನು ನೋಡಿ ತಿನ್ನುವ ಆಸೆಯಾಗಿದೆ,
ಆದರೆ ಮರ ಹತ್ತಲು ಅವನಿಂದ ಸಾಧ್ಯವಿಲ್ಲ..!!😔😔😔
ಆದರೂ ಬುದ್ಧಿವಂತನಲ್ಲವೆ..!!!!

ತನ್ನ ಒಂದು ವಾಕಿಂಗ್ ಸ್ಟಿಕ್ ಅನ್ನು ಮರದತ್ತ ಹಣ್ಣು ಬೀಳಿಸಲು ಎಸೆದ..
ಹಣ್ಣು ಬೀಳಲಿಲ್ಲ,😔
ವಾಕಿಂಗ್ ಸ್ಟಿಕ್ ಮರದ ಕೊಂಬೆಯಲ್ಲಿ ಸಿಕ್ಕಿ ಹಾಕಿಕೊಂಡಿತು..😢

ಗಾಬರಿ ಗೊಂಡು ನೆಲದ ಮೇಲೆ ಕೂತು,

ಕೂಡಲೇ,ಇನ್ನೊಂದು ವಾಕಿಂಗ್ ಸ್ಟಿಕ್ಕನ್ನು,ಮೊದಲು ಸಿಕ್ಕಿ ಕೊಂಡಿದ್ದ ವಾಕಿಂಗ್ ಸ್ಟಿಕ್ ಬೀಳಿಸಲು,ಜೋರಾಗಿ ಮರದ ಕಡೆ ಎಸೆಯುತ್ತಾನೆ,
ಆದರೆ ಅದೂ ಕೂಡ ಅಲ್ಲೇ ಸಿಕ್ಕಿ ಹಾಕಿ ಕೊಳ್ಳುತ್ತದೆ,😔

ನೆಲದ ಮೇಲೆ ಕೂತವನಿಗೆ ಒಮ್ಮೆ ಆಕಾಶವೇ ಕಳಚಿ ಬಿದ್ದಂತಾಗುತ್ತೆ..😭😭
ಸ್ವಲ್ಪ ಸುಧಾರಿಸಿಕೊಂಡು..😔

ಸುಮ್ಮನೆ ಆ ನಿರ್ಜನ ಪ್ರದೇಶದಲ್ಲಿ ಯಾರಾದರೂ ಸಹಾಯಮಾಡಲು ಸಿಗಬಹುದೆಂಬ ನಿರೀಕ್ಷೆಯಲ್ಲಿ  ದುಃಖ ದಿಂದ ಕುಳಿತಿದ್ದ..😢😨😨😨

ಆಗ ಒಬ್ಬ ದಾರಿ ಹೋಕ,ಈತ ಹೀಗೆ ದಾರಿಯ ಪಕ್ಕ ಕುಳಿತಿದ್ದು ನೋಡಿ ಹತ್ತಿರಬಂದು,

"ಏನಾಯ್ತು ಯಾಕೆ ಹೀಗೆ ಕೂತಿದ್ದೀರ"??? ಅಂತ ವಿಚಾರಿಸಿದ,

ಆಗ ಈ ಮೇಧಾವಿ

"ಕಲ್ತಿದ್ದು ಹೆಚ್ಚ್ ಆಯಿತು...
ಕಾಲ್ ಮೇಲಾಯಿತು...
ಗಾಳಿ ಬರ್ಕು ....
ಮನಿಗೆ ಹ್ವಾಯ್ಕು ....
ಕಥಿ ಗಂಡಾಂತರ ಆಯಿತು....
ಎಂತಾ ಸಾವುದು ಮರ್ರೆ..."

(ಕಲಿತದ್ದು ಹೆಚ್ಚ್ಆಗಿದೆ,ಕಾಲು {ಆತನಿಗೆ ಕಾಲುವಾಕಿಂಗ್ ಸ್ಟಿಕ್} ಮೇಲಾಗಿದೆ,ಗಾಳಿ ಬರಬೇಕು,ವಾಕಿಂಗ್ ಸ್ಟಿಕ್ ಬೀಳಬೇಕು,ಮನೆಗೆ ಹೋಗಬೇಕು)😨

ಅಂತ ತನ್ನ ಅಳಲನ್ನು ಆ ದಾರಿ ಹೋಕನ ಮುಂದೆ ದುಃಖ ದಿಂದ  ತೋಡಿಕೊಂಡನಂತೆ..
ದಾರಿ ಹೋಕನಿಗೆ,ಈತನ ಸಮಸ್ಯೆಯ ಅರಿವಾಗಿ,
ಮರ ಹತ್ತಿ ಆತನ ಎರಡೂ ವಾಕಿಂಗ್ ಸ್ಟಿಕ್ ತಂದು ಕೊಟ್ಟನಂತೆ..

ಇತ್ತೀಚೆಗೆ ಹೀಗೆ ತಮ್ಮ ಸಾಮರ್ಥ್ಯದ ಹಾಗೂ ತಮ್ಮ ವ್ಯಾಪ್ತಿಯ ಕೆಲಸಕ್ಕಿಂತ,ಇಲ್ಲದನ್ನು ನಾನು ಮಾಡುತ್ತೇನೆ,ನಾನು ಬಾರೀ ಬುದ್ದಿವಂತ ಅಂತ ಅವರಿಗೆ ಅವರೆ ಅಂದು ಕೊಂಡು,ಬೇಡದ ಕೆಲಸ ಹಾಗು ಬೇಡದ ವಿಷಯಕ್ಕೆ,ಕಲಿತದ್ದು ಹೆಚ್ಚಾದವರು,ಅತಿ ಬುದ್ದಿವಂತರು,ತಲೆ ಹಾಕಿ,ಸುಮ್ಮನೆ ಕಾಂಟ್ರವರ್ಸಿ ಮಾಡೋದು ಜಾಸ್ತಿ ಆಗಿದೆ ಅನ್ನಿಸ್ತಾ ಇದೆ..
ಅವರವರ ಸಾಮರ್ಥ್ಯ ಹಾಗೂ ವ್ಯಾಪ್ತಿಯ ಕೆಲಸ,(ಕೆಲ ಕೆಲಸದಲ್ಲಿ ಸಾಮರ್ಥ್ಯವನ್ನು ಗಳಿಸುವವರೆಗೆ)ಮಾತ್ರ ಅವರು ಮಾಡೋದು ಉತ್ತಮ..

ಮಂಗಳವಾರ, ಮಾರ್ಚ್ 1, 2016

ಸಂಚಾರಿ ದಟ್ಟಣೆ ಪರಿಹಾರವಿಲ್ಲವೇ..??


ಬೆಂಗಳೂರಿನ ಸಂಚಾರಿ ದಟ್ಟಣೆ ತಡೆಗಟ್ಟಲು ಏನಾದರೂ ಕಾರ್ಯಕ್ರಮವನ್ನು ಸರ್ಕಾರ ಆದಷ್ಟು ಬೇಗ ಕೈಗೊಳ್ಳಲೇ ಬೇಕಾಗಿದೆ.
ಅದು ದೆಹಲಿಯಲ್ಲಿ ಇರುವಂತೆ ಸರಿ,ಬೆಸವೋ(ಅದರಲ್ಲಿ ಬಹಳಷ್ಟು ಡ್ರಾ ಬ್ಯಾಕ್ ಗಳಿವೆ)
ಅಥವಾ ಸಂಚಾರಿ ತಜ್ನರೂ ಸೇರಿಕೊಂಡೂ ಏನಾದರೂ ಕ್ರಮ ಕೈಗೊಳ್ಳದೇ ಹೋದರೆ ಮುಂದಿನ ಕೆಲವೇ ವರ್ಷದಲ್ಲಿ ಬೆಂಗಳೂರು ಡೆಡ್ ಸಿಟಿ ಆಗುವುದರಲ್ಲೆ ಸಂದೇಹವಿಲ್ಲ..
ಒಂದು ಮನೆಯಲ್ಲಿ ನಾಲ್ಕು ಜನರಿದ್ದರೆ ಒಬ್ಬೊಬ್ಬರಿಗೆ ಒಂದು ದ್ವಿಚಕ್ರ ವಾಹನ ಹಾಗೂ ಮನೆಗೆ ಎರಡು ಚತುರ್ಚಕ್ರ ವಾಹನ ಇದರ ಅವಶ್ಯಕತೆ ಇದೆಯೇ..?
ಇದರ ಬಗ್ಗೆ ಸರ್ಕಾರ ಯಾಕೆ ಕ್ರಮ ಕೈಗೊಳ್ಳುವುದಿಲ್ಲ..??
ಹೀಗೆ ಈ ಕೆಳಕಂಡಂತೆ ಕೆಲವು ಕ್ರಮ ಕೈಗೊಳ್ಳಬಹುದೇ...??
*ಹೀಗೆ ಮನೆಗೆ ೬ ರಿಂದ ೮ ವಾಹನಗಳನ್ನು ಇಟ್ಟುಕೊಂಡವರಿಗೆ ಹಾಗೂ ಒಬ್ಬರೇ ಒಂದು ಕಾರಿನಲ್ಲಿ ಓಡಾಡುವರಿಗೆ ಸರ್ಕಾರ ಜಾಗೃತಿ ಕಾರ್ಯಕ್ರಮ ಕೈಗೊಂಡು ಅವರನ್ನು ಸಾರ್ವಜನಿಕ ಸಾರಿಗೆಯಲ್ಲಿ ಓಡಾಡುವಂತೆ ಮನವೊಲಿಸುವುದು ಮತ್ತು
*ಸಾರ್ವಜನಿಕ ಸಾರಿಗೆಯನ್ನು ಕಡಿಮೆ ದರದಲ್ಲಿ ಹೆಚ್ಚು ಅನುಕೂಲಕರ ವಾಗಿ ಹೆಚ್ಚು ಹೆಚ್ಚು ಗುಣಮಟ್ಟದ ವಾಹನವನ್ನು ಓಡಿಸುವುದು,ಹಾಗೂ
*ಹೆಚ್ಚು ಜನರು ಸಾರ್ವಜನಿಕ ಸಾರಿಗೆ ಬಳಸುವಂತೆ ಮನವಿ ಮಾಡುವುದು,
*ಒಂದಕ್ಕಿಂತ ಹೆಚ್ಚು ವಾಹನ ಇರುವವರಿಗೆ ಹಾಗೂ ಕಹ್ರೀದಿಸುವವರಿಗೆ ಹೆಚ್ಚು ತೆರಿಗೆ ಹಾಕುವುದು,ಅಥವಾ
*ಇಂಧನಕ್ಕೆ ಬಾರೀ ತೆರಿಗೆ ಹಾಕುವುದು,
*ನಿಲುಗಡೆ ಶುಲ್ಕ ದುಭಾರಿ ಮಾಡುವುದು,ಹಾಗೂ
*ವಾಹನವಿಲ್ಲದವರಿಗೆ ಸಾರ್ವಜನಿಕ ಸಾರಿಗೆಯಲ್ಲಿ ರಿಯಾಯಿತಿ ಕೊಡುವುದು,
*ಸೋಲಾರ್ ದ್ವಿಚಕ್ರವಾಹನಕ್ಕೆ ಪ್ರಾದಾನ್ಯತೆ ಕೊಡುವಂತೆ ಪ್ರೋತ್ಸಾಹಿಸುವುದು,
*ಸಣ್ಣ ಕುಟುಂಬವಿದ್ದರೆ ತುಂಬಾ ಕಾರಿನ ಅಗತ್ಯವಿದ್ದರೆ ಅಂತವರಿಗೆ ಸಣ್ಣ ಕಾರುಗಳನ್ನೇ ಖರೀದಿಸುವಂತೆ ಮನವೊಲಿಸುವುದು ಹಾಗೂ ಅದಕ್ಕೆ ತೆರಿಗೆ ಕಡಿಮೆ ಮಾಡುವುದು.
*ಐಶಾರಾಮಿ ದೊಡ್ಡ ಕಾರುಗಳಿಗೆ ಅತಿ ಹೆಚ್ಚು ತೆರಿಗೆ ಹಾಕುವುದು,
*ಪೀಕ್ ಹವರ್ ನಲ್ಲಿ ಒಬ್ಬರೇ ಕಾರುಗಳಲ್ಲಿ ಹೋಗುವುದನ್ನು ನಿಷೇಧಿಸುವುದು.
*ಒಂದೇ ಅಪೀಸ್ಗೆ ಹೋಗುವವರು ಎಲ್ಲಾ ಸೇರಿ ಒಂದೇ ಕಾರಿನಲ್ಲಿ ಹೋಗುವುದು.
*ಅತ್ಯಂತ ಹಳೆಯದಾದ ವಾಹನಗಳಿಗೆ ರಸ್ತೆಗೆ ದಿನವೂ ಇಳಿಯಲು ಪರವಾನಗಿ ಕೊಡದೇ ಇರುವುದು,
*ಲೇನ್ ನಿಯಮವನ್ನು ಕಡ್ಡಾಯ ಮಾಡುವುದು
*ಬೈಸಿಕಲ್ ಬಳಸುವವರಿಗೆ ಕಡ್ಡಾಯವಾಗಿ ರಸ್ಥೆ ಒಡಗಿಸಿ ಕೊಡುವುದು.
*ಬೈಸಿಕಲ್ ಸವಾರರಿಗೆ ಪ್ರೋತ್ಸಾಹವಾಗಿ ಏನಾದರೂ ಕಾರ್ಯಕ್ರಮ ಹಮ್ಮಿ ಕೊಳ್ಳುವುದು.
*ನಡೆದಾಡುವವರಿಗೆ ಪುಟ್ ಪಾತ್ ಹಾಗೂ ಸರಿಯಾದ ಸ್ಥಳದಲ್ಲಿ ಸ್ಕೈ ವಾಕರ್ ಹಾಗೂ ಅಂಡರ್ ಪಾಸ್ ಹಾಕುವುದು.
ಹೀಗೆ ಹಲವು ನಿಯಮಗಳನ್ನು ಹಾಗೂ ಯೋಜನೆಗಳನ್ನು ಸರ್ಕಾರ ರೂಪಿಸಿದರೆ ಟ್ರಾಪಿಕ್ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದೇ??
(ಇದರಲ್ಲಿ ಕೆಲವು ಸಾದಕ ಬಾದಕ ಇರಬಹುದು ನನಗನ್ನಿಸಿದ್ದು ಹಾಕಿದ್ದೇನೆ)
ನಿಮ್ಮ ತಲೆಯಲ್ಲಿ ಯೋಚನೆ ಬಂದಿದ್ದು ಹಾಕಿ ನೋಡುವ..
Nagabhushana Bhatta Avinash Mrugavadhe Kiran Bhat Mallesara

ಬುಧವಾರ, ಫೆಬ್ರವರಿ 24, 2016

ಥೋ ಕರ್ಮ ಕಾಂಡ..

ನಿಮ್ಮ ಹೆಂಡತಿ ಫೋಟೋ ನೀವು ಯಾಕೆ ಹಾಕಲ್ಲ..!!!!
ನಿಮ್ಮ ಫೋಟೋ ಮಾತ್ರ ಹಾಕ್ತಿರ ನಿಮ್ಮ ಗಂಡಂದು ಹಾಕ್ರಿ !!
ಇದು ನಿಜವಾದ ಪಾಯಿಂಟ್..
ಯಾರೋ ಫೋಟೋ ಹಾಕಿದ್ರು ಅಂತ ನಾವು ಹಾಕ್ಬೇಕು..
ಯಾರೋ ಸೆಲ್ಫಿ ವಿತ್ ವೈಫ್ ಹಾಕಿದ್ರು ಅಂದ್ರೆ ನಾವು ಹಾಕ್ಬೇಕು..
ಯಾರೋ ಗಲ್ ಫ್ರೆಂಡು ಅಥವಾ ಬಾಯ್ ಫ್ರೆಂಡ್ ಜೊತೆ ಪೌಟ್ ಮಾಡಿ ಫೋಟೋ ಹಾಕಿದ್ರೆ ನಾವು ಹಾಕಬೇಕು..
ಯಾರೋ ಕತೆ ಬರೆದರು ಕವನ ಬರೆದರೂ ನಾವು ಬರೀಬೇಕು..

ಸ್ವಂತಿಕೆಯೆ ಇಲ್ಲದಂತಾಗಿದೆ ನಮ್ಮ ಜನಕ್ಕೆ..
ಥೋ ಕರ್ಮ ಕಾಂಡ..

ನಮಗೋಸ್ಕರ ಬದುಕೊದಕ್ಕಿಂತ
ಮಾರ್ಕ್ ಜೂಕರ್ ಬರ್ಗೆ ಗೋಸ್ಕರ ಬದುಕೊದೆ ಜೀವನ ಆಗಿದೆ.

ಐಬೆಕ್ಸ್ ಬೇಲಿ ಮತ್ತು ಕ್ವಾಸ

ಗದ್ದೆ ಮತ್ತು ತೋಟಗಳನ್ನು ಜಾನುವಾರುಗಳು ನುಗ್ಗಿ ಹಾಳು ಮಾಡದಂತೆ ತಡೆಯಲು ನಮ್ಮ ಕಡೆ ಐಬೆಕ್ಸ್ ಬೇಲೆ ಅಂತ ಹಾಕಿರುತ್ತಾರೆ.ಇದಕ್ಕೆ ಬಹಳ ಕಡಿಮೆ ಪ್ರಮಾಣದ ಬ್ಯಾಟರಿ ವಿದ್ಯುತ್ ಹರಿಸಿ ಸಣ್ಣ ಶಾಕ್ ಹೊಡೆಯುವಂತೆ,ಮಾಡಿರುತ್ತಾರೆ..
ಆದರೆ ಇದರಿಂದ ಪ್ರಾಣಾಪಾಯ ಯಾರಿಗೂ ಇಲ್ಲ.. .

ಒಮ್ಮೆ ನಮ್ಮ ಕ್ವಾಸ ಗರಬಡಿದವನಂತೆ ರಸ್ತೆ ಬದಿ ಗಾಬರಿ ಇಂದ ನಡುಗುತ್ತಾ ನಿತ್ತಿದ್ದ..😞😞😞😞

ಮಂಜಪ್ಪ ಗೌಡ್ರು:-ಏ ಕ್ವಾಸ ಎಂತಾಗ್ಯದ ಡೈರಿಗೆ ಹಾಲ್ ಕೊಡಕೆ ಬರಲನಾ ಹಿಂಗೆ ಹೆದ್ರುಕುಂಡು ನಿತ್ಗುಂಡಿಯಲಾ ಅಂದ್ರು.😊

ಕ್ವಾಸ:-ಬೆವರು ಒರೆಸಿಕೊಂಡು, ಎಂತಾಇಲ್ಲಗೌಡ್ರೆ ಸುಮ್ನೆ ನಿತ್ತಿನಿ...😆

ಮಂ.ಗೌಡ್ರು:- ಏ ಸುಳ್ಳು ಹೇಳದ ಬ್ಯಾಡ,ಎಂತಾ ಐಬೆಕ್ಸ್ ಬೇಲಿ ಕರೆಂಟ್ ಹೊಡಿತನಾ ಥೋ....😃

ಕ್ವಾಸ:- ಹೌದು ಗೌಡ್ರೆ...😞😞😞

ಮಂ.ಗೌಡ್ರು :- ಅಷ್ಟು ಗೊತ್ತಾಗಲ ನಿಂಗೆ ನೋಡ್ಕಿಂಡು ನಿದಾನಕ್ಕೆ ಬೆನ್ನು ಬಗ್ಸಿ ನುಸಿಯದಲ, ಎಲ್ಡು ವೈರ್ ಮದ್ಯ..😤ಬೆನ್ನು ತಾಗ್ತಾ ಹಂಗ್ಯರೆ..???
ನೀನುಂದು ಮರಾಯ..😠

ಕ್ವಾಸ:- ಇಲ್ಲಾ ಗೌಡ್ರೆ,ಎಲ್ಲಾ ಕರೆಕ್ಟಾಗಿ ದಾಟಿನಿ..ಆದ್ರು ಹೊಡಿತು ಮರ್ರೆ..😞😞😞

ಗೌಡ್ರು:-ಅದೆಂಗೆ ಹೊಡಿತದೆ ಕಾಲು ಅಚಿಗಿಚಿಗೆ ಇಟ್ಟು ಬೆನ್ನು ಬಗ್ಗಿಸಿ ದಾಟಿರೆ,ಹೇಂಗೆ ಹೊಡಿತದೆ ಹೇಳು ನೋಡನಾ..😠😠😠
.
.
.
.
.
.
ಕ್ವಾಸ:- ಹಾಲ್ ಡೈರಿಗೆ ಬರ ಗಡಿಬಿಡಿಲಿ,ಮನಿಯಿಂದ ಬರ ಹೊತ್ತಿಗೆ,
ಚಡ್ಡಿ ಹಾಕಿರ್ಲ ಮರಾಯ್ರೆ..😊

ಮಂ.ಗೌಡ್ರು:-ಥೋ...ನಿನ್ನ ಮಕಕೆ ವರ್ಲೆ ಹಿಡಿಯಾ😂😂😂😂🙈🙈🙈🙈

ಕವರ್ ಇಲ್ಲದ ಕಥೆ

ಸುವರ್ಣ ನ್ಯೂಸ್ನಲ್ಲಿ ಕವರ್ ಸ್ಟೋರಿಯಲ್ಲಿ ಇಂದು ನರಸೀಪುರದ ಆಯುರ್ವೇದ ನಾಟಿ ವೈದ್ಯರ ಬಗ್ಗೆ ಕಾರ್ಯಕ್ರಮ ಪ್ರಸಾರವಾಯಿತು..

ಆದರೆ ಕಾರ್ಯಕ್ರಮದಲ್ಲಿ ಹೇಳಿದ್ದೇ ಹೇಳುವ, ಹಾಗೂ ಏನೋ ಹೈಪ್ ಕ್ರಿಯೇಟ್ ಮಾಡಿ ಕೊನೆಗೆ ಏನೂ ಹೇಳದೆ, ಇಡೀ ಕಾಡು ನಾಶವಾಗಿದೆ ಇವರಿಂದ,ಇದು ದೊಡ್ಡ ಮಾಪಿಯಾ,ಯಾರಿಗೂ ಗುಣವಾಗಿಲ್ಲ ಜನರಿಂದ ಹಣ ಲೂಟಿ ಮಾಡುತ್ತಿದ್ದಾರೆ,ಅಂತ ಹೇಳಿ, ಇವರು ಕೇವಲ ಮೂರು ಜನ ಹೇಳಿದ್ದೇ ಹೇಳುವವರನ್ನು ನಿಲ್ಲಿಸಿಕೊಂಡು,ಊರಿನ ಜನ ಏನು ಹೇಳ್ತಾರೆ ಕೇಳಿ ಅಂತ ಅವರತ್ರ ಮಾತ್ನಾಡಿಸಿದ್ರು..
ಇವರ ಉದ್ದೇಶ ಏನು ತಿಳಿಯಲಿಲ್ಲ..
ನೇರವಾಗಿ ನಾಟಿ ವೈದ್ಯರನ್ನು ಪ್ರಶ್ನಿಸಬಹುದಿತ್ತಲ್ಲಾ..???
ಎಲ್ಲಿಂದ ಇದು ಬರುತೆ,?
ಇದು ಹೇಗೆ ಸಾದ್ಯ?
ಕಾಡು ನಾಶ ಮಾಡುತಿದ್ದೀರ?
ಇದು ತಪ್ಪಲ್ಲವೇ ಎಂದು,
ಆಗ ಅವರ ಉತ್ತರ ಏನು ಕೇಳಬಹುದಿತ್ತು..!!!

ಅದು ಬಿಟ್ಟು,ಈ ಹಿಡನ್ ಕಾರ್ಯಾಚರಣೆ ಯಾಕೆ? ತಿಳಿಯಲಿಲ್ಲ..!!!
ಅದಿರಲಿ..

ಆಶ್ಚರ್ಯ ಅಂದ್ರೆ,
ಅಲ್ಲಿ ಹೋದವರಲ್ಲಿ ,ಹೆಚ್ಚಿನವರು ಗುಣವಾಗಿದೆ, ಇಂಪ್ರೂವ್,ಆಗಿದೆ ಎನ್ನುತ್ತಾರೆ(ನನಗೆ ತೀರಾ ಹತ್ತಿರದವರು ಹೇಳಿದ್ದು),ಹಾಗಾದರೆ ಇಲ್ಲಿ ಯಾರನ್ನ ನಂಬೋದು..????
ಮೊದಲು ಇವರು,ಉಚಿತವಾಗೇ ಔಷದಿ ಕೊಡುತ್ತಿದ್ದರಂತೆ,ಆದರೆ ಈಗೀಗ 200 ರಿಂದ 300 ಹಣವನ್ನು ಚಾರ್ಚ್ ಮಾಡುತ್ತಿದ್ದಾರಂತೆ..!!
ಹಾಗಾದರೆ ಗುಣವಾಗದೆ,ಅಲ್ಲಿ ಏನೂ ಉಪಯೋಗವಾಗದೆ ಇದ್ರೆ,ಯಾಕೆ ದೂರದ ಊರಿನ ಜನರು ಅಲ್ಲಿ ಬಂದು ಕಾದು ಕೂತು,ಔಷದಿ ಪಡೆಯುತ್ತಾರೆ..??

ಇದರಿಂದ ಇಷ್ಟೊಂದು ಕಾಡು ನಾಶವಾಗುತ್ತೆ,ಜನರಿಗೆಲ್ಲಾ ತೊಂದರೆ ಆಗುತ್ತೆ ಅಂದರೆ ಅಲ್ಲಿರುವ ಸ್ಥಳೀಯರು ಹಾಗೂ.ಜನಪ್ರತಿನಿದಿಗಳಿಗೆ ತಿಳಿದಿಲ್ಲವೇ..?
ಅವರು ಸುಮ್ಮನಿರುತ್ತಾರೆಯೇ?
ಜನರು ಅಷ್ಟು ಮೂರ್ಖರೇ..?

ಏನಿದರ ಅಸಲಿಯತ್ತು..

ತಿಳಿದವರು ಹೇಳಬೇಕು

ಸೋಮವಾರ, ಫೆಬ್ರವರಿ 8, 2016

ಯಾರೋ ಒಬ್ಬ ಅಮಾಯಕ ಕಥೆ

ಯಾರೋ ಒಬ್ಬ ಅಮಾಯಕನಿದ್ದನಂತೆ 👨👨👨👨👨
ಆತ ಹೊಳೆ ದಾಟಲು ಕಷ್ಟಪಡುತ್ತಿದ್ದನಂತೆ,🌊🌊🌊
ಅಲ್ಲಿಗೆ ಬಂದ ಬುದ್ದಿವಂತ 👲👲👲👲ಒಬ್ಬ ಆತನಿಗೆ ಒಂದು ಸಲಹೆ ಕೊಟ್ಟನಂತೆ..

"ನೀನು ಹೊಳೆಗೆ ಹಾರು ನಿನ್ನ ಮರ್ಮಾಂಗವು ನಿನ್ನನ್ನು ಮುಳುಗಲು ಬಿಡುವುದಿಲ್ಲ ಅದು ನಿನ್ನನ್ನು life ಜ್ಯಾಕೆಟ್ನಂತೆ ತೇಲಿಸುತ್ತಾ ಆಚೆ ದಡವನ್ನು ಸೇರಿಸುತ್ತದೆ"😍😍😍
ಎಂದು,
ಆ ಅಮಾಯಕ ಈ ಬುದ್ದಿವಂತನ ಮಾತನ್ನು ನಂಬಿ, ಹೊಳೆಗೆ ಹಾರಿದನಂತೆ...🌊🌊🌊🌊💧💧💧💧

ಮೊದಲು ಮುಳುಗಿದ್ದೇ ಅಮಾಯಕನಂತೆ..
ಆಮೇಲೆ ಆತನ ಮರ್ಮಾಂಗ..🐒🐒🐒😥😥😥

ಅದಕ್ಕೆ ಹಳ್ಳಿಯ ಕಡೆ ಒಂದು ಗಾದೆ ಮಾತು ಹೇಳ್ತಾರೆ
ಕೆಲವರ ಮಾತನ್ನು ನಂಬಿದರೆ,
"ಮರ್ಮಾಂಗ"ನಂಬಿ ಹೊಳೆಗೆ ಹಾರಿದ ಹಾಗೆ ಅಂತ.

ಅನ್ಯಾಯವಾಗಿ ಜೀವನ,ಹಾಗೂ ಜೀವ ಕಳ್ಕೋಬೇಕಾಗುತ್ತೆ..😀😁😂😂😇

ವಿಶೇಷ ಸೂಚನೆ:- ಇಲ್ಲಿ ಅಮಾಯಕ ವೆಂಕಟ್ ಮತ್ತೆ ಬುದ್ದಿವಂತರು ★★★ಹೌದಾ ಅಂತ ಕೇಳ್ಬೇಡಿ ನನಗೆ ಗೊತ್ತಿಲ್ಲ..ಮರಾಯ್ರೆ..💭💭💭

ಜ್ಯೋತಿಷ್ಯ ಟಾರ್ಗೆಟ್

ನನಗೊಂದು ಅರ್ಥವಾಗದ ವಿಷಯ.
ಈ ಜೋತಿಷ್ಯ ಕಾರ್ಯಕ್ರಮ ನೋಡಿ ಎಷ್ಟು ಜನ ಮನೆ,ಮಟ ಕಳೆದು ಕೊಂಡಿದ್ದಾರೆ??
ಸಂಸಾರ ಹಾಳು ಮಾಡಿಕೊಂಡಿದ್ದಾರೆ?
ಅದರಿಂದ ಯಾರಿಗೆ ಹಾನಿಯಾಗಿದೆ?
ಜೋತಿಷ್ಯ ಕಾರ್ಯಕ್ರಮ ನೋಡುವಾಗ ಚಾನಲ್ ಚೇಂಜ್ ಆಗದಂತೆ ಏನಾದ್ರು ಮಾಡ್ಸಿರ್ತಾರ ಜೋತಿಷಿಗಳು?
ಇಲ್ವಲ್ಲಾ..ಬೇಕಾದ್ರೆ ನೋಡೋದು,ಬೇಡ ಅಂದ್ರೆ ಚಾನಲ್ ಚೇಂಜ್ ಅಷ್ಟೆ..
ನೋಡೋದು ಬಿಡೋದು ಜನಗಳ ವೈಯಕ್ತಿಕ ವಿಷಯ,ಹಾಗಂತ ಈ ಕೆಲವು ಜೋತಿಷಿಗಳು ಸುಮ್ಮನೆ ಇಲ್ಲದನ್ನು ಹೇಳುವುದು ನಿಜ,
ಎಲ್ಲರೂ ಸರಿ ಇದ್ದಾರೆ ಎನ್ನುವುದು ನಂಬಲಸಾದ್ಯ,
ಆದರೆ
ಹಾಗಂತ ಜೋತಿಷ್ಯ ಮೂದನಂಬಿಕೆ ಎನ್ನುವುದು ಸುಳ್ಳು,,

ಅಷ್ಟಕ್ಕೂ ಜೋತಿಷಿಗಳೇನು ಜನಗಳ ಜೇಬಿಗೆ ಕೈ ಹಾಕಿ ಹಣ ತೆಗೆದು ಕೊಳ್ತಾ ಇದ್ದಾರ ಅಥವಾ ಬಾಂಬ್ ಹಾಕಿ ಅಥವಾ ಇನ್ನಿತರೆ ಸಮಾಜ ಘಾತುಕ ಚಟುವಟಿಕೆ ಮಾಡಿ ಅಂತ ಹೇಳ್ತಿದ್ದಾರ??
ಏನೋ ಗೊತ್ತಾಗ್ತಿಲ್ಲ..
ಬೇರೆ ಧರ್ಮದವರು ಮಾಡುವ ಕೆಲಸಗಳಿಗೂ ಇದೇ ಮಾತು ಹೇಳ್ತಾರಾ ಇವರುಗಳು..?!!
ಅಲ್ಲಾ
ಸಮಸ್ಯೆಗಳು ಸಾವಿರ ಇದೆ ಅದನ್ನು ಪರಿಹರಿಸೋದು ಬಿಟ್ಟು,ಸುಮ್ಮನೆ ಯಾವುದೋ ವಿಷಯ ಇಟ್ಟು ಕೊಂಡು ಅವರ ಮೇಲೆ ದ್ವೇಶ ಸಾದಿಸೋ ಅಗತ್ಯ ಇದೆಯೇ?

ಇಷ್ಟೆಲ್ಲಾ ಸಮಾಜದ ಕಾಳಜಿ ಇರುವ ಇವರುಗಳು..
ಸಿಗರೇಟ್ ನಿಷೇದಿಸಲಿ..
ಮದ್ಯಪಾನ ನಿಷೇದಿಸಲಿ..
ತಂಬಾಕು ನಿಷೇದಿಸಲಿ..
ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳ ಸುಲಿಗೆ ನಿಲ್ಲಿಸಲಿ..
ಭೂಮಾಪಿಯಾ ಹಾಗೂ ಮರಳು ಮಾಪಿಯಾ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಿ..
ಬೆಂಗಳೂರಿನ ಟ್ರಾಪಿಕ್ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲಿ..
ಕಸದ ವಿಲೇವಾರಿ ಬಗ್ಗೆ ಯೋಚಿಸಲಿ..
ಅವರ ಪಕ್ಷದವರೇ ಮಾಡುತ್ತಿರುವ ಬ್ರಷ್ಟಾಚಾರದ ಬಗ್ಗೆ ಕ್ರಮ ಕೈಗೊಳ್ಳಲಿ..
ರಸ್ತೆಗಳನ್ನು ದುರಸ್ತಿ ಮಾಡಲಿ..
ಅನ್ಯಾಯವಾಗಿ ಜೀವ ಕಳೆದು ಕೊಳ್ಳುತ್ತಿರುವ ರೈತರಿಗೆ,ಹಾಗಾಗದಂತೆ ಶಾಶ್ವತ ಪರಿಹಾರ ಕಂಡುಹಿಡಿಯಲಿ..
ವಿಧ್ಯುತ್ ಸಮಸ್ಯೆ ಬಗ್ಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಿ..
ಬಡತನ ರೇಖೆಗಿಂತ ಕೆಳಗಿರುವ ಎಲ್ಲರಿಗೂ ಉನ್ನತ ಶಿಕ್ಷಣದ ವರೆಗೆ ಉಚಿತವಾಗಿ ಶಿಕ್ಷಣ ಕೊಡಲಿ..
ರೈತನಿಗೆ ಎಲ್ಲಾ ಬೆಳೆಗಳಿಗೂ ಒಂದು ನ್ಯಾಯವಾದ ಬೆಂಬಲ ಬೆಲೆ ಕೊಡಿಸಲಿ..
ಯುವಕರು ಕೃಷಿಯ ಬಗ್ಗೆ ಹೆಚ್ಚಿನ ಒಲವು ತೋರುವಂತೆ ಏನಾದರು ಕಾರ್ಯಕ್ರಮ ಹಮ್ಮಿಕೊಳ್ಳಲಿ..
ಜನರನ್ನು ಸೋಮಾರಿಗಳನ್ನಾಗಿ ಮಾಡುವ ಯೋಜನೆಯನ್ನು ಬಿಟ್ಟು ಅವರಿಗೆ ಕೆಲಸ ಕೊಡಲಿ..
ಜಾತಿ ರಾಜಕೀಯ ಮೊದಲು ಬಿಡಲಿ..
ಹಾಗೂ ಎಲ್ಲರನ್ನೂ ಸಮಾನವಾಗಿ ಕಾಣಲಿ..
ದಿನಕ್ಕೊಂದು ವಿವಾದಾತ್ಮಕ ಹೇಳಿಕೆ ಕೊಡುತ್ತಾ ಸಮಾಜವನ್ನು ಒಡೆಯಲು ಹಾಗೂ ಅದರಿಂದ ತಮ್ಮ ಬೇಳೆ ಬೇಯಿಸಿಕೊಳ್ಳುವವರ ವಿರುದ್ದ ಕ್ರಮ ಕೈಗೊಳ್ಳಲಿ..
ಎಲ್ಲರಿಗೂ ಗೌರವಿಸೋದು ಹಾಗೂ ಅವರವರ ನಂಬಿಕೆಗಳಿಗೆ ಯಾವುದೇ ಅಡ್ಡಿ ಬರದೇ ಇದ್ದರೆ,ಅದೇ ಈ "ಜ್ಯಾತ್ಯಾತೀತ"ಸರ್ಕಾರ ಅಂತ ಮೂರು ಹೊತ್ತು ಡಂಗುರ ಸಾರುತ್ತ,ದಿನವೂ ಜಾತಿಯ ಬಗ್ಗೆ ಮಾತನಾಡುವ ಸರ್ಕಾರ ಜನರಿಗೆ ಮಾಡುವ ದೊಡ್ಡ ಉಪಕಾರ..
ಮಾಡೋ ಕೆಲ್ಸ ಬಿಟ್ಟುಕೊಂಡು..ಹಾಡೋ ದಾಸಯ್ಯನ ಹಿಂದೆ ಹೋಗ್ತಿದ್ದಾರೆ..
ಇದೆಲ್ಲಾ ಬೇಕಾ??